U.S. ವಾಣಿಜ್ಯ ಇಲಾಖೆ ಸೂಚಿಸಿರುವಂತೆ EU-U.S. ಡೇಟಾ ಗೌಪ್ಯತೆ ಚೌಕಟ್ಟು (EU-U.S. DPF) ಮತ್ತು EU-U.S. DPF ಗೆ UK ವಿಸ್ತರಣೆ ಹಾಗೂ Swiss-U.S. ಡೇಟಾ ಗೌಪ್ಯತೆ ಚೌಕಟ್ಟನ್ನು (Swiss-U.S. DPF) Snap Inc. ಅನುಸರಣೆ ಮಾಡುತ್ತದೆ.
ಈ ಕೆಳಗಿನವುಗಳನ್ನು ಮಾಡುವುದಾಗಿ Snap Inc. U.S. ವಾಣಿಜ್ಯ ಇಲಾಖೆಗೆ ಪ್ರಮಾಣಪತ್ರ ಸಲ್ಲಿಸಿದೆ:
a. EU-U.S. DPF ಹಾಗೂ EU-U.S. DPF ಗೆ UK ವಿಸ್ತರಣೆಯ ಅವಲಂಬನೆಯಲ್ಲಿ ಯುರೋಪಿಯನ್ ಒಕ್ಕೂಟ ಮತ್ತು ಯುನೈಟೆಡ್ ಕಿಂಗ್‌ಡಮ್ ನಿಂದ ಸ್ವೀಕರಿಸಿದ ವೈಯಕ್ತಿಕ ಡೇಟಾ ಪ್ರಕ್ರಿಯೆಗೊಳಿಸುವಿಕೆಗೆ ಸಂಬಂಧಿಸಿದಂತೆ EU-U.S. DPF ತತ್ವಗಳಿಗೆ ಬದ್ಧವಾಗಿರುತ್ತದೆ.
b. Swiss-U.S. DPF ಅವಲಂಬನೆಯಲ್ಲಿ ಸ್ವಿಜರ್‌ಲ್ಯಾಂಡ್‌ನಿಂದ ಸ್ವೀಕರಿಸಿದ ವೈಯಕ್ತಿಕ ಡೇಟಾದ ಪ್ರಕ್ರಿಯೆಗೊಳಿಸುವಿಕೆಗೆ ಸಂಬಂಧಿಸಿದಂತೆ Swiss-U.S. DPF ತತ್ವಗಳಿಗೆ ಬದ್ಧವಾಗಿರುತ್ತದೆ.
ನಮ್ಮ ಗೌಪ್ಯತಾ ನೀತಿಯ ನಿಯಮಗಳು ಮತ್ತು EU-U.S. DPF ತತ್ವಗಳು ಮತ್ತು/ಅಥವಾ Swiss-U.S. DPF ತತ್ವಗಳ ನಡುವೆ ಯಾವುದೇ ಘರ್ಷಣೆ ಕಂಡುಬಂದಲ್ಲಿ, ತತ್ವಗಳೇ ನಿಯಂತ್ರಣ ಹೊಂದಿರುತ್ತವೆ. ಡೇಟಾ ಗೌಪ್ಯತೆ ಚೌಕಟ್ಟು (DPF) ಕಾರ್ಯಕ್ರಮದ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಮತ್ತು ನಮ್ಮ ಪ್ರಮಾಣಪತ್ರವನ್ನು ನೋಡಲು, ದಯವಿಟ್ಟು ಇಲ್ಲಿಗೆ ಭೇಟಿ ನೀಡಿ https://www.dataprivacyframework.gov/.
DPF ತತ್ವಗಳ ಅನುಸಾರವಾಗಿ, ಮುಂದಕ್ಕೆ ವರ್ಗಾವಣೆ ತತ್ವದಡಿ ನಮ್ಮ ಪರವಾಗಿ ಕಾರ್ಯನಿರ್ವಹಿಸುತ್ತಿರುವ ತೃತೀಯ ಪಕ್ಷಗಳೊಂದಿಗೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಹಂಚಿಕೊಳ್ಳುವಾಗ DPF ಜೊತೆಗೆ ಅನುಸರಣೆ ಮಾಡುವಲ್ಲಿನ ವೈಫಲ್ಯಗಳಿಗೆ Snap ಹೊಣೆಗಾರಿಕೆ ಹೊಂದಿರುತ್ತದೆ (ನಮ್ಮ ಜವಾಬ್ದಾರಿಯಲ್ಲದ ವೈಫಲ್ಯಗಳನ್ನು ಹೊರತುಪಡಿಸಿ).
EU-U.S. DPF ಮತ್ತು EU-U.S. DPF ಗೆ UK ವಿಸ್ತರಣೆ ಹಾಗೂ Swiss-U.S. DPF ಜೊತೆಗೆ ಅನುಸರಣೆಯಲ್ಲಿ, EU-U.S. DPF ಮತ್ತು EU-U.S. DPF ಗೆ UK ವಿಸ್ತರಣೆ ಹಾಗೂ Swiss-U.S. DPF ಅವಲಂಬನೆಯಲ್ಲಿ ಸ್ವೀಕರಿಸಿದ ವೈಯಕ್ತಿಕ ಡೇಟಾದ ನಿರ್ವಹಣೆಗೆ ಸಂಬಂಧಿಸಿದ ಬಗೆಹರಿಯದ ದೂರುಗಳಿಗೆ ಸಂಬಂಧಿಸಿದಂತೆ EU ಡೇಟಾ ರಕ್ಷಣೆ ಪ್ರಾಧಿಕಾರಗಳು (DPAs) ಮತ್ತು UK ಮಾಹಿತಿ ಆಯುಕ್ತರ ಕಚೇರಿ (ICO) ಹಾಗೂ Swiss ಫೆಡರಲ್ ಡೇಟಾ ರಕ್ಷಣೆ ಮತ್ತು ಮಾಹಿತಿ ಆಯುಕ್ತರು (FDPIC) ಸ್ಥಾಪಿಸಿದ ಪ್ಯಾನಲ್‌ನ ಸಲಹೆಯೊಂದಿಗೆ ಅನುಕ್ರಮವಾಗಿ ಸಹಕರಿಸಲು ಮತ್ತು ಅನುಸರಣೆ ಮಾಡಲು Snap Inc ಬದ್ಧವಾಗಿದೆ.
DPF ನ ತತ್ವಗಳೊಂದಿಗೆ ನಮ್ಮ ಅನುಸರಣೆಯು US ಫೆಡರಲ್ ವ್ಯಾಪಾರ ಆಯೋಗದ ತನಿಖೆ ಮತ್ತು ಕ್ರಮ ಜಾರಿಗೊಳಿಸುವಿಕೆ ಅಧಿಕಾರಕ್ಕೂ ಕೂಡ ಒಳಪಡುತ್ತದೆ. ಕೆಲವು ಸಂದರ್ಭಗಳಲ್ಲಿ, DPF ಚೌಕಟ್ಟಿನ ಅನುಸೂಚಿ I ರಲ್ಲಿ ಹೇಳಿರುವಂತೆ, ಇತರ ವಿಧಾನಗಳಿಂದ ಬಗೆಹರಿಸಲ್ಪಡದ ದೂರುಗಳನ್ನು ಬಗೆಹರಿಸಿಕೊಳ್ಳಲು ಬಾಧ್ಯತೆಯ ಮಧ್ಯಸ್ಥಿಕೆಯನ್ನು ಕೋರುವ ಹಕ್ಕನ್ನು ನೀವು ಹೊಂದಿದ್ದೀರಿ.
ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಿಭಾಯಿಸುವಾಗ DPF ತತ್ವಗಳೊಂದಿಗೆ ನಾವು ಹೇಗೆ ಅನುಸರಣೆ ಮಾಡುತ್ತಿದ್ದೇವೆ ಎನ್ನುವ ಕುರಿತು ನಿಮಗೆ ದೂರುಗಳು ಅಥವಾ ಪ್ರಶ್ನೆಗಳು ಇದ್ದಲ್ಲಿ, ದಯವಿಟ್ಟು ಕೆಳಗೆ ವಿವರಿಸಿದಂತೆ ನಿಮ್ಮ ವಿಚಾರಣೆಗಳನ್ನು ಸಲ್ಲಿಸಿ.