ಟರ್ಕಿ ಗೌಪ್ಯತೆ ಸೂಚನೆ
ಜಾರಿ ದಿನಾಂಕ: ಜನವರಿ 13, 2022
ಈ ಸೂಚನೆಯನ್ನು ನಾವು ವಿಶೇಷವಾಗಿ ಟರ್ಕಿಯಲ್ಲಿನ ಬಳಕೆದಾರರಿಗಾಗಿ ರಚಿಸಿದ್ದೇವೆ. ಟರ್ಕಿಯಲ್ಲಿನ ಬಳಕೆದಾರರು ಟರ್ಕಿಯ ಕಾನೂನಿನಡಿ ನಿರ್ದಿಷ್ಟಪಡಿಸಲಾಗಿರುವ ಕೆಲವು ಗೌಪ್ಯತೆ ಹಕ್ಕುಗಳನ್ನು ಹೊಂದಿದ್ದಾರೆ. ನಮ್ಮ ಗೌಪ್ಯತೆಯ ತತ್ವಗಳು ಮತ್ತು ಎಲ್ಲ ಬಳಕೆದಾರರಿಗೆ ನಾವು ಒದಗಿಸುವ ಗೌಪ್ಯತೆಯ ನಿಯಂತ್ರಣಗಳು ಈ ಕಾನೂನುಗಳಿಗೆ ಅನುಸಾರವಾಗಿವೆ—ನಾವು ಟರ್ಕಿ ನಿರ್ದಿಷ್ಟವಾದ ಅಗತ್ಯಗಳನ್ನು ಪೂರೈಸುತ್ತೇವೆ ಎನ್ನುವುದನ್ನು ಈ ಸೂಚನೆ ಖಚಿತಪಡಿಸುತ್ತದೆ. ಉದಾಹರಣೆಗೆ, ಎಲ್ಲ ಬಳಕೆದಾರರು ತಮ್ಮ ಡೇಟಾದ ಪ್ರತಿಯನ್ನು ವಿನಂತಿಸಬಹುದು, ಅಳಿಸುವಿಕೆಯನ್ನು ವಿನಂತಿಸಬಹುದು ಮತ್ತು ಆ್ಯಪ್‌ನಲ್ಲಿ ತಮ್ಮ ಗೌಪ್ಯತೆ ಸೆಟ್ಟಿಂಗ್‌ಗಳನ್ನು ನಿಯಂತ್ರಿಸಬಹುದು. ಪೂರ್ಣ ಚಿತ್ರಣಕ್ಕಾಗಿ, ನಮ್ಮ ಗೌಪ್ಯತಾ ನೀತಿಯನ್ನು ಪರಿಶೀಲಿಸಿ.