ಲೈಂಗಿಕ ವಿಷಯ

ಕಮ್ಯುನಿಟಿ ಮಾರ್ಗಸೂಚಿಗಳ ವಿವರಣೆಯ ಸರಣಿ

ನವೀಕರಣ: ಜನವರಿ 2024

  • ಮಕ್ಕಳ ಲೈಂಗಿಕ ಶೋಷಣೆ ಅಥವಾ ದೌರ್ಜನ್ಯದ ಚಿತ್ರಗಳು, ಲೈಂಗಿಕವಾದ ಅಲಂಕಾರವನ್ನು ಹಂಚಿಕೊಳ್ಳುವುದು ಅಥವಾ ಲೈಂಗಿಕ ಸುಲಿಗೆ (ಸೆಕ್ಸ್‌ಟಾರ್ಶನ್) ಸೇರಿದಂತೆ, ಅಪ್ರಾಪ್ತರ ಲೈಂಗಿಕ ಶೋಷಣೆ ಅಥವಾ ದೌರ್ಜನ್ಯವನ್ನು ಒಳಗೊಂಡ ಯಾವುದೇ ಚಟುವಟಿಕೆಯನ್ನು ನಾವು ನಿಷೇಧಿಸುತ್ತೇವೆ. ಅಂತಹ ಚಟುವಟಿಕೆಯನ್ನು ನಾವು ಪತ್ತೆ ಮಾಡಿದಾಗ, ಅಂತಹ ನಡವಳಿಕೆಯಲ್ಲಿ ತೊಡಗಿಕೊಳ್ಳುವ ಪ್ರಯತ್ನಗಳು ಸೇರಿದಂತೆ ಮಕ್ಕಳ ಲೈಂಗಿಕ ಶೋಷಣೆಯ ಎಲ್ಲ ಘಟನೆಗಳನ್ನು ನಾವು ಅಧಿಕಾರಿಗಳಿಗೆ ವರದಿ ಮಾಡುತ್ತೇವೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾರನ್ನಾದರೂ ಒಳಗೊಂಡಿರುವ ನಗ್ನ ಅಥವಾ ಲೈಂಗಿಕವಾಗಿ ಸುಸ್ಪಷ್ಟವಾದ ಕಂಟೆಂಟ್ ಅನ್ನು ಎಂದಿಗೂ ಪೋಸ್ಟ್ ಮಾಡಬೇಡಿ, ಉಳಿಸಬೇಡಿ, ಕಳುಹಿಸಬೇಡಿ, ಫಾರ್ವರ್ಡ್ ಮಾಡಬೇಡಿ, ವಿತರಿಸಬೇಡಿ ಅಥವಾ ಕೇಳಬೇಡಿ (ಇದು ಅಂತಹ ನಿಮ್ಮ ಚಿತ್ರಗಳನ್ನು ಸಹ ಕಳಿಸುವುದು ಅಥವಾ ನಿಮ್ಮಲ್ಲಿ ಉಳಿಸಿಕೊಳ್ಳುವುದನ್ನು ಒಳಗೊಂಡಿದೆ).

  • ನಾವು ಕಾಮೋದ್ರೇಕದ ವಿಷಯವನ್ನು ಪ್ರಚಾರ ಮಾಡುವುದು, ವಿತರಿಸುವುದು ಮತ್ತು ಹಂಚುವುದನ್ನು ನಿಷೇಧಿಸುತ್ತೇವೆ. ಕಾಮೋದ್ರೇಕ ಅಥವಾ ಲೈಂಗಿಕ ಸಂಭೋಗಕ್ಕೆ (ಆನ್‌ಲೈನ್‌ನಲ್ಲಿ ಅಥವಾ ಆಫ್‌ಲೈನ್‌ನಲ್ಲಿ) ಸಂಬಂಧಿಸಿದ ವಾಣಿಜ್ಯ ಚಟುವಟಿಕೆಗಳಿಗೆ ಕೂಡ ನಾವು ಅವಕಾಶ ನೀಡುವುದಿಲ್ಲ. ಎದೆಹಾಲುಣಿಸುವಿಕೆ ಮತ್ತು ಲೈಂಗಿಕವಲ್ಲದ ಸನ್ನಿವೇಶಗಳಲ್ಲಿ ನಗ್ನತೆಯ ಇತರ ಚಿತ್ರಗಳಿಗೆ ಸಾಮಾನ್ಯವಾಗಿ ಅನುಮತಿಸಲಾಗುತ್ತದೆ.



ಅವಲೋಕನ

ಹಾನಿಕಾರಕ ಅಥವಾ ನಿಂದನೆಯ ವಿಷಯಕ್ಕೆ ಎದುರಾಗುವುದರಿಂದ ಎಲ್ಲ Snapchatter ಗಳನ್ನು ರಕ್ಷಿಸಲು ನಾವು ಆಶಿಸುತ್ತೇವೆ. ಅದಕ್ಕಾಗಿ, ಬಳಕೆದಾರರು ಅನಪೇಕ್ಷಿತ ಲೈಂಗಿಕ ವಿಷಯ ಅಥವಾ ನಿಂದನೆಗೆ ಒಡ್ಡಿಕೊಳ್ಳದೆ, Snapchat ನಲ್ಲಿ ಆರಾಮದಾಯಕವಾಗಿ ಅಭಿವ್ಯಕ್ತಿಪಡಿಸಬಹುದು ಮತ್ತು ಮುಕ್ತವಾಗಿ ಸಂವಹನ ನಡೆಸಬಹುದು ಎನ್ನುವುದನ್ನು ಖಚಿತಪಡಿಸಿಕೊಳ್ಳುವ ಗುರಿಯೊಂದಿಗೆ ನಾವು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಈ ನೀತಿಗಳು ಲೈಂಗಿಕವಾಗಿ ಸುಸ್ಪಷ್ಟ ವಿಷಯವನ್ನು ಹಂಚಿಕೊಳ್ಳುವಿಕೆ, ಪ್ರಚಾರ ಮಾಡುವುದು ಅಥವಾ ವಿತರಿಸುವುದನ್ನು ನಿಷೇಧಿಸುತ್ತವೆ--ಇದು ಕಾಮಪ್ರಚೋದಕ ದೃಶ್ಯ, ಲೈಂಗಿಕ ನಗ್ನತೆ ಅಥವಾ ಲೈಂಗಿಕ ಸೇವೆಗಳ ಆಫರ್‌ಗಳು ಸೇರಿದಂತೆ ವಿಶಾಲ ಶ್ರೇಣಿಯ ವಿಷಯವನ್ನು ಒಳಗೊಳ್ಳುತ್ತದೆ--ಮತ್ತು ಮಕ್ಕಳನ್ನು ಶೋಷಿಸುವ ಯಾವುದೇ ವಿಷಯವನ್ನು ಅತ್ಯಂತ ಕಟುವಾಗಿ ಖಂಡಿಸುತ್ತದೆ. 


ನೀವು ಏನನ್ನು ನಿರೀಕ್ಷಿಸಬೇಕು


ಲೈಂಗಿಕ ಪ್ರಚೋದನೆ ಅಥವಾ ಲೈಂಗಿಕ ಪ್ರಚೋದನೆಯನ್ನು ಬಿಂಬಿಸುವ ನಗ್ನತೆಯ ಮೂಲ ಉದ್ದೇಶವಾಗಿರುವ ನಗ್ನತೆ ಒಳಗೊಂಡಂತೆ ಕಾಮಪ್ರಚೋದಕ ಕಂಟೆಂಟ್ ಅನ್ನು ನಿಷೇಧಿಸಲಾಗಿದೆ. ಕಾಮಪ್ರಚೋದಕ ಕಂಟೆಂಟ್‌ನ ಉದಾಹರಣೆಗಳಲ್ಲಿ ಫೋಟೋಗಳು ಅಥವಾ ವೀಡಿಯೊಗಳು, ಅಥವಾ ಅತ್ಯಂತ ನೈಜವೆಂಬಂತೆ ಕಾಣುವ ಅನಿಮೇಶನ್, ರೇಖಾಚಿತ್ರಗಳು ಅಥವಾ ಸುಸ್ಪಷ್ಟ ಲೈಂಗಿಕ ಚಟುವಟಿಕೆಗಳ ನಿರೂಪಣೆಗಳು ಸೇರಿವೆ. ಆದರೆ ಇದು ಕಲಾ ಅಭಿವ್ಯಕ್ತಿಯ ಉದ್ದೇಶ ಹೊಂದಿರುವ ನಗ್ನತೆಗೆ ಅಥವಾ ಎದೆಹಾಲೂಡಿಸುವಿಕೆ, ವೈದ್ಯಕೀಯ ಕಾರ್ಯವಿಧಾನಗಳು ಅಥವಾ ಸಾರ್ವಜನಿಕ ಹಿತಾಸಕ್ತಿಯಲ್ಲಿನ ಪ್ರಸ್ತುತ ಅಥವಾ ಐತಿಹಾಸಿಕ ಘಟನೆಗಳಂತಹವುಗಳಿಗೆ ಅನ್ವಯಿಸುವುದಿಲ್ಲ.  


ಈ ನೀತಿಗಳು, ಆಫ್‌ಲೈನ್ ಸೇವೆಗಳು (ಉದಾಹರಣೆಗೆ, ಕಾಮಪ್ರಚೋದಕ ಸಂದೇಶ) ಮತ್ತು ಆನ್‌ಲೈನ್ ಅನುಭವಗಳು (ಉದಾಹರಣೆಗೆ ಲೈಂಗಿಕ ಚಾಟ್ ಅಥವಾ ವೀಡಿಯೊ ಸೇವೆಗಳನ್ನು ನೀಡುವುದು) ಎರಡೂ ಸೇರಿದಂತೆ, ಲೈಂಗಿಕ ಸೇವೆಗಳನ್ನು ನೀಡುವುದನ್ನು ಕೂಡ ನಿಷೇಧಿಸುತ್ತವೆ. 


ನಮ್ಮ ಸಮುದಾಯದ ಯಾವುದೇ ಸದಸ್ಯರ, ವಿಶೇಷವಾಗಿ ಮಕ್ಕಳ ಲೈಂಗಿಕ ಶೋಷಣೆ ಕಾನೂನುಬಾಹಿರ ಮತ್ತು ನಿಷೇಧಿಸಲ್ಪಟ್ಟಿದೆ. ಶೋಷಣೆಯು ಲೈಂಗಿಕ ಕಳ್ಳಸಾಗಣೆ; ನಗ್ನತೆಯನ್ನು ಒದಗಿಸಲು ಬಳಕೆದಾರರನ್ನು ಒತ್ತಾಯಿಸುವ ಅಥವಾ ಪ್ರಲೋಭಿಸುವ ಪ್ರಯತ್ನಗಳು; ಹಾಗೂ ನಮ್ಮ ಸಮುದಾಯದ ಸದಸ್ಯರ ಮೇಲೆ ಒತ್ತಡ ಹೇರಲು ಅಥವಾ ಬೆದರಿಸಲು ಖಾಸಗಿ ಕ್ಷಣಗಳ ಚಿತ್ರಗಳು ಅಥವಾ ಲೈಂಗಿಕ ಸಾಮಗ್ರಿಗಳನ್ನು ಬಳಸುವ ಯಾವುದೇ ನಡವಳಿಕೆಯನ್ನು ಒಳಗೊಂಡಿರಬಹುದು. ಲೈಂಗಿಕ ಶೋಷಣೆ ಅಥವಾ ದೌರ್ಜನ್ಯದ ಉದ್ದೇಶದೊಂದಿಗೆ ಅಪ್ರಾಪ್ತರನ್ನು ಮನವೊಲಿಸಲು ಅಥವಾ ಒತ್ತಾಯಿಸಲು ಪ್ರಯತ್ನಿಸುವ ಅಥವಾ ಅಪ್ರಾಪ್ತರನ್ನು ಬಾಯ್ಬಿಡದಂತೆ ಮಾಡಲು ಭಯ ಅಥವಾ ಅವಮಾನವನ್ನು ಸನ್ನೆಯಾಗಿಸಿಕೊಳ್ಳುವ ಯಾವುದೇ ಸಂವಹನ ಅಥವಾ ನಡವಳಿಕೆಯನ್ನು ನಾವು ನಿಷೇಧಿಸುತ್ತೇವೆ.


ಈ ನೀತಿಗಳನ್ನು ನಾವು ಹೇಗೆ ಜಾರಿಗೊಳಿಸುತ್ತೇವೆ


ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ವಿಷಯವನ್ನು ತೆಗೆದುಹಾಕಲಾಗುತ್ತದೆ. ಉಲ್ಲಂಘನೆಯ ವಿಷಯವನ್ನು ಹಂಚಿಕೊಳ್ಳುವ, ಪ್ರಚಾರ ಮಾಡುವ ಅಥವಾ ವಿತರಿಸುವ ಬಳಕೆದಾರರಿಗೆ ಸೂಚನೆ ನೀಡಲಾಗುತ್ತದೆ. ನಮ್ಮ ನೀತಿಗಳ ಗಂಭೀರ ಅಥವಾ ಪುನರಾವರ್ತಿತ ಉಲ್ಲಂಘನೆಗಳು ಬಳಕೆದಾರರ ಖಾತೆ ಪ್ರವೇಶದ ಮೇಲೆ ಪರಿಣಾಮ ಬೀರುತ್ತವೆ. 


ನೀವು ಲೈಂಗಿಕವಾಗಿ ಸುಸ್ಪಷ್ಟ ಎಂದು ಭಾವಿಸುವ ಯಾವುದೇ Snap ಅನ್ನು ನೀವು ಎಂದಾದರೂ ಸ್ವೀಕರಿಸಿದರೆ ಅಥವಾ ನೋಡಿದರೆ — ನಿಮಗೆ ಅಹಿತಕರ ಭಾವನೆ ಮೂಡಿದರೆ — ನಮ್ಮ ಆ್ಯಪ್‌ನಲ್ಲಿನ ವರದಿ ಮಾಡುವಿಕೆ ಮೆನು ಬಳಸಲು ಹಿಂಜರಿಯಬೇಡಿ. ಬಳಕೆದಾರರ ಗೌಪ್ಯತೆ ಮತ್ತು ಸುರಕ್ಷತೆಯನ್ನು ರಕ್ಷಿಸಲು ನೆರವಾಗುವ ರೀತಿಗಳಲ್ಲಿ ಆ ವರದಿಗಳನ್ನು ಕ್ರಮಕ್ಕಾಗಿ ಪರಿಶೀಲಿಸಲಾಗುತ್ತದೆ. ಅನಪೇಕ್ಷಿತ ಸಂದೇಶಗಳನ್ನು ನಿರ್ಬಂಧಿಸುವಂತೆಯೂ ಸಹ ನಾವು ಬಳಕೆದಾರರನ್ನು ಪ್ರೋತ್ಸಾಹಿಸುತ್ತೇವೆ. 

ಸ್ಪಾಟ್‌ಲೈಟ್ ಮತ್ತು Discover ಸೇರಿದಂತೆ ನಮ್ಮ ಹೆಚ್ಚಿನ ವ್ಯಾಪ್ತಿಯ ಮೇಲ್ಮೈಗಳು ಪೂರ್ವಭಾವಿ ಮೇಲ್ವಿಚಾರಣೆ ಮತ್ತು ಇತರ ಸುರಕ್ಷತೆಗಳಿಗೆ ಒಳಪಟ್ಟಿರುತ್ತವೆ. ಈ ವೇದಿಕೆಗಳು ಲೈಂಗಿಕವಾಗಿ ಸುಸ್ಪಷ್ಟ ಎಂದು ಪರಿಗಣಿಸದೆ ಇರುವ ಸೂಚ್ಯ ವಿಷಯವನ್ನು ಒಮ್ಮೊಮ್ಮೆ ಪ್ರದರ್ಶಿಸಬಹುದು (ಉದಾಹರಣೆಗೆ, ಮೈಕಾಣಿಸುವಂತಹ ಈಜುಡುಗೆ); ಅದಾಗ್ಯೂ, ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳೊಂದಿಗೆ ಅನುಸರಣೆ ಹೊಂದಿಲ್ಲ ಎಂದು ನೀವು ಭಾವಿಸುವ ಯಾವುದೇ ವಿಷಯವನ್ನು ವರದಿ ಮಾಡುವಂತೆ ಬಳಕೆದಾರರನ್ನು ಪ್ರೋತ್ಸಾಹಿಸುತ್ತೇವೆ.

ನಮ್ಮ ವೇದಿಕೆಯಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯದ ಚಿತ್ರಣಗಳನ್ನು (CSEAI) ತಡೆಗಟ್ಟುವುದು, ಪತ್ತೆಮಾಡುವುದು ಮತ್ತು ನಿರ್ಮೂಲನೆ ಮಾಡುವುದು ನಮ್ಮ ಅಗ್ರ ಆದ್ಯತೆಯಾಗಿದೆ ಮತ್ತು CSEAI ಮತ್ತು ಮಕ್ಕಳ ಲೈಂಗಿಕ ದೌರ್ಜನ್ಯದ ಇತರ ವಿಧಗಳ ಕಂಟೆಂಟ್ ಅನ್ನು ನಿವಾರಿಸಲು ನಮ್ಮ ಸಾಮರ್ಥ್ಯಗಳನ್ನು ನಾವು ನಿರಂತರವಾಗಿ ವಿಕಸನಗೊಳಿಸುತ್ತೇವೆ. ಈ ನೀತಿಗಳ ಉಲ್ಲಂಘನೆಗಳನ್ನು ನಾವು ಕಾನೂನಿನ ಅಗತ್ಯದ ಅನುಸಾರ, ಕಾಣೆಯಾದ ಮತ್ತು ಶೋಷಣೆಗೊಳಗಾದ ಮಕ್ಕಳ U.S. ರಾಷ್ಟ್ರೀಯ ಕೇಂದ್ರಕ್ಕೆ (NCMEC) ವರದಿ ಮಾಡುತ್ತೇವೆ. ನಂತರ NCMEC, ಅಗತ್ಯಕ್ಕೆ ಅನುಸಾರ ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಮನ್ವಯ ಮಾಡುತ್ತದೆ.


ಪ್ರಮುಖ ಸಂಗತಿ



Snapchatter ಗಳು ತಮ್ಮನ್ನು ಅಭಿವ್ಯಕ್ತಪಡಿಸಬಹುದಾದ ಸುರಕ್ಷಿತ ಸಮುದಾಯವನ್ನು ಬೆಳೆಸುವುದು ನಮ್ಮ ಗುರಿಯಾಗಿದೆ ಮತ್ತು ಲೈಂಗಿಕವಾಗಿ ಸುಸ್ಪಷ್ಟ ಅಥವಾ ಶೋಷಣೆಯ ವಿಷಯವನ್ನು ನಾವು ಸಹಿಸುವುದಿಲ್ಲ. ಎಂದಾದರೂ ನಿಮಗೆ ಅಹಿತಕರ ಅನ್ನಿಸಿದರೆ, ನಿಮ್ಮ ಬದುಕಿನಲ್ಲಿ ವಿಶ್ವಾಸಾರ್ಹ ವ್ಯಕ್ತಿಯನ್ನು ಸಂಪರ್ಕಿಸಲು, ಉಲ್ಲಂಘನೆಯ ವಿಷಯ ವರದಿ ಮಾಡಲು ಮತ್ತು ಯಾವುದೇ ಮನನೋಯಿಸುವ ಬಳಕೆದಾರರನ್ನು ನಿರ್ಬಂಧಿಸಲು ಹಿಂಜರಿಯಬೇಡಿ.