ಹಾನಿಕಾರಕ ಸುಳ್ಳು ಅಥವಾ ವಂಚನೆಯ ಮಾಹಿತಿ
ಕಮ್ಯುನಿಟಿ ಮಾರ್ಗಸೂಚಿಗಳ ವಿವರಣೆಯ ಸರಣಿ
ಅಪ್‌ಡೇಟ್ ಮಾಡಲಾಗಿದೆ: ಆಗಸ್ಟ್ 2023
ದುರಂತ ಘಟನೆಗಳು ನಡೆದಿರುವುದನ್ನು ನಿರಾಕರಿಸುವುದು, ರುಜುವಾತುಗಳಿಲ್ಲದ ವೈದ್ಯಕೀಯ ಕ್ಷೇಮ್‌ಗಳು, ನಾಗರಿಕ ಪ್ರಕ್ರಿಯೆಗಳ ಸಮಗ್ರತೆಯನ್ನು ಕಡೆಗಣಿಸುವುದು ಅಥವಾ ಸುಳ್ಳು ಅಥವಾ ದಾರಿತಪ್ಪಿಸುವ ಉದ್ದೇಶಗಳಿಗಾಗಿ ವಿಷಯವನ್ನು ತಿರುಚುವುದು ಮುಂತಾದ ಹಾನಿಯನ್ನು ಉಂಟುಮಾಡುವ ಅಥವಾ ದುರುದ್ದೇಶಪೂರಿತವಾದ ಸುಳ್ಳು ಮಾಹಿತಿಯನ್ನು ಹರಡುವುದನ್ನು ನಾವು ನಿಷೇಧಿಸುತ್ತೇವೆ.
ನೀವಲ್ಲದ ಬೇರೊಬ್ಬರಂತೆ (ಅಥವಾ ಬೇರೆ ವಿಷಯದಂತೆ) ಸೋಗು ಹಾಕುವುದನ್ನು ಅಥವಾ ನೀವು ಯಾರೆನ್ನುವುದನ್ನು ಜನರಿಂದ ಮರೆಮಾಚುವುದನ್ನು ನಾವು ನಿಷೇಧಿಸುತ್ತೇವೆ. ಇದು ನಿಮ್ಮ ಸ್ನೇಹಿತರು, ಸೆಲೆಬ್ರಿಟಿಗಳು, ಬ್ರ್ಯಾಂಡ್‌ಗಳು ಅಥವಾ ಇತರ ಸಂಸ್ಥೆಗಳ ಸೋಗು ಹಾಕುವುದನ್ನು ಒಳಗೊಂಡಿದೆ.
Snapchat ಅಥವಾ Snap Inc. ಅನ್ನು ನಕಲು ಮಾಡುವುದು ಸೇರಿದಂತೆ, ಸ್ಪ್ಯಾಮ್ ಅಥವಾ ವಂಚನೆಯ ಅಭ್ಯಾಸಗಳಿಗೆ ನಾವು ಅವಕಾಶ ನೀಡುವುದಿಲ್ಲ.
ಅವಲೋಕನ
ಜವಾಬ್ದಾರಿಯುತ ಮಾಹಿತಿ ವಾತಾವರಣವನ್ನು ಬೆಂಬಲಿಸಲು ನಮ್ಮ ಪಾತ್ರವನ್ನು ನಿರ್ವಹಿಸುವುದು Snap ನಲ್ಲಿ ಪ್ರಮುಖ ಆದ್ಯತೆಯಾಗಿದೆ. ವಂಚನೆಯ ಅಭ್ಯಾಸಗಳು ಅನೇಕ ಸ್ವರೂಪದಲ್ಲಿರುತ್ತವೆ ಮತ್ತು ಅವು ವಿಶ್ವಾಸವನ್ನು ಕಡೆಗಣಿಸಬಲ್ಲವು ಮತ್ತು Snapchatter ಗಳ ಸುರಕ್ಷತೆ ಮತ್ತು ಭದ್ರತೆಗೆ ಅಪಾಯ ಒಡ್ಡಬಲ್ಲವು ಎಂದು ನಮಗೆ ತಿಳಿದಿದೆ. ನಮ್ಮ ನೀತಿಗಳು ಸುಳ್ಳುಮಾಹಿತಿಯ ಹರಡುವಿಕೆಯನ್ನು ಕಡಿಮೆ ಮಾಡುವ ಮತ್ತು ವಿಶಾಲ ಶ್ರೇಣಿಯ ಸನ್ನಿವೇಶಗಳಲ್ಲಿ ಬಳಕೆದಾರರನ್ನು ವಂಚನೆ ಮತ್ತು ಸ್ಪ್ಯಾಮ್‌ನಿಂದ ರಕ್ಷಿಸುವ ಉದ್ದೇಶವನ್ನು ಹೊಂದಿವೆ.
ಹಾನಿಕಾರಕ ಸುಳ್ಳು ಅಥವಾ ವಂಚನೆಯ ಮಾಹಿತಿಗೆ ಸಂಬಂಧಿಸಿದ ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು ಅವಶ್ಯಕವಾಗಿ ಎರಡು ವಿಶಿಷ್ಟ ಆದರೆ ಸಂಬಂಧಿತ ಹಾನಿಯ ವರ್ಗಗಳನ್ನು ಒಳಗೊಳ್ಳುತ್ತವೆ: (1) ಸುಳ್ಳು ಮಾಹಿತಿ ಮತ್ತು (2) ವಂಚನೆಯ ಅಥವಾ ಸ್ಪ್ಯಾಮ್ ಮಾಡುವ ನಡವಳಿಕೆ.
ವಾಸ್ತವವನ್ನು ತಿರುಚುವ ವಿಷಯವು ಬಳಕೆದಾರರಿಗೆ ಮತ್ತು ಸಮಾಜಕ್ಕೆ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡಬಹುದು. ಯಾವುದು ನಿಖರ ಎಂದು ತಿಳಿದುಕೊಳ್ಳುವುದು ಕೆಲವೊಮ್ಮೆ, ನಿರ್ದಿಷ್ಟವಾಗಿ ತ್ವರಿತವಾಗಿ ಹರಡಲ್ಪಡುವ ಪ್ರಸ್ತುತ ಘಟನೆಗಳ ವಿಷಯದಲ್ಲಿ ಅಥವಾ ವಿಜ್ಞಾನ, ಆರೋಗ್ಯ ಮತ್ತು ವಿಶ್ವದ ಘಟನೆಗಳಂತಹ ಸಂಕೀರ್ಣ ವಿಷಯಗಳಲ್ಲಿ ಕಷ್ಟವಾಗಬಹುದು ಎಂದು ನಮಗೆ ತಿಳಿದಿದೆ. ಈ ಕಾರಣಕ್ಕಾಗಿ, ನಮ್ಮ ನೀತಿಗಳು ಮಾಹಿತಿ ನಿಖರವಾಗಿದೆಯೇ ಅಥವಾ ದಾರಿತಪ್ಪಿಸುತ್ತಿದೆಯೇ ಎನ್ನುವುದರ ಕುರಿತಾಗಿ ಅಷ್ಟೇ ಅಲ್ಲ, ಅದರ ಜೊತೆಗೆ ಅದರ ಸಂಭಾವ್ಯ ಹಾನಿಯ ಕುರಿತಾಗಿಯೂ ಗಮನ ಕೇಂದ್ರೀಕರಿಸುತ್ತವೆ.
ಅನೇಕ ಬಗೆಯ ವರ್ಗಗಳಿದ್ದು ಅವುಗಳಲ್ಲಿ ವಾಸ್ತವಾಂಶಗಳ ತಪ್ಪು ಪ್ರತಿನಿಧಿಸುವಿಕೆಗಳು ವಿಶಿಷ್ಟ ಅಪಾಯಗಳನ್ನು ಒಡ್ಡಬಹುದು. ಈ ಕ್ಷೇತ್ರಗಳಾದ್ಯಂತ, ತಪ್ಪಾಗಿ ಪ್ರತಿನಿಧಿಸುವಿಕೆಗಳು ಉದ್ದೇಶಪೂರ್ವಕವೇ ಅಲ್ಲವೇ ಎನ್ನುವುದನ್ನು ಪರಿಗಣಿಸದೆ, ದಾರಿತಪ್ಪಿಸುವ ಅಥವಾ ನಿಖರವಲ್ಲದ ವಿಷಯದ ವಿರುದ್ಧ ನಮ್ಮ ತಂಡಗಳು ಕ್ರಮ ಕೈಗೊಳ್ಳುತ್ತವೆ. ಈ ರೀತಿಯಲ್ಲಿ, ತಪ್ಪುಮಾಹಿತಿ, ಸುಳ್ಳು ಮಾಹಿತಿ, ದಾರಿತಪ್ಪಿಸುವ ಮಾಹಿತಿ ಮತ್ತು ತಿರುಚಿತ ಮಾಧ್ಯಮ ಸೇರಿದಂತೆ, ನಮ್ಮ ನೀತಿಗಳು ಎಲ್ಲ ಸ್ವರೂಪದ ಮಾಹಿತಿ ಬೆದರಿಕೆಗಳ ವಿರುದ್ಧ ಕಾರ್ಯನಿರ್ವಹಿಸುತ್ತವೆ.
ನಿರ್ದಿಷ್ಟವಾಗಿ ಹಾನಿಗೆ ಕಾರಣವಾಗಬಹುದು ಎಂದು ನಾವು ಭಾವಿಸುವ ಮಾಹಿತಿ ವರ್ಗಗಳ ಉದಾಹರಣೆಗಳಲ್ಲಿ ಈ ಕೆಳಗಿನವು ಸೇರಿವೆ:
ದುರಂತದ ಘಟನೆಗಳ ಅಸ್ತಿತ್ವವನ್ನು ನಿರಾಕರಿಸುವ ವಿಷಯ. ವಿವಾದಕ್ಕೆಡೆ ಮಾಡುವ ಅಥವಾ ನಿರಾಕರಿಸುವ ವಿಷಯವನ್ನು ನಾವು ನಿಷೇಧಿಸುತ್ತೇವೆ, ಉದಾಹರಣೆಗೆ ಜರ್ಮನಿಯಲ್ಲಿ ಯಹೂದಿಗಳ ಮಾರಣಹೋಮ ಅಥವಾ ಸ್ಯಾಂಡಿ ಹುಕ್ ಶಾಲೆಯ ಶೂಟಿಂಗ್ ಘಟನೆಗಳನ್ನು ನಿರಾಕರಿಸುವಂತಹವು. ಅಂತಹ ದುರ್ಘಟನೆಗಳನ್ನು ತಪ್ಪಾಗಿ ಪ್ರತಿನಿಧಿಸುವುದು ಮತ್ತು ಅವುಗಳಿಗೆ ಸಂಬಂಧಿಸಿ ಆಧಾರರಹಿತ ಪಿತೂರಿ ಸಿದ್ಧಾಂತಗಳು ಹಿಂಸೆ ಮತ್ತು ದ್ವೇಷಕ್ಕೆ ಕೊಡುಗೆ ನೀಡಬಹುದು, ಜೊತೆಗೆ ಅಂತಹ ಘಟನೆಗಳಿಂದ ನೊಂದಿರುವ ಜೀವಗಳು ಮತ್ತು ಕುಟುಂಬಗಳ ಮೇಲೆ ಹಾನಿಯುಂಟುಮಾಡಬಹುದು.
ಆಧಾರರಹಿತ ವೈದ್ಯಕೀಯ ದಾವೆಗಳನ್ನು ಪ್ರಚಾರ ಮಾಡುವ ವಿಷಯ. ಕೋವಿಡ್-19 ಹರಡುವಿಕೆ ತಡೆಯಲು ಪರೀಕ್ಷಿಸದೆ ಇರುವ ಚಿಕಿತ್ಸೆಗಳನ್ನು ಶಿಫಾರಸು ಮಾಡುವಂತಹ ಅಥವಾ ಲಸಿಕೆಗಳ ಕುರಿತು ಆಧಾರರಹಿತ ಪಿತೂರಿ ಸಿದ್ಧಾಂತಗಳನ್ನು ಒಳಗೊಂಡಿರುವ ವಿಷಯಕ್ಕೆ ನಾವು ಅವಕಾಶ ನೀಡುವುದಿಲ್ಲ. ವೈದ್ಯಕೀಯ ಕ್ಷೇತ್ರವು ನಿರಂತರ ಬದಲಾವಣೆಯಾಗುತ್ತಿದೆ ಮತ್ತು ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ಆಗಾಗ ಮಾರ್ಗದರ್ಶನವನ್ನು ಬದಲಾಯಿಸಬಹುದಾದರೂ, ಅಂತಹ ವಿಶ್ವಾಸಾರ್ಹ ಸಂಸ್ಥೆಗಳು ಮಾನದಂಡಗಳು ಮತ್ತು ಉತ್ತರದಾಯಿತ್ವಕ್ಕೆ ಒಳಪಡುತ್ತವೆ ಮತ್ತು ಜವಾಬ್ದಾರಿಯುತ ಆರೋಗ್ಯ ಮತ್ತು ವೈದ್ಯಕೀಯ ಮಾರ್ಗದರ್ಶನಕ್ಕಾಗಿ ಒಂದು ಮಾನದಂಡವನ್ನು ಒದಗಿಸುವುದಕ್ಕಾಗಿ ನಾವು ಅವರಲ್ಲಿ ನಿರೀಕ್ಷೆ ಇರಿಸಿಕೊಳ್ಳಬಹುದು.
ನಾಗರಿಕ ಪ್ರಕ್ರಿಯೆಗಳ ವಿಶ್ವಾಸಾರ್ಹತೆಯನ್ನು ನಿರ್ಲಕ್ಷಿಸುವ ವಿಷಯ. ಚುನಾವಣೆಗಳು ಮತ್ತು ಇತರ ನಾಗರಿಕ ಪ್ರಕ್ರಿಯೆಗಳು ಸಮಾಜದ ಹಕ್ಕುಗಳ ಕಾರ್ಯಚಟುವಟಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಮತ್ತು ಮಾಹಿತಿ ತಿರುಚುವಿಕೆಗೆ ವಿಶಿಷ್ಟ ಗುರಿಗಳನ್ನೂ ಪ್ರಸ್ತುತಪಡಿಸುತ್ತವೆ. ಅಂತಹ ಘಟನೆಗಳ ಸುತ್ತಲಿನ ಮಾಹಿತಿ ವಾತಾವರಣವನ್ನು ರಕ್ಷಿಸಲು, ನಾಗರಿಕ ಪ್ರಕ್ರಿಯೆಗಳಿಗೆ ಈ ಕೆಳಗಿನ ವಿಧಗಳ ಬೆದರಿಕೆಗಳಿಗೆ ಅನ್ವಯವಾಗುವಂತೆ ನಾವು ನಮ್ಮ ನೀತಿಗಳನ್ನು ಜಾರಿಗೊಳಿಸುತ್ತೇವೆ:
ಕಾರ್ಯವಿಧಾನದ ಹಸ್ತಕ್ಷೇಪ: ಪ್ರಮುಖ ದಿನಾಂಕಗಳು ಮತ್ತು ಸಮಯ ಅಥವಾ ಭಾಗವಹಿಸುವಿಕೆಗೆ ಅರ್ಹತೆಯ ಅಗತ್ಯಗಳಂತಹ ನೈಜ ಚುನಾವಣೆ ಅಥವಾ ನಾಗರಿಕ ಕಾರ್ಯವಿಧಾನಗಳಿಗೆ ಸಂಬಂಧಿಸಿದ ತಪ್ಪುಮಾಹಿತಿ.
ಭಾಗವಹಿಸುವಿಕೆಯ ಹಸ್ತಕ್ಷೇಪ: ವೈಯಕ್ತಿಕ ಸುರಕ್ಷತೆಗೆ ಬೆದರಿಕೆಯೊಡ್ಡುವ ಅಥವಾ ಚುನಾವಣೆಯಲ್ಲಿ ಅಥವಾ ನಾಗರಿಕ ಪ್ರಕ್ರಿಯೆಯಲ್ಲಿ ಭಾಗವಹಿಸುವಿಕೆಯನ್ನು ತಡೆಯಲು ವದಂತಿಗಳನ್ನು ಹರಡುವ ವಿಷಯ.
ವಂಚನೆಯ ಅಥವಾ ಕಾನೂನುಬಾಹಿರ ಭಾಗವಹಿಸುವಿಕೆ: ಒಂದು ನಾಗರಿಕ ಪ್ರಕ್ರಿಯೆಯಲ್ಲಿ ಭಾಗವಹಿಸಲು ತಮ್ಮನ್ನು ತಪ್ಪಾಗಿ ಪ್ರತಿನಿಧಿಸಿಕೊಳ್ಳಲು ಅಥವಾ ಅಕ್ರಮವಾಗಿ ಮತ ಚಲಾಯಿಸಲು ಅಥವಾ ಮತಪತ್ರ ನಾಶಪಡಿಸಲು ಜನರನ್ನು ಪ್ರೋತ್ಸಾಹಿಸುವ ವಿಷಯ.
ನಾಗರಿಕ ಪ್ರಕ್ರಿಯೆಗಳ ಅಮಾನ್ಯಗೊಳಿಸುವಿಕೆ: ಚುನಾವಣಾ ಫಲಿತಾಂಶಗಳ ಕುರಿತು ಸುಳ್ಳು ಅಥವಾ ದಾರಿತಪ್ಪಿಸುವ ದಾವೆಗಳ ಆಧಾರದಲ್ಲಿ ಪ್ರಜಾತಾಂತ್ರಿಕ ಸಂಸ್ಥೆಯನ್ನು ಅಮಾನ್ಯಗೊಳಿಸುವ ಉದ್ದೇಶದ ವಿಷಯ, ಉದಾಹರಣೆಗೆ.
ಹಾನಿಕಾರಕ ಸುಳ್ಳು ಮಾಹಿತಿ ವಿರುದ್ಧದ ನಮ್ಮ ನೀತಿಗಳು, ವೈರಲ್ ಆಗುವಿಕೆಯನ್ನು ಮಿತಿಗೊಳಿಸುವ, ಪಾರದರ್ಶಕತೆಯನ್ನು ಪ್ರಚಾರ ಮಾಡುವ ಮತ್ತು ನಮ್ಮ ವೇದಿಕೆಯಾದ್ಯಂತ ನೈಜತೆಯ ಪಾತ್ರವನ್ನು ಹೆಚ್ಚಿಸುವ ವಿಸ್ತೃತವಾದ ಉತ್ಪನ್ನ ವಿನ್ಯಾಸ ಸುರಕ್ಷತಾ ಕ್ರಮಗಳು ಮತ್ತು ಜಾಹೀರಾತು ನಿಯಮಗಳಿಂದ ಪೂರಕಗೊಳಿಸಲ್ಪಟ್ಟಿವೆ. ಈ ಉದ್ದೇಶಗಳನ್ನು ನಮ್ಮ ವೇದಿಕೆಯ ಸಂರಚನೆ ಬೆಂಬಲಿಸುವ ವಿಧಾನಗಳ ಕುರಿತಾದ ಹೆಚ್ಚುವರಿ ಮಾಹಿತಿಗಾಗಿ, ಈ ಬ್ಲಾಗ್ ಪೋಸ್ಟ್‌ಗೆ ಭೇಟಿ ನೀಡಿ.
ವಂಚನೆ ಮತ್ತು ಸ್ಪ್ಯಾಮ್, Snapchatter ಗಳನ್ನು ಗಮನಾರ್ಹ ಆರ್ಥಿಕ ಹಾನಿ, ಸೈಬರ್ ಸುರಕ್ಷತೆ ಅಪಾಯಗಳು ಮತ್ತು ಕಾನೂನಿಗೆ ಒಡ್ಡಿಕೊಳ್ಳುವಿಕೆಗೂ ಕೂಡ ಒಳಪಡಿಸಬಹುದು (ಅಹಿತಕರ ಮತ್ತು ಕಿರಿಕಿರಿಯ ಅನುಭವವನ್ನು ಪ್ರತ್ಯೇಕವಾಗಿ ಉಲ್ಲೇಖಿಸಬೇಕಾಗಿಲ್ಲ). ಈ ಅಪಾಯಗಳನ್ನು ಕಡಿಮೆ ಮಾಡಲು, ನಮ್ಮ ಸಮುದಾಯದಲ್ಲಿ ವಿಶ್ವಾಸವನ್ನು ಕಡೆಗಣಿಸುವ ವಂಚನೆಯ ಅಭ್ಯಾಸಗಳನ್ನು ನಾವು ನಿಷೇಧಿಸುತ್ತೇವೆ.
ನಿಷೇಧಿತ ಅಭ್ಯಾಸಗಳಲ್ಲಿ ಯಾವುದೇ ಬಗೆಯ ಹಗರಣಗಳನ್ನು ಉತ್ತೇಜಿಸುವ ವಿಷಯ; ತ್ವರಿತವಾಗಿ ಶ್ರೀಮಂತರಾಗುತ್ತೀರಿ ಎನ್ನುವ ಯೋಜನೆಗಳು; ಅನಧಿಕೃತ ಅಥವಾ ಬಹಿರಂಗಪಡಿಸದ ಪಾವತಿ ಅನ್ವಯಿಸುವ ವಿಷಯಗಳು; ಮತ್ತು ಖೋಟಾ ಸರಕುಗಳು, ದಾಖಲೆಗಳು ಅಥವಾ ಪ್ರಮಾಣಪತ್ರಗಳನ್ನು ಒಳಗೊಂಡಂತೆ, ವಂಚನೆಯ ಸರಕುಗಳು ಅಥವಾ ಸೇವೆಗಳ ಪ್ರಚಾರ ಸೇರಿವೆ. ನಾವು ಫಾಲೋವರ್‌ಗೆ ಪಾವತಿಸಿವ ಪ್ರಚಾರಗಳು ಅಥವಾ ಇತರ ಫಾಲೋವರ್ ಹೆಚ್ಚಿಸಿಕೊಳ್ಳುವ ಯೋಜನೆಗಳು; ಸ್ಪ್ಯಾಮ್ ಅಪ್ಲಿಕೇಶನ್‌ಗಳ ಪ್ರಚಾರ; ಮತ್ತು ಬಹುಹಂತದ ಮಾರ್ಕೆಟಿಂಗ್ ಅಥವಾ ಪಿರಾಮಿಡ್ ಯೋಜನೆಗಳ ಪ್ರಚಾರವನ್ನು ಕೂಡ ನಿಷೇಧಿಸುತ್ತೇವೆ. ಯಾವುದೇ ಬಗೆಯ ಅಕ್ರಮ ಹಣ ಚಲಾವಣೆಯನ್ನು (ಹಣ ಕಳಿಸುವುದು ಅಥವಾ ಹಣ ಕಸರತ್ತುಗಳು ಸೇರಿದಂತೆ) ಕೂಡ ನಾವು ನಿಷೇಧಿಸುತ್ತೇವೆ. ಇದು ಅಕ್ರಮವಾಗಿ ಪಡೆದಿರುವ ಅಥವಾ ಬೇರೊಬ್ಬರ ಪರವಾಗಿ ಅಪರಿಚಿತ ಮೂಲದಿಂದ ಪಡೆದಿರುವ ಹಣವನ್ನು ಸ್ವೀಕರಿಸುವುದು ಮತ್ತು ವರ್ಗಾಯಿಸುವುದು, ಅನಧಿಕೃತ ಮತ್ತು ಕಾನೂನುಬಾಹಿರ ಹಣ ಪ್ರಸರಣ ಅಥವಾ ಕರೆನ್ಸಿ ವಿನಿಮಯ ಸೇವೆಗಳು ಮತ್ತು ಈ ಚಟುವಟಿಕೆಗಳನ್ನು ಕೋರುವುದು ಮತ್ತು ಪ್ರಚಾರ ಮಾಡುವುದನ್ನು ಒಳಗೊಂಡಿದೆ.
ಅಂತಿಮವಾಗಿ, ನಮ್ಮ ನೀತಿಗಳು ನೀವಲ್ಲದಿರುವ ಬೇರೊಬ್ಬರ ಸೋಗು ಹಾಕುವುದನ್ನು ಅಥವಾ ನೀವು ಯಾರು ಎನ್ನುವ ಕುರಿತು ಜನರನ್ನು ವಂಚಿಸಲು ಪ್ರಯತ್ನಿಸುವುದನ್ನು ಕೂಡ ನಿಷೇಧಿಸುತ್ತವೆ. ಇದು, ನಿಮ್ಮ ಸ್ನೇಹಿತರು, ಸೆಲೆಬ್ರಿಟಿಗಳು, ಬ್ರ್ಯಾಂಡ್‌ಗಳು ಅಥವಾ ಇತರ ಸಂಘಟನೆಗಳ ಸೋಗುಹಾಕುವುದನ್ನು ಒಳಗೊಂಡಿದೆ. Snapchat ಅಥವಾ Snap, Inc. ಬ್ರ್ಯಾಂಡಿಂಗ್ ಅನ್ನು ನಕಲು ಮಾಡುವುದು ಸರಿಯಲ್ಲ ಎಂದು ಈ ನಿಯಮಗಳು ಅರ್ಥೈಸುತ್ತವೆ.
ಹಾನಿಕಾರಕ ಸುಳ್ಳು ಅಥವಾ ಮೋಸಗೊಳಿಸುವ ಮಾಹಿತಿಯ ವಿರುದ್ಧದ ನಮ್ಮ ನಿಯಮಗಳನ್ನು ಉಲ್ಲಂಘಿಸುವ ವಿಷಯವನ್ನು ತೆಗೆದುಹಾಕಲಾಗುತ್ತದೆ. ಉಲ್ಲಂಘನೆಯ ವಿಷಯವನ್ನು ಹಂಚಿಕೊಳ್ಳುವ, ಪ್ರಚಾರ ಮಾಡುವ ಅಥವಾ ವಿತರಿಸುವ ಬಳಕೆದಾರರಿಗೆ ಸೂಚನೆ ನೀಡಲಾಗುತ್ತದೆ ಮತ್ತು ಈ ನೀತಿಗಳ ಉಲ್ಲಂಘನೆಯನ್ನು ಮುಂದುವರಿಸುವ ಬಳಕೆದಾರರ ಖಾತೆಯ ಪ್ರವೇಶವನ್ನು ನಿರ್ಬಂಧಿಸಲಾಗುತ್ತದೆ.
2022 ರಲ್ಲಿ, ಸುಳ್ಳು ಮಾಹಿತಿಗಾಗಿ ನಾವು ನಮ್ಮ ವರದಿ ಮಾಡುವಿಕೆ ಮೆನು ವಿಭಾಗಗಳನ್ನು ವಿಸ್ತರಿಸಿದೆವು, ಈ ಮೂಲಕ ಸಾಮಾಜಿಕ, ರಾಜಕೀಯ ಮತ್ತು ಆರೋಗ್ಯ ಸಂಬಂಧಿತ ಸುಳ್ಳು ಮಾಹಿತಿಯನ್ನು ಇನ್ನಷ್ಟು ನಿರ್ದಿಷ್ಟವಾಗಿ ವರದಿ ಮಾಡಲು ಬಳಕೆದಾರರಿಗೆ ಅವಕಾಶ ಕಲ್ಪಿಸಿದೆವು. ಯಾರಾದರೂ ನಿಮ್ಮ ಅಥವಾ ಬೇರೆಯವರ ಸೋಗುಹಾಕಿದಾಗ ಅಥವಾ ನೀವು ಸ್ಪ್ಯಾಮ್ ಅಥವಾ ಸುಳ್ಳುಮಾಹಿತಿಗೆ ಎದುರಾದಾಗ ದಯವಿಟ್ಟು ನಮಗೆ ತಿಳಿಸಿ. ನಾವು ವರದಿಯನ್ನು ಸ್ವೀಕರಿಸಿದ ಬಳಿಕ, ಸೋಗುಹಾಕುವಿಕೆಯನ್ನು ಬಗೆಹರಿಸಲು ಅಥವಾ ಹಾನಿಕಾರಕ ವಿಷಯ ಮುಂದುವರಿಯುವುದನ್ನು ತಡೆಯಲು ನಮ್ಮ ವಿಶ್ವಾಸ ಮತ್ತು ಸುರಕ್ಷತಾ ತಂಡಗಳು ಕ್ರಮ ಕೈಗೊಳ್ಳಬಹುದು.
ಸ್ಪಾಟ್‌ಲೈಟ್ ಮತ್ತು Discover ನಂತಹ ನಮ್ಮ ಅಧಿಕ ವ್ಯಾಪ್ತಿಯ ವೇದಿಕೆಗಳಲ್ಲಿ, ವಿಷಯವನ್ನು ಮಾಡರೇಟ್ ಮಾಡಲು ಮತ್ತು ಮಾಹಿತಿಯ ನಿಖರತೆಯನ್ನು ಪ್ರಚಾರ ಮಾಡಲು ನಾವು ಬಹಳ ಸಕ್ರಿಯ ವಿಧಾನವನ್ನು ಅನುಸರಿಸುತ್ತೇವೆ. ಆದರೆ ಈ ವೇದಿಕೆಗಳಲ್ಲಿ ನಿಮಗೆ ಕಾಣಿಸುವ ಯಾವುದೇ ಹಾನಿಕಾರಕ ವಿಷಯಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ಮತ್ತು ವರದಿಗಳನ್ನು ನಾವು ಅಗಾಧವಾಗಿ ಗೌರವಿಸುತ್ತೇವೆ; ಈ ವೇದಿಕೆಗಳನ್ನು ಹಾನಿಕಾರಕ ಮಾಹಿತಿಯಿಂದ ಮುಕ್ತವಾಗಿ ಇರಿಸಲು ನಮ್ಮ ಪ್ರಕ್ರಿಯೆಗಳಲ್ಲಿನ ಯಾವುದೇ ದೋಷಗಳ ಕುರಿತು ನಮಗೆ ಎಚ್ಚರಿಸಲು ಅವು ಸಹಾಯ ಮಾಡುತ್ತವೆ.
ಜವಾಬ್ದಾರಿಯುತ ಮಾಹಿತಿಯ ವಾತಾವರಣವನ್ನು ಪ್ರಚಾರ ಮಾಡಲು ನಮ್ಮ ಕಾರ್ಯವನ್ನು ಮಾಡುವುದು ನಮ್ಮ ಕಂಪನಿಯಾದ್ಯಂತ ಪ್ರಮುಖ ಆದ್ಯತೆಯಾಗಿದೆ ಮತ್ತು ಹಾನಿಕಾರಕ ಸುಳ್ಳು ಅಥವಾ ವಂಚನೆಯ ವಿಷಯದ ಅಪಾಯಗಳಿಂದ Snapchatter ಗಳನ್ನು ರಕ್ಷಿಸಲು ನಾವು ವಿನೂತನ ಮಾರ್ಗಗಳನ್ನು ಅನ್ವೇಷಿಸುವುದನ್ನು ಮುಂದುವರಿಸುತ್ತೇವೆ.
ನಾವು ಈ ಪ್ರಯತ್ನಗಳನ್ನು ಮುಂದುವರಿಸುತ್ತಿರುವಂತೆ, ನಮ್ಮ ವಿಧಾನದ ಪರಿಣಾಮಕಾರತ್ವದ ಕುರಿತು ಪಾರದರ್ಶಕ ಒಳನೋಟಗಳನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ. ನಮ್ಮ ಪಾರದರ್ಶಕತೆ ವರದಿಗಳ ಮೂಲಕ, ಜಾಗತಿಕವಾಗಿ ಸುಳ್ಳುಮಾಹಿತಿಯ ವಿರುದ್ಧ ನಾವು ಜಾರಿ ಮಾಡಿದ ಕ್ರಮಗಳಿಗೆ ಸಂಬಂಧಿಸಿ ನಾವು ದೇಶದ-ಮಟ್ಟದ ಮಾಹಿತಿಯನ್ನು ಒದಗಿಸುತ್ತೇವೆ -- ಮತ್ತು ನಮ್ಮ ಭವಿಷ್ಯದ ವರದಿಗಳಲ್ಲಿ ಈ ಉಲ್ಲಂಘನೆಗಳ ಇನ್ನಷ್ಟು ವಿವರವಾದ ಮಾಹಿತಿ ಒದಗಿಸಲು ನಾವು ಯೋಜಿಸಿದ್ದೇವೆ.
ಹಾನಿಕಾರಕ ವಿಷಯ ಮತ್ತು ನಡವಳಿಕೆಯನ್ನು ಬಗೆಹರಿಸುವ ನಮ್ಮ ಸಾಮರ್ಥ್ಯವನ್ನು ಸುಧಾರಿಸಿಕೊಳ್ಳಲು ನಮ್ಮ ನೀತಿಗಳ ಕಾರ್ಯಾಚರಣೆಯನ್ನು ನಿರಂತರವಾಗಿ ಮಾಪನ ಮಾಡಲು ನಾವು ಬದ್ಧರಾಗಿದ್ದೇವೆ ಮತ್ತು ನಾವು ಈ ಗುರಿಗಳನ್ನು ಜವಾಬ್ದಾರಿಯುತವಾಗಿ ಮುಂದುವರಿಸುತ್ತಿದ್ದೇವೆ ಎಂದು ಖಚಿತಪಡಿಸಿಕೊಳ್ಳಲು ಸುರಕ್ಷತಾ ಸಮುದಾಯಗಳಾದ್ಯಂತ ವೈವಿಧ್ಯಮಯ ನಾಯಕರೊಂದಿಗೆ ಕೆಲಸ ಮಾಡಲು ನಾವು ಬದ್ಧರಾಗಿದ್ದೇವೆ. ನಮ್ಮ ಸುರಕ್ಷತಾ ಪ್ರಯತ್ನಗಳ ಕುರಿತು ಇನ್ನಷ್ಟು ಮಾಹಿತಿಗಾಗಿ, ದಯವಿಟ್ಟು ನಮ್ಮ ಗೌಪ್ಯತೆ ಮತ್ತು ಸುರಕ್ಷತೆ ಕೇಂದ್ರಕ್ಕೆ ಭೇಟಿ ನೀಡಿ.