ಕಿರುಕುಳ ಮತ್ತು ಬೆದರಿಸುವಿಕೆ
ಕಮ್ಯುನಿಟಿ ಮಾರ್ಗಸೂಚಿಗಳ ವಿವರಣೆಯ ಸರಣಿ
ನವೀಕರಿಸಲಾಗಿದೆ: ಜನವರಿ 2023
ಯಾವುದೇ ಬಗೆಯ ಬೆದರಿಸುವ ಅಥವಾ ಕಿರುಕುಳ ನೀಡುವ ಕೃತ್ಯವನ್ನು ನಾವು ನಿಷೇಧಿಸುತ್ತೇವೆ. ಈ ನಿಷೇಧವು ಲೈಂಗಿಕವಾಗಿ ಸುಸ್ಪಷ್ಟವಾದ ಅಥವಾ ನಗ್ನ ಚಿತ್ರಗಳನ್ನು ಇತರ ಬಳಕೆದಾರರಿಗೆ ಕಳುಹಿಸುವುದು ಸೇರಿದಂತೆ, ಎಲ್ಲ ಸ್ವರೂಪದ ಲೈಂಗಿಕ ಕಿರುಕುಳಗಳಿಗೆ ವಿಸ್ತರಿಸುತ್ತದೆ. ಒಂದು ವೇಳೆ ಯಾರಾದರೂ ನಿಮ್ಮನ್ನು ನಿರ್ಬಂಧಿಸಿದರೆ, ನೀವು ಅವರನ್ನು ಇನ್ನೊಂದು ಖಾತೆಯಿಂದ ಸಂಪರ್ಕಿಸುವಂತಿಲ್ಲ.
ಇನ್ನೊಬ್ಬ ವ್ಯಕ್ತಿಯ ಖಾಸಗಿ ಮಾಹಿತಿಯನ್ನು ಮತ್ತು ಸ್ನಾನದ ಕೋಣೆ, ಮಲಗುವ ಕೋಣೆ, ಲಾಕರ್ ಕೋಣೆ ಅಥವಾ ಆಸ್ಪತ್ರೆಯಂಥ — ಖಾಸಗಿ ಸ್ಥಳಗಳಲ್ಲಿ ಜನರ ಅರಿವಿಗೆ ಬಾರದಂತೆ ಮತ್ತು ಸಮ್ಮತಿಯಿಲ್ಲದೆ — ಅವರ Snap ಗಳನ್ನು ಹಂಚಿಕೊಳ್ಳುವುದಕ್ಕೆ ಅನುಮತಿಯಿಲ್ಲ.
ಒಂದು ವೇಳೆ ನಿಮ್ಮ Snap ನಲ್ಲಿ ಒಬ್ಬರು ಕಾಣಿಸಿಕೊಂಡಿದ್ದು ಅದನ್ನು ತೆಗೆದುಹಾಕುವಂತೆ ನಿಮ್ಮನ್ನು ಕೇಳಿದರೆ, ದಯವಿಟ್ಟು ಹಾಗೆ ಮಾಡಿ! ಇತರರ ಗೌಪ್ಯತೆ ಹಕ್ಕುಗಳನ್ನು ಗೌರವಿಸಿ.
Snapchat ನಲ್ಲಿ ಬೆದರಿಸುವಿಕೆ ಮತ್ತು ಕಿರುಕುಳಕ್ಕೆ ಜಾಗವಿಲ್ಲ. ಈ ಮಾದರಿಯ ಹಾನಿಗಳು ಹಲವು ರೂಪಗಳನ್ನು ಪಡೆಯಬಹುದು, ಆದ್ದರಿಂದ ಈ ಅಪಾಯಗಳನ್ನು ಕ್ರಿಯಾಶೀಲ ಮತ್ತು ಬಹುಮುಖಿ ರೀತಿಯಲ್ಲಿ ಬಗೆಹರಿಸಲು ನಾವು ನಮ್ಮ ನೀತಿಯ ವಿಧಾನವನ್ನು ಉತ್ಪನ್ನ ಸುರಕ್ಷತಾ ಕ್ರಮಗಳು ಮತ್ತು ಸಂಪನ್ಮೂಲಗಳನ್ನು ಬಳಕೆದಾರರೊಂದಿಗೆ ಸಂಯೋಜಿಸಿದ್ದೇವೆ.
ಮೂಲಾಧಾರವಾಗಿ, ನಮ್ಮ ನೀತಿಗಳು ನಮ್ಮ ಸಮುದಾಯದ ಎಲ್ಲ ಸದಸ್ಯರನ್ನು ಕೀಳಾಗಿ ಕಾಣುವ, ಅವಮಾನಿಸುವ ಮತ್ತು ತಾರತಮ್ಯದ ವಿಷಯ ಮತ್ತು ಪ್ರಚೋದನೆಗಳಿಂದ ರಕ್ಷಿಸುತ್ತವೆ. ಜನರ ಅರಿವಿಗೆ ಬಾರದಂತೆ ಅಥವಾ ಅವರ ಸಮ್ಮತಿಯಿಲ್ಲದೆ ಅವರ ಖಾಸಗಿ ಮಾಹಿತಿ ಅಥವಾ Snap ಗಳನ್ನು ಹಂಚಿಕೊಳ್ಳುವುದನ್ನು ಕೂಡ ನಿಷೇಧಿಸಲಾಗಿದೆ.
ಈ ನೀತಿಗಳನ್ನು ಸ್ಥಿರವಾಗಿ ಜಾರಿ ಮಾಡುವುದರ ಜೊತೆಗೆ, ಈ ನಿಯಮಗಳನ್ನು ಉಲ್ಲಂಘಿಸಬಹುದಾದ ಹಾನಿಕಾರಕ ನಡವಳಿಕೆಯನ್ನು ಮಿತಿಗೊಳಿಸಲು ಸಹಾಯ ಮಾಡುವುದಕ್ಕಾಗಿ ನಾವು ನಮ್ಮ ಉತ್ಪನ್ನ ವಿನ್ಯಾಸವನ್ನು ಬಳಸುತ್ತೇವೆ. ಇದು ಪರಸ್ಪರ ಸಂದೇಶ ಕಳುಹಿಸುವುದಕ್ಕೆ ಮುನ್ನ ಸ್ನೇಹಿತರಿಬ್ಬರೂ ಒಂದು ಸಂಪರ್ಕವನ್ನು ಸ್ವೀಕರಿಸುವುದನ್ನು ಅಗತ್ಯವಾಗಿಸುವ ಮತ್ತು ಖಾಸಗಿ Snap ಗಳು, ಸಂದೇಶಗಳು ಮತ್ತು ಪ್ರೊಫೈಲ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಂಡಾಗ ಬಳಕೆದಾರರಿಗೆ ಸೂಚನೆ ಒದಗಿಸುವ ಡಿಫಾಲ್ಟ್ ಸೆಟ್ಟಿಂಗ್‌ಗಳನ್ನು ಒಳಗೊಂಡಿದೆ.
ನಮ್ಮ Here for You ವೈಶಿಷ್ಟ್ಯಗಳ ಮೂಲಕ, ಬೆದರಿಸುವಿಕೆ ಮತ್ತು ಕಿರುಕುಳವನ್ನು ಗುರುತಿಸಲು ಮತ್ತು ಬಗೆಹರಿಸಲು ಸಹಾಯ ಮಾಡುವುದಕ್ಕಾಗಿ ಬಳಕೆದಾರರು ಆ್ಯಪ್‌ನಲ್ಲಿನ ಸಂಪನ್ಮೂಲಗಳಿಗೆ ಮತ್ತು ಮಾಹಿತಿಗೆ ಪ್ರವೇಶ ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ನಾವು ಸಹಾಯ ಮಾಡುತ್ತೇವೆ. Snapchat ನಲ್ಲಿ ಯಾವುದೇ ಉಲ್ಲಂಘನೆಯ ನಡವಳಿಕೆಯನ್ನು ಸುಲಭವಾಗಿ ವರದಿ ಮಾಡಬಹುದು ಎನ್ನುವುದನ್ನು ಖಚಿತಪಡಿಸಿಕೊಳ್ಳಲು ನಾವು ಟೂಲ್‌ಗಳನ್ನು ಸಹ ಒದಗಿಸುತ್ತೇವೆ.
ನಮ್ಮ ಕಿರುಕುಳ ಮತ್ತು ಬೆದರಿಸುವಿಕೆಯ ನೀತಿಗಳ ಉಲ್ಲಂಘನೆಗಳು ಒಬ್ಬ ಸಾಮಾನ್ಯ ವ್ಯಕ್ತಿ ಭಾವನಾತ್ಮಕ ಒತ್ತಡವನ್ನು ಅನುಭವಿಸುವ ಯಾವುದೇ ಅನಪೇಕ್ಷಿತ ನಡವಳಿಕೆಯನ್ನು ಒಳಗೊಂಡಿವೆ. ಇದು ಮೌಖಿಕ ನಿಂದನೆ, ಇತರ ಬಳಕೆದಾರರನ್ನು ಬೆದರಿಸುವುದು ಅಥವಾ ಅವಮಾನಿಸುವುದು ಹಾಗೂ ಎದುರಿನವರನ್ನು ಮುಜುಗರಕ್ಕೊಳಪಡಿಸುವ ಅಥವಾ ಗೌರವಕ್ಕೆ ಚ್ಯುತಿ ತರುವ ಉದ್ದೇಶದ ಯಾವುದೇ ನಡವಳಿಕೆಯನ್ನು ಒಳಗೊಳ್ಳುತ್ತದೆ.
ಈ ನಿಯಮಗಳು ಎಲ್ಲ ಸ್ವರೂಪದ ಲೈಂಗಿಕ ಕಿರುಕುಳವನ್ನು ಕೂಡ ನಿಷೇಧಿಸುತ್ತವೆ. ಇದು ಇತರ ಬಳಕೆದಾರರಿಗೆ ಅನಪೇಕ್ಷಿತ ಸನ್ನೆಗಳನ್ನು ಮಾಡುವುದು, ಸುಸ್ಪಷ್ಟ ಅಥವಾ ಅನಪೇಕ್ಷಿತ ವಿಷಯವನ್ನು ಹಂಚಿಕೊಳ್ಳುವುದು ಅಥವಾ ಅಶ್ಲೀಲ ವಿನಂತಿಗಳನ್ನು ಅಥವಾ ಆಹ್ವಾನಗಳನ್ನು ಕಳುಹಿಸುವುದನ್ನು ಒಳಗೊಳ್ಳಬಹುದು. ಸಮ್ಮತಿಯಿಲ್ಲದೆ ತೆಗೆದುಕೊಂಡ ಅಥವಾ ಹಂಚಿಕೊಂಡ ಲೈಂಗಿಕ ಫೋಟೋಗಳು ಅಥವಾ ವೀಡಿಯೊಗಳು ಹಾಗೂ "ಪ್ರತೀಕಾರದ ಕಾಮಕೇಳಿ" ಅಥವಾ ವ್ಯಕ್ತಿಗಳ ಸಮ್ಮತಿಯಿಲ್ಲದೆ ಅವರ ಖಾಸಗಿ ಕ್ಷಣಗಳ ಚಿತ್ರಗಳು ಅಥವಾ ವೀಡಿಯೊಗಳನ್ನು ಹಂಚಿಕೊಳ್ಳುವ, ದುರ್ಬಳಕೆ ಮಾಡುವ ಅಥವಾ ಬಹಿರಂಗಪಡಿಸುವ ಬೆದರಿಕೆ ಹಾಕುವ ನಡವಳಿಕೆಗಳು ಸೇರಿದಂತೆ--ಸಮ್ಮತಿಯಿಲ್ಲದೆ ಖಾಸಗಿ ಕ್ಷಣಗಳ ಚಿತ್ರಗಳನ್ನು (NCII) ಹಂಚಿಕೊಳ್ಳುವುದಕ್ಕೆ ನಾವು ಶೂನ್ಯ ಸಹಿಷ್ಣುತೆಯನ್ನು ಹೊಂದಿದ್ದೇವೆ.
ಬಳಕೆದಾರರು ಪರಸ್ಪರರ ವೈಯಕ್ತಿಕ ಗೌಪ್ಯತೆಯನ್ನು ಗೌರವಿಸುವುದನ್ನೂ ಈ ನಿಯಮಗಳು ಅಗತ್ಯವಾಗಿಸುತ್ತವೆ. ಈ ನೀತಿಗಳ ಉಲ್ಲಂಘನೆಗಳನ್ನು ತಡೆಯುವುದಕ್ಕೆ ನೆರವಾಗಲು, ಜನರ ಅನುಮತಿಯಿಲ್ಲದೆ ಬಳಕೆದಾರರು ಅವರ ಫೋಟೋಗಳು ಅಥವಾ ವೀಡಿಯೊ ತೆಗೆದುಕೊಳ್ಳಬಾರದು ಮತ್ತು ಮನೆ ವಿಳಾಸ, ಜನ್ಮದಿನಾಂಕ, ಫೋನ್ ಸಂಖ್ಯೆ ಮುಂತಾದ ಇತರ ಜನರ ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳಬಾರದು. ತಮ್ಮ ಕುರಿತ ಒಂದು ಚಿತ್ರ ಅಥವಾ ಮಾಹಿತಿಯನ್ನು ತೆಗೆದುಹಾಕುವಂತೆ ಯಾರಾದರೂ ವಿನಂತಿಸಿದರೆ, ದಯವಿಟ್ಟು ಹಾಗೆ ಮಾಡಿ!
ಈ ನಿಯಮಗಳ ಉಲ್ಲಂಘನೆಗಳನ್ನು ಬಳಕೆದಾರರು ಅನುಭವಿಸಿದಾಗ ಅಥವಾ ಗಮನಿಸಿದಾಗ ವರದಿ ಮಾಡುವಂತೆಯೂ ನಾವು ನಮ್ಮ ಬಳಕೆದಾರರನ್ನು ಪ್ರೋತ್ಸಾಹಿಸುತ್ತೇವೆ. Snapchat ಬಳಸಲು ಪ್ರತಿ ಬಳಕೆದಾರರು ಸುರಕ್ಷಿತ ಮತ್ತು ಆರಾಮದಾಯಕ ಭಾವನೆ ಹೊಂದಿದ್ದಾರೆ ಎಂದು ಖಚಿತಪಡಿಸುವ ಗುರಿಯನ್ನು ನಮ್ಮ ಮಿತಗೊಳಿಸುವಿಕೆ ತಂಡಗಳು ಹೊಂದಿವೆ ಮತ್ತು ಕೆಟ್ಟ ನಡವಳಿಕೆಯನ್ನು ವರದಿ ಮಾಡುವ ಮೂಲಕ, ಬಳಕೆದಾರರು ಆ ಗುರಿ ಸಾಧಿಸಲು ನಮಗೆ ನೆರವಾಗಬಹುದು.
Snapchatter ಗಳು ತಮ್ಮನ್ನು ಅಭಿವ್ಯಕ್ತಿಪಡಿಸಬಹುದಾದ ಸುರಕ್ಷಿತ ಸಮುದಾಯವನ್ನು ಬೆಳೆಸುವುದು ನಮ್ಮ ಗುರಿಯಾಗಿದೆ ಮತ್ತು ನಾವು ಯಾವುದೇ ಬಗೆಯ ಕಿರುಕುಳ ಮತ್ತು ಬೆದರಿಸುವಿಕೆಯನ್ನು ಸಹಿಸುವುದಿಲ್ಲ. ಬೆದರಿಸುವಿಕೆ ಮತ್ತು ಕಿರುಕುಳಗಳು ಅನೇಕ ಸ್ವರೂಪದಲ್ಲಿ ಇರುತ್ತವೆ ಮತ್ತು ನಮ್ಮ ವೇದಿಕೆಯನ್ನು ಬಳಸುವಾಗ ನಮ್ಮ ಬಳಕೆದಾರರು ಯಾವ ಭಾವನೆ ಹೊಂದಿರುತ್ತಾರೆ ಎನ್ನುವುದರ ಕುರಿತು ಆತ್ಮಸಾಕ್ಷಿಗನುಸಾರ ಇರುವುದು ನಮ್ಮ ವಿಧಾನವಾಗಿದೆ.
ದಯವಿಟ್ಟು ಜನರ ಘನತೆ ಮತ್ತು ಗೌಪ್ಯತೆಯ ಕುರಿತು ವಿವೇಚನೆಯಿಂದ ಇರಿ--ಒಂದು ವೇಳೆ ಅವರಿಗೆ ಅಹಿತಕರ ಅನಿಸಿದರೆ, ಅವರ ಗಡಿಗಳನ್ನು ಗೌರವಿಸಿ; ಅವರ ಕುರಿತ ವಿಷಯ ತೆಗೆದುಹಾಕುವಂತೆ ಅವರು ನಿಮ್ಮನ್ನು ಕೇಳಿಕೊಂಡರೆ, ದಯವಿಟ್ಟು ಹಾಗೆ ಮಾಡಿ; ಮತ್ತು ಅವರ ಅನುಮತಿಯಿಲ್ಲದೆ ಅವರ ಕುರಿತ ಚಿತ್ರಗಳು ಅಥವಾ ಮಾಹಿತಿಯನ್ನು ಹಂಚಿಕೊಳ್ಳಬೇಡಿ. ನಿಮಗೆ ಎಂದಾದರೂ ಅಹಿತಕರ ಅನ್ನಿಸಿದರೆ, ನಮಗೆ ವರದಿ ಕಳುಹಿಸಲು ಮತ್ತು ಆ ಬಳಕೆದಾರನನ್ನು ನಿರ್ಬಂಧಿಸಲು ಹಿಂಜರಿಯಬೇಡಿ--ಈ ವೈಶಿಷ್ಟ್ಯಗಳನ್ನು ನಿಮ್ಮ ಸುರಕ್ಷತೆಗಾಗಿ ಒದಗಿಸಲಾಗಿದೆ.
ಹಾನಿಕಾರಕ ವಿಷಯ ಅಥವಾ ನಡವಳಿಕೆಯನ್ನು ಪರಿಹರಿಸುವ ನಮ್ಮ ಸಾಮರ್ಥ್ಯವನ್ನು ಸುಧಾರಿಸಲು ನಮ್ಮ ನೀತಿಗಳ ಕಾರ್ಯಾಚರಣೆಗಳನ್ನು ನಿರಂತರವಾಗಿ ಮಾಪನ ಮಾಡಲು ನಾವು ಬದ್ಧರಾಗಿದ್ದೇವೆ. ಬಳಕೆದಾರ ವರದಿಗಳು ನಮ್ಮ ವಿಧಾನದ ಕುರಿತು ಮಾಹಿತಿ ನೀಡಲು ನಮಗೆ ಸಹಾಯ ಮಾಡುತ್ತವೆ, ಇದೇ ವೇಳೆ ಈ ಗುರಿಗಳನ್ನು ನಾವು ಜವಾಬ್ದಾರಿಯುತವಾಗಿ ಮುನ್ನಡೆಸುತ್ತಿದ್ದೇವೆ ಎಂದು ಖಚಿತಪಡಿಸಿಕೊಳ್ಲಲು ಸುರಕ್ಷತಾ ಸಮುದಾಯದಾದ್ಯಂತದ ವೈವಿಧ್ಯಮಯ ನಾಯಕರೊಂದಿಗೆ ಕೆಲಸ ಮಾಡಲು ನಾವು ಬದ್ಧರಾಗಿದ್ದೇವೆ. ನಮ್ಮ ಸುರಕ್ಷತಾ ಪ್ರಯತ್ನಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ values.snap.com/news.