ಹದಿಹರೆಯದವರು ಶಾಲೆಗೆ ಮರಳುತ್ತಿರುವ ಸಂದರ್ಭ ಶಿಕ್ಷಕರಿಗಾಗಿ Snapchat ಹೊಸ ಟೂಲ್‌ಗಳು ಮತ್ತು ಸಂಪನ್ಮೂಲಗಳನ್ನು ಬಿಡುಗಡೆ ಮಾಡುತ್ತಿದೆ
ಆಗಸ್ಟ್ 28, 2024
U.S. ನಲ್ಲಿ 20 ಮಿಲಿಯನ್‌ಗೂ ಅಧಿಕ ಹದಿಹರೆಯದವರು Snapchat ಅನ್ನು ಬಳಸುತ್ತಿದ್ದಾರೆ ಮತ್ತು ಪೋಷಕರು ಹಾಗೂ ಶಿಕ್ಷಕರು ಸೇರಿದಂತೆ, ಅವರ ವಯಸ್ಕ ಸಂಬಂಧಿಕರಿಗೆ ಮಕ್ಕಳ ಡಿಜಿಟಲ್ ಯೋಗಕ್ಷೇಮವು ಮುಖ್ಯ ಆದ್ಯತೆಯಾಗಿರುತ್ತದೆ ಎನ್ನುವುದು ನಮಗೆ ತಿಳಿದಿದೆ. ಹದಿಹರೆಯದವರು ಶಾಲೆಗೆ ಮರಳುತ್ತಿರುವ ಸಂದರ್ಭ, ನಾವು ನಿರ್ದಿಷ್ಟವಾಗಿ ಶಿಕ್ಷಕರಿಗಾಗಿ ರಚಿಸಲಾಗಿರುವ ಹೊಸ ಸುರಕ್ಷತಾ ಟೂಲ್‌ಗಳು ಮತ್ತು ಸಂಪನ್ಮೂಲಗಳನ್ನು ಬಿಡುಗಡೆ ಮಾಡುತ್ತಿದ್ದೇವೆ.
ತಮ್ಮ ವಿದ್ಯಾರ್ಥಿಗಳು Snapchat ಅನ್ನು ಹೇಗೆ ಬಳಸುತ್ತಾರೆ, ವಿದ್ಯಾರ್ಥಿಗಳು ಮತ್ತು ಶಾಲೆಗಳಿಗೆ ಲಭ್ಯವಿರುವ ಪ್ರಮುಖ ರಕ್ಷಣೆಗಳು ಹಾಗೂ ವಿದ್ಯಾರ್ಥಿಗಳಿಗಾಗಿ ಸುರಕ್ಷಿತ ಮತ್ತು ಬೆಂಬಲದ ವಾತಾವರಣವನ್ನು ನಿರ್ಮಿಸುವ ಪ್ರಯತ್ನದಲ್ಲಿ ಶಾಲೆಗಳಿಗೆ ನೆರವಾಗಲು ನಾವು ಒದಗಿಸುವ ಸಂಪನ್ಮೂಲಗಳನ್ನು ಅರ್ಥಮಾಡಿಕೊಳ್ಳಲು ಶಿಕ್ಷಕರು ಮತ್ತು ಶಾಲಾ ಆಡಳಿತ ಸಿಬ್ಬಂದಿಗೆ ನೆರವಾಗುವುದಕ್ಕಾಗಿ ಈ ಹೊಸ ಸಂಪನ್ಮೂಲಗಳನ್ನು ವಿನ್ಯಾಸಗೊಳಿಸಲಾಗಿದೆ.
ಸ್ನೇಹಿತರೊಂದಿಗೆ ಮೆಸೇಜಿಂಗ್‌ಗಾಗಿ ಬಳಸುವ Snapchat ನ ಮೂಲಭೂತ ಬಳಕೆಯು ಜನರಿಗೆ ಸಂತಸ ಉಂಟುಮಾಡುತ್ತದೆ ಮತ್ತು ಯುವಜನತೆಗೆ ಸ್ನೇಹಿತರು ಪ್ರಮುಖ ಬೆಂಬಲ ವ್ಯವಸ್ಥೆಯಾಗಿದ್ದಾರೆ ಎನ್ನುವುದು ನಮಗೆ ತಿಳಿದಿದೆ. ಈ ಅರ್ಥಪೂರ್ಣ ಸಂಬಂಧಗಳನ್ನು ಬೆಂಬಲಿಸುವ ಹಾಗೂ ಅವರ ವಯಸ್ಕ ಸಂಬಂಧಿಕರೂ ಹಾಗೆ ಮಾಡುವುದಕ್ಕೆ ಸೌಲಭ್ಯ ಕಲ್ಪಿಸುವ ಕುರಿತು ನಾವು ಗಮನ ಕೇಂದ್ರೀಕರಿಸಿದ್ದೇವೆ.
Snapchat ಗೆ ಶಿಕ್ಷಕರ ಮಾರ್ಗದರ್ಶಿ
ವಿದ್ಯಾರ್ಥಿಗಳೊಂದಿಗೆ ಸಂಪರ್ಕಿತರಾಗಿ ಉಳಿಯುವುದು ಎಂದರೆ ಜನಪ್ರಿಯ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ಸ್ ಬಗ್ಗೆ ನೀವು ತಿಳಿದುಕೊಳ್ಳುವುದಾಗಿದೆ ಎಂದು ನಾವು ನಂಬಿದ್ದೇವೆ ಹಾಗೂ ಶಿಕ್ಷಕರು ಅದನ್ನು ಮಾಡಲು ನಾವು ಒಂದು ಮೀಸಲಾದ ವೆಬ್‌ಸೈಟ್ ಅನ್ನು ಪರಿಚಯಿಸುತ್ತಿದ್ದೇವೆ.
ನಮ್ಮ Snapchat ಗೆ ಶಿಕ್ಷಕರ ಮಾರ್ಗದರ್ಶಿಯು ಪ್ಲ್ಯಾಟ್‌ಫಾರ್ಮ್ ಹೇಗೆ ಕೆಲಸ ಮಾಡುತ್ತದೆ, ಶಾಲಾ ಸಮುದಾಯಗಳ ಒಳಗೆ Snapchat ಅನ್ನು ಸಕಾರಾತ್ಮಕವಾಗಿ ಬಳಸಬಹುದಾದ ವಿಧಾನಗಳು ಮತ್ತು ನಮ್ಮ ಸುರಕ್ಷತಾ ಟೂಲ್‌ಗಳು ಹಾಗೂ ಸಮುದಾಯ ಮಾರ್ಗಸೂಚಿಗಳ ಕುರಿತ ಮಾಹಿತಿಯ ಅವಲೋಕನವನ್ನು ಒಳಗೊಂಡಿದೆ. ಇದು ಶಾಲೆಗಳಿಗಾಗಿ ಮತ್ತು ಹದಿಹರೆಯದವರ ಸುರಕ್ಷತೆಗಾಗಿ Snap ನ ವೈಶಿಷ್ಟ್ಯಗಳು ಹಾಗೂ ನಿಂದನೆ, ಮಾನಸಿಕ ಆರೋಗ್ಯ ಕಳವಳಗಳು ಮತ್ತು ಸೆಕ್ಸ್‌ಟಾರ್ಷನ್‌ನಂತಹ ಲೈಂಗಿಕ ಹಾನಿಗಳು ಸೇರಿದಂತೆ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಎದುರಿಸಬಹುದಾದ ಅಪಾಯಗಳನ್ನು ನಿರ್ವಹಿಸಲು ಅವರಿಗೆ ನೆರವಾಗುವುದಕ್ಕಾಗಿ ಪೋಷಕರು, ಸಮಾಲೋಚಕರು ಮತ್ತು ಇತರರೊಂದಿಗೆ ಶಿಕ್ಷಕರು ಹಂಚಿಕೊಳ್ಳಬಹುದಾದ ಡೌನ್‌ಲೋಡ್ ಮಾಡಬಹುದಾದ ಸಂಪನ್ಮೂಲಗಳನ್ನು ಒಳಗೊಂಡಿದೆ.
ತಜ್ಞ ಪಾಲುದಾರರೊಂದಿಗೆ ಅಭಿವೃದ್ಧಿಪಡಿಸಿದ ಶಿಕ್ಷಕರ ಸಂಪನ್ಮೂಲಗಳು
ಶಿಕ್ಷಕರಿಗಾಗಿ ಸಮಗ್ರ ಮತ್ತು ವ್ಯಾವಹಾರಿಕ ಟೂಲ್‌ಕಿಟ್ ಅಭಿವೃದ್ಧಿಪಡಿಸಲು ನಾವು ಸುರಕ್ಷಿತ ಮತ್ತು ಉತ್ತಮ ಶಾಲೆಗಳ ಜೊತೆಗೆ ಕೈಜೋಡಿಸಿದ್ದೇವೆ. ಶಾಲಾ ವಾತಾವರಣಗಳ ಮೇಲೆ ಡಿಜಿಟಲ್ ಪ್ಲ್ಯಾಟ್‌ಫಾರ್ಮ್‌ಗಳ ಪರಿಣಾಮದ ಕುರಿತು ಶಿಕ್ಷಕರು, ಮಾನಸಿಕ ಆರೋಗ್ಯ ವೃತ್ತಿಪರರು ಮತ್ತು ಶಾಲಾ ಸಂಪನ್ಮೂಲ ಅಧಿಕಾರಿಗಳಿಂದ ಪಡೆದ ಒಳನೋಟಗಳಿಂದ ರೂಪಿಸಲಾದ, ಈ ಟೂಲ್‌ಕಿಟ್ ಅನ್ನು Snapchat ಅನ್ನು ಅರ್ಥಮಾಡಿಕೊಳ್ಳುವುದಕ್ಕೆ ಸಂಬಂಧಿಸಿ ವಿಶೇಷ ಗಮನದೊಂದಿಗೆ ಆನ್‌ಲೈನ್‌ನಲ್ಲಿ ತಮ್ಮ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಬೆಂಬಲಿಸಲು ಶಿಕ್ಷಕರಿಗೆ ಅಗತ್ಯವಿರುವ ಜ್ಞಾನವನ್ನು ಅವರಿಗೆ ಒದಗಿಸಲು ಸಿದ್ಧಪಡಿಸಲಾಗಿದೆ.
ಶಿಕ್ಷಕರ ಪ್ರತಿಕ್ರಿಯೆ ನಮೂನೆ
ಒಂದು ಸುರಕ್ಷತಾ ಕಳವಳವನ್ನು ನೇರವಾಗಿ ನಮಗೆ ವರದಿ ಮಾಡಲು ಮತ್ತು ಅನಪೇಕ್ಷಿತ ಅಥವಾ ಅನುಚಿತ ಸಂಪರ್ಕದಲ್ಲಿ ತೊಡಗಿಕೊಳ್ಳುವ ಖಾತೆಗಳನ್ನು ನಿರ್ಬಂಧಿಸಲು ಸುಲಭವಾಗಿ ಬಳಸಬಹುದಾದ ಟೂಲ್‌ಗಳನ್ನು ಒದಗಿಸುವ ಮೂಲಕ ಬಹಳ ಹಿಂದೆಯೇ ನಾವು Snapchatter ಗಳನ್ನು ಸಬಲೀಕರಿಸಿದ್ದೇವೆ. Snapchat ಅಕೌಂಟ್ ಹೊಂದಿಲ್ಲದಿದ್ದರೆ
, ತಮ್ಮ ಅಥವಾ ಇತರರ ಪರವಾಗಿ ಒಂದು ಸಮಸ್ಯೆಯನ್ನು ವರದಿ ಮಾಡಲು ಬಯಸುವವರಿಗಾಗಿ ಕೂಡ ನಾವು ಆನ್‌ಲೈನ್ ವರದಿ ಮಾಡುವಿಕೆ ಟೂಲ್‌ಗಳನ್ನು ಒದಗಿಸುತ್ತೇವೆ. ಸೂಕ್ತ ಕ್ರಮ ತೆಗೆದುಕೊಳ್ಳುವುದಕ್ಕಾಗಿ 24/7 ಕೆಲಸ ಮಾಡುವ ನಮ್ಮ ಸುರಕ್ಷತಾ ತಂಡಗಳಿಗೆ ನೇರವಾಗಿ ವರದಿಗಳು ತಲುಪುತ್ತವೆ.
ಈಗ, ನಮಗೆ ನೇರವಾಗಿ ಪ್ರತಿಕ್ರಿಯೆ ಒದಗಿಸಲು ಶಿಕ್ಷಕರಿಗೆ ಒಂದು ವಿಧಾನವನ್ನು ನಾವು ಪರಿಚಯಿಸುತ್ತಿದ್ದೇವೆ. ನಮ್ಮ ಹೊಸ ಶಿಕ್ಷಕರ ಪ್ರತಿಕ್ರಿಯೆ ನಮೂನೆಯೊಂದಿಗೆ, ತಮ್ಮ ಶಾಲಾ ಸಮುದಾಯದಲ್ಲಿ Snapchat ಅನ್ನು ಹೇಗೆ ಬಳಸಲಾಗುತ್ತಿದೆ ಎನ್ನುವ ಕುರಿತು ತಮ್ಮ ದೃಷ್ಟಿಕೋನಗಳು ಮತ್ತು ಒಳನೋಟಗಳನ್ನು ಶಿಕ್ಷಕರು ಹಂಚಿಕೊಳ್ಳಬಹುದಾಗಿದೆ.

ಡಿಜಿಟಲ್ ಪರಿದೃಶ್ಯವನ್ನು ಹಾದುಹೋಗುವುದು ಸವಾಲಿನ ಕೆಲಸವಾಗಿರಬಹುದು ಎನ್ನುವುದನ್ನು ನಾವು ತಿಳಿದಿದ್ದೇವೆ ಮತ್ತು ತಮ್ಮ ವಿದ್ಯಾರ್ಥಿಗಳಿಗೆ ಸುರಕ್ಷಿತ ಮತ್ತು ಬೆಂಬಲದ ಡಿಜಿಟಲ್ ವಾತಾವರಣಗಳನ್ನು ಸೃಷ್ಟಿಸುವುದಕ್ಕಾಗಿ ಶಿಕ್ಷಕರಿಗೆ ಅಗತ್ಯವಿರುವ ಕೆಲವು ಟೂಲ್‌ಗಳನ್ನು ಈ ಸಂಪನ್ಮೂಲಗಳು ಒದಗಿಸಬಹುದು ಎಂದು ನಾವು ಆಶಿಸುತ್ತೇವೆ.