ನಮ್ಮ ಸಮುದಾಯವನ್ನು ಸಂರಕ್ಷಿಸುವುದಕ್ಕಾಗಿ ಹೊಸ ವೈಶಿಷ್ಟ್ಯಗಳು
25 ಜೂನ್ 2024
ನಮ್ಮ ಸಮುದಾಯವನ್ನು ಸಂರಕ್ಷಿಸುವುದಕ್ಕಾಗಿ ಹೊಸ ವೈಶಿಷ್ಟ್ಯಗಳು
25 ಜೂನ್ 2024
ನಮ್ಮ ಸಮುದಾಯವನ್ನು ಆನ್‌ಲೈನ್ ಹಾನಿಗಳಿಂದ ಇನ್ನೂ ಉತ್ತಮ ರೀತಿಗಳಲ್ಲಿರಕ್ಷಿಸುವುದಕ್ಕಾಗಿ ನಾವು ಇಂದು ಹೊಸ ವೈಶಿಷ್ಟ್ಯಗಳನ್ನು ಪ್ರಕಟಿಸುತ್ತಿದ್ದೇವೆ. Snapchat ಅನ್ನು ಅನನ್ಯವಾಗಿಸುವ ನಿಜವಾದ ಸ್ನೇಹಿತರ ಸಂಬಂಧಗಳನ್ನು ಬಲಪಡಿಸುವಂತೆ ವಿನ್ಯಾಸಗೊಳಿಸುವುದಕ್ಕಾಗಿ ನಮ್ಮ ಹೊಸ ಸಾಧನಗಳ ಶ್ರೇಣಿಯು ವಿಸ್ತರಿತ ಆ್ಯಪ್‌ನಲ್ಲಿನ ಎಚ್ಚರಿಕೆಗಳು, ಸ್ನೇಹಕ್ಕಾಗಿ ವಿನಂತಿಗಳಿಂದ ವರ್ಧಿತ ರಕ್ಷಣೆಗಳು, ಸರಳೀಕೃತ ಸ್ಥಳದ ವಿವರಣೆಗಳ ಹಂಚಿಕೆ, ಹಾಗೂ ನಿರ್ಬಂಧನಾ ಪ್ರಕ್ರಿಯೆಗಳಲ್ಲಿ ಸುಧಾರಣೆಗಳನ್ನು ಒಳಗೊಂಡಿದೆ.
ಈ ವಿಸ್ತೃತ ವೈಶಿಷ್ಟ್ಯಗಳು Snapchat ನಲ್ಲಿ ಜನರನ್ನು ಸಂಪರ್ಕಿಸುವುದಕ್ಕಾಗಿ ಅಪರಿಚಿತರಿಗೆ ಕಷ್ಟಕರಗೊಳಿಸುವುದಕ್ಕಾಗಿ ನಾವು ಕೈಗೊಳ್ಳುತ್ತಿರುವ ನಿರಂತರವಾದ ಕಾರ್ಯಗಳಿಗೆ ಬಲ ನೀಡುತ್ತವೆ. ಉದಾಹರಣೆಗಾಗಿ, ಯಾವುದೇ ಬಳಕೆದಾರರು ಅವರ ಸ್ನೇಹಿತರ ಪಟ್ಟಿಗೆ ಮೊದಲೇ ಸೇರಿಸಿಲ್ಲದಿರುವ ಅಥವಾ ತಮ್ಮ ಫೋನ್ ಸಂಪರ್ಕಗಳಲ್ಲಿ ಹೊಂದಿರದಿರುವ ಯಾವುದೇ ಇತರ ವ್ಯಕ್ತಿಯಿಂದ ಸಂದೇಶಗಳನ್ನು ಪಡೆಯಲು ನಾವು ಅನುಮತಿಸುವುದಿಲ್ಲ. ಬೇರೆ ಪದಗಳಲ್ಲಿ ಹೇಳಬೇಕೆಂದರೆ, Snapchatter ಗಳು ತಾವು ಸಂವಹನ ನಡೆಸಲು ಬಯಸುವ ವ್ಯಕ್ತಿಗಳನ್ನು ತಾವೇ ಸಕ್ರಿಯವಾಗಿ ಆಯ್ಕೆ ಮಾಡಬೇಕಾಗುತ್ತದೆ.
ನಮ್ಮ ಸಮುದಾಯವನ್ನು ಸುರಕ್ಷಿತವಾಗಿಡಲು ನೆರವಾಗುವುದಕ್ಕಾಗಿ ನಾವು ಇಂದು ಈ ಕೆಳಗಿನ ಟೂಲ್‌ಗಳನ್ನು ಪರಿಚಯಿಸುತ್ತಿದ್ದೇವೆ:
ಕಳೆದ ನವೆಂಬರ್‌ನಲ್ಲಿ, ನಾವು ಪರಿಚಯಿಸಿದ ಒಂದು ವೈಶಿಷ್ಟ್ಯದ ಮೂಲಕ , ಯಾವುದೇ ಹದಿಹರೆಯದ ವ್ಯಕ್ತಿಯು ತಮ್ಮೊಂದಿಗೆ ಈಗಾಗಲೇ ಪರಸ್ಪರ ಸ್ನೇಹಿತರಲ್ಲದ ಅಥವಾ ತಮ್ಮ ಸಂಪರ್ಕಗಳಲ್ಲಿ ಇಲ್ಲದ ಯಾವುದೇ ವ್ಯಕ್ತಿಯಿಂದ ಸಂದೇಶವನ್ನು ಪಡೆದರೆ ಒಂದು ಎಚ್ಚರಿಕೆಯು ಪಾಪ್-ಅಪ್ ಆಗುತ್ತದೆ. ಈ ಸಂದೇಶವು ಹದಿಹರೆಯದವರಿಗೆ ಸಂಭಾವ್ಯ ಅಪಾಯಗಳ ಕುರಿತು ಎಚ್ಚರಿಕೆ ನೀಡುತ್ತದೆ, ಹಾಗೂ ಆ ಮೂಲಕ ಅವರು ಆ ಅಪರಿಚಿತರೊಂದಿಗೆ ಸಂಪರ್ಕದಲ್ಲಿರಬೇಕೇ ಎಂದು ಜಾಗ್ರತೆಯಿಂದ ಪರಿಗಣಿಸಲು ಸಹಾಯ ಮಾಡುತ್ತದೆ ಹಾಗೂ ಅವರು ವಿಶ್ವಾಸಹೊಂದಿರುವ ಜನರೊಂದಿಗೆ ಮಾತ್ರ ಸಂಪರ್ಕ ಸಾಧಿಸುವಂತೆ ಅವರಿಗೆ ನೆನಪಿಸುತ್ತದೆ. ಬಿಡುಗಡೆಯಾದಾಗಿನಿಂದ, ಈ ವೈಶಿಷ್ಟ್ಯವು ಲಕ್ಷಾಂತರ Snapchatter ಗಳಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸಬಲಗೊಳಿಸಿದೆ, ಹಾಗೂ ಆ ಮೂಲಕ 12 ಮಿಲಿಯನ್‌ಗಿಂತಲೂ ಹೆಚ್ಚು ನಿರ್ಬಂಧಗಳಿಗೆ ಕಾರಣವಾಗಿದೆ.1
ಈಗ ನಾವು ಈ ಆ್ಯಪ್‌ನಲ್ಲಿನ ಎಚ್ಚರಿಕೆಗಳಲ್ಲಿ ಹೊಸ ಮತ್ತು ಸುಧಾರಿತ ಸಂಕೇತಗಳನ್ನು ಅಳವಡಿಸಲು ಅದರ ವೈಶಿಷ್ಟ್ಯಗಳನ್ನು ವಿಸ್ತರಿಸುತ್ತಿದ್ದೇವೆ. ಈಗ, ಯಾವುದೇ ಹದಿಹರೆಯದವರು, ಸ್ಕ್ಯಾಮರ್ ಇರಬಹುದೆಂದು ತೋರುವ ಚಿಹ್ನೆಗಳನ್ನು ಹೊತ್ತಿರುವಂತಹ, ಅಂದರೆ, ಇತರರಿಂದ ನಿರ್ಬಂಧಿಸಲ್ಪಟ್ಟಿರುವ ಅಥವಾ ವರದಿ ಮಾಡಲ್ಪಟ್ಟಿರುವ ಯಾವುದೇ ವ್ಯಕ್ತಿಯಿಂದ ಅಥವಾ ಆ ಹದಿಹರೆಯದವರ ನೆಟ್‌ವರ್ಕ್ ಸಾಮಾನ್ಯವಾಗಿ ಇರದಂತಹ ಪ್ರದೇಶದಿಂದ ಯಾವುದೇ ಚ್ಯಾಟ್ ಅನ್ನು ಪಡೆದರೆ, ಅವರಿಗೆ ಒಂದು ಎಚ್ಚರಿಕೆಯ ಸಂದೇಶವು ಗೋಚರಿಸುತ್ತದೆ.
ಹದಿಹರೆಯದವರು ಯಾವುದೇ ವ್ಯಕ್ತಿಯೊಂದಿಗೆ ಪರಸ್ಪರ ಸಂಪರ್ಕಗಳನ್ನು ಹೊಂದಿಲ್ಲದಿದ್ದಲ್ಲಿ, ಅವರನ್ನು ತ್ವರಿತ ಸೇರ್ಪಡೆ ಅಥವಾ ಹುಡುಕಾಟದಲ್ಲಿ ತೋರಿಸಲಾಗುವುದಿಲ್ಲ ಎಂದು ನಾವು ಈ ಹಿಂದೆ ವಿವರಿಸಿದ್ದೆವು. ಈಗ ನಾವು ಹೊಸ ಸಂರಕ್ಷಣೆಗಳನ್ನು ಸೇರಿಸುತ್ತಿದ್ದೇವೆ, ಹಾಗೂ ಇವುಗಳು ಆ್ಯಪ್‌ನಲ್ಲಿನ ಎಚ್ಚರಿಕೆಗಳೊಂದಿಗೆ ಸೇರಿ ಕಾರ್ಯನಿರ್ವಹಿಸುವ ಮೂಲಕ ಅಪರಿಚಿತರಿಗೆ ಹದಿಹರೆಯದವರನ್ನು ಕಂಡುಹಿಡಿಯಲು ಮತ್ತು ಅವರನ್ನು ಸೇರಿಸಿಕೊಳ್ಳಲು ಇನ್ನೂ ಹೆಚ್ಚು ಕಷ್ಟಕರವಾಗಿಸುತ್ತವೆ:
ಈಗ ಯಾವುದೇ ಹದಿಹರೆಯದವರು ಈಗಾಗಲೇ ಪರಸ್ಪರ ಸ್ನೇಹಿತರಾಗಿಲ್ಲದ ಯಾವುದೇ ಇತರ ವ್ಯಕ್ತಿಗೆ ಸ್ನೇಹದ ವಿನಂತಿಯನ್ನು ಕಳುಹಿಸಿದರೆ ಅಥವಾ ಅವರಿಂದ ಅಂತಹ ವಿನಂತಿಯನ್ನು ಪಡೆದರೆ, ಹಾಗೂ ಆ ಇತರ ವ್ಯಕ್ತಿಯು ಸ್ಕ್ಯಾಮಿಂಗ್ ಚಟುವಟಿಕೆಗಳಲ್ಲಿ ತೊಡಗುವಂತಹ ಸ್ಥಳಗಳಿಂದ Snapchat ಅನ್ನು ಬಳಸುವಂತಹ ಇತಿಹಾಸವನ್ನು ಹೊಂದಿದ್ದರೆ, ಕಳುಹಿಸಲ್ಪಟ್ಟಿರುವ ಸ್ನೇಹದ ವಿನಂತಿಯ ವಿತರಣೆಯನ್ನು ನಾವು ತಡೆಯುತ್ತೇವೆ. ಕಳುಹಿಸಲ್ಪಟ್ಟಿರುವ ಸ್ನೇಹದ ವಿನಂತಿಯನ್ನು ಹದಿಹರೆಯದವರು ಕಳುಹಿಸಿದ್ದೋ ಅಥವಾ ಅವರಿಗೆ ಸಂಭಾವ್ಯ ಕೆಟ್ಟ ವ್ಯಕ್ತಿಯು ಕಳುಹಿಸಿದ್ದೋ ಎನ್ನುವುದನ್ನು ಲೆಕ್ಕಿಸದೆಯೇ ಈ ಕ್ರಮವು ಅನ್ವಯವಾಗುತ್ತದೆ.
ಒಟ್ಟಾಗಿ ಪರಿಗಣಿಸಿದರೆ, ಆರ್ಥಿಕವಾಗಿ ಪ್ರೇರೇಪಿಸಲ್ಪಟ್ಟ, ಸಾಮಾನ್ಯವಾಗಿ ಅಮೇರಿಕದ ಹೊರಗೆ ನೆಲೆಗೊಂಡಿರುವ ಮತ್ತು ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳ ವಿವಿಧ ಸಂಯೋಜನೆಗಳಲ್ಲಿ ಸಂಭಾವ್ಯ ಬಲಿಪಶುಗಳೊಂದಿಗೆ ಸಂವಹನ ನಡೆಸುತ್ತಲಿರುವ ಕೆಟ್ಟ ವ್ಯಕ್ತಿಗಳಿಂದ ಕೈಗೊಳ್ಳಲಾಗುತ್ತಿರುವ ಅತ್ಯಾಧುನಿಕ ಲೈಂಗಿಕ ಸುಲಿಗೆ ಹಗರಣಗಳ ಬೆಳವಣಿಗೆಯ ಪ್ರವೃತ್ತಿಯನ್ನು ಪರಿಹರಿಸಲು ನಾವು ಕೈಗೊಳ್ಳುತ್ತಿರುವ ನಮ್ಮ ಕಾರ್ಯವನ್ನು ಈ ಎರಡು ನವೀಕರಣಗಳು ಮುಂದುವರಿಸುತ್ತವೆ.
ಈ ನವೀಕರಣಗಳು ಆನ್‌ಲೈನ್ ಲೈಂಗಿಕ ಸುಲಿಗೆ ಅನ್ನು ಸದೆಬಡಿಯಲು ನಾವು ನಡೆಸುತ್ತಿರುವ ಕ್ರಮಗಳನ್ನು ಮುಂದುವರಿಸುತ್ತವೆ: ನಾವು ಎಂದಿಗೂ (ಲೈಂಗಿಕ ಸುಲಿಗೆ ಯೋಜನೆಗಳನ್ನು ಸುಗಮಗೊಳಿಸಲು ಬಳಸಬಹುದಾದಂತಹ) ಸಾರ್ವಜನಿಕ ಸ್ನೇಹಿತರ ಪಟ್ಟಿಗಳನ್ನು ಒದಗಿಸಿಲ್ಲ, ಇತರರನ್ನು ಗುರಿಯಾಗಿಸುವ ಅವಕಾಶವನ್ನು ಹೊಂದುವ ಮೊದಲೇ ಕೆಟ್ಟ ವ್ಯಕ್ತಿಗಳನ್ನು ಗುರುತಿಸಲು ಮತ್ತು ತೆಗೆದುಹಾಕಲು ನಾವು ಸಂಕೇತಗಳಾಧಾರಿತ ಪತ್ತೆಹಚ್ಚುವಿಕೆಯನ್ನು ಬಳಸುತ್ತೇವೆ, ನಾವು ವಿವಿಧ ಪ್ಲ್ಯಾಟ್‌ಫಾರ್ಮ್‌ಗಳನ್ನು ಒಳಗೊಳ್ಳುವ ಸಂಶೋಧನೆಯಲ್ಲಿ ಹೂಡಿಕೆ ಮಾಡಿದ್ದೇವೆ ಹಾಗೂ ಈ ಅಪರಾಧ ಮತ್ತು ಇತರ ಸಂಭಾವ್ಯ ಹಾನಿಗಳನ್ನು ಎದುರಿಸಲು ನಾವು ಇತರ ಪ್ಲ್ಯಾಟ್‌ಫಾರ್ಮ್‌ಗಳೊಂದಿಗೆ ಸಹಕರಿಸುತ್ತೇವೆ. Snapchatter ಗಳು ನಮ್ಮ ಆ್ಯಪ್‌ನಲ್ಲಿನ ಹಣಕ್ಕಾಗಿ ಲೈಂಗಿಕ ಸುಲಿಗೆ ಕುರಿತಾದ ಸುರಕ್ಷತಾ ಸ್ನ್ಯಾಪ್‌ಶಾಟ್, ಹಾಗೂ ನಮ್ಮ ಗೌಪ್ಯತೆ ಮತ್ತು ಸುರಕ್ಷತಾ ಕೇಂದ್ರಗಳಂತಹ ನಮ್ಮ ಶೈಕ್ಷಣಿಕ ಸಂಪನ್ಮೂಲಗಳ ಮೂಲಕ ಇನ್ನೂ ಹೆಚ್ಚು ಕಲಿಯುವಂತೆ ನಾವು ಪ್ರೋತ್ಸಾಹಿಸುತ್ತೇವೆ.
ಹದಿಹರೆಯದವರೂ ಸೇರಿದಂತೆ, ಎಲ್ಲಾ Snapchatter ಗಳಿಗೆ ನಾವು ನಿಯಮಿತವಾಗಿ ತಮ್ಮ ಖಾತೆಗಳ ಭದ್ರತೆ ಮತ್ತು ಗೌಪ್ಯತಾ ಸೆಟ್ಟಿಂಗ್‌ಗಳನ್ನು ಪರಿಶೀಲಿಸುವಂತೆ, ಹಾಗೂ ಕೇವಲ ತಮ್ಮ ಸ್ನೇಹಿತರೊಂದಿಗೆ ಮಾತ್ರ ತಮ್ಮ ಸ್ಥಳಗಳ ಮಾಹಿತಿಯನ್ನು ಹಂಚಿಕೊಳ್ಳುವಂತೆ ಜ್ಞಾಪನೆಗಳನ್ನು ಕಳುಹಿಸುತ್ತೇವೆ. ಈಗ ನಾವು ಪರಿಚಯಿಸುತ್ತಿರುವ ಹೆಚ್ಚು ನಿಯಮಿತವಾಗಿ ರವಾನಿಸಲ್ಪಡುವ ಜ್ಞಾಪನೆಗಳ ಮೂಲಕ, Snapchatter ಗಳು Snap ಮ್ಯಾಪ್‌ನಲ್ಲಿ ತಮ್ಮ ಸ್ಥಳವನ್ನು ಯಾವ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಿರುವುದಾಗಿ ಯಾವಾಗಲೂ ಇತ್ತೀಚಿನ ಮಾಹಿತಿಯನ್ನು ಪಡೆಯುವಂತೆ ಖಚಿತಪಡಿಸುತ್ತದೆ. ನಾವು ಸರಳೀಕೃತ ಸ್ಥಳದ ವಿವರಗಳ-ಹಂಚಿಕೆಯನ್ನು ಸಹ ಪರಿಚಯಿಸುತ್ತಿದ್ದೇವೆ, ಹಾಗೂ ಆ ಮೂಲಕ Snapchatter ಗಳಿಗೆ ತಮ್ಮ ಸ್ಥಳವನ್ನು ಯಾವ ಸ್ನೇಹಿತರು ನೋಡಬಹುದು ಎಂಬುದನ್ನು ಕಸ್ಟಮೈಸ್ ಮಾಡಲು ಸುಲಭವಾಗಿಸುತ್ತದೆ. ಈ ನವೀಕರಣಗಳೊಂದಿಗೆ, Snapchatter ಗಳು ತಮ್ಮ ಸ್ಥಳವನ್ನು ಯಾವ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಿರುವುದಾಗಿ ನಿಖರವಾಗಿ ನೋಡಲು, ಅವರ ಸ್ಥಳದ ವಿವರಗಳ ಸೆಟ್ಟಿಂಗ್‌ಗಳನ್ನು ನವೀಕರಿಸಲು ಹಾಗೂ ಅವರ ಸ್ಥಳವನ್ನು ನಕ್ಷೆಯಿಂದ ತೆಗೆದುಹಾಕಲು ಒಂದೇ ಗಮ್ಯಸ್ಥಾನವನ್ನು ಹೊಂದಿರುತ್ತಾರೆ.
ಎಂದಿನಾಂತೆಯೇ, Snap ಮ್ಯಾಪ್‌ನಲ್ಲಿ ಸ್ಥಳದ ವಿವರಗಳ ಹಂಚಿಕೆಯು ಪೂರ್ವನಿಯೋಜಿತವಾಗಿ ಆಫ್ ಆಗಿರುತ್ತದೆ, ಅಂದರೆ Snapchatter ಗಳು ತಾವು ಇರುವ ಸ್ಥಳವನ್ನು ಹಂಚಿಕೊಳ್ಳಲು ಈ ವೈಶಿಷ್ಟ್ಯವನ್ನು ಪೂರ್ವಭಾವಿಯಾಗಿ ಆಯ್ಕೆ ಮಾಡಿಕೊಳ್ಳಬೇಕು. ಹಾಗೂ, Snapchatter ಗಳು ತಮ್ಮ ಅಸ್ತಿತ್ವದಲ್ಲಿರುವ Snapchat ಸ್ನೇಹಿತರೊಂದಿಗೆ ಮಾತ್ರ ತಮ್ಮ ಇರುವಿಕೆಯ ಮಾಹಿತಿಯನ್ನು ಹಂಚಿಕೊಳ್ಳಬಹುದು - ವಿಶಾಲವಾದ Snapchat ಸಮುದಾಯಕ್ಕೆ ಅವರ ಸ್ಥಳದ ವಿವರಗಳನ್ನು ಪ್ರಸಾರ ಮಾಡಲು ಯಾವುದೇ ಆಯ್ಕೆಗಳಿಲ್ಲ.
Snapchatter ಗಳು ಯಾರೊಂದಿಗಾದರೂ ಇನ್ನು ಮುಂದೆ ಸಂಪರ್ಕದಲ್ಲಿರಲು ಬಯಸದಿದ್ದರೆ, ಅವರನ್ನು ಸುಲಭವಾಗಿ ನಿರ್ಬಂಧಿಸಲು ನಾವು ಅವರಿಗಾಗಿ ದೀರ್ಘಕಾಲದಿಂದ ಸಾಧನಗಳನ್ನು ಒದಗಿಸಿದ್ದೇವೆ. ಕೆಲವೊಮ್ಮೆ, ಕೆಟ್ಟ ವ್ಯಕ್ತಿಗಳು ಹೊಸ ಖಾತೆಗಳನ್ನು ರಚಿಸುತ್ತಾರೆ ಹಾಗೂ ತಮ್ಮನ್ನು ನಿರ್ಬಂಧಿಸಿದ ಜನರನ್ನು ಸಂಪರ್ಕಿಸಲು ಪ್ರಯತ್ನಿಸುವುದನ್ನು ಮುಂದುವರಿಸುತ್ತಾರೆ. ಬೆದರಿಸುವಿಕೆ ಮತ್ತು ಸಂಭವನೀಯ ಪುನರಾವರ್ತಿತ ಕಿರುಕುಳವನ್ನು ತಡೆಗಟ್ಟುವ ಪ್ರಯತ್ನದಲ್ಲಿ, ನಾವು ನಮ್ಮ ನಿರ್ಬಂಧಿಸುವ ಸಾಧನಗಳಲ್ಲಿ ಸುಧಾರಣೆಗಳನ್ನು ಪರಿಚಯಿಸುತ್ತಿದ್ದೇವೆ: ಇನ್ನು ಮುಂದೆ ಯಾವುದೇ ಬಳಕೆದಾರರನ್ನು ನಿರ್ಬಂಧಿಸುವುದರಿಂದ ಅಂತಹ ಬಳಕೆದಾರರ ಅದೇ ಸಾಧನದಲ್ಲಿ ರಚಿಲ್ಪಡುವ ಇತರ ಖಾತೆಗಳಿಂದ ಕಳುಹಿಸಲ್ಪಡುವ ಹೊಸ ಸ್ನೇಹದ ವಿನಂತಿಗಳನ್ನು ಕೂಡ ನಿರ್ಬಂಧಿಸಲಾಗುತ್ತದೆ.
ನಮ್ಮ ಮುಂದುವರಿಯುತ್ತಿರುವ ಬದ್ಧತೆಯನ್ನು ಆಧರಿವಾಗಿರಿಸಿ, ಈ ಹೊಸ ಸಾಧನಗಳು Snapchatter ಗಳ ಸುರಕ್ಷತೆ, ಗೌಪ್ಯತೆ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡುವ ಪರಿಸರದಲ್ಲಿ ತಮ್ಮ ನಿಕಟ ಸ್ನೇಹಿತರೊಂದಿಗೆ ಸಂವಹನ ನಡೆಸಲು ಅವರಿಗೆ ಸಹಾಯ ಮಾಡುತ್ತವೆ. ನಮ್ಮ ಸಮುದಾಯವನ್ನು ರಕ್ಷಿಸಲು ಇನ್ನೂ ಹೆಚ್ಚು ಸಂರಕ್ಷಣೆಗಳು, ಸಾಧನಗಳು, ಮತ್ತು ಸಂಪನ್ಮೂಲಗಳನ್ನು ಸೃಷ್ಟಿಸುವುದನ್ನು ಮುಂದುವರಿಸಲು ನಾವು ಎದುರು ನೋಡುತ್ತಿದ್ದೇವೆ.