Snap Values

ಡಿಜಿಟಲ್ ಯೋಗಕ್ಷೇಮಕ್ಕಾಗಿ ಮೊದಲ ಪರಿಷತ್‌ಗೆ Snap 18 ಹದಿಹರೆಯದವರನ್ನು ಆಯ್ಕೆ ಮಾಡಿದೆ

ಮೇ 15, 2024

U.S. ನಲ್ಲಿನ ಯುವಜನರಿಗಾಗಿ ನಮ್ಮ 18-ತಿಂಗಳ ಪ್ರಾಯೋಗಿಕ ಕಾರ್ಯಕ್ರಮ, ಡಿಜಿಟಲ್ ಯೋಗಕ್ಷೇಮಕ್ಕಾಗಿ Snap ನ ಮೊತ್ತಮೊದಲ ಪರಿಷತ್‌ನ ಸದಸ್ಯರನ್ನು ಪ್ರಕಟಿಸಲು ನಾವು ಹರ್ಷಿತರಾಗಿದ್ದೇವೆ! ಹದಿಹರೆಯದವರ ಇಂದಿನ ಡಿಜಿಟಲ್ ಬದುಕಿನ ಸ್ಥಿತಿಗತಿ ಹಾಗೂ ಆನ್‌ಲೈನ್‌ನಲ್ಲಿ ಇನ್ನಷ್ಟು ಸಕಾರಾತ್ಮಕ ಮತ್ತು ಫಲಪ್ರದ ಅನುಭವಗಳಿಗಾಗಿ ಅವರ ನಿರೀಕ್ಷೆಗಳು ಮತ್ತು ಆದರ್ಶನಗಳ ಕುರಿತು ಅವರ ದೃಷ್ಟಿಕೋನಗಳನ್ನು ಆಲಿಸಲು ಈ ಹದಿಹರೆಯದವರ ಗುಂಪಿನೊಂದಿಗೆ ಕೆಲಸ ಮಾಡುವುದನ್ನು ನಾವು ಎದುರು ನೋಡುತ್ತೇವೆ. 

ಈ ವರ್ಷದ ಆರಂಭದಲ್ಲಿ ಮೊದಲು ಈ ಕಾರ್ಯಕ್ರಮವನ್ನು ಪ್ರಕಟಿಸಿದಾಗಿನಿಂದ, ನಾವು 150 ಕ್ಕೂ ಅಧಿಕ ಅರ್ಜಿಗಳನ್ನು ಸ್ವೀಕರಿಸಿದ್ದು, ಅದರಲ್ಲಿ ತಮ್ಮ ಫೋನ್‌ಗಳ ಜೊತೆ ಅರ್ಜಿದಾರರ ಜೊತೆಗಿನ ಸಂಬಂಧದ ಕುರಿತ ನಿವೇದನೆಗಳು, ಅವರು ಬಳಸುವ ವೇದಿಕೆಗಳಲ್ಲಿ ಅವರು ಕಾಣಬಯಸುವ ಬದಲಾವಣೆಗಳ ಉದಾಹರಣೆಗಳು ಮತ್ತು ಪರಿಷತ್‌ನಲ್ಲಿ ಭಾಗವಹಿಸುವುದಕ್ಕಾಗಿ ಅವರ ನಿರೀಕ್ಷೆಗಳು ಸೇರಿದ್ದವು. ಈ ಮೊದಲ ತಂಡವನ್ನು ಆಯ್ಕೆ ಮಾಡುವುದು ಸುಲಭದ ಕೆಲಸವಾಗಿರಲಿಲ್ಲ, ಏಕೆಂದರೆ ಸಾಕಷ್ಟು ಮಂದಿ ಪ್ರಭಾವಶಾಲಿ ಅಭ್ಯರ್ಥಿಗಳಿದ್ದರು. ಆಯ್ಕೆ ಪ್ರಕ್ರಿಯೆಯು ಅನುಭವಗಳು ಮತ್ತು ವಿಚಾರಗಳ ಶ್ರೇಣಿಯೊಂದಿಗೆ ವೈವಿಧ್ಯಮಯ ಗುಂಪಿನ ಆಯ್ಕೆಗೆ ದಾರಿಮಾಡಿಕೊಟ್ಟಿದೆ. 

ಈ ವರ್ಷ ಆಯ್ಕೆ ಆಗದಿರುವ ಅರ್ಜಿದಾರರಿಗೆ, ನಿಮ್ಮ ಅರ್ಜಿಗಾಗಿ ನೀವು ವ್ಯಯಿಸಿದ ಸಮಯ ಮತ್ತು ಪಟ್ಟ ಶ್ರಮಕ್ಕಾಗಿ ನಾವು ನಿಮ್ಮನ್ನು ಪ್ರಶಂಶಿಸುತ್ತೇವೆ. ಆನ್‌ಲೈನ್‌ನಲ್ಲಿ ಆರೋಗ್ಯಕರ ನಡವಳಿಕೆಯನ್ನು ಪ್ರಚಾರ ಮಾಡುವುದರಲ್ಲಿ ತೊಡಗಿಕೊಳ್ಳುವುದನ್ನು ನೀವು ಮುಂದುವರಿಸುತ್ತೀರಿ ಮತ್ತು ಭವಿಷ್ಯದಲ್ಲಿ ಅರ್ಜಿ ಸಲ್ಲಿಸುವುದನ್ನು ಅಥವಾ ಇದೇ ರೀತಿಯ ಇತರ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ನೀವು ಪರಿಗಣಿಸುತ್ತೀರಿ ಎಂದು ನಾವು ಆಶಿಸುತ್ತೇವೆ. 

ಆರಂಭಿಕ ಪರಿಷತ್‌ನಲ್ಲಿ 11 U.S. ರಾಜ್ಯಗಳಿಂದ 13 ರಿಂದ 16 ವರ್ಷದೊಳಗಿನ 18 ಮಂದಿ ಇದ್ದಾರೆ. ಆಯ್ಕೆಯಾದ ಕೆಲವು ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಏನನ್ನು ಪಡೆಯುವ ನಿರೀಕ್ಷೆಯಲ್ಲಿದ್ದಾರೆ ಎನ್ನುವುದನ್ನು ಬಿಂಬಿಸುವ ಅವರ ಅರ್ಜಿಯಲ್ಲಿನ ಕೆಲವು ಅಂಶಗಳು ಈ ಕೆಳಗಿವೆ. 

“ದೀರ್ಘಾವಧಿಯಲ್ಲಿ ನಾನು ಉತ್ತಮ ಪ್ರತಿಪಾದಕನಾಗಲು ನನ್ನನ್ನು ಪರಿವರ್ತಿಸಬಲ್ಲ ಮೌಲ್ಯಯುತ ಒಳನೋಟಗಳು, ಕೌಶಲ್ಯಗಳು ಮತ್ತು ಜ್ಞಾನವನ್ನು ಪಡೆಯಲು ನಾನು ಎದುರು ನೋಡುತ್ತೇನೆ. ಇದರರ್ಥ ನನ್ನ ಸ್ನೇಹಿತರ ದೃಷ್ಟಿಕೋನಗಳು ಮತ್ತು ಅಗತ್ಯಗಳಿಗಾಗಿ ಪ್ರತಿಪಾದಿಸುವುದು, ಅವರ ಅಭಿಪ್ರಾಯಗಳನ್ನು ಒತ್ತಿ ಹೇಳುವುದು ಮತ್ತು ಆನ್‌ಲೈನ್ ಸ್ಥಳದಲ್ಲಿ ಅವರ ಸುರಕ್ಷತೆ, ಗೌಪ್ಯತೆ ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಆದ್ಯತೆಗೊಳಿಸುವ ಉಪಕ್ರಮಗಳಿಗಾಗಿ ಹೋರಾಡುವುದಾಗಿದೆ.” - ಕ್ಯಾಲಿಫೋರ್ನಿಯಾದಿಂದ 15-ವರ್ಷದವರು

“ನನ್ನ ಶಾಲೆ ಮತ್ತು ಸಮುದಾಯದಲ್ಲಿ ಡಿಜಿಟಲ್ ಯೋಗಕ್ಷೇಮಕ್ಕಾಗಿ ರಾಯಭಾರಿಯಾಗಿ ಕೆಲಸ ಮಾಡುವ ಅವಕಾಶಕ್ಕಾಗಿ ನಾನು ಉತ್ಸಾಹಿತನಾಗಿದ್ದೇನೆ… ಈ ಪರಿಷತ್‌ನಿಂದ ಪಡೆದುಕೊಂಡ ಜ್ಞಾನ ಮತ್ತು ಅನುಭವಗಳನ್ನು ಹಂಚಿಕೊಳ್ಳುವುದರಿಂದ ಆನ್‌ಲೈನ್‌ ಜಗತ್ತಿನಲ್ಲಿ ಸುರಕ್ಷಿತವಾಗಿ ಮತ್ತು ಜವಾಬ್ದಾರಿಯುತವಾಗಿ ಹಾದುಹೋಗಲು ಇತರರನ್ನು ಸಬಲೀಕರಿಸುತ್ತದೆ ಎಂದು ನಾನು ನಂಬಿದ್ದೇನೆ ಏಕೆಂದರೆ ಕೆಲವೊಮ್ಮೆ ನಿಜಕ್ಕೂ ಅರ್ಥಮಾಡಿಕೊಳ್ಳಲು ಸ್ನೇಹಿತರಿಂದ ಆಲಿಸಬೇಕಾಗುತ್ತದೆ.” - ಫ್ಲೋರಿಡಾದಿಂದ 15-ವರ್ಷದವರು 

“ಸಮುದಾಯ ಯೋಜನೆಗಳು, ನೀತಿ ಶಿಫಾರಸುಗಳು ಅಥವಾ ಜಾಗೃತಿ ಅಭಿಯಾನಗಳ ಮೂಲಕ ಸ್ಪಷ್ಟವಾದ ಪ್ರಭಾವವನ್ನು ಮಾಡುವ ಸಾಧ್ಯತೆಯ ಕುರಿತು ಮತ್ತು ಪರಿಷತ್‌ನ ಒಗ್ಗಟ್ಟಿನ ಪ್ರಯತ್ನವನ್ನು ಬಿಂಬಿಸುವ ಸಕಾರಾತ್ಮಕ ಗುರುತನ್ನು ಉಳಿಸುವ ಕುರಿತು ನಾನು ರೋಮಾಂಚಿತನಾಗಿದ್ದೇನೆ. ಅಂತಿಮವಾಗಿ, ಕೇವಲ ಹೆಚ್ಚು ಮಾಹಿತಿಯುಕ್ತ ಮತ್ತು ಸಹಾನುಭೂತಿಯ ವ್ಯಕ್ತಿಯಾಗಿ ಅಷ್ಟೇ ಅಲ್ಲ ಅದರ ಜೊತೆಗೆ ಭವಿಷ್ಯದ ಸವಾಲುಗಳನ್ನು ಎದುರಿಸಲು ಸಿದ್ಧವಾಗಿರುವ ಸಬಲೀಕರಣಗೊಂಡ ಪರಿವರ್ತಕನಾಗಿ ಹೊರಹೊಮ್ಮುವುದು ನನ್ನ ನಿರೀಕ್ಷೆಯಾಗಿದೆ." - ವೆರ್ಮಾಂಟ್‌ನಿಂದ 16-ವರ್ಷದವರು 

ಈ ಬೇಸಿಗೆಯ ನಂತರದ ದಿನಗಳಲ್ಲಿ ಸಂತಾ ಮೋನಿಕಾದಲ್ಲಿನ Snap HQ ನಲ್ಲಿ ಮುಖತಃ ಶೃಂಗಸಭೆಗೆ ಜೊತೆಗೂಡುವುದಕ್ಕೆ ಮುನ್ನ ಶೀಘ್ರದಲ್ಲಿ ನಾವು ಒಂದು ವಾಸ್ತವ ಆರಂಭ ಕಾರ್ಯಕ್ರಮವನ್ನು ಆಯೋಜಿಸಲಿದ್ದೇವೆ. ಶೃಂಗಸಭೆಯಲ್ಲಿ, ವಿವಿಧ ಸುರಕ್ಷತೆ ಮತ್ತು ಯೋಗಕ್ಷೇಮ ವಿಷಯಗಳ ಕುರಿತು ನಾವು ಸಣ್ಣ-ಗುಂಪು ಮತ್ತು ಪೂರ್ಣ-ಪರಿಷತ್ ಚರ್ಚೆಗಳನ್ನು, ಪಾಲಕರು ಮತ್ತು ರಕ್ಷಕರಿಗಾಗಿ ಪ್ರತ್ಯೇಕ "ಪೇರೆಂಟ್ ಟ್ರ್ಯಾಕ್", ಅತಿಥಿ ಭಾಷಣಕಾರರೊಂದಿಗೆ ಸಂವಾದದ ಅಧಿವೇಶನಗಳು ಹಾಗೂ ಒಂದಿಷ್ಟು ವಿನೋದದ ಚಟುವಟಿಕೆಗಳನ್ನು ನಡೆಸಲಿದ್ದೇವೆ. ಆನ್‌ಲೈನ್ ಸುರಕ್ಷತೆ ಮತ್ತು ಡಿಜಿಟಲ್ ನಾಗರಿಕತ್ವ ವಿಷಯಗಳ ಕುರಿತ ಅವರ ಜ್ಞಾನವನ್ನು ಹೆಚ್ಚಿಸಿಕೊಳ್ಳಲು, ತಮ್ಮ ನಾಯಕತ್ವ ಮತ್ತು ಪ್ರತಿಪಾದನೆ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು, ತಂಡದ ಆಟಗಾರನಾಗಿ ಮತ್ತು ಸಹವರ್ತಿಗಳ ಮಾರ್ಗದರ್ಶಕರಾಗಿ ಬೆಳೆಯಲು ಮತ್ತು ಜಾಗತಿಕ ತಂತ್ರಜ್ಞಾನ ಕಂಪನಿಯಲ್ಲಿ ಸಂಭಾವ್ಯ ವೃತ್ತಿ ಮಾರ್ಗಗಳಿಗೆ ಒಳನೋಟಗಳನ್ನು ಪಡೆಯಲು ಹದಿಹರೆಯದವರಿಗೆ ಅವಕಾಶ ಕಲ್ಪಿಸುವ ಆಶಯವನ್ನು ನಾವು ಹೊಂದಿದ್ದೇವೆ.   

ಪರಿಷತ್ ಸದಸ್ಯರು ಹೇಳುವಂತೆ, ಅಂತರ್ಜಾಲ ಎನ್ನುವುದು "ಅನ್ವೇಷಕರಿಗಾಗಿ ಕಾಯುತ್ತಿರುವ ಬೃಹತ್ ಗ್ರಂಥಾಲಯದ ಆರ್ಕೈವ್ ಆಗಿದೆ" ಮತ್ತು ನೀವು ಆನ್‌ಲೈನ್‌ನಲ್ಲಿ ಇರುವಾಗ "ಅಲ್ಲಿ ಎಂದಿಗೂ ಬೇಸರದ ಕ್ಷಣವಿಲ್ಲ" ಏಕೆಂದರೆ ಅಲ್ಲಿ "ಸಂವಹನ, ಸೃಜನಶೀಲತೆ ಮತ್ತು ಕಲಿಕೆಗಾಗಿ ಮಿತಿರಹಿತ ಅವಕಾಶಗಳಿವೆ." ಇಂದು ಆನ್‌ಲೈನ್‌ನಲ್ಲಿ ಹದಿಹರೆಯದವರಿಗೆ ನೈಜ ಅಪಾಯಗಳು ಇವೆ ಎನ್ನುವುದು ಕೂಡ ನಮಗೆ ತಿಳಿದಿದೆ. ಸುರಕ್ಷತೆ ಮತ್ತು ಬಲಿಷ್ಠ ಡಿಜಿಟಲ್ ಯೋಗಕ್ಷೇಮ ಕಾರ್ಯತಂತ್ರಗಳನ್ನು ಬಳಸಿಕೊಂಡು, ಆನ್‌ಲೈನ್ ಸ್ಪೇಸ್‌ಗಳನ್ನು ಯುವಜನರು ಹೇಗೆ ಸಂಪರ್ಕಿಸಬಹುದು ಎನ್ನುವುದರ ಕುರಿತು ಪರಿಷತ್‌ನ ಜ್ಞಾನ ಮತ್ತು ಒಳನೋಟಗಳನ್ನು ನಾವು ನಿಯಮಿತವಾಗಿ ಹಂಚಿಕೊಳ್ಳುತ್ತೇವೆ. ಇನ್ನೊಬ್ಬ ಸದಸ್ಯರು ಹೇಳಿರುವಂತೆ, "ಆನ್‌ಲೈನ್‌ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಬಹಳಷ್ಟು ಸೌಂದರ್ಯವಿದೆ ಎಂಬುದನ್ನು ನಾನು ದೃಢವಾಗಿ ನಂಬಿದ್ದೇನೆ"... "ಅದನ್ನು ನಾವು ನಿರ್ವಹಿಸಲು ಕಲಿಯಬೇಕಾಗಿದೆ ಅಷ್ಟೇ."

ನಮ್ಮ ಆಯ್ಕೆಯಾದ ಸದಸ್ಯರಿಗೆ ಅಭಿನಂದನೆಗಳು ಮತ್ತು ಅರ್ಜಿ ಸಲ್ಲಿಸಿದ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು. ಯಶಸ್ವಿ ಮತ್ತು ಉತ್ಪಾದಕ ಕಾರ್ಯಕ್ರಮ ಇಲ್ಲಿದೆ! 

ಆನ್‌ಲೈನ್ ಸುರಕ್ಷತೆ ಕುರಿತು Snap ನ ಬದ್ಧತೆ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಮತ್ತು ಸಾಮಾನ್ಯವಾಗಿ, ಅದರಲ್ಲಿ ಕೆಲಸ ಮಾಡಲು, ನಮ್ಮ ಗೌಪ್ಯತೆ ಮತ್ತು ಸುರಕ್ಷತೆ ಹಬ್‌ಗೆ ಭೇಟಿ ನೀಡಿ ಇಲ್ಲಿ ನಾವು U.S. ಮತ್ತು ಇತರ ದೇಶಗಳಲ್ಲಿ ಡಿಜಿಟಲ್ ಯೋಗಕ್ಷೇಮದ ಕುರಿತು ನಮ್ಮ ಇತ್ತೀಚಿನ ಸಂಶೋಧನೆಯನ್ನು ಬಿಡುಗಡೆ ಮಾಡಿದ್ದೇವೆ.

ಸುದ್ದಿಗಳಿಗೆ ಹಿಂತಿರುಗಿ