ಡಿಜಿಟಲ್ ಯೋಗಕ್ಷೇಮಕ್ಕಾಗಿ Snap ನ ಮೊದಲ ಕೌನ್ಸಿಲ್‌ಗಾಗಿ ಅಪ್ಲಿಕೇಶನ್‌ಗಳು ಈಗ ಲಭ್ಯವಿದೆ!

ಜನವರಿ 9, 2024

ಅಮೇರಿಕಾದಲ್ಲಿರುವ ಹದಿಹರೆಯದವರಿಗಾಗಿ ಒಂದು ಪ್ರಕಟಣೆ ! ಆನ್ಲೈನ್ ಸುರಕ್ಷತಾ ಸಮಸ್ಯೆಗಳು ಮತ್ತು ಆನ್ಲೈನ್ ಜೀವನದಲ್ಲಿಯ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ನಿಮಗೆ ಇದೊಂದು ಅನನ್ಯ ಅವಕಾಶ. ಇಂದಿನಿಂದ ಪ್ರಾರಂಭವಾಗುತ್ತಿದೆ, snap ಡಿಜಿಟಲ್ ಯೋಗಕ್ಷೇಮಕ್ಕಾಗಿ ಮೊದಲ ಕೌನ್ಸಿಲ್ ಗಾಗಿ ಅರ್ಜಿಗಳನ್ನು ಸ್ವೀಕರಿಸುತ್ತಿದೆ. ಅಮೇರಿಕಾದಲ್ಲಿಯ 13 ರಿಂದ 16 ರವರೆಗಿನ ಯುವಜನರಿಗಾಗಿ 18 ತಿಂಗಳ ಪ್ರಾಯೋಗಿಕ ಕಾರ್ಯಕ್ರಮ ಇದಾಗಿದೆ.

ಜೆನ್ Z ಡಿಜಿಟಲ್ ಇದು ಯೋಗ್ಯವಾಗಿ ಮತ್ತು ಸಂಪನ್ಮೂಲ ಭರಿತವಾಗಿ ತೊಡಗಿಸಿಕೊಂಡಿದೆ. Snap ನಲ್ಲಿ ನಾವು ಆನ್ಲೈನ್ ನಲ್ಲಿ ಅವರ ಕಾರ್ಯತಂತ್ರವನ್ನು ಆನ್ಲೈನ್ ಅಭಿವೃದ್ದಿಗಾಗಿ ಮತ್ತು ಉತ್ತಮವಾದ ಡಿಜಿಟಲ್ ಯೋಗಕ್ಷೇಮವನ್ನು ಉತ್ತೇಜಿಸಲು ಬಳಸಿಕೊಳ್ಳಲು ಆಸಕ್ತಿ ಹೊಂದಿದ್ದೇವೆ. Snapchat ಅನ್ನು ಇನ್ನೂ ಹೆಚ್ಚಿನ ಸುರಕ್ಷಿತ, ಆರೋಗ್ಯಕರ ಮತ್ತು ಸೃಜನಶೀಲತೆಗೆ ಹಾಗೂ ಸ್ನೇಹಿತರೊಂದಿಗೆ ಸಂಪರ್ಕಹೊಂದಲು ಇನ್ನೂ ಹೆಚ್ಚು ಆನಂದದಾಯಕ ಸ್ಥಳವನ್ನಾಗಿ ಮಾಡಲು ಅವರ ಪರಿಕಲ್ಪನೆಗಳನ್ನು ಕೇಳಿಸಿಕೊಳ್ಳಲು ಉತ್ಸುಕರಾಗಿದ್ದೇವೆ. ಆನ್ಲೈನ್ ನಲ್ಲಿ ನಾವು ಕಾಣಿಸಿಕೊಳ್ಳುವುದು ನಿಜವಾದ ಅಪಾಯಗಳನ್ನು ಹೊಂದಿದೆ ಎಂಬುದು ತಿಳಿದಿರುವ ವಿಷಯ. ಆದ್ದರಿಂದ ಯುವ ಜನರು ಅದನ್ನು ಗುರುತಿಸುವಂತೆ, ಅರ್ಥೈಸಿಕೊಳ್ಳುವಂತೆ, ಮತ್ತು ಆ ರೀತಿಯ ಅಪಾಯಗಳನ್ನು ಎದುರಿಸಲು ಅಗತ್ಯವಾದ ಕೌಶಲ್ಯಗಳನ್ನು ಹೊಂದಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಬಯಸುತ್ತೇವೆ. ಅದಕ್ಕಾಗಿಯೇ ನಾವು ಈ ಕೌನ್ಸಿಲ್ ಅನ್ನು ಪ್ರಯೋಗಿಕವಾಗಿ ನಡೆಸುತ್ತಿದ್ದೇವೆ: ಇಂದು ಆನ್ಲೈನ್ ಜೀವನದ ಸ್ಥಿತಿಯ ಕುರಿತು ದೇಶದಾದ್ಯಂತ ಹದಿಹರೆಯದವರಿಂದ ವೈವಿದ್ಯಮಯ ದೃಷ್ಟಿಕೋನಗಳನ್ನು ಪಡೆಯಲು, ಹಾಗೂ ಇನ್ನೂ ಹೆಚ್ಚಿನ ಸಕಾರಾತ್ಮಕ ಅನುಭವವನ್ನು ಪಡೆದುಕೊಳ್ಳಲು ಅವರ ಆಶಯ ಮತ್ತು ದೃಷ್ಟಿಕೋನವನ್ನು ತಿಳಿದುಕೊಳ್ಳಲು ಇದರಿಂದ ಪ್ರಯತ್ನಿಸುತ್ತಿದ್ದೇವೆ.

ಈ ಕಾರ್ಯಕ್ರಮವು ನಮ್ಮ ಜಾಗತಿಕ ಸುರಕ್ಷತಾ ಸಲಹಾ ಮಂಡಳಿಯೊಂದಿಗೆ ಮಾಸಿಕ ಕರೆಗಳು, ಪ್ರಾಜೆಕ್ಟ್ ಕೆಲಸ ಮತ್ತು ಅವರೊಂದಿಗೆ ಕಾರ್ಯನಿರ್ವಹಿಸುವುದನ್ನು ಒಳಗೊಂಡಿದೆ. ಮೊದಲ ವರ್ಷ, ಆಯ್ಕೆಯಾದ ಕೌನ್ಸಿಲ್ ಸದಸ್ಯರನ್ನು ಎರಡು ದಿನಗಳ ಶೃಂಗಸಭೆಗಾಗಿ ಕ್ಯಾಲಿಫೋರ್ನಿಯಾದ ಸಾಂಟಾ ಮೋನಿಕಾದಲ್ಲಿರುವ Snap ನ ಪ್ರಧಾನ ಕಛೇರಿಗೆ ಆಹ್ವಾನಿಸಲಾಗುತ್ತದೆ. ಎರಡನೇ ವರ್ಷದಲ್ಲಿ ನಾವು ಕೌನ್ಸಿಲ್ ಸದಸ್ಯರನ್ನು ಒಳಗೊಂಡಂತೆ ಅವರ ಜ್ಞಾನ ಮತ್ತು ಕಲಿಕೆಯನ್ನು ಪ್ರದರ್ಶಿಸುವ ಸಾರ್ವಜನಿಕ ಕಾರ್ಯಕ್ರಮಕ್ಕೆ ಆಹ್ವಾನಿಸುವ ಯೋಜನೆಗಳನ್ನು ಹೊಂದಿದ್ದೇವೆ.

ನಮ್ಮ ಕೌನ್ಸಿಲ್ ಫಾರ್ ಡಿಜಿಟಲ್ ವೆಲ್ಬಿಯಿಂಗ್ ಸೇರಲು ಅರ್ಜಿ ಸಲ್ಲಿಸಿ

ಯುನೈಟೆಡ್ ಸ್ಟೇಟ್ಸ್ ನಲ್ಲಿ ವಾಸಿಸುವ 13 ಮತ್ತು 16 ವರ್ಷದೊಳಗಿನ ಆಸಕ್ತ ಹದಿಹರೆಯದವರು ಆನ್ಲೈನ್ ಅರ್ಜಿಯನ್ನುಮಾರ್ಚ್ 22, ಶುಕ್ರವಾರದೊಳಗೆ (ಸಂಜೆ 5.00 ಪೆಸಿಫಿಕ್ ಸಮಯ) ಪೂರ್ಣಗೊಳಿಸಿ ಸಲ್ಲಿಸಬೇಕು.

ಕೆಲವು ಪ್ರಾಥಮಿಕ ಮಾಹಿತಿಯ ಜೊತೆಗೆ, ಸಾಮಾಜಿಕ ಮಾಧ್ಯಮ ಬಳಕೆ ಮತ್ತು ಸಾಮಾನ್ಯವಾಗಿ ಆನ್ಲೈನ್ ಜೀವನದ ಕೆಲವು ಪ್ರಶ್ನೆಗಳಿಗೆ ಪ್ರಬಂಧ ಅಥವಾ ಕಿರು ವಿಡಿಯೋ ಪ್ರತಿಕ್ರಿಯೆಗಳನ್ನು ಇದು ಬಯಸುತ್ತದೆ. ಹಾಗೆಯೇ ಕೌನ್ಸಿಲ್ ನಿಂದ ನಿಮ್ಮ ನಿರೀಕ್ಷೆಗಳು Snapchat ಆ್ಯಪ್ ನ ಕುರಿತು ನಿಮ್ಮ ತಿಳುವಳಿಕೆ ಮತ್ತು ಒಂದು ಕಂಪೆನಿಯಾಗಿ Snap ಕುರಿತು ನಿಮ್ಮ ಅಭಿಪ್ರಾಯಗಳನ್ನು ಸಂಗ್ರಹಿಸುತ್ತದೆ.

ಮೊದಲ ವರ್ಷ ಎರಡು ದಿನದ ಶೃಂಗಸಭೆ

ನಮ್ಮ ಆಂತರಿಕ ಸಮಿತಿಯಿಂದ ಅರ್ಜಿಗಳ ಪರಿಶೀಲನೆ ಮತ್ತು ಆಯ್ಕೆಯನ್ನು ಅನುಸರಿಸಿ ಅಮೇರಿಕಾದಲ್ಲಿಯ ಸುಮಾರು 15 ಜನ ಹದಿಹರೆಯದವರನ್ನು ಈ ಉದ್ಘಾಟನಾ ಕೌನ್ಸಿಲ್ ಸಭೆಗೆ ಆಹ್ವಾನಿಸುತ್ತೇವೆ. ಇದರಲ್ಲಿ ಮೊದಲನೇ ವರ್ಷದಲ್ಲಿ ಪ್ರತಿಯೊಬ್ಬ ಕೌನ್ಸಿಲ್ ಸದಸ್ಯರ ಪೋಷಕರು, ಪಾಲಕರು ಅಥವಾ ಜೊತೆಗಾರರು ನಮ್ಮ ಕಂಪೆನಿಯ ಕೇಂದ್ರ ಕಛೇರಿಗೆ ಎರಡು ದಿನದ ಪ್ರವಾಸ ಕೂಡಾ ಒಳಗೊಂಡಿರುತ್ತದೆ. ವಿಮಾನ ಯಾನ ವೆಚ್ಚ, ವಸತಿ ಸೌಲಭ್ಯ, ಊಟ ಮತ್ತು ಇದಕ್ಕೆ ಸಂಭಂದಿಸಿದ ಎಲ್ಲ ವೆಚ್ಚವನ್ನು Snap ಪಾವತಿಸುತ್ತದೆ.

ಶೃಂಗಸಭೆಯು ಸಣ್ಣ-ಗುಂಪು ಮತ್ತು ಪೂರ್ಣ-ಕೌನ್ಸಿಲ್ ಚರ್ಚೆಗಳನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ರಕ್ಷಕರು ಮತ್ತು ಚಾಪೆರೋನ್‌ಗಳಿಗಾಗಿ ಪ್ರತ್ಯೇಕ "ಪೋಷಕ ಟ್ರ್ಯಾಕ್". ಅತಿಥಿ ಸ್ಪೀಕರ್‌ಗಳೊಂದಿಗೆ ಸಂವಾದಾತ್ಮಕ ಅವಧಿಗಳು, Snap ನಾಯಕರೊಂದಿಗೆ ತೊಡಗಿಸಿಕೊಳ್ಳುವಿಕೆ ಮತ್ತು ಮೋಜಿನ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ. ಶೃಂಗಸಭೆಯ ನಂತರ, ಕೌನ್ಸಿಲ್ ಸದಸ್ಯರು ಮತ್ತು ಅವರ ವಯಸ್ಕ ಪ್ರಾಯೋಜಕರು ತಮ್ಮ ಶಾಲೆಗಳು ಮತ್ತು ಸಮುದಾಯಗಳಲ್ಲಿ Snapchatನಲ್ಲಿ ಡಿಜಿಟಲ್ ಯೋಗಕ್ಷೇಮ ಮತ್ತು ಸಕಾರಾತ್ಮಕ ತೊಡಗಿಸಿಕೊಳ್ಳುವುದಕ್ಕಾಗಿ ರಾಯಭಾರಿಗಳಾಗಿ ಸೇವೆ ಸಲ್ಲಿಸುತ್ತಾರೆ ಎಂದು ನಾವು ಭಾವಿಸುತ್ತೇವೆ. ಕೌನ್ಸಿಲ್ ಅಥವಾ ಯೋಜಿತ ಚಟುವಟಿಕೆಗಳ ಕುರಿತು ಪ್ರಶ್ನೆಗಳಿಗಾಗಿ, platform-safety@snapchat.com ಅನ್ನು ಸಂಪರ್ಕಿಸಿ.

ಆನ್‌ಲೈನ್ ಸುರಕ್ಷತೆಗೆ Snap ಬದ್ಧತೆ ಮತ್ತು ಕೆಲಸ ಮಾಡುವ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಮ್ಮ ಗೌಪ್ಯತೆ ಮತ್ತು ಸುರಕ್ಷತಾ ಕೇಂದ್ರಕ್ಕೆ ಭೇಟಿ ನೀಡಿ. ಮತ್ತು ಸುರಕ್ಷಿತ ಅಂತರ್ಜಾಲ ದಿನ 2024, ಫೆಬ್ರವರಿ 6 ರಂದು ಬಿಡುಗಡೆ ಮಾಡಲು ಹೊಂದಿಸಲಾದ U.S ಮತ್ತು ಇತರ ಐದು ದೇಶಗಳಲ್ಲಿ ಡಿಜಿಟಲ್ ಯೋಗಕ್ಷೇಮದ ಕುರಿತು ನಮ್ಮ ಇತ್ತೀಚಿನ ಜಾಗತಿಕ ಸಂಶೋಧನೆಯನ್ನು ಪರೀಕ್ಷಿಸಲು ಮರೆಯದಿರಿ. ಈ ವಸಂತಕಾಲದಲ್ಲಿ ಆಯ್ಕೆಮಾಡಿದ ಕೌನ್ಸಿಲ್ ಸದಸ್ಯರ ಬಗ್ಗೆ ಸುದ್ದಿಗಳನ್ನು ಹಂಚಿಕೊಳ್ಳಲು ನಾವು ಎದುರು ನೋಡುತ್ತೇವೆ!

-ಜಾಕ್ವೆಲಿನ್ ಬೌಚೆರೆ, ಸುರಕ್ಷತಾ ವೇದಿಕೆಯ ಜಾಗತಿಕ ಮುಖ್ಯಸ್ಥೆ

ಸುದ್ದಿಗಳಿಗೆ ಹಿಂತಿರುಗಿ