ಸುರಕ್ಷತೆ ಕುರಿತು ಬ್ರಸೆಲ್ಸ್ NGO ದುಂಡುಮೇಜಿನ ಪರಿಷತ್ ಅನ್ನು Snap ಆಯೋಜಿಸಿತು

ಮಾರ್ಚ್ 5, 2024

ಕಳೆದ ವಾರ, Snapchat ನಲ್ಲಿ ಸುರಕ್ಷತೆ ಕುರಿತು ನಮ್ಮ ವಿಶಿಷ್ಟ ವಿಧಾನದ ಬಗ್ಗೆ ಹಂಚಿಕೊಳ್ಳಲು ಮತ್ತು ನಿರಂತರ ಸುಧಾರಣೆಗಾಗಿ ಅವರ ಪ್ರತಿಕ್ರಿಯೆಯನ್ನು ಆಲಿಸಲು, ಮಕ್ಕಳ ಸುರಕ್ಷತೆ ಮತ್ತು ಡಿಜಿಟಲ್ ಹಕ್ಕುಗಳ ಸರ್ಕಾರೇತರ ಸಂಸ್ಥೆಗಳ (NGO ಗಳು) 32 ಪ್ರತಿನಿಧಿಗಳ ದುಂಡುಮೇಜಿನ ಪರಿಷತ್ ಅನ್ನು ಬ್ರಸೆಲ್ಸ್‌ನಲ್ಲಿ Snap ಆಯೋಜಿಸಿತ್ತು. 

ಇತ್ತೀಚಿನ EU ಇಂಟರ್‌ನೆಟ್ ಫೋರಮ್ (EUIF) ಸಚಿವರ ಸಭೆಯಲ್ಲಿ ನಮ್ಮ ಭಾಗವಹಿಸುವಿಕೆಯ ಸಂದರ್ಭ ಮತ್ತು ನಮ್ಮ ಯುರೋಪಿಯನ್ ಸಹೋದ್ಯೋಗಿಗಳ ಜೊತೆಗೆ, ಈ ಗಣ್ಯರ ಗುಂಪಿನೆದುರು ಮಾತನಾಡುವ ಸದವಕಾಶ ನನಗೆ ಸಿಕ್ಕಿತು ಮತ್ತು ತಮ್ಮ ಅಮೂಲ್ಯ ದೃಷ್ಟಿಕೋನಗಳನ್ನು ತೊಡಗಿಸಲು ಮತ್ತು ಹಂಚಿಕೊಳ್ಳಲು ಭಾಗವಹಿಸಿದ ಎಲ್ಲರಿಗೂ ನಾನು ಧನ್ಯವಾದ ಸಲ್ಲಿಸಲು ಬಯಸುತ್ತೇನೆ.

ಹದಿಹರೆಯದವರನ್ನು ಮತ್ತು ಖಂಡಿತವಾಗಿ ನಮ್ಮ ಸಮುದಾಯದ ಎಲ್ಲ ಸದಸ್ಯರನ್ನು ರಕ್ಷಿಸುವುದು Snap ನ ಮೂಲಭೂತ ಕಾರ್ಯವಾಗಿದೆ. ನಮ್ಮ ಸಭೆಯ ಸಂದರ್ಭ, ನಾವು ನಮ್ಮ ವ್ಯಾಪಕವಾದ ಸುರಕ್ಷತಾ ಸಿದ್ಧಾಂತ, ವಿನ್ಯಾಸದ-ಮೂಲಕ-ಸುರಕ್ಷತೆ ಉತ್ಪನ್ನ ಬೆಳವಣಿಗೆ ಪ್ರಕ್ರಿಯೆಗಳ ನಮ್ಮ ಸುದೀರ್ಘ ಕಾಲದ ಪಾಲನೆ ಮತ್ತು ವಿಶ್ವಾದ್ಯಂತ Snapchatter ಗಳನ್ನು ರಕ್ಷಿಸಲು ಸಹಾಯ ಮಾಡುವ ವೈಶಿಷ್ಟ್ಯಗಳು, ಕಾರ್ಯವೈಶಿಷ್ಟ್ಯ, ಟೂಲ್‌ಗಳು ಮತ್ತು ಸಂಪನ್ಮೂಲಗಳಿಗಾಗಿ ಸಂಶೋಧನೆ ನಡೆಸಲು ಮತ್ತು ಅಭಿವೃದ್ಧಿಪಡಿಸಲು ನಮ್ಮ ಚಾಲ್ತಿಯಲ್ಲಿರುವ ಪ್ರಯತ್ನಗಳ ಕುರಿತು ನಾವು ವಿವರಿಸಿದೆವು.

ನಾವು ನಮ್ಮ “ಕಡಿಮೆ ಸಾಮಾಜಿಕ ಮಾಧ್ಯಮ, ಹೆಚ್ಚು Snapchat” ಅಭಿಯಾನ ತೋರಿಸಿದೆವು, ಇದು Snapchat ಅನ್ನು ಆರಂಭದಿಂದಲೂ ಹೇಗೆ ಸಾಂಪ್ರದಾಯಿಕ ಸಾಮಾಜಿಕ ಮಾಧ್ಯಮಕ್ಕೆ ಪರ್ಯಾಯವಾಗಿ ವಿನ್ಯಾಸಗೊಳಿಸಲಾಗಿದೆ ಎನ್ನುವುದನ್ನು ವಿವರಿಸುತ್ತದೆ. ನಮ್ಮ ಇತ್ತೀಚಿನ ಆರು ದೇಶದ ಡಿಜಿಟಲ್ ಯೋಗಕ್ಷೇಮ ಸೂಚ್ಯಂಕ ಮತ್ತು ಸಂಶೋಧನೆಯನ್ನು ನಾವು ಮರುಮನನ ಮಾಡಿದೆವು ಮತ್ತು ನಮ್ಮ ಸದಾ ಪರಿಷ್ಕರಿಸಲ್ಪಡುತ್ತಿರುವ ಆ್ಯಪ್‌ನಲ್ಲಿನ ಪೋಷಕರ ಮತ್ತು ಆರೈಕೆದಾರರ ಟೂಲ್‌ಗಳಾದ ಕೌಟುಂಬಿಕ ಕೇಂದ್ರವನ್ನು ಪರಿಶೋಧಿಸಿದೆವು. ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯದ (CSEA) ವಿವಿಧ ಆಯಾಮಗಳ ಕುರಿತು ಹಲವಾರು NGO ಗಳು ಗಮನ ಕೇಂದ್ರೀಕರಿಸಿದ್ದು, – ಪೂರ್ವಭಾವಿ ಮತ್ತು ಪ್ರತಿಕ್ರಿಯಾತ್ಮಕ ಕ್ರಮಗಳು ಎರಡರ ಮೂಲಕವೂ – ಹೇಗೆ ಈ ನೀಚ ಅಪರಾಧಗಳ ವಿರುದ್ಧ ಪ್ರತಿದಿನ Snap ಹೋರಾಡುತ್ತದೆ ಎನ್ನುವುದನ್ನು ಕೂಡ ನಾವು ಹೈಲೈಟ್ ಮಾಡಿದೆವು. ವಾಸ್ತವದಲ್ಲಿ, ಏಕೀಕೃತ ಪ್ರಯತ್ನಗಳ ಮೂಲಕ, ನಮ್ಮ ವಿಶ್ವಾಸ ಮತ್ತು ಸುರಕ್ಷತೆ ತಂಡಗಳು ಕಳೆದ ವರ್ಷ CSEA ವಿಷಯವನ್ನು ಉಲ್ಲಂಘಿಸಿದ ಸುಮಾರು 1.6 ಮಿಲಿಯನ್ ತುಣುಕುಗಳನ್ನು ತೆಗೆದುಹಾಕಿವೆ, ಖಾತೆಗಳನ್ನು ನಿಷ್ಕ್ರಿಯಗೊಳಿಸಿವೆ ಮತ್ತು U.S. ನ ಕಾಣೆಯಾದ ಮತ್ತು ದೌರ್ಜನ್ಯಕ್ಕೊಳಗಾದ ಮಕ್ಕಳ ರಾಷ್ಟ್ರೀಯ ಕೇಂದ್ರಕ್ಕೆ (NCMEC) ಉಲ್ಲಂಘಿಸಿದವರ ಕುರಿತು ದೂರು ನೀಡಿವೆ. ನಮ್ಮ ಬೆಂಬಲ ಅನುಭವವನ್ನು ಇನ್ನಷ್ಟು ಸರಳಗೊಳಿಸಲು ಮತ್ತು ಸುಧಾರಿಸಲು, ಆ್ಯಪ್‌ನಲ್ಲಿ ಇನ್ನಷ್ಟು ಹದಿಹರೆಯದವರ-ಸ್ನೇಹಿಯಾದ ಭಾಷೆಯಲ್ಲಿ ಸಂವಹನ ನಡೆಸಲು ಮತ್ತು ಯುವಕರು ಹಾಗೂ ಹದಿಹರೆಯದವರಿಗಾಗಿ ಕೆಲವು ಆಯ್ಕೆ ಮಾಡಿಕೊಳ್ಳುವ ವೈಶಿಷ್ಟ್ಯಗಳನ್ನು ಪರಿಗಣಿಸಲು ನಮ್ಮ Snap ತಂಡವು ಇನ್ನಷ್ಟು ವಿಚಾರಗಳು ಮತ್ತು ಒಳನೋಟಗಳನ್ನು ಪಡೆದುಕೊಂಡಿತು.

ಎಲ್ಲ ಜಾಗತಿಕ ಪಾಲುದಾರರಿಗೆ ಚಾಲ್ತಿಯಲ್ಲಿರುವ ಸುರಕ್ಷತಾ ಸವಾಲು: ವಯೋ ಖಾತರಿ ಮತ್ತು ವಯೋ ಪರಿಶೀಲನೆ ಕುರಿತು ಚರ್ಚೆಯಲ್ಲಿ ಮತ್ತೊಮ್ಮೆ ಒತ್ತು ನೀಡಲಾಯಿತು. ಸಂಭಾಷಣೆಯನ್ನು ಮುಂದುವರಿಸಲು, ಬ್ರಸೆಲ್ಸ್‌ನಲ್ಲಿ ಇದೇ ರೀತಿಯ ಕಾರ್ಯಕ್ರಮಗಳನ್ನು ನಡೆಸಲು ನಾವು ನಿರೀಕ್ಷಿಸುತ್ತೇವೆ ಮತ್ತು ಈ ವಿಷಯಗಳ ಕುರಿತು ನಿರ್ದಿಷ್ಟ ಅನುಸರಣೆಯನ್ನು ಯೋಜಿಸುತ್ತಿದ್ದೇವೆ. ಇತರ ಯುರೋಪಿಯನ್ ಮತ್ತು ಪ್ರಮುಖ ಅಂತಾರಾಷ್ಟ್ರೀಯ ರಾಜಧಾನಿಗಳಿಗೆ ಕಾರ್ಯಕ್ರಮವನ್ನು ವಿಸ್ತರಿಸಲು ನಾವು ಆಶಿಸುತ್ತಿದ್ದೇವೆ. 

ತಂತ್ರಜ್ಞಾನದ ಪರಿಸರ ವ್ಯವಸ್ಥೆಯಾದ್ಯಂತ, ಹಂಚಿಕೊಳ್ಳಲು ಮತ್ತು ಪರಸ್ಪರರಿಂದ ಕಲಿಯಲು ನಮ್ಮೆಲ್ಲರಲ್ಲೂ ಸಾಕಷ್ಟು ವಿಷಯಗಳಿವೆ ಮತ್ತು Snapchat ನಲ್ಲಿ ಸುರಕ್ಷತೆಯ ಸೇವೆಯಲ್ಲಿರುವ ಎಲ್ಲ ಪಾಲುದಾರರು ಮತ್ತು ಸಹಭಾಗಿಗಳ ನಮ್ಮ ಪಡೆಯನ್ನು ಬೆಳೆಸಲು ನಾವು ಕಾತುರರಾಗಿದ್ದೇವೆ.

— ಜಾಕ್ವೆಲಿನ್ ಬೌಚೆರೆ, ಸುರಕ್ಷತಾ ವೇದಿಕೆಯ ಜಾಗತಿಕ ಮುಖ್ಯಸ್ಥೆ

ಸುದ್ದಿಗಳಿಗೆ ಹಿಂತಿರುಗಿ