ಹೊಸ ಸಂಶೋಧನೆ: 2023 ರಲ್ಲಿ ಹದಿಹರೆಯದ ಮಕ್ಕಳ ಆನ್‌ಲೈನ್ ಚಟುವಟಿಕೆಗಳ ಮೇಲೆ ನಿಗಾ ಇರಿಸುವುದು ಪೋಷಕರಿಗೆ ಕಷ್ಟಕರವಾಗಿತ್ತು

ಫೆಬ್ರವರಿ 5, 2024

ಹಲವು ತಲೆಮಾರುಗಳಿಂದ, ಜಗತ್ತಿನಾದ್ಯಂತದ ಪೋಷಕರು ಮತ್ತು ಆರೈಕೆದಾರರು ಮಕ್ಕಳನ್ನು ಪಾಲನೆ ಮಾಡುವುದು ಏಕಕಾಲಕ್ಕೆ ಫಲದಾಯಕ ಮತ್ತು ಹರ್ಷದಾಯಕ, ಆಯಾಸದಾಯಕ ಮತ್ತು ಒತ್ತಡದಾಯಕ ಎಂದು ಹೇಳಿದ್ದಾರೆ. ಡಿಜಿಟಲ್ ಯುಗಕ್ಕೆ ಕಾಲಿಟ್ಟಂತೆ ಆ ಆನಂದಗಳು ಮತ್ತು ಸವಾಲುಗಳು ಮತ್ತಷ್ಟು ಹೆಚ್ಚಳವಾಗಿವೆ. ಇಂದು ಅಂತಾರಾಷ್ಟ್ರೀಯ ಸುರಕ್ಷಿತ ಅಂತರ್ಜಾಲ ದಿನದ ಸಂದರ್ಭ, 2023 ರಲ್ಲಿ ತಮ್ಮ ಹದಿಹರೆಯದ ಮಕ್ಕಳ ಆನ್‌ಲೈನ್ ಚಟುವಟಿಕೆಗಳ ಮೇಲೆ ನಿಗಾ ಇರಿಸುವುದು ಹೆಚ್ಚು ಕಷ್ಟವಾಗಿತ್ತು ಎಂದು ಪೋಷಕರು ಅಭಿಪ್ರಾಯಪಟ್ಟ ಹಾಗೂ ತಮ್ಮ ಹದಿಹರೆಯದ ಮಕ್ಕಳು ಆನ್‌ಲೈನ್‌ನಲ್ಲಿ ಜವಾಬ್ದಾರಿಯುತವಾಗಿ ವರ್ತಿಸುತ್ತಾರೆ ಎನ್ನುವ ತಮ್ಮ ನಂಬಿಕೆಗೆ ಧಕ್ಕೆಯಾಗಿದೆ ಎಂದು ಹೇಳಿದ್ದನ್ನು ತೋರಿಸುವ ಹೊಸ ಸಂಶೋಧನೆಯನ್ನು ಬಿಡುಗಡೆ ಮಾಡುತ್ತಿದ್ದೇವೆ. ಈ ಸಂಶೋಧನೆಯನ್ನು ಕೇವಲ Snapchat ನಲ್ಲಷ್ಟೇ ಅಲ್ಲ – ಎಲ್ಲ ಸಾಧನಗಳು ಮತ್ತು ವೇದಿಕೆಗಳಾದ್ಯಂತ ನಡೆಸಲಾಗಿತ್ತು. 

ತಮ್ಮ ಹದಿಹರೆಯದ ಮಕ್ಕಳು ಆನ್‌ಲೈನ್‌ನಲ್ಲಿ ಜವಾಬ್ದಾರಿಯಿಂದ ವರ್ತಿಸುತ್ತಾರೆ ಎನ್ನುವ ಪೋಷಕರ ನಂಬಿಕೆ 2023 ರಲ್ಲಿ ಕಡಿಮೆಯಾಗಿದ್ದು, 10 ಮಂದಿಯಲ್ಲಿ ಕೇವಲ ನಾಲ್ವರು (43%) "ನನ್ನ ಮಗು ಆನ್‌ಲೈನ್‌ನಲ್ಲಿ ಜವಾಬ್ದಾರಿಯಿಂದ ವರ್ತಿಸುತ್ತದೆ ಎಂದು ನಾನು ನಂಬುತ್ತೇನೆ ಮತ್ತು ಅವರ ಮೇಲೆ ಸಕ್ರಿಯವಾಗಿ ನಿಗಾ ಇರಿಸುವ ಅಗತ್ಯ ಕಂಡುಬಂದಿಲ್ಲ" ಎನ್ನುವ ಹೇಳಿಕೆಗೆ ಒಪ್ಪಿದ್ದಾರೆ. ಇದು 2022 ರಲ್ಲಿ ಇದೇ ರೀತಿಯ ಸಮೀಕ್ಷೆಯ 49% ಅಂಕಗಳಿಂದ ಆರು ಅಂಕಗಳಷ್ಟು ಇಳಿಕೆಯಾಗಿದೆ. ಇದರ ಜೊತೆಗೆ ಕಡಿಮೆ ಪ್ರಮಾಣದ ಅಪ್ರಾಪ್ತ ವಯಸ್ಕ ಹದಿಹರೆಯದವರು (13 ರಿಂದ 17 ವರ್ಷದ ಒಳಗಿನವರು) ತಾವು ಆನ್‌ಲೈನ್ ಅಪಾಯವನ್ನು ಅನುಭವಿಸಿದ ಬಳಿಕ ಪೋಷಕರು ಅಥವಾ ವಿಶ್ವಾಸಾರ್ಹ ವಯಸ್ಕರಿಂದ ಸಹಾಯ ಕೋರುವ ಸಾಧ್ಯತೆಯಿದೆ ಎಂದು ಹೇಳಿದ್ದು, 2022 ರಲ್ಲಿನ 64% ನಿಂದ 59% ಗೆ ಐದು ಶೇಕಡಾ ಇಳಿಕೆಯಾಗಿದೆ. 

ತಮ್ಮ ಹದಿಹರೆಯದ ಮಕ್ಕಳು ಖಾಸಗಿ ಅಥವಾ ಲೈಂಗಿಕವಾಗಿ ಸೂಚ್ಯವಾದ ಚಿತ್ರಣಕ್ಕೆ ಎದುರಾಗುವ ಸಾಧ್ಯತೆಯನ್ನು 11 ಶೇಕಡಾ ಅಂಕಗಳಿಂದ ಪೋಷಕರು ಕಡಿಮೆ ಅಂದಾಜು ಮಾಡಿದ್ದಾರೆ – ಈ ಪ್ರಶ್ನೆಯನ್ನು 2023 ರಲ್ಲಿ ಸೇರಿಸಲಾಗಿತ್ತು. ಹದಿಹರೆಯದವರ ಒಟ್ಟಾರೆ ಆನ್‌ಲೈನ್ ಅಪಾಯವನ್ನು ಮಾಪನ ಮಾಡುವ ಪೋಷಕರ ಸಾಮರ್ಥ್ಯ ಕೂಡ ಕಡಿಮೆಯಾಗಿದೆ. 2022 ರಲ್ಲಿ ಹದಿಹರೆಯದವರ ವರದಿ ಮಾಡಲಾದ ಡಿಜಿಟಲ್ ಅಪಾಯದ ಒಡ್ಡಿಕೊಳ್ಳುವಿಕೆ ಮತ್ತು ಅದನ್ನು ಮಾಪನ ಮಾಡುವ ಪೋಷಕರ ನಿಖರತೆಯ ನಡುವಿನ ವ್ಯತ್ಯಾಸ ಎರಡು ಶೇಕಡಾ ಅಂಕಗಳಾಗಿದ್ದವು. ಕಳೆದ ವರ್ಷ, ಆ ಅಂತರವು ಮೂರು ಶೇಕಡಾ ಅಂಕಗಳಿಗೆ ಏರಿಕೆಯಾಗಿದೆ. 

ಫಲಿತಾಂಶಗಳು ನವಪೀಳಿಗೆಯ ಡಿಜಿಟಲ್ ಯೋಗಕ್ಷೇಮಕ್ಕೆ ಸಂಬಂಧಿಸಿದ Snap ನ ನಿರಂತರ ಸಂಶೋಧನೆ ಮತ್ತು ಆಸ್ಟ್ರೇಲಿಯಾ, ಫ್ರಾನ್ಸ್, ಜರ್ಮನಿ, ಭಾರತ, UK ಮತ್ತು U.S. ಈ ಆರು ದೇಶಗಳಲ್ಲಿ ಹದಿಹರೆಯದವರು (13-17 ವಯಸ್ಸಿನವರು) ಮತ್ತು ಯುವಕರು (18-24 ವಯಸ್ಸಿನವರು) ಹೇಗೆ ವರ್ತಿಸುತ್ತಿದ್ದಾರೆ ಎನ್ನುವ ಮಾಪನವಾದ ನಮ್ಮ ವಾರ್ಷಿಕ ಡಿಜಿಟಲ್ ಯೋಗಕ್ಷೇಮ ಸೂಚ್ಯಂಕ (DWBI) ನ ಎರಡನೆಯ ಓದುವಿಕೆಯನ್ನು ಗುರುತಿಸುವ ಭಾಗವಾಗಿವೆ. Snapchat ನಲ್ಲಷ್ಟೇ ಅಲ್ಲ, 13 ರಿಂದ 19 ವರ್ಷದವರು ಬಳಸುವ ಯಾವುದೇ ವೇದಿಕೆ ಅಥವಾ ಸಾಧನದಲ್ಲಿ ಆನ್‌ಲೈನ್ ಅಪಾಯಗಳಿಗೆ ಸಂಬಂಧಿಸಿ ಹದಿಹರೆಯದವರ ಅನುಭವಗಳ ಕುರಿತು ಕೂಡ ನಾವು ಪೋಷಕರ ಸಮೀಕ್ಷೆ ಮಾಡಿದೆವು. ಸಮೀಕ್ಷೆಯನ್ನು ಏಪ್ರಿಲ್ 28, 2023 ರಿಂದ ಮೇ 23, 2023 ರವರೆಗೆ ನಡೆಸಲಾಯಿತು ಮತ್ತು ಮೂರು ವಯೋ ಗುಂಪುಗಳು ಮತ್ತು ಆರು ಭೌಗೋಳಿಕ ಪ್ರದೇಶಗಳಾದ್ಯಂತ 9,010 ಪ್ರತಿಕ್ರಿಯಾದಾರರನ್ನು ಒಳಗೊಂಡಿದ್ದವು. 

ಕೆಲವು ಹೆಚ್ಚುವರಿ ಉನ್ನತ ಮಟ್ಟದ ಸಂಶೋಧನೆಗಳು ಇಲ್ಲಿವೆ:

  • ನವಪೀಳಿಗೆಯ 78% ಹದಿಹರೆಯದವರು ಮತ್ತು ಯುವಕರು 2023 ರ ಆರಂಭದಲ್ಲಿ ತಾವು ಒಂದಿಷ್ಟು ಆನ್‌ಲೈನ್ ಅಪಾಯಗಳನ್ನು ಎದುರಿಸಿದ್ದಾಗಿ ಹೇಳಿದರು, ಇದು 2022 ರಲ್ಲಿನ 76% ಗಿಂತ ಎರಡು ಶೇಕಡಾ ಅಧಿಕವಾಗಿದೆ.

  • ನವಪೀಳಿಗೆಯ 57% ಪ್ರತಿಕ್ರಿಯಾದಾರರು ಹಿಂದಿನ ಮೂರು ತಿಂಗಳುಗಳಲ್ಲಿ ತಾವು ಅಥವಾ ಒಬ್ಬ ಸ್ನೇಹಿತ/ತೆ ಖಾಸಗಿ ಅಥವಾ ಲೈಂಗಿಕ ಚಿತ್ರಣದಲ್ಲಿ ತೊಡಗಿದ್ದಾಗಿ ಹೇಳಿದ್ದು, ಒಂದೋ ಅದನ್ನು ಸ್ವೀಕರಿಸಿದ್ದಾಗಿ (48%), ಸ್ವತಃ ತಮ್ಮ ಚಿತ್ರವನ್ನು ಒದಗಿಸಲು ಕೇಳಿದ್ದಾಗಿ (44%) ಅಥವಾ ಬೇರೊಬ್ಬರಿಗೆ ಫೋಟೋಗಳು ಅಥವಾ ವೀಡಿಯೊಗಳನ್ನು ಹಂಚಿಕೊಂಡಿದ್ದಾಗಿ ಅಥವಾ ವಿತರಿಸಿದ್ದಾಗಿ (23%) ಹೇಳಿದ್ದಾರೆ. ಇದರ ಜೊತೆಗೆ, ಚಿತ್ರಣವು ಉದ್ದೇಶಿತ ಸ್ವೀಕೃತಿದಾರನಿಂದಾಚೆಗೂ ಪ್ರಸರಣವಾಯಿತು ಎಂದು 33% ಪ್ರತಿಕ್ರಿಯಾದಾರರು ಹೇಳಿದರು. 

  • ತಮ್ಮ ಹದಿಹರೆಯದವರ ಆನ್‌ಲೈನ್ ಚಟುವಟಿಕೆಗಳ ಮೇಲೆ ಸಕ್ರಿಯವಾಗಿ ನಿಗಾ ಇರಿಸಲು ಅತ್ಯುತ್ತಮ ವಿಧಾನಗಳ ಕುರಿತು ತಮಗೆ ಸ್ಪಷ್ಟತೆಯಿಲ್ಲ ಎಂದು ಅರ್ಧದಷ್ಟು (50%) ಪೋಷಕರು ಹೇಳಿದರು.

ಎರಡನೇ ವರ್ಷದ DWBI 

ಡಿಜಿಟಲ್ ಯೋಗಕ್ಷೇಮ ಸೂಚ್ಯಂಕವು ಭಾವನಾತ್ಮಕ ಹೇಳಿಕೆಗಳ ಶ್ರೇಣಿಗೆ ಸಂಬಂಧಿಸಿದ ಪ್ರತಿಕ್ರಿಯಾದಾರರ ಒಪ್ಪಿಗೆಯನ್ನು ಆಧರಿಸಿ ಪ್ರತಿ ಪ್ರತಿಕ್ರಿಯಾದಾರನಿಗೆ 0 ಮತ್ತು 100 ನಡುವಿನ ಅಂಕವನ್ನು ನಿಯೋಜಿಸುತ್ತದೆ. ದೇಶದ ಅಂಕಗಳನ್ನು ಮತ್ತು ಆರು ದೇಶಗಳ ಸರಾಸರಿಯನ್ನು ಉತ್ಪಾದಿಸಲು ಪ್ರತ್ಯೇಕ ಪ್ರತಿಕ್ರಿಯಾದಾರರ ಅಂಕಗಳನ್ನು ನಂತರ ಒಟ್ಟುಗೂಡಿಸಲಾಗುತ್ತದೆ. ಆರು ಭೌಗೋಳಿಕ ಪ್ರದೇಶಗಳಾದ್ಯಂತ, 2022 ರ 62 ಅಂಕದಿಂದ 2023 DWBI ಬದಲಾಗದೆ ಉಳಿದಿದ್ದು, ಇದು ಒಂದು ಮಟ್ಟಿಗೆ ಸರಾಸರಿ ಓದುವಿಕೆಯಾಗಿದೆ. ಆರು ಪ್ರತ್ಯೇಕ ದೇಶಗಳ ಮಟ್ಟಿಗೆ ಹೇಳುವುದಾದರೆ, ಸತತ ಎರಡನೇ ವರ್ಷ ಭಾರತ 67 ಅಂಕಗಳ ಅಧಿಕ DWBI ಅನ್ನು ದಾಖಲಿಸಿದ್ದು, ಪೋಷಕರ ಬೆಂಬಲದ ಪ್ರಬಲ ಸಂಸ್ಕೃತಿಯನ್ನು ಸಾಬೀತು ಮಾಡಿದೆ ಆದರೆ 2022 ರಲ್ಲಿ 68 ಅಂಕದ ಹೋಲಿಕೆಯಲ್ಲಿ ಶೇಕಡಾ ಒಂದರಷ್ಟು ಇಳಿಕೆಯಾಗಿದೆ. ಆಸ್ಟ್ರೇಲಿಯಾ, ಜರ್ಮನಿ, UK ಮತ್ತು U.S. ಎಲ್ಲವೂ 2022 ರ ಹೋಲಿಕೆಯಲ್ಲಿ ಒಂದೇ ರೀತಿಯ ಓದುವಿಕೆಗಳನ್ನು ದಾಖಲಿಸಿದ್ದು ಅನುಕ್ರಮವಾಗಿ 63, 60, 62 ಮತ್ತು 64 ಶೇಕಡಾ ಇದೆ. ಫ್ರಾನ್ಸ್ ಕೂಡ 2022 ರ 60 ಅಂಕಗಳಿಂದ 59 ಕ್ಕೆ ಕಡಿಮೆಯಾಗಿದ್ದು ಒಂದು ಅಂಕದ ಇಳಿಕೆ ಕಂಡಿದೆ. 

ಸೂಚ್ಯಂಕವು, ಅಸ್ತಿತ್ವದಲ್ಲಿರುವ ಯೋಗಕ್ಷೇಮದ ಸಿದ್ಧಾಂತದ ಒಂದು ವಿಧವಾದ PERNA ಮಾದರಿಯನ್ನು ಬಳಸಿಕೊಂಡಿದ್ದು 1, ಇದು ಐದು ವರ್ಗಗಳಾದ್ಯಂತ 20 ಭಾವನಾತ್ಮಕ ಹೇಳಿಕೆಗಳನ್ನು ಒಳಗೊಂಡಿದೆ: Positive Emotion (ಸಕಾರಾತ್ಮಕ ಭಾವನೆ), Engagement (ತೊಡಗಿಕೊಳ್ಳುವಿಕೆ), Relationships (ಸಂಬಂಧಗಳು), Negative Emotion (ನಕಾರಾತ್ಮಕ ಭಾವನೆ) ಮತ್ತು Achievement (ಸಾಧನೆ). ಹಿಂದಿನ ಮೂರು ತಿಂಗಳುಗಳಲ್ಲಿ – ಕೇವಲ Snapchat ಅಷ್ಟೇ ಅಲ್ಲ – ಯಾವುದೇ ಸಾಧನ ಅಥವಾ ಆ್ಯಪ್‌ನಲ್ಲಿ ಅವರ ಆನ್‌ಲೈನ್ ಅನುಭವಗಳನ್ನು ಪರಿಗಣನೆಗೆ ತೆಗೆದುಕೊಂಡು, 20 ಹೇಳಿಕೆಗಳಲ್ಲಿ ಪ್ರತಿಯೊಂದಕ್ಕೂ ಒಪ್ಪಿಗೆಯ ಮಟ್ಟವನ್ನು ದಾಖಲಿಸುವಂತೆ ಪ್ರತಿಕ್ರಿಯಾದಾರರನ್ನು ಕೇಳಲಾಯಿತು. ಉದಾಹರಣೆಗೆ, ಸಕಾರಾತ್ಮಕ ಭಾವನೆಯ ವರ್ಗದ ಅಡಿಯ ಹೇಳಿಕೆಗಳಲ್ಲಿ ಇವು ಸೇರಿವೆ: “ಯಾವಾಗಲೂ ಹೆಮ್ಮೆ ಅನಿಸಿತು” ಮತ್ತು “ಯಾವಾಗಲೂ ಸಂತೋಷ ಅನಿಸಿತು,” ಮತ್ತು ಸಾಧನೆಯ ಗುಂಪಿನಡಿ: “ನನಗೆ ಮುಖ್ಯವಾದ ಕೆಲಸಗಳನ್ನು ಮಾಡುವುದು ಹೇಗೆ ಎಂದು ಕಲಿತೆ.” (ಎಲ್ಲ 20 DWBI ಭಾವನಾತ್ಮಕ ಹೇಳಿಕೆಗಳ ಪಟ್ಟಿಗಾಗಿ ಈ ಲಿಂಕ್ ನೋಡಿ.) 

ಫಲಿತಾಂಶಗಳಿಂದ ಕಲಿಯುವುದು

Snap ನಲ್ಲಿ, Snapchat ನ ಕೌಟುಂಬಿಕ ಕೇಂದ್ರ ಸೇರಿದಂತೆ ನಮ್ಮ ಉತ್ಪನ್ನ ಮತ್ತು ವೈಶಿಷ್ಟ್ಯದ ವಿನ್ಯಾಸ ಮತ್ತು ಬೆಳವಣಿಗೆಗೆ ಮಾಹಿತಿ ನೀಡಲು ಸಹಾಯ ಮಾಡುವುದಕ್ಕಾಗಿ, ಈ ಮತ್ತು ಇತರ ಸಂಶೋದನೆಯ ಅಂಶಗಳನ್ನು ಬಳಸಿಕೊಳ್ಳುವುದನ್ನು ನಾವು ಮುಂದುವರಿಸುತ್ತೇವೆ. 2022 ರಲ್ಲಿ ಬಿಡುಗಡೆ ಮಾಡಲಾದ ಕೌಟುಂಬಿಕ ಕೇಂದ್ರವು ನಮ್ಮ ಪೋಷಕರ ಟೂಲ್‌ಗಳ ಗುಚ್ಛವಾಗಿದ್ದು, ಸಂವಹನಗಳ ನೈಜ ವಿಷಯವನ್ನು ಬಹಿರಂಗಪಡಿಸದೆ ಹದಿಹರೆಯದವರ ಗೌಪ್ಯತೆಯನ್ನು ಕಾಪಾಡುತ್ತ, Snapchat ನಲ್ಲಿ ತಮ್ಮ ಹದಿಹರೆಯದ ಮಕ್ಕಳು ಯಾರೊಂದಿಗೆ ಸಂವಹನ ಮಾಡುತ್ತಿದ್ದಾರೆ ಎನ್ನುವ ಕುರಿತು ಪೋಷಕರು ಮತ್ತು ಆರೈಕೆದಾರರಿಗೆ ಒಳನೋಟಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. 

ಕೌಟುಂಬಿಕ ಕೇಂದ್ರದ ಆರಂಭಿಕ ಆವೃತ್ತಿಯಲ್ಲಿ, ಪೋಷಕರಿಗೆ ಕಳವಳಕಾರಿಯಾಗಿದ್ದ ಖಾತೆಗಳನ್ನು ಗೌಪ್ಯವಾಗಿ ವರದಿ ಮಾಡುವ ಮತ್ತು ವಿಷಯ ನಿಯಂತ್ರಣಗಳನ್ನು ಹೊಂದಿಸುವ ಸಾಮರ್ಥ್ಯವನ್ನು ಕೂಡ ನಾವು ಪೋಷಕರಿಗೆ ಒದಗಿಸಿದ್ದೆವು. ಕಳೆದ ವರ್ಷದಲ್ಲಿ, ಕೌಟುಂಬಿಕ ಕೇಂದ್ರಕ್ಕೆ ಹೊಸದಾಗಿ ಬಂದವರಿಗೆ ವಿಷಯ ನಿಯಂತ್ರಣಗಳು ಡೀಫಾಲ್ಟ್ ಆಗಿ "ಆನ್" ಆಗಿರುತ್ತವೆ – ಇದು ಮಕ್ಕಳ ಸುರಕ್ಷತೆಯ ವಕಾಲತ್ತು ಮಾಡುವವರ ಅಭಿಪ್ರಾಯವನ್ನು ಆಧರಿಸಿ ಮಾಡಿದ ಬದಲಾವಣೆಯಾಗಿದೆ. ಕಳೆದ ತಿಂಗಳು ನಾವು ಹೆಚ್ಚುವರಿ ಕೌಟುಂವಿಕ ಕೇಂದ್ರ ವೈಶಿಷ್ಟ್ಯಗಳನ್ನು ಪ್ರಕಟಿಸಿದ್ದೇವೆ ಮತ್ತು ಈಗ Snapchat ನ AI ಸಂಚಾಲಿತ ಚಾಟ್‌ಬಾಟ್ ಅವರ ಹದಿಹರೆಯದ ಮಕ್ಕಳ ಚಾಟ್‌ಗಳಿಗೆ ಪ್ರತಿಕ್ರಿಯಿಸದಂತೆ ನಿಷ್ಕ್ರಿಯಗೊಳಿಸುವ ಸಾಮರ್ಥ್ಯವನ್ನು ಪೋಷಕರಿಗೆ ಒದಗಿಸಿದ್ದೇವೆ. ಸಾಮಾನ್ಯವಾಗಿ ಕೌಟುಂಬಿಕ ಕೇಂದ್ರದ ಪತ್ತೆಮಾಡುವಿಕೆಯನ್ನು ಕೂಡ ನಾವು ಸುಧಾರಣೆ ಮಾಡಿದ್ದೇವೆ ಮತ್ತು ತಮ್ಮ ಹದಿಹರೆಯದ ಮಕ್ಕಳ ಸುರಕ್ಷತೆ ಮತ್ತು ಗೌಪ್ಯತೆ ಸೆಟ್ಟಿಂಗ್‌ಗಳ ನೋಟವನ್ನು ಪೋಷಕರಿಗೆ ಒದಗಿಸುತ್ತಿದ್ದೇವೆ. ಡೀಫಾಲ್ಟ್ ಆಗಿ ಕಟ್ಟುನಿಟ್ಟಿನ ಮಟ್ಟಗಳಿಗೆ ಹೊಂದಿಸಿರುವುದರಿಂದ, ತಮ್ಮ ಹದಿಹರೆಯದ ಮಕ್ಕಳ Snapchat ಕಥೆಯನ್ನು ಯಾರು ನೋಡಬಹುದು, ಅವರನ್ನು ಯಾರು ಸಂಪರ್ಕಿಸಬಹುದು ಮತ್ತು Snap ಮ್ಯಾಪ್‌ನಲ್ಲಿ ಯಾವುದೇ ಸ್ನೇಹಿತರೊಂದಿಗೆ ತಮ್ಮ ಹದಿಹರೆಯದ ಮಕ್ಕಳು ತಮ್ಮ ಸ್ಥಳ ಹಂಚಿಕೊಳ್ಳುವುದನ್ನು ಆಯ್ಕೆ ಮಾಡಿದ್ದಾರೆಯೇ ಎನ್ನುವುದಕ್ಕೆ ಸಂಬಂಧಿಸಿದ ಸೆಟ್ಟಿಂಗ್‌ಗಳನ್ನು ಈಗ ಪೋಷಕರು ನೋಡಬಹುದು.  

U.S.-ನಲ್ಲಿ ನೆಲೆಸಿರುವ ಹದಿಹರೆಯದವರು: ನಮ್ಮ ಡಿಜಿಟಲ್ ಯೋಗಕ್ಷೇಮಕ್ಕಾಗಿನ ಹೊಸ ಪರಿಷತ್‌ಗೆ ಅರ್ಜಿ ಸಲ್ಲಿಸಿ 

ನಮ್ಮ ಚಾಲ್ತಿಯಲ್ಲಿರುವ ಸಂಶೋಧನೆಗೆ ಜೀವಂತಿಕೆ ತರಲು ಸಹಾಯ ಮಾಡುವುದಕ್ಕಾಗಿ, ಕಳೆದ ತಿಂಗಳು U.S. ನಲ್ಲಿನ ಹದಿಹರೆಯದವರಿಗಾಗಿ ಪೈಲಟ್ ಪ್ರೋಗ್ರಾಂ ಆಗಿರುವ ಡಿಜಿಟಲ್ ಯೋಗಕ್ಷೇಮಕ್ಕಾಗಿನ ನಮ್ಮ ಮೊದಲ ಪರಿಷತ್‌ಗಾಗಿ ಅರ್ಜಿ ಪ್ರಕ್ರಿಯೆಯನ್ನು ನಾವು ಆರಂಭಿಸಿದೆವು. 13 ಮತ್ತು 16 ವಯಸ್ಸಿನೊಳಗಿನ ಸುಮಾರು 15 ಯುವ ಜನರ ವೈವಿಧ್ಯಮಯ ಗುಂಪನ್ನು ಒಳಗೊಂಡ ಒಂದು ಆರಂಭಿಕ ಪರಿಷತ್ ಅನ್ನು ನಾವು ರಚಿಸುತ್ತಿದ್ದೇವೆ. ನಾವು ಪರಸ್ಪರರ ಮಾತು ಆಲಿಸಲು ಮತ್ತು ಅವರಿಂದ ಕಲಿಯಲು ಬಯಸುತ್ತೇವೆ ಮತ್ತು Snapchat – ಮತ್ತು ಒಟ್ಟಾರೆ ತಂತ್ರಜ್ಞಾನ ಪರಿಸರವ್ಯವಸ್ಥೆಯನ್ನು – ಸೃಜನಶೀಲತೆ ಹಾಗೂ ಸ್ನೇಹಿತರ ನಡುವೆ ಮತ್ತು ಅವರಲ್ಲಿ ಸಂಪರ್ಕಕ್ಕಾಗಿ ಸುರಕ್ಷಿತ, ಆರೋಗ್ಯಕರ ಮತ್ತು ಹೆಚ್ಚು ಸಕಾರಾತ್ಮಕ ಪರಿಸರವನ್ನಾಗಿಸಲು ಬಯಸುತ್ತೇವೆ. ಮಾರ್ಚ್ 22 ರವರೆಗೆ ಅರ್ಜಿಗಳು ತೆರೆದಿರುತ್ತವೆ ಮತ್ತು ಈ ವಸಂತದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನಾವು ಹುದ್ದೆಯನ್ನು ಒದಗಿಸುತ್ತೇವೆ. 

ಕಾರ್ಯಕ್ರಮವು ಮಾಸಿಕ ಕರೆಗಳು, ಪ್ರಾಜೆಕ್ಟ್ ಕೆಲಸ, ನಮ್ಮ ಜಾಗತಿಕ ಸುರಕ್ಷತಾ ಸಲಹಾ ಮಂಡಳಿ, ಮೊದಲ ವರ್ಷಕ್ಕಾಗಿ ಒಂದು ಮುಖತಃ ಶೃಂಗಸಭೆ ಮತ್ತು ಎರಡನೇ ವರ್ಷದಲ್ಲಿ ಹದಿಹರೆಯದವರ ಜ್ಞಾನ ಮತ್ತು ಕಲಿಕೆಯನ್ನು ತೋರಿಸುವ ಹೆಚ್ಚು ಸಾರ್ವಜನಿಕವಾದ ಕಾರ್ಯಕ್ರಮವನ್ನು ಒಳಗೊಂಡಿರುತ್ತದೆ. ಅರ್ಜಿ ಪ್ರಕ್ರಿಯೆಯ ಕುರಿತು ಇನ್ನಷ್ಟು ವಿವರಗಳಿಗಾಗಿ, ಈ ಪೋಸ್ಟ್ ನೋಡಿ ಮತ್ತು ಇಲ್ಲಿ ಅರ್ಜಿ ಸಲ್ಲಿಸಿ

ಈ ಪ್ರಾಯೋಗಿಕ ಹದಿಹರೆಯದವರ ಪರಿಷತ್ ಸ್ಥಾಪಿಸಲು ನಾವು ಕಾತುರರಾಗಿದ್ದೇವೆ ಮತ್ತು ಅವರೊಂದಿಗೆ 2025 ರ ಸುರಕ್ಷಿತ ಅಂತರ್ಜಾಲ ದಿನ ಆಚರಿಸಲು ಎದುರು ನೋಡುತ್ತೇವೆ! ಇದೇ ವೇಳೆ, ಇಂದು ಮತ್ತು 2024 ರ ಉದ್ದಕ್ಕೂ SID ಯಲ್ಲಿ ತೊಡಗಿಕೊಳ್ಳಲು ಎಲ್ಲರನ್ನೂ ಪ್ರೋತ್ಸಾಹಿಸುತ್ತೇವೆ!   

— ಜಾಕ್ವೆಲಿನ್ ಬೌಚೆರೆ, ಸುರಕ್ಷತಾ ವೇದಿಕೆಯ ಜಾಗತಿಕ ಮುಖ್ಯಸ್ಥೆ

ನಮ್ಮ ಡಿಜಿಟಲ್ ಯೋಗಕ್ಷೇಮ ಸಂಶೋಧನೆಯು ಹಿಂದಿನ ತಿಂಗಳುಗಳಲ್ಲಿ ನವಪೀಳಿಗೆಯವರ ಆನ್‌ಲೈನ್ ಅಪಾಯಗಳಿಗೆ ಒಡ್ಡಿಕೊಳ್ಳುವಿಕೆ, ಅವರ ಸಂಬಂಧಗಳು ಮತ್ತು ಅವರ ಆನ್‌ಲೈನ್ ಚಟುವಟಿಕೆಗಳಿಗೆ ಸಂಬಂಧಿಸಿದ ಅವರ ಆಲೋಚನೆಗಳ ಕುರಿತು ಕಂಡುಕೊಂಡ ಮಾಹಿತಿಯನ್ನು ಸೃಷ್ಟಿಸುತ್ತದೆ. ಒಂದು ಬ್ಲಾಗ್ ಪೋಸ್ಟ್‌ನಲ್ಲಿ ನಾವು ಹಂಚಿಕೊಳ್ಳಲು ಸಾಧ್ಯವಾಗಿರುವುದಕ್ಕಿಂತ ಬಹಳಷ್ಟು ವಿಷಯ ಸಂಶೋಧನೆಯಲ್ಲಿದೆ. ಡಿಜಿಟಲ್ ಯೋಗಕ್ಷೇಮ ಸೂಚ್ಯಂಕ ಮತ್ತು ಸಂಶೋಧನೆ ಕುರಿತ ಇನ್ನಷ್ಟು ಮಾಹಿತಿಗಾಗಿ, ನಮ್ಮ ವೆಬ್‌ಸೈಟ್ ಹಾಗೂ ಅಪ್‌ಡೇಟ್ ಮಾಡಿರುವ ಎಕ್ಸ್‌ಪ್ಲೇನರ್, ಸಂಶೋಧನೆಯ ಪೂರ್ಣ ಫಲಿತಾಂಶಗಳು ಮತ್ತು ಪ್ರತಿ ಆರು ದೇಶದ ಮಾಹಿತಿ ಚಿತ್ರಣಗಳನ್ನು ನೋಡಿ: ಆಸ್ಟ್ರೇಲಿಯಾ, ಫ್ರಾನ್ಸ್, ಜರ್ಮನಿ, ಭಾರತ, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್.

ಸುದ್ದಿಗೆ ಹಿಂತಿರುಗಿ