Snap Values

ಶಾಲೆಗೆ ಮರಳುವುದು ಮತ್ತು ಸುರಕ್ಷತಾ ಸಮಸ್ಯೆಗಳನ್ನು ವರದಿ ಮಾಡುವುದರ ಮಹತ್ವ

ಸೆಪ್ಟೆಂಬರ್ 3, 2024

ವಿಶ್ವದ ಬಹುತೇಕ ಭಾಗಗಳಲ್ಲಿ ಈಗ ಶಾಲೆಗಳು ಮರಳಿ ಆರಂಭವಾಗುತ್ತಿವೆ ಮತ್ತು ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ಸ್ ಮತ್ತು ಸೇವೆಗಳಿಗೆ ಸುರಕ್ಷತಾ ಕಳವಳಗಳನ್ನು ವರದಿ ಮಾಡುವುದರ ಮಹತ್ವದ ಕುರಿತು ಹದಿಹರೆಯದವರು, ಪೋಷಕರು ಮತ್ತು ಶಿಕ್ಷಕರಿಗೆ ಜ್ಞಾಪಿಸುವುದಕ್ಕೆ ಇದು ಅತ್ಯುತ್ತಮ ಸಮಯವಾಗಿದೆ. 

ದುರದೃಷ್ಟವಶಾತ್, ಯುವಜನತೆ ಸಮಸ್ಯೆಯ ವಿಷಯಕ್ಕೆ ಮತ್ತು ನಡವಳಿಕೆಗೆ ಒಡ್ಡಿಕೊಳ್ಳುವುದನ್ನು ಸಾಮಾನ್ಯೀಕರಿಸುತ್ತಿರುವುದರಿಂದ ಅಥವಾ ವರದಿ ಮಾಡುವುದನ್ನು ಕದ್ದುಮುಚ್ಚಿ ಮತ್ತೊಬ್ಬರ ರಹಸ್ಯ ಬಹಿರಂಗಪಡಿಸುವದು ಎಂಬಂತೆ ಪರಿಗಣಿಸುತ್ತಿರುವುದರಿಂದ, ಕಾಲಕ್ರಮೇಣ ವರದಿ ಮಾಡುವುದು ಒಂದಿಷ್ಟು ಅಪಖ್ಯಾತಿಯನ್ನು ಪಡೆದುಕೊಂಡಿದೆ. ಮತ್ತು ಆ ಭಾವನೆಗಳು ಡೇಟಾದಲ್ಲಿ ವ್ಯಕ್ತವಾಗಿವೆ. ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಹದಿಹರೆಯದವರು ಅಥವಾ ಯುವಜನರು ಆನ್‌ಲೈನ್ ಅಪಾಯವನ್ನು ಅನುಭವಿಸಿದ ಬಳಿಕ ಅದರ ಕುರಿತು ಒಬ್ಬರೊಂದಿಗೆ ಮಾತನಾಡಿದರು ಅಥವಾ ಕ್ರಮ ತೆಗೆದುಕೊಂಡರು, ಆದರೆ ಅಂತಹ ಐವರಲ್ಲಿ ಒಬ್ಬರು ಮಾತ್ರ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗೆ ಅಥವಾ ಸೇವೆಗೆ ಘಟನೆಯನ್ನು ವರದಿ ಮಾಡಿದರು ಎಂದು ನಮ್ಮ ಇತ್ತೀಚಿನ ಡಿಜಿಟಲ್ ಯೋಗಕ್ಷೇಮದ ಸಂಶೋಧನೆಯಿಂದ ತಿಳಿದುಬಂದಿದೆ. ತಂತ್ರಜ್ಞಾನ ಸಂಸ್ಥೆಗಳು ಕೆಟ್ಟವರನ್ನು ತಮ್ಮ ಸೇವೆಗಳಿಂದ ತೆಗೆದುಹಾಕಲು ಮತ್ತು ಇತರರಿಗೆ ಅದು ಸಂಭಾವ್ಯತಃ ಹಾನಿ ಉಂಟುಮಾಡುವುದಕ್ಕೆ ಮೊದಲು ಇನ್ನಷ್ಟು ಚಟುವಟಿಕೆಯನ್ನು ತಡೆಗಟ್ಟಲು ನೆರವಾಗುವುದಕ್ಕಾಗಿ ಸಮಸ್ಯಾತ್ಮಕ ವಿಷಯ ಮತ್ತು ಖಾತೆಗಳನ್ನು ವರದಿ ಮಾಡುವುದು ನಿರ್ಣಾಯಕವಾಗಿ ಮುಖ್ಯವಾಗಿದೆ.    

ಕೇವಲ Snapchat ಮಾತ್ರವಲ್ಲದೆ – ಯಾವುದೇ ಪ್ಲ್ಯಾಟ್‌ಫಾರ್ಮ್ ಅಥವಾ ಸೇವೆಯಲ್ಲಿ ಒಂದು ಆನ್‌ಲೈನ್ ಅಪಾಯಕ್ಕೆ ಎದುರಾದ ಆರು ದೇಶಗಳಲ್ಲಿನ ನವಪೀಳಿಗೆಯ ಹದಿಹರೆಯದವರು ಮತ್ತು ಯುವಜನರಲ್ಲಿ ಸುಮಾರು 60% 1 ಜನರು – ಘಟನೆಯ ಬಳಿಕ ಒಬ್ಬರೊಂದಿಗೆ ಅದನ್ನು ಹೇಳಿಕೊಂಡರು ಅಥವಾ ಸಹಾಯ ಕೋರಿದರು ಎಂದು ಸಮೀಕ್ಷೆಯ ಫಲಿತಾಂಶಗಳಿಂದ ತಿಳಿದುಬಂದಿದೆ. 2023 ರ ಹೋಲಿಕೆಯಲ್ಲಿ ಇದು ಶೇಕಡಾ ಒಂಭತ್ತರಷ್ಟು ಸ್ವಾಗತಾರ್ಹ ಏರಿಕೆಯಾಗಿದೆ. ಅದಾಗ್ಯೂ, ಕೇವಲ 22% ಜನರು ಸಮಸ್ಯೆಯನ್ನು ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಅಥವಾ ಸೇವೆಗೆ ವರದಿ ಮಾಡಿದ್ದಾರೆ ಮತ್ತು ಕೇವಲ 21% ಜನರು ಕಾಣೆಯಾದ ಅಥವಾ ಶೋಷಣೆಗೊಳಗಾದ ಮಕ್ಕಳಿಗಾಗಿನ U.S. ರಾಷ್ಟ್ರೀಯ ಕೇಂದ್ರ (NCMEC) ಅಥವಾ UK ನ ಇಂಟರ್‌ನೆಟ್ ವಾಚ್ ಫೌಂಡೇಷನ್ (IWF) ರೀತಿಯ ಹಾಟ್‌ಲೈನ್ ಅಥವಾ ಸಹಾಯವಾಣಿಗೆ ವರದಿ ಮಾಡಿದ್ದಾರೆ. ಹದಿನೇಳು ಪ್ರತಿಶತ ಜನರು ಕಾನೂನು ಜಾರಿ ಸಂಸ್ಥೆಗೆ ವರದಿ ಮಾಡಿದ್ದಾರೆ. ದುರದೃಷ್ಟವಶಾತ್, ಏನಾಯಿತು ಎನ್ನುವ ಕುರಿತು 17% ಜನರು ಯಾರಿಗೂ ಹೇಳಲಿಲ್ಲ.        

ಒಬ್ಬರ ಜೊತೆ ಹೇಳಿಕೊಳ್ಳಲು ಅಥವಾ ವರದಿ ಮಾಡಲು ಯುವಜನರು ಯಾಕೆ ಹಿಂಜರಿಯುತ್ತಿದ್ದಾರೆ? ಭರ್ತಿ 62% – ಅಂದರೆ ಹದಿಹರೆಯವರಲ್ಲಿ ಮೂರನೇ ಎರಡರಷ್ಟು (65%) ಮತ್ತು ಯುವಜನರಲ್ಲಿ 60% ನಷ್ಟು – ಜನರು ಘಟನೆಯನ್ನು ಸಮಸ್ಯೆ ಎಂದು ತಾವು ಭಾವಿಸಲಿಲ್ಲ ಬದಲಾಗಿ “ಆನ್‌ಲೈನ್‌ನಲ್ಲಿ ಯಾವಾಗಲೂ ಜನರಿಗೆ ಆಗುತ್ತಿರುವ ಸಾಮಾನ್ಯ ಘಟನೆ” ಎಂದು ನಿರ್ಲಕ್ಷಿಸಿದ್ದಾಗಿ ಹೇಳಿದರು ಎಂಬುದನ್ನು ಡೇಟಾ ತೋರಿಸುತ್ತಿದೆ. ಕಾಲುಭಾಗದಷ್ಟು (26%) ಜನರು ದುಷ್ಕರ್ಮಿಗಳು ಯಾವುದೇ ಶಿಕ್ಷೆಯನ್ನು ಅನುಭವಿಸುತ್ತಾರೆ ಎಂದು ತಮಗೆ ಅನಿಸುವುದಿಲ್ಲ ಎಂದು ಹೇಳಿದರು. ಅವಮಾನ, ಅಪರಾಧಿ ಪ್ರಜ್ಞೆ ಅಥವಾ ಮುಜುಗರದ ಭಾವನೆಗಳು (17%), ನಕಾರಾತ್ಮಕವಾಗಿ ಟೀಕಿಸುವ ಭಯ (15%) ಮತ್ತು ಸ್ನೇಹಿತ ಅಥವಾ ಕುಟುಂಬ ಸದಸ್ಯರು "ಸಮಸ್ಯೆಗೆ ಸಿಲುಕಬಾರದು" ಎಂಬ ಭಾವನೆ (12%) ವರದಿ ಮಾಡದೆ ಇರುವುದಕ್ಕೆ ಇತರ ಅಗ್ರ ಶ್ರೇಣಿಯ ಕಾರಣಗಳಾಗಿವೆ. ಇದು ಕೆಲವು ಯುವಜನರ ಆನ್‌ಲೈನ್ ವಿಷಯ ಮಿತಿಗೊಳಿಸುವಿಕೆ ಮೌಲ್ಯಮಾಪನದ ಕುರಿತು ಪ್ರಶ್ನೆಯನ್ನು ಹುಟ್ಟುಹಾಕುತ್ತದೆ: ದುಷ್ಕರ್ಮಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಾವು ಭಾವಿಸುವುದಿಲ್ಲ ಎಂದು ಕಾಲುಭಾಗದಷ್ಟು ಪ್ರತಿಕ್ರಿಯಾದಾರರು ಹೇಳಿದರು, ಅದಾಗ್ಯೂ ಉಲ್ಲಂಘನೆಯ ನಡವಳಿಕೆಗಾಗಿ ಒಬ್ಬ ಸ್ನೇಹಿತ ಅಥವಾ ಕುಟುಂಬ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಯಾವು ಬಯಸುವುದಿಲ್ಲ ಎಂದು 10 ರಲ್ಲಿ ಒಂದಕ್ಕಿಂತ ಹೆಚ್ಚಿನವರು ಹೇಳಿದರು. ಅಲ್ಪ ಪ್ರಮಾಣದ ಜನರು (10%) ಘಟನೆಗೆ ತಾವೇ ಹೊಣೆ ಎಂದು ಹೇಳಿದರು ಅಥವಾ ದುಷ್ಮರ್ಮಿಗಳು ಪ್ರತೀಕಾರ ಎಸಗಬಹುದು (7%) ಎಂದು ಭಯಪಟ್ಟರು.     

Snapchat ನಲ್ಲಿ ವರದಿ ಮಾಡುವುದು

2024 ರಲ್ಲಿ ಮತ್ತು ಅದರಾಚೆಗೆ, ನಾವು ಕಟ್ಟುಕತೆಗಳನ್ನು ತೊಡೆದುಹಾಕಲಿದ್ದೇವೆ ಮತ್ತು Snapchat ನಲ್ಲಿ ವರದಿ ಮಾಡುವುದಕ್ಕೆ ಸಂಬಂಧಿಸಿ ಮನೋಧೋರಣೆ ಬದಲಾಯಿಸಲಿದ್ದೇವೆ ಹಾಗೂ ಶಾಲೆಗಳು ಮತ್ತು ಸಮುದಾಯಗಳಲ್ಲಿ ಆನ್‌ಲೈನ್ ಸುರಕ್ಷತೆ ಮತ್ತು ಡಿಜಿಟಲ್ ಯೋಗಕ್ಷೇಮವನ್ನು ಪ್ರಚಾರ ಮಾಡಲು ನೆರವಾಗುವುದಕ್ಕಾಗಿ ಆಯ್ಕೆ ಮಾಡಲಾಗಿರುವ U.S. ಆದ್ಯಂತದ 18 ವರ್ಷದ ಹದಿಹರೆಯದವರ ಸಮೂಹವಾದ ನಮ್ಮ ಹೊಸ ಡಿಜಿಟಲ್ ಯೋಗಕ್ಷೇಮಕ್ಕಾಗಿನ ಪರಿಷತ್ (CDWB) ಸಹಾಯವನ್ನು ನಾವು ಪಡೆಯಲಿದ್ದೇವೆ. 

"ಗೌಪ್ಯತೆ ಮತ್ತು ಬಳಕೆದಾರರ ಸುರಕ್ಷತೆ ನಡುವೆ ತೆಳುವಾದ ಗೆರೆಯಿದೆ" ಎಂದು ಕ್ಯಾಲಿಫೋರ್ನಿಯಾದ 16 ವರ್ಷ ವಯಸ್ಸಿನ CDWB ಸದಸ್ಯ ಜೆರೆಮಿ ಹೇಳುತ್ತಾರೆ. "ವರದಿ ಬಟನ್ ಆ ತೆಳುವಾದ ಗೆರೆಯನ್ನು ಸ್ಪಷ್ಟಪಡಿಸುತ್ತದೆ. ಇದು ಎಲ್ಲರಿಗೂ ಗೌಪ್ಯತೆಯನ್ನು ಕಾಯ್ದುಕೊಳ್ಳುತ್ತ Snapchat ಅನ್ನು ಸುರಕ್ಷಿತ ಸ್ಥಳವಾಗಿಸುವುದಕ್ಕೆ ನೆರವಾಗುತ್ತದೆ. ಆದಕಾರಣ Snapchat ಅನ್ನು ಇನ್ನಷ್ಟು ಸುರಕ್ಷಿತ ಸ್ಥಳವನ್ನಾಗಿ ಮಾಡಲು ನೆರವಾಗುವುದಕ್ಕೆ – ಅವಶ್ಯಕವಿರುವಲ್ಲಿ ಎಲ್ಲರೂ ವರದಿ ಮಾಡುವ ಬಟನ್ ಅನ್ನು ಬಳಸಬೇಕು."

CDWB ಯಲ್ಲಿರುವ ಕ್ಯಾಲಿಫೋರ್ನಿಯಾದ ಇನ್ನೊಬ್ಬ ಹದಿಹರೆಯದವರಾದ ಜೋಶ್, ಯಾವುದೇ ಪ್ಲ್ಯಾಟ್‌ಫಾರ್ಮ್ ಅಥವಾ ಸೇವೆಯಲ್ಲಿ ವರದಿ ಮಾಡುವುದರ ಪ್ರಯೋಜನಗಳನ್ನು ಒತ್ತಿ ಹೇಳುತ್ತಾರೆ: ಕಾನೂನುಬಾಹಿರ ಮತ್ತು ಸಂಭಾವ್ಯತಃ ಹಾನಿಕಾರಕ ವಿಷಯದ ಹರಡುವಿಕೆಯನ್ನು ತಡೆಯಲು ನೆರವಾಗುವುದು; ನಕಲಿ ಅಥವಾ ಸೋಗುಹಾಕುವ ಖಾತೆಗಳನ್ನು ತೆಗೆದುಹಾಕುವುದು; ಮತ್ತು ಸುಳ್ಳುಮಾಹಿತಿಯ ಪ್ರಸರಣವನ್ನು ತಡೆಯುವುದು. ಇಬ್ಬರೂ ಹದಿಹರೆಯದವರು ವರದಿ ಮಾಡುವಿಕೆಯ ಪ್ರಾಮುಖ್ಯತೆಯನ್ನು ಮುಂದಿನ ವರ್ಷದಲ್ಲಿ ತಮ್ಮ CDWB ಅನುಭವದ ಪ್ರಮುಖ ಗಮನವಾಗಿಸಲಿದ್ದಾರೆ.  

ಅದಾಗ್ಯೂ, Snapchat ಅನ್ನು ಪರಿಗಣಿಸುವಾಗ, ಸಂಶೋಧನೆಯಲ್ಲಿ ಹೈಲೈಟ್ ಮಾಡಲಾಗಿರುವ ಹಲವು ಕಳವಳಗಳು ನಿಜಕ್ಕೂ ಅನ್ವಯಿಸುವುದಿಲ್ಲ. ಉದಾಹರಣೆಗೆ, ನಮ್ಮ ಸೇವೆಯಲ್ಲಿ ವರದಿ ಮಾಡುವಿಕೆಯು ಗೌಪ್ಯವಾಗಿದೆ. ವರದಿ ಮಾಡಲ್ಪಟ್ಟ ಬಳಕೆದಾರನಿಗೆ ನಾವು ಅವರ ವಿಷಯ ಅಥವಾ ನಡವಳಿಕೆಯ ಕುರಿತು ಯಾರು ವರದಿ ಮಾಡಿದರು ಎಂದು ತಿಳಿಸುವುದಿಲ್ಲ. ವರದಿಗಳನ್ನು ಸ್ವೀಕರಿಸಿದಾಗ ನಾವು ಅವುಗಳ ಅಂಗೀಕಾರವನ್ನೂ ಮಾಡುತ್ತೇವೆ ಮತ್ತು ದೃಢೀಕರಿಸಿದ ಇಮೇಲ್ ವಿಳಾಸದಿಂದ ನಮಗೆ ಅದನ್ನು ಒದಗಿಸಿದವರಿಗೆ, ವರದಿ ಮಾಡಿದವರಿಗೆ ಅವರ ಸಲ್ಲಿಕೆಯು ನಿಜವಾಗಿ ಒಂದು ನೀತಿಯ ಉಲ್ಲಂಘನೆಯನ್ನು ಗುರುತಿಸಿದೆಯೇ ಎಂಬುದನ್ನು ನಾವು ತಿಳಿಸುತ್ತೇವೆ. ಇವೆಲ್ಲವೂ, ನಮ್ಮ ಆ್ಯಪ್‌ನಲ್ಲಿ ಅನುಮತಿಸಲಾಗಿರುವ ಮತ್ತು ನಿಷೇಧಿಸಲಾಗಿರುವ ನಡವಳಿಕೆ ಮತ್ತು ವಿಷಯದ ಕುರಿತು ನಮ್ಮ ಸಮುದಾಯಕ್ಕೆ ತಿಳುವಳಿಕೆ ನೀಡುವ ನಮ್ಮ ಪ್ರಯತ್ನದ ಭಾಗವಾಗಿವೆ. ಇದರ ಜೊತೆಗೆ, ಕಳೆದ ತಿಂಗಳು ನಾವು "ನನ್ನ ವರದಿಗಳು" ಎಂಬ ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದ್ದು ಇದು ಕಳೆದ 30 ದಿನಗಳಲ್ಲಿ ಸಲ್ಲಿಸಲಾದ ವಿಶ್ವಾಸ ಮತ್ತು ನಂಬಿಕೆ ಕುರಿತಾದ ಆ್ಯಪ್‌ನಲ್ಲಿನ ನಿಂದನೆ ವರದಿಗಳ ಸ್ಥಿತಿಯನ್ನು ಟ್ರ್ಯಾಕ್ ಮಾಡುವ ಸಾಮರ್ಥ್ಯವನ್ನು ಎಲ್ಲ Snapchatter ಗಳಿಗೆ ಒದಗಿಸುತ್ತದೆ. "ಸೆಟ್ಟಿಂಗ್‌ಗಳಲ್ಲಿ", "ನನ್ನ ಖಾತೆ" ಅಡಿಯಲ್ಲಿ "ನನ್ನ ವರದಿಗಳು" ಎಂಬಲ್ಲಿಗೆ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ನೋಡಲು ಕ್ಲಿಕ್ ಮಾಡಿ.   

ನಿಷೇಧಿತ ವಿಷಯ ಮತ್ತು ಕ್ರಮಗಳನ್ನು ನಮ್ಮ ಕಮ್ಯನಿಟಿ ಮಾರ್ಗಸೂಚಿಗಳಲ್ಲಿ ವಿವರಿಸಲಾಗಿದೆ ಮತ್ತು ನಾವು ಯಾವಾಗಲೂ ನಿಖರ ಮತ್ತು ಸಕಾಲಿಕ ವರದಿ ಮಾಡುವಿಕೆಯನ್ನು ಪ್ರೋತ್ಸಾಹಿಸಲು ಬಯಸುತ್ತೇವೆ. Snapchat ನಂತಹ ಖಾಸಗಿ ಮೆಸೇಜಿಂಗ್ ಮೇಲೆ ಗಮನ ಕೇಂದ್ರಿಕರಿಸಿರುವ ಆ್ಯಪ್‌ನಲ್ಲಿ, ಸಮುದಾಯವು ವರದಿ ಮಾಡುವುದು ಬಹಳ ಮುಖ್ಯವಾಗಿದೆ. ಒಂದು ಘಟನೆ ನಡೆಯುತ್ತಿದೆ ಎನ್ನುವುದನ್ನು ನಾವು ತಿಳಿಯದ ಹೊರತು ಅದನ್ನು ನಾವು ಪರಿಹರಿಸಲಾಗದು. ಮತ್ತು ನಮ್ಮ CDWB ಸದಸ್ಯರು ಹೇಳುವಂತೆ, ವರದಿ ಮಾಡುವುದು ಸಂಭಾವ್ಯ ಉಲ್ಲಂಘನೆಗೆ ಗುರಿಯಾದವರಿಗಷ್ಟೇ ಅಲ್ಲ ಜೊತೆಗೆ ಅದೇ ದುಷ್ಕರ್ಮಿಯಿಂದ(ಗಳಿಂದ) ಸಂಭಾವ್ಯತಃ ಸಂತ್ರಸ್ತರಾಗುವವರಿಗೂ ಸಹಾಯ ಮಾಡಬಲ್ಲದು. Snap ನಲ್ಲಿ ವರದಿ ಮಾಡುವುದನ್ನು ನಾವು "ಕಮ್ಯುನಿಟಿ ಸೇವೆ" ಎಂದು ಪರಿಗಣಿಸುತ್ತೇವೆ. ಆ್ಯಪ್‌ನಲ್ಲಿ ಒಂದು ವಿಷಯದ ತುಣುಕನ್ನು ಒತ್ತಿ ಹಿಡಿಯುವ ಮೂಲಕ ಅಥವಾ ನಮ್ಮ ಬೆಂಬಲ ಸೈಟ್‌ನಲ್ಲಿ ಈ ನಮೂನೆಯನ್ನು ಭರ್ತಿ ಮಾಡುವ ಮೂಲಕ Snapchatter ಗಳು ವರದಿ ಮಾಡಬಹುದು . 

ಪೋಷಕರು, ಆರೈಕೆ ಮಾಡುವವರು, ಶಿಕ್ಷಕರು ಮತ್ತು ಶಾಲಾ ಅಧಿಕಾರಿಗಳೂ ಕೂಡ ಸಾರ್ವಜನಿಕ ವೆಬ್‌ಫಾರ್ಮ್ ಅನ್ನು ಬಳಸಿಕೊಳ್ಳಬಹುದು ಮತ್ತು ನಮ್ಮ ಪೋಷಕರ ಟೂಲ್‌ಗಳ ಕೌಟುಂಬಿಕ ಕೇಂದ್ರ ಸೂಟ್ ಅನ್ನು ಬಳಸುವವರು ಕಳವಳಕಾರಿ ಖಾತೆಗಳನ್ನು ವೈಶಿಷ್ಟ್ಯದಲ್ಲಿ ನೇರವಾಗಿ ವರದಿ ಮಾಡಬಹುದು. ತಮ್ಮ ವಿದ್ಯಾರ್ಥಿಗಳಿಗಾಗಿ ಆರೋಗ್ಯಕರ ಮತ್ತು ಬೆಂಬಲದ ಡಿಜಿಟಲ್ ವಾತಾವರಣಗಳನ್ನು ವರ್ಧಿಸಲು ಶಾಲಾ ಅಧಿಕಾರಿಗಳಿಗೆ ಇನ್ನಷ್ಟು ನೆರವಾಗುವುದಕ್ಕಾಗಿ ಇತ್ತೀಚೆಗೆ ನಾವು Snapchat ಗೆ ಈ ಶಿಕ್ಷಕರ ಮಾರ್ಗದರ್ಶಿಯನ್ನು ಕೂಡ ಆರಂಭಿಸಿದ್ದೇವೆ. ನೀವು Snapchat ಅಕೌಂಟ್ ಹೊಂದಿದ್ದೀರೇ ಇಲ್ಲವೇ ಎಂಬುದನ್ನು ಪರಿಗಣಿಸದೆ ವರದಿ ಮಾಡುವುದು ಹೇಗೆ ಎನ್ನುವುದರ ಕುರಿತು ಇನ್ನಷ್ಟು ಮಾಹಿತಿಗಾಗಿ, ಈ ಫ್ಯಾಕ್ಟ್ ಶೀಟ್ ಅನ್ನು ನೋಡಿ.   

ಸಕಾರಾತ್ಮಕ ಆನ್‌ಲೈನ್ ಅನುಭವಗಳನ್ನು ಪ್ರಚಾರ ಮಾಡುವುದು

Snapchat ನಲ್ಲಿ ಮತ್ತು ತಂತ್ರಜ್ಞಾನ ಪರಿಸರ ವ್ಯವಸ್ಥೆಯಾದ್ಯಂತ ಇನ್ನಷ್ಟು ಸುರಕ್ಷಿತ, ಆರೋಗ್ಯಕರ ಮತ್ತು ಇನ್ನಷ್ಟು ಸಕಾರಾತ್ಮಕ ಆನ್‌ಲೈನ್ ಅನುಭವಗಳನ್ನು ಪೋಷಿಸುವುದು Snap ನಲ್ಲಿ ಅಗ್ರ ಆದ್ಯತೆಯಾಗಿದೆ ಮತ್ತು ನಮ್ಮ ಸಮುದಾಯದ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ಆ ಗುರಿಯತ್ತ ಸಾಗಲು Snapchatter ಗಳ ಹಾಗೂ ಇತರ ಫ್ಲ್ಯಾಟ್‌ಫಾರ್ಮ್‌ಗಳನ್ನು ಬಳಸುವವರ ವರ್ತನೆ ಮತ್ತು ನಡವಳಿಕೆಗಳನ್ನು ಇನ್ನಷ್ಟು ಉತ್ತಮವಾಗಿ ಅರ್ಥಮಾಡಿಕೊಳ್ಳುವುದು ನಿರ್ಣಾಯಕವಾಗಿದೆ ಮತ್ತು ನಮ್ಮ ಚಾಲ್ತಿಯಲ್ಲಿರುವ ಸಂಶೋಧನೆಯ ಹಿಂದಿನ ಮುಖ್ಯ ಪ್ರೇರಣೆಯಾಗಿದೆ. 

ನಮ್ಮ ಇತ್ತೀಚಿನ ಡಿಜಿಟಲ್ ಯೋಗಕ್ಷೇಮ ಸೂಚ್ಯಂಕ ಸೇರಿದಂತೆ, ನಮ್ಮ ಮೂರನೆ ವರ್ಷದ ಅಧ್ಯಯನದ ಪೂರ್ಣ ಫಲಿತಾಂಶಗಳನ್ನು ಅಂತಾರಾಷ್ಟ್ರೀಯ ಸುರಕ್ಷಿತ ಇಂಟರ್‌ನೆಟ್ ದಿನ 2025 ರ ಸಂದರ್ಭ ಬಿಡುಗಡೆ ಮಾಡಲಾಗುತ್ತದೆ. ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿ ಇರುವುದರ ಪ್ರಾಮುಖ್ಯತೆಯ ಕುರಿತು ಕುಟುಂಬಗಳು ಮತ್ತು ಸಮುದಾಯಗಳಿಗೆ ಜ್ಞಾಪಿಸುವ ಸಲುವಾಗಿ, ಶಾಲೆಗೆ ಮರಳುವ ಸಮಯಾವಧಿಯಲ್ಲಿ ಕೆಲವು ಆರಂಭಿಕ ಅಂಕಿಅಂಶಗಳನ್ನು ನಾವು ಹಂಚಿಕೊಳ್ಳುತ್ತಿದ್ದೇವೆ.

ಸುರಕ್ಷಿತ ಇಂಟರ್‌ನೆಟ್ ದಿನ 2025, ಫೆಬ್ರವರಿ 11 ರಂದು – ಮತ್ತು ಅಲ್ಲಿಯವರೆಗಿನ ತಿಂಗಳುಗಳಲ್ಲಿ ನಾವು ಇನ್ನಷ್ಟು ವಿಷಯ ಹಂಚಿಕೊಳ್ಳುವುದನ್ನು ನಿರೀಕ್ಷಿಸುತ್ತೇವೆ. ಅಲ್ಲಿಯವರೆಗೆ, ಆನ್‌ಲೈನ್ ಸುರಕ್ಷತೆಯನ್ನು ಪ್ರಚಾರ ಮಾಡುತ್ತ ಶಾಲೆಗೆ ಮರಳೋಣ ಮತ್ತು ಕಳವಳಕಾರಿ ಆಗಿರಬಹುದಾದ ಯಾವುದೇ ವಿಷಯವನ್ನು – Snapchat ಅಥವಾ ಯಾವುದೇ ಆನ್‌ಲೈನ್ ಸೇವೆಗೆ ವರದಿ ಮಾಡಲು ಸಿದ್ಧರಾಗಿರೋಣ ಮತ್ತು ಸಜ್ಜಾಗಿರೋಣ.

— ಜಾಕ್ವೆಲಿನ್ ಎಫ್. ಬೌಷೆರೆ, ಫ್ಲ್ಯಾಟ್‌ಫಾರ್ಮ್ ಸುರಕ್ಷತೆಯ ಜಾಗತಿಕ ಮುಖ್ಯಸ್ಥೆ

ಸುದ್ದಿಗಳಿಗೆ ಹಿಂತಿರುಗಿ

ಉಲ್ಲೇಖಗಳು

1

ಅಧ್ಯಯನಕ್ಕಾಗಿ ಆಸ್ಟ್ರೇಲಿಯಾ, ಫ್ರಾನ್ಸ್, ಜರ್ಮನಿ, ಭಾರತ, UK ಮತ್ತು U.S. ನ 13 ರಿಂದ 17 ವರ್ಷ ವಯಸ್ಸಿನ ಹಾಗೂ 18 ರಿಂದ 24 ವರ್ಷ ವಯಸ್ಸಿನವರ ಅಭಿಪ್ರಾಯ ಸಂಗ್ರಹಿಸಲಾಗಿದೆ ಮತ್ತು 2024 ರ ಜೂನ್ 3 ಹಾಗೂ ಜೂನ್ 19 ರ ನಡುವೆ ಅಧ್ಯಯನವನ್ನು ನಡೆಸಲಾಗಿದೆ. ಈ ಸಂಶೋಧನೆಯು ಕೇವಲ Snapchat ಮಾತ್ರವಲ್ಲದೆ ಎಲ್ಲ ಪ್ಲ್ಯಾಟ್‌ಫಾರ್ಮ್ಸ್, ಸೇವೆಗಳು ಮತ್ತು ಸಾಧನಗಳಲ್ಲಿ ನವಪೀಳಿಗೆಯವರು ಮತ್ತು ಯುವಜನರ ಡಿಜಿಟಲ್ ಯೋಗಕ್ಷೇಮವನ್ನು ಪರಿಶೀಲಿಸುವ Snap ನ ಮೂರನೇ ವರ್ಷದ ಪ್ರಯತ್ನದ ಭಾಗವಾಗಿದೆ.

ಉಲ್ಲೇಖಗಳು
1

ಅಧ್ಯಯನಕ್ಕಾಗಿ ಆಸ್ಟ್ರೇಲಿಯಾ, ಫ್ರಾನ್ಸ್, ಜರ್ಮನಿ, ಭಾರತ, UK ಮತ್ತು U.S. ನ 13 ರಿಂದ 17 ವರ್ಷ ವಯಸ್ಸಿನ ಹಾಗೂ 18 ರಿಂದ 24 ವರ್ಷ ವಯಸ್ಸಿನವರ ಅಭಿಪ್ರಾಯ ಸಂಗ್ರಹಿಸಲಾಗಿದೆ ಮತ್ತು 2024 ರ ಜೂನ್ 3 ಹಾಗೂ ಜೂನ್ 19 ರ ನಡುವೆ ಅಧ್ಯಯನವನ್ನು ನಡೆಸಲಾಗಿದೆ. ಈ ಸಂಶೋಧನೆಯು ಕೇವಲ Snapchat ಮಾತ್ರವಲ್ಲದೆ ಎಲ್ಲ ಪ್ಲ್ಯಾಟ್‌ಫಾರ್ಮ್ಸ್, ಸೇವೆಗಳು ಮತ್ತು ಸಾಧನಗಳಲ್ಲಿ ನವಪೀಳಿಗೆಯವರು ಮತ್ತು ಯುವಜನರ ಡಿಜಿಟಲ್ ಯೋಗಕ್ಷೇಮವನ್ನು ಪರಿಶೀಲಿಸುವ Snap ನ ಮೂರನೇ ವರ್ಷದ ಪ್ರಯತ್ನದ ಭಾಗವಾಗಿದೆ.