ಪರಿಚಯಿಸುತ್ತಿದ್ದೇವೆ ಡಿಜಿಟಲ್ ಯೋಗಕ್ಷೇಮಕ್ಕಾಗಿ Snap ನ ಆರಂಭಿಕ ಪರಿಷತ್
ಆಗಸ್ಟ್ 8, 2024

ಆನ್‌ಲೈನ್‌ನಲ್ಲಿ ಹದಿಹರೆಯದವರ ಇಂದಿನ ಬದುಕಿನ ಸ್ಥಿತಿಯ ಕುರಿತು ಅವರಿಂದ ಆಲಿಸಲು ಹಾಗೂ ಇನ್ನಷ್ಟು ಸಕಾರಾತ್ಮಕ ಮತ್ತು ಫಲದಾಯಕ ಆನ್‌ಲೈನ್ ಅನುಭವಗಳ ಕುರಿತು ಅವರ ನಿರೀಕ್ಷೆಗಳು ಮತ್ತು ಆದರ್ಶಗಳನ್ನು ತಿಳಿದುಕೊಳ್ಳಲು U.S. ನಲ್ಲಿ ವಿನ್ಯಾಸಗೊಳಿಸಲಾಗಿರುವ ಪ್ರಾಯೋಗಿಕ ಪ್ರೊಗ್ರಾಂ ಆಗಿರುವ ಡಿಜಿಟಲ್ ಯೋಗಕ್ಷೇಮಕ್ಕಾಗಿ Snap ನ ಆರಂಭಿಕ ಪರಿಷತ್‌ನ ಆಯ್ಕೆಯನ್ನು ಈ ವರ್ಷದ ಆರಂಭದಲ್ಲಿ ನಾವು ಪ್ರಕಟಿಸಿದೆವು. ಮೇ ತಿಂಗಳಿನಲ್ಲಿ, ಪರಿಷತ್ ಚಟುವಟಿಕೆಗಳನ್ನು ನಾವು ಅಧಿಕೃತವಾಗಿ ಆರಂಭಿಸಿದೆವು ಮತ್ತು ಈ ವಿಚಾರಪೂರ್ಣ ಮತ್ತು ತೊಡಗಿಕೊಳ್ಳುವ ಗುಂಪನ್ನು ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ.
ಡಿಜಿಟಲ್ ಯೋಗಕ್ಷೇಮಕ್ಕಾಗಿ ಪರಿಷತ್ ಅನ್ನು U.S. ಆದ್ಯಂತದ 12 ರಾಜ್ಯಗಳ 18 ಹದಿಹರೆಯದವರಿಂದ ರಚಿಸಲಾಗಿದೆ:
ಅಲೆಕ್ಸ್, 15 ವರ್ಷ, ಟೆಕ್ಸಾಸ್
ಆ್ಯನಾ, 13 ವರ್ಷ, ವಿಸ್ಕಾನ್ಸಿನ್
ಬ್ರಿಯೆಲ್, 14 ವರ್ಷ, ಕೊಲೊರಾಡೊ
ಡಿನು, 16 ವರ್ಷ, ನ್ಯೂ ಜೆರ್ಸಿ
ಜಹಾನ್, 14 ವರ್ಷ, ಪೆನ್ಸಿಲ್ವೇನಿಯಾ
ಜೇಲಿನ್, 16 ವರ್ಷ; ಫೀಬಿ, 15 ವರ್ಷ; ವ್ಯಾಲೆಂಟಿನಾ, 14 ವರ್ಷ, ಎಲ್ಲರೂ ನ್ಯೂಯಾರ್ಕ್‌ನವರು
ಜೆರೆಮಿ, 16 ವರ್ಷ; ಜಾಷ್, 14 ವರ್ಷ; ಕ್ಯಾಟೆಲಿನ್, 15 ವರ್ಷ; ಮೋನಾ, 16 ವರ್ಷ; ಓವೀ, 14 ವರ್ಷ, ಎಲ್ಲರೂ ಕ್ಯಾಲಿಫೋರ್ನಿಯಾದವರು
ಮ್ಯಾಕ್ಸ್, 15 ವರ್ಷ, ವಾಷಿಂಗ್ಟನ್
ಮೋನಿಶ್, 17 ವರ್ಷ, ಇಲಿನಾಯ್ಸ್
ನದೀನ್, 16 ವರ್ಷ, ವರ್ಜೀನಿಯಾ
ಸಲ್ಸಾಬೀಲ್, 15 ವರ್ಷ, ಫ್ಲೋರಿಡಾ
ಟಾಮಿ, 16 ವರ್ಷ, ವರ್ಮೊಂಟ್
ಪ್ರೊಗ್ರಾಂ ಮತ್ತು ಅದಕ್ಕಾಗಿ ಪರಿಷತ್ ಸದಸ್ಯರ ಆಕಾಂಕ್ಷೆಗಳ ಕುರಿತು ಚರ್ಚಿಸಲು, ಗುಂಪಿನ ನಿಯಮಗಳನ್ನು ರೂಪಿಸಲು ಮತ್ತು ಸಾಮಾಜಿಕ ಮಾಧ್ಯಮ ಕುರಿತ ಸರ್ಜನ್ ಜನರಲ್ ಅವರ ಇತ್ತೀಚಿನ ಎಚ್ಚರಿಕೆ ಸಂದೇಶಗಳು ಸೇರಿದಂತೆ, ವಿವಿಧ ಆನ್‌ಲೈನ್ ಸುರಕ್ಷತೆಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲು ಮೇ ತಿಂಗಳಿನಿಂದ ನಾವು ಎರಡು ಸಹಭಾಗಿತ್ವದ ಕರೆಗಳನ್ನು ಆಯೋಜಿಸಿದೆವು. ಇತರರ ಮೇಲೆ ಅವಲಂಬಿತರಾಗುವ ಬದಲಾಗಿ "ತಮ್ಮ ಸ್ವಂತ ಬದುಕಿನ ಜವಾಬ್ದಾರಿಯನ್ನು ಸ್ವತಃ ವಹಿಸಿಕೊಳ್ಳಲು" ಹದಿಹರೆಯದವರು ಬಯಸುತ್ತಾರೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು, ಆನ್‌ಲೈನ್ ಅನುಭವಗಳ ಮೂಲಕ ನ್ಯಾವಿಗೇಟ್ ಮಾಡಲು ಸಹವರ್ತಿಗಳ ಸಲಹೆಯ ಮೌಲ್ಯದ ಕುರಿತು ಪರಿಷತ್ ಸದಸ್ಯರು ನಿರಂತರವಾಗಿ ಹೇಳಿದರು.
ಜುಲೈನಲ್ಲಿ ನಾವು ಪರಿಷತ್ ಸದಸ್ಯರು ಮತ್ತು ಅವರ ಪೋಷಕರನ್ನು ಮುಖಾಮುಖಿ ಶೃಂಗಸಭೆಗಾಗಿ ಕ್ಯಾಲಿಫೋರ್ನಿಯಾದ ಸಂತಾ ಮೋನಿಕಾದಲ್ಲಿನ Snap ಪ್ರಧಾನ ಕಚೇರಿಗೆ ಆಹ್ವಾನಿಸಿದೆವು. ಅದು ಗಹನವಾದ ವಿಚಾರವಿಮರ್ಶೆಗಳು, ಪೂರ್ಣ ಗುಂಪಿನ ಚರ್ಚೆಗಳು, ಅತಿಥಿ ಭಾಷಣಕಾರರು ಮತ್ತು ಬಹಳಷ್ಟು ವಿನೋದದ ಆತ್ಮೀಯ ಸಮಯದೊಂದಿಗೆ ಉಲ್ಲಾಸದಾಯಕವಾಗಿತ್ತು. ವಿವಿಧ ಪಾತ್ರಗಳು ಮತ್ತು ತಂಡಗಳನ್ನು ಪ್ರತಿನಿಧಿಸುವ ನಮ್ಮ Snap ಸಹೋದ್ಯೋಗಿಗಳ 18 ಜನರೊಂದಿಗೆ "ವೇಗದ ಮಾರ್ಗದರ್ಶನ" ಅಧಿವೇಶನದ ಮೂಲಕ ತಂತ್ರಜ್ಞಾನ ಕಂಪನಿಯಲ್ಲಿ ಕೆಲಸ ಮಾಡುವುದು ಹೇಗಿರುತ್ತದೆ ಎನ್ನುವ ಕುರಿತ ಇನ್ನಷ್ಟು ಉತ್ತಮ ತಿಳುವಳಿಕೆಯನ್ನು ಕೂಡ ಹದಿಹರೆಯದವರು ಪಡೆದುಕೊಂಡರು.
ಆನ್‌ಲೈನ್ ನ್ಯೂನತೆಗಳು, ಪೋಷಕರ ಟೂಲ್‌ಗಳು ಮತ್ತು ಡಿಜಿಟಲ್ ಹಾಗೂ ಮುಖತಃ ಸಾಮಾಜಿಕ ಆಯಾಮಗಳ ನಡುವಿನ ಭಿನ್ನತೆಗಳು ಮತ್ತು ಸಾಮ್ಯತೆಗಳಂತಹ ವಿಷಯಗಳ ಕುರಿತು ಶೃಂಗಸಭೆಯು ಆಸಕ್ತಿಕರ ಸಂಭಾಷಣೆಗಳು ಮತ್ತು ಒಳನೋಟಗಳನ್ನು ಕೂಡ ಒದಗಿಸಿತು. ನಮ್ಮ ಜೊತೆಯಾಗಿರುವ ಸಮಯದ ಅಂತ್ಯದ ವೇಳೆಗೆ, ಪೋಷಕರು ಸೇರಿದಂತೆ ಪೂರ್ಣ ಗುಂಪು, ತಮ್ಮ ಸ್ಥಳೀಯ ಸಮುದಾಯಗಳ ಜೊತೆಗೆ ಇನ್ನಷ್ಟು ತೊಡಗಿಕೊಳ್ಳಲು ಮತ್ತು ಆನ್‌ಲೈನ್ ಸುರಕ್ಷತೆಯ ರಾಯಭಾರಿಗಳಾಗಿ ವರ್ತಿಸಲು ಅತ್ಯಂತ ಪ್ರೇರಣೆಗೊಂಡಿದ್ದರು. ನಾವೆಲ್ಲರೂ ಅನುಭವಿಸಿದ ನೈತಿಕತೆಯ ಭಾವವನ್ನು ಪರಿಷತ್‌ನ ಒಬ್ಬ ಸದಸ್ಯರ ಈ ಮಾತು ನಿಖರವಾಗಿ ಪ್ರತಿಬಿಂಬಿಸುತ್ತದೆ: "[ಅ]ದಾಗ್ಯೂ...ಸಾಮಾಜಿಕ ಮಾಧ್ಯಮಕ್ಕೆ ಸಂಬಂಧಿಸಿದ ಪ್ರತಿ ಸಮಸ್ಯೆಯ ಕುರಿತು ಪೋಷಕರು ಮತ್ತು ಹದಿಹರೆಯದವರು ಮುಖಾಮುಖಿಯಾಗದಿರಬಹುದು, ಆದರೆ ಡಿಜಿಟಲ್ ಆಗಿ ನಾವು ಸಾಧ್ಯವಾಗಬಹುದಾದ ನಮ್ಮ ಅತ್ಯುತ್ತಮ ಸ್ವರೂಪವನ್ನು ಪಡೆಯಲು ಪರಸ್ಪರರ ಜೊತೆ ಕೆಲಸ ಮಾಡಲು ಮತ್ತು ಪರಸ್ಪರರನ್ನು ಬೆಂಬಲಿಸಲು ನಾವು ಸಹಮತ ಹೊಂದಿದ್ದೇವೆ."
ಶೃಂಗಸಭೆಯ ನಮ್ಮ ಮುಖ್ಯಾಂಶಗಳನ್ನು ಮತ್ತು ಮುಂಬರುವ ದಿನಗಳಿಗಾಗಿ ಪರಿಷತ್ ಸದಸ್ಯರು ಏನು ಯೋಜನೆ ಮಾಡಿದ್ದಾರೆ ಎನ್ನುವುದನ್ನು ನಾವು ಶೀಘ್ರ ಹಂಚಿಕೊಳ್ಳುತ್ತೇವೆ. ಈ ಕ್ರಿಯಾಶೀಲ ಗುಂಪಿನಿಂದ ಇನ್ನಷ್ಟನ್ನು ಆಲಿಸಲು ನಿರೀಕ್ಷಿಸುತ್ತಿರಿ!
- ವಿರಾಜ್ ದೋಷಿ, ಪ್ಲ್ಯಾಟ್‌ಫಾರ್ಮ್ ಸುರಕ್ಷತೆ ಮುಖ್ಯಸ್ಥ