Snap Values

ಭಾರತ

ಬಿಡುಗಡೆ ಮಾಡಿರುವುದು: 12 ಜನವರಿ 2024

ನವೀಕರಿಸಿರುವುದು: 12 ಜನವರಿ 2024

Snapchat ನಲ್ಲಿ ಆನ್‌ಲೈನ್ ಸುರಕ್ಷತೆ

Snapchat ನಲ್ಲಿ ನಾವು ಸೃಜನಶೀಲತೆ ಮತ್ತು ಅಭಿವ್ಯಕ್ತಿಗಾಗಿ ಸುರಕ್ಷಿತ, ವಿನೋದಮಯ ವಾತಾವರಣವನ್ನು ಒದಗಿಸಲು ಶ್ರಮಿಸುತ್ತೇವೆ. ನಮ್ಮ ವೇದಿಕೆಯಾದ್ಯಂತ, ನಮ್ಮ ಸಮುದಾಯದ ಗೌಪ್ಯತೆಯ ಹಿತಾಸಕ್ತಿಗಳನ್ನು ಗೌರವಿಸುವುದರೊಂದಿಗೆ ಸುರಕ್ಷತೆಯನ್ನು ಸುಧಾರಿಸಲು ನಾವು ಬದ್ಧರಾಗಿದ್ದೇವೆ. ಈ ಕೆಳಗಿನವುಗಳ ಕುರಿತಾಗಿ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮ್ಮ ಸುರಕ್ಷತಾ ಕೇಂದ್ರಕ್ಕೆ ಭೇಟಿ ನೀಡಿ:

Snap ನ ಸುರಕ್ಷತಾ ನೀತಿಗಳು ಮತ್ತು ಅಭ್ಯಾಸಗಳ ಕುರಿತು ನೀವು ಹೊಂದಿರಬಹುದಾದ ಯಾವುದೇ ಪ್ರಶ್ನೆಗಳು, ಕಳವಳಗಳು ಅಥವಾ ದೂರುಗಳೊಂದಿಗೆ ನೀವು ಯಾವಾಗಲೂ ನಮ್ಮನ್ನು ಇಲ್ಲಿ ಸಂಪರ್ಕಿಸಬಹುದು. 


ನಿಷೇಧಿತ ವಿಷಯ

ಎಲ್ಲಾ Snapchatter ಗಳು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳನ್ನು ಒಳಗೊಂಡಂತೆ ನಮ್ಮ ಸೇವೆಯ ನಿಯಮಗಳನ್ನು ಪಾಲಿಸಬೇಕು. ಈ ನಿಯಮಗಳು Snapchat ನಲ್ಲಿನ ಎಲ್ಲ ವಿಷಯ ಮತ್ತು ನಡವಳಿಕೆಗೆ — ಹಾಗೂ ಎಲ್ಲ Snapchatter ಗಳಿಗೆ ಅನ್ವಯಿಸುತ್ತವೆ.  ನಿಮ್ಮ ನ್ಯಾಯಾಧಿಕಾರ ವ್ಯಾಪ್ತಿಯಲ್ಲಿ ಕಾನೂನುಬಾಹಿರವಾಗಿರುವ ವಿಷಯವನ್ನು ಕಳುಹಿಸಲು ಅಥವಾ ಪೋಸ್ಟ್ ಮಾಡಲು ಅಥವಾ ಯಾವುದೇ ಕಾನೂನುಬಾಹಿರ ಚಟುವಟಿಕೆಗೆ Snapchat ಬಳಸುವುದನ್ನು ಅವು ನಿಷೇಧಿಸುತ್ತವೆ. ಭಾರತದಲ್ಲಿ, ಇದು ಭಾರತೀಯ ಕಾನೂನನ್ನು ಉಲ್ಲಂಘಿಸುವ ವಿಷಯಗಳನ್ನು ಒಳಗೊಂಡಿದೆ, ಉದಾಹರಣೆಗೆ 2021ರಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ)ನಿಯಮಗಳ ನಿಯಮ 3(1)(b). 

Snapchat ನಲ್ಲಿ ನಿಷೇಧಿಸಲಾಗಿರುವ ವಿಷಯಗಳಲ್ಲಿ ಇವು ಒಳಗೊಂಡಿದೆ:

  • ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯದ ಚಿತ್ರಣ (CSEAI); ವಯಸ್ಕರ ಅಶ್ಲೀಲ ವಿಷಯವಸ್ತು; ಮತ್ತು ಮಕ್ಕಳಿಗೆ ಹಾನಿಕರವಾದ ಇತರ ವಿಷಯ ಸೇರಿದಂತೆ, ಲೈಂಗಿಕ ವಿಷಯ

  • ಲಿಂಗ, ಜನಾಂಗ, ಕುಲ, ಮತ ಅಥವಾ ಜಾತಿಗೆ ಸಂಬಂಧಿಸಿರುವುದು ಸೇರಿದಂತೆ, ದ್ವೇಷಮಯ, ತಾರತಮ್ಯದ, ಭಯೋತ್ಪಾದಕ ಮತ್ತು ತೀವ್ರವಾದದ ವಿಷಯ

  • ಕಿರುಕುಳ, ಬೆದರಿಸುವಿಕೆ ಮತ್ತು ಗೌಪ್ಯತೆಯ ಅತಿಕ್ರಮಣ

  • ಸುಳ್ಳುಮಾಹಿತಿ, ಸುಳ್ಳು ಸುದ್ದಿ ಮತ್ತು "ಡೀಪ್‌ಫೇಕ್‌ಗಳು" ಸೇರಿದಂತೆ ಹಾನಿಕಾರಕ ಸುಳ್ಳು ಅಥವಾ ವಂಚನೆಯ ಮಾಹಿತಿ 

  • ಅಪರಾಧ ಚಟುವಟಿಕೆಗಳು, ನಿಯಂತ್ರಿತ ಸರಕುಗಳು ಅಥವಾ ಉದ್ಯಮಗಳ (ಉದಾಹರಣೆಗೆ ಜೂಜು) ಕಾನೂನುಬಾಹಿರ ಪ್ರಚಾರ ಮತ್ತು ಅಕ್ರಮ ಹಣ ವರ್ಗಾವಣೆ ಸೇರಿದಂತೆ ಕಾನೂನುಬಾಹಿರ ಮತ್ತು ನಿಯಂತ್ರಿತ ಚಟುವಟಿಕೆಗಳು 

  • ಗುರುತು ಕಳವು, ಸೋಗುಹಾಕುವಿಕೆ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳ ಉಲ್ಲಂಘನೆ ಸೇರಿದಂತೆ ವಂಚನೆಯ ನಡವಳಿಕೆ 

  • ಸ್ಪ್ಯಾಮ್ ಮತ್ತು ದುರುದ್ದೇಶಪೂರಿತ ಸಾಫ್ಟ್‌ವೇರ್‌ನ (ಮಾಲ್‌ವೇರ್) ವಿತರಣೆ

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮ್ಮ ಸೇವೆಯ ನಿಯಮಗಳು ಮತ್ತು ಕಮ್ಯುನಿಟಿ ಮಾರ್ಗಸೂಚಿಗಳನ್ನು ಪರಿಶೀಲಿಸಿ.


ನಿಷೇಧಿತ ವಿಷಯವನ್ನು ಹಂಚಿಕೊಳ್ಳುವುದರ ಪರಿಣಾಮಗಳು 

ಮೇಲೆ ವಿವರಿಸಿದ ಕೆಟಗರಿಗಳ ವಿಷಯವನ್ನು ಹಂಚಿಕೊಳ್ಳುವುದು Snap ನ ಕಮ್ಯುನಿಟಿ ಮಾರ್ಗಸೂಚಿಗಳು ಮತ್ತು ಸೇವೆಯ ನಿಯಮಗಳನ್ನು ಉಲ್ಲಂಘಿಸುತ್ತದೆ ಹಾಗೂ ಭಾರತೀಯ ದಂಡ ಸಂಹಿತೆ, IT ಕಾಯ್ದೆ 2000, ಗ್ರಾಹಕರ ಸಂರಕ್ಷಣಾ ಕಾಯ್ದೆ, ಅಪ್ರಾಪ್ತವಯಸ್ಕ ನ್ಯಾಯ ಕಾಯ್ದೆ ಮತ್ತು ಇತರ ಸಂಬಂಧಿಸಿದ ಕಾನೂನುಗಳಂತಹ ಭಾರತೀಯ ಕಾನೂನುಗಳನ್ನು ಉಲ್ಲಂಘಿಸಬಹುದು. ಸೇವೆಯ ನಿಯಮಗಳು ಮತ್ತು ಕಮ್ಯುನಿಟಿ ಮಾರ್ಗಸೂಚಿಗಳಲ್ಲಿ ಸೂಚಿಸಿರುವಂತೆ, ಕಾನೂನಿನ ಉಲ್ಲಂಘನೆಗಳು ವಿಷಯ ತೆಗೆದುಹಾಕಲು; ಎಚ್ಚರಿಕೆ ನೀಡಲು; ಖಾತೆಯ ಅಮಾನತು ಅಥವಾ ಸಮಾಪ್ತಿಗೆ; ಮತ್ತು/ಅಥವಾ ಕಾನೂನು ಜಾರಿ ಸಂಸ್ಥೆಗೆ ಉಲ್ಲೇಖಿಸುವುದು, ಇಂತಹ ಮುಂತಾದ ಪರಿಣಾಮಗಳಿಗೆ ಕಾರಣವಾಗಬಹುದು.  


ಭಾರತ ಮಾಸಿಕ ಪಾರದರ್ಶಕತೆಯ ವರದಿಗಳು

ಪ್ರತಿ ತಿಂಗಳು, ಮಾಸಿಕ ವರದಿ ಮಾಡುವಿಕೆ ಮತ್ತು ಕ್ರಮ ಜಾರಿಗೊಳಿಸುವಿಕೆ ವಿಷಯವನ್ನು ಒಳಗೊಂಡ ಭಾರತಕ್ಕಾಗಿನ ಪಾರದರ್ಶಕತೆಯ ವರದಿಯನ್ನು ನಾವು ಪ್ರಕಟಿಸುತ್ತೇವೆ, ಅದನ್ನು ನಂತರ ನಮ್ಮ ಅರ್ಧವಾರ್ಷಿಕ ಪಾರದರ್ಶಕತೆಯ ವರದಿಯಲ್ಲಿ ಸೇರಿಸಲಾಗುತ್ತದೆ.