ಯುರೋಪ್ ಮತ್ತು UK ನಲ್ಲಿ ನಮ್ಮ ಜಾಹೀರಾತು ನೀತಿಯನ್ನು ನವೀಕರಿಸುತ್ತಿದ್ದೇವೆ

ಜುಲೈ 24, 2023

Snapchat ಹಲವಾರು ಯುವಜನರಿಗೆ ಒಂದು ಮುಖ್ಯ ಸಂವಹನಾ ವೇದಿಕೆಯಾಗಿದೆ ಮತ್ತು ನಮ್ಮ ಯುವ ಸಮುದಾಯಕ್ಕೆ ನಮ್ಮ ಜವಾಬ್ದಾರಿಯನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ಗೌಪ್ಯತೆ, ಸುರಕ್ಷತೆ ಮತ್ತು ಪಾರದರ್ಶಕತೆ ಯಾವಾಗಲೂ ನಮ್ಮ ಪ್ಲಾಟ್‌ಫಾರ್ಮ್ ಅನ್ನು ನಾವು ಹೇಗೆ ಕಾರ್ಯಾಚರಣೆ ಮಾಡುತ್ತೇವೆ ಎಂಬುದಕ್ಕೆಪ್ರಮುಖವಾಗಿವೆ, ಮತ್ತು ಹದಿಹರೆಯದ Snapchatter ಗಳನ್ನು ರಕ್ಷಿಸಲು ನಾವು ಈಗಾಗಲೇ ಕೆಲವು ಸುರಕ್ಷತಾ ಕ್ರಮಗಳನ್ನು ಹೊಂದಿದ್ದೇವೆ.

ಆಗಸ್ಟ್ 14 ರಿಂದ, ಯುರೋಪಿಯನ್ ಡಿಜಿಟಲ್ ಸೇವಾ ಕಾಯ್ದೆ (DSA) ಮತ್ತು ಸಂಬಂಧಿಸಿದ UK ನಿಬಂಧನೆಗಳ ನಮ್ಮ ಅನುಸರಣೆ ಕಾರ್ಯಕ್ರಮದ ಭಾಗವಾಗಿ, EU ಮತ್ತು UK ನಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ Snapchatter ಗಳಿಗೆ ನಾವು ಜಾಹೀರಾತು ತೋರಿಸುವ ವಿಧಾನಕ್ಕೆ ಬದಲಾವಣೆಗಳನ್ನು ಅನುಷ್ಠಾನಗೊಳಿಸುತ್ತಿದ್ದೇವೆ. ಪರಿಣಾಮವಾಗಿ, ಈ ಹದಿಹರೆಯದ Snapchatter ಗಳಿಗೆ ಜಾಹೀರಾತುಗಳನ್ನು ವೈಯಕ್ತೀಕರಿಸಲು ಜಾಹೀರಾತುದಾರರಿಗೆ ಬಹುತೇಕ ಗುರಿಯಾಗಿಸುವಿಕ ಮತ್ತು ಆಪ್ಟಿಮೈಸೇಶನ್ ಪರಿಕರಗಳು ಇನ್ನು ಮುಂದೆ ಲಭ್ಯವಿರುವುದಿಲ್ಲ. ಈ ಬದಲಾವಣೆಗಳು ನಮ್ಮ ವೇದಿಕೆಯಾದ್ಯಂತ ಹದಿಹರೆಯದವರ ಸುರಕ್ಷತೆ ಮತ್ತು ಗೌಪ್ಯತೆಗಾಗಿ ನಮ್ಮ ನಿರಂತರ ಬದ್ಧತೆಯ ಭಾಗವಾಗಿದೆ.

EU ಮತ್ತು UK ನಲ್ಲಿಯ 18+ Snapchatter ಗಳಿಗೆ ಅವರ ವೈಯಕ್ತಿಕಗೊಳಿಸಿದ Snapchat ಜಾಹೀರಾತು ಅನುಭವಕ್ಕೆ ಸಂಬಂಧಿಸಿ ಹೊಸ ಮಟ್ಟದ ಪಾರದರ್ಶಕತೆ ಮತ್ತು ನಿಯಂತ್ರಣ ಒದಗಿಸುವುದನ್ನು ಕೂಡ ನಾವು ಆರಂಭಿಸಲಿದ್ದೇವೆ. ಒಂದು ಜಾಹೀರಾತಿನ ಮೇಲಿರುವ "ಈ ಜಾಹೀರಾತನ್ನು ನಾನು ಏಕೆ ನೋಡುತ್ತಿದ್ದೇನೆ" ಬಹಿರಂಗಪಡಿಸುವಿಕೆಯನ್ನು ಟ್ಯಾಪ್ ಮಾಡಿದಾಗ ಅವರಿಗೆ ಆ ನಿರ್ದಿಷ್ಟ ಜಾಹೀರಾತನ್ನು ಏಕೆ ತೋರಿಸಲಾಗಿದೆ ಎನ್ನುವು ಕುರಿತ ಇನ್ನಷ್ಟು ವಿವರಗಳು ಮತ್ತು ಒಳನೋಟಗಳನ್ನು ಪ್ರದರ್ಶಿಸುತ್ತದೆ ಹಾಗೂ ಅವರಿಗೆ ತೋರಿಸುವ ಜಾಹೀರಾತುಗಳ ವೈಯಕ್ತಿಕಗೊಳಿಸುವಿಕೆಯನ್ನು ನಿಯಂತ್ರಿಸಲು ಕೂಡ ಈ Snapchatter ಗಳಿಗೆ ಸಾಧ್ಯವಾಗುತ್ತದೆ. ಜೊತೆಗೆ, EU ನಲ್ಲಿನ ಎಲ್ಲ Snapchatter ಗಳು ತಾವು ನೋಡುವ ಪಾವತಿಸದ ಮಾರ್ಕೆಟಿಂಗ್ ಕಂಟೆಂಟ್‌ನ ವೈಯಕ್ತಿಕಗೊಳಿಸುವಿಕೆಯನ್ನು ನಿಯಂತ್ರಿಸುವ ಆಯ್ಕೆಯನ್ನು ಶೀಘ್ರದಲ್ಲೇ ಹೊಂದಲಿದ್ದಾರೆ.

ಇದರ ಜೊತೆಗೆ, EU ನಲ್ಲಿ ತೋರಿಸುವ ಜಾಹೀರಾತುಗಳಿಗಾಗಿ ನಾವು ಪಾರದರ್ಶಕತೆ ಕೇಂದ್ರವನ್ನು ನಿರ್ಮಿಸುತ್ತಿದ್ದು, ಇದು ಅಭಿಯಾನದ ದಿನಾಂಕ ಮತ್ತು ಜಾಹೀರಾತುದಾರರ ಮೂಲಕ ಹುಡುಕಬಹುದಾದ ಜಾಹೀರಾತುಗಳ ಡೇಟಾಗೆ ಪ್ರವೇಶವನ್ನು ಒದಗಿಸಲಿದೆ.

ಗೌಪ್ಯತೆಯು ಯಾವಾಗಲೂ Snapchat ನ ಮೂಲಭೂತ ತತ್ವವಾಗಿದೆ ಮತ್ತು ಈ ಬದಲಾವಣೆಗಳೊಂದಿಗೆ, ಜನರಿಗೆ ಸಂಪರ್ಕಗೊಳ್ಳಲು, ತಮ್ಮನ್ನು ಅಭಿವ್ಯಕ್ತಪಡಿಸಲು ಮತ್ತು ಜೊತೆಯಾಗಿ ವಿನೋದಿಸಲು ಗೌಪ್ಯತೆ-ಕೇಂದ್ರಿತ ಸ್ಥಳವನ್ನು ಒದಗಿಸುವ ನಮ್ಮ ಬದ್ಧತೆಯನ್ನು ಮುಂದುವರಿಸುತ್ತಿದ್ದೇವೆ.

ಸುದ್ದಿಗಳಿಗೆ ಹಿಂತಿರುಗಿ