Our Transparency Report for the Second Half of 2023

April 26, 2024

ಇಂದು, ನಾವು ನಮ್ಮ ಇತ್ತೀಚಿನ ಪಾರದರ್ಶಕತೆಯ ವರದಿಯನ್ನು ಬಿಡುಗಡೆ ಮಾಡುತ್ತಿದ್ದು, ಇದು 2023ರ ದ್ವಿತೀಯಾರ್ಧವನ್ನು ಒಳಗೊಳ್ಳುತ್ತದೆ. 

ಜನರು ತಮ್ಮನ್ನು ಅಭಿವ್ಯಕ್ತಪಡಿಸಲು, ಆ ಕ್ಷಣದಲ್ಲಿ ಜೀವಿಸಲು, ಜಗತ್ತಿನ ಕುರಿತು ತಿಳಿದುಕೊಳ್ಳಲು ಮತ್ತು ಜೊತೆಯಾಗಿ ವಿನೋದಿಸಲು ಅವರನ್ನು ಸಬಲಗೊಳಿಸುವುದು ನಮ್ಮ ಧ್ಯೇಯವಾಗಿದೆ – ಮತ್ತು ಆ ಎಲ್ಲ ಕಾರ್ಯಗಳನ್ನು ಮಾಡಲು Snapchatter ಗಳಿಗೆ ಸಹಾಯ ಮಾಡುವುದಕ್ಕೆ ನಮ್ಮ ಸಮುದಾಯದ ಸುರಕ್ಷತೆ ಮತ್ತು ಯೋಗಕ್ಷೇಮ ಅವಶ್ಯವಾಗಿದೆ. ನಮ್ಮನ್ನು ಹೊಣೆಗಾರರನ್ನಾಗಿ ಇರಿಸಿಕೊಳ್ಳಲು ಮತ್ತು ನಮ್ಮ ವೇದಿಕೆಯಲ್ಲಿ ಉಲ್ಲಂಘಿಸುವ ವಿಷಯಗಳ ಮತ್ತು ಖಾತೆಗಳ ವಿರುದ್ಧ ಹೋರಾಡುವ ನಮ್ಮ ಪ್ರಯತ್ನಗಳ ಕುರಿತು ಮಾಹಿತಿಯನ್ನು ಹಂಚಿಕೊಳ್ಳಲು ನಮ್ಮ ಅರ್ಧವಾರ್ಷಿಕ ಪಾರದರ್ಶಕತೆಯ ವರದಿ ಒಂದು ಪ್ರಮುಖ ಉಪಕರಣ ಆಗಿದೆ.

ನಾವು ಪ್ರತಿ ಪಾರದರ್ಶಕತೆಯ ವರದಿಯೊಂದಿಗೆ ಮಾಡುವಂತೆ, ಈ ವರದಿಯಲ್ಲೂ ನಾವು ಸುಧಾರಣೆಗಳನ್ನು ಮಾಡಲು ಕೆಲಸ ಮಾಡಿದ್ದೇವೆ ಹಾಗಾಗಿ ನಮ್ಮ ಸಮುದಾಯ ಮತ್ತು ಪ್ರಮುಖ ಪಾಲುದಾರರಿಗೆ ಇನ್ನಷ್ಟು ಉತ್ತಮ ಸೇವೆಯನ್ನು ಒದಗಿಸುತ್ತದೆ. ಈ ಕೆಳಗಿನವು ಸೇರಿದಂತೆ ಈ ವರದಿಯಲ್ಲಿ ನಾವು ಹಲವು ಹೊಸ ವಿಷಯಗಳನ್ನು ಸೇರಿಸಿದ್ದೇವೆ : 

ಭಯೋತ್ಪಾದನೆ ಮತ್ತು CSEA ಮಾಪನಗಳ ಏಕೀಕೃತ: ಭಯೋತ್ಪಾದನೆ ಮತ್ತು ಹಿಂಸಾತ್ಮಕ ತೀವ್ರವಾದ ಹಾಗೂ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯ(CSEA)ವನ್ನು ಒಳಗೊಳ್ಳಲು ನಮ್ಮ ಮುಖ್ಯ ಕೋಷ್ಟಕವನ್ನು ನಾವು ವಿಸ್ತರಿಸಿದ್ದೇವೆ. ಉಲ್ಲಂಘಿಸುವ ವಿಷಯ ಮತ್ತು ಖಾತೆಗಳ ವಿರುದ್ಧ ನಮ್ಮ ಪೂರ್ವಭಾವಿ ಮತ್ತು ಪ್ರತಿಕ್ರಿಯಾತ್ಮಕ ಪ್ರಯತ್ನಗಳನ್ನು ಹಾಗೂ NCMEC ಗೆ ನಾವು ವರದಿ ಮಾಡಿದ ನಿರ್ಧಾರಗಳನ್ನು ವಿವರಿಸುವ CSEAಯ ಹೆಚ್ಚುವರಿ ವಿಭಾಗವನ್ನು ನಾವು ಮುಂದುವರಿಸಲಿದ್ದೇವೆ. 

ವಿಸ್ತರಿತ ಮೇಲ್ಮನವಿಗಳು: ನಾವು ಮೇಲ್ಮನವಿಗಳ ಕುರಿತು ವಿಸ್ತರಿತ ಮಾಹಿತಿಯನ್ನು ಒದಗಿಸಿದ್ದು, ಅವು ನಮ್ಮ ನೀತಿಯ ಕಾರಣಗಳಿಗೆ ಸಂಬಂಧಿಸಿದಂತೆ ಒಟ್ಟು ಮೇಲ್ಮನವಿಗಳು ಮತ್ತು ಮರುಸ್ಥಾಪನೆಗಳನ್ನು ವಿವರಿಸುತ್ತವೆ. ನಮ್ಮ ಪಾರದರ್ಶಕತೆಯ ವರದಿ ಪದಕೋಶಕ್ಕೆ ನಾವು ಮೇಲ್ಮನವಿಗಳು ಮತ್ತು ಮರುಸ್ಥಾಪನೆಗಳ ವ್ಯಾಖ್ಯಾನಗಳನ್ನು ಕೂಡ ಸೇರಿಸಿದ್ದೇವೆ.

ಹೊಸ EU ನಿಯಂತ್ರಕ ಒಳನೋಟಗಳು: ನಾವು ನಮ್ಮ ಯೂರೋಪಿಯನ್ ಒಕ್ಕೂಟ ವಿಭಾಗವನ್ನು ವಿಸ್ತರಿಸಿದ್ದು, ಯೂರೋಪಿಯನ್ ಡಿಜಿಟಲ್ ಸೇವೆಗಳ ಕಾಯ್ದೆಗೆ ಸಂಬಂಧಿಸಿದ Snap ನ ಪ್ರಯತ್ನಗಳಿಗೆ ಹೆಚ್ಚುವರಿ ಒಳನೋಟಗಳನ್ನು ಮತ್ತು CSEA ಸ್ಕ್ಯಾನಿಂಗ್ ಪ್ರಯತ್ನಗಳಿಗೆ ಸಂಬಂಧಿಸಿದ ಹೆಚ್ಚುವರಿ ಮಾಹಿತಿಯನ್ನು ಒದಗಿಸಿದ್ದೇವೆ. ಜಾಗತಿಕ ನಿಬಂಧನೆಗಳು ಉದ್ಭವಿಸಿದಂತೆ ಪ್ರತಿಕ್ರಿಯೆಯಾಗಿ ನಾವು ನಮ್ಮ ಪಾರದರ್ಶಕತೆಯ ವರದಿಗಳನ್ನು ನವೀಕರಿಸುವುದನ್ನು ಮುಂದುವರಿಸುತ್ತೇವೆ. 

ನಮ್ಮ ಸಮುದಾಯ ಮತ್ತು ಪಾಲುದಾರರ ವಿಶ್ವಾಸ ಗಳಿಸಲು ಮತ್ತು ಉಳಿಸಿಕೊಳ್ಳಲು ನಾವು ಬದ್ಧರಾಗಿ ಉಳಿಯುತ್ತೇವೆ ಮತ್ತು ವೇದಿಕೆಯನ್ನು ಸುರಕ್ಷಿತವಾಗಿ ಇರಿಸಿಕೊಳ್ಳಲು, ನಮ್ಮ ಪ್ರಗತಿಯ ಕುರಿತು ವರದಿ ಮಾಡಲು ಮತ್ತು ನಮ್ಮನ್ನು ಜವಾಬ್ದಾರರನ್ನಾಗಿ ಇರಿಸಿಕೊಳ್ಳಲು ನಾವು ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ.

ಸುದ್ದಿಗಳಿಗೆ ಹಿಂತಿರುಗಿ