UK ಸರ್ಕಾರದ ರಾಷ್ಟ್ರೀಯ ಲಸಿಕಾಕರಣ ಅಭಿಯಾನವನ್ನು ಬೆಂಬಲಿಸುವುದು

ಜುಲೈ 6, 2021

UK ರಾಷ್ಟ್ರೀಯ ಆರೋಗ್ಯ ಸೇವೆಗಳ (NHS) 'ಪ್ರತಿ ಲಸಿಕೆ ಭರವಸೆಯನ್ನು ಒದಗಿಸುತ್ತದೆ' ಅಭಿಯಾನವನ್ನು ಬೆಂಬಲಿಸಲು ಯುನೈಟೆಡ್ ಕಿಂಗ್‌ಡಮ್ (UK) ಸರ್ಕಾರದೊಂದಿಗೆ ನಮ್ಮ ಕೆಲಸವನ್ನು ಹಂಚಿಕೊಳ್ಳುವುದು ನಿಜಕ್ಕೂ ಅದ್ಭುತ.  

UK ಯಲ್ಲಿ 13 ರಿಂದ 24 ವಯಸ್ಸಿನ 90% ಗಿಂತ ಹೆಚ್ಚು ಜನರನ್ನು Snapchat ತಲುಪುತ್ತದೆ, ಮತ್ತು ಯುವಜನರ ಬದುಕಿನಲ್ಲಿ ನಮ್ಮ ಸಮುದಾಯ ಅಂತಹ ಪ್ರಮುಖ ಪಾತ್ರವನ್ನು ವಹಿಸುವುದರೊಂದಿಗೆ, ಅದು ನಿಖರ ಮತ್ತು ವಿಶ್ವಾಸಾರ್ಹ ಸಂಪನ್ಮೂಲಗಳ ತಾಣವಾಗಿರುವುದು ಅತ್ಯಂತ ಮುಖ್ಯ, ಇದರಿಂದಾಗಿ ಅವರು ಸುರಕ್ಷಿತ, ಆರೋಗ್ಯಕರ ಮತ್ತು ಮಾಹಿತಿಯುಕ್ತರಾಗಿ ಇರಬಹುದು. 

UK ಯಲ್ಲಿ ಈಗ 18 ವರ್ಷಕ್ಕೆ ಮೇಲ್ಪಟ್ಟ ಎಲ್ಲ ವಯಸ್ಕರಿಗೆ ಕೋವಿಡ್-19 ಲಸಿಕೆ ಲಭ್ಯವಿರುವುದರಿಂದ, Snapchatter ಗಳು ವಿಶ್ವಾಸಾರ್ಹ ಮತ್ತು ನಿಖರ ಮಾಹಿತಿಗೆ ಪ್ರವೇಶ ಹೊಂದಿರುವುದು ಮುಖ್ಯವಾಗಿದೆ ಅದನ್ನು ಗಮನದಲ್ಲಿಟ್ಟುಕೊಂಡು, ಲಸಿಕೆಯ ಕುರಿತು NHS ನಿಂದ ತಜ್ಞ ಸಂಪನ್ಮೂಲಗಳನ್ನು ಒಳಗೊಳ್ಳಲು ಇತ್ತೀಚಿನ ಕೊರೋನಾವೈರಸ್ ಮಾರ್ಗದರ್ಶನಕ್ಕೆ ಸಮರ್ಪಿತವಾಗಿರುವ - ನಮ್ಮ ಆ್ಯಪ್‌ನಲ್ಲಿನ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದ ಸಂಪನ್ಮೂಲ - ‘Here For You’ ಅನ್ನು ನಾವು ವಿಸ್ತರಿಸಿದ್ದೇವೆ.

ಇದರ ಜೊತೆಗೆ, NHS ನಿಂದ ಇತ್ತೀಚಿನ ಮಾರ್ಗದರ್ಶನವನ್ನು ಹಂಚಿಕೊಳ್ಳಲು Snapchatter ಗಳಿಗೆ ಅವಕಾಶ ಕಲ್ಪಿಸುವ ಹಾಗೂ ತಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ತಮ್ಮ ಲಸಿಕೆಯ ಸ್ಥಿತಿಯನ್ನು ಹಂಚಿಕೊಳ್ಳಲು ಪ್ರೋತ್ಸಾಹಿಸುವ ಬಳಕೆಗೆ ಲಭ್ಯವಿರುವ - ಸ್ಟಿಕ್ಕರ್‌ಗಳು, ಲೆನ್ಸ್‌ಗಳು ಮತ್ತು ಫಿಲ್ಟರ್‌ಗಳು ಸೇರಿದಂತೆ - UK ಸರ್ಕಾರದೊಂದಿಗೆ ಸಹಭಾಗಿತ್ವದಲ್ಲಿ ನಾವು ಕ್ರಿಯೇಟಿವ್ ಟೂಲ್ಸ್ ಅನ್ನು ಬಿಡುಗಡೆ ಮಾಡಿದ್ದೇವೆ.

ಅಂತಿಮವಾಗಿ, ವೈದ್ಯಕೀಯ ತಜ್ಞರಾದ NHS ಇಂಗ್ಲೆಂಡ್‌ನ ಪ್ರಾಥಮಿಕ ಆರೋಗ್ಯಕ್ಕಾಗಿನ ಉಸ್ತುವಾರಿ ಉಪ ವೈದ್ಯಕೀಯ ನಿರ್ದೇಶಕ ಮತ್ತು NHS ವೈದ್ಯ ಡಾ. ಕರೆನ್ ರಾಜ್‌ರಿಂದ ಉತ್ತರ ಪಡೆಯಲು Snapchatter ಗಳು ಪ್ರಧಾನ ಮಂತ್ರಿ ಬೋರಿಸ್ ಜಾನ್‌ಸನ್‌ ಅವರ Snap ಸ್ಟಾರ್ ಖಾತೆಯಿಂದ ಪ್ರಶ್ನೆಗಳನ್ನು ಸಲ್ಲಿಸಿದರು. Q&A ಸೆಷನ್‌ಗಳು ಪ್ರಧಾನ ಮಂತ್ರಿಗಳ ಪ್ರೊಫೈಲ್‌ನಲ್ಲಿ ವೀಕ್ಷಣೆಗೆ ಲಭ್ಯ ಇವೆ.

ನಮ್ಮ Snapchat ಸಮುದಾಯದ ಆರೋಗ್ಯ ಮತ್ತು ಯೋಗಕ್ಷೇಮವನ್ನು ಬೆಂಬಲಿಸಲು ಸಹಾಯ ಮಾಡುವುದಕ್ಕಾಗಿ ವಿಶ್ವಾಸಾರ್ಹ ಪಾಲುದಾರರೊಂದಿಗೆ ಸಹಭಾಗಿತ್ವ ಮಾಡಬಹುದಾದ ಹೊಸ ಮಾರ್ಗಗಳ ಅನ್ವೇಷಣೆಯನ್ನು ನಾವು ಮುಂದುವರಿಸುತ್ತೇವೆ.


U.K ಯಲ್ಲಿನ ಲಸಿಕೆಯ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ದಯವಿಟ್ಟು ಭೇಟಿ ನೀಡಿ www.nhs.uk/covidvaccine 

- ಸ್ಟೀಫನ್ ಕಾಲಿನ್ಸ್, ಸಾರ್ವಜನಿಕ ನೀತಿಯ ಹಿರಿಯ ನಿರ್ದೇಶಕ

ಸುದ್ದಿಗಳಿಗೆ ಹಿಂತಿರುಗಿ