Snap Values

ಪ್ಯಾರಿಸ್ 2024 ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟದ ಅವಧಿಯಲ್ಲಿ ಸಮುದಾಯದ ಸುರಕ್ಷತೆಯನ್ನು ಕಾಯ್ದುಕೊಳ್ಳಲು Snapchat ನ ವಿಧಾನ

ಜುಲೈ 23, 2024

ಈ ಬೇಸಿಗೆಯಲ್ಲಿ ನಾವು ಕ್ರೀಡೆ ಮತ್ತು ಏಕತೆಯ ಸ್ಫೂರ್ತಿಯನ್ನು ಸಂಭ್ರಮಿಸುತ್ತಿರುವಂತೆ ಈ ಅವಧಿಯು ಹುಮ್ಮಸ್ಸು, ಸೌಹಾರ್ದತೆ ಮತ್ತು ಮರೆಯಲಾಗದ ಕ್ಷಣಗಳಿಂದ ತುಂಬಿರಲಿದೆ ಎನ್ನುವ ಭರವಸೆಯಿದೆ. ಅಭಿಮಾನಿಗಳು ಕ್ರೀಡೆಯನ್ನು ಅನುಭವಿಸುವ, ಸಂಭ್ರಮಿಸುವ ಮತ್ತು ವೀಕ್ಷಿಸುವ ವಿಧಾನವನ್ನು Snapchat ಪರಿವರ್ತಿಸುತ್ತಿದೆ — ಅವರನ್ನು ಆಟಗಳಿಗೆ, ಅವರ ತಂಡಗಳಿಗೆ ಮತ್ತು ಅವರ ಮೆಚ್ಚಿನ ಕ್ರೀಡಾಪಟುಗಳು ಮತ್ತು ಆಟಗಾರರ ಸನಿಹಕ್ಕೆ ತರುತ್ತಿದೆ.

Snap ನಲ್ಲಿ, Snapchatter ಗಳು ತಮ್ಮನ್ನು ಅಭಿವ್ಯಕ್ತಪಡಿಸಲು ಸ್ವತಂತ್ರರಾಗಿರುವ, ತಮ್ಮ ನೈಜ ಸ್ನೇಹಿತರೊಂದಿಗೆ ಸಂಪರ್ಕದಲ್ಲಿ ಉಳಿಯುವ ಮತ್ತು ತೊಡಗಿಕೊಳ್ಳುವ ವಿಷಯದ ಮೂಲಕ ಜೊತೆಯಾಗಿ ವಿನೋದಿಸುವ ಸುರಕ್ಷಿತ ಮತ್ತು ವಿನೋದಮಯ ವಾತಾವರಣವನ್ನು ಒದಗಿಸುವುದು ನಮ್ಮ ಧ್ಯೇಯವಾಗಿದೆ. 

ಪ್ಯಾರಿಸ್ 2024 ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಅವಧಿಯಲ್ಲಿ ನಮ್ಮ ಸಮುದಾಯಕ್ಕಾಗಿ ಸಕಾರಾತ್ಮಕ ಮತ್ತು ಸುರಕ್ಷಿತ ವಾತಾವಾರಣವನ್ನು ಪೋಷಿಸಲು ನಾವು ಹೇಗೆ ಬದ್ಧರಾಗಿದ್ದೇವೆ ಎನ್ನುವುದನ್ನು ಇಂದು ನಾವು ಹಂಚಿಕೊಳ್ಳುತ್ತಿದ್ದೇವೆ:

ಗೌಪ್ಯತೆ ಮತ್ತು ಸುರಕ್ಷತೆ  

  • ವಿನ್ಯಾಸದ ಪ್ರಕಾರ ಗೌಪ್ಯತೆ ಮತ್ತು ಸುರಕ್ಷತೆ. ಮೊದಲ ದಿನದಿಂದಲೂ, ನಮ್ಮ ಸಮುದಾಯದ ಗೌಪ್ಯತೆ, ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡುವ ಉತ್ಪನ್ನಗಳನ್ನು ನಾವು ನಿರ್ಮಿಸಿದ್ದೇವೆ. Snapchat, ಸಾಂಪ್ರದಾಯಿಕ ಸಾಮಾಜಿಕ ಮಾಧ್ಯಮಗಳಿಗೆ ಪರ್ಯಾಯವಾಗಿದ್ದು — ನಿಮ್ಮ ಸ್ನೇಹಿತರು, ಕುಟುಂಬ ಸದಸ್ಯರು ಮತ್ತು ಜಗತ್ತಿನೊಂದಿಗೆ ನಿಮ್ಮ ಸಂಬಂಧವನ್ನು ವರ್ಧಿಸಲು ನೆರವಾಗುವ ದೃಶ್ಯ ಸಂದೇಶದ ಆ್ಯಪ್ ಆಗಿದೆ. ಆದ ಕಾರಣ Snapchat ನೇರವಾಗಿ ಕ್ಯಾಮೆರಾ ತೆರೆಯುತ್ತದೆ, ವಿಷಯದ ಫೀಡ್ ಅಲ್ಲ ಹಾಗೂ ನಿಜ ಬದುಕಿನಲ್ಲಿ ಈಗಾಗಲೇ ಸ್ನೇಹಿತರಾಗಿರುವ ಜನರೊಂದಿಗೆ ಸಂಪರ್ಕ ಹೊಂದಲು ಗಮನ ಕೇಂದ್ರೀಕರಿಸುತ್ತದೆ. ಫಾಲೋವರ್‌ಗಳನ್ನು ಹೆಚ್ಚಿಸಿಕೊಳ್ಳುವ ಅಥವಾ ಲೈಕ್‌ಗಳಿಗಾಗಿ ಸ್ಪರ್ಧಿಸುವ ಒತ್ತಡವಿಲ್ಲದೆ ನಿಮ್ಮನ್ನು ಅಭಿವ್ಯಕ್ತಪಡಿಸಲು ಮತ್ತು ಸ್ನೇಹಿತರೊಂದಿಗೆ ವಿನೋದಿಸಲು Snapchat ನಿಮಗೆ ಅವಕಾಶ ಕಲ್ಪಿಸುತ್ತದೆ. 

  • ನಮ್ಮ ಸಮುದಾಯ ಮಾರ್ಗಸೂಚಿಗಳು. Snapchatter ಗಳು ನಮ್ಮ ಸೇವೆಗಳನ್ನು ಪ್ರತಿದಿನ ಸುರಕ್ಷಿತವಾಗಿ ಬಳಸಬಹುದು ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುವ ಜೊತೆಗೆ, ಸ್ವಯಂ-ಅಭಿವ್ಯಕ್ತಿಯ ಅತ್ಯಂತ ವಿಶಾಲ ವ್ಯಾಪ್ತಿಯನ್ನು ಪ್ರೋತ್ಸಾಹಿಸುವ ಮೂಲಕ ನಮ್ಮ ಧ್ಯೇಯವನ್ನು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು ಬೆಂಬಲಿಸುತ್ತದೆ. ಈ ಮಾರ್ಗಸೂಚಿಗಳು Snapchat ನಲ್ಲಿನ ಎಲ್ಲ ವಿಷಯ ಮತ್ತು ನಡವಳಿಕೆಗೆ — ಹಾಗೂ ಎಲ್ಲ Snapchatter ಗಳಿಗೆ ಅನ್ವಯಿಸುತ್ತವೆ. 

  • ಪೂರ್ವಭಾವಿ ವಿಷಯ ಮಿತಗೊಳಿಸುವಿಕೆ. Snapchat ಆದ್ಯಂತ, ಪರಿಶೀಲನೆ ಮಾಡದೆ ಇರುವ ವಿಷಯ ಬೃಹತ್‌ ಪ್ರೇಕ್ಷಕರನ್ನು ತಲುಪುವ ಸಾಧ್ಯತೆಯನ್ನು ನಾವು ಮಿತಿಗೊಳಿಸುತ್ತೇವೆ ಮತ್ತು ಅದನ್ನು ವಿಶಾಲವಾಗಿ ವಿತರಣೆ ಮಾಡುವುದಕ್ಕೆ ಮೊದಲು ಅದು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು ಹಾಗೂ ಶಿಫಾರಸಿಗೆ ಅರ್ಹತೆ ಪಡೆಯಲು ಅನುಸರಿಸಬೇಕಾದ ವಿಷಯ ಮಾರ್ಗಸೂಚಿಗಳ ಜೊತೆಗೆ ಅನುಸರಣೆ ಹೊಂದಿದೆ ಎಂದು ಖಚಿತಪಡಿಸಿಕೊಳ್ಳುತ್ತೇವೆ. ಯಂತ್ರ ಕಲಿಕೆಯ ಸಾಧನಗಳು ಮತ್ತು ನೈಜ ಜನರ ಸಮರ್ಪಿತ ತಂಡಗಳನ್ನು ಒಳಗೊಂಡಂತೆ ಸ್ವಯಂಚಾಲಿತಗೊಳಿಸಿದ ಸಾಧನಗಳು ಮತ್ತು ಮಾನವರ ವಿಮರ್ಶೆಯ ಸಂಯೋಜನೆಯನ್ನು ನಮ್ಮ ಸಾರ್ವಜನಿಕ ವಿಷಯ ಸ್ಥಳಗಳನ್ನು (ಉದಾಹರಣೆಗೆ ಸ್ಪಾಟ್‌ಲೈಟ್, ಸಾರ್ವಜನಿಕ ಕಥೆಗಳು ಮತ್ತು ಮ್ಯಾಪ್‌ಗಳು) ತನಿಖೆ ಮಾಡಲು ಮತ್ತು ಸಾರ್ವಜನಿಕ ಪೋಸ್ಟ್‌ಗಳಲ್ಲಿ ಸಂಭಾವ್ಯತಃ ಅನುಚಿತ ವಿಷಯವನ್ನು ಪರಿಶೀಲಿಸಲು ನಾವು ಬಳಸುತ್ತೇವೆ.

  • ನಮ್ಮ ಆ್ಯಪ್‌ನಲ್ಲಿನ ವರದಿ ಮಾಡುವಿಕೆ ಸಾಧನ: ನಮ್ಮ ಎಲ್ಲ ಉತ್ಪನ್ನಗಳಾದ್ಯಂತ, Snapchatter ಗಳು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳ ಸಂಭಾವ್ಯತಃ ಉಲ್ಲಂಘನೆಗಳಿಗಾಗಿ ಖಾತೆಗಳು ಮತ್ತು ವಿಷಯವನ್ನು ವರದಿ ಮಾಡಬಹುದು. ವರದಿಯನ್ನು ಮೌಲ್ಯಮಾಪನ ಮಾಡಲು; ನಮ್ಮ ನೀತಿಗಳ ಅನುಸಾರ ಸೂಕ್ತ ಕ್ರಮ ಕೈಗೊಳ್ಳಲು; ಮತ್ತು ವರದಿ ಮಾಡಿದ ಪಕ್ಷಕ್ಕೆ--ಸಾಮಾನ್ಯವಾಗಿ ಕೆಲವು ಗಂಟೆಗಳ ಒಳಗೆ ಫಲಿತಾಂಶದ ಕುರಿತು ಸೂಚನೆ ನೀಡಲು ತರಬೇತಾಗಿರುವ ನಮ್ಮ ವಿಶ್ವಾಸ ಮತ್ತು ಸುರಕ್ಷತಾ ತಂಡಕ್ಕೆ ನೇರವಾಗಿ ಒಂದು ಗೌಪ್ಯ ವರದಿ ಸಲ್ಲಿಸುವುದನ್ನು ನಾವು Snapchatter ಗಳಿಗೆ ಸುಲಭವಾಗಿಸಿದ್ದೇವೆ. ಹಾನಿಕಾರಕ ವಿಷಯ ಅಥವಾ ನಡವಳಿಕೆಯನ್ನು ವರದಿ ಮಾಡುವ ಕುರಿತು ಹೆಚ್ಚಿನ ಮಾಹಿತಿಗಾಗಿ, ನಮ್ಮ ಬೆಂಬಲ ಸೈಟ್‌ನಲ್ಲಿ ಈ ಸಂಪನ್ಮೂಲಕ್ಕೆ ಭೇಟಿ ನೀಡಿ. ಹಾನಿಕಾರಕ ವಿಷಯವನ್ನು ಗುರುತಿಸಲು ಮತ್ತು ತೆಗೆದುಹಾಕಲು ಮತ್ತು Snapchat ನಲ್ಲಿ ಯೋಗಕ್ಷೇಮ ಮತ್ತು ಸುರಕ್ಷತೆಯನ್ನು ಉತ್ತೇಜಿಸಲು ನಾವು ಮಾಡುತ್ತಿರುವ ಪ್ರಯತ್ನಗಳ ಕುರಿತು ನೀವು ಇಲ್ಲಿ ಇನ್ನಷ್ಟನ್ನು ಕೂಡ ತಿಳಿದುಕೊಳ್ಳಬಹುದು.

  • ಕಾನೂನು ಜಾರಿಗೆ ಸಹಕಾರ: Snapchatter ಗಳ ಗೌಪ್ಯತೆ ಮತ್ತು ಹಕ್ಕುಗಳನ್ನು ಗೌರವಿಸುವುದರ ಜೊತೆಗೆ ಕಾನೂನು ಜಾರಿಗೆ ಸಹಕರಿಸುವುದಕ್ಕೆ Snap ಬದ್ಧವಾಗಿದೆ. Snapchat ಖಾತೆ ದಾಖಲೆಗಳಿಗಾಗಿ ನಾವು ಮಾನ್ಯವಾದ ಕಾನೂನು ವಿನಂತಿಯನ್ನು ಸ್ವೀಕರಿಸಿದ ಬಳಿಕ, ಅನ್ವಯಿಸುವ ಕಾನೂನು ಮತ್ತು ಗೌಪ್ಯತೆ ಅಗತ್ಯಗಳಿಗೆ ಅನುಸಾರವಾಗಿ ನಾವು ಪ್ರತಿಕ್ರಿಯಿಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ ನೀವು ನಮ್ಮ ಗೌಪ್ಯತೆ ಮತ್ತು ಸುರಕ್ಷತೆ ಕೇಂದ್ರಕ್ಕೆ ಭೇಟಿ ನೀಡಬಹುದು.

  • ಉದ್ಯಮ ತಜ್ಞರು ಮತ್ತು NGO ಗಳ ಜೊತೆ ಪಾಲುದಾರಿಕೆಗಳು: ಅಗತ್ಯದಲ್ಲಿರುವ Snapchatter ಗಳನ್ನು ಬೆಂಬಲಿಸಲು ನಾವು ಉದ್ಯಮ ತಜ್ಞರು ಮತ್ತು ಸರ್ಕಾರೇತರ ಸಂಸ್ಥೆಗಳ ಜೊತೆಗೆ ಕೆಲಸ ಮಾಡುತ್ತೇವೆ ಹಾಗೂ Snapchat ನಲ್ಲಿ ನಿಷೇಧಿಸಲಾಗಿರುವ ಯಾವುದೇ ಸೈಬರ್‌ ಕಿರುಕುಳ, ದ್ವೇಷ ಭಾಷಣ ಅಥವಾ ಇತರ ಹಾನಿಕಾರಕ ಸನ್ನಿವೇಶಗಳಿಗೆ ತಕ್ಷಣವೇ ಪ್ರತಿಕ್ರಿಯಿಸುತ್ತೇವೆ. ಹೆಚ್ಚುವರಿ ಸಂಪನ್ಮೂಲಗಳಿಗಾಗಿ, ದಯವಿಟ್ಟು ನಮ್ಮ Here For You ಆ್ಯಪ್‌ನಲ್ಲಿನ ಪೋರ್ಟಲ್‌ಗೆ ಭೇಟಿ ನೀಡಿ ಅಥವಾ ಕೆಳಗೆ ಹೆಚ್ಚುವರಿ ಸಂಪನ್ಮೂಲಗಳನ್ನು ನೋಡಿ. 

  • ಕ್ರೀಡಾಪಟುಗಳ ಶಿಕ್ಷಣ ಮತ್ತು ಬೆಂಬಲ: ಆನ್‌ಲೈನ್ ಸುರಕ್ಷತೆ ಕುರಿತು ಕ್ರೀಡಾಪಟುಗಳಿಗೆ ತಿಳುವಳಿಕೆ ನೀಡಲು ಮತ್ತು ಕ್ರೀಡಾಪಟುಗಳಿಂದ ಅಥವಾ ಅವರ ಪರವಾಗಿ ವರದಿ ಮಾಡಲಾಗಿರುವ ಯಾವುದೇ ದುರುದ್ದೇಶಪೂರಿತ ನಡವಳಿಕೆಯನ್ನು ತ್ವರಿತವಾಗಿ ಪರಿಹರಿಸಲು ನಾವು ನೇರ ಮಾರ್ಗಗಗಳನ್ನು ಸ್ಥಾಪಿಸಿದ್ದೇವೆ.

ಹೆಚ್ಚುವರಿ ಉಪಯುಕ್ತ ಬಾಹ್ಯ ಸಂಪನ್ಮೂಲಗಳು

ಸುರಕ್ಷತೆಯನ್ನು ಪ್ರೋತ್ಸಾಹಿಸಲು ನಮ್ಮ ನಿರಂತರ ಪ್ರಯತ್ನಗಳಲ್ಲಿ, ಫ್ರಾನ್ಸ್‌ನಲ್ಲಿ ಈ ಕೆಳಗಿನ ಅಮೂಲ್ಯ ಸಂಪನ್ಮೂಲಗಳನ್ನು ಬಳಸಿಕೊಳ್ಳುವಂತೆ ನಾವು ನಮ್ಮ ಸಮುದಾಯವನ್ನು ಪ್ರೋತ್ಸಾಹಿಸುತ್ತೇವೆ:

  • Thésée: ಆನ್‌ಲೈನ್ ಹಗರಣಗಳ ವಿರುದ್ಧ ಬೆಂಬಲ ಒದಗಿಸುತ್ತದೆ.

  • 3018/E-Enfance: ಆನ್‌ಲೈನ್‌ನಲ್ಲಿ ಅಪ್ರಾಪ್ತ ವಯಸ್ಕರನ್ನು ರಕ್ಷಿಸಲು ಬದ್ಧವಾಗಿದೆ.

  • Ma Sécurité: ನಿಮ್ಮ ವಿಚಾರಣೆಗಳಿಗೆ ಸಂಬಂಧಿಸಿದಂತೆ ಪೊಲೀಸರು ಮತ್ತು ಜೆಂಡರ್‌ಮೀರೀ ನಿಮಗೆ ಸಹಾಯ ಮಾಡಬಲ್ಲರು.

  • Pharos: ಅಕ್ರಮ ವಿಷಯವನ್ನು ವರದಿ ಮಾಡಲು.

  • 15ಕ್ಕೆ ಕರೆ ಮಾಡಿ: ತಕ್ಷಣದ ಅಪಾಯದ ಸಂದರ್ಭಗಳಲ್ಲಿ ತುರ್ತು ಸಹಾಯ.

Snapchat, ಪ್ಯಾರಿಸ್ 2024 ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಆಟಗಳನ್ನು ಜನರು ಸುರಕ್ಷಿತವಾಗಿ ಸಂಭ್ರಮಿಸಬಹುದಾದ ಮತ್ತು ಅದರಲ್ಲಿ ಪಾಲ್ಗೊಳ್ಳಬಹುದಾದ ಸ್ಥಳವಾಗಿದೆ ಎಂದು ಖಚಿತಪಡಿಸಲು ನಮ್ಮ ಕರ್ತವ್ಯವನ್ನು ಮಾಡುವುದಕ್ಕೆ ನಾವು ಬದ್ಧರಾಗಿದ್ದೇವೆ. ನಮ್ಮ ಸುರಕ್ಷತಾ ವಿಧಾನದ ಕುರಿತು ಹೆಚ್ಚುವರಿ ಮಾಹಿತಿಗಾಗಿ, ದಯವಿಟ್ಟು ನಮ್ಮ ಗೌಪ್ಯತೆ, ಸುರಕ್ಷತೆ ಮತ್ತು ನೀತಿ ಕೇಂದ್ರಕ್ಕೆ ಭೇಟಿ ನೀಡಿ.

ಸುದ್ದಿಗಳಿಗೆ ಹಿಂತಿರುಗಿ