ಡಿಜಿಟಲ್ ಜಗತ್ತಿನಲ್ಲಿ ಮಕ್ಕಳ ಪಾಲನೆ: UK ‘ಆನ್‌ಲೈನ್ ಸುರಕ್ಷತೆ’ ಮಾರ್ಗದರ್ಶಿಯನ್ನು Snap ಬಿಡುಗಡೆ ಮಾಡಿದೆ
ಸೆಪ್ಟೆಂಬರ್ 9, 2024
ಹೊಸ ಶಾಲಾ ವರ್ಷ ಆರಂಭವಾಗುವ ಸಂದರ್ಭದಲ್ಲಿ, ಹದಿಹರೆಯದವರು ತಮ್ಮ ಆನ್‌ಲೈನ್ ಮತ್ತು ಆಫ್‌ಲೈನ್, ಈ ಎರಡರಲ್ಲಿನ ಗೆಳೆತನಗಳಲ್ಲೂ ಸಹ ಸಂತೋಷಭರಿತರಾಗಿ ಮತ್ತು ಸಂಪನ್ನರಾಗಿರುವುದು ಮುಖ್ಯವಾಗಿರುತ್ತದೆ.
ಪೋಷಕರು ತಮ್ಮ ಮಕ್ಕಳೊಂದಿಗೆ ಆನ್‌ಲೈನ್ ಸುರಕ್ಷತೆಯ ಕುರಿತು ಮುಕ್ತ ಮತ್ತು ಪ್ರಾಮಾಣಿಕ ಸಂಭಾಷಣೆಗಳನ್ನು ನಡೆಸಲು ಸಹಾಯ ಮಾಡುವುದಕ್ಕಾಗಿ ನೆರವಾಗಲೆಂದು Snapchat ಸಂಸ್ಥೆಯು UK ಇಂಟರ್‌ನೆಟ್ ಸುರಕ್ಷತಾ ದತ್ತಿಸಂಸ್ಥೆಯಾಗಿರುವ Childnet ನೊಂದಿಗಿನ ಸಹಯೋಗದಲ್ಲಿ ಪೋಷಕರಿಗಾಗಿ ಹೊಸದೊಂದು ಮಾರ್ಗದರ್ಶಿಯನ್ನು ಬಿಡುಗಡೆ ಮಾಡಿದೆ.
ನಿಮಗೆ ಓದಲೆಂದು SnapSavvy ಮಾರ್ಗದರ್ಶಿಯು
ಇಲ್ಲಿ ಲಭ್ಯವಿದೆಕುಟುಂಬಗಳಿಗೆ ಈ ಪ್ರಮುಖ ಸಂಭಾಷಣೆಗಳನ್ನು ನಡೆಸಲು ನೆರವಾಗುವುದಕ್ಕಾಗಿ, ಹಾಗೂ ಫ್ಯಾಮಿಲಿ ಸೆಂಟರ್ ಸೇರಿದಂತೆ, ಹದಿಹರೆಯದ ಬಳಕೆದಾರರನ್ನು ರಕ್ಷಿಸುವುದಕ್ಕಾಗಿ ಲಭ್ಯವಿರುವ Snapchat ನ ಸುರಕ್ಷತಾ ಸಾಧನಗಳು ಮತ್ತು ವೈಶಿಷ್ಟ್ಯಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಪೋಷಕರಿಗೆ ಸಹಾಯ ಮಾಡುವುದಕ್ಕಾಗಿ
ಸುಳಿವುಗಳು ಮತ್ತು ಸಲಹೆಗಳನ್ನು ಒಳಗೊಂಡಿರುತ್ತದೆ.
ಕೇವಲ Snapchat ಅಷ್ಟೇ ಅಲ್ಲದೆ – ಎಲ್ಲಾ ಆ್ಯಪ್‌ಗಳು, ಪ್ಲ್ಯಾಟ್ಫೊರ್ಮ್ಗಳು ಮತ್ತು ಸೇವೆಗಳಾದ್ಯಂತ ಆರು ದೇಶಗಳಲ್ಲಿ ಹದಿಹರೆಯದವರು, ಯುವಜನರು ಮತ್ತು ಪೋಷಕರ ಅನುಭವಗಳ ಕುರಿತು ನಡೆಸಲಾದ ಸಮೀಕ್ಷೆಯನ್ನು ಬಳಸಿ ನಡೆಸಲಾದ Snapchat ನ ಇತ್ತೀಚಿನ ಡಿಜಿಟಲ್ ಯೋಗಕ್ಷೇಮ ಸೂಚ್ಯಂಕ (DWBI) ಸಂಶೋಧನೆಯ ಆರಂಭಿಕ ಸಂಶೋಧಿತಾಂಶಗಳ ಪ್ರಕಾರ ಆನ್‌ಲೈನ್ ಅಪಾಯಗಳನ್ನು ತಗ್ಗಿಸಲು ಪೋಷಕರು ತಮ್ಮ ಪ್ರಯತ್ನಗಳನ್ನು ಹೆಚ್ಚಿಸಿದ್ದಾರೆ ಎಂದು ಕಂಡುಬಂದಿದೆ.
ಸಮೀಕ್ಷೆಯಲ್ಲಿ ಭಾಗವಹಿಸಿದ UK ಪೋಷಕರಲ್ಲಿ ಸುಮಾರು ಅರ್ಧದಷ್ಟು ಮಂದಿ (44 ಪ್ರತಿಶತ) ತಮ್ಮ ಹದಿಹರೆಯದ ಮಕ್ಕಳ ಆನ್‌ಲೈನ್ ಚಟುವಟಿಕೆಗಳ ಕುರಿತು ಈಗ ನಿಯಮಿತವಾಗಿ ಪರಿಶೀಲಿಸುತ್ತಾರೆ, ಇದು ಕಳೆದ ವರ್ಷದ ತುಲನೆಯಲ್ಲಿ 8 ಪ್ರತಿಶತ ಅಂಕಗಳ ಏರಿಕೆಯಾಗಿದೆ.
ಹದಿಹರೆಯದವರು ಸ್ವತಃ ಆನ್‌ಲೈನ್ ಸುರಕ್ಷತೆಯ ಕುರಿತು ಹೆಚ್ಚು ಜಾಗೃತರಾಗುತ್ತಿದ್ದಾರೆ. ಜೂನ್ 2024 ರ DWBI ಸಂಶೋಧನೆಯ ಪ್ರಕಾರ, 13 ರಿಂದ 17 ವರ್ಷಗಳ ನಡುವಿನ ವಯಸ್ಸಿನವರಲ್ಲಿನ ಮೂರರಲ್ಲಿ-ಎರಡರಷ್ಟು (62 ಪ್ರತಿಶತ) ಮಂದಿಯು ಆನ್‌ಲೈನ್ ಅಪಾಯಗಳನ್ನು ಎದುರಿಸಿದ ಬಳಿಕ ತಾವು ಸಹಾಯವನ್ನು ಕೋರಿದ್ದಾಗಿ ಹೇಳಿದ್ದು, ಈ ಅಂಕಿಯು ಹಿಂದಿನ ವರ್ಷದ ತುಲನೆಯಲ್ಲಿ 6 ಪ್ರತಿಶತ ಅಂಕಗಳಷ್ಟು ಏರಿಕೆಯಾಗಿದೆ.
ಅದರೆ, ಈ ಸಂಶೋಧನೆಯು ಒಂದು ಕಳವಳಕಾರಿ ಪ್ರವೃತ್ತಿಯನ್ನು ಕೂಡ ಎತ್ತಿ ತೋರಿಸಿದೆ: ಹದಿಹರೆಯದವರು ಹೆಚ್ಚು ಗಂಭೀರವಾದ ಆನ್‌ಲೈನ್ ಅಪಾಯಗಳ ಬಗ್ಗೆ ತಮ್ಮ ಪೋಷಕರಿಗೆ ತಿಳಿಸುವ ಸಂಭವಗಳು ಕಡಿಮೆ.
ಇದರ ಜೊತೆಗೆ, ಸುಮಾರು 21 ಪ್ರತಿಶತ ಪೋಷಕರು ತಮ್ಮ ಮಕ್ಕಳ ಆನ್‌ಲೈನ್ ಚಟುವಟಿಕೆಗಳ ಕುರಿತು ಪರಿಣಾಮಕಾರಿಯಾಗಿ ನಿಗಾ ವಹಿಸುವುದು ಹೇಗೆ ಎಂದು ತಮಗೆ ಖಚಿತವಾಗಿ ತಿಳಿದಿಲ್ಲ ಎಂದು ಹೇಳಿದರು.
SnapSavvy ಮಾರ್ಗದರ್ಶಿಯನ್ನು ಓದಿ
ಹಾಗೂ, ಪೋಷಕರಿಗಾಗಿ ಇನ್ನಷ್ಟು ಮಾರ್ಗದರ್ಶನ ಮತ್ತು ಸಂಪನ್ಮೂಲಗಳಿಗಾಗಿ ನಮ್ಮ ಮೈಕ್ರೋಸೈಟ್ parents.snapchat.com ಗೆ ಹೋಗಿ.