ಸುರಕ್ಷತೆ ಮತ್ತು ಪ್ರಭಾವ ಬ್ಲಾಗ್ ಅನ್ನು ಪರಿಚಯಿಸುತ್ತಿದ್ದೇವೆ

ಏಪ್ರಿಲ್ 21, 2021

ಹತ್ತು ವರ್ಷಗಳ ಹಿಂದೆ ಬಾಬಿ ಮತ್ತು ನಾನು Snapchat ಕುರಿತು ಕೆಲಸ ಆರಂಭಿಸಿದಾಗ, ನಾವು ಭಿನ್ನವಾದುದನ್ನು ನಿರ್ಮಿಸುವ ಕುರಿತು ಗಮನ ಕೇಂದ್ರೀಕರಿಸಿದೆವು. 

ಆ ಸಮಯದಲ್ಲಿ, ಸಾಮಾಜಿಕ ಮಾಧ್ಯಮ ವೇದಿಕೆಗಳು ಸಾಧ್ಯವಾದಷ್ಟು ಜನರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದವು, ಭಾರೀ ಫಾಲೋವಿಂಗ್ ನಿರ್ಮಿಸಿಕೊಳ್ಳಲು ಮತ್ತು ಇಡೀ ಜಗತ್ತಿಗೆ ಕಂಟೆಂಟ್ ಅನ್ನು ಪ್ರಸಾರ ಮಾಡಲು ಅವರನ್ನು ಪ್ರೋತ್ಸಾಹಿಸುತ್ತಿದ್ದವು. ಅವರ ಪೂರ್ಣ ಭಾವನೆಗಳನ್ನು ಹಂಚಿಕೊಳ್ಳುವ ಬದಲಾಗಿ, ನಮ್ಮ ಬಹುತೇಕ ಸದಸ್ಯರು ಪ್ರದರ್ಶಿಸಬೇಕಾದ ಒತ್ತಡವನ್ನು ಅನುಭವಿಸಿದರು ಮತ್ತು ಬಹುಶಃ ತಮ್ಮ ಒಂದು ಪ್ರತಿಶತದಷ್ಟು ಅನುಭವವನ್ನು ಹಂಚಿಕೊಂಡರು. ನಾವು ಚೆನ್ನಾಗಿ ಕಾಣುತ್ತಿದ್ದ, ಪ್ರಯಾಣ ಮಾಡಿದ, ಬದುಕಿನ ಪ್ರಮುಖ ಕ್ಷಣಗಳು ಮುಂತಾದ ಕ್ಷಣಗಳನ್ನು ನಾವು ಪೋಸ್ಟ್ ಮಾಡಿದೆವು. ಅದು ನಿಜಕ್ಕೂ ಮಿತಿಗೊಳಿಸುವಂತದ್ದು ಎಂದು ಬಾಬಿ ಮತ್ತು ನನಗೆ ಅನಿಸಿತು, ಏಕೆಂದರೆ ಉಳಿದ ನಮ್ಮ ಬದುಕಿನ ತೊಂಬತ್ತೊಂಬತ್ತು ಭಾಗ ನಮ್ಮ ಆತ್ಮೀಯ ಸಂಬಂಧಗಳು ಮತ್ತು ಸಂಪರ್ಕಗಳ ಆಧಾರವಾಗಿರುತ್ತದೆ. 

Snapchat ನೊಂದಿಗೆ, ಮಾನವರ ಸುತ್ತ ನಾವು ತಂತ್ರಜ್ಞಾನವನ್ನು ನಿರ್ಮಿಸಿದೆವು, ತಂತ್ರಜ್ಞಾನದ ಸುತ್ತ ಮಾನವರನ್ನು ಕಲೆಹಾಕಲಿಲ್ಲ. ತಮ್ಮ ನೈಜ ಸ್ನೇಹಿತರೊಂದಿಗೆ, ತಮ್ಮ ಪೂರ್ಣ ಅನುಭವಗಳನ್ನು ಅಭಿವ್ಯಕ್ತಪಡಿಸಲು ಜನರಿಗೆ ಮಾರ್ಗ ಒದಗಿಸುವುದಕ್ಕಾಗಿ ನಾವು Snapchat ನಿರ್ಮಿಸಿದೆವು. ಆದ ಕಾರಣ Snap ಗಳು ಡಿಫಾಲ್ಟ್ ಆಗಿ ಅಳಿಸುವಂತೆ ಮಾಡಿದೆವು -- ಸಾಮಾಜಿಕ ಮಾಧ್ಯಮ ಬರುವುದಕ್ಕಿಂತ ಮುಂಚೆ, ಸ್ನೇಹಿತರು ತಾವು ನಡೆಸಿದ ಪ್ರತಿ ಸಂಭಾಷಣೆಯ ಎಲ್ಲ ಪ್ರತಿಲಿಪಿಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳುತ್ತಿರಲಿಲ್ಲ.

ನಾವು Snapchat ಅನ್ನು ಆರಂಭಿಸಿದಾಗ, ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಲು Snap ಗಳನ್ನು ಪರಸ್ಪರ ಕಳುಹಿಸುವುದನ್ನು ಆರಂಭಿಸಿದ ಜನರಿಂದ ನಾವು ಅಸಾಧಾರಣ ಕಥೆಗಳನ್ನು ಕೇಳಲಾರಂಭಿಸಿದೆವು, ಸಂವಹನ ನಡೆಸಲು ಮತ್ತು ತಮ್ಮನ್ನು ಅಭಿವ್ಯಕ್ತಪಡಿಸಲು ಇನ್ನಷ್ಟು ಮುಕ್ತವಾದ ಭಾವನೆ ಹೊಂದಿದ್ದಾಗಿ ಅವರು ಹೇಳಿದರು. 

ಆ ಮೊದಲ ಸಂಭಾಷಣೆಯ ಬಳಿಕದ ದಶಕದಲ್ಲಿ, ಮಾನವತೆಯನ್ನು ಬೆಂಬಲಿಸುವ ಮತ್ತು ನೈಜ ಸ್ನೇಹವನ್ನು ಪೋಷಿಸುವ ಉತ್ಪನ್ನಗಳು ಮತ್ತು ತಂತ್ರಜ್ಞಾನವನ್ನು ವಿನ್ಯಾಸಗೊಳಿಸಲು ನಾವು ಕಠಿಣ ಪರಿಶ್ರಮಪಟ್ಟೆವು. ನಾವು ಸಾರ್ವಜನಿಕ ಕಾಮೆಂಟ್‌ಗಳಿಲ್ಲದೆ, ಅಭಿವ್ಯಕ್ತಗೊಳಿಸುವ ಕ್ಯಾಮೆರಾದ ಸುತ್ತ ಸೇವೆಯನ್ನು ವಿನ್ಯಾಸಗೊಳಿಸಿದೆವು, ನ್ಯೂಸ್‌ಫೀಡ್‌ನ ಸುತ್ತ ಅಲ್ಲ.

ನಮ್ಮ ಕಂಪನಿ ಬಹಳಷ್ಟು ಬದಲಾಗಿದೆ, ಆದರೆ ನಮ್ಮ ಉತ್ಪನ್ನಗಳು ಈ ಮೂಲ ವಿಚಾರಗಳಿಗೆ ಬದ್ಧವಾಗಿ ಉಳಿದಿವೆ. ನಿರ್ದಿಷ್ಟವಾಗಿ ನಮ್ಮ ಸ್ನೇಹಿತರು ಮತ್ತು ಪ್ರೀತಿಪಾತ್ರರು ಅನಿವಾರ್ಯವಾಗಿ ಸೃಜನಶೀಲ ಮತ್ತು ಸುರಕ್ಷಿತ ವಿಧಾನಗಳಲ್ಲಿ ವರ್ಚುವಲ್ ಆಗಿ ಸಂಪರ್ಕಿತರಾಗಬೇಕಾದ ಒಂದು ವರ್ಷವನ್ನು ನಾವೆಲ್ಲ ಸಹಿಸಿಕೊಂಡೆವಾದ್ದರಿಂದ, ಪ್ರತಿ ದಿನ ನಮ್ಮ ಸಮುದಾಯಕ್ಕೆ ಮೊದಲ ಆದ್ಯತೆ ನೀಡುವುದು ಹೇಗೆ ಎಂದು ನಾವು ಯೋಚಿಸುತ್ತೇವೆ.

ಆದಕಾರಣ ನಮ್ಮ ಮೊದಲ ಸುರಕ್ಷತೆ ಮತ್ತು ಪ್ರಭಾವ ಬ್ಲಾಗ್ ಪರಿಚಯಿಸಲು ನಾನು ಹರ್ಷಿತನಾಗಿದ್ದೇನೆ. ಇದು ವಿನ್ಯಾಸದ ಪ್ರಯತ್ನಗಳ ಮೂಲಕ ನಮ್ಮ ಸುರಕ್ಷತೆ ಮತ್ತು ಗೌಪ್ಯತೆಯನ್ನು ವಿವರಿಸುವ ಮತ್ತು ಈ ಸ್ಥಳಾವಕಾಶದಲ್ಲಿ ಹೊಸ ವಿಚಾರಗಳನ್ನು ಅನ್ವೇಷಿಸುವ ಸ್ಥಳವಾಗಿದೆ. ಏನಾದರೂ ಹೊಸತನ್ನು ಮತ್ತು ಸಹಾಯಕವಾದುದನ್ನು ರಚಿಸಲು ಹಾಗೂ ನಾವು ಮುಂದುವರಿದಂತೆ ನಿಮ್ಮ ಪ್ರತಿಕ್ರಿಯೆಯನ್ನು ಒಳಗೊಳ್ಲಲು ನಾವು ಎದುರು ನೋಡುತ್ತೇವೆ. 

ಇವಾನ್

ಸುದ್ದಿಗಳಿಗೆ ಹಿಂತಿರುಗಿ