ಕೌಟುಂಬಿಕ ಕೇಂದ್ರದಲ್ಲಿ ವಿಷಯ ನಿಯಂತ್ರಣಗಳನ್ನು ಪರಿಚಯಿಸುತ್ತಿದ್ದೇವೆ

ಮಾರ್ಚ್ 14, 2023

Snapchat ನಲ್ಲಿ ತಮ್ಮ ಹದಿಹರೆಯದ ಮಕ್ಕಳು ಯಾರೊಂದಿಗೆ ಸಂವಹನ ನಡೆಸುತ್ತಿದ್ದಾರೆ ಎನ್ನುವ ಕುರಿತು ಒಳನೋಟವನ್ನು ಪಡೆಯುವ ವಿಧಾನವಾಗಿ ಮತ್ತು ಹಾಗೆ ಮಾಡುವಾಗ ಹದಿಹರೆಯದವರ ಗೌಪ್ಯತೆಯನ್ನು ರಕ್ಷಿಸುವ ರೀತಿಯಲ್ಲಿ ಕಳೆದ ವರ್ಷ ನಾವು Snapchat ನಲ್ಲಿ ಕೌಟುಂಬಿಕ ಕೇಂದ್ರವನ್ನು ಪರಿಚಯಿಸಿದೆವು. ತಮ್ಮ ಹದಿಹರೆಯದ ಮಕ್ಕಳ ವೈಯಕ್ತಿಕ ಅನುಭವಗಳು ಮತ್ತು ಅಗತ್ಯಗಳನ್ನು ಕಸ್ಟಮೈಸ್ ಮಾಡಲು ಪೋಷಕರಿಗೆ ಸಹಾಯ ಮಾಡಲು ಕಾಲಕ್ರಮೇಣ ಹೆಚ್ಚುವರಿ ಟೂಲ್‌ಗಳನ್ನು ಸೇರಿಸುವ ಯೋಜನೆಯ ಕುರಿತೂ ನಾವು ಹೇಳಿದ್ದೆವು.

ಇಂದು, ಕೌಟುಂಬಿಕ ಕೇಂದ್ರಕ್ಕಾಗಿನ ನಮ್ಮ ನವೀನ ವೈಶಿಷ್ಟ್ಯ, ವಿಷಯ ನಿಯಂತ್ರಣಗಳನ್ನು ಬಿಡುಗಡೆ ಮಾಡಲು ನಾವು ಹರ್ಷಿತರಾಗಿದ್ದೇವೆ, ಇದು Snapchat ನಲ್ಲಿ ತಮ್ಮ ಹದಿಹರೆಯದ ಮಕ್ಕಳು ನೋಡಬಹುದಾದ ವಿಷಯದ ವಿಧವನ್ನು ಸೀಮಿತಗೊಳಿಸಲು ಪೋಷಕರಿಗೆ ಅವಕಾಶ ಕಲ್ಪಿಸುತ್ತದೆ.

Snapchat ಅನ್ನು ಸಾಂಪ್ರದಾಯಿಕ ಸಾಮಾಜಿಕ ಮಾಧ್ಯಮಗಳಿಗಿಂತ ಭಿನ್ನವಾಗಿರುವಂತೆ ವಿನ್ಯಾಸಗೊಳಿಸಲಾಗಿದೆ ಮತ್ತು ಇದು ಜನರು ವಿಷಯವನ್ನು ಬಳಸುವ ವಿಧಾನಕ್ಕೂ ವಿಸ್ತರಿಸುತ್ತದೆ. ನಮ್ಮ ಆ್ಯಪ್‌ನಲ್ಲಿ ವಿಷಯವು ಸಂಭಾವ್ಯತಃ ಬೃಹತ್ ಪ್ರೇಕ್ಷಕರನ್ನು ತಲುಪಬಹುದಾದ ಎರಡು ಭಾಗಗಳಿವೆ:

  • ಕಥೆಗಳು ನಮ್ಮ ವಿಷಯಗಳ ವೇದಿಕೆಯಾಗಿದ್ದು, ಇಲ್ಲಿ ವಿಷಯ ಕ್ರಿಯೇಟರ್‌ಗಳು, Snap ಸ್ಟಾರ್‌ಗಳು ಮತ್ತು NBC News, Axios, ESPN, Le Monde and People ನಂತಹ 900 ಕ್ಕೂ ಅಧಿಕ ಮಾಧ್ಯಮ ಪಾಲುದಾರರು, ವಿಶ್ವಾಸಾರ್ಹ ಸುದ್ದಿ, ಮನರಂಜನೆ, ಕ್ರೀಡೆ ಮತ್ತು ಇತರ ಬಗೆಯವುಗಳನ್ನು ಒದಗಿಸುತ್ತಾರೆ. ಕಥೆಗಳು ಒಂದು ಮುಕ್ತ ವೇದಿಕೆಯಲ್ಲ – ಮತ್ತು ಕ್ರಿಯೇಟರ್‌ಗಳು ಹಾಗೂ ಪಾಲುದಾರರು ನಮ್ಮ ವಿಷಯ ಸಂಪಾದಕೀಯ ಮಾರ್ಗಸೂಚಿಗಳಿಗೆ ಬದ್ಧರಾಗಿರಬೇಕು. 

  • ಸ್ಪಾಟ್‌ಲೈಟ್ ನಮ್ಮ ಮನರಂಜನೆ ವೇದಿಕೆಯಾಗಿದ್ದು, ಇಲ್ಲಿ Snapchatter ಗಳು ನಮ್ಮ ಕಮ್ಯುನಿಟಿಯ ಸದಸ್ಯರು ರಚಿಸಿದ ವಿನೋದಮಯ ಮತ್ತು ಸೃಜನಶೀಲ ವಿಷಯವನ್ನು ನೋಡಬಹುದು. ಸ್ಪಾಟ್‌ಲೈಟ್‌ನಲ್ಲಿ, Snapchatter ಗಳು ಸಲ್ಲಿಸುವ ಯಾವುದೇ ವಿಷಯ ಕಮ್ಯುನಿಟಿ ಮಾರ್ಗಸೂಚಿಗಳ ಪಾಲನೆ ಮಾಡಬೇಕು. 

ಪ್ರಸಾರ ಮಾಡಲು ನಾವು ಯಾವ ಬಗೆಯ ವಿಷಯಕ್ಕೆ ಅವಕಾಶ ನೀಡುತ್ತೇವೆ ಎನ್ನುವ ಕುರಿತು ನಾವು ಬುದ್ಧಿಪೂರ್ವಕವಾಗಿದ್ದೇವೆ. ಪರಿಶೀಲಿಸದೆ ಇರುವ ವಿಷಯ ವೈರಲ್ ಆಗದಂತೆ ತಡೆಯಲು ನಮ್ಮ ವೇದಿಕೆ ಮತ್ತು ನೀತಿಗಳನ್ನು ವಿನ್ಯಾಸಗೊಳಿಸಲಾಗಿದೆ ಹಾಗೂ ಕ್ರಿಯೇಟರ್‌ಗಳು ಮತ್ತು Snapchatter ಗಳಿಂದ ವಿಷಯ, ಕಥೆಗಳು ಅಥವಾ ಸ್ಪಾಟ್‌ಲೈಟ್‌ನಲ್ಲಿ ಸಾರ್ವಜನಿಕರನ್ನು ತಲುಪಲು ಅರ್ಹವಾಗುವುದಕ್ಕೆ ಮುನ್ನ, ಅದನ್ನು ನಾವು ಪೂರ್ವಭಾವಿಯಾಗಿ ಮಾಡರೇಟ್ ಮಾಡುತ್ತೇವೆ. 

ಕೌಟುಂಬಿಕ ಕೇಂದ್ರದಲ್ಲಿನ ನಮ್ಮ ಹೊಸ ವಿಷಯ ನಿಯಂತ್ರಣಗಳು, ಪ್ರಕಾಶಕರು ಮತ್ತು ಕ್ರಿಯೇಟರ್‌ಗಳಿಂದ ಸೂಕ್ಷ್ಮ ಅಥವಾ ಸೂಚ್ಯ ಎಂದು ಗುರುತಿಸಿರಬಹುದಾದ ಕಥೆಗಳನ್ನು ಫಿಲ್ಟರ್ ಮಾಡಲು ಪೋಷಕರಿಗೆ ಅವಕಾಶ ಕಲ್ಪಿಸುತ್ತದೆ. ವಿಷಯ ನಿಯಂತ್ರಣಗಳನ್ನು ಸಕ್ರಿಯಗೊಳಿಸಲು, ಪೋಷಕರು ತಮ್ಮ ಹದಿಹರೆಯದವರೊಂದಿಗೆ ಅಸ್ತಿತ್ವದಲ್ಲಿರುವ ಕೌಟುಂಬಿಕ ಕೇಂದ್ರವನ್ನು ಹೊಂದಿರಬೇಕು.

ಅರ್ಹತಾ ಶಿಫಾರಸುಗಳಿಗೆ ನಮ್ಮ ವಿಷಯ ಮಾರ್ಗಸೂಚಿಗಳನ್ನು ಪ್ರಕಟಿಸುವುದು 

ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು ಇಡೀ ವೇದಿಕೆಯಾದ್ಯಂತ ಕಟ್ಟುನಿಟ್ಟಾಗಿ ನಿಷೇಧಿಸಲಾಗಿರುವ ವಿಷಯಗಳ ವಿಧಗಳನ್ನು ತಿಳಿಸುತ್ತವೆ, ಇದೇ ವೇಳೆ ಕಥೆಗಳು ಅಥವಾ ಸ್ಪಾಟ್‌ಲೈಟ್‌ನಲ್ಲಿ Snapchatter ಗಳಿಗೆ ಶಿಫಾರಸು ಮಾಡಲಾಗುವ ಸಾರ್ವಜನಿಕ ವಿಷಯಕ್ಕೆ ನಾವು ಇನ್ನೂ ಹೆಚ್ಚಿನ ಮಾನದಂಡವನ್ನು ನಿಗದಿಪಡಿಸಿದ್ದೇವೆ. 

ಮೊದಲ ಬಾರಿಗೆ, ಕಥೆಗಳು ಅಥವಾ ಸ್ಪಾಟ್‌ಲೈಟ್‌ನಲ್ಲಿ ವಿಷಯಗಳು ಪ್ರದರ್ಶಿತವಾಗುವ ನಮ್ಮ ಸಮುದಾಯದ ಸದಸ್ಯರಿಗೆ ನಾವು ನಮ್ಮ ವಿಷಯ ಮಾರ್ಗಸೂಚಿಗಳನ್ನು ಪ್ರಕಟಿಸುತ್ತಿದ್ದೇವೆ. ಈ ಮಾರ್ಗಸೂಚಿಗಳು ಇವುಗಳನ್ನು ವಿವರಿಸುತ್ತವೆ:

  • ನಿಷೇಧಿತವಾಗಿರುವ, ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳೊಂದಿಗೆ ಹೊಂದಾಣಿಕೆಯಾಗುವ ವಿಷಯ;

  • ಕಥೆಗಳು ಅಥವಾ ಸ್ಪಾಟ್‌ಲೈಟ್‌ನಲ್ಲಿ ಯಾವ ವಿಷಯವು ಶಿಫಾರಸಿಗೆ ಅರ್ಹವಾಗಿದೆ, ಅಂದರೆ ಅದು ಹೆಚ್ಚುವರಿ ವ್ಯಾಪ್ತಿಯನ್ನು ಪಡೆಯುತ್ತದೆ;

  • ಯಾವ ವಿಷಯವನ್ನು ಸೂಕ್ಷ್ಮ ಎಂದು ಪರಿಗಣಿಸಲಾಗುತ್ತದೆ ಮತ್ತು ನಮ್ಮ ಹೊಸ ವಿಷಯ ನಿಯಂತ್ರಣಗಳನ್ನು ಬಳಸಿಕೊಂಡು ನಿರ್ಬಂಧಿಸಲಾಗುತ್ತದೆ.

ನಾವು ಈ ಮಾರ್ಗಸೂಚಿಗಳನ್ನು ಯಾವಾಗಲೂ ನಮ್ಮ ಮಾಧ್ಯಮ ಪಾಲುದಾರರು ಮತ್ತು Snap ಸ್ಟಾರ್‌ಗಳೊಂದಿಗೆ ಹಂಚಿಕೊಂಡಿದ್ದೇವೆ. ಯಾರಾದರೂ ಓದಬಹುದಾದ ರೀತಿಯಲ್ಲಿ ಈ ಪೂರ್ಣ ವಿಷಯ ಮಾರ್ಗಸೂಚಿಗಳನ್ನು ಪ್ರಕಟಿಸುವ ಮೂಲಕ, ಸಾರ್ವಜನಿಕರು ನೋಡುವ ವಿಷಯಕ್ಕಾಗಿ ಮತ್ತು ವಿತರಣೆಗಾಗಿ ನಮ್ಮ ಅರ್ಹತಾ ಅಗತ್ಯಗಳಿಗಾಗಿ ನಾವು ನಿಗದಿಪಡಿಸಿರುವ ಪ್ರಬಲ ಮಾನದಂಡಗಳಿಗೆ ನಾವು ಹೆಚ್ಚಿನ ಪಾರದರ್ಶಕತೆಯನ್ನು ಒದಗಿಸುತ್ತೇವೆ.

ಈ ಹೊಸ ಟೂಲ್‌ಗಳು ಮತ್ತು ಮಾರ್ಗಸೂಚಿಗಳು ಪೋಷಕರು, ಆರೈಕೆದಾರರು, ನಂಬಿಕಸ್ಥ ವಯಸ್ಕರು ಮತ್ತು ಹದಿಹರೆಯದವರಿಗೆ ಕೇವಲ ತಮ್ಮ Snapchat ಅನುಭವವನ್ನು ವೈಯಕ್ತಿಕಗೊಳಿಸುವುದಕ್ಕೆ ಸಹಾಯ ಮಾಡುವುದಷ್ಟೇ ಅಲ್ಲ, ಜೊತೆಗೆ ತಮ್ಮ ಆನ್‌ಲೈನ್ ಅನುಭವಗಳ ಕುರಿತು ಫಲಪ್ರದ ಸಂಭಾಷಣೆಗಳನ್ನು ನಡೆಸಲು ಅವರನ್ನು ಸಬಲಗೊಳಿಸುತ್ತವೆ ಎಂದು ನಾವು ಆಶಿಸುತ್ತೇವೆ. ನಿಮ್ಮ ಹದಿಹರೆಯದವರೊಂದಿಗೆ ಈ ಸಂಭಾಷಣೆಗಳನ್ನು ಆರಂಭಿಸಲು ಸಹಾಯ ಪಡೆದುಕೊಳ್ಳುವುದಕ್ಕಾಗಿ ನಮ್ಮ ಪರಿಷ್ಕರಿಸಿದ ಸುರಕ್ಷತಾ ಸೈಟ್‌ನಲ್ಲಿ ನೀವು ಸಂಪನ್ಮೂಲಗಳನ್ನು ಕಂಡುಕೊಳ್ಳಬಹುದು.

ಅಂತಿಮವಾಗಿ, ನಮ್ಮ ಪ್ರಾಯೋಗಿಕ ಚಾಟ್‌ಬಾಟ್ ಆದ My AI ಅನ್ನು ಹದಿಹರೆಯದವರು ಬಳಸುತ್ತಿರುವುದಕ್ಕೆ ಸಂಬಂಧಿಸಿ ಪೋಷಕರಿಗೆ ಇನ್ನಷ್ಟು ಗೋಚರತೆ ಮತ್ತು ನಿಯಂತ್ರಣವನ್ನು ಒದಗಿಸುವ My AI ಗೆ ಸಂಬಂಧಿಸಿದ ಹೆಚ್ಚುವರಿ ನಿಯಂತ್ರಣಗಳನ್ನು ನಮ್ಮ ಕೌಟುಂಬಿಕ ಕೇಂದ್ರಕ್ಕೆ ಸೇರಿಸುವ ಕುರಿತು ನಾವು ಕೆಲಸ ಮಾಡುತ್ತಿದ್ದೇವೆ.

— Snap ತಂಡ

ಸುದ್ದಿಗಳಿಗೆ ಹಿಂತಿರುಗಿ