Snapchat ನಲ್ಲಿ ಸುಳ್ಳು ಮಾಹಿತಿಯ ಹರಡುವಿಕೆಯನ್ನು ನಾವು ಹೇಗೆ ತಡೆಗಟ್ಟುತ್ತೇವೆ

ಸೆಪ್ಟೆಂಬರ್ 8, 2022

ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮಧ್ಯಂತರ ಚುನಾವಣೆಗಳು ಸಮೀಪಿಸುತ್ತಿರುವಂತೆ, Snapchat ನಲ್ಲಿ ಸುಳ್ಳು ಮಾಹಿತಿ ಹರಡುವಿಕೆಯನ್ನು ತಡೆಗಟ್ಟುವ ನಮ್ಮ ದೀರ್ಘಕಾಲಿಕ ನಿಲುವನ್ನು ಮತ್ತು ನಮ್ಮ ವೇದಿಕೆಯಲ್ಲಿ ಸುಳ್ಳು ಮಾಹಿತಿಯ ಹರಡುವಿಕೆಯನ್ನು ತಡೆಗಟ್ಟುವುದಕ್ಕಾಗಿ ನಮ್ಮ ಬಲಿಷ್ಠ ಅಡಿಪಾಯವನ್ನು ನಿರ್ಮಿಸಲು ನಾವು ನಿರಂತರವಾಗಿ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಎತ್ತಿತೋರಿಸಲು ನಾವು ಬಯಸಿದೆವು.

ನಮ್ಮ ಪ್ರಯತ್ನಗಳು ಯಾವಾಗಲೂ ನಮ್ಮ ವೇದಿಕೆಯ ವಿನ್ಯಾಸದ ಜೊತೆಗೆ ಆರಂಭವಾಗಿವೆ. Snapchat ನಲ್ಲಿ, ನಾವು ನಿಜ ಜೀವನದ ವಾಸ್ತವಿಕ ಮತ್ತು ಮೋಜಿನ ಸಂಭಾಷಣೆಗಳ ಆಧಾರದ ಮೇಲೆ ಏನಾದರೂ ವಿಭಿನ್ನವಾದುದನ್ನು ನಿರ್ಮಿಸಲು ಬಯಸಿದ್ದೇವೆ. ಮೊದಲಿನಿಂದಲೂ ನಾವು ಸುರಕ್ಷತೆ ಮತ್ತು ಗೌಪ್ಯತೆಯನ್ನು ನಮ್ಮ ವೇದಿಕೆಯ ಮೂಲಭೂತ ವಿನ್ಯಾಸವಾಗಿ ನಿರ್ಮಿಸಿದ್ದೇವೆ. ಆದ್ದರಿಂದಲೇ Snapchat ನೇರವಾಗಿ ಕ್ಯಾಮೆರಾ ಮೇಲೆ ಕೇಂದ್ರಿತವಾಗಿದೆ ಮತ್ತು ಇದು ಈಗಾಗಲೇ ನಿಜ ಜೀವನದ ಸ್ನೇಹಿತರನ್ನು ಸಂಪರ್ಕಿಸುವ ಕುರಿತು ಗಮನ ಹರಿಸುತ್ತದೆ. ನಾವು ಯಾವಾಗಲೂ Snapchatter ಗಳು ತಮ್ಮ ಸ್ನೇಹಿತರೊಂದಿಗೆ ಮೋಜು ಮಾಡುವಂತೆ ಪ್ರೇರೇಪಿಸಿದ್ದೇವೆಯೇ ಹೊರತು— ಫಾಲೋ ಮಾಡುವ, ಅಭಿಪ್ರಾಯ ಹಂಚಿಕೊಳ್ಳುವ ಅಥವಾ ಹೋಲಿಕೆ ಗಳಿಸಲು ಅಥವಾ ಲೈಕ್ ಗಳಿಸಲು ಒತ್ತಡ ಹೇರುತ್ತಿಲ್ಲ. Snapchat ಸಾಮಾನ್ಯವಾಗಿ ನಾವು ಮುಖಾ ಮುಖಿ ಅಥವಾ ಫೋನ್‌ನಲ್ಲಿ ಹೇಗೆ ಸಂವಹನ ಮಾಡುತ್ತೇವೆಯೋ ಹಾಗೆ ಪ್ರತಿಬಿಂಬಿಸುತ್ತದೆ. ಏಕೆಂದರೆ Snapchat ಮೂಲಕ ಮಾಡುವ ಡಿಜಿಟಲ್ ಸಂವಹನವು ಡಿಫಾಲ್ಟ್ ಆಗಿ ಅಳಿಸಲಾಗುತ್ತದೆ. Snapchat ನಲ್ಲಿ ಹೆಚ್ಚಿನ ಪ್ರೇಕ್ಷಕರನ್ನು ತಲುಪಲು, ನಾವು ಮಾಡರೇಟ್ ಮಾಡದ ವಿಷಯದ ಸಾಮರ್ಥ್ಯವನ್ನು ಮಿತಿಗೊಳಿಸುತ್ತೇವೆ. ವರ್ಧಿತ ವಿಷಯವನ್ನು ಉನ್ನತ ಗುಣಮಟ್ಟದಲ್ಲಿ ಇರುವಂತೆ ಮಾಡುವ ಮೂಲಕ ನಮ್ಮ ವಿಷಯ ಮಾರ್ಗಸೂಚಿಗೆ ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳುತ್ತೇವೆ. Snapchat ಹಲವು ವರ್ಷಗಳ ಪ್ರತಿಫಲವಾಗಿದ್ದರೂ, ನಾವು ಯಾವಾಗಲೂ ನಮ್ಮ ಸಮುದಾಯದ ಸುರಕ್ಷತೆ, ಗೌಪ್ಯತೆ ಮತ್ತು ಯೋಗಕ್ಷೇಮವನ್ನು ಉತ್ತಮವಾಗಿ ಬಳಸಿಕೊಳ್ಳುವ ತಂತ್ರಜ್ಞಾನ ನಿರ್ಮಿಸಲು ಪ್ರಯತ್ನಿಸಿದ್ದೇವೆ.

ನಮ್ಮ ಅಧಿಕೃತ ವಿನ್ಯಾಸದ ಜೊತೆಗೆ, Snapchat ನಲ್ಲಿ ಸುಳ್ಳು ಮಾಹಿತಿಯ ಹರಡುವಿಕೆಯನ್ನು ತಡೆಗಟ್ಟಲು ನಮಗೆ ಸಹಾಯ ಮಾಡುವ ಹಲವಾರು ಪ್ರಮುಖ ನೀತಿಗಳು ಇವೆ:

  • ನಮ್ಮ ನೀತಿಗಳು ಹಲವು ಬಾರಿ ಸುಳ್ಳು ಮಾಹಿತಿಯ ಹರಡುವಿಕೆಯನ್ನು ನಿಷೇಧಿಸಿವೆ. ಎಲ್ಲ Snapchatter ಗಳಿಗೆ ಒಂದೇ ರೀತಿ ಅನ್ವಯಿಸುವ ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು ಮತ್ತು ನಮ್ಮ Discover ಪಾಲುದಾರರಿಗೆ ಅನ್ವಯಿಸುವ ವಿಷಯ ಮಾರ್ಗಸೂಚಿಗಳು, ಪಿತೂರಿ ಸಿದ್ಧಾಂತಗಳು, ದುರಂತ ಘಟನೆಗಳ ಅಸ್ತಿತ್ವವನ್ನು ನಿರಾಕರಿಸುವುದು, ಆಧಾರರಹಿತ ವೈದ್ಯಕೀಯ ಕ್ಲೇಮ್‌ಗಳು ಅಥವಾ ನಾಗರಿಕ ಪ್ರಕ್ರಿಯೆಗಳ ಸಮಗ್ರತೆಯನ್ನು ಕಡೆಗಣಿಸುವುದು ಸೇರಿದಂತೆ, ಹಾನಿ ಉಂಟುಮಾಡಬಹುದಾದ ಸುಳ್ಳುಮಾಹಿತಿ ಹರಡುವಿಕೆಯನ್ನು ನಿಷೇಧಿಸುತ್ತವೆ.  ವಾಸ್ತವಿಕ ಘಟನೆಗಳ ಕುರಿತು ತಪ್ಪು ಕಲ್ಪನೆ ಮಾಡುವ ಹಂಚಿಕೆ ಮಾಧ್ಯಮಗಳು (ಹಾನಿಕಾರಕ ಆಳವಾದ ಸುಳ್ಳು ಅಂಶಗಳು ಅಥವಾ ಸಾಮಾನ್ಯ ಸುಳ್ಳುಗಳು ಸೇರಿದಂತೆ) ಸೇರಿವೆ.

  • ಸುಳ್ಳು ಮಾಹಿತಿಯನ್ನು ಒಳಗೊಂಡಿರುವ ವಿಷಯದ ವಿರುದ್ಧ ಜಾರಿ ಮಾಡುವ ನಮ್ಮ ವಿಧಾನವು ನೇರವಾಗಿದೆ: ನಾವು ಅದನ್ನು ತೆಗೆದುಹಾಕುತ್ತೇವೆ. ನಮ್ಮ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ವಿಷಯ ಕಂಡು ಬಂದಾಗ, ನಾವು ತಕ್ಷಣ ಅದನ್ನು ತೆಗೆದು ಹಾಕುತ್ತೆವೆ, ಇದರಿಂದ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಹಂಚಿಕೊಳ್ಳುವ ಅಪಾಯವನ್ನು ಕಡಿಮೆಗೊಳಿಸಬಹುದು.

  • ನಮ್ಮ ಆ್ಯಪ್‌ನಾದ್ಯಂತ, ಪರಿಶೀಲಿಸದೆ ಇರುವ ಕಂಟೆಂಟ್ ‘ವೈರಲ್ ಆಗಲು’ ನಾವು ಅವಕಾಶ ನೀಡುವುದಿಲ್ಲ. Snapchat ಜನರು ಅಥವಾ ಪ್ರಕಾಶಕರು ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡಬಹುದಾದ ಮುಕ್ತ ನ್ಯೂಸ್‌ಫೀಡ್ ನೀಡುವುದಿಲ್ಲ. Discover ಪ್ಲಾಟ್‌ಫಾರ್ಮ್‌ ಯಾವತ್ತೂ ಸಂಪಾದನೆ ಮಾಡಿರುವ ಮಾಧ್ಯಮ ಪ್ರಕಾಶಕರಿಂದ ಮಾತ್ರ ವಿಷಯವನ್ನು ಪಡೆದುಕೊಳ್ಳುತ್ತದೆ. ನಮ್ಮ ಸ್ಪಾಟ್‌ಲೈಟ್‌ ಪ್ಲಾಟ್‌ಫಾರ್ಮ್‌ ವಿಷಯ ಬೃಹತ್ ಪ್ರಮಾಣದ ಪ್ರೇಕ್ಷಕರನ್ನು ತಲುಪಲು ಅರ್ಹವಾಗುವ ಮುನ್ನ ಸಕ್ರಿಯವಾಗಿ ನಿರೂಪಿಸಲಾಗಿರುತ್ತದೆ. ಗಾತ್ರದಲ್ಲಿ ಸೀಮಿತವಾಗಿರುವ ಗುಂಪು ಚಾಟ್‌ಗಳನ್ನು ನಾವು ನೀಡುತ್ತೇವೆ ಮತ್ತು ನೀವು ಆ ಗುಂಪಿನ ಸದಸ್ಯನಾಗದೆ ಇದ್ದಲ್ಲಿ ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಕಟಿಸಲಾಗುವುದಿಲ್ಲ.

  • ನಾವು ಎಲ್ಲ ರಾಜಕೀಯ ಮತ್ತು ವಕಾಲತ್ತು ಜಾಹೀರಾತುಗಳನ್ನು ಪರಿಶೀಲಿಸಲು ಮಾನವ ಪುನರಾವಲೋಕನ ಪ್ರಕ್ರಿಯೆಯನ್ನು ಬಳಸುತ್ತೇವೆ. ಚುನಾವಣೆ ಸಂಬಂಧಿತ ಜಾಹೀರಾತುಗಳು ಮತ್ತು ವಕಾಲತ್ತು ಕುರಿತ ಜಾಹೀರಾತುಗಳು ಸೇರಿದಂತೆ, ಎಲ್ಲ ರಾಜಕೀಯ ಜಾಹೀರಾತುಗಳು ಪ್ರಾಯೋಜಿತ ಸಂಘಟನೆಯನ್ನು ಬಹಿರಂಗಪಡಿಸುವ ಪಾರದರ್ಶಕ ‘ಹಣ ಪಾವತಿ' ಸಂದೇಶವನ್ನು ಒಳಗೊಂಡಿರಬೇಕು. ನಾವು ನಮ್ಮ ರಾಜಕೀಯ ಜಾಹೀರಾತು ಗ್ರಂಥಾಲಯದಲ್ಲಿ ನಮ್ಮ ಪುನರಾವಲೋಕನ ಪಡೆಯುವ ಎಲ್ಲ ಜಾಹೀರಾತುಗಳ ಕುರಿತು ಮಾಹಿತಿಯನ್ನು ಒದಗಿಸುತ್ತೇವೆ. U.S. ಚುನಾವಣೆಗೆ ಸಂಬಂಧಿಸಿದಂತೆ, ನಾವು ರಾಜಕೀಯ ಜಾಹೀರಾತು ಪ್ರಕಟಣೆಗಳನ್ನು ಸ್ವತಂತ್ರವಾಗಿ ಪರಿಶೀಲಿಸಲು ಪಾಯಿಂಟರ್ ಸಂಸ್ಥೆಯೊಂದಿಗೆ ಪಾಲುದಾರರಾಗಿದ್ದೇವೆ. ಇದರ ಜೊತೆಗೆ, ಚುನಾವಣೆಯಲ್ಲಿ ವಿದೇಶಿ ಹಸ್ತಕ್ಷೇಪ ಮಾಡುವ ಅಪಾಯವನ್ನು ನಿವಾರಿಸಲು ಸಹಾಯ ಮಾಡಲು, ನಾವು ಜಾಹೀರಾತು ಯಾವ ದೇಶದಲ್ಲಿ ಪ್ರಕಟವಾಗುತ್ತದೆಯೋ ಆ ದೇಶವನ್ನು ಹೊರತುಪಡಿಸಿ ಉಳಿದ ದೇಶಗಳಿಂದ ರಾಜಕೀಯ ಜಾಹೀರಾತುಗಳ ಖರೀದಿ ನಿಷೇಧಿಸುತ್ತೇವೆ.

  • ಸುಳ್ಳು ಮಾಹಿತಿಯ ವಿರುದ್ಧ ಹೋರಾಡುವ ನಮ್ಮ ಪ್ರಯತ್ನಗಳಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ. 2021ರ ಎರಡನೇ ಅರ್ಧದಷ್ಟು ಅಂತರವನ್ನು ಒಳಗೊಂಡಿರುವ ನಮ್ಮ ಅತ್ಯಂತ ಪಾರದರ್ಶಕತೆಯ ವರದಿ, ಜಾಗತಿಕವಾಗಿ ಸುಳ್ಳು ಮಾಹಿತಿಯನ್ನು ಜಾರಿಗೆ ತರುವ ನಮ್ಮ ಪ್ರಯತ್ನಗಳ ಕುರಿತು ಹಲವು ಹೊಸ ಅಂಶಗಳನ್ನೂ ಒಳಗೊಂಡಿತ್ತು. ಈ ಅವಧಿಯಲ್ಲಿ ನಾವು ಸುಳ್ಳು ಮಾಹಿತಿಯ ಉಲ್ಲಂಘನೆಗಾಗಿ 14,613 ವಿಷಯಗಳು ಮತ್ತು ಖಾತೆಗಳ ವಿರುದ್ಧ ಕ್ರಮ ಕೈಗೊಂಡಿದ್ದೇವೆ — ಮತ್ತು ನಾವು ಈ ಉಲ್ಲಂಘನೆಗಳ ಕುರಿತು ಹೆಚ್ಚಿನ ವಿವರವಾದ ಸ್ಥಗಿತಗಳನ್ನು ನಮ್ಮ ಭವಿಷ್ಯದ ವರದಿಗಳಲ್ಲಿ ಒದಗಿಸಲು ಯೋಜಿಸಿದ್ದೇವೆ.

ಈ ಕುರಿತು ನಿರ್ಮಾಣಕ್ಕಾಗಿ, ಮಧ್ಯಕಾಲೀನ ಚುನಾವಣೆಗಿಂತ ಮೊದಲು, ನಾವು ಮಾಹಿತಿ ಹಂಚಿಕೆ ಮಾಡಲು ಮತ್ತು ನಮ್ಮ ನೀತಿಗಳು ಮತ್ತು ಇತರ ಹಾನಿ ನಿಯಂತ್ರಣಗಳ ಪರಿಣಾಮಕಾರಿತ್ವವನ್ನು ಪರಿಶೀಲಿಸಲು ಮೀಸಲಾದ ಆಂತರಿಕ ಪ್ರಕ್ರಿಯೆಗಳನ್ನು ಸ್ಥಾಪಿಸಿದ್ದೇವೆ. ನಾವು ಅಗತ್ಯವಿದ್ದಲ್ಲಿ ನಮ್ಮ ವಿಧಾನವನ್ನು ಮಾಪನಾಂಕ ನಿರ್ಣಯಿಸಬಹುದು. ಚುನಾವಣಾ ಸಮಗ್ರತೆ, ಪ್ರಜಾಪ್ರಭುತ್ವ ಮತ್ತು ಮಾಹಿತಿ ಸಮುದಾಯಗಳ ಇತರ ಭಾಗೀದಾರರೊಂದಿಗೆ ನಾವು ಸಕ್ರಿಯವಾಗಿ ತೊಡಗಿಕೊಂಡಿದ್ದೇವೆ. ನಮ್ಮ ರಕ್ಷಣಾತ್ಮಕ ಪ್ರವೃತ್ತಿಗಳ ಕುರಿತು ವಿಸ್ತೃತವಾದ ಸನ್ನಿವೇಶದಲ್ಲಿ ಹೊರಹೊಮ್ಮುತ್ತಿರುವ ಮತ್ತು ತಜ್ಞ ದೃಷ್ಟಿಕೋನದಿಂದ ತಿಳಿಸಿದ ಹಿನ್ನೆಲೆಯಲ್ಲಿ ನಾವು ಜವಾಬ್ದಾರಿಯುತ ಸನ್ನಿವೇಶ ವ್ಯಕ್ತವಾಗುವುದನ್ನು ಖಾತ್ರಿಪಡಿಸಲು ಮತ್ತು ಮಾಹಿತಿ ಸಮುದಾಯಗಳ ಜೊತೆ ನಾವು ತೊಡಗಿದ್ದೇವೆ.

ಹೆಚ್ಚಿನ ಮಾಹಿತಿ ಸಮಗ್ರತೆಯನ್ನು ಉತ್ತೇಜಿಸಲು ನಾವು ತಜ್ಞರೊಂದಿಗೆ ಪಾಲುದಾರರಾಗುವ ಕುರಿತು ಗಮನ ಹರಿಸಿದ್ದೇವೆ. Discover ವಿಷಯ ಪ್ಲಾಟ್‌ಫಾರ್ಮ್‌ನಲ್ಲಿ, ವಾಲ್ ಸ್ಟ್ರೀಟ್ ಜರ್ನಲ್‌ನಂತಹ ಪ್ರಕಾಶಕರುಗಳು, ವಾಷಿಂಗ್ಟನ್ ಪೋಸ್ಟ್, VICE ಮತ್ತು NBC ನ್ಯೂಸ್‌ನಂತಹ ಪ್ರಕಾಶಕರು ನಮ್ಮ ಸಮುದಾಯದವರಿಗೆ ವಿಶ್ವಾಸಾರ್ಹ ಮತ್ತು ನಿಖರ ಸುದ್ದಿ ಪ್ರಸಾರವನ್ನು ಒದಗಿಸುವ ಕುರಿತು ನಾವು ಗಮನಿಸಿದ್ದೇವೆ.

ನಾವು ಆ್ಯಪ್‌ನಲ್ಲಿ ಮತಚಲಾಯಿಸಲು ನೋಂದಣಿ ಅಥವಾ ಸ್ಥಳೀಯ ಕಚೇರಿಗಳಿಗೆ ನೋಂದಾಯಿಸಲು ಅವಕಾಶಗಳೂ ಸೇರಿದಂತೆ ನಾವು ನಾಗರಿಕ ಮಾಹಿತಿ ಲಭ್ಯವಾಗುವಂತೆ ಬಳಕೆದಾರರನ್ನು ಸಂಪರ್ಕಿಸಲು ಹೊಸ ಆ್ಯಪ್‌ನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದೇವೆ.

ಜವಾಬ್ದಾರಿಯುತ ಮಾಹಿತಿ ವಾತಾವರಣವನ್ನು ಉತ್ತೇಜಿಸಲು ನಮ್ಮ ಜವಾಬ್ದಾರಿಯನ್ನು ನಿರ್ವಹಿಸುವುದು ನಮ್ಮ ಕಂಪನಿಯಾದ್ಯಂತ ಪ್ರಮುಖ ಆದ್ಯತೆಯಾಗಿ ಉಳಿದಿದೆ ಮತ್ತು ನಾವು ಸುಳ್ಳು ಮಾಹಿತಿಯ ಅಪಾಯಗಳಿಂದ Snapchat ಅನ್ನು ರಕ್ಷಿಸಲು ನಮ್ಮ ಪ್ರಯತ್ನಗಳನ್ನು ಬಲಪಡಿಸುವುದರ ಜೊತೆಗೆ, Snapchatter ಗಳನ್ನು ತಲುಪಲು ನಾವು ನವೀನ ವಿಧಾನಗಳನ್ನು ಹುಡುಕುವುದನ್ನು ಮುಂದುವರಿಸುತ್ತೇವೆ.

ಸುದ್ದಿಗಳಿಗೆ ಹಿಂತಿರುಗಿ