ಮೂರನೆಯ ವಾರ್ಷಿಕ ರಾಷ್ಟ್ರೀಯ ಫೆಂಟಾನಿಲ್ ಜಾಗೃತಿ ದಿನವನ್ನು ಗೌರವಿಸುವುದು
ಮೇ 7, 2024
ಖೋಟಾ ಮಾತ್ರೆಗಳು ಸೇರಿದಂತೆ, ಅಕ್ರಮ ಮಾದಕಪದಾರ್ಥಗಳನ್ನು ವಿತರಣೆ ಮಾಡಲು ಯತ್ನಿಸುತ್ತಿರುವ ಅಪರಾಧಿಗಳು ನಮ್ಮ ಸೇವೆಯ ದುರ್ಬಳಕೆ ಮಾಡುವುದನ್ನು ತಡೆಯಲು Snap ನಲ್ಲಿ ನಾವು ನಿರಂತರ ಕೆಲಸ ಮಾಡುತ್ತಿದ್ದೇವೆ. ಇಂದು, ಮೂರನೆಯ ವಾರ್ಷಿಕ ರಾಷ್ಟ್ರೀಯ ಫೆಂಟಾನಿಲ್ ಜಾಗೃತಿ ದಿನದ ಸ್ಮರಣಾರ್ಥ – ಸಾರ್ವಜನಿಕ ಆರೋಗ್ಯ ತಜ್ಞರು, ಕಾನೂನು ಜಾರಿ ಅಧಿಕಾರಿಗಳು ಮತ್ತು ಪೋಷಕರು ಹಾಗೂ ಕುಟುಂಬ ಗುಂಪುಗಳ – ನಾಯಕರ ಜೊತೆಗೆ ಕೆಲಸ ಮಾಡುತ್ತಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ.
ಈ ದಿನವನ್ನು ನಾವು ಆಚರಿಸುತ್ತಿರುವಂತೆ, ಈ ವಿನಾಶಕಾರಿ ಮತ್ತು ತುರ್ತಿನ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಿನ ವಿರುದ್ಧ ಹೋರಾಡುವುದಕ್ಕೆ ಸಹಾಯ ಮಾಡಲು ನಮ್ಮ ಚಾಲ್ತಿಯಲ್ಲಿರುವ ಕಾರ್ಯದ ಕುರಿತು ಅಪ್‌ಡೇಟ್ ಅನ್ನು ನಮ್ಮ ಸಮುದಾಯಕ್ಕೆ ಒದಗಿಸಲು ನಾವು ಬಯಸುತ್ತೇವೆ.
ತಂತ್ರಜ್ಞಾನ ಮತ್ತು ವೇದಿಕೆ ಸುರಕ್ಷತೆ
Snapchat ಅನ್ನುವುದು, ಮುಖಾಮುಖಿ ಸಂಭಾಷಣೆಗಳು ಅಥವಾ ದೂರವಾಣಿಯಲ್ಲಿ ಮಾತನಾಡುವ ರೀತಿಯಲ್ಲಿ, ಖಾಸಗಿಯಾಗಿ ಸಂವಹನ ಮಾಡುವ ಮೂಲಕ ನೈಜ ಬದುಕಿನಲ್ಲಿ ತಮಗೆ ಅತ್ಯಂತ ಮುಖ್ಯವಾಗಿರುವವರೊಂದಿಗೆ ಜನರನ್ನು ಇನ್ನಷ್ಟು ಹತ್ತಿರವಾಗಿಸಲು ವಿನ್ಯಾಸಗೊಳಿಸಿರುವ ಆ್ಯಪ್ ಆಗಿದೆ. ಸಂದೇಶಗಳು ಡೀಫಾಲ್ಟ್ ಆಗಿ ಅಳಿಸಲ್ಪಡುತ್ತವಾದರೂ ಸಹ, ನಾವು ಪೂರ್ವಭಾವಿಯಾಗಿ ಪತ್ತೆ ಮಾಡಿದ ಕಾರಣದಿಂದ ಅಥವಾ ಅದನ್ನು ನಮಗೆ ವರದಿ ಮಾಡಿರುವ ಕಾರಣಕ್ಕೆ ಅಕ್ರಮ ಅಥವಾ ನಿಂದನೆಯ ಕಂಟೆಂಟ್ ವಿರುದ್ಧ ನಾವು ಕ್ರಮ ತೆಗೆದುಕೊಂಡರೆ, ಆ ಕಂಟೆಂಟ್ ಅನ್ನು ನಾವು ವಿಸ್ತರಿಸಿದ ಅವಧಿಗೆ ಉಳಿಸಿಕೊಳ್ಳುತ್ತೇವೆ. ಸುಧಾರಿತ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವುದು ಸೇರಿದಂತೆ, ನಮ್ಮ ವೇದಿಕೆಯನ್ನು ಕಾರ್ಯಾಚರಣೆ ಮಾಡಲು ಪ್ರಯತ್ನಿಸುತ್ತಿರುವ ಮಾದಕಪದಾರ್ಥದ ವ್ಯಾಪಾರಿಗಳನ್ನು ತೆಗೆದುಹಾಕಲು ನಾವು ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ.
ಪೂರ್ವಭಾವಿ ಪತ್ತೆಮಾಡುವಿಕೆ ಉಪಕರಣಗಳು: ವ್ಯಾಪಾರಿಗಳ ಖಾತೆಗಳನ್ನು ಪೂರ್ವಭಾವಿಯಾಗಿ ಪತ್ತೆಮಾಡಲು ಮತ್ತು ಸ್ಥಗಿತಗೊಳಿಸಲು ನಮಗೆ ಸಹಾಯ ಮಾಡುವ ತಂತ್ರಜ್ಞಾನಗಳನ್ನು ನಾವು ಅಳವಡಿಸುತ್ತೇವೆ ಮತ್ತು ನಿಯಮಿತವಾಗಿ ಸುಧಾರಿಸುತ್ತೇವೆ. ನಮ್ಮ ಅತ್ಯಂತ ಸುಧಾರಿತ ಮಾದರಿಗಳು ಈಗ ಪತ್ತೆಮಾಡಲಾದ ಅಕ್ರಮ ಮಾದಕಪದಾರ್ಥ ಚಟುವಟಿಕೆಯ ಸರಿಸುಮಾರು 94% ಅನ್ನು ಪೂರ್ವಭಾವಿಯಾಗಿ ಗುರುತಿಸಲು ನಮಗೆ ಸಹಾಯ ಮಾಡುತ್ತವೆ, ಈ ಮೂಲಕ ಅದನ್ನು ನಮಗೆ ವರದಿ ಮಾಡುವುದಕ್ಕೆ ಮುನ್ನ ಆ ಕಂಟೆಂಟ್ ಅನ್ನು ತೆಗೆದುಹಾಕಲು ನಮಗೆ ಅವಕಾಶ ಕಲ್ಪಿಸುತ್ತವೆ.
ವರದಿಗಳಿಗೆ ಸಂಬಂಧಿಸಿ ತ್ವರಿತ ಕ್ರಮ: ಮಾದಕಪದಾರ್ಥ ಸಂಬಂಧಿತ ಕಂಟೆಂಟ್ ಕುರಿತು ನಾವು ಸ್ವೀಕರಿಸುವ ಯಾವುದೇ ವರದಿಗಳಿಗೆ ಸಾಧ್ಯವಾದಷ್ಟು ಬೇಗ ಪ್ರತಿಕ್ರಿಯಿಸಲು ನಮ್ಮ ವಿಶ್ವಾಸ ಮತ್ತು ಸುರಕ್ಷತೆ ತಂಡಗಳು ನಿರಂತರ ಕೆಲಸ ಮಾಡುತ್ತವೆ. ಮಾದಕಪದಾರ್ಥ ಸಂಬಂಧಿತ ವರದಿಗಳಿಗೆ ನಮ್ಮ ತಂಡವು ಸಾಮಾನ್ಯವಾಗಿ ಒಂದು ಗಂಟೆಯ ಒಳಗೆ ಪ್ರತಿಕ್ರಿಯಿಸುತ್ತದೆ ಎಂದು ನಮ್ಮ ಇತ್ತೀಚಿನ ಪಾರದರ್ಶಕತೆಯ ವರದಿ ತೋರಿಸುತ್ತದೆ.
ಹುಡುಕಾಟಗಳನ್ನು ನಿರ್ಬಂಧಿಸುವುದು: ಮಾದಕಪದಾರ್ಥ ಸಂಬಂಧಿತ ವಿಶಾಲ ಶ್ರೇಣಿಯ ಪದಗಳಿಗೆ ನಾವು ಹುಡುಕಾಟ ಫಲಿತಾಂಶಗಳನ್ನು ನಿರ್ಬಂಧಿಸುತ್ತೇವೆ, ಬದಲಾಗಿ ಫೆಂಟಾನಿಲ್ ಅಪಾಯಗಳ ಕುರಿತು ತಜ್ಞರಿಂದ ಸಂಪನ್ಮೂಲಗಳಿಗೆ Snapchatter ಗಳನ್ನು ಮರುನಿರ್ದೇಶಿಸುತ್ತೇವೆ.
ಇತರ ವೇದಿಕೆಗಳೊಂದಿಗೆ ಸಮನ್ವಯಗೊಳಿಸುವುದು: ಮಾದಕಪದಾರ್ಥ ವ್ಯಾಪಾರಿಗಳು ಸಂವಹನ ನಡೆಸಲು ವಿವಿಧ ಸೇವೆಗಳನ್ನು ಬಳಸುತ್ತಾರೆ ಎಂದು ತಿಳಿದಿರುವುದರಿಂದ, ಮಾದಕಪದಾರ್ಥ ಸಂಬಂಧಿತ ಕಂಟೆಂಟ್ ಮತ್ತು ಚಟುವಟಿಕೆಯ ನಮೂನೆಗಳು ಮತ್ತು ಸಂಕೇತಗಳನ್ನು ಹಂಚಿಕೊಳ್ಳಲು ನಾವು ತಜ್ಞರು ಮತ್ತು ಇತರ ತಂತ್ರಜ್ಞಾನ ಸಂಸ್ಥೆಗಳ ಜೊತೆ ಕೆಲಸ ಮಾಡುತ್ತೇವೆ – ಇದು ನಮಗೆ ಮಾದಕಪದಾರ್ಥದ ಕಂಟೆಂಟ್ ಮತ್ತು ವ್ಯಾಪಾರಿಗಳ ಖಾತೆಗಳನ್ನು ಪೂರ್ವಭಾವಿಯಾಗಿ ಪತ್ತೆಮಾಡುವ ನಮ್ಮ ಪ್ರಯತ್ನಗಳನ್ನು ಸುಧಾರಿಸಲು ಅನುವು ಮಾಡಿಕೊಡುತ್ತದೆ.
ಕಾನೂನು ಜಾರಿ ಸಂಸ್ಥೆಯೊಂದಿಗೆ ಸಹಭಾಗಿತ್ವ ಮಾಡುವುದು
ಅಪರಾಧಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಹಾಯ ಮಾಡುವುದಕ್ಕಾಗಿ, ಕಾನೂನು ಜಾರಿ ಸಂಸ್ಥೆಗಳ ವಿಚಾರಣೆಗೆ ತ್ವರಿತವಾಗಿ ಪ್ರತಿಕ್ರಿಯಿಸಲು ನಮ್ಮ ಕಾನೂನು ಜಾರಿ ಕಾರ್ಯಾಚರಣೆಯ ತಂಡವು ಬದ್ಧವಾಗಿದೆ. ನಮ್ಮ ವೇದಿಕೆಯಲ್ಲಿ ಅಕ್ರಮ ಚಟುವಟಿಕೆಗೆ ಸಂಬಂಧಿಸಿದಂತೆ ಕಾನೂನು ಜಾರಿ ಸಂಸ್ಥೆಯವರು ತ್ವರಿತ ಮತ್ತು ಸೂಕ್ತ ಕ್ರಮ ಕೈಗೊಳ್ಳಬಹುದು ಎಂದು ಖಚಿತಪಡಿಸಲು ಅವರೊಂದಿಗೆ ನಾವು ಬಲವಾದ ಸಂಬಂಧವನ್ನು ಇರಿಸಿಕೊಳ್ಳುತ್ತೇವೆ. ನಮ್ಮ ಪ್ರಮುಖ ಆದ್ಯತೆಗಳಲ್ಲಿ ಇವು ಸೇರಿವೆ:
ನಮ್ಮ ತಂಡವನ್ನು ವಿಸ್ತರಿಸುವುದು: ಕಾನೂನು ಜಾರಿ ಕಾರ್ಯಾಚರಣೆಗಳ ತಂಡವು ಕಳೆದ 5 ವರ್ಷಗಳಲ್ಲಿ 200% ಗಿಂತ ಹೆಚ್ಚು ಮತ್ತು 2020 ರಿಂದ ಸುಮಾರು 80% ನಷ್ಟು ಬೆಳೆದಿದೆ. ಮಾನ್ಯವಾದ ಕಾನೂನು ವಿನಂತಿಗಳಿಗೆ ಸಾಮಾನ್ಯವಾಗಿ ನಾವು ಎರಡರಿಂದ ಮೂರು ವಾರಗಳಲ್ಲಿ ಮತ್ತು ತುರ್ತು ಬಹಿರಂಗಪಡಿಸುವಿಕೆ ವಿನಂತಿಗಳಿಗೆ 30 ನಿಮಿಷಗಳ ಒಳಗೆ ಪ್ರತಿಕ್ರಿಯಿಸುತ್ತೇವೆ.
ಪೂರ್ವಭಾವಿ ದೂರು ನೀಡುವುದು: ಜೀವಕ್ಕೆ ಸನ್ನಿಹಿತ ಅಪಾಯವಿದೆ ಎಂದು ನಾವು ಭಾವಿಸುವ ಸನ್ನಿವೇಶಗಳಲ್ಲಿ, ನಾವು ಪೂರ್ವಭಾವಿಯಾಗಿ ಕಾನೂನು ಜಾರಿ ಸಂಸ್ಥೆಗೆ ದೂರನ್ನು ನೀಡುತ್ತೇವೆ. ಒಂದು ವೇಳೆ ಕಾನೂನು ಜಾರಿ ಸಂಸ್ಥೆ ಅನುಸರಿಸಲು ಬಯಸಿದ ಸಂದರ್ಭದಲ್ಲಿ ಒದಗಿಸುವುದಕ್ಕಾಗಿ, ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಮಾದಕಪದಾರ್ಥ ಸಂಬಂಧಿತ ಖಾತೆಗಳನ್ನು ಅಮಾನತುಗೊಳಿಸಿದ ಬಳಿಕ ಉಲ್ಲಂಘಿಸಿದ ಕಂಟೆಂಟ್ ಅನ್ನು ನಾವು ವಿಸ್ತರಿಸಿದ ಅವಧಿಗೆ ಕೂಡ ಉಳಿಸಿಕೊಳ್ಳುತ್ತೇವೆ.
ಶಾಸನವನ್ನು ಬೆಂಬಲಿಸುವುದು: ಹೆಚ್ಚುವರಿಯಾಗಿ, ದ್ವಿಪಕ್ಷೀಯ ಶಾಸನ ಕೂಪರ್ ಡೇವಿಸ್ ಕಾಯ್ದೆ ಕುರಿತು ನಾವು ಸಂಸತ್ ಸದಸ್ಯರೊಂದಿಗೆ ಕಾರ್ಯನಿರ್ವಹಿಸಿದ್ದೇವೆ, ಇದು ಫೆಂಟಾನಿಲ್ ವಿರುದ್ಧ ಹೋರಾಡಲು ಸಾಮಾಜಿಕ ಜಾಲತಾಣ ಸಂಸ್ಥೆಗಳು ಮತ್ತು ಕಾನೂನು ಜಾರಿ ಸಂಸ್ಥೆಗಳ ನಡುವೆ ಹೆಚ್ಚಿನ ಸಹಭಾಗಿತ್ವಕ್ಕೆ ದಾರಿ ಮಾಡಿಕೊಡುತ್ತದೆ.
ಶಿಕ್ಷಣದ ಮೂಲಕ ಫೆಂಟಾನಿಲ್ ಬಿಕ್ಕಟ್ಟಿನ ಕುರಿತು ಜಾಗೃತಿ ಮೂಡಿಸುವುದು
ಫೆಂಟಾನಿಲ್ ಅಪಾಯಗಳ ಕುರಿತು Snapchatter ಗಳಿಗೆ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸಲು ನಾವು ಬದ್ಧರಾಗಿದ್ದೇವೆ. ಕಳೆದ ಎರಡು ವರ್ಷಗಳಲ್ಲಿ, ಖೋಟಾ ಮಾತ್ರೆಗಳ ಅಪಾಯಗಳ ಕುರಿತು ಎಚ್ಚರಿಕೆ ನೀಡುವ ಆ್ಯಪ್‌ನಲ್ಲಿನ ತಿಳುವಳಿಕೆ ನೀಡುವ ವೀಡಿಯೊಗಳು ಮತ್ತು ಸುದ್ದಿ ಕಂಟೆಂಟ್ ಅನ್ನು ಪ್ರಚಾರ ಮಾಡಿದ್ದೇವೆ ಹಾಗೂ ವಿಶ್ವಾಸಾರ್ಹ ಮೂಲಗಳ ಸಂಪನ್ಮೂಲಗಳಿಗೆ Snapchatter ಗಳನ್ನು ನಿರ್ದೇಶಿಸಿದ್ದೇವೆ. ಇದು ಚಾಲ್ತಿಯಲ್ಲಿರುವ ಪ್ರಯತ್ನವಾಗಿದೆ ಮತ್ತು ಇವುಗಳನ್ನು ಒಳಗೊಂಡಿದೆ:
Snapchatter ಗಳೊಂದಿಗೆ ಜಾಗೃತಿ ಮೂಡಿಸಲು ಆ್ಯಪ್‌ನಲ್ಲಿನ ಕಂಟೆಂಟ್: PSA ಗಳನ್ನು ನಡೆಸಲು ಫೆಂಟಾನಿಲ್ ವಿರುದ್ಧ ಜಾಗೃತಿ ಮೂಡಿಸುತ್ತಿರುವ ಪ್ರಮುಖ ಸಂಸ್ಥೆ Song for Charlie ಜೊತೆಗೆ ನಾವು ಕೈಜೋಡಿಸಿದ್ದೇವೆ ಮತ್ತು ನಮ್ಮ ಮೂಲ ಸುದ್ದಿ ಪ್ರಸಾರವಾದ ಗುಡ್ ಲಕ್ ಅಮೆರಿಕಾ ಜೊತೆಗೆ ವಿಶೇಷ ಸರಣಿಯನ್ನು ಮಾಡಿದ್ದೇವೆ. ಫೆಂಟಾನಿಲ್ ಜಾಗೃತಿ ದಿನದ ಸ್ಮರಣಾರ್ಥ ಬಿಡುಗಡೆ ಮಾಡಲಾಗಿರುವ, Song for Charlie ಸಂಸ್ಥಾಪಕ ಎಡ್ ಟೆರ್ನಾನ್ ಅವರೊಂದಿಗಿನ ಹೊಸ ಸಂದರ್ಶನವನ್ನು ನೀವು ಇಲ್ಲಿ ನೋಡಬಹುದು.
ಮೀಸಲಾದ ಆ್ಯಪ್‌ನಲ್ಲಿನ ಶೈಕ್ಷಣಿಕ ಪೋರ್ಟಲ್: ನಾವು ಆ್ಯಪ್‌ನಲ್ಲಿನ ಒಂದು ಉಪಕರಣ ಆದ ಹೆಡ್ಸ್ ಅಪ್ ಅನ್ನು ಕೂಡ ಬಿಡುಗಡೆ ಮಾಡಿದ್ದು, ಇದು Snapchatter ಗಳು ಮಾದಕಪದಾರ್ಥ ಸಂಬಂಧಿತ ಕಂಟೆಂಟ್ ಅನ್ನು ಅಥವಾ ಫೆಂಟಾನಿಲ್ ಬಿಕ್ಕಟ್ಟಿಗೆ ಸಂಬಂಧಿಸಿದ ವಿವಿಧ ಪದಗಳನ್ನು ಹುಡುಕಲು ಪ್ರಯತ್ನಿಸಿದರೆ ಅವರಿಗೆ ತಜ್ಞರಿಂದ ತಿಳುವಳಿಕೆ ನೀಡುವ ಕಂಟೆಂಟ್ ಅನ್ನು ಒದಗಿಸುತ್ತದೆ. ನಮ್ಮ ಪಾಲುದಾರರಲ್ಲಿ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆಗಾಗಿನ ಕೇಂದ್ರಗಳು (CDC), ಮಾದಕಪದಾರ್ಥದ ಗೀಳು ಮತ್ತು ಮಾನಸಿಕ ಆರೋಗ್ಯ ಸೇವೆಗಳ ಆಡಳಿತ (SAMHSA), ಅಮೆರಿಕಾದ ಸಮುದಾಯ ಮಾದಕಪದಾರ್ಥ ವಿರೋಧಿ ಸಹಯೋಗ (CADCA), ಶಟರ್‌ಪ್ರೂಫ್, ಟ್ರೂತ್ ಇನೀಶಿಯೇಟಿವ್ ಮತ್ತು SAFE ಯೋಜನೆ ಸೇರಿದ್ದಾರೆ.
ಜಾಹೀರಾತು ಪರಿಷತ್‌ನೊಂದಿಗೆ ಕೆಲಸ ಮಾಡುವುದು: ಹಲವು ವರ್ಷಗಳ ಹಿಂದೆ, ಫೆಂಟಾನಿಲ್‌ನ ಅಪಾಯಗಳ ಕುರಿತು ಹಿಂದೆಂದೂ ಕಂಡುಕೇಳರಿಯದಂತಹ ರಾಷ್ಟ್ರೀಯ ಸಾರ್ವಜನಿಕ ಜಾಗೃತಿ ಅಭಿಯಾನವನ್ನು ಅಭಿವೃದ್ಧಿಪಡಿಸಲು ನಾವು ಜಾಹೀರಾತು ಪರಿಷತ್‌ನೊಂದಿಗೆ ಕೆಲಸ ಮಾಡಲು ಆರಂಭಿಸಿದೆವು. ಅಭಿಯಾನವು ಈಗ ಇತರ ಪ್ರಮುಖ ತಂತ್ರಜ್ಞಾನ ವೇದಿಕೆಗಳನ್ನು ಒಳಗೊಂಡಿದೆ ಮತ್ತು ಪೋಷಕರು ಮತ್ತು ಹದಿಹರೆಯರದವರನ್ನು ಅವರು ಇರುವಲ್ಲಿಯೇ ತಲುಪುವುದರ ಬಗ್ಗೆ ಗಮನ ಕೇಂದ್ರೀಕರಿಸಿದೆ.
Snapchat ಸಮುದಾಯವನ್ನು ಸುರಕ್ಷಿತವಾಗಿ ಇರಿಸಲು ಸಹಾಯ ಮಾಡುವುದು ನಮ್ಮ ಅಗ್ರ ಆದ್ಯತೆಯಾಗಿದೆ. ನಾವು ಮಾಡಬೇಕಿರುವ ಇನ್ನೂ ಹಲವು ಕೆಲಸಗಳಿವೆ ಮತ್ತು ನಮ್ಮ ವೇದಿಕೆಯಿಂದ ಮಾದಕಪದಾರ್ಥಗಳ ಮಾರಾಟವನ್ನು ನಿರ್ಮೂಲನೆ ಮಾಡಲು ಹಾಗೂ ಫೆಂಟಾನಿಲ್ ಬಿಕ್ಕಟ್ಟಿನ ವಿನಾಶಕಾರಿ ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು ಪೋಷಕರು, ಸರ್ಕಾರ, ಇತರ ವೇದಿಕೆಗಳು ಹಾಗೂ ತಜ್ಞರೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸಲು ನಾವು ಎದುರು ನೋಡುತ್ತೇವೆ.