ನಮ್ಮ —ಮತ್ತು ಅವರ—ಭವಿಷ್ಯ ರೂಪಿಸುವಲ್ಲಿ ದನಿಯೆತ್ತಲು ಮತ್ತು ಭಾಗವಹಿಸಲು Snapchatter ಗಳನ್ನು ಸಬಲೀಕರಿಸುವುದು

ಅಕ್ಟೋಬರ್ 29, 2021

ಇಂದು, Knight Foundation ನ ವರ್ಚುವಲ್ ವಿಚಾರಸಂಕಿರಣ ಮೊದಲ ಇಂಟರ್‌ನೆಟ್ ತಲೆಮಾರಿನಿಂದ ಪಾಠಗಳು ಭಾಗವಾಗಿ, Snap ನ CEO ಇವಾನ್ ಸ್ಪೀಗೆಲ್, ಯುವಜನರು ಮತದಾನ ಮಾಡಲು, ಅವರು ಕಾಳಜಿ ವಹಿಸುವ ಸಮಸ್ಯೆಗಳ ಕುರಿತು ಅವರಿಗೆ ತಿಳುವಳಿಕೆ ನೀಡಲು ಮತ್ತು ನಮ್ಮ ಚುನಾವಣೆಗೆ ಸ್ಪರ್ಧಿಸಿ ಮಿನಿ ಮೂಲಕ ಅವರ ಸಮುದಾಯಗಳಲ್ಲಿ ಬದಲಾವಣೆಯನ್ನು ತರುವುದಕ್ಕಾಗಿ ಸ್ಥಳೀಯ ಚುನಾವಣೆಗಳಲ್ಲಿ ಸ್ಪರ್ಧಿಸಲೂ ಸಹ, ಯುವಜನರಿಗೆ ಸುಲಭವಾಗಿಸುವುದಕ್ಕಾಗಿ ನಾವು ನಿರ್ಮಿಸುತ್ತಿರುವ ತಂತ್ರಜ್ಞಾನದ ಕುರಿತು ಒಂದು ಪ್ರಬಂಧವನ್ನು ಪ್ರಕಟಿಸಿದರು. 

ಮೂಲತಃ Knight Foundation ನಿಂದ ಪ್ರಕಟಿಸಲಾಗಿದ್ದ ಇವಾನ್‌ರ ಪೂರ್ಣ ಪ್ರಬಂಧವನ್ನು ನೀವು ಇಲ್ಲಿ ಓದಬಹುದು.

***

ನನ್ನ ಸಹಸ್ಥಾಪಕ ಬಾಬಿ ಮರ್ಫಿ ಮತ್ತು ನಾನು ಸುಮಾರು ಒಂದು ದಶಕದ ಹಿಂದೆ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಭೇಟಿಯಾದೆವು, ನಾವು ಉತ್ಪನ್ನ ವಿನ್ಯಾಸವನ್ನು ಅಧ್ಯಯನ ಮಾಡುತ್ತಿದ್ದೆ ಮತ್ತು ಬಾಬಿ, ಗಣಿತ ಮತ್ತು ಕಂಪ್ಯೂಟೇಶನಲ್ ಸೈನ್ಸ್‌ನಲ್ಲಿ ಪದವಿ ಪಡೆಯಲು ವ್ಯಾಸಂಗ ಮಾಡುತ್ತಿದ್ದ. ಜೊತೆಯಾಗಿ ನಮ್ಮ ಮೊದಲ ಪ್ರಾಜೆಕ್ಟ್ ಫ್ಯೂಚರ್ ಫ್ರೆಶ್‌ಮ್ಯಾನ್ ಆಗಿತ್ತು, ಇದು ಹೈಸ್ಕೂಲ್‌ ವಿದ್ಯಾರ್ಥಿಗಳು ಕಾಲೇಜುಗಳಿಗೆ ಅರ್ಜಿ ಸಲ್ಲಿಸುವ ವಿಧಾನವನ್ನು ಎಂದೆಂದಿಗೂ ಬದಲಾಯಿಸಲಿದೆ ಎಂದು ನಾವು ನಂಬಿದ್ದೆವು. ನಮ್ಮ ಊಹೆ ತಪ್ಪಾಗಿತ್ತು ಮತ್ತು ಅದು ಸಂಪೂರ್ಣ ವೈಫಲ್ಯದೊಂದಿಗೆ ಕೊನೆಗೊಂಡಿತು, ಆದರೆ ನಾವು ಮುಖ್ಯವಾದುದನ್ನು ಕಲಿತೆವು—ನಾವು ಜೊತೆಯಾಗಿ ಕೆಲಸ ಮಾಡುವುದನ್ನು ಇಷ್ಟಪಡುತ್ತಿದ್ದೆವು. 

ಅದಾದ ಬಳಿಕ, ಮುಂದೆ Snapchat ಆದದ್ದಕ್ಕೆ ಸಂಬಂಧಿಸಿ ಕೆಲಸ ಮಾಡಲು ಆರಂಭಿಸಿದೆವು. ಆ ಸಮಯದಲ್ಲಿ, ಬಹುತೇಕ ಸಾಮಾಜಿಕ ಮಾಧ್ಯಮ ವೇದಿಕೆಗಳು ಸುವ್ಯವಸ್ಥಿತವಾಗಿದ್ದವು, ಆದರೆ ಅವು ನಮ್ಮ ಸ್ನೇಹಿತರಿಗೆ ನೈಜವಾಗಿ ತಮ್ಮನ್ನು ಅಭಿವ್ಯಕ್ತಪಡಿಸಿಕೊಳ್ಳಲು ನಿಜಕ್ಕೂ ಸ್ಥಳಾವಕಾಶವನ್ನು ಒದಗಿಸುತ್ತಿರಲಿಲ್ಲ. ನಾವು ಕೇವಲ ಸುಂದರ ಅಥವಾ ಪರಿಪೂರ್ಣವಾಗಿ ಕಾಣಿಸುವುದನ್ನಷ್ಟೇ ಅಲ್ಲ—ಸ್ನೇಹಿತರೊಂದಿಗೆ ಮಾನವರ ಭಾವನೆಗಳ ಪೂರ್ಣ ಶ್ರೇಣಿಯೊಂದಿಗೆ ಜನರು ಸಂವಹನ ಮಾಡಲು ಸಹಾಯ ಮಾಡುವಂತಹದ್ದನ್ನು ನಿರ್ಮಿಸಲು ಬಯಸಿದ್ದೆವು. ಹಾಗಾಗಿ ಆ ಸಮಯದಲ್ಲಿನ ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಿಗಿಂತ ನಾವು Snapchat ಅನ್ನು ಭಿನ್ನವಾಗಿ ವಿನ್ಯಾಸಗೊಳಿಸಿದೆವು: ನಮ್ಮ ಆ್ಯಪ್, ಇನ್ನಷ್ಟು ವ್ಯಾಪಕವಾಗಿ ಕಂಟೆಂಟ್ ಪ್ರಸಾರ ಮಾಡಲು ಜನರಿಗೆ ಆಹ್ವಾನ ನೀಡುವ ನ್ಯೂಸ್‌ಫೀಡ್‌ನ ಬದಲಾಗಿ, ತಮ್ಮ ಆತ್ಮೀಯ ಸ್ನೇಹಿತರೊಂದಿಗೆ ಮಾತನಾಡಲು ಜನರಿಗೆ ಸಹಾಯ ಮಾಡುವ ಕ್ಯಾಮೆರಾಗೆ ತೆರೆದುಕೊಳ್ಳುತ್ತದೆ.

ನಮ್ಮ ಆ್ಯಪ್ ಅನ್ನು ಕೆಲವೇ ಜನರಷ್ಟೇ ಅರ್ಥಮಾಡಿಕೊಂಡಿದ್ದ ಆರಂಭಿಕ ದಿನಗಳತ್ತ ಹಿಂತಿರುಗಿ ನೋಡಿದರೆ, Snapchat ಅಂತಿಮವಾಗಿ ಎಷ್ಟು ದೊಡ್ಡ ಸಮುದಾಯವಾಗಬಲ್ಲದು ಅನ್ನುವುದನ್ನು ನಾವು ಎಂದಿಗೂ ಊಹಿಸಿರಲಿಲ್ಲ. ಇಂದು, ವಿಶ್ವಾದ್ಯಂತ ಪ್ರತಿ ತಿಂಗಳು ಸುಮಾರು 500 ಮಿಲಿಯನ್ ಜನರು Snapchat ಬಳಸುತ್ತಾರೆ. ನಮ್ಮ ವ್ಯವಹಾರ ವಿಕಸನವಾಗಿದೆ, ಆದರೆ ಬದಲಾಗದೆ ಉಳಿದಿರುವ ಒಂದು ಸಂಗತಿ ಅಂದರೆ, ನಮ್ಮ ಸಮುದಾಯಕ್ಕಾಗಿ ಸಮಸ್ಯೆಗಳನ್ನು ಪರಿಹರಿಸುವ ನಮ್ಮ ಅಪೇಕ್ಷೆ. ನಮ್ಮ ತಂಡದ ಕುತೂಹಲ ಮತ್ತು ಸೃಜನಶೀಲತೆಯೊಂದಿಗೆ, ಈ ದೃಢನಿರ್ಧಾರವು—ನಮ್ಮ ಕ್ಷಣಿಕತೆ, ಕಥೆಗಳು ಮತ್ತು ವರ್ಧಿತ ವಾಸ್ತವದ ಮೂಲ ವೈಶಿಷ್ಟ್ಯಗಳು ಸೇರಿದಂತೆ, ನಮ್ಮ ಕೆಲವು ಅತ್ಯಂತ ಯಶಸ್ವಿ ಆವಿಷ್ಕಾರಗಳಿಗೆ ದಾರಿ ಮಾಡಿಕೊಟ್ಟಿದೆ.

ಮತದಾನದ ಹಕ್ಕನ್ನು ಚಲಾಯಿಸುವುದು ಮತ್ತು—ವಿಶೇಷವಾಗಿ ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ನಮ್ಮ ಸಮುದಾಯದ ಸದಸ್ಯರಿಗಾಗಿ—ಅಮೆರಿಕನ್ ಪ್ರಜಾಪ್ರಭುತ್ವದಲ್ಲಿ ಭಾಗವಹಿಸುವುದು ಕೂಡ ಸ್ವಯಂ-ಅಭಿವ್ಯಕ್ತಿಯ ಅತ್ಯಂತ ಶಕ್ತಿಶಾಲಿ ಸ್ವರೂಪಗಳಲ್ಲಿ ಒಂದಾಗಿದೆ ಎಂದು ನಾವು ಭಾವಿಸುತ್ತೇವೆ. ಮತದಾನ ಮಾಡಲು ಯುವಜನರಿಗೆ ಸುಲಭವಾಗಿಸುವ ತಂತ್ರಜ್ಞಾನದ ನಿರ್ಮಾಣ ಮಾಡಲು, ಅವರು ಕಾಳಜಿ ವಹಿಸುವ ಸಮಸ್ಯೆಗಳ ಕುರಿತು ಅವರಿಗೆ ಅರಿವು ಮೂಡಿಸಲು, ಮತ್ತು ಪ್ರಜಾಪ್ರತಿನಿಧಿಗಳನ್ನು ಉತ್ತರದಾಯಿಗಳನ್ನಾಗಿಸಲು ಹಾಗೂ ಚುನಾವಣೆಗೆ ಸ್ಪರ್ಧಿಸಲು ಕೂಡ ನೆರವಾಗುವುದಕ್ಕೆ ನಾವು ಯಾಕೆ ಅಷ್ಟೊಂದು ಗಮನ ಕೇಂದ್ರೀಕರಿಸುತ್ತೇವೆ ಎನ್ನುವುದಕ್ಕೆ ನಮ್ಮ ಸಮಸ್ಯೆ ಪರಿಹರಿಸುವ ಮನಸ್ಥಿತಿಯೊಂದಿಗೆ ಸಂಯೋಜಿತವಾದ ಈ ಹುಮ್ಮಸ್ಸು ಉತ್ತರವಾಗಬಲ್ಲದು. 

ತಮ್ಮ ಸಮುದಾಯಗಳಲ್ಲಿ ತೊಡಗಿಕೊಳ್ಳಲು ಮತ್ತು ಬದಲಾವಣೆಯನ್ನು ತರುವುದಕ್ಕಾಗಿ ಸಹಾಯ ಮಾಡಲು Snapchatter ಗಳು ಯಾವಾಗಲೂ ಉತ್ಸುಕರಾಗಿರುತ್ತಾರೆ, ಆದರೆ ನಮ್ಮ ಪ್ರಜಾತಾಂತ್ರಿಕ ಪ್ರಕ್ರಿಯೆಗಳು ಯುವ ಮತದಾರರ ಅಗತ್ಯಗಳನ್ನು ಪೂರೈಸಲು ವಿಕಸನವಾಗಿಲ್ಲ. ತಮ್ಮ ಫೋನ್‌ಗಳು ಮತ್ತು ತಮ್ಮ ಆತ್ಮೀಯ ಸ್ನೇಹಿತರ ಮೂಲಕ—ತಮಗೆ ಅತ್ಯಂತ ಮುಖ್ಯವಾದ ಸಂಗತಿಗಳಲ್ಲಿ ಯುವಜನರು ತೊಡಗಿಕೊಳ್ಳುವ ವಿಧಾನಗಳೊಂದಿಗೆ ನಾಗರಿಕ ತೊಡಗಿಕೊಳ್ಳುವಿಕೆಯು ಏಕರೂಪವಾಗಿಲ್ಲ. ಕಾಲೇಜು ಕ್ಯಾಂಪಸ್‌ಗಳಲ್ಲಿ ಮತದಾನದ ಕುರಿತು ಸಾಮಾನ್ಯವಾಗಿ ತಿಳಿದುಕೊಳ್ಳುವ ಅಥವಾ ಕಾಲೇಜಿಗೆ ಹೋಗದಿರುವ ಮತ್ತು ಹಾಗಾಗಿ ಅನೇಕ ಕ್ಯಾಂಪಸ್‌ಗಳು ಒದಗಿಸುವ ನಾಗರಿಕ ಮೂಲಸೌಕರ್ಯದಿಂದ ಪ್ರಯೋಜನ ಪಡೆಯದಿರುವ—ಯುವ ಮೊದಲ ಬಾರಿಯ ಮತದಾರರಿಗೆ—ಅವರು ಇರುವಲ್ಲಿಯೇ ಅವರನ್ನು ಸಂಪರ್ಕಿಸುವುದು ಅತ್ಯಂತ ಮುಖ್ಯ ಮತ್ತು ಹಿಂದೆಂದಿಗಿಂತಲೂ ಹೆಚ್ಚು ಸವಾಲಿನದಾಗಿದೆ. 2020 ರ ಚುನಾವಣೆಯ ಸಂದರ್ಭ, ಕೋವಿಡ್-19 ಬಿಕ್ಕಟ್ಟಿನ ಕಾರಣದಿಂದ ಅನೇಕ ಮುಖತಃ ಮತದಾರರ ಜಾಗೃತಿ ಪ್ರಯತ್ನಗಳಿಗೆ ಅಡಚಣೆಯಾದಾಗ, ಮೊಬೈಲ್-ಫಸ್ಟ್ ಅನುಭವಗಳು ಹೇಗೆ ಪ್ರಭಾವ ಬೀರಬಲ್ಲವು ಎನ್ನುವುದನ್ನು ನಾವು ತೋರಿಸಿದೆವು. 

ಯುನೈಟೆಡ್ ಸ್ಟೇಟ್ಸ್‌ನಲ್ಲಿ 13-24 ವಯಸ್ಸಿನ 90 ಪ್ರತಿಶತ ಜನರನ್ನು Snapchat ತಲುಪುತ್ತದೆ, ಈ ಮೂಲಕ ನಮ್ಮ ಪ್ರಜಾಪ್ರಭುತ್ವದಲ್ಲಿ ಪಾಲ್ಗೊಳ್ಳಲು ಸುಲಭವಾಗಿಸುವ ನಾಗರಿಕ ಸವಲತನ್ನು ಈ ವಯೋ ಗುಂಪಿಗೆ ಒದಗಿಸುವ ಅರ್ಥಪೂರ್ಣ ಅವಕಾಶವನ್ನು ನಮಗೆ ಒದಗಿಸುತ್ತದೆ. 2016 ರಿಂದ, ಮತದಾರರ ನೋಂದಣಿ, ಮತದಾರರ ಅರಿವು ಮತ್ತು ಮತದಾರರ ಭಾಗವಹಿಸುವಿಕೆ ಸೇರಿದಂತೆ—ಮತದಾನ ಪ್ರಕ್ರಿಯೆಯ ಪ್ರತಿ ಹಂತದ ಮೂಲಕ ತಾಂತ್ರಿಕ ಅಡೆತಡೆಗಳನ್ನು ತೆಗೆದುಹಾಕಲು ಮತ್ತು Snapchatter ಗಳಿಗೆ ಸಹಾಯ ಮಾಡಲು ನಾವು ಹಲವಾರು ಮೊಬೈಲ್ ಟೂಲ್‌ಗಳನ್ನು ನಿರ್ಮಿಸಿದ್ದೇವೆ. ಇತ್ತೀಚಿನ ಚುನಾವಣಾ ಚಕ್ರಗಳಲ್ಲಿ, ಮತದಾನಕ್ಕೆ ನೋಂದಣಿ ಮಾಡಿಕೊಳ್ಳಲು, ಅವರ ಸ್ಯಾಂಪಲ್ ಮತಪತ್ರ ನೋಡಲು ಮತ್ತು ತಮ್ಮ ಮತದಾನ ಕೇಂದ್ರವನ್ನು ಹುಡುಕಲು—ಮತ್ತು ನಂತರ ತಮ್ಮ ಸ್ನೇಹಿತರಿಗೂ ಮತದಾನ ಮಾಡುವಂತೆ ಪ್ರೋತ್ಸಾಹಿಸಲು Snapchatter ಗಳಿಗೆ ಸಹಾಯ ಮಾಡುವುದಕ್ಕಾಗಿ ನಾವು TurboVote ಮತ್ತು BallotReady ಜೊತೆಗೆ ಪಾಲುದಾರಿಕೆ ಮಾಡಿಕೊಂಡೆವು. NAACP, ACLU, When We All Vote, ಕಾನೂನಿನಡಿ ನಾಗರಿಕ ಹಕ್ಕುಗಳಿಗಾಗಿನ ವಕೀಲರ ಸಮಿತಿ, ಲ್ಯಾಟಿನೊ ಕಮ್ಯುನಿಟಿ ಫೌಂಡೇಶನ್ ಮತ್ತು APIAVote ನಿಂದ ಸಂಪನ್ಮೂಲಗಳಿಗೆ Snapchatter ಗಳನ್ನು ಸಂಪರ್ಕಿಸುವ ಮತದಾರರ ಮಾರ್ಗದರ್ಶಿಯನ್ನು ನಾವು ಬಿಡುಗಡೆ ಮಾಡಿದೆವು. 

ಈ ಕೆಲಸವು ಸ್ಫೂರ್ತಿದಾಯಕವಾಗಿತ್ತು: 2020 ಒಂದರಲ್ಲೇ, ನಮ್ಮ ತಂಡವು 1.2 ಮಿಲಿಯನ್‌ಗೂ ಅಧಿಕ Snapchatter ಗಳಿಗೆ ಮತದಾನಕ್ಕೆ ನೋಂದಣಿ ಮಾಡಿಕೊಳ್ಳಲು ಸಹಾಯ ಮಾಡಿತು. ನಾಗರಿಕ ಅರಿವು ಮತ್ತು ತೊಡಗಿಕೊಳ್ಳುವಿಕೆ ಕುರಿತ ಮಾಹಿತಿ ಮತ್ತು ಸಂಶೋಧನೆಗಾಗಿನ (CIRCLE) Tufts ವಿಶ್ವವಿದ್ಯಾಲಯದ ಕೇಂದ್ರದ ಡೇಟಾದ ಪ್ರಕಾರ 2020 ರಲ್ಲಿ ನೋಂದಣಿ ಮಾಡಲು ನಾವು ಸಹಾಯ ಮಾಡಿದ Snapchatter ಗಳಲ್ಲಿ, ಅರ್ಧದಷ್ಟು ಮಂದಿ ಮೊದಲ ಬಾರಿಯ ಮತದಾರರಾಗಿದ್ದರು ಮತ್ತು 80 ಪ್ರತಿಶತಕ್ಕಿಂತ ಹೆಚ್ಚು ಮಂದಿ ಮೂವತ್ತು ವರ್ಷದ ಒಳಗಿನವರಾಗಿದ್ದರು. 

ಆದರೆ ಮುಂದಿನ ಪೀಳಿಗೆಯ ನಾಯಕರಿಗೆ ಸ್ಫೂರ್ತಿ ಮೂಡಿಸುವುದು ನಿರಂತರವಾದ ಪ್ರಯತ್ನವಾಗಿರುತ್ತದೆ—ಕೇವಲ ಹೈಪ್ರೊಫೈಲ್ ಚುನಾವಣೆಗಳಿಗಷ್ಟೇ ಸೀಮಿತವಾಗಿರುವುದಿಲ್ಲ ಎನ್ನುವುದು ಕೂಡ ನಮಗೆ ತಿಳಿದಿದೆ. ಹಾಗಾಗಿ, ತಮ್ಮ ಹದಿನೆಂಟನೆಯ ಜನ್ಮದಿನದಂದು ಮತದಾನಕ್ಕೆ ನೋಂದಣಿ ಮಾಡಿಕೊಳ್ಳಲು Snapchatter ಗಳಿಗೆ ಸೂಚನೆ ನೀಡುವ ವೈಶಿಷ್ಟ್ಯವನ್ನು ನಾವು ಅಭಿವೃದ್ಧಿಪಡಿಸಿದೆವು. ಇನ್ನಷ್ಟು ವಿಸ್ತಾರವಾಗಿ, ನಮ್ಮ ಮತದಾರರ ತೊಡಗಿಕೊಳ್ಳುವಿಕೆ ಟೂಲ್‌ಗಳು ವರ್ಷದುದ್ದಕ್ಕೂ ಲಭ್ಯವಿರುತ್ತವೆ ಮತ್ತು ನಾಗರಿಕ ತೊಡಗಿಕೊಳ್ಳುವಿಕೆಯ ಮೂಲಕ ಜೀವಿತಾವಧಿಯ ಸ್ವಯಂ-ಅಭಿವ್ಯಕ್ತಿಗಾಗಿ ಅಡಿಪಾಯ ನಿರ್ಮಾಣ ಮಾಡಲು ಅವು ಸಹಾಯ ಮಾಡಲಿವೆ ಎನ್ನುವುದು ನಮ್ಮ ಭರವಸೆಯಾಗಿದೆ.

ಮುಂದಿನ ದಿನಗಳಲ್ಲಿ, Snapchatter ಗಳಿಂದ ಸ್ವೀಕರಿಸುವ ಪ್ರತಿಕ್ರಿಯೆ ಆಧರಿಸಿ ಆವಿಷ್ಕಾರ ಮಾಡುವುದನ್ನು ನಾವು ಮುಂದುವರಿಸಲಿದ್ದೇವೆ. 2020 ರ ಅಧ್ಯಕ್ಷೀಯ ಚುನಾವಣೆಯ ಬಳಿಕ, ತಾವು ಕಾಳಜಿ ವಹಿಸುವ ವಿಷಯಗಳನ್ನು ಆಧರಿಸಿ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳ ಕೊರತೆಯ ಬಗ್ಗೆ ನಿರಾಶರಾದ Snapchatter ಗಳ ಕುರಿತು ನಮಗೆ ತಿಳಿದುಬಂತು. ಇದು ಅರ್ಥಪೂರ್ಣವಾಗಿದೆ. ಪ್ರಾತಿನಿಧ್ಯ ಮುಖ್ಯವಾದುದು, ಆದರೆ ಅನೇಕ ಯುವಜನರಿಗೆ ಚುನಾವಣೆಗೆ ಸ್ಪರ್ಧಿಸುವುದು ಸಾಧ್ಯವಾಗದ, ಗೊಂದಲದ ಮತ್ತು ಆರ್ಥಿಕವಾಗಿ ಅವಾಸ್ತವಿಕವಾದ ಸಂಗತಿಯಂತೆ ಕಂಡುಬರುತ್ತದೆ. ರಾಜ್ಯ ಶಾಸನಸಭೆಗಳ ರಾಷ್ಟ್ರೀಯ ಸಮಾವೇಧ (NCSL) ಪ್ರಕಾರ, ನಲವತ್ತರಿಂದ ಅರವತ್ತರ ದಶಕದ ಪೀಳಿಗೆಯವರು, ಅಮೆರಿಕದ ಜನಸಂಖ್ಯೆಯಲ್ಲಿ ಅವರ ಒಟ್ಟಾರೆ ಪಾಲಿಗಿಂತ ಎರಡು ಪಟ್ಟಿನಷ್ಟು ಸದಸ್ಯದರೊಂದಿಗೆ ಅಮೆರಿಕದ ಶಾಸನಸಭೆಗಳಲ್ಲಿ ಅಸಮಾನ ಪ್ರಭಾವವನ್ನು ಹೊಂದಿದ್ದಾರೆ. ಇದರ ಪರಿಣಾಮವಾಗಿ, ನಮ್ಮನ್ನು ಆಳುವವರು ಮತ್ತು ಅಮೆರಿಕನ್ನರ ಮುಂದಿನ ಪೀಳಿಗೆಯ ಅವರ ಪ್ರಾತಿನಿಧ್ಯದ ನಡುವಿನ ಅಂತರ ಹೆಚ್ಚುತ್ತಲೇ ಇದೆ. ಇದಲ್ಲದೆ, ಪೈಪ್‌ಲೈನ್ ಇನೀಶಿಯೇಟಿವ್ ಪ್ರಕಾರ, ವಿಶ್ವಾಸಾರ್ಹ ಸಹವರ್ತಿಯಿಂದ ನೇಮಕಗೊಳ್ಳದ ಅಥವಾ ಪ್ರೋತ್ಸಾಹಿತರಾಗದ ಹೊರತು ಅರ್ಧದಷ್ಟು ಅಭ್ಯರ್ಥಿಗಳು ಸ್ಪರ್ಧಿಸುವ ಕುರಿತು ಯೋಚಿಸಲಿಲ್ಲ.

ಸ್ಥಳೀಯ ಚುನಾವಣೆಗಳಿಗೆ ಸ್ಪರ್ಧಿಸುವ ಮೂಲಕ ತಾವು ಅತ್ಯಂತ ಕಾಳಜಿ ವಹಿಸುವ ವಿಷಯಗಳ ಕುರಿತು ಅವರ ಸ್ಥಳೀತ ಸಮುದಾಯಗಳಲ್ಲಿ ಬದಲಾವಣೆಯನ್ನು ತರಲು Snapchatter ಗಳಿಗೆ ಸುಲಭವಾಗಿಸಲು ನಮ್ಮಿಂದಾಗುವುದನ್ನು ಮಾಡಲು ನಾವು ಬಯಸುತ್ತೇವೆ. ಇತ್ತೀಚೆಗೆ, ತಮ್ಮ ಸಮುದಾಯದಲ್ಲಿ ಮುಂಬರುವ ಚುನಾವಣಾ ಸ್ಪರ್ಧೆಗಳ ಕುರಿತು ತಿಳಿದುಕೊಳ್ಳಲು—ಮತ್ತು ನಾಯಕತ್ವದಲ್ಲಿ ಅವರು ನೋಡಲು ಬಯಸುವ ಸ್ನೇಹಿತರನ್ನು ನಾಮನಿರ್ದೇಶನ ಮಾಡಲು ಯುವಜನರಿಗೆ ಸಹಾಯ ಮಾಡಲು Snapchat ನಲ್ಲಿ ನಾವು ಹೊಸ ವೈಶಿಷ್ಟ್ಯವನ್ನು ಆರಂಭಿಸಿದ್ದೇವೆ. ವಿವಿಧ ನೀತಿ ವಿಷಯಗಳಿಂದ ವಿಂಗಡಿಸಿದ ಸ್ಥಳೀಯ ಅವಕಾಶಗಳನ್ನು Snapchatter ಗಳು ಅನ್ವೇಷಿಸಬಹುದು, ಪ್ರತಿ ಹುದ್ದೆಗೆ ಇರುವ ಅಧಿಕಾರಗಳನ್ನು ನೋಡಬಹುದು ಮತ್ತು ಚುನಾವಣೆಗೆ ಯಶಸ್ವಿಯಾಗಿ ಸ್ಪರ್ಧಿಸುವುದಕ್ಕೆ ಮುನ್ನ ಅಭ್ಯರ್ಥಿ ಪೂರ್ಣಗೊಳಿಸಬೇಕಾದ ಎಲ್ಲ ಅಂಶಗಳ "ಚೆಕ್‌ಲಿಸ್ಟ್" ಒಳಗೊಂಡ ಕೇಂದ್ರೀಕೃತ ಅಭಿಯಾನ ಡ್ಯಾಶ್‌ಬೋರ್ಡ್ ರಚಿಸಬಹುದು. ನಾಯಕತ್ವ ಕಾರ್ಯಾಗಾರಗಳು ಮತ್ತು ಅಭಿಯಾನದ ತರಬೇತಿ ಸೇರಿದಂತೆ, ಸಂಭಾವ್ಯ ಅಭ್ಯರ್ಥಿಗಳಿಗೆ ಪ್ರಾರಂಭಿಸಲು ಬೇಕಾಗುವ ಸಂಪನ್ಮೂಲಗಳನ್ನು ಒದಗಿಸಲು ಅವರೊಂದಿಗೆ ಕೆಲಸ ಮಾಡುವ ಹತ್ತು ಅಭ್ಯರ್ಥಿಗಳ ನೇಮಕಾತಿಯ ಸಂಘಟನೆಯ ದ್ವಿಪಕ್ಷೀಯ ಗುಂಪಿನೊಂದಿಗೆ ನಾವು ಆರಂಭದಲ್ಲಿ ಕೈಜೋಡಿಸಿದೆವು. ಸ್ನೇಹಿತರೊಂದಿಗಿನ ಪ್ರೋತ್ಸಾಹ ಮತ್ತು ಈ ಪಾಲುದಾರ ಸಂಘಟನೆಗಳಿಂದ ತರಬೇತಿಯ ಮೂಲಕ, ನಾಯಕತ್ವಕ್ಕೆ ಪಾದಾರ್ಪಣೆ ಮಾಡಲು ಮತ್ತು ತಮ್ಮ ಅಭಿಪ್ರಾಯವನ್ನು ಕೇಳುವಂತೆ ಮಾಡಲು Snapchatter ಗಳಿಗೆ ಇದು ವಿನೋದಮಯ ಮತ್ತು ಪರಿಣಾಮಕಾರಿ ವಿಧಾನ ಎಂದು ನಾವು ಭಾವಿಸುತ್ತೇವೆ.

ಪ್ರತಿ ದಿನ ನಮ್ಮ ಆ್ಯಪ್‌ನಲ್ಲಿ, ಜಗತ್ತನ್ನು ಇನ್ನಷ್ಟು ಉತ್ತಮ ಸ್ಥಳವಾಗಿಸಲು ಸಹಾಯ ಮಾಡುವ ಅಸಾಧಾರಣ ಹುಮ್ಮಸ್ಸು, ಸೃಜನಶೀಲತೆ ಮತ್ತು ಆವಿಷ್ಕಾರವನ್ನು Snapchat ಪೀಳಿಗೆ ಪ್ರದರ್ಶಿಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಐತಿಹಾಸಿಕವಾಗಿ ಮತದಾನದಿಂದ ಯುವಜನರನ್ನು ದೂರ ಇರಿಸಿದ ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುವುದಕ್ಕಾಗಿ ನಮ್ಮಿಂದ ಸಾಧ್ಯವಿರುವ ಕಾರ್ಯವನ್ನು ನಾವು ಮುಂದುವರಿಸುತ್ತೇವೆ ಮತ್ತು ನಮ್ಮ—ಮತ್ತು ಅವರ—ಭವಿಷ್ಯವನ್ನು ರೂಪಿಸಲು ದನಿ ಎತ್ತಲು ಮತ್ತು ತಮ್ಮ ಪಾತ್ರವನ್ನು ನಿಭಾಯಿಸಲು ಭವಿಷ್ಯದ ಪೀಳಿಗೆಯನ್ನು ಸಬಲೀಕರಣಗೊಳಿಸಲು ನಾವು ಬದ್ಧರಾಗಿದ್ದೇವೆ.

ಸುದ್ದಿಗಳಿಗೆ ಹಿಂತಿರುಗಿ