My AI ಮತ್ತು ಹೊಸ ಸುರಕ್ಷತಾ ವರ್ಧನೆಗಳಿಂದ ಆರಂಭಿಕ ಕಲಿಕೆಗಳು

ಏಪ್ರಿಲ್ 4, 2023

ಆರು ವಾರಗಳ ಹಿಂದೆ, ನಾವು OpenAI ನ GPT ತಂತ್ರಜ್ಞಾನದೊಂದಿಗೆ ರಚಿಸಿದ ಚಾಟ್‌ಬಾಟ್ My AI, ಅನ್ನು ಬಿಡುಗಡೆ ಮಾಡಿದೆವು. My AI ಅನ್ನು ನಿಧಾನವಾಗಿ ನಾವು Snapchat+ ಸಬ್‌ಸ್ಕ್ರೈಬರ್‌ಗಳಿಗೆ ಒದಗಿಸಲು ಆರಂಭಿಸಿದೆವು ಮತ್ತು ಒಂದು ತಿಂಗಳಿಗಿಂತ ತುಸು ಹೆಚ್ಚಿನ ಸಮಯದಲ್ಲಿ ನಾವು ಸಾಕಷ್ಟು ಕಲಿತಿದ್ದೇವೆ. ಉದಾಹರಣೆಗೆ, My AI ಗೆ ನಮ್ಮ ಸಮುದಾಯವು ಕೇಳಿದ ಅತ್ಯಂತ ಸಾಮಾನ್ಯವಾದ ಕೆಲವು ವಿಷಯಗಳಲ್ಲಿ ಸಿನಿಮಾಗಳು, ಕ್ರೀಡೆಗಳು, ಆಟಗಳು, ಸಾಕುಪ್ರಾಣಿಗಳು ಮತ್ತು ಗಣಿತ ಸೇರಿದೆ ಎನ್ನುವುದು ನಮಗೆ ತಿಳಿದಿದೆ.

ದುರ್ಬಳಕೆಯ ಒಂದಿಷ್ಟು ಸಂಭಾವ್ಯತೆಯ ಕುರಿತೂ ನಮಗೆ ತಿಳಿಯಿತು, ನಮ್ಮ ಮಾರ್ಗಸೂಚಿಗಳಿಗೆ ಅನುಸರಣೆ ಹೊಂದಿಲ್ಲದ ಪ್ರತಿಕ್ರಿಯೆಗಳನ್ನು ಒದಗಿಸುವಂತೆ ಚಾಟ್‌ಬಾಟ್‌ ಅನ್ನು ಕೆಲವರು ಬೇಸ್ತುಬೀಳಿಸುತ್ತಿರುವ ವಿಷಯ ನಮ್ಮ ಗಮನಕ್ಕೆ ಬಂತು. My AI ಅನ್ನು ಅಭಿವೃದ್ಧಿಪಡಿಸುವ ನಮ್ಮ ಜಂಟಿ ಕಾರ್ಯದ ಭಾಗವಾಗಿ, ನಮ್ಮ ಕಲಿಕೆಯ ಫಲಿತಾಂಶವಾಗಿ ನಾವು ಅನುಷ್ಠಾನಗೊಳಿಸಲು ಯೋಜಿಸುತ್ತಿರುವ ಟೂಲ್‌ಗಳೊಂದಿಗೆ — ಇತ್ತೀಚೆಗೆ ಜಾರಿಗೊಳಿಸಿದ ಕೆಲವು ಸುರಕ್ಷತಾ ಸುಧಾರಣೆಗಳ ಕುರಿತು ಒಂದು ಅಪ್‌ಡೇಟ್ ನೀಡಲು ಬಯಸುತ್ತೇವೆ. 

ಡೇಟಾಗೆ ಸಂಬಂಧಿಸಿ My AI ನ ವಿಧಾನ 

ಗೌಪ್ಯತೆಯು Snap ನ ಧ್ಯೇಯಕ್ಕೆ ಯಾವಾಗಲೂ ಕೇಂದ್ರವಾಗಿದೆ — ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಸಂವಹನ ನಡೆಸುವಾಗ ತಮ್ಮನ್ನು ಅಭಿವ್ಯಕ್ತಪಡಿಸಲು ಜನರು ಇನ್ನಷ್ಟು ಆರಾಮದಾಯಕ ಭಾವ ಹೊಂದಲು ಇದು ಸಹಾಯ ಮಾಡುತ್ತದೆ. Snapchat ನಾದ್ಯಂತ, ನಮ್ಮ ಉತ್ಪನ್ನಗಳು ಡೇಟಾವನ್ನು ಹೇಗೆ ಬಳಸುತ್ತವೆ ಮತ್ತು ವಿನ್ಯಾಸದ-ಮೂಲಕ-ಗೌಪ್ಯತೆ ಪ್ರಕ್ರಿಯೆಗಳನ್ನು ಬಳಸಿಕೊಂಡು ನಾವು ವೈಶಿಷ್ಟ್ಯಗಳನ್ನು ಹೇಗೆ ನಿರ್ಮಿಸುತ್ತೇವೆ ಎನ್ನುವುದರ ಕುರಿತು ನಮ್ಮ ಸಮುದಾಯಕ್ಕೆ ಸ್ಪಷ್ಟತೆ ಮತ್ತು ಸನ್ನಿವೇಶವನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ಉದಾಹರಣೆಗೆ, Snapchat ನಲ್ಲಿ ಸ್ನೇಹಿತರ ನಡುವಿನ ಸಂಭಾಷಣೆಗಳಿಗೆ ಸಂಬಂಧಿಸಿದ ಡೇಟಾವನ್ನು ನಾವು ನಿರ್ವಹಿಸುವ ವಿಧಾನವು Snapchat ನಲ್ಲಿ ಪ್ರಸಾರ ಕಂಟೆಂಟ್‌ಗೆ ಸಂಬಂಧಿಸಿದ ಡೇಟಾವನ್ನು ನಾವು ನಿರ್ವಹಿಸುವುದಕ್ಕಿಂತ ಭಿನ್ನಾಗಿದ್ದು, ಇದಕ್ಕಾಗಿ ನಾವು ಉನ್ನತ ಮಾನದಂಡವನ್ನು ಹೊಂದಿದ್ದೇವೆ ಹಾಗೂ ಅದು ದೊಡ್ಡ ಪ್ರಮಾಣದಲ್ಲಿ ಪ್ರೇಕ್ಷಕರನ್ನು ತಲುಪುವುದರಿಂದ ಅದನ್ನು ಮಾಡರೇಟ್ ಮಾಡಬೇಕಾಗುತ್ತದೆ. 

ಅದಾಗ್ಯೂ, My AI ಒಂದು ಚಾಟ್‌ಬಾಟ್ ಆಗಿರುವುದರಿಂದ ಮತ್ತು ನೈಜ ಸ್ನೇಹಿತ ಅಲ್ಲದಿರುವುದರಿಂದ, ಸಂಬಂಧಿಸಿದ ಡೇಟಾವನ್ನು ನಾವು ಉದ್ದೇಶಪೂರ್ವಕವಾಗಿ ಬೇರೆ ರೀತಿಯಲ್ಲಿ ಪರಿಗಣಿಸುತ್ತಿದ್ದೇವೆ, ಏಕೆಂದರೆ My AI ಅನ್ನು ಇನ್ನಷ್ಟು ವಿನೋದಮಯ, ಉಪಯುಕ್ತ ಮತ್ತು ಸುರಕ್ಷಿತವಾಗಿಸಲು ಸಂಭಾಷಣೆಯ ಇತಿಹಾಸವನ್ನು ಬಳಸಲು ನಮಗೆ ಸಾಧ್ಯವಾಗುತ್ತಿದೆ. My AI ಬಳಸಲು Snapchatter ಗಳಿಗೆ ಅವಕಾಶ ನೀಡುವುದಕ್ಕಿಂತ ಮುನ್ನ, ನೀವು ಅಳಿಸದ ಹೊರತು My AI ಜೊತೆಗಿನ ಎಲ್ಲ ಸಂದೇಶಗಳನ್ನು ಉಳಿಸಿಕೊಳ್ಳಲಾಗುತ್ತದೆ ಎನ್ನುವುದನ್ನು ಸ್ಪಷ್ಟಪಡಿಸುವ ಒಂದು ಆನ್‌ಬೋರ್ಡಿಂಗ್ ಸಂದೇಶವನ್ನು ನಾವು ಅವರಿಗೆ ತೋರಿಸುತ್ತೇವೆ. 

My AI ನೊಂದಿಗೆ ಈ ಆರಂಭಿಕ ಸಂವಹನಗಳನ್ನು ವಿಮರ್ಶಿಸಲು ಸಾಧ್ಯವಾಗುವುದರಿಂದ ಯಾವ ಸುರಕ್ಷತಾ ಕ್ರಮಗಳು ಚೆನ್ನಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ಯಾವುದನ್ನು ಇನ್ನಷ್ಟು ಬಲಿಷ್ಠಪಡಿಸಬೇಕಿದೆ ಎಂದು ಗುರುತಿಸಲು ನಮಗೆ ಸಹಾಯ ಮಾಡುತ್ತವೆ. ಇದನ್ನು ಮೌಲ್ಯಮಾಪನ ಮಾಡುವುದಕ್ಕೆ ಸಹಾಯ ಮಾಡಲು, ಹಿಂಸೆ, ಲೈಂಗಿಕವಾಗಿ ಸುಸ್ಪಷ್ಟ ವಿಷಯ, ಅಕ್ರಮ ಮಾದಕಪದಾರ್ಥದ ಬಳಕೆ, ಮಕ್ಕಳ ಲೈಂಗಿಕ ಶೋಷಣೆ, ಬೆದರಿಸುವಿಕೆ, ದ್ವೇಷ ಭಾಷಣ, ಅವಮಾನಕರ ಅಥವಾ ಪಕ್ಷಪಾತದ ಹೇಳಿಕೆಗಳು, ಜನಾಂಗನಿಂದನೆ, ಸ್ತ್ರೀದ್ವೇಷ ಅಥವಾ ಪ್ರಾತಿನಿಧ್ಯವಿಲ್ಲದ ಗುಂಪುಗಳನ್ನು ಕಡೆಗಣಿಸುವುದಕ್ಕೆ ಉಲ್ಲೇಖಗಳನ್ನು ಒಳಗೊಂಡಿರುವ ಯಾವುದೇ ಪಠ್ಯ ಎಂದು ನಾವು ವ್ಯಾಖ್ಯಾನಿಸುವ "ಅನುಸರಣೆಯಿಲ್ಲದಿರುವ" ಭಾಷೆಯನ್ನು ಒಳಗೊಂಡ My AI ಪ್ರಶ್ನೆಗಳು ಮತ್ತು ಪ್ರತಿಕ್ರಿಯೆಗಳ ವಿಮರ್ಶೆಯನ್ನು ನಾವು ಮಾಡುತ್ತಿದ್ದೇವೆ. ಕಂಟೆಂಟ್‌ನ ಈ ಎಲ್ಲ ಪ್ರವರ್ಗಗಳನ್ನು Snapchat ನಲ್ಲಿ ಸ್ಪಷ್ಟವಾಗಿ ನಿಷೇಧಿಸಲಾಗಿದೆ.

My AI ನ ಪ್ರತಿಕ್ರಿಯೆಗಳಲ್ಲಿ ಕೇವಲ 0.01% ಮಾತ್ರ ಅನುಸರಣೆಯಿಲ್ಲದವು ಎಂದು ಪರಿಗಣಿಸಲಾಗಿದೆ ಎಂದು ನಮ್ಮ ಇತ್ತೀಚಿನ ವಿಶ್ಲೇಷಣೆಯಲ್ಲಿ ಕಂಡುಬಂದಿದೆ. ಅತ್ಯಂತ ಸಾಮಾನ್ಯ ಅನುಸರಣೆಯಿಲ್ಲದ My AI ಪ್ರತಿಕ್ರಿಯೆಗಳ ಉದಾಹರಣೆಗಳಲ್ಲಿ Snapchatter ಗಳ ಪ್ರಶ್ನೆಗಳಿಗೆ My AI ಅನುಚಿತ ಪದಗಳ ಪುನರಾವರ್ತನೆ ಮಾಡುವುದು ಸೇರಿದೆ.

My AI ಸುಧಾರಿಸಲು ಈ ಕಲಿಕೆಗಳ ಬಳಕೆಯನ್ನು ನಾವು ಮುಂದುವರಿಸುತ್ತೇವೆ. My AI ನ ದುರ್ಬಳಕೆಯನ್ನು ಮಿತಿಗೊಳಿಸಲು ಹೊಸ ವ್ಯವಸ್ಥೆಯನ್ನು ಅಳವಡಿಸುವುದಕ್ಕೆ ಕೂಡ ಈ ಡೇಟಾ ನಮಗೆ ಸಹಾಯಕವಾಗಲಿದೆ. ನಮ್ಮ ಪ್ರಸ್ತುತ ಇರುವ ಟೂಲ್‌ಸೆಟ್‌ಗೆ ನಾವು Open AI ನ ಮಾಡರೇಶನ್ ತಂತ್ರಜ್ಞಾನವನ್ನು ಸೇರಿಸುತ್ತಿದ್ದೇವೆ, ಇದು ಸಂಭಾವ್ಯತಃ ಹಾನಿಕಾರಕ ಕಂಟೆಂಟ್‌ನ ತೀವ್ರತೆಯನ್ನು ಮೌಲ್ಯಮಾಪನ ಮಾಡಲು ಮತ್ತು Snapchatter ಗಳು ಸೇವೆಯನ್ನು ದುರ್ಬಳಕೆ ಮಾಡಿದರೆ ಅವರ My AI ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲು ನಮಗೆ ಅವಕಾಶ ಕಲ್ಪಿಸುತ್ತದೆ. 

ವಯೋ-ಸೂಕ್ತವಾದ ಅನುಭವಗಳು 

ಸುರಕ್ಷತೆ ಮತ್ತು ವಯೋ ಸೂಕ್ತತೆಯನ್ನು ಆದ್ಯತೆಗೊಳಿಸುವ ಉತ್ಪನ್ನಗಳು ಮತ್ತು ಅನುಭವಗಳನ್ನು ವಿನ್ಯಾಸಗೊಳಿಸಲು ಇರುವ ನಮ್ಮ ಜವಾಬ್ದಾರಿಯನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. My AI ಬಿಡುಗಡೆ ಮಾಡಿದಂದಿನಿಂದ, Snapchatter ವಯಸ್ಸನ್ನು ಪರಿಗಣಿಸದೆ, Snapchatter ವಿನಂತಿಗಳಿಗೆ ಅದರ ಅನುಚಿತ ಪ್ರತಿಕ್ರಿಯೆಗಳನ್ನು ಸುಧಾರಿಸಲು ನಾವು ಬಹಳ ಹುರುಪಿನಿಂದ ಕೆಲಸ ಮಾಡಿದ್ದೇವೆ. ಸಂಭಾವ್ಯತಃ ಅನುಸರಣೆಯಿಲ್ಲದ ಪಠ್ಯಕ್ಕಾಗಿ My AI ಸಂಭಾಷಣೆಗಳನ್ನು ಸ್ಕ್ಯಾನ್ ಮಾಡಲು ಮತ್ತು ಕ್ರಮ ಕೈಗೊಳ್ಳಲು ನಾವು ಪೂರ್ವಭಾವಿ ಪತ್ತೆ ಟೂಲ್‌ಗಳನ್ನು ಕೂಡ ಬಳಸುತ್ತೇವೆ.

Snapchatter ಗಳ ಜನ್ಮದಿನವನ್ನು ಬಳಸಿಕೊಳ್ಳುವ My AI ಗಾಗಿ ನಾವು ಹೊಸ ವಯಸ್ಸಿನ ಸಂಕೇತವನ್ನು ಕೂಡ ಜಾರಿಗೊಳಿಸಿದ್ದೇವೆ, ಹಾಗಾಗಿ ಒಬ್ಬ Snapchatter ತನ್ನ ವಯಸ್ಸನ್ನು My AI ಗೆ ಎಂದಿಗೂ ತಿಳಿಸದಿದ್ದರೂ ಸಹ, ಸಂಭಾಷಣೆಯಲ್ಲಿ ತೊಡಗುವಾಗ ಚಾಟ್‌ಬಾಟ್ ನಿರಂತರವಾಗಿ ಅವರ ವಯಸ್ಸನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ. 

ಕೌಟುಂಬಿಕ ಕೇಂದ್ರದಲ್ಲಿ My AI

ನಮ್ಮ ಆ್ಯಪ್‌ನಲ್ಲಿನ ಕೌಟುಂಬಿಕ ಕೇಂದ್ರದ ಮೂಲಕ, ತಮ್ಮ ಹದಿಹರೆಯದ ಮಕ್ಕಳು ಯಾರೊಂದಿಗೆ ಸಂವಹನ ನಡೆಸುತ್ತಿದ್ದಾರೆ ಮತ್ತು ಇತ್ತೀಚೆಗೆ ಯಾವಾಗ ಸಂವಹನ ಮಾಡಿದ್ದಾರೆ ಎನ್ನುವ ಕುರಿತು ಪೋಷಕರು ಮತ್ತು ಆರೈಕೆದಾರರಿಗೆ Snapchat ಗೋಚರತೆಯನ್ನು ಒದಗಿಸುತ್ತದೆ. ಮುಂಬರುವ ವಾರಗಳಲ್ಲಿ, My AI ನೊಂದಿಗೆ ಹದಿಹರೆಯದವರ ಸಂವಾದಗಳ ಕುರಿತು ನಾವು ಪೋಷಕರಿಗೆ ಇನ್ನಷ್ಟು ಒಳನೋಟಗಳನ್ನು ಒದಗಿಸುತ್ತೇವೆ. ಅಂದರೆ, My AI ನೊಂದಿಗೆ ಹದಿಹರೆಯದವರು ಸಂವಹನ ನಡೆಸುತ್ತಿದ್ದಾರೆಯೇ ಮತ್ತು ಎಷ್ಟು ಬಾರಿ ನಡೆಸುತ್ತಾರೆ ಎನ್ನುವುದನ್ನು ನೋಡುವುದಕ್ಕೆ ಕೌಟುಂಬಿಕ ಕೇಂದ್ರ ಬಳಸಲು ಪೋಷಕರಿಗೆ ಸಾಧ್ಯವಾಗುತ್ತದೆ. ಕೌಟುಂಬಿಕ ಕೇಂದ್ರವನ್ನು ಬಳಸಲು, ಪೋಷಕರು ಹಾಗೂ ಹದಿಹರೆಯದವರಿಬ್ಬರೂ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ — ಹಾಗೂ ಆಸಕ್ತ ಕುಟುಂಬಗಳು ಸೈನ್ ಅಪ್ ಮಾಡುವುದು ಹೇಗೆ ಎನ್ನುವ ಕುರಿತು ಇಲ್ಲಿ ತಿಳಿದುಕೊಳ್ಳಬಹುದು. 

My AI ನಿಂದ ಯಾವುದೇ ಕಳವಳಕಾರಿ ಪ್ರತಿಕ್ರಿಯೆಗಳನ್ನು ಸ್ವೀಕರಿಸಿದರೆ ನಮ್ಮ ಆ್ಯಪ್‌ನಲ್ಲಿನ ವರದಿ ಮಾಡುವಿಕೆ ಟೂಲ್‌ಗಳನ್ನು ಬಳಸುವಂತೆ ಮತ್ತು ಉತ್ಪನ್ನದೊಂದಿಗಿನ ಒಟ್ಟಾರೆ ಅನುಭವಗಳ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ Snapchatter ಗಳನ್ನು ಪ್ರೋತ್ಸಾಹಿಸುವುದನ್ನು ನಾವು ಮುಂದುವರಿಸುತ್ತೇವೆ. 

My AI ಸುಧಾರಿಸಲು ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ ಮತ್ತು ನಮ್ಮ ಸಮುದಾಯವನ್ನು ಸುರಕ್ಷಿತವಾಗಿ ಇರಿಸಲು ಸಹಾಯ ಮಾಡುವುದಕ್ಕೆ ಹೆಚ್ಚುವರಿ ಕ್ರಮಗಳನ್ನು ನಾವು ಸತತವಾಗಿ ಮೌಲ್ಯಮಾಪನ ಮಾಡುತ್ತೇವೆ. My AI ಕುರಿತ ಎಲ್ಲ ಆರಂಭಿಕ ಪ್ರತಿಕ್ರಿಯೆಗಳನ್ನು ನಾವು ಮೆಚ್ಚುತ್ತೇವೆ ಮತ್ತು ನಮ್ಮ ಸಮುದಾಯಕ್ಕೆ ವಿನೋದಮಯ ಮತ್ತು ಸುರಕ್ಷಿತ ಅನುಭವ ಒದಗಿಸುವುದಕ್ಕೆ ನಾವು ಬದ್ಧರಾಗಿದ್ದೇವೆ. 

ಸುದ್ದಿಗಳಿಗೆ ಹಿಂತಿರುಗಿ