ಡೇಟಾ ಗೌಪ್ಯತೆ ದಿನ: Snap ನ ಹೊಸ ಗೌಪ್ಯತೆ ಮತ್ತು ಸುರಕ್ಷತೆ ಹಬ್ ಹಾಗೂ ಗೌಪ್ಯತೆ ಸೆಟ್ಟಿಂಗ್‌ಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಿ

ಜನವರಿ 26, 2023

Snap ನಲ್ಲಿ ಗೌಪ್ಯತೆ ನಮ್ಮ DNA ನಲ್ಲಿಯೇ ಇದೆ. ಗೌಪ್ಯ ಸಂವಹನ ಮತ್ತು ಸಂಭಾಷಣೆ ಮೂಲಕ ಜನರು ತಮ್ಮ ಸ್ನೇಹವನ್ನು ಗಟ್ಟಿಗೊಳಿಸಿಕೊಳ್ಳಲು ಸಹಾಯ ಮಾಡಬೇಕೆಂಬುವ ನಮ್ಮ ಗಮನ ಮೊದಲ ದಿನದಿಂದಲೇ Snapchatನ ಪ್ರಮುಖ ವೈಶಿಷ್ಟ್ಯಗಳಲ್ಲಿ ಒಂದಾಗಿತ್ತು. 

ನಾವು ಬೆಳೆಯುತ್ತಿರುವಂತೆ ಮತ್ತು ವಿಕಸನವಾಗುತ್ತಿರುವಂತೆ, ನಮ್ಮ ವೇದಿಕೆಯು ಎರಡು ಮೂಲಭೂತ ಆದರೆ ಅವಶ್ಯಕ ಮೌಲ್ಯಗಳ ಪಾಲನೆಯನ್ನು ಮುಂದುವರೆಸಿಕೊಂಡು ಬಂದಿದೆ: ಗೌಪ್ಯತೆ ಮತ್ತು ಸುರಕ್ಷತೆ. ಸ್ಪಷ್ಟವಾದ ಗೌಪ್ಯತೆಯ ತತ್ವಗಳನ್ನು ಹೊಂದಿರುವುದು Snapchatter ಗಳನ್ನು ಸುರಕ್ಷಿತ ಮತ್ತು ಸುಭದ್ರವಾಗಿ ಇರಿಸಲು ಅವಶ್ಯಕವಾಗಿದೆ ಮತ್ತು ಬಲಿಷ್ಠವಾದ ಸುರಕ್ಷತಾ ಅಭ್ಯಾಸಗಳು Snapchatter ಗೌಪ್ಯತೆಯನ್ನು ರಕ್ಷಿಸಲು ನೆರವಾಗುತ್ತವೆ. ಆದ್ದರಿಂದ, ನಾವು ಸೃಷ್ಟಿಸುವ ಪ್ರತಿ ಹೊಸ ವೈಶಿಷ್ಟ್ಯವು ತೀವ್ರವಾದ ಗೌಪ್ಯತೆ ಮತ್ತು ಸುರಕ್ಷತೆ ವಿಮರ್ಶೆಗಳ ಮೂಲಕ ಹಾದುಹೋಗುತ್ತದೆ ಮತ್ತು ಒಂದು ಹೊಸ ವೈಶಿಷ್ಟ್ಯವು ಪರೀಕ್ಷೆಯಲ್ಲಿ ತೇರ್ಗಡೆಯಾಗದಿದ್ದರೆ, ನಾವು ಆ ನಿಟ್ಟಿನಲ್ಲಿ ಮುಂದುವರಿಯುವುದಿಲ್ಲ.

ಆದ ಕಾರಣ ಡೇಟಾ ಗೌಪ್ಯತೆ ದಿನದ ಸ್ಮರಣೆಯಲ್ಲಿ, ನಾವು ಇತ್ತೀಚೆಗೆ ನಮ್ಮ ಗೌಪ್ಯತೆ ಮತ್ತು ಸುರಕ್ಷತೆ ಹಬ್ ಅನ್ನು ಆರಂಭಿಸಿದೆವು – values.snap.com – ಇದು ಒಂದೇ ಛಾವಣಿಯಡಿ ನಮ್ಮ ಎಲ್ಲ ಗೌಪ್ಯತೆ ಮತ್ತು ಸುರಕ್ಷತೆ ಸಾಮಗ್ರಿಗಳು ಹಾಗೂ ನೀತಿಯನ್ನು ಹೊಂದಿರುವ ಒಂದು ಹೊಸ ಒಂದು-ನಿಲುಗಡೆಯ-ತಾಣವಾಗಿದೆ. ಜನರು ಈಗ ಈ ಹಬ್‌ಗೆ ಭೇಟಿ ನೀಡಬಹುದು ಮತ್ತು ಸುಲಭವಾಗಿ ಅರ್ಥಮಾಡಿಕೊಳ್ಳಬಹುದಾದ ರೀತಿಯಲ್ಲಿ ಗೌಪ್ಯತೆ ಮತ್ತು ಸುರಕ್ಷತೆಗೆ Snap ನ ವಿಶಿಷ್ಟ ವಿಧಾನದ ಕುರಿತು ಅವರಿಗೆ ತಿಳುವಳಿಕೆ ನೀಡುವ ಲಘು ಮಾದರಿಯ ವಿಷಯವನ್ನು ಕಂಡುಕೊಳ್ಳಬಹುದು. ಈ ಹಿಂದೆ, ನಮ್ಮ ಗೌಪ್ಯತೆ ಮತ್ತು ಸುರಕ್ಷತೆ ಕೇಂದ್ರಗಳು ಪ್ರತ್ಯೇಕವಾಗಿದ್ದವು ಮತ್ತು ಮಾಹಿತಿಯನ್ನು ವ್ಯವಸ್ಥಿತಗೊಳಿಸುವ ಮೂಲಕ ಮತ್ತು ಒಂದು ಕೇಂದ್ರಸ್ಥಳವನ್ನು ನಿರ್ಮಾಣ ಮಾಡುವ ಮೂಲಕ ಹೆಚ್ಚು ಜನರು ನಮ್ಮ ನೀತಿಗಳು, ಸಂಪನ್ಮೂಲಗಳು ಮತ್ತು ಟೂಲ್‌ಗಳನ್ನು ಅನ್ವೇಷಿಸುತ್ತಾರೆ ಹಾಗೂ ನಮ್ಮ ವೇದಿಕೆಯಲ್ಲಿ ಜನರನ್ನು ರಕ್ಷಿಸಲು Snap ಏನು ಮಾಡುತ್ತಿದೆ ಮತ್ತು ತಮ್ಮನ್ನು ರಕ್ಷಿಸಿಕೊಳ್ಳಲು ಅವರು ಏನು ಮಾಡಬಹುದು ಎನ್ನುವ ಕುರಿತು ಇನ್ನಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಎಂದು ನಾವು ಆಶಿಸುತ್ತೇವೆ.

Snapchatter ಗಳು ಹಂಚಿಕೊಳ್ಳುವ ವಿಷಯಗಳ ಕುರಿತು ನಿಯಂತ್ರಣ ಹೊಂದಿರಬೇಕು ಎಂದು ನಾವು ಬಯಸುತ್ತೇವೆ ಮತ್ತು ಇದನ್ನು ಸುಲಭವಾಗಿಸಲು ಸಂಬಂಧಿತ ಸೆಟ್ಟಿಂಗ್‌ಗಳನ್ನು ಕಂಡುಕೊಳ್ಳಲು ಮತ್ತು ಅರ್ಥಮಾಡಿಕೊಳ್ಳಲು ಇನ್ನಷ್ಟು ಸುಲಭವಾಗಿಸುವುದಕ್ಕಾಗಿ ನಾವು ನಮ್ಮ ಸೆಟ್ಟಿಂಗ್‌ಗಳ ಪುಟವನ್ನು ರಿಫ್ರೆಶ್ ಮಾಡುತ್ತಿದ್ದೇವೆ. Snapchat, ತಮ್ಮನ್ನು ಅಭಿವ್ಯಕ್ತಪಡಿಸಲು, ಆ ಕ್ಷಣದಲ್ಲಿ ಜೀವಿಸಲು ಮತ್ತು ಜಗತ್ತಿನ ಕುರಿತು ತಿಳಿದುಕೊಳ್ಳಲು ಮತ್ತು ಜೊತೆಯಾಗಿ ವಿನೋದಿಸಲು ಜನರಿಗೆ ವೇದಿಕೆ ಒದಗಿಸುವ ಆ್ಯಪ್ ಆಗಿದೆ, ಆದ ಕಾರಣ ನಾವು ಪ್ರತಿಕ್ರಿಯಾಶೀಲ ಟೂಲ್‌ಗಳ ಸರಣಿಯನ್ನು ಬಿಡುಗಡೆ ಮಾಡುತ್ತಿದ್ದೇವೆ, ಉದಾಹರಣೆಗೆ ಇಂಟರ್‌ನ್ಯಾಷನಲ್ ಅಸೋಸಿಯೇಷನ್ ಆಫ್ ಪ್ರೈವಸಿ ಪ್ರೊಫೆಷನಲ್ಸ್ (IAPP) ಇವರೊಂದಿಗೆ ಪಾಲುದಾರಿಕೆಯಲ್ಲಿ ಗೌಪ್ಯತೆ ಥೀಮ್ ಇರುವ Bitmoji ಸ್ಟಿಕ್ಕರ್ ಪ್ಯಾಕ್ ಹಾಗೂ ಪ್ರಮುಖ ಗೌಪ್ಯತೆ ಸಂಸ್ಥೆಯಾದ ಫ್ಯೂಚರ್ ಪ್ರೈವಸಿ ಫೋರಮ್ (FPF) ಜೊತೆಗೆ ಸಹ-ನಿರ್ಮಾಣ ಮಾಡಲಾಗಿರುವ ಆನ್‌ಲೈನ್‌ನಲ್ಲಿ ನಿಮ್ಮ ಗೌಪ್ಯತೆಯನ್ನು ರಕ್ಷಿಸಲು ವಿದ್ಯಾರ್ಥಿ ಗೌಪ್ಯತೆ ಸಂವಹನಗಳ ಟೂಲ್‌ಕಿಟ್‌ನಂತಹ ಅತ್ಯುತ್ತಮ ಅಭ್ಯಾಸಗಳೊಂದಿಗಿನ ಸಂಪನ್ಮೂಲಗಳಿಗೆ ಸ್ವೈಪ್ ಅಪ್ ಲಿಂಕ್ ಅನ್ನು ಒಳಗೊಂಡಿರುವ ಲೆನ್ಸ್. ಕೊನೆಯದಾಗಿ, ಮಾಧ್ಯಮ ಪಾಲುದಾರರು ಮತ್ತು ಕ್ರಿಯೇಟರ್‌ಗಳಿಂದ ಕಂಟೆಂಟ್ ಅನ್ನು ಪ್ರದರ್ಶಿಸುವ ನಮ್ಮ ಕಥೆಗಳ ಪುಟದಲ್ಲಿ ನಮ್ಮ ಗೌಪ್ಯತೆ-ಕೇಂದ್ರಿತ ಚಾನೆಲ್ ಸುರಕ್ಷತಾ ಸ್ನ್ಯಾಪ್‌ಶಾಟ್ ನ ಒಂದು ಸಂಚಿಕೆಯನ್ನು Snapchatter ಗಳು ವೀಕ್ಷಿಸಬಹುದು. ಸಂಚಿಕೆಯು ವಿಶಿಷ್ಟ ಖಾತೆ ರುಜುವಾತುಗಳನ್ನು ರಚಿಸುವ ಕುರಿತು ಮತ್ತು ಎರಡು-ಅಂಶಗಳ ದೃಢೀಕರಣವನ್ನು ಹೊಂದಿಸುವುದು ಹೇಗೆ ಎನ್ನುವ ಕುರಿತು ಸಲಹೆಗಳನ್ನು ನೀಡುತ್ತದೆ.  

ಈ ಡೇಟಾ ಗೌಪ್ಯತೆ ದಿನ ಮತ್ತು ಪ್ರತಿದಿನ, ನಮ್ಮ ಸಮುದಾಯದ ಗೌಪ್ಯತೆ ಮತ್ತು ಸುರಕ್ಷತೆಯನ್ನು ರಕ್ಷಿಸಲು Snap ಬದ್ಧವಾಗಿ ಉಳಿದಿದೆ. ನಾವು ವಿಶ್ವಾದ್ಯಂತದ Snapchatter ಗಳಿಗೆ ವಿನೋದಮಯ, ತೊಡಗಿಕೊಳ್ಳುವ ಮತ್ತು ಸುರಕ್ಷಿತ ವಾತಾವರಣವನ್ನು ನಿರ್ವಹಿಸುವ ಜೊತೆಗೆ ಗೌಪ್ಯತೆ ಮತ್ತು ಸುರಕ್ಷತೆಯ ಅತ್ಯುನ್ನತ ಮಾನದಂಡಕ್ಕೆ ಬದ್ಧರಾಗಿರುವುದನ್ನು ಮುಂದುವರಿಸುತ್ತೇವೆ.

ಸುದ್ದಿಗಳಿಗೆ ಹಿಂತಿರುಗಿ