Snap ನ ಡೆವಲಪರ್ ವೇದಿಕೆಗೆ ಹೊಸ ನೀತಿಗಳನ್ನು ಪ್ರಕಟಿಸುತ್ತಿದ್ದೇವೆ

ಮಾರ್ಚ್ 17, 2022

ನಮ್ಮ ಸೇವೆಗಳನ್ನು ಬಳಸುವಾಗ Snapchatter ಗಳು ವಿನೋದಿಸಬೇಕು ಮತ್ತು ಸುರಕ್ಷಿತವಾಗಿರಬೇಕು ಎಂದು ನಾವು ಬಯಸುತ್ತೇವೆ ಮತ್ತು ಆ ಗುರಿಯು ನಮ್ಮ ಉತ್ಪನ್ನಗಳು, ನಮ್ಮ ನೀತಿಗಳು ಮತ್ತು ತೃತೀಯ-ಪಕ್ಷದ ಡೆವಲಪರ್‌ಗಳಿಗಾಗಿ ನಮ್ಮ ವೇದಿಕೆಯ ವಿನ್ಯಾಸವನ್ನು ಮುನ್ನಡೆಸುತ್ತದೆ. ನಾವು ಆಪ್ತ ಸ್ನೇಹಿತರ ನಡುವೆ ಮಾನವನ ಸಂಪರ್ಕಗಳು ಮತ್ತು ಸಂವಹನಗಳನ್ನು ಬೆಂಬಲಿಸುವ ತಂತ್ರಜ್ಞಾನಗಳನ್ನು ಬೆಳೆಸುವ ಬಗ್ಗೆಯೂ ಗಮನಹರಿಸುತ್ತೇವೆ. - ಹೆಚ್ಚು ಸುಭದ್ರ ಮತ್ತು ಹೆಚ್ಚು ಧನಾತ್ಮಕ ಆನ್ಲೈನ್ ಅನುಭವಗಳನ್ನು ನೀಡುವಲ್ಲಿ ನೆರವಾಗುವ ತತ್ವ.

ನಾವು ಮೊದಲು ಮೂರನೇ ಪಕ್ಷದ ಅಪ್ಲಿಕೇಶನ್‌ಗಳು ಸೇವೆಗಳಿಗೆ Snapchatನ ಹೆಚ್ಚು ಪ್ರಸಿದ್ಧವಾದ ವೈಶಿಷ್ಟ್ಯತೆಗಳನ್ನು ತರುವುದಕ್ಕಾಗಿ ನಮ್ಮ Snap ಕಿಟ್ ಡೆವಲಪರ್ ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸಿದ್ದೇವೆ. ಪ್ರಾರಂಭದಿಂದ, ನಾವು ಪಾಲ್ಗೊಳ್ಳುತ್ತಿರುವ ಎಲ್ಲಾ ಅಪ್ಲಿಕೇಶನ್‌ಗಳು ಮತ್ತು ಡೆವಲಪರ್‌ಗಳು ಪುನರ್ವೀಕ್ಷಣೆ ಮಾಡಲು ಅಗತ್ಯವಿರುವ ಹಾಗೂ ಅವರ ಸಮಗ್ರತೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಅವರ ಗ್ರಾಹಕರು ಕಾರ್ಯಾಚರಣೆಗಳನ್ನು ಹೇಗೆ ಬೆಂಬಲಿಸುತ್ತಾರೆ ಎಂಬುದನ್ನು ನಾವು ಪರಿಶೀಲಿಸಲು ಸಾಧ್ಯವಾಗುವಂತೆ ನಮ್ಮೊಂದಿಗೆ ಕೆಲಸ ಮಾಡಲು ಮೊದಲು ಅರ್ಜಿ ಸಲ್ಲಿಸಿದಾಗ, ಅನುಮೋದನೆಯ ಪ್ರಕ್ರಿಯೆಗಳಿಗಾಗಿ ಸುರಕ್ಷತೆ ಮತ್ತು ಗೌಪ್ಯತೆಯ ಸ್ಟಾಂಡರ್ಡ್‌ಗಳನ್ನು ನಿಗದಿಪಡಿಸಿಕೊಂಡಿದ್ದೇವೆ.

ಇತರೆ ವಿಷಯಗಳಲ್ಲಿ, ನಮ್ಮ ಮಾರ್ಗಸೂಚಿಗಳು ಬೆದರಿಕೆ, ಕಿರುಕುಳ ದ್ವೇಷದ ಮಾತು, ಭೀತಿ ಹುಟ್ಟಿಸುವುದು ಮತ್ತು ಇತರೆ ವಿಧದ ಹಾನಿಕಾರಕ ಅಂಶವನ್ನು ನಿಷೇಧಿಸುತ್ತವೆ - ಮತ್ತು ಡೆವಲಪರ್‌ಗಳು ತಮ್ಮ ಗ್ರಾಹಕರನ್ನು ರಕ್ಷಿಸಲು ಮತ್ತು ನಿಂದನೆಯ ಯಾವುದೇ ವರದಿಗಳ ಮೇಲೆ ಕ್ರಮ ಕೈಗೊಳ್ಳಲು ಸುರಕ್ಷತಾ ಕ್ರಮಗಳನ್ನು ಹೊಂದಿರಬೇಕಾದ ಅಗತ್ಯತೆ ನಮಗಿದೆ. 

ಕಳೆದ ವರ್ಷ, ಮೊಕದ್ದಮೆಯೊಂದರಲ್ಲಿ ಅನಾಮಧೇಯ ಸಂದೇಶದ ವೈಶಿಷ್ಟ್ಯತೆಗಳನ್ನು ಒಳಗೊಂಡಿರುವ ಎರಡು ಸಮಗ್ರ ಆ್ಯಪ್‌ಗಳ ಕುರಿತು ಗಂಭೀರವಾದ ಆರೋಪಗಳನ್ನು ಮಾಡಲಾಯಿತು. ಕಟ್ಟಕಡೆಯದಾಗಿ ನಾವು Snap ಕಿಟ್‌ನಿಂದ ಎರಡೂ ಆ್ಯಪ್‌ಗಳನ್ನು ಅಮಾನತುಗೊಳಿಸಿದೆವು ಮತ್ತು ಪ್ರೋಗ್ರಾಮ್‌ನ ಗುಣಮಟ್ಟ ಮತ್ತು ನೀತಿಗಳ ಕುರಿತು ವಿಸ್ತೃತ ಅವಲೋಕನ ನಡೆಸಿದವು.

ಈ ಪುನರ್ವೀಕ್ಷಣೆಯ ಫಲಿತಾಂಶವಾಗಿ, ನಾವು ನಮ ಸಮುದಾಯದ ಉತಮ ಹಿತಾಸಕ್ತಿಗಾಗಿ ನಾವು ನಂಬುವ ನಮ್ಮ ಡೆವಲಪರ್ ಪ್ಲಾಟ್‌ಫಾರ್ಮ್‌ಗೆ·ಹಲವು ಬದಲಾವಣೆಗಳನ್ನು·ಘೋಷಿಸುತ್ತಿದ್ದೇವೆ, ಮತ್ತ್ತು ನೈಜ-ಕಾಲಿಕ ಸ್ನೇಹವನ್ನು ಬಿಂಬಿಸುವ ಬೆಂಬಲಿಸುವ ಸಂವಹನಗಳ ಕುರಿತು ನಮ್ಮ ಗಮನವನ್ನು ಹೊಂದಿಸಿಕೊಂದಿದ್ದೇವೆ.

ಅನಾಮಧೇಯ ಸಂದೇಶಗಳನ್ನು ನಿಷೇಧಿಸುವುದು 

ಮೊದಲು, ನಾವು ನಮ್ಮ ಪ್ಲಾಟ್‌ಫಾರ್ಮ್‌ನೊಂದಿಗೆ ಸಮಗ್ರಗೊಳಿಸುವುದರಿಂದ ಅನಾಮಧೇಯ ಸಂದೇಶ ಕಳುಹಿಸುವುದನ್ನು ಸರಾಗಗೊಳಿಸುವ ಆ್ಯಪ್‌ಗಳನ್ನು ನಿಷೇಧಿಸುತ್ತೇವೆ. ನಮ್ಮ ಪುನರ್ವೀಕ್ಷಣೆಯ ಸಂದರ್ಭದಲ್ಲಿ, ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದರೂ ಸಹ, ಸ್ವೀಕೃತ ಮಟ್ಟದಲ್ಲಿ ಕಡಿಮೆ ಮಾಡಲು ಸಾಧ್ಯವಾಗದ ದುರುಪಯೋಗಕ್ಕಾಗಿ ಅನಾಮಧೇಯ ಆ್ಯಪ್‌ಗಳು ಅಪಾಯವನ್ನು ತಂದೊಡ್ಡುತ್ತವೆ ಎಂದು ನಾವು ನಿರ್ಧರಿಸಿದ್ದೇವೆ. 

ಬಹುತೇಕ Snapchatter ಗಳು ತಮಾಷೆಗಾಗಿ ಈ ಅನಾಮಧೇಯ ಸಮನ್ವಯಗಳನ್ನು ಬಳಸಿದ್ದಾರೆ, ಮತ್ತು ಸಂಪೂರ್ಣವಾಗಿ ಸೂಕ್ತ ರೀತಿಯಲ್ಲಿ ಬಳಸುತ್ತಿದ್ದಾರೆ ಎಂದು ನಾವು ತಿಳಿದಿರುವಾಗ, ಕೆಲವು ಬಳಕೆದಾರರು ಹಾನಿಕಾರಕ ವರ್ತನೆಯಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರಬಹುದು - ಅವುಗಳೆಂದರೆ ಬೆದರಿಕೆ ಅಥವಾ ಕಿರುಕುಳ - ಅವರು ಅನಾಮಧೇಯತೆಯ ಮುಸುಕನ್ನು ಹೊಂದಿದ್ದರೆ. ನಮ್ಮ ಹೊಸ ನೀತಿಯ ಪ್ರಕಾರ, ನಾವು ನೋಂದಾಯಿತ ಮತ್ತು ಗೋಚರ ಬಳಕೆದಾರ ಹೆಸರುಗಳು ಮತ್ತು ಗುರುತುಗಳಿಲ್ಲದೆ ಬಳಕೆದಾರರ ನಡುವಿನ ಸಂವಹನಕ್ಕೆ ಅನುಕೂಲವಾಗುವಂತೆ Snapchat ಸಮನ್ವಯವನ್ನು ಬಳಸಲು ಮೂರನೇ-ಪಕ್ಷದ ಆ್ಯಪ್‌ಗಳಿಗೆ ಅನುಮತಿಸುವುದಿಲ್ಲ.

18+ ವಯಸ್ಸಿನಯವರಿಗೆ ಏಜ್-ಗೇಟಿಂಗ್ ಫ್ರೆಂಡ್ ಫೈಂಡಿಂಗ್ ಆ್ಯಪ್‌ಗಳು 

ನಮ್ಮ ವಿಮರ್ಶೆಯು ಸಮಗ್ರವಾಗಿದೆ ಮತ್ತು ಅನಾಮಧೇಯ ಸಂದೇಶವನ್ನು ಮೀರಿದ ಸಮನ್ವಯ ಆ್ಯಪ್‌ಗಳ ಗೌಪ್ಯತೆ ಮತ್ತು ಸುರಕ್ಷತೆಯನ್ನು ಪರಿಶೀಲಿಸಿದೆ. ಇಂದು ನಾವು ಫ್ರೆಂಡ್-ಫೈಂಡಿಂಗ್ ಆ್ಯಪ್‌ಗಳನ್ನು Snapchatterಗಳಿಗೆ ಅವರು ವಯಸ್ಕರಾಗದ ಹೊರತು ಮತ್ತು 18 ವರ್ಷ ವಯಸ್ಸನ್ನು ಮೀರದ ಹೊರತು ಅನುಮತಿಸಲಾಗುವುದಿಲ್ಲ ಎಂದೂ ಘೋಷಿಸುತ್ತಿದ್ದೇವೆ. ಈ ಬದಲಾವಣೆಯು ಯುವ ಬಳಕೆದಾರರನ್ನು ಉತ್ತಮವಾಗಿ ರಕ್ಷಿಸುತ್ತದೆ ಮತ್ತು Snapchatನ ಬಳಕೆಯ ಪ್ರಕರಣದೊಂದಿಗೆ - ಈಗಾಗಲೇ ಪರಸ್ಪರ ತಿಳಿದಿರುವ ಆಪ್ತ ಸ್ನೇಹಿತರ ನಡುವಿನ ಸಂವಹನಗಳು ಹೆಚ್ಚು ಸ್ಥಿರವಾಗಿರುತ್ತವೆ.

ಡೆವಲಪರ್‌ಗಳ ವ್ಯಾಪಕ ಶ್ರೇಣಿಯೊಂದಿಗೆ ಕಾರ್ಯನಿರ್ವಹಿಸುವ ಒಂದು ಪ್ಲಾಟ್‌ಫಾರ್ಮ್‌ ಆಗಿ, ನಾವು ಡೆವಲಪರ್‌ಗಳಿಗಾಗಿ ಉತ್ಪನ್ನದ ನಾವಿನ್ಯತೆಯನ್ನು ಅನ್ ಲಾಕ್ ಮಾಡುವಾಗ ಮತ್ತು ಅವರ ವ್ಯವಹಾರವನ್ನು ಅಭಿವೃದ್ಧಿಪಡಿಸಿಕೊಳ್ಳಲು ಅವರಿಗೆ ಸಹಾಯ ಮಾಡುತ್ತಾ, ಆ್ಯಪ್‌ಗಳು ಬಳಕೆದಾರ ಸುರಕ್ಷತೆ, ಗೌಪ್ಯತೆ ಮತ್ತು ಯೋಗಕ್ಷೇಮವನ್ನು ರಕ್ಷಿಸುವುದಕ್ಕಾಗಿ ಸಹಾಯ ಮಾಡುವ ಪರಿಸರವೊಂದನ್ನು ಬೆಳೆಸಲು ಬಯಸುತ್ತೇವೆ.

ನಾವು ಎರಡನ್ನೂ ಮಾಡಬಹುದು ಮತ್ತು ನಮ್ಮ ನೀತಿಗಳನ್ನು ನಿಯಮಿತವಾಗಿ ಮೌಲ್ಯಮಾಪನ ಮಾಡುವುದನ್ನು ಮುಂದುವರಿಸುತ್ತೇವೆ, ಆ್ಯಪ್ ಅನುಸರಣೆಯ ಮೇಲ್ವಿಚಾರಣೆ ಮತ್ತು ನಮ್ಮ ಸಮುದಾಯದ ಒಳಿತನ್ನು ಉತ್ತಮವಾಗಿ ರಕ್ಷಿಸಲು ಡೆವಲಪರ್‌ಗಳೊಂದಿಗೆ ಕಾರ್ಯನಿರ್ವಹಿಸುತ್ತೇವೆ ಎಂದು ನಂಬಿದ್ದೇವೆ.

ಸುದ್ದಿಗಳಿಗೆ ಹಿಂತಿರುಗಿ