Snapchat ನಲ್ಲಿ AI: ಸುಧಾರಿತ ಪಾರದರ್ಶಕತೆ, ಸುರಕ್ಷತೆ ಮತ್ತು ನೀತಿಗಳು

ಏಪ್ರಿಲ್ 16, 2024

2015 ರಲ್ಲಿ ಲೆನ್ಸ್‌ಗಳು ಆಗಮಿಸಿದಾಗ, ವರ್ಧಿತ ವಾಸ್ತವ (AR) ತಂತ್ರಜ್ಞಾನವು ನಮ್ಮ ಕಣ್ಣುಗಳ ಮುಂದೆ ಮಾಂತ್ರಿಕತೆಯನ್ನು ಪ್ರದರ್ಶಿಸಿ, ನಾವು ಸಾಧ್ಯ ಎಂದು ಭಾವಿಸಿದ್ದನ್ನು ಕ್ರಾಂತಿಕಾರಕವಾಗಿಸಿತು. ಈ ರೀತಿಯ ತಂತ್ರಜ್ಞಾನವನ್ನು ನಮ್ಮ ಪ್ರತಿದಿನದ ಕ್ಯಾಮೆರಾ ಅನುಭವದಲ್ಲಿ ನಾವು ನಿರೀಕ್ಷಿಸುತ್ತಿರುವಂತೆ, ಈಗ ಸರಾಸರಿ 300 ಮಿಲಿಯನ್‌ಗೂ ಅಧಿಕ Snapchatter ಗಳು ಪ್ರತಿ ದಿನ AR ಜೊತೆ ತೊಡಗಿಕೊಳ್ಳುತ್ತಾರೆ. 

ಈಗ, AI ನಲ್ಲಿನ ಇತ್ತೀಚಿನ ಸುಧಾರಣೆಗಳು ಮಿತಿರಹಿತ ಮತ್ತು ಬೆರಗುಗೊಳಿಸುವ ಸಾಧ್ಯತೆಗಳಿಗೆ ತೆರೆದುಕೊಳ್ಳುತ್ತಿದ್ದು, ನಾವು ಸಾಧ್ಯ ಎಂದು ಭಾವಿಸಿದ್ದನ್ನು ಮತ್ತೊಮ್ಮೆ ಪರಿಷ್ಕರಿಸುತ್ತಿವೆ. 

Snapchatter ಗಳು ಒಬ್ಬ ಸ್ನೇಹಿತನೊಂದಿಗೆ ಒಂದು ಸಂಭಾಷಣೆಯ ನೋಟವನ್ನು ವೈಯಕ್ತಿಕಗೊಳಿಸಲು ಒರಿಜಿನಲ್ ಜನರೇಟಿವ್ AI ಚಾಟ್ ವಾಲ್‌ಪೇಪರ್ ಅನ್ನು ಸೃಷ್ಟಿಸುವುದಿರಬಹುದು, AI-ಸಂಚಾಲಿತ ಲೆನ್ಸ್‌ಗಳೊಂದಿಗೆ ಕಾಲ್ಪನಿಕ ವಿಧಾನಗಳಲ್ಲಿ ತಮ್ಮನ್ನು ಪರಿವರ್ತಿಸಿಕೊಳ್ಳುವುದಿರಬಹುದು ಅಥವಾ My AI ಜೊತೆಗೆ ಸಂಭಾಷಣೆಗಳ ಮೂಲಕ ಜಗತ್ತಿನ ಕುರಿತು ತಿಳಿದುಕೊಳ್ಳುವುದಿರಬಹುದು, ಈಗಾಗಲೇ AI ಬಳಸಿಕೊಂಡು ತಮ್ಮನ್ನು ಅಭಿವ್ಯಕ್ತಿಪಡಿಸಲು ಅವರಿಗೆ ಹಲವಾರು ಸ್ಫೂರ್ತಿದಾಯಕ ವಿಧಾನಗಳಿವೆ. ನಮ್ಮ ಸಮುದಾಯವು ತಮ್ಮ ಸೃಜನಶೀಲತೆ ಮತ್ತು ಕಲ್ಪನೆಯನ್ನು ಸಾಕಾರಗೊಳಿಸುವುದನ್ನು ಮುಂದುವರಿಸಲು ಸಹಾಯ ಮಾಡುವ ನಮ್ಮ ತಂತ್ರಜ್ಞಾನದ ಸಾಮರ್ಥ್ಯದ ಕುರಿತು ನಾವು ಭಾರೀ ರೋಮಾಂಚಿತರಾಗಿದ್ದೇವೆ. 

AI ಪಾರದರ್ಶಕತೆ

My AI ಜೊತೆಗೆ Snapchatter ಗಳು ವಿನೋದಮಯ ದೃಶ್ಯಗಳನ್ನು ಸೃಷ್ಟಿಸುವುದಿರಲಿ ಅಥವಾ ಪಠ್ಯ-ಆಧರಿತ ಸಂಭಾಷಣೆಗಳ ಮೂಲಕ ಕಲಿಯುವುದಿರಲಿ ಅವರು ಬಳಸುತ್ತಿರುವ ತಂತ್ರಜ್ಞಾನಗಳ ವಿಧಗಳ ಕುರಿತು ಅವರು ಮಾಹಿತಿ ಹೊಂದಿರಬೇಕು ಎಂದು ನಾವು ನಂಬಿದ್ದೇವೆ. 

Snapchatter ಗಳು AI ತಂತ್ರಜ್ಞಾನದಿಂದ ಸಂಚಾಲಿತವಾಗಿರುವ ಒಂದು ವೈಶಿಷ್ಟ್ಯದೊಂದಿಗೆ ಸಂವಾದ ನಡೆಸುತ್ತಿರುವಾಗ ಅವರಿಗೆ ಸನ್ನಿವೇಶದ ಪಾರದರ್ಶಕತೆಯನ್ನು ಒದಗಿಸಲು ನಾವು ಆ್ಯಪ್‌ನಲ್ಲಿ ಸನ್ನಿವೇಶದ ಐಕಾನ್‌ಗಳು, ಸಂಕೇತಗಳು ಮತ್ತು ಲೇಬಲ್‌ಗಳನ್ನು ಬಳಸುತ್ತೇವೆ. ಉದಾಹರಣೆಗೆ, ಒಬ್ಬ Snapchatter AI-ಜನರೇಟ್ ಮಾಡಿದ ಡ್ರೀಮ್ಸ್ ಚಿತ್ರವನ್ನು ಹಂಚಿಕೊಂಡಾಗ, ಸ್ವೀಕರಿಸುವವರು ಇನ್ನಷ್ಟು ಮಾಹಿತಿಯೊಂದಿಗೆ ಕಾಂಟೆಕ್ಸ್ಟ್ ಕಾರ್ಡ್ ನೋಡುತ್ತಾರೆ. Snap ಇನ್ನಷ್ಟು ಜೂಮ್ ಔಟ್ ಆಗಿ ಕಾಣುವಂತೆ ಮಾಡಲು AI ಅನ್ನು ಬಳಸಿಕೊಳ್ಳುವ ಎಕ್ಸ್‌ಟೆಂಡ್ ಟೂಲ್‌ನಂತಹ ಇತರ ವೈಶಿಷ್ಟ್ಯಗಳನ್ನು, Snap ರಚಿಸುವ Snapchatter ಗಾಗಿ ಸ್ಪಾರ್ಕಲ್ ಐಕಾನ್‌ ಜೊತೆಗೆ ಒಂದು AI ವೈಶಿಷ್ಟ್ಯ ಎಂದು ಗುರುತು ಮಾಡಲಾಗುತ್ತದೆ. 

ಮೋಸದ ಚಿತ್ರಗಳು ಅಥವಾ ಕಂಟೆಂಟ್ ರಚಿಸಲು AI ಸೇರಿದಂತೆ, ಕಂಟೆಂಟ್‌ನ ಯಾವುದೇ ದಾರಿತಪ್ಪಿಸುವ ಬಳಕೆಯ ಸಮಗ್ರ ಪರೀಕ್ಷೆ ಸೇರಿದಂತೆ, ಕಟ್ಟುನಿಟ್ಟಿನ ಮಾನವ ಪರಿಶೀಲನೆ ಪ್ರಕ್ರಿಯೆಯ ಮೂಲಕ ಎಲ್ಲ ರಾಜಕೀಯ ಜಾಹೀರಾತುಗಳನ್ನು ಪರಿಶೀಲಿಸಲು ಕೂಡ ನಾವು ತುಂಬಾ ಕಾಳಜಿ ವಹಿಸುತ್ತೇವೆ. 

ಶೀಘ್ರದಲ್ಲಿ, AI-ಜನರೇಟ್ ಮಾಡಿದ ಚಿತ್ರಗಳಿಗೆ ನಾವು ವಾಟರ್‌ಮಾರ್ಕ್ ಸೇರಿಸಲಿದ್ದೇವೆ. ಚಿತ್ರವನ್ನು ರಫ್ತು ಮಾಡುವಾಗ ಅಥವಾ ಕ್ಯಾಮೆರಾ ರೋಲ್‌ಗೆ ಉಳಿಸುವಾಗ Snap ನ ಜನರೇಟಿವ್ AI ಟೂಲ್‌ಗಳ ಜೊತೆಗೆ ಸೃಷ್ಟಿಸಿದ ಚಿತ್ರಗಳ ಮೇಲೆ ಅದು ಕಾಣಿಸುತ್ತದೆ. Snapchat ನಲ್ಲಿ ಸಿದ್ಧಪಡಿಸಿದ ಒಂದು AI-ಜನರೇಟ್ ಮಾಡಿದ ಚಿತ್ರದ ಸ್ವೀಕೃತಿದಾರರು ಒಂದು ಸಣ್ಣ ಘೋಸ್ಟ್ ಲೋಗೋದ ಜೊತೆ ಪಕ್ಕದಲ್ಲಿ ವ್ಯಾಪಕವಾಗಿ ಗುರುತಿಸಲ್ಪಡುವ ಸ್ಪಾರ್ಕಲ್ ಐಕಾನ್ ಇರುವುದನ್ನು ಕಾಣಬಹುದು. ಈ ವಾಟರ್‌ಮಾರ್ಕ್‌ಗಳ ಸೇರಿಸುವಿಕೆಯು ಅದನ್ನು ನೋಡುತ್ತಿರುವವರಿಗೆ ಚಿತ್ರವನ್ನು Snapchat ನಲ್ಲಿ AI ಜೊತೆಗೆ ಸಿದ್ಧಪಡಿಸಲಾಗಿದೆ ಎಂದು ತಿಳಿಸಲು ಸಹಾಯ ಮಾಡುತ್ತವೆ. 

ಪ್ರಮಾಣಿತಗೊಳಿಸಿದ ಸುರಕ್ಷತೆ ಪರೀಕ್ಷೆ ಮತ್ತು ಪ್ರೊಟೋಕಾಲ್‌ಗಳು 

ಗೌಪ್ಯತೆ, ಸುರಕ್ಷತೆ ಮತ್ತು ವಯೋ ಸೂಕ್ತತೆಯನ್ನು ಆದ್ಯತೆಗೊಳಿಸುವ ಉತ್ಪನ್ನಗಳು ಮತ್ತು ಅನುಭವಗಳನ್ನು ವಿನ್ಯಾಸಗೊಳಿಸಲು ಇರುವ ನಮ್ಮ ಜವಾಬ್ದಾರಿಯನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ನಮ್ಮ ಎಲ್ಲ ಉತ್ಪನ್ನಗಳ ರೀತಿಯಲ್ಲಿ, AI-ಸಂಚಾಲಿತ ವೈಶಿಷ್ಟ್ಯಗಳು ನಮ್ಮ ಸುರಕ್ಷತೆ ಮತ್ತು ಗೌಪ್ಯತೆಯ ತತ್ವಗಳಿಗೆ ಅನುಸರಣೆ ಹೊಂದಿವೆ ಎಂದು ಖಚಿತಪಡಿಸಿಕೊಳ್ಳಲು ಅವುಗಳನ್ನು ಯಾವಾಗಲೂ ಕಟ್ಟುನಿಟ್ಟಿನ ವಿಮರ್ಶೆಗೆ ಒಳಪಡಿಸಲಾಗಿದೆ – ಮತ್ತು ಕಾಲಕ್ರಮೇಣ ಕಲಿಕೆಯ ಮೂಲಕ, ನಾವು ಹೆಚ್ಚುವರಿ ಸುರಕ್ಷತಾಕ್ರಮಗಳನ್ನು ಅಭಿವೃದ್ಧಿಪಡಿಸಿದ್ದೇವೆ:

ರೆಡ್-ಟೀಮಿಂಗ್

AI ರೆಡ್-ಟೀಮಿಂಗ್ ಎನ್ನುವುದು AI ಮಾಡೆಲ್‌ಗಳು ಮತ್ತು AI-ಸಕ್ರಿಯಗೊಳಿಸಿದ ವೈಶಿಷ್ಟ್ಯಗಳಲ್ಲಿ ಸಂಭಾವ್ಯ ನ್ಯೂನತೆಗಳನ್ನು ಪರೀಕ್ಷಿಸಲು ಮತ್ತು ಗುರುತಿಸಲು ಹಾಗೂ AI ಉತ್ಪನ್ನಗಳ ಸುರಕ್ಷತೆ ಮತ್ತು ಸ್ಥಿರತೆಯನ್ನು ಸುಧಾರಿಸುವುದಕ್ಕಾಗಿ ಪರಿಹಾರಗಳನ್ನು ಅನುಷ್ಠಾನಗೊಳಿಸಲು ಹೆಚ್ಚಾಗಿ ಬಳಕೆ ಮಾಡಲಾಗುತ್ತಿರುವ ಸಾಮಾನ್ಯ ತಂತ್ರವಾಗಿದೆ. 

ಜನರೇಟಿವ್ ಇಮೇಲ್ ಮಾಡೆಲ್‌ಗಳಿಗಾಗಿ ಆದರ್ಶ AI ರೆಡ್-ಟೀಮಿಂಗ್ ವಿಧಾನಗಳನ್ನು ಅಳವಡಿಸಿಕೊಂಡವರಲ್ಲಿ ನಾವು ಮೊದಲಿಗರಾಗಿದ್ದು, ಇದಕ್ಕಾಗಿ ನಮ್ಮ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳ ದಕ್ಷತೆಯ ಪರೀಕ್ಷೆ ಮಾಡಲು 2,500 ಗಂಟೆಗಳಿಗೂ ಅಧಿಕ ಕೆಲಸಕ್ಕಾಗಿ HackerOne ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದ್ದೇವೆ. 

ಸುರಕ್ಷತೆಯ ಫಿಲ್ಟರಿಂಗ್ ಮತ್ತು ಸ್ಥಿರ ಲೇಬಲಿಂಗ್

Snapchat ನಲ್ಲಿ ಲಭ್ಯವಿರುವ ಜನರೇಟಿವ್ AI-ಸಕ್ರಿಯಗೊಳಿಸಿದ ಅನುಭವಗಳನ್ನು ನಾವು ವಿಸ್ತರಿಸಿದಂತೆ, ನಾವು ಜವಾಬ್ದಾರಿಯುತ ಆಡಳಿತ ನೀತಿಗಳನ್ನು ಸ್ಥಾಪಿಸಿದ್ದೇವೆ ಮತ್ತು ನಮ್ಮ ಸುರಕ್ಷತೆಯ ಅಪಾಯಗಳ ನಿವಾರಣೆಯನ್ನು ಕೂಡ ಸುಧಾರಿಸಿದ್ದೇವೆ. 

ನಮ್ಮ ತಂಡ ಶೈಲಿಗೊಳಿಸಿದ AI ಲೆನ್ಸ್ ಅನುಭವಗಳ ಅಭಿವೃದ್ಧಿಯ ಆರಂಭಿಕ ಹಂತಗಳಲ್ಲಿ ಸಂಭಾವ್ಯತಃ ಸಮಸ್ಯಾತ್ಮಕ ಪ್ರಾಂಪ್ಟ್‌ಗಳನ್ನು ಪತ್ತೆಮಾಡಲು ಮತ್ತು ತೆಗೆದುಹಾಕಲು ನಾವು ಸುರಕ್ಷತಾ ವಿಮರ್ಶೆ ಪ್ರಕ್ರಿಯೆಯನ್ನು ರಚಿಸಿದ್ದೇವೆ. ಒಂದು ಪ್ರಾಂಪ್ಟ್‌ನಿಂದ ಒಂದು ಚಿತ್ರವನ್ನು ಜನರೇಟ್ ಮಾಡುವ ನಮ್ಮ ಎಲ್ಲ AI ಲೆನ್ಸ್‌ಗಳು, ಅವುಗಳನ್ನು ಅಂತಿಮಗೊಳಿಸಿ ನಮ್ಮ ಸಮುದಾಯಕ್ಕೆ ಲಭ್ಯವಾಗಿಸುವುದಕ್ಕೆ ಮುನ್ನ ಈ ಪ್ರಕ್ರಿಯೆಯ ಮೂಲಕ ಹಾದುಹೋಗುತ್ತವೆ. 

ಒಳಗೊಳ್ಳುವ ಪರೀಕ್ಷೆ

ನಮ್ಮ ಆ್ಯಪ್ ಒಳಗೆ ಎಲ್ಲ ವೈಶಿಷ್ಟ್ಯಗಳನ್ನು ಬಳಸುವಾಗ, ನಿರ್ದಿಷ್ಟವಾಗಿ ನಮ್ಮ AI-ಸಂಚಾಲಿತ ಅನುಭವಗಳನ್ನು ಬಳಸುವಾಗ ಎಲ್ಲ ಸ್ತರದ Snapchatter ಗಳು ಸಮಾನ ಪ್ರವೇಶ ಮತ್ತು ನಿರೀಕ್ಷೆಗಳನ್ನು ಹೊಂದಿರಬೇಕು ಎಂದು ನಾವು ಬಯಸುತ್ತೇವೆ. 

ಇದನ್ನು ಗಮನದಲ್ಲಿಟ್ಟುಕೊಂಡು, ಸಂಭಾವ್ಯ ಪಕ್ಷಪಾತದ AI ಫಲಿತಾಂಶಗಳನ್ನು ಕನಿಷ್ಟಗೊಳಿಸಲು ನಾವು ಹೆಚ್ಚುವರಿ ಪರೀಕ್ಷಿಸುವಿಕೆಯನ್ನು ಅನುಷ್ಠಾನಗೊಳಿಸುತ್ತಿದ್ದೇವೆ. 

AI ಸಾಕ್ಷರತೆಗೆ ಮುಂದುವರಿದ ಬದ್ಧತೆ

ತಮ್ಮನ್ನು ಅಭಿವ್ಯಕ್ತಿಪಡಿಸುವ ಮತ್ತು ಪರಸ್ಪರ ಸಂಪರ್ಕಗೊಳ್ಳುವ ನಮ್ಮ ಸಮುದಾಯದ ಸಾಮರ್ಥ್ಯವನ್ನು ಸುಧಾರಿಸಲು AI ತಂತ್ರಜ್ಞಾನದ ಭಾರೀ ಸಾಮರ್ಥ್ಯದಲ್ಲಿ ನಾವು ನಂಬಿಕೆ ಇರಿಸಿದ್ದೇವೆ – ಮತ್ತು ಈ ಸುರಕ್ಷತಾ ಮತ್ತು ಪಾರದರ್ಶಕತೆಯ ಪ್ರೊಟೋಕಾಲ್‌ಗಳನ್ನು ಸುಧಾರಿಸುವುದನ್ನು ಮುಂದುವರಿಸುವುದಕ್ಕೆ ನಾವು ಬದ್ಧರಾಗಿದ್ದೇವೆ. 

ತಪ್ಪಾದ, ಹಾನಿಕಾರಕ ಅಥವಾ ದಾರಿ ತಪ್ಪಿಸುವ ಸಾಮಗ್ರಿಯನ್ನು ಸೃಷ್ಟಿಸದಂತೆ ಪಠ್ಯ ಆಧರಿತ ಮತ್ತು ದೃಶ್ಯಾತ್ಮಕ ಎರಡೂ ಸೇರಿದ ನಮ್ಮ ಎಲ್ಲ AI ಟೂಲ್‌ಗಳನ್ನು ವಿನ್ಯಾಸಗೊಳಿಸಲಾಗಿದ್ದರೂ ಸಹ, ತಪ್ಪುಗಳು ಉಂಟಾಗುತ್ತವೆ. Snapchatter ಗಳಿಗೆ ಕಂಟೆಂಟ್ ವರದಿ ಮಾಡಲು ಸಾದ್ಯವಾಗುತ್ತದೆ ಮತ್ತು ಈ ಪ್ರತಿಕ್ರಿಯೆಯನ್ನು ನಾವು ಶ್ಲಾಘಿಸುತ್ತೇವೆ. 

ಅಂತಿಮವಾಗಿ, ಈ ಟೂಲ್‌ಗಳನ್ನು ಇನ್ನಷ್ಟು ಉತ್ತಮವಾಗಿ ಅರ್ಥಮಾಡಿಕೊಳ್ಳಲು ನಮ್ಮ ಸಮುದಾಯಕ್ಕೆ ಸಹಾಯ ಮಾಡುವ ಈ ನಿರಂತರ ಬದ್ಧತೆಯ ಭಾಗವಾಗಿ, ನಾವು ನಮ್ಮ ಗ್ರಾಹಕ ಸೇವಾ ಸೈಟ್‌ನಲ್ಲಿ ಹೆಚ್ಚುವರಿ ಮಾಹಿತಿ ಮತ್ತು ಸಂಪನ್ಮೂಲಗಳನ್ನು ಹೊಂದಿದ್ದೇವೆ.

ಸುದ್ದಿಗೆ ಹಿಂತಿರುಗಿ