
ಸುರಕ್ಷತಾ ಕಳವಳವೊಂದನ್ನು ವರದಿ ಮಾಡಿ
ದುರುಳರು ಮತ್ತು ಸಂಭಾವ್ಯತಃ ಹಾನಿಕಾರಕ ಕಂಟೆಂಟ್‌ನಿಂದ Snapchat ಅನ್ನು ಮುಕ್ತವಾಗಿ ಇರಿಸಲು ಸಹಾಯ ಮಾಡಲು ನೀವು ಮಾಡಬಹುದಾದ ಅತ್ಯಂತ ಪ್ರಮುಖವಾದ ಕಾರ್ಯಗಳಲ್ಲಿ ಒಂದೆಂದರೆ, ನಿಮಗೆ ಅಹಿತಕರ ಭಾವನೆ ಉಂಟುಮಾಡುವ ವಿಷಯಕ್ಕೆ ಎದುರಾದಾಗ ನಮ್ಮನ್ನು ಸಂಪರ್ಕಿಸುವುದಾಗಿದೆ. ಒಂದು ಕಂಟೆಂಟ್ ತುಣುಕು ಅಥವಾ ಚಾಟ್ ಸಂದೇಶದ ಮೇಲೆ ನೀವು ಒತ್ತಿ ಹಿಡಿದರೆ ಸಾಕು, ಮೆನು ಕಾಣಿಸಿಕೊಳ್ಳುತ್ತದೆ. ನಂತರ, ಆಯ್ಕೆಗಳ ಪಟ್ಟಿಯನ್ನು ನೋಡಲು “ವರದಿ ಮಾಡಿ” ಅನ್ನು ಟ್ಯಾಪ್ ಮಾಡಿ. ನಂತರ ಕೆಲವು ಮಾಹಿತಿಯನ್ನು ಒದಗಿಸುವಂತೆ ನಿಮಗೆ ಸೂಚಿಸಲಾಗುತ್ತದೆ. ಸಾಮಾನ್ಯವಾಗಿ, ಆ್ಯಪ್‌ನಲ್ಲಿ ನೀವು ಒಂದು ಮಾಧ್ಯಮದ ತುಣುಕನ್ನು ವರದಿ ಮಾಡಿದರೆ, ಅದರ ಒಂದು ಪ್ರತಿಯನ್ನು ಸ್ವಯಂಚಾಲಿತವಾಗಿ ನಿಮ್ಮ ವರದಿಯೊಂದಿಗೆ ಸೇರಿಸಲಾಗುತ್ತದೆ.
Snapchat ನಲ್ಲಿ ಅಥವಾ ನಮ್ಮ ಬೆಂಬಲ ಸೈಟ್ ಮೂಲಕ ಮಾಡಲಾದ ವರದಿಗಳನ್ನು ವಿಮರ್ಶಿಸಲು ನಮ್ಮ ಸುರಕ್ಷತಾ ತಂಡಗಳು 24/7 ಕೆಲಸ ಮಾಡುತ್ತವೆ ಮತ್ತು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು ಅಥವಾ ಸೇವೆಯ ನಿಯಮಗಳನ್ನು ಉಲ್ಲಂಘಿಸುವ ವರದಿ ಮಾಡಲಾದ ಕಂಟೆಂಟ್ ಮತ್ತು ಖಾತೆಗಳ ವಿರುದ್ಧ ಅವರು ಕ್ರಮ ಕೈಗೊಳ್ಳುತ್ತಾರೆ. ವರದಿ ಮಾಡುವಿಕೆಯು ಗೌಪ್ಯವಾಗಿರುತ್ತದೆ ಮತ್ತು ನೀವು ವರದಿ ಮಾಡಿರುವ ಖಾತೆದಾರರಿಗೆ ಅವರನ್ನು ಯಾರು ವರದಿ ಮಾಡಿದ್ದಾರೆ ಎಂದು ಹೇಳುವುದಿಲ್ಲ ಎಂಬುದನ್ನು ನೆನಪಿಡುವುದು ಮುಖ್ಯವಾಗಿದೆ. ಕಾನೂನುಬಾಹಿರ ಅಥವಾ ಅಪಾಯಕಾರಿಯೆಂಬಂತೆ ಕಂಡುಬರುವ ಯಾವುದೇ ವಿಷಯಕ್ಕೆ ನೀವು ಎದುರಾದರೆ ಅಥವಾ ಯಾರಾದರೂ ಹಾನಿ ಅಥವಾ ಸ್ವಯಂ-ಹಾನಿಯ ಅಪಾಯದಲ್ಲಿದ್ದಾರೆ ಎಂದು ಭಾವಿಸಲು ನಿಮ್ಮಲ್ಲಿ ಕಾರಣವಿದ್ದರೆ, ಸ್ಥಳೀಯ ಕಾನೂನು ಜಾರಿ ಸಂಸ್ಥೆಗಳನ್ನು ತಕ್ಷಣವೇ ಸಂಪರ್ಕಿಸಿ ಮತ್ತು ನಂತರ ಅದನ್ನು Snapchat ಗೆ ಕೂಡ ವರದಿ ಮಾಡಿ.
Snapchat ನಲ್ಲಿ ಯಾವ ಕಂಟೆಂಟ್ ಅನ್ನು ನಿಷೇಧಿಸಲಾಗಿದೆ ಎಂದು ತಿಳಿದುಕೊಳ್ಳಲು ನೀವು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು ಮತ್ತು ಸೇವೆಯ ನಿಯಮಗಳನ್ನು ಓದಬಹುದು. ಉತ್ತಮ ವ್ಯಾವಹಾರಿಕ ನಿಯಮ: ನೀವು ಹೇಳುತ್ತಿರುವ ವಿಷಯವು ಯಾರಿಗಾದರೂ ಅಸುರಕ್ಷಿತ ಅಥವಾ ನಕಾರಾತ್ಮಕ ಅನುಭವವನ್ನು ಉಂಟುಮಾಡಬಹುದಾದರೆ, ಅದನ್ನು ಹೇಳದಿರುವುದೇ ಉತ್ತಮ.
ಜೊತೆಗೆ, ನಿಮಗೆ ಇಷ್ಟವಿಲ್ಲದ ಒಂದು ವಿಷಯವನ್ನು ನೀವು Snapchat ನಲ್ಲಿ ನೋಡಿದರೆ, ಆದರೆ ಅದು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳನ್ನು ಉಲ್ಲಂಘಿಸದಿರಬಹುದಾದರೆ, ನೀವು ಆ ಕಂಟೆಂಟ್ ಅನ್ನು ಅನ್‌ಸಬ್‌ಸ್ಕ್ರೈಬ್ ಮಾಡಲು, ಮರೆಮಾಡಲು ಅಥವಾ ಕಳುಹಿಸಿದವರನ್ನು ಅನ್‌ಫ್ರೆಂಡ್ ಮಾಡಲು ಅಥವಾ ಬ್ಲಾಕ್ ಮಾಡಲು ಆಯ್ಕೆ ಮಾಡಬಹುದು.
Snapchat ನಲ್ಲಿ ವರದಿ ಮಾಡುವಿಕೆಯು ಗೌಪ್ಯವಾಗಿದೆಯೇ?
ಹೌದು. ನೀವು ಒಂದು ವರದಿಯನ್ನು ಮಾಡಿದಾಗ ನಾವು ಇತರ Snapchatter ಗಳಿಗೆ (ವರದಿ ಮಾಡಲಾದ ಖಾತೆದಾರರು ಸೇರಿದಂತೆ) ತಿಳಿಸುವುದಿಲ್ಲ. ವರದಿ ಮಾಡಿದ ಖಾತೆದಾರರ ಕಂಟೆಂಟ್ ಅನ್ನು ನಾವು ತೆಗೆದುಹಾಕಿದರೆ ಅಥವಾ ಅವರ ಖಾತೆಯ ವಿರುದ್ಧ ಕ್ರಮ ತೆಗೆದುಕೊಂಡರೆ ಅವರಿಗೆ ನಾವು ಸಾಮಾನ್ಯವಾಗಿ ಆ್ಯಪ್‌ನಲ್ಲಿ ಮತ್ತು/ಅಥವಾ ಇಮೇಲ್ ಮೂಲಕ ಮಾಹಿತಿ ನೀಡುತ್ತೇವೆ, ಆದರೆ ಸಲ್ಲಿಸಲಾದ ವರದಿಯ ಬಗ್ಗೆ ನಾವು ಅವರಿಗೆ ತಿಳಿಸುವುದಿಲ್ಲ — ಅವರು ನಮ್ಮ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಿದರೂ ಕೂಡ.
ನಾನು ಅನಾಮಧೇಯನಾಗಿ ವರದಿಯನ್ನು ಸಲ್ಲಿಸಬಹುದೇ?
ಹೌದು. ನಮ್ಮ ಬೆಂಬಲ ಸೈಟ್‌ನಲ್ಲಿ ಲಭ್ಯವಿರುವ ವರದಿ ಮಾಡುವಿಕೆ ಫಾರ್ಮ್ ನಿಮ್ಮ ಹೆಸರು ಮತ್ತು Snapchat ಬಳಕೆದಾರ ಹೆಸರನ್ನು ಒದಗಿಸುವ ಆಯ್ಕೆಯನ್ನು ನಿಮಗೆ ನೀಡುತ್ತದೆ, ಆದರೆ ಅಂತಹ ಮಾಹಿತಿಯನ್ನು ನೀವು ಒದಗಿಸಬೇಕಾದ ಅಗತ್ಯವಿಲ್ಲ. ನೀವು ಅನಾಮಧೇಯರಾಗಿ ಒಂದು ವರದಿಯನ್ನು ಸಲ್ಲಿಸಲು ಬಯಸಿದರೆ, ಬಳಕೆದಾರ ಹೆಸರಿನ ಕ್ಷೇತ್ರದಲ್ಲಿ "ಯಾವುದೂ ಇಲ್ಲ" ಎಂದು ನೀವು ಬರೆಯಬಹುದು. ಅದಾಗ್ಯೂ, ನಿಮ್ಮ ವರದಿಯ ಕುರಿತು ನಾವು ನಿಮ್ಮನ್ನು ಸಂಪರ್ಕಿಸಬಹುದಾದ ಒಂದು ಇಮೇಲ್ ವಿಳಾಸವನ್ನು ನೀವು ಒದಗಿಸಬಹುದು. ಅನಾಮಧೇಯರಾಗಿ ವರದಿ ಮಾಡುವ ಆಯ್ಕೆಯು ಆ್ಯಪ್‌ನಲ್ಲಿ ಲಭ್ಯವಿಲ್ಲ. ನೀವು ಅನಾಮಧೇಯರಾಗಿ ವರದಿ ಮಾಡಲು ಆಯ್ಕೆ ಮಾಡಿಕೊಂಡಿದ್ದೀರಾ ಎಂಬುದನ್ನು ಪರಿಗಣಿಸದೆ, ನಿಮ್ಮ ವರದಿ ಮಾಡುವಿಕೆಯು ಗೌಪ್ಯವಾಗಿರುತ್ತದೆ (ಮೇಲಿನ ಪ್ರಶ್ನೆಯನ್ನು ನೋಡಿ).
ನನ್ನ ವರದಿಯ ಕುರಿತು Snap ನನ್ನೊಂದಿಗೆ ಹೇಗೆ ಸಂವಹನ ನಡೆಸುತ್ತದೆ?
ನೀವು Snapchat ನಲ್ಲಿ ಒಂದು ಕಳವಳವನ್ನು ವರದಿ ಮಾಡಿದಾಗ, ನಿಮ್ಮ ವರದಿಯನ್ನು ಸಲ್ಲಿಸಲಾಗಿದೆ ಎಂಬ ದೃಢೀಕರಣವನ್ನು ನೀವು ಸ್ವೀಕರಿಸುತ್ತೀರಿ. ನಿಮ್ಮ Snapchat ಖಾತೆಯಲ್ಲಿನ ಇಮೇಲ್ ವಿಳಾಸದಲ್ಲಿ ಅಥವಾ ನೀವು ನಮ್ಮ ಬೆಂಬಲ ಸೈಟ್ ಮೂಲಕ ನಿಮ್ಮ ವರದಿಯನ್ನು ಸಲ್ಲಿಸಿದ್ದರೆ ನೀವು ಒದಗಿಸಿದ ಇಮೇಲ್ ವಿಳಾಸದಲ್ಲಿ ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ. Snapchatter ಗಳು ನನ್ನ ವರದಿಗಳು ವೈಶಿಷ್ಟ್ಯದ ಮೂಲಕ ತಮ್ಮ ಆ್ಯಪ್‌ನಲ್ಲಿನ ವರದಿಗಳ ಸ್ಥಿತಿಯನ್ನು ಕೂಡ ಪರಿಶೀಲಿಸಬಹುದು.
ನಾನು ಸಲ್ಲಿಸಿದ ವರದಿಯನ್ನು ಯಾರು ವಿಮರ್ಶಿಸುತ್ತಾರೆ?
ನೀವು ಸಲ್ಲಿಸಿದ ವರದಿಯನ್ನು ವಿಮರ್ಶಿಸಲು ನಮ್ಮ ಸುರಕ್ಷತಾ ತಂಡಗಳು 24/7 ಕೆಲಸ ಮಾಡುತ್ತವೆ.
ಒಂದು ವರದಿಯನ್ನು ವಿಮರ್ಶಿಸಲು ಮತ್ತು ನಿರ್ಧಾರ ತೆಗೆದುಕೊಳ್ಳಲು Snap ನ ಸುರಕ್ಷತಾ ತಂಡಗಳಿಗೆ ಎಷ್ಟು ಸಮಯ ಬೇಕಾಗುತ್ತದೆ?
ನಮ್ಮ ವಿಮರ್ಶೆಯು ಸಾಮಾನ್ಯವಾಗಿ ಕೆಲವೇ ಗಂಟೆಗಳಲ್ಲಿ ನಡೆಯುತ್ತದೆ, ಆದರೆ ಕೆಲವು ಪ್ರಕರಣಗಳಲ್ಲಿ ಹೆಚ್ಚು ಸಮಯ ತೆಗೆದುಕೊಳ್ಳಬಹುದು.
Snap ನ ವಿಮರ್ಶೆಯ ಸಂಭಾವ್ಯ ಫಲಿತಾಂಶಗಳು ಯಾವುವು?
ವರದಿ ಮಾಡಲಾದ ಕಂಟೆಂಟ್ ಅಥವಾ ಖಾತೆಯು Snapchat ನ ಕಮ್ಯುನಿಟಿ ಮಾರ್ಗಸೂಚಿಗಳನ್ನು ಅಥವಾ ಸೇವೆಯ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದು ನಾವು ದೃಢೀಕರಿಸಿದರೆ, ಆಗ ನಾವು ಕಂಟೆಂಟ್ ಅನ್ನು ತೆಗೆದುಹಾಕಬಹುದು ಮತ್ತು ನಾವು ಖಾತೆಯನ್ನು ಅಳಿಸಬಹುದು ಅಥವಾ ಲಾಕ್ ಕೂಡ ಮಾಡಬಹುದು ಮತ್ತು ಅಪರಾಧಿಯ ಕುರಿತು ಅಧಿಕಾರಿಗಳಿಗೆ ವರದಿ ಮಾಡಬಹುದು. Snapchat ನಲ್ಲಿ ಶಿಸ್ತುಕ್ರಮದ ಕುರಿತು ಹೆಚ್ಚುವರಿ ಮಾಹಿತಿ ಇಲ್ಲಿ ಲಭ್ಯವಿದೆ.
ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು ಅಥವಾ ಸೇವೆಯ ನಿಯಮಗಳ ಉಲ್ಲಂಘನೆಯನ್ನು ನಾವು ಗುರುತಿಸದಿದ್ದರೆ, ಆಗ ಯಾವುದೇ ಮುಂದಿನ ಕ್ರಮ ಕೈಗೊಳ್ಳಲಾಗುವುದಿಲ್ಲ.
ಈ ಎರಡೂ ಸಂದರ್ಭಗಳಲ್ಲೂ, ನಮ್ಮ ನಿರ್ಧಾರವನ್ನು ನಾವು ನಿಮಗೆ ತಿಳಿಸುತ್ತೇವೆ.
ನಾನು Snapchat ನಲ್ಲಿ ಒಂದು ವಿಷಯವನ್ನು ವರದಿ ಮಾಡಿದ್ದೇನೆ ಆದರೆ ಅದನ್ನು ತೆಗೆದುಹಾಕಿಲ್ಲ. ಇದಕ್ಕೆ ಕಾರಣವೇನು?
ವರದಿ ಮಾಡಲಾದ ಎಲ್ಲ ಕಂಟೆಂಟ್ ಅನ್ನು ತೆಗೆದುಹಾಕುವುದಿಲ್ಲ. ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು ಅಥವಾ ಸೇವೆಯ ನಿಯಮಗಳನ್ನು ಉಲ್ಲಂಘಿಸುವ ಕಂಟೆಂಟ್ ಅನ್ನು ನಾವು ತೆಗೆದುಹಾಕುತ್ತೇವೆ. ನಿಮಗೆ ಇಷ್ಟವಾಗದ, ಆದರೆ ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು ಅಥವಾ ಸೇವೆಯ ನಿಯಮಗಳ ಅನುಸಾರ ಅನುಮತಿಸಲಾಗಿರುವ ಕಂಟೆಂಟ್ ಅನ್ನು ನೀವು ಕಂಡರೆ, ಕಂಟೆಂಟ್ ಅನ್ನು ಮರೆಮಾಡುವ ಅಥವಾ ಬ್ಲಾಕ್ ಮಾಡುವ ಅಥವಾ ಕಳುಹಿಸಿದವರನ್ನು ತೆಗೆದುಹಾಕುವ ಮೂಲಕ ನೀವು ಅದನ್ನು ನೋಡುವುದನ್ನು ತಪ್ಪಿಸಬಹುದು.