ಬ್ರೆಜಿಲ್ ಗೌಪ್ಯತೆ ಸೂಚನೆ

ಜಾರಿ ದಿನಾಂಕ: ಸೆಪ್ಟೆಂಬರ್ 30, 2021

ನಾವು ಈ ಸೂಚನೆಯನ್ನು ನಿರ್ದಿಷ್ಟವಾಗಿ ಬ್ರೆಜಿಲ್‌ನಲ್ಲಿ ಬಳಕೆದಾರರಿಗಾಗಿ ರಚಿಸಿದ್ದೇವೆ. Lei Geral de Proteção de Dados Pessoais (LGPD) ಸೇರಿದಂತೆ ಬ್ರೆಜಿಲ್‌ನ ಕಾಯ್ದೆಗಳಡಿ ಸೂಚಿಸಲಾಗಿರುವಂತೆ ಬ್ರೆಜಿಲ್‌ನಲ್ಲಿನ ಬಳಕೆದಾರರು ಕೆಲವು ಗೌಪ್ಯತೆ ಹಕ್ಕುಗಳನ್ನು ಹೊಂದಿದ್ದಾರೆ. ನಮ್ಮ ಗೌಪ್ಯತೆಯ ತತ್ವಗಳು ಮತ್ತು ಎಲ್ಲ ಬಳಕೆದಾರರಿಗೆ ನಾವು ಒದಗಿಸುವ ಗೌಪ್ಯತೆ ನಿಯಂತ್ರಣಗಳು ಈ ಕಾನೂನುಗಳ ಅನುಸಾರವಾಗಿವೆ—ನಾವು ಬ್ರೆಜಿಲ್ ನಿರ್ದಿಷ್ಟವಾದ ಅಗತ್ಯಗಳನ್ನು ಒಳಗೊಳ್ಳುತ್ತೇವೆ ಎನ್ನುವುದನ್ನು ಈ ಸೂಚನೆ ಖಚಿತಪಡಿಸುತ್ತದೆ. ಉದಾಹರಣೆಗೆ, ಎಲ್ಲ ಬಳಕೆದಾರರು ತಮ್ಮ ಡೇಟಾದ ಪ್ರತಿಯನ್ನು ವಿನಂತಿಸಬಹುದು, ಅಳಿಸುವಿಕೆಯನ್ನು ವಿನಂತಿಸಬಹುದು ಮತ್ತು ಆ್ಯಪ್‌ನಲ್ಲಿ ತಮ್ಮ ಗೌಪ್ಯತೆ ಸೆಟ್ಟಿಂಗ್‌ಗಳನ್ನು ನಿಯಂತ್ರಿಸಬಹುದು. ಪೂರ್ಣ ಚಿತ್ರಣಕ್ಕಾಗಿ, ನಮ್ಮ ಗೌಪ್ಯತಾ ನೀತಿಯನ್ನು ಪರಿಶೀಲಿಸಿ.

ಡೇಟಾ ನಿಯಂತ್ರಕ

ಒಂದು ವೇಳೆ ನೀವು ಬ್ರೆಜಿಲ್‌ನಲ್ಲಿನ ಬಳಕೆದಾರರಾಗಿದ್ದರೆ, Snap Inc ನಿಮ್ಮ ವೈಯಕ್ತಿಕ ಮಾಹಿತಿಯ ನಿಯಂತ್ರಕವಾಗಿದೆ ಎನ್ನುವುದನ್ನು ನೀವು ತಿಳಿದಿರಬೇಕು.

ಪ್ರವೇಶಿಸುವಿಕೆ, ಅಳಿಸುವಿಕೆ, ತಿದ್ದುಪಡಿ ಮಾಡುವಿಕೆ ಮತ್ತು ಪೋರ್ಟಬಿಲಿಟಿಯ ಹಕ್ಕುಗಳು

ಗೌಪ್ಯತಾ ನೀತಿಯ ನಿಮ್ಮ ಮಾಹಿತಿಯ ಮೇಲಿನ ನಿಯಂತ್ರಣ ವಿಭಾಗದಲ್ಲಿ ವಿವರಿಸಿರುವಂತೆ ನೀವು ನಿಮ್ಮ ಪ್ರವೇಶ, ಅಳಿಸುವಿಕೆ, ತಿದ್ದುಪಡಿ ಮತ್ತು ಪೋರ್ಟಬಿಲಿಟಿಯ ಹಕ್ಕುಗಳನ್ನು ಚಲಾಯಿಸಬಹುದು.

ನಿಮ್ಮ ಮಾಹಿತಿಯನ್ನು ಉಪಯೋಗಿಸಲು ಇರುವ ಆಧಾರಗಳು

ಕೆಲವು ಷರತ್ತುಗಳು ಅನ್ವಯವಾದಾಗ ಮಾತ್ರ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಬಳಸಲು ನಿಮ್ಮ ದೇಶ ನಮಗೆ ಅನುಮತಿಸುತ್ತದೆ. ಈ ಷರತ್ತುಗಳನ್ನು "ಕಾನೂನು ಆಧಾರಗಳು" ಎಂದು ಕರೆಯಲಾಗುತ್ತದೆ ಮತ್ತು Snap ನಲ್ಲಿ ನಾವು ಸಾಮಾನ್ಯವಾಗಿ ನಾಲ್ಕರಲ್ಲಿ ಒಂದರ ಮೇಲೆ ಅವಲಂಬಿತರಾಗುತ್ತೇವೆ:
  • ಒಪ್ಪಂದ. ನಿಮ್ಮ ಮಾಹಿತಿಯನ್ನು ನಾವು ಬಳಸಲು ಒಂದು ಕಾರಣವೆಂದರೆ ನೀವು ನಮ್ಮೊಂದಿಗೆ ಒಪ್ಪಂದ ಮಾಡಿಕೊಂಡಿದ್ದೀರಿ. ಉದಾಹರಣೆಗೆ, ನೀವು ಬೇಡಿಕೆಯ ಜಿಯೋಫಿಲ್ಟರ್‌ ಖರೀದಿಸಿದಾಗ ಮತ್ತು ನಮ್ಮ ಕಸ್ಟಮ್ ಕ್ರಿಯೇಟಿವ್ ಟೂಲ್ಸ್ ನಿಯಮಗಳನ್ನು ಒಪ್ಪಿಕೊಂಡಾಗ, ಪಾವತಿಯನ್ನು ಸಂಗ್ರಹಿಸಲು ಮತ್ತು ಸರಿಯಾದ ಸ್ಥಳ ಮತ್ತು ಸಮಯದಲ್ಲಿ ಸರಿಯಾದ ಜನರಿಗೆ ನಿಮ್ಮ ಜಿಯೋಫಿಲ್ಟರ್ ಅನ್ನು ನಾವು ತೋರಿಸುತ್ತೇವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ನಾವು ನಿಮ್ಮ ಒಂದಿಷ್ಟು ಮಾಹಿತಿಯನ್ನು ಬಳಸಬೇಕಾಗುತ್ತದೆ.
  • ಕಾನೂನುಬದ್ಧ ಹಿತಾಸಕ್ತಿ. ನಿಮ್ಮ ಮಾಹಿತಿಯನ್ನು ನಾವು ಬಳಸಬಹುದಾದ ಇನ್ನೊಂದು ಕಾರಣವೆಂದರೆ ನಾವು—ಅಥವಾ ತೃತೀಯ ಪಕ್ಷ—ಹಾಗೆ ಮಾಡುವುದರಲ್ಲಿ ಕಾನೂನುಬದ್ಧ ಹಿತಾಸಕ್ತಿ ಹೊಂದಿರಬಹುದು. ಉದಾಹರಣೆಗೆ, ನಿಮ್ಮ ಖಾತೆಯನ್ನು ರಕ್ಷಿಸುವುದು, ನಿಮ್ಮ Snap ಗಳನ್ನು ತಲುಪಿಸುವುದು, ಗ್ರಾಹಕರ ನೆರವು ಒದಗಿಸುವುದು, ಮತ್ತು ನಿಮಗೆ ಇಷ್ಟವಾಗಬಹುದು ಎಂದು ನಾವು ಭಾವಿಸುವ ಸ್ನೇಹಿತರು ಮತ್ತು ಕಂಟೆಂಟ್ ಕಂಡುಕೊಳ್ಳಲು ನಿಮಗೆ ಸಹಾಯ ಮಾಡುವುದು ಸೇರಿದಂತೆ, ನಮ್ಮ ಸೇವೆಗಳನ್ನು ಒದಗಿಸಲು ಮತ್ತು ಸುಧಾರಿಸಲು ನಾವು ನಿಮ್ಮ ಮಾಹಿತಿ ಬಳಸಬೇಕಾಗುತ್ತದೆ. ನಮ್ಮ ಬಹುತೇಕ ಸೇವೆಗಳು ಉಚಿತವಾಗಿರುವುದರಿಂದ, ನಿಮಗೆ ಆಸಕ್ತಿಕರ ಅನಿಸಬಹುದಾದ ಜಾಹೀರಾತುಗಳನ್ನು ನಿಮಗೆ ತೋರಿಸಲು ಕೂಡ ನಿಮ್ಮ ಕುರಿತ ಒಂದಿಷ್ಟು ಮಾಹಿತಿಯನ್ನು ನಾವು ಬಳಸುತ್ತೇವೆ. ಕಾನೂನುಬದ್ಧ ಹಿತಾಸಕ್ತಿ ಕುರಿತು ಅರ್ಥಮಾಡಿಕೊಳ್ಳಬೇಕಾದ ಒಂದು ಮುಖ್ಯ ಅಂಶ ಎಂದರೆ ನಮ್ಮ ಹಿತಾಸಕ್ತಿಗಳು ನಿಮ್ಮ ಗೌಪ್ಯತೆಯ ಹಕ್ಕನ್ನು ಕಡೆಗಣಿಸುವುದಿಲ್ಲ, ಆದ್ದರಿಂದ ನಿಮ್ಮ ಡೇಟಾವನ್ನು ನಾವು ಬಳಸುತ್ತಿರುವ ರೀತಿ ನಿಮ್ಮ ಗೌಪ್ಯತೆಯ ಮೇಲೆ ಗಮನಾರ್ಹ ಪರಿಣಾಮ ಬೀರುವುದಿಲ್ಲ ಅಥವಾ ನೀವು ಹಾಗೆ ತಿಳಿದುಕೊಳ್ಳುವುದಿಲ್ಲ ಎಂದು ನಾವು ಭಾವಿಸಿದಾಗ ಅಥವಾ ಹಾಗೆ ಮಾಡಲು ಬಲವಾದ ಕಾರಣ ಇದ್ದಾಗ ಮಾತ್ರ ನಾವು ಕಾನೂನುಬದ್ಧ ಹಿತಾಸಕ್ತಿ ಮೇಲೆ ಅವಲಂಬಿತರಾಗುತ್ತೇವೆ. ನಿಮ್ಮ ಮಾಹಿತಿಯನ್ನು ಹೆಚ್ಚು ವಿವರವಾಗಿ ಬಳಸಲು ನಮ್ಮ ಕಾನೂನುಬದ್ಧ ವ್ಯವಹಾರ ಕಾರಣಗಳನ್ನು ನಾವು ಇಲ್ಲಿ ವಿವರಿಸುತ್ತೇವೆ.
  • ಸಮ್ಮತಿ. ಕೆಲವು ಸಂದರ್ಭಗಳಲ್ಲಿ, ನಿರ್ದಿಷ್ಟ ಉದ್ದೇಶಗಳಿಗಾಗಿ ನಿಮ್ಮ ಮಾಹಿತಿಯನ್ನು ಬಳಸಲು ನಾವು ಸಮ್ಮತಿಯನ್ನು ಕೋರುತ್ತೇವೆ. ಒಂದು ವೇಳೆ ನಾವು ಕೇಳಿದಲ್ಲಿ, ನಮ್ಮ ಸೇವೆಗಳಲ್ಲಿ ಅಥವಾ ನಿಮ್ಮ ಸಾಧನದ ಅನುಮತಿಗಳ ಮೂಲಕ ನಿಮ್ಮ ಸಮ್ಮತಿಯನ್ನು ನೀವು ಹಿಂಪಡೆಯಬಹುದು ಎನ್ನುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ. ನಿಮ್ಮ ಮಾಹಿತಿಯನ್ನು ಬಳಸಲು ನಾವು ಒಪ್ಪಿಗೆಯನ್ನು ಅವಲಂಬಿಸದಿದ್ದರೂ ಸಹ, ಸಂಪರ್ಕಗಳು ಮತ್ತು ಸ್ಥಳದಂತಹ ಡೇಟಾವನ್ನು ಪ್ರವೇಶಿಸಲು ನಾವು ನಿಮ್ಮನ್ನು ಅನುಮತಿಗಾಗಿ ಕೇಳಬಹುದು.
  • ಕಾನೂನು ಬಾಧ್ಯತೆ. ಮಾನ್ಯವಾದ ಕಾನೂನು ಪ್ರಕ್ರಿಯೆಗೆ ಪ್ರತಿಕ್ರಿಯಿಸುವಾಗ ಅಥವಾ ನಮ್ಮ ಬಳಕೆದಾರರನ್ನು ರಕ್ಷಿಸಲು ಕ್ರಮಗಳನ್ನು ಕೈಗೊಳ್ಳಬೇಕಾದಾಗ ಮುಂತಾದ ಸಂದರ್ಭಗಳಲ್ಲಿ ಕಾನೂನಿನ ಅನುಸರಣೆಗಾಗಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಬಳಸಬೇಕಾಗಬಹುದು.

ಆಕ್ಷೇಪಿಸುವ ನಿಮ್ಮ ಹಕ್ಕು

ನಿಮ್ಮ ಮಾಹಿತಿಯನ್ನು ನಾವು ಬಳಸುವುದಕ್ಕೆ ಆಕ್ಷೇಪಿಸುವ ಹಕ್ಕು ನಿಮಗೆ ಇದೆ. ಅನೇಕ ರೀತಿಯ ಡೇಟಾದೊಂದಿಗೆ, ನಾವು ಇನ್ನು ಮುಂದೆ ಆ ಡೇಟಾವನ್ನು ಪ್ರಕ್ರಿಯೆಗೊಳಿಸಲು ನೀವು ಬಯಸದಿದ್ದರೆ, ಅದನ್ನು ಅಳಿಸುವ ಸಾಮರ್ಥ್ಯವನ್ನು ನಾವು ನಿಮಗೆ ಒದಗಿಸಿದ್ದೇವೆ. ಇತರ ಪ್ರಕಾರದ ಡೇಟಾಕ್ಕಾಗಿ, ವೈಶಿಷ್ಟ್ಯವನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸುವ ಮೂಲಕ ನಿಮ್ಮ ಡೇಟಾದ ಬಳಕೆಯನ್ನು ನಿಲ್ಲಿಸುವ ಸಾಮರ್ಥ್ಯವನ್ನು ನಾವು ನಿಮಗೆ ನೀಡಿದ್ದೇವೆ. ಆ್ಯಪ್‌ನಲ್ಲಿ ನೀವು ಈ ಕೆಲಸಗಳನ್ನು ಮಾಡಬಹುದು. ನಾವು ಪ್ರಕ್ರಿಯೆಗೊಳಿಸುವುದಕ್ಕೆ ನೀವು ಒಪ್ಪದಿರುವ ಇತರ ವಿಧಗಳ ಮಾಹಿತಿ ಇದ್ದರೆ, ನೀವು ನಮ್ಮನ್ನು ಸಂಪರ್ಕಿಸಬಹುದು.

ದೂರುಗಳು ಅಥವಾ ಪ್ರಶ್ನೆಗಳಿವೆಯೇ?

ನೀವು ಯಾವುದೇ ವಿಚಾರಣೆಗಳನ್ನು ನಮ್ಮ ಗೌಪ್ಯತೆ ಬೆಂಬಲ ತಂಡಕ್ಕೆ ಅಥವಾ dpo@snap.com ಗೆ ಕಳುಹಿಸಿ ಡೇಟಾ ಸಂರಕ್ಷಣೆ ಅಧಿಕಾರಿಗೆ ಸಲ್ಲಿಸಬಹುದು ಎಂದು ನಾವು ನಿಮಗೆ ತಿಳಿಸಲು ಬಯಸುತ್ತೇವೆ. Autoridade Nacional de Proteção de Dados (ANPD) ಅವರಲ್ಲಿ ದೂರು ಸಲ್ಲಿಸುವ ಹಕ್ಕನ್ನು ಕೂಡ ನೀವು ಹೊಂದಿದ್ದೀರಿ.