ಇಬ್ಬರು ವ್ಯಕ್ತಿಗಳು ಒಂದೇ ಆಗಿರುವುದಿಲ್ಲ, ಆದ್ದರಿಂದ ನಿಮ್ಮ Snapchat ಅನುಭವವನ್ನು ವಿಶೇಷವಾಗಿ ನಿಮಗಾಗಿ ತಕ್ಕಂತೆ ನಾವು ನಿಮ್ಮ ಕೆಲವು ಮಾಹಿತಿಯನ್ನು ಬಳಸುತ್ತೇವೆ! ಉದಾಹರಣೆಗೆ, ನೀವು ನೋಡುವ ಸ್ಪಾಟ್‌ಲೈಟ್ ಕಂಟೆಂಟ್ ಅನ್ನು ನಾವು ವೈಯಕ್ತಿಕಗೊಳಿಸುತ್ತೇವೆ — ಹಾಗಾಗಿ ಒಂದು ವೇಳೆ ನೀವು ಕ್ರೀಡೆಯಲ್ಲಿ ಆಸಕ್ತಿ ತೋರಿಸಿದರೆ, ನೀವು ಹೆಚ್ಚು ಕ್ರೀಡೆ ಸಂಬಂಧಿತ ಕಂಟೆಂಟ್ ಅನ್ನು ನೋಡಬಹುದು. ಅಥವಾ, ನೀವು ನಿಯಮಿತವಾಗಿ ನಿಮ್ಮ ನಾಯಿಮರಿಯ Snap ಗಳನ್ನು ನನ್ನ ಕಥೆಗೆ ಪೋಸ್ಟ್ ಮಾಡಿದರೆ, ನೀವು ನಾಯಿಗಳನ್ನು ಇಷ್ಟಪಡುತ್ತೀರಿ ಎಂದು ನಾವು ಊಹಿಸಬಹುದು ಮತ್ತು ನಿಮ್ಮ ಆಸಕ್ತಿಗಳಿಗೆ ಸಂಬಂಧಿಸಿದ ವಿಷಯವನ್ನು ನಿಮಗೆ ತೋರಿಸಲು ಪ್ರಯತ್ನಿಸಬಹುದು!
ನೀವು ಆಸಕ್ತಿ ಹೊಂದಿರುವ ವಿಷಯವನ್ನು ಹೈಲೈಟ್ ಮಾಡಲು ನಾವು ಹುಡುಕಾಟ ಪರದೆಯನ್ನು ವೈಯಕ್ತೀಕರಿಸಬಹುದು ಮತ್ತು ನಿಮ್ಮ ಮೆಮೊರಿಗಳ ವೈಯಕ್ತಿಕ ಅವಲೋಕನವನ್ನು ನಿಮಗೆ ಪ್ರಸ್ತುತಪಡಿಸಬಹುದು. ಇದು ನಿಮ್ಮ ಜನ್ಮದಿನ ಎಂದು ನಮಗೆ ತಿಳಿದಿದ್ದರೆ, ಆಚರಿಸುವುದಕ್ಕೆ ಸಹಾಯ ಮಾಡಲು ನಾವು ನಿಮಗೆ ಮತ್ತು ನಿಮ್ಮ ಸ್ನೇಹಿತರಿಗೆ ವಿಶೇಷ ಲೆನ್ಸ್ ಅನ್ನು ನೀಡಬಹುದು! ನಿಮ್ಮ Snapchat ಅನುಭವವನ್ನು ನಿಜಕ್ಕೂ ವಿಶಿಷ್ಟವಾಗಿಸಲು, ನಾವು ಜಾಹೀರಾತುಗಳು, ಹುಡುಕಾಟ, ಫಿಲ್ಟರ್‌ಗಳು, Snap ಮ್ಯಾಪ್, ಮತ್ತು ಲೆನ್ಸ್‌ಗಳನ್ನು ಕೂಡ ವೈಯಕ್ತಿಕಗೊಳಿಸಬಹುದು.
ನೀವು ಎಲ್ಲಿದ್ದೀರಿ ಮತ್ತು ನಿಮ್ಮ ಸುತ್ತಲೂ ಏನು ನಡೆಯುತ್ತಿದೆ ಎಂಬುದರ ಆಧಾರದ ಮೇಲೆ ನಿಮ್ಮ Snapಗಳಿಗೆ ಕೆಲವು ಸಂದರ್ಭವನ್ನು ನೀಡಲು ಸಹಾಯ ಮಾಡಲು ನಾವು ಮಾಹಿತಿಯನ್ನು ಬಳಸುತ್ತೇವೆ! ಇದು ಸಮಯ, ಸ್ಥಳ, ಹವಾಮಾನವನ್ನು ತೋರಿಸಬಹುದಾದ ಸ್ಟಿಕ್ಕರ್‌ಗಳು ಅಥವಾ ನೀವು ಇರುವ ಒಂದು ಈವೆಂಟ್‌ಗಾಗಿ ಸಿದ್ಧಪಡಿಸಿದ ವಿಶೇಷ ಲೆನ್ಸ್‌ಗಳು ಮತ್ತು ಫಿಲ್ಟರ್‌ಗಳನ್ನು ಒಳಗೊಂಡಿರುತ್ತದೆ. ಅಲ್ಲದೆ, ನಿಮ್ಮ ಮೆಮೊರಿಗಳನ್ನು ವಿಂಗಡಿಸಲು ನಾವು ಈ ಮಾಹಿತಿಯನ್ನು ಬಳಸುತ್ತೇವೆ, ಆದ್ದರಿಂದ ಅವುಗಳನ್ನು ಯಾವಾಗ ಮತ್ತು ಎಲ್ಲಿ ಸೆರೆಹಿಡಿಯಲಾಗಿದೆ ಎಂಬುದರ ಆಧಾರದ ಮೇಲೆ ಅವುಗಳನ್ನು ನಿಮಗಾಗಿ ಆಯೋಜಿಸಲಾಗಿದೆ.
ನಿಮ್ಮ ಅನುಭವವನ್ನು ನಾವು ಹೇಗೆ ವೈಯಕ್ತೀಕರಿಸುತ್ತೇವೆ ಎಂಬುದರ ಕುರಿತು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿ ಓದಿ.