U.S. ಫೆಂಟಾನಿಲ್ ಬಿಕ್ಕಟ್ಟಿನ ವಿರುದ್ಧ ಹೋರಾಡಲು ನಮ್ಮ ಪ್ರಯತ್ನಗಳನ್ನು ಮುಂದುವರಿಸುವುದು

ಅಕ್ಟೋಬರ್ 12, 2022

ಮುಂದಿನ ವಾರ, ಫೆಂಟಾನಿಲ್ ಸವರಿದ ನಕಲಿ ಮಾತ್ರೆಗಳ ಅಪಾಯಗಳ ಕುರಿತು ಪೋಷಕರು ಹಾಗೂ ಯುವಜನತೆ ಇಬ್ಬರಿಗೂ ಅರಿವು ಮೂಡಿಸಲು ನೆರವಾಗುವುದಕ್ಕೆ ಜಾಹೀರಾತು ಪರಿಷತ್‌ನೊಂದಿಗೆ ಹಿಂದೆಂದೂ ಕಾಣದಂತಹ ಸಾರ್ವಜನಿಕ ಜಾಗೃತಿ ಅಭಿಯಾನವನ್ನು Snap ಆರಂಭಿಸುತ್ತಿದೆ. ಕಳೆದ ವರ್ಷ, U.S. ನಲ್ಲಿ 18-45 ವರ್ಷದೊಳಗಿನವರ ಸಾವಿಗೆ ಫೆಂಟಾನಿಲ್ ಒಂದು ಪ್ರಮುಖ ಕಾರಣವಾಯಿತು – ಮತ್ತು ಯುವಜನರು ವಿಶೇಷವಾಗಿ ಅಪಾಯದಲ್ಲಿದ್ದಾರೆ ಎನ್ನುವುದು ನಮಗೆ ತಿಳಿದಿದೆ. ಆದ ಕಾರಣ ನಾವು ಈ ಪ್ರಯತ್ನದಲ್ಲಿ ಸಹಭಾಗಿತ್ವಕ್ಕಾಗಿ ಒಂದು ವರ್ಷಕ್ಕಿಂತ ಹೆಚ್ಚು ಸಮಯ ಜಾಹೀರಾತು ಪರಿಷತ್‌ನೊಂದಿಗೆ ಕೆಲಸ ಮಾಡಿದೆವು, ಈ ಮೂಲಕ ಈ ನಿರ್ಣಾಯಕ ವಿಷಯಕ್ಕೆ ಸಂಬಂಧಿಸಿ Snap, YouTube, ಮತ್ತು ಇತರ ಉದ್ಯಮ ಪಾಲುದಾರರು ಜೊತೆಗೂಡುವುದಕ್ಕೆ ಸಾಧ್ಯವಾಯಿತು.
ಈ ಅಭಿಯಾನವು, ವೀಡಿಯೊ ಅಭಿಯಾನಗಲು, ಒರಿಜಿನಲ್ ಕಂಟೆಂಟ್ ಮತ್ತು ತಜ್ಞ ಸಂಘಟನೆಗಳಿಂದ ಸಂಪನ್ಮೂಲಗಳ ಮೂಲಕ ನಮ್ಮ ವೇದಿಕೆಯಲ್ಲಿ ನೇರವಾಗಿ ಫೆಂಟಾನಿಲ್‌ನ ಅಪಾಯಗಳ ಕುರಿತು ಜಾಗೃತಿ ಮೂಡಿಸಲು ನೆರವಾಗುವುದಕ್ಕೆ ಕಳೆದ 18 ತಿಂಗಳುಗಳಿಂದ ನಾವು ಮಾಡುತ್ತಿರುವ ಪ್ರಯತ್ನಗಳಿಗೆ ಪೂರಕವಾಗಿರಲಿದೆ. ಈ ಸಮಯದಲ್ಲಿ, Snapchat ಅನ್ನು ದುರ್ಬಳಕೆ ಮಾಡಲು ಪ್ರಯತ್ನಿಸುತ್ತಿರುವ ಡ್ರಗ್ ಡೀಲರ್‌ಗಳನ್ನು ಪೂರ್ವಭಾವಿಯಾಗಿ ಪತ್ತೆ ಮಾಡಲು ಮತ್ತು ತೆಗೆದುಹಾಕಲು ನಮ್ಮ ಪ್ರಯತ್ನಗಳನ್ನು ಸುಧಾರಿಸುವುದಕ್ಕಾಗಿ ನಾವು ಶಕ್ತಿಪೂರ್ವಕ ಕೆಲಸ ಮಾಡಿದೆವು ಮತ್ತು ಈ ಡೀಲರ್‌ಗಳನ್ನು ಕಾನೂನಿನಡಿ ತರುವುದಕ್ಕಾಗಿ ಕಾನೂನು ಜಾರಿ ತನಿಖಾ ಸಂಸ್ಥೆಗಳಿಗೆ ನಮ್ಮ ಬೆಂಬಲವನ್ನು ಹೆಚ್ಚಿಸಿದೆವು. ನಮ್ಮ ಪ್ರಗತಿಯ ಕುರಿತು ನಿಯಮಿತ ಅಪ್‌ಡೇಟ್‌ಗಳನ್ನು ಒದಗಿಸುವುದಕ್ಕಾಗಿ ನಾವು ಬದ್ಧರಾಗಿದ್ದೇವೆ ಮತ್ತು ಮುಂದಿನ ವಾರದ ಅಭಿಯಾನದ ಆರಂಭಕ್ಕೆ ಮುಂಚಿತವಾಗಿ, ಈ ರಾಷ್ಟ್ರೀಯ ಪಿಡುಗಿನ ವಿರುದ್ಧ ಹೋರಾಡಲು ನಮ್ಮ ಮುಂದುವರಿದ ಕೆಲಸದ ಇತ್ತೀಚಿನ ಅವಲೋಕನವನ್ನು ನಾವು ಹಂಚಿಕೊಳ್ಳುತ್ತಿದ್ದೇವೆ. 
  • ನಮ್ಮ ಪೂರ್ವಭಾವಿ ಪತ್ತೆ ಮಾಡುವಿಕೆಯನ್ನು ಬಲಪಡಿಸುವುದು: Snapchat ನಲ್ಲಿ ಅಪಾಯಕಾರಿ ಮಾದಕಪದಾರ್ಥದ ಚಟುವಟಿಕೆಯನ್ನು ಪೂರ್ವಭಾವಿಯಾಗಿ ಪತ್ತೆ ಮಾಡಲು ನಮಗೆ ಸಹಾಯ ಮಾಡುವ ನಮ್ಮ AI ಮತ್ತು ಮಷೀನ್ ಲರ್ನಿಂಗ್ ಟೂಲ್‌ಗಳನ್ನು ಬಲಪಡಿಸುವುದನ್ನು ನಾವು ಮುಂದುವರಿಸುತ್ತೇವೆ. ನಮ್ಮ ಅತ್ಯಂತ ಸುಧಾರಿತ ಮಾಡೆಲ್‌ಗಳು ಈಗ, ಒಬ್ಬ Snapchter ಅಕ್ರಮ ಮಾದಕಪದಾರ್ಥದ ಚಟುವಟಿಕೆಯನ್ನು ನಮಗೆ ವರದಿ ಮಾಡುವುದಕ್ಕಿಂತ ಮುಂಚೆ 90% ಘಟನೆಗಳನ್ನು ಪೂರ್ವಭಾವಿಯಾಗಿ ಗುರುತಿಸಲು ನಮಗೆ ಸಹಾಯ ಮಾಡುತ್ತಿವೆ, ಮತ್ತು Snapchatter ಗಳಿಂದ ಮಾದಕಪದಾರ್ಥಕ್ಕೆ ಸಂಬಂಧಿಸಿದ ವರದಿಗಳಲ್ಲಿ ನಾವು ಸತತ ಇಳಿಕೆ ಕಾಣುತ್ತಿದ್ದೇವೆ. ಸೆಪ್ಟೆಂಬರ್ 2021 ರಲ್ಲಿ, Snapchatter ಗಳಿಂದ ಮಾದಕಪದಾರ್ಥ ಸಂಬಂಧಿತ ವರದಿಗಳಲ್ಲಿ 23% ಗೂ ಹೆಚ್ಚು ನಿರ್ದಿಷ್ಟವಾಗಿ ಮಾರಾಟಕ್ಕೆ ಸಂಬಂಧಿಸಿದ ಕಂಟೆಂಟ್ ಒಳಗೊಂಡಿದ್ದವು; ಪೂರ್ವಭಾವಿ ಪತ್ತೆಮಾಡುವಿಕೆ ಕಾರ್ಯದ ಪರಿಣಾಮವಾಗಿ, ಅದನ್ನು ನಾವು ಕಳೆದ ತಿಂಗಳು 3.3% ಗೆ ತಗ್ಗಿಸಿದ್ದೇವೆ. ಈ ಸಂಖ್ಯೆಯನ್ನು ಸಾಧ್ಯವಾದಷ್ಟು ತಗ್ಗಿಸಲು ನಾವು ಕೆಲಸ ಮುಂದುವರಿಸುತ್ತೇವೆ.
  • ಡ್ರಗ್ ಡೀಲರ್‌ಗಳನ್ನು ಪತ್ತೆ ಮಾಡಲು ವೇದಿಕೆಗಳಾದ್ಯಂತ ಕೆಲಸ ಮಾಡುವುದು: ಡ್ರಗ್ ಡೀಲರ್‌ಗಳು ವಿವಿಧ ಸಾಮಾಜಿಕ ಮಾಧ್ಯಮ ಮತ್ತು ಸಂವಹನ ವೇದಿಕೆಗಳಾದ್ಯಂತ ಕಾರ್ಯಾಚರಣೆ ನಡೆಸುತ್ತಾರೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು, Snapchat ಅನ್ನು ಉಲ್ಲೇಖಿಸುವ ಈ ಇತರ ವೇದಿಕೆಗಳಾದ್ಯಂತ ಅಕ್ರಮ ಡ್ರಗ್ ಸಂಬಂಧಿತ ಕಂಟೆಂಟ್ ಅನ್ನು ಪತ್ತೆ ಮಾಡಲು ನಾವು ಕೂಡ ತಜ್ಞರೊಂದಿಗೆ ಕೆಲಸ ಮಾಡುತ್ತಿದ್ದೇವೆ, ಇದರಿಂದಾಗಿ ಡ್ರಗ್ ಡೀಲರ್‌ಗಳ Snapchat ಅಕೌಂಟ್‌ಗಳನ್ನು ಪತ್ತೆಮಾಡಬಹುದು ಮತ್ತು ಅವುಗಳನ್ನು ಸ್ಥಗಿತಗೊಳಿಸಬಹುದು. ಡ್ರಗ್‌ ಡೀಲರ್‌ಗಳು Snapchat ಬಳಸುವುದನ್ನು ಕಂಡಾಗ, ನಾವು ಅವರ ಖಾತೆಗಳನ್ನು ನಿಷೇಧಿಸುವುದಷ್ಟೇ ಅಲ್ಲ ಜೊತೆಗೆ ಹೊಸದನ್ನು ರಚಿಸದಂತೆ ಅವರನ್ನು ನಿರ್ಬಂಧಿಸಲು ನಾವು ಸಕ್ರಿಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಅಕ್ರಮ ಡ್ರಗ್-ಸಂಬಂಧಿತ ಕಂಟೆಂಟ್ ಮತ್ತು ಚಟುವಟಿಕೆಯ ನಮೂನೆಗಳು ಮತ್ತು ಸಂಕೇತಗಳನ್ನು ಹಂಚಿಕೊಳ್ಳಲು ನಾವು Meta ದೊಂದಿಗೆ ಕೂಡ ನಮ್ಮ ಪಾಲುದಾರಿಕೆಯನ್ನು ಮುಂದುವರಿಸುತ್ತಿದ್ದೇವೆ ಮತ್ತು ಇತರ ವೇದಿಕೆಗಳು ಈ ಪ್ರಯತ್ನದಲ್ಲಿ ಕೈಜೋಡಿಸಲಿವೆ ಎಂದು ಆಶಿಸುತ್ತೇವೆ.
  • ಕಾನೂನು ಜಾರಿಗಾಗಿ ನಮ್ಮ ಬೆಂಬಲವನ್ನು ಹೆಚ್ಚಿಸುವುದು: ಕಳೆದ ವರ್ಷ ನಾವು ಆರ್ಥಿಕ ಹಿನ್ನಡೆ ಅನುಭವಿಸಿದ್ದರೂ ಕೂಡ, ಈ ತನಿಖೆಗಳನ್ನು ಬೆಂಬಲಿಸುವ ನಮ್ಮ ಕಾನೂನು ಜಾರಿ ತಂಡವನ್ನು ವಿಸ್ತೃತಗೊಳಿಸುವುದನ್ನು ನಾವು ಮುಂದುವರಿಸಿದೆವು, ಇದಕ್ಕೆ ಸಂಬಂಧಿಸಿ ನಮ್ಮೊಂದಿಗೆ ಕೈಜೋಡಿಸಿರುವ ತಂಡದ ಹಲವು ಸದಸ್ಯರು ಯುವ ಜನರ ಸುರಕ್ಷತೆಯಲ್ಲಿ ಅನುಭವ ಹೊಂದಿರುವ ನ್ಯಾಯಾಧೀಶರು ಮತ್ತು ಕಾನೂನು ಜಾರಿ ಅಧಿಕಾರಿಗಳಾಗಿದ್ದಾರೆ. ತುರ್ತನ್ನು ಆಧರಿಸಿ ನಾವು ಆದ್ಯತೆಗೊಳಿಸುವ, ಮಾಹಿತಿಗಾಗಿ ಕಾನೂನು ಜಾರಿ ಸಂಸ್ಥೆಗಳ ವಿನಂತಿಗಳನ್ನು ಪೂರೈಸಲು ನಮ್ಮ ಬೆಂಬಲವನ್ನು ಬಲಪಡಿಸುವುದಕ್ಕಾಗಿ ಈ ಹೂಡಿಕೆಗಳು ನಮಗೆ ನೆರವಾಗಿವೆ. ಜೀವಕ್ಕೆ ತಕ್ಷಣವೇ ಅಪಾಯವನ್ನು ಒಳಗೊಂಡ ಮತ್ತು ಫೆಂಟಾನಿಲ್ ಘಟನೆಯನ್ನು ಒಳಗೊಂಡಿರಬಹುದಾದ – ತುರ್ತು ಬಹಿರಂಗಪಡಿಸುವಿಕೆ ವಿನಂತಿಗಳ ಪ್ರಕರಣಗಳಲ್ಲಿ – ನಮ್ಮ 24/7 ತಂಡ ಸಾಮಾನ್ಯವಾಗಿ 30 ನಿಮಿಷಗಳ ಒಳಗೆ ಪ್ರತಿಕ್ರಿಯಿಸುತ್ತದೆ. ಜೀವಕ್ಕೆ ತಕ್ಷಣದ ಅಪಾಯವನ್ನು ಒಳಗೊಂಡಿಲ್ಲದ ವಿನಂತಿಗಳಿಗಾಗಿಯೂ ನಮ್ಮ ಪ್ರತಿಕ್ರಿಯೆ ಸಮಯವನ್ನು ಸುಧಾರಿಸುವುದನ್ನು ಕೂಡ ನಾವು ಮುಂದುವರಿಸಿದ್ದೇವೆ.
  • ಹೊಸ ಪೋಷಕರ ಟೂಲ್‌ಗಳ ಬಿಡುಗಡೆ: Snapchat ನಲ್ಲಿ ಹದಿಹರೆಯದವರು ಸಂವಹನ ನಡೆಸುತ್ತಿರುವ ಎಲ್ಲ ಜನರ ಪಟ್ಟಿಯನ್ನು ನೋಡಲು ಅವರ ಪೋಷಕರಿಗೆ ಅವಕಾಶ ಕಲ್ಪಿಸುವ ನಮ್ಮ ಮೊದಲ ಆ್ಯಪ್‌ನಲ್ಲಿನ ಪೋಷಕರ ಟೂಲ್‌, ಕೌಟುಂಬಿಕ ಕೇಂದ್ರವನ್ನು ನಾವು ಇತ್ತೀಚೆಗೆ ಪರಿಚಯಿಸಿದ್ದೇವೆ. ಪೋಷಕರು, ಡ್ರಗ್ ಸಂಬಂಧಿತ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ಸಂದೇಹಪಡುವ ಖಾತೆ ಸೇರಿದಂತೆ, ಕಳವಳಕಾರಿ ಅಥವಾ ಪರಿಚಿತವಲ್ಲದ ಖಾತೆಯನ್ನು ಕಂಡರೆ, ಅದನ್ನು ನಮ್ಮ ವಿಶ್ವಾಸ ಮತ್ತು ಸುರಕ್ಷತೆ ತಂಡಗಳಿಗೆ ಸುಲಭವಾಗಿ ಮತ್ತು ಗೌಪ್ಯವಾಗಿ ವರದಿ ಮಾಡಬಹುದು. ಆನ್‌ಲೈನ್ ಸುರಕ್ಷತೆ ಮತ್ತು ತಾವು ಯಾರೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ತಿಳಿದುಕೊಳ್ಳುವುದರ ಪ್ರಾಮುಖ್ಯತೆಯ ಕುರಿತು ತಮ್ಮ ಹದಿಹರೆಯದ ಮಕ್ಕಳೊಂದಿಗೆ ಮಹತ್ವದ ಸಂಭಾಷಣೆಗಳನ್ನು ಆರಂಭಿಸಲು ಈ ಟೂಲ್‌ಗಳು ಪೋಷಕರಿಗೆ ಸಹಾಯ ಮಾಡುತ್ತವೆ ಎಂದು ನಾವು ಭಾವಿಸುತ್ತೇವೆ. ಹೇಗೆ ಸೈನ್ ಅಪ್ ಮಾಡುವುದು ಎನ್ನುವುದು ಸೇರಿದಂತೆ, ಕೌಟುಂಬಿಕ ಕೇಂದ್ರದ ಕುರಿತು ನೀವು ಇಲ್ಲಿ ಇನ್ನಷ್ಟು ಓದಬಹುದು.
  • ನಮ್ಮ ವರದಿ ಮಾಡುವಿಕೆ ಪ್ರಕ್ರಿಯೆಯನ್ನು ವ್ಯವಸ್ಥಿತಗೊಳಿಸುವುದು: ಹಂತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮತ್ತು ಮಾದಕಪದಾರ್ಥಗಳಿಗೆ ಒಂದು ಕೆಟಗರಿ ಸೇರಿದಂತೆ, ಇನ್ನಷ್ಟು ವರದಿ ಮಾಡುವಿಕೆ ಕೆಟಗರಿಗಳನ್ನು ಸೇರಿಸಲು ನಾವು ನಮ್ಮ ಆ್ಯಪ್‌ನಲ್ಲಿನ ವರದಿ ಮಾಡುವಿಕೆ ಪ್ರಕ್ರಿಯೆಯನ್ನು ನಾವು ಅಪ್‌ಡೇಟ್ ಮಾಡಿದ್ದೇವೆ, ಇದರಿಂದಾಗಿ Snapchatter ಗಳು ಹಾನಿಕಾರಕ ಕಂಟೆಂಟ್ ಅಥವಾ ಖಾತೆಗಳನ್ನು ಇನ್ನಷ್ಟು ತ್ವರಿತವಾಗಿ ಮತ್ತು ನಿಖರವಾಗಿ ವರದಿ ಮಾಡಬಹುದು. ಹೆಚ್ಚುವರಿಯಾಗಿ, ನಾವು ವರ್ಷಕ್ಕೆ ಎರಡು ಬಾರಿ ಪ್ರಕಟಿಸುವ ನಮ್ಮ ಪಾರದರ್ಶಕತೆಯ ವರದಿಗಳನ್ನು ಸುಧಾರಿಸುವ ನಮ್ಮ ನಿರಂತರ ಗಮನದ ಭಾಗವಾಗಿ, ಮಾದಕಪದಾರ್ಥಗಳನ್ನು ಅದರ ಸ್ವಂತ ಕೆಟಗರಿಗೆ ವಿಂಗಡಿಸುವುದನ್ನು ನಾವು ಇತ್ತೀಚೆಗೆ ಆರಂಭಿಸಿದ್ದೇವೆ, ಇದರಿಂದಾಗಿ ನಮ್ಮ ಕ್ರಮ ಜಾರಿ ಮಾಡುವ ಪ್ರಯತ್ನಗಳ ಕುರಿತು ನಾವು ಹೆಚ್ಚುವರಿ ವಿವರಗಳನ್ನು ಒದಗಿಸಬಹುದು. 
  • ಹದಿಹರೆಯದವರಿಗೆ ಹೆಚ್ಚುವರಿ ಸುರಕ್ಷತೆಯನ್ನು ಒದಗಿಸುವುದು: Snapchat ಎಲ್ಲರಿಗೂ ಸುರಕ್ಷಿತವಾಗಿರಬೇಕೆಂದು ನಾವು ಬಯಸುತ್ತೇವಾದರೂ, ತಮಗೆ ಪರಿಚಿತರಲ್ಲದ ಜನರಿಂದ ಹದಿಹರೆಯದವರು ಸಂಪರ್ಕ ಹೊಂದುವುದನ್ನು ಹೆಚ್ಚು ಕಠಿಣವಾಗಿಸಲು ನಾವು ಹೆಚ್ಚುವರಿ ರಕ್ಷಣೆಗಳನ್ನು ಅಳವಡಿಸಿದ್ದೇವೆ. ಡಿಫಾಲ್ಟ್ ಆಗಿ, 18 ವರ್ಷಕ್ಕಿಂತ ಕೆಳಗಿನ Snapchatter ಗಳು ಪರಸ್ಪರ ಸಂವಹನ ಆರಂಭಿಸುವುದಕ್ಕೆ ಮೊದಲು ಅವರು ಪರಸ್ಪರ ಸ್ನೇಹಿತರಾಗಿರಬೇಕು. ಹದಿಹರೆಯದವರು ಹಲವು ಸಾಮಾನ್ಯ ಸ್ನೇಹಿತರನ್ನು ಹೊಂದಿದ್ದರೆ ಮಾತ್ರ ಇನ್ನೊಬ್ಬ ಬಳಕೆದಾರನಿಗೆ ಶಿಫಾರಿತ ಸ್ನೇಹಿತರಾಗಿ ಕಾಣಿಸುತ್ತಾರೆ ಮತ್ತು ಅವರು ಸಾರ್ವಜನಿಕ ಪ್ರೊಫೈಲ್ ಹೊಂದಲು ನಾವು ಅವಕಾಶ ನೀಡುವುದಿಲ್ಲ. 
  • Snapchatter ಗಳೊಂದಿಗೆ ನೇರವಾಗಿ ಜಾಗೃತಿ ಮೂಡಿಸುವುದು: ಮಾದಕಪದಾರ್ಥದ ಕೀವರ್ಡ್ ಮತ್ತು ಆಡುಭಾಷೆಯ ಪದಗಳನ್ನು ನಾವು ನಿರ್ಬಂಧಿಸುತ್ತೇವೆ; ಒಂದು ವೇಳೆ Snapchatter ಗಳು ಆ ಕೀವರ್ಡ್‌ಗಳಿಗಾಗಿ ಹುಡುಕಿದರೆ, ಬದಲಾಗಿ ನಾವು ಅವರನ್ನು "ಹೆಡ್ಸ್‌ ಅಪ್" ಎನ್ನುವ ನಮ್ಮ ಮೀಸಲಾದ ಆ್ಯಪ್‌ನಲ್ಲಿನ ಪೋರ್ಟಲ್ ಮೂಲಕ ತಜ್ಞರಿಂದ ರಚಿಸಿದ ಫೆಂಟಾನಿಲ್‌ನ ಅಪಾಯಗಳ ಕುರಿತ ಕಂಟೆಂಟ್‌ಗೆ ಅವರನ್ನು ನಿರ್ದೇಶಿಸುತ್ತೇವೆ. ಕಳೆದ ವರ್ಷದಲ್ಲಿ, Song for Charlie, ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು (CDC), ಮಾದಕಪದಾರ್ಥ ಬಳಕೆ ಮತ್ತು ಮಾನಸಿಕ ಆರೋಗ್ಯ ಸೇವೆಗಳ ಆಡಳಿತ (SAMHSA), ಅಮೆರಿಕದ ಸಮುದಾಯ ಮಾದಕಪದಾರ್ಥ ವಿರೋಧಿ ಒಕ್ಕೂಟಗಳು (CADCA), ಟ್ರುಥ್ ಇನೀಶಿಯೇಟಿವ್ ಮತ್ತು SAFE ಪ್ರಾಜೆಕ್ಟ್‌ನಂತಹ ಪ್ರಮುಖ ಸಂಘಟನೆಗಳಿಂದ ಹೊಸ ಸಂಪನ್ಮೂಲಗಳನ್ನು ಸೇರಿಸುವುದನ್ನು ನಾವು ಮುಂದುವರಿಸಿದೆವು. ಹೆಡ್ಸ್ ಅಪ್ ಪ್ರಾರಂಭಗೊಂಡಾಗಿನಿಂದ, 2.5 ಮಿಲಿಯನ್‌ಗೂ ಅಧಿಕ Snapchatter ಗಳಿಗೆ ಈ ಸಂಘಟನೆಗಳಿಂದ ಪೂರ್ವಭಾವಿಯಾಗಿ ಕಂಟೆಂಟ್ ಅನ್ನು ಒದಗಿಸಲಾಗಿದೆ. ನಮ್ಮ Discover ಕಂಟೆಂಟ್ ವೇದಿಕೆಯಲ್ಲಿ ಪ್ರದರ್ಶಿತವಾಗಿರುವ, ನಮ್ಮ ನ್ಯೂಸ್ ಶೋ, ಗುಡ್‌ ಲಕ್ ಅಮೆರಿಕಾ, 900,000 ಬಾರಿಗೂ ಹೆಚ್ಚು ವೀಕ್ಷಿಸಲಾಗಿರುವ ಫೆಂಟಾನಿಲ್ ಕುರಿತು Snapchatter ಗಳಿಗೆ ಶಿಕ್ಷಣ ನೀಡಲು ವಿಶೇಷ ಸರಣಿಯನ್ನು ಕೂಡ ಸಮರ್ಪಿಸಿದೆ. 
  • ನಮ್ಮ ಸುರಕ್ಷತಾ ಸಲಹಾ ಮಂಡಳಿಯನ್ನು ವಿಕಸನಗೊಳಿಸುವುದು: ನಮ್ಮ ಜಾಗತಿಕ ಸಮುದಾಯ, ಸುರಕ್ಷತಾ ಸಂಬಂಧಿತ ವಿಧಾನಗಳು ಮತ್ತು ಪರಿಣತಿಯ ಕ್ಷೇತ್ರಗಳನ್ನು ಪ್ರತಿನಿಧಿಸುವ ಸದಸ್ಯರನ್ನು ಸೇರಿಸುವ ಗುರಿಯೊಂದಿಗೆ, ಇತ್ತೀಚೆಗೆ ನಾವು ನಮ್ಮ ಸುರಕ್ಷತಾ ಸಲಹಾ ಮಂಡಳಿಯನ್ನು (SAB) ಮರುನಿರ್ಮಿಸಿದ್ದೇವೆ. ನಮ್ಮ ಹೊಸ ಮಂಡಳಿ ಈಗ, ಪೋಷಕರು ಮತ್ತು ಮಾದಕಪದಾರ್ಥದ ಸುಳಿಯಿಂದ ಪಾರಾಗಿ ಬಂದವರ ಜೊತೆಗೆ, ಮಾರಣಾಂತಿಕ ಮಾದಕಪದಾರ್ಥಗಳು ಸೇರಿದಂತೆ, ಆನ್‌ಲೈನ್ ಅಪಾಯಗಳಲ್ಲಿ ತಜ್ಞರನ್ನು ಒಳಗೊಂಡಿದೆ. ಹೊಸ ಮಂಡಳಿಯು ನಮಗೆ ವಿಶಾಲ ಶ್ರೇಣಿಯ ವಿಷಯಗಳ ಕುರಿತು ಸಲಹೆ ನೀಡಲಿದೆ ಮತ್ತು ಈ ತಿಂಗಳ ಕೊನೆಯಲ್ಲಿ ಮೊದಲ ಬಾರಿಗೆ ಸಭೆ ಸೇರಲಿದೆ. ನಮ್ಮ ಹೊಸ SAB ಕುರಿತು ನೀವು ಇಲ್ಲಿ ಇನ್ನಷ್ಟು ಓದಬಹುದು.


ಜಾಹೀರಾತು ಪರಿಷತ್‌ನ ಅಭಿಯಾನ ಮುಂದುವರಿಯುತ್ತಿರುವಂತೆ, ಫೆಂಟಾನಿಲ್ ಪಿಡುಗು, ಅದರ ಮೂಲ ಕಾರಣ ಮತ್ತು ಏನನ್ನು ನಿರೀಕ್ಷಿಸಬಹುದು ಎನ್ನುವ ಕುರಿತು ಪೋಷಕರಿಗೆ ಹೆಚ್ಚುವರಿ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸಲು ತಜ್ಞ ಸಂಘಟನೆಗಳೊಂದಿಗೆ ಕೆಲಸ ಮಾಡುವುದನ್ನು ನಾವು ಮುಂದುವರಿಸುತ್ತೇವೆ. ಮತ್ತು ಈ ಬಿಕ್ಕಟ್ಟಿನ ವಿರುದ್ಧ ಹೋರಾಡಲು, Snapchat ನಲ್ಲಿ ಮತ್ತು ಟೆಕ್ ಉದ್ಯಮದಾದ್ಯಂತ ಎರಡೂ ಕಡೆ, ನಮ್ಮ ಕಾರ್ಯಾಚರಣೆ ಮತ್ತು ಶೈಕ್ಷಣಿಕ ಕೆಲಸ ಎರಡನ್ನೂ ಹೆಚ್ಚಿಸುವ ಕುರಿತು ನಾವು ತೀವ್ರವಾದ ಬದ್ಧತೆಯನ್ನು ಹೊಂದಿದ್ದೇವೆ. 
ಸುದ್ದಿಗೆ ಹಿಂತಿರುಗಿ