ನಾವು ಸಂಗ್ರಹಿಸುವ ಮಾಹಿತಿಯಲ್ಲಿ ಮುಖ್ಯವಾಗಿ ಮೂರು ಮೂಲ ವರ್ಗಗಳಿವೆ:
ನೀವು ನಮ್ಮ ಸೇವೆಗಳನ್ನು ಬಳಸುವಾಗ ನಾವು ಪಡೆಯುವ ಮಾಹಿತಿ.
ಮೂರನೇ ವ್ಯಕ್ತಿಗಳಿಂದ ನಾವು ಪಡೆಯುವ ಮಾಹಿತಿ.
ಈ ಪ್ರತಿ ವರ್ಗಗಳ ಬಗ್ಗೆ ಇಲ್ಲಿ ಸ್ವಲ್ಪ ಹೆಚ್ಚು ಮಾಹಿತಿ ಇದೆ.
ನೀವು ಒದಗಿಸುವ ಮಾಹಿತಿ
ನಮ್ಮ ಸೇವೆಗಳೊಂದಿಗೆ ನೀವು ಸಂವಹನ ನಡೆಸಿದಾಗ, ನೀವು ನಮಗೆ ಒದಗಿಸುವ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ. ಉದಾಹರಣೆಗೆ, ನಮ್ಮ ಹಲವು ಸೇವೆಗಳಿಗೆ ನೀವು ಒಂದು ಖಾತೆಯನ್ನು ಸೆಟಪ್ ಮಾಡುವುದು ಅಗತ್ಯವಾಗಿರುತ್ತದೆ, ಹಾಗಾಗಿ ನಾವು ನಿಮ್ಮ ಹೆಸರು, ಬಳಕೆದಾರರ ಹೆಸರು, ಪಾಸ್‌ವರ್ಡ್, ಇಮೇಲ್ ವಿಳಾಸ, ಫೋನ್ ಸಂಖ್ಯೆ ಮತ್ತು ಜನ್ಮದಿನಾಂಕದಂತಹ ನಿಮ್ಮ ಕುರಿತ ಕೆಲವು ಪ್ರಮುಖ ವಿವರಗಳನ್ನು ಸಂಗ್ರಹಿಸಬೇಕಾಗುತ್ತದೆ. ನಿಮ್ಮ ಪ್ರೊಫೈಲ್ ಚಿತ್ರ ಅಥವಾ Bitmoji ಅವತಾರ್‌ನಂಥ, ನಮ್ಮ ಸೇವೆಗಳಲ್ಲಿ ಸಾರ್ವಜನಿಕವಾಗಿ ಕಾಣಿಸುವ ಕೆಲವು ಹೆಚ್ಚುವರಿ ಮಾಹಿತಿ ಒದಗಿಸುವಂತೆಯೂ ನಾವು ನಿಮ್ಮನ್ನು ಕೇಳಬಹುದು. ಮತ್ತು ಒಂದು ವೇಳೆ ಏನನ್ನಾದರೂ, ಅಂದರೆ ಇತ್ತೀಚಿನ ಸ್ನೀಕರ್ಸ್‌ನಂತಹದನ್ನು ಖರೀದಿಸಲು ನೀವು ನಮ್ಮ ವಾಣಿಜ್ಯ ಉತ್ಪನ್ನಗಳನ್ನು ಬಳಸುತ್ತಿದ್ದರೆ, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಸಂಖ್ಯೆ ಮತ್ತು ಸಂಬಂಧಿಸಿದ ಖಾತೆ ಮಾಹಿತಿಯಂತಹ ನಿಮ್ಮ ಪಾವತಿ ಮಾಹಿತಿಗಾಗಿ ನಾವು ಕೇಳಬಹುದು.
ಖಂಡಿತವಾಗಿ, Snap ಗಳು ಮತ್ತು ಚಾಟ್‌ಗಳು, My AI ನೊಂದಿಗಿನ ಸಂಭಾಷಣೆಗಳು, ಸ್ಪಾಟ್‌ಲೈಟ್ ಸಲ್ಲಿಕೆಗಳು, ಸಾರ್ವಜನಿಕ ಪ್ರೊಫೈಲ್ ಮಾಹಿತಿ, ನೆನಪುಗಳು ಮುಂತಾದವುಗಳಂತಹ ನಮ್ಮ ಸೇವೆಯ ಮೂಲಕ ನೀವು ಕಳುಹಿಸಿದ ಯಾವುದೇ ಮಾಹಿತಿಯನ್ನು ಕೂಡ ನಮಗೆ ಒದಗಿಸುತ್ತೀರಿ. ನಿಮ್ಮ Snap ಗಳು, ಚಾಟ್‌ಗಳು ಮತ್ತು ಇತರ ಯಾವುದೇ ವಿಷಯವನ್ನು ನೋಡಿದ ಬಳಕೆದಾರರು ಆ ವಿಷಯವನ್ನು ಯಾವಾಗಲೂ ಉಳಿಸಬಹುದು ಅಥವಾ ಆ್ಯಪ್‌ನ ಹೊರಗಡೆ ನಕಲಿಸಬಹುದು ಎನ್ನುವುದನ್ನು ಯಾವಾಗಲೂ ಗಮನದಲ್ಲಿಟ್ಟುಕೊಳ್ಳಿ. ಹಾಗಾಗಿ, ಇಂಟರ್‌ನೆಟ್‌ಗೆ ಸಾರ್ವತ್ರಿಕವಾಗಿ ಅನ್ವಯಿಸುವ ಅದೇ ಸಾಮಾನ್ಯ ತಿಳುವಳಿಕೆಯು ನಮ್ಮ ಸೇವೆಗಳಿಗೂ ಅನ್ವಯಿಸುತ್ತದೆ: ಮತ್ತೊಬ್ಬರು ಉಳಿಸುವುದನ್ನು ಅಥವಾ ಹಂಚಿಕೊಳ್ಳುವುದನ್ನು ನೀವು ಬಯಸದಿರುವ ಸಂದೇಶಗಳನ್ನು ಕಳುಹಿಸಬೇಡಿ ಅಥವಾ ವಿಷಯವನ್ನು ಹಂಚಿಕೊಳ್ಳಬೇಡಿ.
ನೀವು ಬೆಂಬಲವನ್ನು ಸಂಪರ್ಕಿಸಿದಾಗ ಅಥವಾ ಬೇರೆ ಯಾವುದೇ ವಿಧಾನದಲ್ಲಿ ನಮ್ಮೊಂದಿಗೆ ಸಂವಹನ ನಡೆಸಿದಾಗ, ನೀವು ಒದಗಿಸುವ ಅಥವಾ ನಿಮ್ಮ ಪ್ರಶ್ನೆ ಬಗೆಹರಿಸಲು ನಮಗೆ ಅಗತ್ಯವಿರುವ ಯಾವುದೇ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ.
ನೀವು ನಮ್ಮ ಸೇವೆಗಳನ್ನು ಬಳಸಿದಾಗ ನಾವು ಪಡೆಯುವ ಮಾಹಿತಿ
ನೀವು ನಮ್ಮ ಸೇವೆಗಳನ್ನು ಬಳಸುವಾಗ, ನೀವು ಯಾವ ಸೇವೆಗಳನ್ನು ಬಳಸುತ್ತೀರಿ ಮತ್ತು ಅವುಗಳನ್ನು ಹೇಗೆ ಬಳಸುತ್ತೀರಿ ಎಂಬುದರ ಕುರಿತು ನಾವು ಮಾಹಿತಿಯನ್ನು ಸಂಗ್ರಹಿಸುತ್ತೇವೆ. ಉದಾಹರಣೆಗೆ, ನೀವು ನಿರ್ದಿಷ್ಟ ಕಥೆಯನ್ನು ವೀಕ್ಷಿಸಿದಿರಿ, ಸ್ಪಾಟ್‌ಲೈಟ್‌ನಲ್ಲಿ ಬೆಕ್ಕಿನ ವೀಡಿಯೊಗಳನ್ನು ವೀಕ್ಷಿಸಿದಿರಿ, ಒಂದಿಷ್ಟು ಸಮಯಾವಧಿಗೆ ನಿರ್ದಿಷ್ಟ ಜಾಹೀರಾತನ್ನು ನೋಡಿದಿರಿ, Snap ಮ್ಯಾಪ್ ಅನ್ವೇಷಿಸಿದಿರಿ ಮತ್ತು ಕೆಲವು Snap ಗಳನ್ನು ಕಳುಹಿಸಿದಿರಿ ಎನ್ನುವುದು ನಮಗೆ ತಿಳಿದಿರಬಹುದು. ನೀವು ನಮ್ಮ ಸೇವೆಗಳನ್ನು ಬಳಸುವಾಗ ನಾವು ಸಂಗ್ರಹಿಸುವ ಮಾಹಿತಿಯ ಪೂರ್ಣ ವಿವರಣೆ ಇಲ್ಲಿದೆ:
ಬಳಕೆಯ ಮಾಹಿತಿ. ನಮ್ಮ ಸೇವೆಗಳನ್ನು ಬಳಸಿಕೊಂಡು ನೀವು ನಡೆಸುವ ಚಟುವಟಿಕೆಯ ಬಗ್ಗೆ ನಾವು ಮಾಹಿತಿಯನ್ನು ಸಂಗ್ರಹಿಸುತ್ತೇವೆ. ಉದಾಹರಣೆಗೆ, ನಾವು ಇದರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಬಹುದು:
ನಮ್ಮ ಸೇವೆಗಳೊಂದಿಗೆ ನೀವು ಹೇಗೆ ಸಂವಹನ ನಡೆಸುತ್ತೀರಿ, ಉದಾಹರಣೆಗೆ ನೀವು ಯಾವ ಫಿಲ್ಟರ್‌ಗಳು ಅಥವಾ ಲೆನ್ಸ್‌ಗಳನ್ನು ನೋಡಿದಿರಿ ಅಥವಾ Snap ಗಳಿಗೆ ಅನ್ವಯಿಸಿದಿರಿ, ಯಾವ ಕಥೆಗಳನ್ನು ನೀವು ವೀಕ್ಷಿಸುತ್ತೀರಿ, ನೀವು Spectacles ಬಳಸುತ್ತಿದ್ದೀರಾ, My AI ಜೊತೆಗೆ ನಿಮ್ಮ ಸಂವಹನ ಅಥವಾ ನೀವು ಯಾವ ಹುಡುಕಾಟ ಪ್ರಶ್ನೆಗಳನ್ನು ಸಲ್ಲಿಸುತ್ತೀರಿ.
ಇತರ Snapchatter ಗಳ ಜೊತೆ ನೀವು ಹೇಗೆ ಸಂವಹನ ನಡೆಸುತ್ತೀರಿ, ಉದಾಹರಣೆಗೆ ಅವರ ಹೆಸರುಗಳು, ನಿಮ್ಮ ಸಂವಹನಗಳ ಸಮಯ ಮತ್ತು ದಿನಾಂಕ, ನಿಮ್ಮ ಸ್ನೇಹಿತರೊಂದಿಗೆ ನೀವು ವಿನಿಮಯ ಮಾಡಿಕೊಳ್ಳುವ ಸಂದೇಶಗಳ ಸಂಖ್ಯೆ, ನೀವು ಅತ್ಯಂತ ಹೆಚ್ಚು ಸಂದೇಶಗಳನ್ನು ಯಾವ ಸ್ನೇಹಿತರೊಂದಿಗೆ ವಿನಿಮಯ ಮಾಡಿಕೊಳ್ಳುತ್ತೀರಿ ಮತ್ತು ಸಂದೇಶಗಳೊಂದಿಗಿನ ನಿಮ್ಮ ಸಂವಹನಗಳು (ಉದಾಹರಣೆಗೆ ನೀವು ಒಂದು ಸಂದೇಶ ತೆರೆದಾಗ ಅಥವಾ ನೀವು ಸ್ಕ್ರೀನ್‌ಶಾಟ್ ಅನ್ನು ಸೆರೆಹಿಡಿದಿರಿ ಎಂದು ನಾವು ಪತ್ತೆಮಾಡಿದಾಗ).
ವಿಷಯ ಮಾಹಿತಿ. ನೀವು ನಮ್ಮ ಸೇವೆಗಳನ್ನು ಬಳಸುವಾಗ, ನೀವು ಕ್ಯಾಮೆರಾ ಅಥವಾ ಕ್ರಿಯೇಟಿವ್ ಟೂಲ್ಸ್ ಜೊತೆಗೆ ತೊಡಗಿಕೊಳ್ಳಬಹುದು ಮತ್ತು ಕಥೆಗಳು, Snap ಗಳು ಮತ್ತು ಇನ್ನಷ್ಟು ಸೇರಿದಂತೆ ವಿವಿಧ ಬಗೆಯ ವಿಷಯವನ್ನು ರಚಿಸಬಹುದು ಮತ್ತು ಹಂಚಿಕೊಳ್ಳಬಹುದು. ನಮ್ಮ ಸೇವೆಗಳಲ್ಲಿ ನೀವು ರಚಿಸುವ ಅಥವಾ ಒದಗಿಸುವ ವಿಷಯ ಹಾಗೂ ಕ್ಯಾಮೆರಾ ಮತ್ತು ಕ್ರಿಯೇಟಿವ್ ಟೂಲ್ಸ್ ಜೊತೆಗೆ ನಿಮ್ಮ ತೊಡಗಿಕೊಳ್ಳುವಿಕೆಯ ಕುರಿತು ನಾವು ಮಾಹಿತಿಯನ್ನು ಸಂಗ್ರಹಿಸುತ್ತೇವೆ. ಕೆಲವು ವಿಷಯಕ್ಕಾಗಿ, ಚಿತ್ರ, ವೀಡಿಯೊ ಮತ್ತು ಆಡಿಯೊದ ವಿಷಯ ಆಧರಿಸಿದ ಮಾಹಿತಿಯನ್ನು ಇದು ಒಳಗೊಂಡಿರಬಹುದು. ಉದಾಹರಣೆಗೆ, ನೀವು ಬಾಸ್ಕೆಟ್‌ಬಾಲ್ ಆಡುತ್ತಿರುವ ಸ್ಪಾಟ್‌ಲೈಟ್ Snap ಅನ್ನು ನೀವು ಪೋಸ್ಟ್ ಮಾಡಿದರೆ, ಬಾಸ್ಕೆಟ್‌ಬಾಲ್ ಕುರಿತು ನಾವು ಇತರ ಸ್ಪಾಟ್‌ಲೈಟ್ Snap ಗಳನ್ನು ನಾವು ನಿಮಗೆ ತೋರಿಸಬಹುದು. ಮೆಟಾಡೇಟಾ ಸೇರಿದಂತೆ, ವಿಷಯದ ಕುರಿತ ಇತರ ಮಾಹಿತಿಯನ್ನು ಕೂಡ ನಾವು ಸಂಗ್ರಹಿಸಬಹುದು — ಇದು ಸ್ವತಃ ವಿಷಯವನ್ನು ಕುರಿತಾದ, ಅದನ್ನು ಪೋಸ್ಟ್ ಮಾಡಿದ ದಿನಾಂಕ ಮತ್ತು ಸಮಯ ಹಾಗೂ ಅದನ್ನು ಯಾರು ವೀಕ್ಷಿಸಿದರು ಎಂಬಂತಹ ಮಾಹಿತಿಯಾಗಿದೆ.
ಸಾಧನ ಮಾಹಿತಿ. ನೀವು ಬಳಸುವ ಸಾಧನಗಳು ಮತ್ತು ಅದರ ಬಗ್ಗೆ ನಾವು ಮಾಹಿತಿಯನ್ನು ಸಂಗ್ರಹಿಸುತ್ತೇವೆ. ಉದಾಹರಣೆಗೆ, ನಾವು ಇವುಗಳನ್ನು ಸಂಗ್ರಹಿಸಬಹುದು:
ಹಾರ್ಡ್‌ವೇರ್ ಮಾದರಿ, ಆಪರೇಟಿಂಗ್ ಸಿಸ್ಟಮ್ ಆವೃತ್ತಿ, ಸಾಧನ ಮೆಮೊರಿ, ಜಾಹೀರಾತು ಗುರುತಿಸುವಿಕೆಗಳು, ಅನನ್ಯ ಅಪ್ಲಿಕೇಶನ್ ಗುರುತಿಸುವಿಕೆಗಳು, ಸ್ಥಾಪಿಸಲಾದ ಅಪ್ಲಿಕೇಶನ್‌ಗಳು, ಆ್ಯಪ್‌ಗಳು ಸಾಧನ ಗುರುತಿಸುವಿಕೆಗಳು, ಸಾಧನ ಬಳಕೆಯ ಡೇಟಾ, ಬ್ರೌಸರ್ ಪ್ರಕಾರ, ಸ್ಥಾಪಿಸಲಾದ ಕೀಬೋರ್ಡ್‌ಗಳು, ಭಾಷೆ, ಬ್ಯಾಟರಿ ಮಟ್ಟ ಮತ್ತು ಸಮಯ ವಲಯ ಮುಂತಾದ ನಿಮ್ಮ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಕುರಿತು ಮಾಹಿತಿ;
ಸಾಧನ ಸಂವೇದಕಗಳಾದ ಅಕ್ಸೆಲೆರೊಮೀಟರ್‌ಗಳು, ಗೈರೊಸ್ಕೋಪ್‌ಗಳು, ದಿಕ್ಸೂಚಿಗಳು, ಮೈಕ್ರೊಫೋನ್‌ಗಳು ಮತ್ತು ಹೆಡ್‌ಫೋನ್‌ಗಳಿಗೆ ನೀವು ಸಂಪರ್ಕಿಸಿದ್ದೀರಾ ಎಂಬಂತಹ ಮಾಹಿತಿ; ಮತ್ತು
ಮೊಬೈಲ್ ಫೋನ್ ಸಂಖ್ಯೆ, ಸೇವಾ ಪೂರೈಕೆದಾರ, IP ವಿಳಾಸ ಮತ್ತು ಸಿಗ್ನಲ್ ಸಾಮರ್ಥ್ಯದಂತಹ ನಿಮ್ಮ ವೈಯರ್‌ಲೆಸ್ ಮತ್ತು ಮೊಬೈಲ್ ನೆಟ್‌ವರ್ಕ್ ಸಂಪರ್ಕಗಳ ಬಗ್ಗೆ ಮಾಹಿತಿಗಳು.
ಸಾಧನದ ಪೋನ್‌ಬುಕ್. ನಮ್ಮ ಸೇವೆಗಳು ಸ್ನೇಹಿತರೊಂದಿಗೆ ಸಂವಹನ ನಡೆಸುವ ಕುರಿತಾಗಿರುವುದರಿಂದ, ನಾವು — ನಿಮ್ಮ ಅನುಮತಿಯೊಂದಿಗೆ — ನಿಮ್ಮ ಸಂಪರ್ಕಗಳು ಮತ್ತು ಸಂಬಂಧಿಸಿದ ಮಾಹಿತಿಗಳಂತಹ ಮಾಹಿತಿಯನ್ನು ನಿಮ್ಮ ಸಾಧನದ ಫೋನ್‌ಬುಕ್‌ನಿಂದ ಸಂಗ್ರಹಿಸಬಹುದು.
ಕ್ಯಾಮೆರಾ, ಫೋಟೋಗಳು ಮತ್ತು ಆಡಿಯೋ. ನಮ್ಮ ಹಲವು ಸೇವೆಗಳಿಗೆ ನಿಮ್ಮ ಸಾಧನದ ಕ್ಯಾಮೆರಾ, ಫೋಟೋಗಳು ಮತ್ತು ಮೈಕ್ರೋಫೋನ್‌ನಿಂದ ಚಿತ್ರಗಳು ಮತ್ತು ಇತರ ಮಾಹಿತಿಯನ್ನು ನಾವು ಸಂಗ್ರಹಿಸಬೇಕಾಗುತ್ತದೆ. ಉದಾಹರಣೆಗೆ, ನಿಮ್ಮ ಕ್ಯಾಮೆರಾ ಅಥವಾ ಫೋಟೋಗಳಿಗೆ ನಮಗೆ ಪ್ರವೇಶವಿಲ್ಲದಿದ್ದರೆ, ನಿಮ್ಮ ಕ್ಯಾಮೆರಾ ರೋಲ್‌ನಿಂದ Snaps ಕ್ಥಳುಹಿಸಲು ಅಥವಾ ಫೋಟೋಗಳನ್ನು ಅಪ್‌ಲೋಡ್ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ.
ಸ್ಥಳ ಮಾಹಿತಿ. ನೀವು ನಮ್ಮ ಸೇವೆಗಳನ್ನು ಬಳಸುವಾಗ ನಾವು ನಿಮ್ಮ ಸ್ಥಳದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಬಹುದು. ನಿಮ್ಮ ಅನುಮತಿಯೊಂದಿಗೆ, GPS ಸಂಕೇತಗಳಂತಹ ವಿಧಾನಗಳನ್ನು ಒಳಗೊಂಡ ನಿಮ್ಮ ನಿಖರ ಸ್ಥಳದ ಕುರಿತ ಮಾಹಿತಿಯನ್ನು ಕೂಡ ನಾವು ಸಂಗ್ರಹಿಸಬಹುದು.
ಕುಕೀಗಳು ಮತ್ತು ಇತರ ತಂತ್ರಜ್ಞಾನಗಳಿಂದ ಸಂಗ್ರಹಿಸುವ ಮಾಹಿತಿ. ಹೆಚ್ಚಿನ ಆನ್‌ಲೈನ್ ಸೇವೆಗಳು ಮತ್ತು ಮೊಬೈಲ್ ಅಪ್ಲಿಕೇಶನ್‌ಗಳಂತೆ, ನಿಮ್ಮ ಚಟುವಟಿಕೆ, ಬ್ರೌಸರ್ ಮತ್ತು ಸಾಧನದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ನಾವು ಕುಕೀಗಳು ಮತ್ತು ಇತರ ತಂತ್ರಜ್ಞಾನಗಳನ್ನು ವೆಬ್ ಬೀಕನ್‌ಗಳು, ವೆಬ್ ಸಂಗ್ರಹಣೆ ಮತ್ತು ಅನನ್ಯ ಜಾಹೀರಾತು ಗುರುತಿಸುವಿಕೆಗಳನ್ನು ನಾವು ಬಳಸಬಹುದು. ನಮ್ಮ ಪಾಲುದಾರರ ಮೂಲಕ ನಾವು ನೀಡುವ ಸೇವೆಗಳೊಂದಿಗೆ ನೀವು ಸಂವಹನ ನಡೆಸಿದಾಗ ಮಾಹಿತಿಯನ್ನು ಸಂಗ್ರಹಿಸಲು ನಾವು ಈ ತಂತ್ರಜ್ಞಾನಗಳನ್ನು ಬಳಸಬಹುದು, ಉದಾ. ಜಾಹೀರಾತು ಮತ್ತು ವಾಣಿಜ್ಯ ವೈಶಿಷ್ಟ್ಯತೆಗಳು. ಉದಾಹರಣೆಗೆ, ನಿಮಗೆ ಅತ್ಯಂತ ಪ್ರಸ್ತುತವಾದ ಜಾಹೀರಾತುಗಳನ್ನು ತೋರಿಸುವಾಗ ಇತರ ವೆಬ್‌ಸೈಟ್‌ಗಳಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ನಾವು ಬಳಸಬಹುದು. ಹೆಚ್ಚಿನ ವೆಬ್ ಬ್ರೌಸರ್‌ಗಳನ್ನು ಪೂರ್ವನಿಯೋಜಿತವಾಗಿ ಕುಕೀಗಳನ್ನು ಸ್ವೀಕರಿಸಲು ಹೊಂದಿಸಲಾಗಿದೆ. ನೀವು ಬಯಸಿದರೆ, ನಿಮ್ಮ ಬ್ರೌಸರ್ ಅಥವಾ ಸಾಧನದಲ್ಲಿನ ಸೆಟ್ಟಿಂಗ್‌ಗಳ ಮೂಲಕ ನೀವು ಸಾಮಾನ್ಯವಾಗಿ ಬ್ರೌಸರ್ ಕುಕೀಗಳನ್ನು ತೆಗೆದುಹಾಕಬಹುದು ಅಥವಾ ತಿರಸ್ಕರಿಸಬಹುದು. ಕುಕೀಗಳನ್ನು ತೆಗೆದುಹಾಕುವುದು ಅಥವಾ ತಿರಸ್ಕರಿಸುವುದು ನಮ್ಮ ಸೇವೆಗಳ ಲಭ್ಯತೆ ಮತ್ತು ಕ್ರಿಯಾತ್ಮಕತೆಯ ಮೇಲೆ ಪರಿಣಾಮ ಬೀರಬಹುದು ಎಂಬುದನ್ನು ನೆನಪಿನಲ್ಲಿಡಿ. ನಮ್ಮ ಸೇವೆಗಳಲ್ಲಿ ಮತ್ತು ನಿಮ್ಮ ಆಯ್ಕೆಗಳಲ್ಲಿ ನಾವು ಮತ್ತು ನಮ್ಮ ಪಾಲುದಾರರು ಕುಕೀಗಳನ್ನು ಹೇಗೆ ಬಳಸುತ್ತೇವೆ ಎನ್ನುವುದರ ಕುರಿತು ಇನ್ನಷ್ಟು ಮಾಹಿತಿಗಾಗಿ, ದಯವಿಟ್ಟು ನಮ್ಮ ಕುಕೀ ನೀತಿಯನ್ನು ಪರಿಶೀಲಿಸಿ.
ಲಾಗ್ ಮಾಹಿತಿ. ನೀವು ನಮ್ಮ ವೆಬ್‌ಸೈಟ್ ಬಳಸಿದಾಗ ನಾವು ಲಾಗ್ ಮಾಹಿತಿಯನ್ನು ಕೂಡ ಸಂಗ್ರಹಿಸಬಹುದು, ಉದಾಹರಣೆಗೆ:
ನೀವು ನಮ್ಮ ಸೇವೆಗಳನ್ನು ಹೇಗೆ ಬಳಸಿದ್ದೀರಿ ಎಂಬುದರ ಬಗ್ಗೆ ಮಾಹಿತಿ;
ಸಾಧನದ ಮಾಹಿತಿ, ಉದಾಹರಣೆಗೆ ನಿಮ್ಮ ವೆಬ್ ಬ್ರೌಸರ್ ವಿಧ ಮತ್ತು ಭಾಷೆ;
ನಿಮ್ಮ ಸಾಧನ ಅಥವಾ ಬ್ರೌಸರ್ ಅನ್ನು ಅನನ್ಯವಾಗಿ ಗುರುತಿಸಬಹುದಾದ ಕುಕೀಸ್ ಅಥವಾ ಇತರ ತಂತ್ರಜ್ಞಾನಗಳೊಂದಿಗೆ ಸಂಬಂಧಿಸಿ ಗುರುತಿಸುವಿಕೆಗಳು; ಮತ್ತು
ನಮ್ಮ ವೆಬ್‌ಸೈಟ್ ಅನ್ನು ನ್ಯಾವಿಗೇಟ್ ಮಾಡುವ ಮೊದಲು ಅಥವಾ ನಂತರ ನೀವು ಭೇಟಿ ನೀಡಿದ ಪುಟಗಳು.
ನಿಮ್ಮ ಅನುಮತಿಯೊಂದಿಗೆ, ಇತರ ಮಾಹಿತಿ. ನೀವು ನಮ್ಮ ಸೇವೆಗಳೊಂದಿಗೆ ಸಂವಹನ ನಡೆಸಿದಾಗ ಹೆಚ್ಚುವರಿ ಮಾಹಿತಿಯನ್ನು ಸಂಗ್ರಹಿಸಲು ನಾವು ನಿಮ್ಮ ಅನುಮತಿ ಕೇಳುವಂತಹ ಸಂದರ್ಭಗಳು ಇರಬಹುದು. ಉದಾಹರಣೆಗೆ, ನೀವು ನಮ್ಮ ಮೇಡ್ ಫಾರ್ ಮೀ ಪ್ಯಾನೆಲ್‌ನಲ್ಲಿ ಭಾಗವಹಿಸಲು ಬಯಸಿದರೆ ಅಥವಾ ಕೆಲವು ಡೇಟಾವನ್ನು ಸೂಕ್ಷ್ಮ ಎಂದು ಪರಿಗಣಿಸಲಾಗಿರುವ ಅಧಿಕಾರ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದರೆ, ನಾವು ನಿಮ್ಮ ಅನುಮತಿಯನ್ನು ಕೇಳುತ್ತೇವೆ ಮತ್ತು ಯಾವುದಾದರೂ ಇದ್ದಲ್ಲಿ, ಸೂಕ್ಷ್ಮ ಡೇಟಾ ಸೇರಿದಂತೆ ಯಾವ ಡೇಟಾವನ್ನು ನಾವು ಸಂಗ್ರಹಿಸುತ್ತಿದ್ದೇವೆ ಎನ್ನುವ ಕುರಿತು ನಾವು ನಿಮಗೆ ಮುನ್ಸೂಚನೆ ನೀಡುತ್ತೇವೆ.
ಥರ್ಡ್ ಪಾರ್ಟಿಗಳಿಂದ ನಾವು ಸಂಗ್ರಹಿಸಿದ ಮಾಹಿತಿ
ನಾವು ನಿಮ್ಮ ಬಗ್ಗೆ ಇತರ ಬಳಕೆದಾರರು, ನಮ್ಮ ಅಂಗಸಂಸ್ಥೆಗಳು ಮತ್ತು ಮೂರನೇ ವ್ಯಕ್ತಿಗಳಿಂದ ಮಾಹಿತಿಯನ್ನು ಸಂಗ್ರಹಿಸಬಹುದು. ಕೆಲವು ಉದಾಹರಣೆಗಳು ಇಲ್ಲಿವೆ:
ನಿಮ್ಮ Snapchat ಖಾತೆಯನ್ನು ನೀವು ಇನ್ನೊಂದು ಸೇವೆಗೆ ಲಿಂಕ್ ಮಾಡಿದರೆ (Bitmoji ಅಥವಾ ಥರ್ಡ್ ಪಾರ್ಟಿ ಅಪ್ಲಿಕೇಶನ್‌ನಂತಹ), ನೀವು ಆ ಸೇವೆಯನ್ನು ಹೇಗೆ ಬಳಸುವಿರಿ ಎಂಬಂತಹ ಇತರ ಸೇವೆಯಿಂದ ನಾವು ಮಾಹಿತಿಯನ್ನು ಪಡೆಯಬಹುದು.
ನಾವು ಜಾಹೀರಾತುದಾರರು, ಆ್ಯಪ್ ಡೆವಲಪರ್‌ಗಳು, ಪ್ರಕಾಶಕರು ಮತ್ತು ಇತರ ತೃತೀಯ ಪಕ್ಷಗಳಿಂದ ಮಾಹಿತಿಯನ್ನು ಪಡೆಯಬಹುದು. ಈ ಮಾಹಿತಿಯನ್ನು ನಾವು, ಜಾಹೀರಾತುಗಳ ಕಾರ್ಯಕ್ಷಮತೆಯನ್ನು ಗುರಿಯಾಗಿಸಲು ಅಥವಾ ಅಳೆಯಲು ನೆರವಾಗುವುದಕ್ಕೆ, ಬೇರೆ ವಿಧಾನಗಳಲ್ಲಿ ಬಳಸಿಕೊಳ್ಳಬಹುದು. ನಮ್ಮ ಗ್ರಾಹಕ ಸೇವಾ ಸೈಟ್‌ನಲ್ಲಿ ಈ ರೀತಿಯ ತೃತೀಯ-ಪಕ್ಷದ ಡೇಟಾದ ನಮ್ಮ ಬಳಕೆಯ ಕುರಿತು ನೀವು ಇನ್ನಷ್ಟು ತಿಳಿದುಕೊಳ್ಳಬಹುದು.
ಒಂದು ವೇಳೆ ಇನ್ನೊಬ್ಬ ಬಳಕೆದಾರ ತಮ್ಮ ಸಂಪರ್ಕ ಪಟ್ಟಿಯನ್ನು ಅಪ್‌ಲೋಡ್ ಮಾಡಿದರೆ, ನಾವು ನಿಮ್ಮ ಕುರಿತು ಸಂಗ್ರಹಿಸಿದ ಇತರ ಮಾಹಿತಿಯ ಜೊತೆಗೆ ಆ ಬಳಕೆದಾರರ ಸಂಪರ್ಕ ಪಟ್ಟಿಯಿಂದ ನಿಮ್ಮ ಕುರಿತ ಮಾಹಿತಿಯನ್ನು ಸಂಯೋಜಿಸಬಹುದು.
ನೀವು ನಮಗೆ ನಿಮ್ಮ ಸಂಪರ್ಕ ಮಾಹಿತಿಯನ್ನು ಒದಗಿಸಿದರೆ, ಇತರ ಮೆಸೇಜಿಂಗ್ ಫ್ಲ್ಯಾಟ್‌ಫಾರ್ಮ್‌ಗಳಲ್ಲಿ ನಾವು ನಿಮ್ಮೊಂದಿಗೆ ಸಂವಹನ ನಡೆಸಬಹುದೇ ಎನ್ನುವುದನ್ನು ನಿರ್ಧರಿಸಲು ನಾವು ಆ ಮಾಹಿತಿ ಮತ್ತು ತೃತೀಯ ಪಕ್ಷಗಳಿಂದ ಪಡೆದುಕೊಂಡ ಮಾಹಿತಿಯನ್ನು ಬಳಸಬಹುದು.
ನಮ್ಮ ಸೇವೆಯ ನಿಯಮಗಳು ಮತ್ತು ಕಮ್ಯುನಿಟಿ ಮಾರ್ಗಸೂಚಿಗಳ ಸಂಭಾವ್ಯ ಉಲ್ಲಂಘನೆಕಾರರ ಕುರಿತು, ವೆಬ್‌ಸೈಟ್ ಪ್ರಕಾಶಕರು, ಸಾಮಾಜಿಕ ನೆಟ್‌ವರ್ಕ್ ಪೂರೈಕೆದಾರರು, ಕಾನೂನು ಜಾರಿ ಸಂಸ್ಥೆ ಮತ್ತು ಇತರರು ಸೇರಿದಂತೆ, ತೃತೀಯ ಪಕ್ಷಗಳಿಂದ ನಾವು ಮಾಹಿತಿಯನ್ನು ಸ್ವೀಕರಿಸಬಹುದು.