Privacy, Safety, and Policy Hub

16+ ವಯಸ್ಸಿನ ಹದಿಹರೆಯದವರಿಗಾಗಿ ವರ್ಧಿತ ಸುರಕ್ಷತೆಗಳೊಂದಿಗೆ ಹಂಚಿಕೊಳ್ಳುವುದಕ್ಕೆ ಪರಿಚಯ, ಶಿಕ್ಷಣ ಮತ್ತು ಪೋಷಕರ ಟೂಲ್‌ಗಳನ್ನು Snapchat ಒದಗಿಸುತ್ತದೆ

ಸೆಪ್ಟೆಂಬರ್ 10, 2024

16 ಮತ್ತು 17 ವರ್ಷ ವಯಸ್ಸಿನ ಹದಿಹರೆಯದವರು ತಾವು ರಚಿಸುವ ವಿಷಯವನ್ನು ವಿಶಾಲ ಪ್ರೇಕ್ಷಕರೊಂದಿಗೆ ಹಂಚಿಕೊಳ್ಳಲು ಆಸಕ್ತರಾಗಿದ್ದರೆ, Snapchat ನಲ್ಲಿ ನಾವು ಸೀಮಿತ ಮಾರುಕಟ್ಟೆಗಳಲ್ಲಿ ಹೊಸ ಪ್ರಾಸ್ತಾವಿಕ ಅನುಭವವನ್ನು ಪರೀಕ್ಷಿಸಲು ಪ್ರಾರಂಭಿಸುತ್ತಿದ್ದೇವೆ. ನಮ್ಮ ಸಮುದಾಯದ ಪ್ರತಿಕ್ರಿಯೆಯಿಂದ  ತಿಳಿಸಿರುವಂತೆ, ವಿಚಾರಪೂರ್ಣ ರಕ್ಷಣೆಗಳ ಅನುಷ್ಠಾನದೊಂದಿಗೆ ನಿರ್ಮಿಸಲಾಗಿರುವ ತಮ್ಮ ಪ್ರೊಫೈಲ್‌ ಒಳಗೆ ಹೊಸ ಸಾರ್ವಜನಿಕವಾಗಿ ನೋಡಬಹುದಾದ ವಿಷಯ ಪುಟಕ್ಕೆ ವಿಷಯ ಪೋಸ್ಟ್ ಮಾಡಲು ಹಿರಿಯ ವಯಸ್ಸಿನ ಹದಿಹರೆಯವರಿಗೆ ಸಾಧ್ಯವಾಗುತ್ತದೆ. ಈ ಸಾಮರ್ಥ್ಯಗಳನ್ನು ನಿಧಾನವಾಗಿ ನಮ್ಮ ಸಮುದಾಯಕ್ಕೆ ಬಿಡುಗಡೆ ಮಾಡಲಾಗುತ್ತದೆ. 

ವಿಷಯವನ್ನು ಪೋಸ್ಟ್ ಮಾಡುವುದು 16+ Snapchatter ಗಳಿಗೆ ಹೇಗೆ ಭಿನ್ನವಾಗಿರುತ್ತದೆ:

Snapchat ನಲ್ಲಿ, ಪೋಸ್ಟ್ ಮಾಡಲು ಎರಡು ಪ್ರಾಥಮಿಕ ಮಾರ್ಗಗಳಿವೆ: ನಮ್ಮ ವಿಶಿಷ್ಟ ಕಥೆ ಫಾರ್ಮ್ಯಾಟ್ ಮತ್ತು ಅಲ್ಪಾವಧಿಯ ಸ್ಪಾಟ್‌ಲೈಟ್ ವೀಡಿಯೊಗಳು. 

ಈಗ 16+ ವಯಸ್ಸಿನ ಮತ್ತು ತಮ್ಮ ಸೃಜನಶೀಲತೆಯನ್ನು ಹಂಚಿಕೊಳ್ಳಲು ಬಯಸುವ ಹದಿಹರೆಯದವರು, ಹೆಚ್ಚುವರಿ ಸುರಕ್ಷತಾ ಕ್ರಮಗಳು ಜಾರಿಯಲ್ಲಿರುವ ಅವರ ಪ್ರೊಫೈಲ್ ಪುಟದ ಒಳಗೆ ಸಾರ್ವಜನಿಕವಾಗಿ ನೋಡಬಹುದಾದ ವಿಷಯ ಪುಟಕ್ಕೆ ಮರಳಿ ಗುಣಲಕ್ಷಣಗಳೊಂದಿಗೆ ಸಾರ್ವಜನಿಕ ಕಥೆಯನ್ನು ಪೋಸ್ಟ್ ಮಾಡಬಹುದು ಅಥವಾ ಸ್ಪಾಟ್‌ಲೈಟ್‌ಗೆ ವೀಡಿಯೊವನ್ನು ಹಂಚಿಕೊಳ್ಳಬಹುದು. ಅಲ್ಲಿ ಅವರು ತಮ್ಮ ಮೆಚ್ಚಿನ ಪೋಸ್ಟ್‌ಗಳನ್ನು ಪ್ರದರ್ಶಿಸಲು ತಮ್ಮ ಕಥೆಗಳು ಮತ್ತು ಸ್ಪಾಟ್‌ಲೈಟ್‌ಗಳನ್ನು ಉಳಿಸಬಹುದು. 

ಪ್ರತಿ Snap ಅನ್ನು ಎಲ್ಲಿ ಹಂಚಿಕೊಳ್ಳಲಾಗುತ್ತದೆ, ಅದನ್ನು ಯಾರು ನೋಡಬಹುದು ಮತ್ತು ಅದು Snapchatter ಗಳ ಪ್ರೊಫೈಲ್‌ಗೆ ಉಳಿಸಲ್ಪಡುತ್ತದೆಯೇ ಎನ್ನುವುದನ್ನು ನಿರ್ಧರಿಸಲು ಅವರಿಗೆ ಅವಕಾಶ ಕಲ್ಪಿಸುವ ಉದ್ದೇಶಪೂರ್ವಕ ಪೋಸ್ಟಿಂಗ್ ಆಯ್ಕೆಗಳೊಂದಿಗೆ ಅವರು ರಚಿಸುವ ಪ್ರತಿ ವಿಷಯದ ತುಣುಕಿನ ಮೇಲೆ ಅವರಿಗೆ ನಾವು ನಿಯಂತ್ರಣವನ್ನು ಒದಗಿಸುತ್ತೇವೆ. Snapchat ನಲ್ಲಿ, ಸಾರ್ವಜನಿಕವಾಗಿರಲು ಅಥವಾ ಖಾಸಗಿಯಾಗಿರಲು ಅದು ಯಾವಾಗಲೂ ಒಂದು ಬಾರಿಯ ಆಯ್ಕೆಗಿಂತ ಹೆಚ್ಚಿನದಾಗಿರುತ್ತದೆ. 

ಜವಾಬ್ದಾರಿಯುತ ರೀತಿಯಲ್ಲಿ ಸಾರ್ವಜನಿಕವಾಗಿ ಪೋಸ್ಟ್ ಮಾಡುವುದು ಎಂದರೆ ಏನು ಎನ್ನುವುದನ್ನು ಪರಿಚಯಿಸಲು ಈ ಹಿರಿಯ ವಯಸ್ಸಿನ ಹದಿಹರೆಯದವರಿಗೆ ಸಹಾಯ ಮಾಡಲು ನಾವು ಕಟ್ಟುನಿಟ್ಟಿನ ಸುರಕ್ಷತಾ ವ್ಯವಸ್ಥೆಗಳನ್ನು ರೂಪಿಸಿದ್ದೇವೆ:

  • ನೈಜ ಸ್ನೇಹಿತರೊಂದಿಗೆ ತೊಡಗಿಸಿಕೊಳ್ಳುವಿಕೆಗಾಗಿ ವಿನ್ಯಾಸಗೊಳಿಸಲಾಗಿದೆ: ಡೀಫಾಲ್ಟ್ ಆಗಿ, ಎಲ್ಲ Snapchatter ಗಳು ತಮ್ಮ ಪರಸ್ಪರ ಸ್ವೀಕರಿಸಿರುವ ಸ್ನೇಹಿತರು ಅಥವಾ ತಮ್ಮ ಫೋನ್‌ನಲ್ಲಿ ಉಳಿಸಿರುವ ಸಂಪರ್ಕಗಳೊಂದಿಗೆ ಮಾತ್ರ ನೇರವಾಗಿ ಸಂವಹನ ನಡೆಸಬಹುದು. ಸಾರ್ವಜನಿಕ ಪೋಸ್ಟಿಂಗ್ ಆಯ್ಕೆಗಳೊಂದಿಗೆ, ಹಿರಿಯ ವಯಸ್ಸಿನ ಹದಿಹರೆಯದವರಿಗೆ ತಮ್ಮನ್ನು ಅನುಸರಿಸುವವರಿಂದ ತಮ್ಮ ಸಾರ್ವಜನಿಕ ಕಥೆಗಳಲ್ಲಿ ಕಥೆ ಪ್ರತ್ಯುತ್ತರಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ, ಆದರೆ ಆ ಪ್ರತ್ಯುತ್ತರಗಳಿಂದ ನೇರ ಚಾಟ್‌ ಸಂಭಾಷಣೆಗಳಲ್ಲಿ ತೊಡಗಲು ಸಾಧ್ಯವಾಗುವುದಿಲ್ಲ. ನಿರ್ಮಿಸಿದವರಿಗೆ ತಲುಪುವುದಕ್ಕೆ ಮೊದಲು ಪ್ರತ್ಯುತ್ತರಗಳನ್ನು ಫಿಲ್ಟರ್ ಮಾಡಲಾಗುತ್ತದೆ – ಮತ್ತು 16 ಹಾಗೂ 17 ವಯಸ್ಸಿನ Snapchatter ಗಳಿಗೆ ಆ ಫಿಲ್ಟರಿಂಗ್ ಇನ್ನೂ ಕಟ್ಟುನಿಟ್ಟಿನದಾಗಿರುತ್ತದೆ. ಸಂವಹನವನ್ನು ಗೌರವಯುತ ಮತ್ತು ವಿನೋದಮಯವಾಗಿ ಇರಿಸಿಕೊಳ್ಳುವುಕ್ಕೆ ನೆರವಾಗಲು ಸಂಪೂರ್ಣವಾಗಿ ಪ್ರತ್ಯುತ್ತರಗಳನ್ನು ಆಫ್ ಮಾಡುವ ಅಥವಾ ವಿವಿಧ ಪದಗಳನ್ನು ನಿರ್ಬಂಧಿಸುವ ಆಯ್ಕೆಯನ್ನು ಕೂಡ Snapchatter ಗಳು ಹೊಂದಿರುತ್ತಾರೆ. Snapchatter ಗಳನ್ನು ಅನುಸರಿಸುವವರಿಂದ ಈ ಕಥೆ ಪ್ರತ್ಯುತ್ತರಗಳನ್ನು ಅವರ ಚಾಟ್‌ ಫೀಡ್‌ನಲ್ಲಿ ಅವರ ಖಾಸಗಿ ಸಂಭಾಷಣೆಗಳಿಂದ ಸಂಪೂರ್ಣವಾಗಿ ಪ್ರತ್ಯೇಕವಾಗಿ ಇರಿಸಲಾಗುತ್ತದೆ ಮತ್ತು ಹದಿಹರೆಯದವರ ನೈಜ ಸ್ನೇಹಿತರ ನೆಟ್‌ವರ್ಕ್‌ ಹೊರಗಿನ ವಯಸ್ಕರಿಂದ ಅನಪೇಕ್ಷಿತ ಸ್ನೇಹಿತರ ವಿನಂತಿಗಳಿಗಾಗಿ ಸಾರ್ವಜನಿಕವಾಗಿ ಹಂಚಿಕೊಂಡ ವಿಷಯವನ್ನು ದಾಳವಾಗದಂತೆ ತಡೆಯಲು ಸಹಾಯ ಮಾಡುವುದಕ್ಕೆ ನಾವು ಹೆಚ್ಚುವರಿ ರಕ್ಷಣೆಗಳನ್ನು ಹೊಂದಿದ್ದೇವೆ.  

  • ಸೀಮಿತ ವಿತರಣೆ: 16- ಮತ್ತು 17- ವಯಸ್ಸಿನವರಿಂದ ಸಾರ್ವಜನಿಕ ಕಥೆಗಳನ್ನು ಈಗಾಗಲೇ ಅವರ ಸ್ನೇಹಿತರು ಅಥವಾ ಫಾಲೋವರ್‌ಗಳಾಗಿರುವ Snapchatter ಗಳಿಗೆ ಮತ್ತು ಅವರು ಪರಸ್ಪರ ಸ್ನೇಹಿತರನ್ನು ಹೊಂದಿರುವ ಇತರ Snapchatter ಗಳಿಗೆ ಮಾತ್ರ ಶಿಫಾರಸು ಮಾಡಲಾಗುತ್ತದೆ. Snapchatter ಗಳಿಗೆ ಪ್ರಸ್ತುತವಾಗಿರುವ ವಿಷಯದೊಂದಿಗೆ ವೈಯಕ್ತಿಕಗೊಳಿಸಿದ ವೀಕ್ಷಣೆಯ ಅನುಭವವನ್ನು ಅವರು ಕಂಡುಕೊಳ್ಳುವ ನಮ್ಮ ಆ್ಯಪ್‌ನ ವಿಭಾಗವಾದ "Discover" ನಲ್ಲಿ ವಿಶಾಲ ಸಮುದಾಯಕ್ಕೆ ಈ ಸಾರ್ವಜನಿಕ ಕಥೆಗಳನ್ನು ವಿತರಣೆ ಮಾಡುವುದಿಲ್ಲ.

  • ಕನಿಷ್ಟ ಮಾಪನಗಳು: ಸಾರ್ವಜನಿಕ ಅನುಮೋದನೆಯ ಮಾಪನಗಳನ್ನು ಪಡೆದುಕೊಳ್ಳುವ ಒತ್ತಡದ ಬದಲಾಗಿ ಸೃಜನಶೀಲತೆಯ ಮೇಲೆ ಗಮನ ಕೇಂದ್ರೀಕರಿಸಲು, 16 - 17 ವಯಸ್ಸಿನ ಹದಿಹರೆಯದ Snapchatter ಗಳಿಗೆ ತಮ್ಮ ಕಥೆಗಳನ್ನು ಅಥವಾ ಸ್ಪಾಟ್‌ಲೈಟ್‌ಗಳನ್ನು ಎಷ್ಟು ಜನರು “ಮೆಚ್ಚಿನದಾಗಿಸಿದ್ದಾರೆ” ಎಂಬುದು ಕಾಣಿಸುವುದಿಲ್ಲ. 

  • ಪೂರ್ವಭಾವಿ ವಿಮರ್ಶೆ: ಹಿರಿಯ ವಯಸ್ಸಿನ ಹದಿಹರೆಯದವರಿಗೆ Snapchat ನ ವಿಷಯ ಮಾರ್ಗಸೂಚಿಗಳಿಗೆ ಪರಿಚಯದ ಅಗತ್ಯವಿರಬಹುದು ಎನ್ನುವುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಸಮಗ್ರವಾಗಿ ಆಲೋಚಿಸದೆ ಇರಬಹುದಾದ ವಿಷಯವನ್ನು ಪೋಸ್ಟ್ ಮಾಡುವುದರಿಂದ Snapchatter ಗಳನ್ನು ರಕ್ಷಿಸಲು ನಾವು ಬಯಸುತ್ತೇವೆ. ಸ್ಪಾಟ್‌ಲೈಟ್ ವೀಡಿಯೊಗಳನ್ನು ವಿಶಾಲವಾಗಿ ಶಿಫಾರಸು ಮಾಡುವುದಕ್ಕೆ ಮೊದಲು ನಾವು ಮಾನವರು ಮತ್ತು ತಂತ್ರಜ್ಞಾನ ಎರಡರ ವಿಮರ್ಶೆಯನ್ನು ಬಳಸಿಕೊಂಡು ಅವುಗಳನ್ನು ನಾವು ಪೂರ್ವಭಾವಿಯಾಗಿ ಮಿತಿಗೊಳಿಸುತ್ತೇವೆ.

  • ಪೋಷಕರ ಟೂಲ್‌ಗಳು: ನಮ್ಮ ಆ್ಯಪ್‌ನಲ್ಲಿನ ಪೋಷಕರ ಟೂಲ್‌ಗಳ ಕೇಂದ್ರವಾಗಿರುವ ಕೌಟುಂಬಿಕ ಕೇಂದ್ರದಲ್ಲಿ, ತಮ್ಮ 16 ಮತ್ತು 17 ವರ್ಷ ವಯಸ್ಸಿನ ಹದಿಹರೆಯದವರು ಸಕ್ರಿಯ ಸಾರ್ವಜನಿಕ ಕಥೆಯನ್ನು ಹೊಂದಿದ್ದಾರೆಯೇ ಅಥವಾ ಯಾವುದೇ ವಿಷಯವನ್ನು ತಮ್ಮ ಪುಟಕ್ಕೆ ಸಾರ್ವಜನಿಕವಾಗಿ ಪೋಸ್ಟ್ ಮಾಡಿದ್ದಾರೆಯೇ ಎಂದು ನೋಡಲು ಪೋಷಕರಿಗೆ ಶೀಘ್ರದಲ್ಲಿ ಸಾಧ್ಯವಾಗುತ್ತದೆ. ಸಾರ್ವಜನಿಕವಾಗಿ ವಿಷಯವನ್ನು ಹಂಚಿಕೊಳ್ಳುವುದು ಎಂದರೆ ಏನು ಎನ್ನುವ ಕುರಿತು ಮಹತ್ವದ ಸಂಭಾಷಣೆಗಳನ್ನು ನಡೆಸಲು ಮತ್ತು ಅವರಿಗೆ ಸೂಕ್ತವಾದುದು ಯಾವುದು ಎನ್ನುವ ಕುರಿತು ಚರ್ಚಿಸಲು ಕುಟುಂಬಗಳಿಗೆ ಸಹಾಯ ಮಾಡುವ ಸಲುವಾಗಿ ಈ ಹೊಸ ವೈಶಿಷ್ಟ್ಯವನ್ನು ವಿನ್ಯಾಸಗೊಳಿಸಲಾಗಿದೆ. 

ಇಂದು ಸಾರ್ವಜನಿಕವಾಗಿ ವಿಷಯವನ್ನು ಪೋಸ್ಟ್ ಮಾಡುವುದು – ಅದು ಹೊಸ ಉದ್ಯೋಗ ಅಪ್‌ಡೇಟ್ ಆಗಿರಬಹುದು ಅಥವಾ ಇತ್ತೀಚಿನ ಕುಟುಂಬ ರಜಾದಿನದ Snap ಗಳು ಆಗಿರಬಹುದು – ನಮ್ಮ ಪ್ರತಿದಿನದ ಅನುಭವದ ಸಾಮಾನ್ಯ ಭಾಗವಾಗಿದೆ. ವಿಶಾಲ ಡಿಜಿಟಲ್ ಸಂಭಾಷಣೆಯಲ್ಲಿ ಭಾಗವಹಿಸಲು ಹಾಗೂ ತಮ್ಮ ಅಭಿಪ್ರಾಯ, ಸೃಜನಶೀಲತೆ ಮತ್ತು ಪ್ರತಿಭೆಯನ್ನು ಹಂಚಿಕೊಳ್ಳಲು ಯುವಜನರು ಭಾರೀ ಆಸಕ್ತರಾಗಿದ್ದಾರೆ ಎನ್ನುವುದು ನಮಗೆ ತಿಳಿದಿದೆ. 

ಅತ್ಯುನ್ನತ ಸುರಕ್ಷತೆ ಮತ್ತು ಗೌಪ್ಯತೆಯ ಮಾನದಂಡಗಳನ್ನು ನಿರ್ವಹಿಸುವ ನಮ್ಮ ಬದ್ಧತೆಯನ್ನು ಎತ್ತಿಹಿಡಿಯುವ ವಿಚಾರಪೂರ್ಣ ಟೂಲ್‌ಗಳೊಂದಿಗೆ 16+ ವಯಸ್ಸಿನ Snapchatter ಗಳಿಗಾಗಿ ಆ ಸ್ವಯಂ-ಅಭಿವ್ಯಕ್ತಿಯನ್ನು ಸಾಧ್ಯವಾಗಿಸಲು ನಾವು ಬಯಸುತ್ತೇವೆ ಮತ್ತು ನಮ್ಮ ಪರೀಕ್ಷೆಯ ಕಲಿಕೆಗಳನ್ನು ಆಧರಿಸಿ ಈ ಅನುಭವವನ್ನು ಸುಧಾರಿಸುವುದನ್ನು ನಾವು ಮುಂದುವರಿಸುತ್ತೇವೆ.

ಸುದ್ದಿಗಳಿಗೆ ಹಿಂತಿರುಗಿ