Snapchatter ಗಳು ಸುರಕ್ಷಿತವಾಗಿರಲು ಸಹಾಯಮಾಡುವುದಕ್ಕಾಗಿ ನಮ್ಮ ಕ್ರಮಗಳು
4 ಅಕ್ಟೋಬರ್ 2024
Snap ನಲ್ಲಿ, ನಮ್ಮ ವೇದಿಕೆಯ ದುರ್ಬಳಕೆ ಮಾಡುವ ದುರುದ್ದೇಶಪೂರಿತ ಸಾಮರ್ಥ್ಯವನ್ನು ನಿರ್ಬಂಧಿಸುವುದಕ್ಕಾಗಿ ನಾವು ನಮ್ಮ ಸುರಕ್ಷತಾ ವ್ಯವಸ್ಥೆಗಳು ಮತ್ತು ವೇದಿಕೆಯ ನೀತಿಗಳನ್ನು ನಿರಂತರವಾಗಿ ವಿಕಸಿಸುತ್ತೇವೆ. ನಮ್ಮ ನಿಯಮಗಳನ್ನು ಉಲ್ಲಂಘಿಸುವ ಚಟುವಟಿಕೆಗಳನ್ನು ಪತ್ತೆಹಚ್ಚಲು ಮತ್ತು ತಡೆಗಟ್ಟಲು ನಾವು ಸುಧಾರಿತ ತಂತ್ರಜ್ಞಾನವನ್ನು ಬಳಸುತ್ತೇವೆ, ಸ್ನೇಹ ಬೆಳೆಸಿಕೊಳ್ಳುವ ಪ್ರಕ್ರಿಯೆಯಲ್ಲಿ ಘರ್ಷಣೆಯನ್ನು ಸೃಷ್ಟಿಸಲು ನಾವು ವಿನ್ಯಾಸ ತತ್ವಗಳನ್ನು ಅನ್ವಯಿಸುತ್ತೇವೆ, ನಾವು ಕಾನೂನು ಜಾರಿಯನ್ನು ಬೆಂಬಲಿಸುತ್ತೇವೆ, ಸರ್ಕಾರಿ ಪ್ರಾಧಿಕಾರಗಳೊಂದಿಗೆ ಸಹಕರಿಸುತ್ತೇವೆ, ಹಾಗೂ ಹದಿಹರೆಯದವರು ಮತ್ತು ನಮ್ಮ ಸಮುದಾಯದ ಎಲ್ಲಾ ಸದಸ್ಯರುಗಳ ಮೇಲೆಯೂ ಸಹ ಪರಿಣಾಮ ಬೀರುವ ಅತ್ಯಂತ ಗಂಭೀರ ಹಾನಿಗಳ ಕುರಿತು ಜಾಗೃತಿ ಮೂಡಿಸಲು ಮತ್ತು ಶಿಕ್ಷಣವನ್ನು ಒದಗಿಸಲು ಕೆಲಸ ಮಾಡುತ್ತೇವೆ.
ಹದಹರೆಯದವರನ್ನು ರಕ್ಷಿಸುವ ನಮ್ಮ ಜವಾಬ್ದಾರಿಯನ್ನು ನಾವು ಅತ್ಯಂತ ಗಂಭೀರವಾಗಿ ಪರಗಣಿಸುತ್ತೇವೆ. ಈ ಕೆಳಗಿನವುಗಳು ಸೇರಿದಂತೆ, ನಮ್ಮ ಕ್ರಮಗಳು ಬಹಳ ಗಮನಾರ್ಹವಾಗಿರುವವು:
I. ದುರುದ್ದೇಶಪೂರಿತ ಶಕ್ತಿಗಳಿಗಾಗಿ Snapchat ಒಂದು ಪ್ರತಿಕೂಲ ವಾತಾವರಣವನ್ನಾಗಿಸುವುದು
ಈ ವರ್ಷದ ಆರಂಭದಲ್ಲಿ ನಾವು ನಮ್ಮ ಸಮುದಾಯವನ್ನು, ಅದರಲ್ಲೂ ವಿಶೇಷವಾಗಿ ಹದಿಹರೆಯದ ಬಳಕೆದಾರರನ್ನು ಮತ್ತಷ್ಟು ಸಂರಕ್ಷಿಸಲು, ಹಾಗೂ Snapchat ಅನ್ನು ಅನನ್ಯವನ್ನಾಗಿಸುವಂತಹ ವಾಸ್ತವಿಕ ಜಗತ್ತಿನ ಸಂಬಂಧಗಳನ್ನು ಬಲಪಡಿಸಲು ಸಹಾಯಮಾಡುವ ಹೊಸ ವೈಶಿಷ್ಟ್ಯಗಳನ್ನು ಘೋಷಿಸಿದೆವು. ಆ ನವೀಕರಣಗಳಲ್ಲಿ ಈ ಕೆಲವು ಸೇರಿವೆ: ಸಂದೇಹ ಹುಟ್ಟಿಸುವ ಸಂಪರ್ಕಗಳ ಕುರಿತು ಆ್ಯಪ್‌ನೊಳಗೆ ನೀಡಲಾಗುವ ಎಚ್ಚರಿಕೆಗಳನ್ನು ವಿಸ್ತರಿಸಿದೆವು, ಸ್ನೇಹ ಬೆಳೆಸಿಕೊಳ್ಳುವ ಪ್ರಕ್ರಿಯೆಯಲ್ಲಿ ನಿರ್ದಿಷ್ಟವಾಗಿ ಹದಿಹರೆಯದವರಿಗಾಗಿ ನಿರ್ಮಿಸಲಾದ ಸಂರಕ್ಷಣೆಗಳನ್ನು ವರ್ಧಿಸಿದೆವು, ಹಾಗೂ ಅನಗತ್ಯವಿರುವ ಸಂಪರ್ಕಗಳನ್ನು ನಿರ್ಬಂಧಿಸಲು ಲಭ್ಯವಿರುವ ಸಮರ್ಥ್ಯವನ್ನು ಸುಧಾರಿಸಿದೆವು.
ಆನ್‌ಲೈನ್ ಲೈಂಗಿಕ ಸುಲಿಗೆಯ ವಿರುದ್ಧದ ಹೋರಾಟದ ಮೇಲೆ ಕೇಂದ್ರೀಕರಿಸುವ ಈ ಮಾರ್ಪಾಡುಗಳು ಮಕ್ಕಳ ಲೈಂಗಿಕ ಶೋಷಣೆ ಮತ್ತು ಅವರ ಮೇಲಿನ ದೌರ್ಜನ್ಯದ ಎಲ್ಲಾ ವಿಧಗಳ ವಿರುದ್ಧ ಹೋರಾಡಲು ನಮ್ಮ ನಿರಂತರ ಹೂಡಿಕೆಗಳ ಮುಂದುವರಿದ ಪ್ರಯತ್ನಗಳಾಗಿವೆ. ಉದಾಹರಣೆಗೆ:
ದುರುದ್ದೇಶಪೂರಿತ ವ್ಯಕ್ತಿಗಳು ಇತರರನ್ನು ಗುರಿಯಾಗಿಸಿ ಅವರನ್ನು ಬಲಿಪಶವನ್ನಾಗಿಸುವ ಮೊದಲೇ ಅಂತಹವರನ್ನು ಸಕ್ರಿಯವಾಗಿ ಗುರುತಿಸಿ ಹೊರತೆಗೆಯಲು ಸಾಧ್ಯವಾಗುವುದಕ್ಕಾಗಿ ನಾವು ಲೈಂಗಿಕ ಸುಲಿಗೆಯ ವರ್ತನೆಯನ್ನು ಗುರುತಿಸಲು ಸಂಕೇತಗಳನ್ನು ಬಳಸುತ್ತೇವೆ. ಇದು Snapchat ನಲ್ಲಿ PhotoDNA (ತಿಳಿದಿರುವ ಕಾನೂನುಬಾಹಿರ ಚಿತ್ರಗಳ ನಕಲುಗಳನ್ನು ಪತ್ತೆಹಚ್ಚಲು), CSAI Match (ತಿಳಿದಿರುವ ಕಾನೂನುಬಾಹಿರ ವೀಡಿಯೋಗಳ ನಕಲುಗಳನ್ನು ಪತ್ತೆಹಚ್ಚಲು) ಮತ್ತು ವಿಷಯದ ಸುರಕ್ಷತೆ API (ನಾವೀನ್ಯತೆಪೂರ್ಣ "ಹಿಂದೆ-ಎಂದಿಗೂ-ಹ್ಯಾಶ್ ಮಾಡಲಾಗಿಲ್ಲದ" ಚಿತ್ರಣಗಳನ್ನು ಪತ್ತೆಹಚ್ಚಲು ಸಹಾಯ ಮಾಡಲು) ವೈಶಿಷ್ಟ್ಯಗಳೂ ಸೇರಿದಂತೆ ತಿಳಿದಿರುವ ಮಕ್ಕಳ ಲೈಂಗಿಕ ಶೋಷಣೆ ಮತ್ತು ನಿಂದನೆಯ ಚಿತ್ರಣಗಳು (CSEAI) ಹರಡುವುದನ್ನು ತಡೆಯಲು ವಿನ್ಯಾಸಗೊಳಿಸಲಾದ ತಂತ್ರಜ್ಞಾನದ ಸದುಪಯೋಗವನ್ನು ಪಡೆಯುವುದು ಮತ್ತು ನಿಯೋಜಿಸುವುದಕ್ಕೆ ಹೆಚ್ಚುವರಿಯಾಗಿದೆ.
ನಾವು ದೀರ್ಘಕಾಲದಿಂದಲೂ ನಮ್ಮ ನಿಯಮಗಳನ್ನು ಉಲ್ಲಂಘಿಸುವ ವಿಷಯ ಮತ್ತು ಖಾತೆಗಳನ್ನು ಆ್ಯಪ್‌ನಲ್ಲಿಯೇ ವರದಿ ಮಾಡುವ ಸರಳ ಪ್ರಕ್ರಿಯೆಯನ್ನು ಒದಗಿಸಿದ್ದೇವೆ, ಆದಾಗ್ಯೂ ಲೈಂಗಿಕ ಸುಲಿಗೆಗೆ ಸಂಬಂಧಿಸಿದ ಹಾನಿಗಳ ವಿರುದ್ಧದ ನಮ್ಮ ಹೋರಾಟವನ್ನು ಬಲಗೊಳಿಸುವುದಕ್ಕಾಗಿ ನಾವು 2023 ರಲ್ಲಿ ಸುಧಾರಣೆಗಳನ್ನು ಅಳವಡಿಸಿದೆವು. ಕಳೆದ ವರ್ಷ, ನಾವು ಆ್ಯಪ್‌ನಲ್ಲಿಯೇ ವರದಿ ಮಾಡುವ ಚಾಟ್ ಪಠ್ಯ ವರದಿ ನೀಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆವು - ಇದು Snapchatter ಗಳಿಗೆ ತಮ್ಮ ಸಂಭಾಷಣೆಯಿಂದಲೇ ನೇರವಾಗಿ ಪ್ರತ್ಯೇಕ ಸಂದೇಶಗಳ ಕುರಿತು ವರದಿ ಮಾಡಲು ಅನುವು ಮಾಡಿಕೊಡುತ್ತದೆ. ನಾವು ಲೈಂಗಿಕ ಸುಲಿಗೆಯನ್ನು ವರದಿ ಮಾಡುವ ನಿರ್ದಿಷ್ಟ, ಸಿದ್ಧಪಡಿಸಿದ ಕಾರಣವನ್ನು ಸೇರಿಸುವುದಕ್ಕಾಗಿ ನಮ್ಮ ಆ್ಯಪ್‌ನಲ್ಲಿಯೇ ವರದಿ ಮಾಡುವ ಸಾಧನಗಳನ್ನು ವಿಸ್ತರಿಸಿದೆವು, ಹಾಗೂ CSEA-ವಿರುದ್ಧ ಹೋರಾಡುವ ಸರ್ಕಾರೇತರ ಸಂಸ್ಥೆಯಾಗಿರುವ ಥೊರ್ಣ್ ಇಂದ ದೊರೆತ ಸಲಹೆ ಮತ್ತು ಮಾರ್ಗದರ್ಶನವನ್ನು ಬಳಸಿ ಹದಿಹರೆಯದವರು ಮತ್ತು ಯುವ ಜನಾಂಗದವರಿಗೆ ಪರಿಚಿಯವಿರುವ ಪರಿಭಾಷೆಯಲ್ಲಿ ವರದಿ ಮಾಡುವ ("ಅವರು ನನ್ನ ನಗ್ನ ಚಿತ್ರಗಳನ್ನು ಸೋರಿಕೆ ಮಾಡಿದರು/ಮಾಡುವುದಾಗಿ ಬೆದರಿಸುತ್ತಿದ್ದಾರೆ") ಆಯ್ಕೆಯನ್ನು ಪ್ರಸ್ತುತಪಡಿಸಿದೆವು. ಇದರ ಪರಿಣಾಮವಾಗಿ, ನಮ್ಮ ಸಂಕೇತ-ಆಧಾರಿತ ಪತ್ತೆಹಚ್ಚುವಿಕೆ ಮತ್ತು ಜಾರಿ ವ್ಯವಸ್ಥೆಗಳೂ ಸೇರಿದಂತೆ, ನಮ್ಮ ಜಾರಿಗೊಳಿಸುವಿಕೆ ಕ್ರಮಗಳಿಗೆ ಮಾಹಿತಿ ನೀಡುವುದಕ್ಕಾಗಿ ಆ ವರದಿಗಳನ್ನು ಬಳಸಲಾಗುತ್ತದೆ. ನಾವು ಟ್ರೆಂಡ್‌ಗಳು, ಮಾದರಿಗಳು, ಮತ್ತು ಲೈಂಗಿಕ ಸುಲಿಗೆಗಳ ತಂತ್ರಗಳನ್ನು ವಿಶ್ಲೇಷಿಸುತ್ತೇವೆ, ಹಾಗೂ ಯಾವುದೇ ಖಾತೆಯು ನಿರ್ದಿಷ್ಟವಾದ ಲಕ್ಷಣಗಳನ್ನು ತೋರಿದರೆ, ಅದನ್ನು ಲೈಂಗಿಕ ಸುಲಿಗೆಗಾಗಿ ಪ್ರತಿಬಂಧಿಸಲಾಗುತ್ತದೆ.
ನಾವು 2022 ರಲ್ಲಿ ಬಿಡುಗಡೆ ಮಾಡಿದ ನಮ್ಮ ಕೌಟುಂಬಿಕ ಕೇಂದ್ರ ಸಾಧನಗಳ ಗುಚ್ಛವನ್ನು ಸುಧಾರಿಸುವುದು ಮತ್ತು ಅದಕ್ಕೆ ವೈಶಿಷ್ಟ್ಯಗಳನ್ನು ಸೇರಿಸುವುದನ್ನು ಮುಂದುವರಿಸುತ್ತಿದ್ದೇವೆ, ಈ ಸಾಧನಗಳನ್ನು ಬಳಸಿ ಪೋಷಕರು ತಮ್ಮ ಹದಿಹರೆಯದವರು Snapchat ನಲ್ಲಿ ಯಾರೊಂದಿಗೆ ಸ್ನೇಹ ಬೆಳೆಸಿದ್ದಾರೆ ಮತ್ತು ಅವರು ಇತ್ತೀಚೆಗೆ ಯಾರೊಂದಿಗೆ ಚಾಟ್ ಮಾಡಿದ್ದಾರೆ ಎಂಬುದನ್ನು ನೋಡಬಹುದು, ಹಾಗೂ ಅವರಿಗೆ ಕಳವಳ ಮೂಡಿಸುವ ಖಾತೆಗಳನ್ನು ಸುಲಭವಾಗಿ ವರದಿ ಮಾಡಬಹುದು. ಕೌಟುಂಬಿಕ ಕೇಂದ್ರದ ಕುರಿತು ನಮ್ಮ ಗುರಿಯು ಎಂದಿಗೂ ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರುವುದರ ಕುರಿತಾಗಿ ಪೋಷಕರು/ಪಾಲಕರು ಮತ್ತು ಹದಿಹರೆಯದವರ ನಡುವೆ ಮುಕ್ತ ಮತ್ತು ರಚನಾತ್ಮಕವಾದ ಚರ್ಚೆಗಳನ್ನು ಪ್ರಾರಂಭಿಸುವುದೇ ಆಗಿದೆ.
ನಾವು ಕಾನೂನು ಜಾರಿಗೊಳಿಸುವವರೊಂದಿಗೆ ನಿಕಟವಾಗಿ ಸಹಯೋಗ ನಡೆಸುತ್ತೇವೆ ಹಾಗೂ ನಮ್ಮ ಸಮುದಾಯವು ಸುರಕ್ಷಿತವಾಗಿರುವುದಕ್ಕಾಗಿ ನೆರವಾಗಲು 24/7 ಪ್ರಪಂಚದಾದ್ಯಂತ ಕಾರ್ಯನಿರ್ವಹಿಸುವ ನಮ್ಮ ಸುರಕ್ಷತೆ ಮತ್ತು ಕಾನೂನು ಜಾರಿ ಕಾರ್ಯಾಚರಣೆಗಳ ತಂಡಗಳಲ್ಲಿ ನಾವು ಭಾರೀ ಹೂಡಿಕೆ ಮಾಡುತ್ತಿದ್ದೇವೆ. ಉದಾಹರಣೆಗೆ, ನಮ್ಮ ವಿಶ್ವಾಸ ಮತ್ತು ಸುರಕ್ಷತಾ ತಂಡಗಳು 2020 ರಿಂದ ಗಾತ್ರದಲ್ಲಿ ದುಪ್ಪಟ್ಟಾಗಿವೆ, ಹಾಗೂ ಅದೇ ಸಮಯದಲ್ಲಿ ನಮ್ಮ ಕಾನೂನು ಜಾರಿ ಕಾರ್ಯನಿರ್ವಹಣಾ ತಂಡವು ಮೂರು ಪಟ್ಟು ಹೆಚ್ಚಾಗಿದೆ. ನಮ್ಮ ವೇದಿಕೆಯ ಮೇಲೆ ನಡೆಯುತ್ತಿರಬಹುದಾದ ಯಾವುದೇ ಅಕ್ರಮ ಚಟುವಟಿಕೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ವಿಧಾನಗಳ ಕುರಿತು ಅಮೇರಿಕಾದ ಅಧಿಕಾರಿಗಳು ಮತ್ತು ಸಂಸ್ಥೆಗಳಿಗೆ ಅರಿವು ಇರುವುದಾಗಿ ಖಚಿತಪಡಿಸಿಕೊಳ್ಳಲು ನಾವು ಕಾನೂನು ಜಾರಿ ಸಂಸ್ಥೆಗಳಿಗಾಗಿ ವಾರ್ಷಿಕ ಶೃಂಗ ಸಭೆಗಳನ್ನು ಆಯೋಜಿಸುತ್ತೇವೆ.
ನಾವು ಲೈಂಗಿಕ ಸುಲಿಗೆಯ ಬಹಳಷ್ಟು ಪ್ರಕರಣಗಳ ಮೂಲವಾಗಿರುವ ನೈಜೀರಿಯಾದಲ್ಲಿನ ಕಾನೂನು ಜಾರಿ ಸಂಸ್ಥೆಯೊಂದಿಗೂ ಸಹ ನೇರವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ, ಹಾಗೂ ಆ ಮೂಲಕ ದುಷ್ಕೃತ್ಯವೆಸಗುವವರ ಕುರಿತು ತನಿಖೆ ನಡೆಸಿ ಅವರ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸಲು ಸಾಮರ್ಥ್ಯ ಮತ್ತು ಜ್ಞಾನಗಳನ್ನು ನಿರ್ಮಿಸುವುದಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದೇವೆ, ಹಾಗೂ ಈ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಹಯೋಗವನ್ನು ಸಾಧಿಸುವುದಕ್ಕಾಗಿ ನೈಜೀರಿಯಾದ ಸರ್ಕಾರದೊಂದಿಗೆ ನಮ್ಮ ಕಾರ್ಯಾಚರಣೆಗಳನ್ನು ಮುಂದುವರಿಸುವ ಕುರಿತು ಯೋಜನೆ ರೂಪಿಸುತ್ತಿದ್ದೇವೆ. ಹಾಗೂ, ಲೈಂಗಿಕ ಸುಲಿಗೆಯ ಚಟುವಟಿಕೆಗಳು ಹೆಚ್ಚು ಪ್ರಚಲಿತವಿರುವ ಅಮೇರಿಕಾದ ಹೊರಗಿನ ದೇಶಗಳಲ್ಲಿ ಸೈಬರ್ ಸಲಹೆಗಳಿಗೆ ಸಂಬಂಧಿಸಿದ ತನಿಖೆ ನಡೆಸುವುದರ ಕುರಿತಾಗಿ ತರಬೇತಿ ನೀಡುವುದಕ್ಕಾಗಿ ನಾವು ಅಂತರರಾಷ್ಟ್ರೀಯ ನ್ಯಾಯ ನಿಯೋಗ, NCMEC, ಉದ್ಯಮದ ಇತರ ಸದಸ್ಯರು, ಹಾಗೂ ಸರ್ಕಾರೇತರ ಸಂಸ್ಥೆಗಳೊಂದಿಗೆ ಕಾರ್ಯ ನಿರ್ವಹಿಸಿದ್ದೇವೆ.
ಹಲವು ವರ್ಷಗಳಿಂದ, ನಾವು "ವಿಶ್ವಾಸಾರ್ಹ ಸುಳಿವು ನೀಡುವ" ಒಂದು ದೃಢವಾದ ನುರಿತ ತಂಡದೊಂದಿಗೆ ಕಾರ್ಯನಿರ್ವಹಿಸಿದ್ದೇವೆ: ಉನ್ನತ-ಆದ್ಯತೆಯ ವಾಹಿನಿಗಳ ಮೂಲಕ ಅಗತ್ಯವಿರುವ Snapchatter ಗಳ ಪರವಾಗಿ ದುರುಪಯೋಗದ ಪ್ರಕರಣಗಳು, ಜೀವಕ್ಕೆ ಸನ್ನಿಹಿತ ಬೆದರಿಕೆಗಳು ಮತ್ತು ಇತರ ತುರ್ತು ಸಮಸ್ಯೆಗಳ ಕುರಿತು ನಮಗೆ ಮಾಹಿತಿ ನೀಡುವ ಲಾಭ ಅರಸದ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು ಮತ್ತು ಆಯ್ದ ಸರ್ಕಾರಿ ಸಂಸ್ಥೆಗಳು. ನಮ್ಮ ನಂಬಿಕಸ್ಥ ಮಾಹಿತಿ ನೀಡುವವರ ಯೋಜನೆಯಲ್ಲಿನ ಗರಿ಼ಷ್ಠ ಭಾಗೀದಾರರು ಅಪ್ರಾಪ್ತ ವಯಸ್ಕರ ವಿರುದ್ಧ ನಡೆಯುವ ಲೈಂಗಿಕ ಸುಲಿಗೆ ಸೇರಿದಂತೆ ಲೈಂಗಿಕತೆ-ಸಂಬಂಧಿತ ಹಾನಿಗಳ ಕುರಿತು ವಿಷಯ ಮತ್ತು ಮಾಹಿತಿಗಳನ್ನು ವರದಿ ಮಾಡುತ್ತಾರೆ.
II. ಉದ್ಯಮ ಪರಿಣತರು ಮತ್ತು ಒಕ್ಕೂಟಗಳ ಸಹಯೋಗ ಪಡೆಯುವುದು
ನಮ್ಮ ಸ್ವಂತ ಹೂಡಿಕೆಗಳಲ್ಲದೆ, ನಾವು ವಿಶ್ವಾದ್ಯಂತದ ಪರಿಣತರೊಂದಿಗೂ ಕೂಡ ಸಹಯೋಗ ಸಾಧಿಸುತ್ತೇವೆ, ಏಕೆಂದರೆ ಯಾವುದೇ ಒಂದು ಘಟಕ ಅಥವಾ ಸಂಘಟನೆಯು ಮಾತ್ರ ಈ ಸಮಸ್ಯೆಗಳನ್ನು ಅರ್ಥಪೂರ್ಣವಾಗಿ ಸುಧಾರಿಸಲು ಆಗುವುದಿಲ್ಲ ಎಂದು ನಮಗೆ ತಿಳಿದಿದೆ. ಉದಾಹರಣೆಗೆ, Snap ವೀಪ್ರೊಟೆಕ್ಟ್ ಜಾಗತಿಕ ಮೈತ್ರಿಯ ಅಂತರರಾಷ್ಟ್ರೀಯ ನೀತಿ ಮಂಡಳಿಯಲ್ಲಿ ನಮ್ಮ ಉದ್ಯಮವನ್ನು ಪ್ರತಿನಿಧಿಸುತ್ತದೆ; ನಾವು INHOPE ನ ಸಲಹಾ ಮಂಡಳಿಯ ಸದಸ್ಯರಾಗಿದ್ದೇವೆ, ಹಾಗೂ UK ಇಂಟರ್ನೆಟ್ ಪರಿವೀಕ್ಷಣಾ ಪ್ರತಿಷ್ಠಾನದ (IWF) ಟ್ರಸ್ಟಿಗಳ ಮಂಡಳಿಯಲ್ಲಿ ಸ್ಥಾನ ಹೊಂದಿದ್ದೇವೆ. ಈ ಎಲ್ಲ ಸಂಸ್ಥೆಗಳು ಆನ್‌ಲೈನ್ CSEA ನಿರ್ಮೂಲನೆಯನ್ನು ತಮ್ಮ ಧ್ಯೇಯವನ್ನಾಗಿ ಹೊಂದಿವೆ.
ನಾವು ಆನ್‌ಲೈನ್ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೂಷಣೆಯ ವಿರುದ್ಧ ಹೋರಾಟದ ಮೇಲೆ ಕೇಂದ್ರೀಕರಿಸುವ ಜಾಗತಿಕ ಉದ್ಯಮದ ಮೈತ್ರಿಯಾಗಿರುವ ತಾಂತ್ರಿಕ ಒಕ್ಕೂಟದ ಸಕ್ರಿಯ ಸದಸ್ಯರಾಗಿದ್ದೇವೆ, ಹಾಗೂ ಇತ್ತೀಚೆಗೆ ಅದರ ನಿರ್ದೇಶಕರ ಮಂಡಳಿಯ ಕಾರ್ಯನಿರ್ವಾಹಕ ಸಮಿತಿಯಲ್ಲಿ ಎರಡು-ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ್ದೇವೆ. ನಾವು ಸಂಸ್ಥೆಗಳು ತಮ್ಮ ಮಕ್ಕಳ ಸುರಕ್ಷತಾ ನೀತಿಗಳನ್ನು ಜಾರಿಗೊಳಿಸುವ ವಿಧಾನಗಳನ್ನು ಬಲಪಡಿಸಲು ಸಂಸ್ಥೆಗಳಿಗಾಗಿ ಸ್ಥಾಪಿಸಲಾದ ಮೊದಲ OS ಮತ್ತು ಸಾಧನಗಳಲ್ಲಿ ಕಾರ್ಯನಿರ್ವಹಿಸುವ ಸಂಕೇತ-ಹಂಚಿಕೊಳ್ಳುವ ಯೋಜನೆಯಾಗಿರುವ ತಾಂತ್ರಿಕ ಒಕ್ಕೂಟದ ಲ್ಯಾಂಟರ್ನ್ ಉಪಕ್ರಮದ ಸ್ಥಾಪಕ ಸದಸ್ಯರು ಕೂಡ ಆಗಿದ್ದೆವು. ಈ ಯೋಜನೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ, ಸಂಸ್ಥೆಗಳು ಲೈಂಗಿಕ ಸುಲಿಗೆ ನಡೆಸುವ ವ್ಯಕ್ತಿಗಳೂ ಸೇರಿದಂತೆ, ದುರುದ್ದೇಶಪೂರಿತ ವ್ಯಕ್ತಿಗಳಿಗಾಗಿ ಪರಿಶೀಲನೆ ನಡೆಸುವಲ್ಲಿ ಪರಸ್ಪರರಿಗೆ ಸಹಾಯ ಮಾಡಬಹುದು.
ಅದರೊಂದಿಗೆ, ನಾವು ಅಪ್ರಾಪ್ತ ವಯಸ್ಕರಿಗೆ ಆಯ್ದ ಚಿತ್ರಗಳು ಅಥವಾ ವೀಡಿಯೋಗಳ "ಹ್ಯಾಶ್" ಎಂದು ಕರೆಯಲ್ಪಡುವ ಡಿಜಿಟಲ್ ಹೆಜ್ಜೆಗುರುತನ್ನು ನೇರವಾಗಿ ತಮ್ಮ ಸಾಧನಗಳಲ್ಲಿ ಉತ್ಪಾದಿಸಲು ಅನುಮತಿಸುವ ಕಾಣೆಯಾದ ಮತ್ತು ಶೋಷಿತ ಮಕ್ಕಳ ರಾಷ್ಟ್ರೀಯ ಕೇಂದ್ರದ (NCMEC) ಟೇಕ್ ಇಟ್ ಡೌನ್ ಡೇಟಾಬೇಸ್‌ನ ಪ್ರಯೋಜನ ಪಡೆದುಕೊಳ್ಳುತ್ತೇವೆ. Snap ಸೇರಿದಂತೆ, ಭಾಗವಹಿಸುವ ಸಂಸ್ಥೆಗಳು ನಂತರ ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಚಿತ್ರಗಳಿಗಾಗಿ ಹುಡುಕಲು ಮತ್ತು ನಕಲು ಚಿತ್ರಗಳನ್ನು ತೆಗೆದುಹಾಕಲು ಆ ಹ್ಯಾಶ್‌ಗಳನ್ನು ಬಳಸಬಹುದಾಗಿದೆ. ನಾವು UK ಯಲ್ಲಿ ಇಂತಹುದೇ ಒಂದು ಕಾರ್ಯಕ್ರಮ ರಿಪೋರ್ಟ್ ರಿಮೂವ್‌ನಲ್ಲಿ ಭಾಗವಹಿಸುತ್ತಿದ್ದೇವೆ, ಹಾಗೂ ಕಳೆದ ವರ್ಷ, ನಾವು SWGfL ನ StopNCII ಸಹಯೋಗವನ್ನು ಸೇರಿ ನಾವು ಆ ಗುಂಪಿನ ಹ್ಯಾಶ್ ಡೇಟಾಬೇಸ್ ಅನ್ನು ಬಳಸುವ ಮೂಲಕ Snapchat ನಲ್ಲಿ ಸಮ್ಮತಿಯಿಲ್ಲದ ನಿಕಟ ಚಿತ್ರಣ (NCII) ಹರಡುವುದನ್ನು ತಡೆಯಲು ಸಹಾಯ ಪಡೆದೆವು. StopNCII ಆ 18+ ರ ನಿಕಟ ಚಿತ್ರಣದ ಹರಡುವಿಕೆಯನ್ನು ನಿಲ್ಲಿಸಲು ಸಹಾಯ ಮಾಡುತ್ತದೆ, ಹಾಗೂ ಬಲಿಪಶುಗಳಾದವರಿಗೆ ತಮ್ಮ ಅತ್ಯಂತ ಖಾಸಗಿ ಛಾಯಾಚಿತ್ರಗಳು ಮತ್ತು ವೀಡಿಯೋಗಳ ಮೇಲೆ ತಮ್ಮ ಗೌಪ್ಯತೆಯನ್ನು ಮರುಪಡೆಯುವ ಸಾಮರ್ಥ್ಯವನ್ನು ನೀಡುತ್ತದೆ.
ಈ ವರ್ಷ ನಾವು ತಮ್ಮ ಶಾಲೆಗಳು ಮತ್ತು ಸಮುದಾಯಗಳಲ್ಲಿ ಸುರಕ್ಷಿತ ಆನ್‌ಲೈನ್ ಅಭ್ಯಾಸಗಳು ಮತ್ತು ಪದ್ಧತಿಗಳನ್ನು ಸಮರ್ಥಿಸುವ ಒಂದು ವರ್ಷದ ಅವಧಿಯ ಪ್ರಾಯೋಗಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಯ್ಕೆ ಮಾಡಲಾದ U.S. ನಲ್ಲಿನ ವಿವಧ ಕಡೆಗಳಲ್ಲಿನ 18 ಹದಿಹರೆಯದವರ ಒಂದು ಗುಂಪಾಗಿರುವ ಡಿಜಿಟಲ್ ಯೋಗಕ್ಷೇಮಕ್ಕಾಗಿ ನಮ್ಮ ಪ್ರಥಮ Snap ಮಂಡಳಿಯನ್ನು ಪ್ರಾರಂಭಿಸಿದೆವು. ಜುಲೈನಲ್ಲಿ, ಈ ಗುಂಪಿನವರು ಕನಿಷ್ಠ ಒಂದು ಪೋಷಕರು ಅಥವಾ ಸಂರಕ್ಷಕರೊಂದಿಗೆ, ಸ್ಯಾಂಟಾ ಮೋನಿಕಾದಲ್ಲಿರುವ Snap ನ ಕೇಂದ್ರ ಕಛೇರಿಯಲ್ಲಿ ಆನ್‌ಲೈನ್‌ನಲ್ಲಿನ ನ್ಯೂನ್ಯತೆಗಳು ಮತ್ತು ಸಾಮಾಜಿಕ ಕ್ರಿಯಾಶೀಲತೆ ಹಾಗೂ ಪೋಷಕರ ಸಾಧನಗಳ ವಿಷಯಗಳ ಕುರಿತು ಚರ್ಚಿಸಲು ಭೇಟಿ ಮಾಡಿ ಚರ್ಚೆಯಲ್ಲಿ ಭಾಗವಹಿಸಿದರು ಹಾಗೂ ಆ ಸಭೆಯಲ್ಲಿ ಸ್ವಾರಸ್ಯಮಯ ಒಳನೋಟಗಳನ್ನು ಪಡೆಯಲಾಯಿತು. ಇದು Snap ಗೆ ಸುರಕ್ಷತಾ ವಿಷಯಗಳಲ್ಲಿ ನೇರ ಮಾರ್ಗದರ್ಶನ ಮತ್ತು ನಿರ್ದೇಶನಗಳನ್ನು ನೀಡುವ 16 ವೃತ್ತಿಪರರು ಮತ್ತು ಮೂರು ಯುವ ಬೆಂಬಲಿತರನ್ನು ಒಳಗೊಂಡ Snap ನ ಸುರಕ್ಷತಾ ಸಲಹಾ ಮಂಡಳಿಗೆ ಹೆಚ್ಚುವರಿಯಾಗಿತ್ತು. ನಾವು 2025 ಕ್ಕಾಗಿ ಎದುರು ನೋಡುತ್ತಿದ್ದೇವೆ, ಹಾಗೂ ಆ ವರ್ಷದಲ್ಲಿ ಎರಡೂ ಗುಂಪುಗಳ ಸದಸ್ಯರು ಒಟ್ಟಾಗಿ ಹೆಚ್ಚುವರಿ ಒಳನೋಟಗಳನ್ನು ಹೊರಗೆಡವಲು ನಾವು ಅವರಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಬೇಕೆಂದು ಆಶಿಸುತ್ತಿದ್ದೇವೆ.
III. ಜಾಗೃತಗೊಳಿಸುವುದು
ನಮ್ಮ ಆಂತರಿಕ ಹೂಡಿಕೆಗಳು ಹಾಗೂ ಪರಿಣತರು ಮತ್ತು ಉದ್ಯಮದಲ್ಲಿನ ಇತರ ಸಂಸ್ಥೆಗಳೊಂದಿಗೆ ನಾವು ಕೈಗೊಳ್ಳುವ ಕಾರ್ಯಗಳನ್ನು ಹೊರತುಪಡಿಸಿ, ಆನ್‌ಲೈನ್ ಲೈಂಗಿಕ ದೌರ್ಜನ್ಯ ಮತ್ತು ಲೈಂಗಿಕ ಸುಲಿಗೆಯ ಯೋಜನೆಗಳ ವಿರುದ್ಧ ಹೋರಾಡುವುದರಲ್ಲಿ ಅಗತ್ಯವಿರುವ ಒಂದು ಮಹತ್ವದ ಅಂಶವೆಂದರೆ ಸಾರ್ವಜನಿಕರಲ್ಲಿ ಮತ್ತು Snapchatter ಗಳಲ್ಲಿ ಜಾಗೃತಿ ಮೂಡಿಸುವುದಾಗಿದೆ.
2022 ರಲ್ಲಿ, ಹದಿಹರೆಯದವರು ಮತ್ತು ಯುವ ವಯಸ್ಕರು ಅಸ್ತಿತ್ವದಲ್ಲಿರುವ ಎಲ್ಲಾ ಆನ್‌ಲೈನ್ ವೇದಿಕೆಗಳಲ್ಲಿ ಪಡೆಯುತ್ತಿರುವ ಅನುಭವಗಳ ಕುರಿತು ಒಳನೋಟಗಳನ್ನು ಒದಗಿಸುವ ಉದ್ಯಮದಲ್ಲಿಯೇ ಅತ್ಯುತ್ತಮ ಪರಿಶೋಧನೆಯಾದ ಡಿಜಿಟಲ್ ಕ್ಷೇಮಾಭಿವೃದ್ಧಿ ಸೂಚಿ ಯನ್ನು ನಾವು ಪ್ರಾರಂಭಿಸಿದೆವು. ಈ ಸಂಶೋಧನೆಯ ಭಾಗವಾಗಿ, ಕಳೆದ ಎರಡು ವರ್ಷಗಳಿಂದ ನಾವು ಲೈಂಗಿಕ ಸುಲಿಗೆಯ ಕುರಿತಾಗಿ ಆಳವಾದ ಸಂಶೋಧನೆಗಳನ್ನು ನಡೆಸಿದ್ದೇವೆ. ಈ ಅಧ್ಯಯನವು Snapchat ನಲ್ಲಿ ಮಾತ್ರವಲ್ಲದೆ ಇತರೆ ಸಾಮಾನ್ಯವಾದ ವೇದಿಕೆಗಳಲ್ಲಿನ ಅನುಭವಗಳನ್ನೂ ಸಹ ಒಳಗೊಳ್ಳುವುದರಿಂದ ಅದು ನಮ್ಮ ಕಾರ್ಯಗಳಿಗೆ ಮಾಹಿತಿ ನೀಡುವುದಲ್ಲದೆಯೇ ಈ ತಾಂತ್ರಿಕ ಪರಿಸರ ವ್ಯವಸ್ಥೆಯಲ್ಲಿನ ಇತರರಿಗೂ ಸಹ ಒಳನೋಟಗಳನ್ನು ಒದಗಿಸುವುದೆಂದು ನಾವು ಆಶಿಸುತ್ತೇವೆ. ಈ ತಿಂಗಳಲ್ಲಿನ ನಂತರದ ಭಾಗದಲ್ಲಿ, ನಾವು ಅಪ್ರಾಪ್ತ ವಯಸ್ಕರ ಆರ್ಥಿಕ ಲೈಂಗಿಕ ಸುಲಿಗೆಯ ಕುರಿತು ತಂತ್ರಜ್ಞಾನ ಒಕ್ಕೂಟದ ಮುಂಬರುವ ವಾಸ್ತವ ಬಹು-ಭಾಗೀದಾರರ ವೇದಿಕೆಯೊಂದಿಗೆ ಸಂಯೋಜಿತವಾಗಿ ಲೈಂಗಿಕ ಸುಲಿಗೆಯ ಕುರಿತಾದ ನಮ್ಮ ಎರಡನೇ ವರ್ಷದ ಆಳವಾದ ಸಂಶೋಧನೆಗಳ ಫಲಿತಾಂಶಗಳನ್ನು ಹಂಚಿಕೊಳ್ಳುತ್ತೇವೆ.
ಈ ವರ್ಷದ ಆರಂಭದಲ್ಲಿ U.S. ನ ತಾಯ್ನಾಡು ಭದ್ರತಾ ಇಲಾಖೆಯು ಈ ವರ್ಷದ ಆರಂಭದಲ್ಲಿ ಪ್ರಾರಂಭಿಸಿದ ಆ ರೀತಿಯ ಪ್ರಥಮ ಸಾರ್ವಜನಿಕ ಜಾಗೃತಿ ಅಭಿಯಾನವಾದ Know2Protect ಅನ್ನು ಬೆಂಬಲಿಸುವ ಪ್ರಥಮ ಘಟಕವಾಗುವ ಗೌರವ ನಮಗೆ ಒದಗಿತ್ತು. ಈ ಅಭಿಯಾನವು ಆರ್ಥಿಕ ಲೈಂಗಿಕ ಸುಲಿಗೆಯಂತಹ ಅಪರಾಧಗಳನ್ನು ತಡೆಗಟ್ಟಲು ಮತ್ತು ಅವುಗಳ ವಿರುದ್ಧ ಹೋರಾಡಲು ನೆರವಾಗುವುದಕ್ಕಾಗಿ ಯುವ ಜನರು, ಪೋಷಕರು, ವಿಶ್ವಾಸಾರ್ಹ ವಯಸ್ಕರು ಮತ್ತು ನೀತಿ ರಚನಾಕಾರರಿಗೆ ತಿಳುವಳಿಕೆ ನೀಡುತ್ತದೆ ಹಾಗೂ ಅಧಿಕಾರ ನೀಡುತ್ತದೆ. K2P ಶೈಕ್ಷಣಿಕ ಸಂಪನ್ಮೂಲಗಳಿಗಾಗಿ Snapchat ನಲ್ಲಿ ಜಾಹೀರಾತು ಸ್ಥಳವನ್ನು ನೀಡುವ ಜೊತೆಗೆ, ನಾವು ಅಭಿಯಾನದ ಕುರಿತು ಇನ್ನಷ್ಟು ಜಾಗೃತಿ ಮೂಡಿಸುವುದಕ್ಕಾಗಿ ಅಮೇರಿಕಾದ ಹದಿಹರೆಯದವರು ಮತ್ತು ಯುವ ವಯಸ್ಕರುಗಳೊಂದಿಗೆ ಹೆಚ್ಚುವರಿ ಸಂಶೋಧನೆಗಳನ್ನು ನಡೆಸುತ್ತಿದ್ದೇವೆ. Snapchatter ಗಳಿಗೆ ಅರಿವು ಮೂಡಿಸುವುದಕ್ಕಾಗಿ ಪರಸ್ಪರ ಸಂವಾದಾತ್ಮಕ Know2Protect ಎಂಬ ರಸಪ್ರಶ್ನೆಯ ಮೂಲಕ ನಾವು ವರ್ಧಿತ ವಾಸ್ತವ Snapchat ಲೆನ್ಸ್‌ವೊಂದನ್ನುಸಹ-ಬಿಡುಗಡೆ ಕೂಡ ಮಾಡಿದೆವು. ಹಾಗೂ UK ಯಲ್ಲಿ, ನಾವು ಈ ವಿಷಯಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ 11-ರಿಂದ 13 ಹುಡುಗಿಯರಿಗೆ ಆನ್‌ಲೈನ್ ಲೈಂಗಿಕ ನಿರ್ವಹಣೆ, ಲೈಂಗಿಕ ಸಂದೇಶಗಳ ವಿನಿಮಯ ಮತ್ತು ನಗ್ನ ಚಿತ್ರಗಳನ್ನು ಕಳುಹಿಸುವುದರ ಕುರಿತು ಮಾಹಿತಿ ನೀಡಲು ವಿನ್ಯಾಸಗೊಳಿಸಲಾದ ಹಾಗೂ ವ್ಯಾಪಕವಾಗಿ ತಲುಪುವ ಸಾರ್ವಜನಿಕ ಜಾಗೃತಿ ಮೂಡಿಸುವ ಅಭಿಯಾನವೊಂದಾದ IWFನ Gurls Out Loud ಅನ್ನು ಬೆಂಬಲಿಸಿದೆವು. ಜೊತೆಗೆ, ಲೈಂಗಿಕ ಸುಲಿಗೆಯ ವಿರುದ್ಧ ಹೋರಾಡುವ ಕುರಿತಾದ ಮಾಹಿತಿ ಮತ್ತು ಮಾರ್ಗದರ್ಶನವನ್ನು ಒಳಗೊಂಡಿರುವ ಶಿಕ್ಷಕರಿಗಾಗಿ ರಚಿಸಿರುವ ಸಮಗ್ರ ಟೂಲ್‌ಕಿಟ್‌ವೊಂದನ್ನು ರಚಿಸಲು ಸೇಫ್ ಅಂಡ್ ಸೌಂಡ್ ಸ್ಕೂಲ್ಸ್‌ನೊಂದಿಗಿನ ಪಾಲುದಾರಿಕೆಯಲ್ಲಿ Snapchat ಗೆ ಶಿಕ್ಷಕರ ಮಾರ್ಗದರ್ಶಿ ಯನ್ನು ನಾವು ಇತ್ತೀಚೆಗೆ ಬಿಡುಗಡೆ ಮಾಡಿದ್ದೇವೆ.
ವರ್ಷಗಳ ನಮ್ಮ ಸಂಶೋಧನೆಯ ಆಧಾರದ ಮೇಲೆ, ಆನ್‌ಲೈನ್ ಹಾನಿಗಳನ್ನು ತಡೆಗಟ್ಟಲು ಸಹಾಯ ಮಾಡುವಲ್ಲಿ ಜಾಗೃತಿ ಮೂಡಿಸುವುದು ಮತ್ತು ಸಮುದಾಯದ ಶಿಕ್ಷಣವು ಪ್ರಬಲ ಸಾಧನವಾಗಿರುವವು ಎಂದು ನಾವು ತಿಳಿದಿದ್ದೇವೆ, ಹಾಗೂ Snapchat ನಲ್ಲಿ ನೇರವಾಗಿ ಹದಿಹರೆಯದವರು ಮತ್ತು ಯುವ ಜನರನ್ನು ತಲುಪಲು ನಾವು ಆ್ಯಪ್‌ನಲ್ಲಿನ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಪ್ರೋತ್ಸಾಹಿಸುವುದನ್ನು ಮುಂದುವರಿಸಿದ್ದೇವೆ. ಸೆಪ್ಟೆಂಬರ್ 2023 ರಲ್ಲಿ, ನಾವು ಆರ್ಥಿಕ ಲೈಂಗಿಕ ಸುಲಿಗೆಯೂ ಸೇರಿದಂತೆ ಲೈಂಗಿಕ ಅಪಾಯಗಳು ಮತ್ತು ಹಾನಿಗಳ ಮೇಲೆ ಕೇಂದ್ರೀಕರಿಸುವ ನಾಲ್ಕು ಹೊಸ ಆ್ಯಪ್‌ನಲ್ಲಿ ವೀಕ್ಷಿಸಬಹುದಾದ "ಸುರಕ್ಷತಾ ಸ್ನ್ಯಾಪ್‌ಶಾಟ್" ಸಂಚಿಕೆಗಳನ್ನು ಬಿಡುಗಡೆ ಮಾಡಿದೆವು. ನಾವು ಲೈಂಗಿಕ ಸಂದೇಶಗಳ ವಿನಿಮಯ ಹಾಗೂ ನಗ್ನ ಚಿತ್ರಗಳನ್ನು ರಚಿಸುವ ಮತ್ತು ಹಂಚಿಕೊಳ್ಳುವುದರ ಪರಿಣಾಮಗಳು, ಲೈಂಗಿಕ ಉದ್ದೇಶಗಳಿಗಾಗಿ ಮಗುವಿನ ಆನ್‌ಲೈನ್ ನಿರ್ವಹಣೆ, ಹಾಗೂ ಮಕ್ಕಳ ಲೈಂಗಿಕ ಕಳ್ಳಸಾಗಣೆಗಳ ಕುರಿತು ಸಂಚಿಕೆಗಳನ್ನು ಸಹ ನೀಡುತ್ತೇವೆ. ಈ ಎಲ್ಲ ಸಂಪನ್ಮೂಲಗಳನ್ನು ಕಾಣೆಯಾದ ಮತ್ತು ಶೋಷಿತ ಮಕ್ಕಳ ರಾಷ್ಟ್ರೀಯ ಕೇಂದ್ರದಲ್ಲಿ (NCMEC) ತಜ್ಞರು ಪರಿಶೀಲಿಸಿದ್ದಾರೆ ಹಾಗೂ ಪ್ರಮುಖ ಭೂಪ್ರದೇಶಗಳಲ್ಲಿನ ಸೂಕ್ತ ಹಾಟ್‌ಲೈನ್‌ಗಳು ಮತ್ತು ಸಹಾಯವಾಣಿಗಳೊಂದಿಗಿನ ಸಹಯೋಗದಲ್ಲಿ ರಚಿಸಲಾಗಿದೆ.
ನಾವು ಆನ್‌ಲೈನ್ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯದ ವಿರುದ್ಧ ಹೋರಾಡುವುದನ್ನು ಮುಂದುವರಿಸುತ್ತಿದ್ದೇವೆ, ಆದರೆ ಸಾಧಿಸಲು ಇನ್ನೂ ಬಹಳಷ್ಟು ಉಳಿದಿದೆ. 2025 ರಲ್ಲಿ, ನಾವು ಸಂಭಾವ್ಯ ಆನ್‌ಲೈನ್ ಹಾನಿಗಳ ಕುರಿತು ಜಾಗೃತಿ ಮೂಡಿಸುವುದನ್ನು ಮುಂದುವರಿಸುತ್ತೇವೆ ಹಾಗೂ ಯಾರು ಬೇಕಾದರೂ ಸಂಭಾವ್ಯ ಗುರಿಯಾಗಬಹುದು ಎಂದು ಪುನರುಚ್ಚರಿಸುವುದನ್ನು ಮುಂದುವರಿಸುತ್ತೇವೆ. ನಾವು ಕೆಟ್ಟ ಶಕ್ತಿಗಳನ್ನು ಆರಂಭದಲ್ಲಿಯೇ ಮತ್ತು ಆಗಾಗ ಭಂಗಪಡಿಸಲು ಮತ್ತು ಅಡ್ಡಿಪಡಿಸಲು ಬಯಸುತ್ತೇವೆ, ಹಾಗೂ ಕಾನೂನು ಜಾರಿಗಾಗಿ ನಾವು ಇನ್ನೂ ಹೆಚ್ಚು ಕಾರ್ಯಸಾಧಿಸಬಹುದಾದ ಸೈಬರ್‌ಸಲಹೆಗಳನ್ನು ಉತ್ಪಾದಿಸಬೇಕೆಂದು ಬಯಸುತ್ತೇವೆ.
ನಕಲಿ ಮಾತ್ರೆಗಳ ಮಾರಾಟ, ಹಿಂಸೆಯ ಬೆದರಿಕೆಗಳು, ಹಾಗೂ ಆತ್ಮಹತ್ಯೆ ಮತ್ತು ಸ್ವಯಂ-ಹಾನಿಗೊಳಿಸಿಕೊಳ್ಳುವ ವಿಷಯಗಳೂ ಸೇರಿದಂತೆ ಅಕ್ರಮ ಮಾದಕ ವಸ್ತುಗಳ ಚಟುವಟಿಕೆಗಳಂತಹ ವಿಪರೀತ ಹಾನಿಗಳ ವಿರುದ್ಧ ನಾವು ಹೋರಾಡುವಾಗ ಇವುಗಳಲ್ಲಿನ ಅನೇಕ ಕಾರ್ಯತಂತ್ರಗಳನ್ನು ನಾವು ಬಳಸಿಕೊಳ್ಳಬೇಕಾಗುವುದೆಂದು ಗಮನಿಸುವುದು ಮುಖ್ಯವಾಗಿದೆ. ಈ ಕ್ಷೇತ್ರದಲ್ಲಿ ನಮ್ಮ ಕೆಲಸಗಳು ಎಂದಿಗೂ ಮುಗಿಯುವುದಿಲ್ಲವೆನ್ನುವುದನ್ನು ನಾವು ಅರಿತಿದ್ದೇವೆ, ಆದರೆ ನಾವು Snapchatter ಗಳ ಸುರಕ್ಷತೆಯ ಕುರಿತು ಆಳವಾಗಿ ಕಾಳಜಿ ವಹಿಸುತ್ತೇವೆ, ಹಾಗೂ ಮಾಹಿತಿಯ ವಿನಿಮಯಕ್ಕಾಗಿ ಮತ್ತು ನಮ್ಮ ರಕ್ಷಣಾತ್ಮಕ ಕ್ರಮಗಳನ್ನು ಬಲಪಡಿಸುವುದಕ್ಕಾಗಿ ನಾವು ಉದ್ಯಮ, ಸರ್ಕಾರ, ಮತ್ತು ಕಾನೂನು ಜಾರಿಗಳಾದ್ಯಂತ ಸಹಯೋಗದೊಂದಿಗೆ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತೇವೆ.