ಡಿಜಿಟಲ್ ಯೋಗಕ್ಷೇಮ ಸೂಚ್ಯಂಕವನ್ನು ಪರಿಚಯಿಸುವುದು

ಫೆಬ್ರವರಿ 2023

Snap ನಲ್ಲಿ, ನಮ್ಮ Snapchat ಸಮುದಾಯದ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಿಂತ ಯಾವುದೂ ಮುಖ್ಯವಲ್ಲ. Snapchat ನಲ್ಲಿ ಸ್ವೀಕಾರಾರ್ಹವಾದ ವಿಷಯ ಮತ್ತು ನಡವಳಿಕೆಯನ್ನು ವಿವರಿಸುವ ನೀತಿಗಳು ಮತ್ತು ನಿಯಮಗಳನ್ನು ನಾವು ಹೊಂದಿದ್ದೇವೆ ಮತ್ತು ಅವುಗಳನ್ನು ಸ್ಥಿರವಾಗಿ ಜಾರಿಗೊಳಿಸುತ್ತೇವೆ. Snapchatter ಗಳಿಗೆ ಸುರಕ್ಷಿತವಾಗಿರಲು ನಾವು ಉಪಕರಣಗಳು ಮತ್ತು ಸಂಪನ್ಮೂಲಗಳನ್ನು ನೀಡುತ್ತೇವೆ ಮತ್ತು ನಿರ್ದಿಷ್ಟವಾಗಿ ಹದಿಹರೆಯದವರು ಮತ್ತು ಯುವ ಬಳಕೆದಾರರನ್ನು ಉತ್ತಮವಾಗಿ ರಕ್ಷಿಸಲು ನಾವು ಉದ್ಯಮದಲ್ಲಿ ಮತ್ತು ತಂತ್ರಜ್ಞಾನ ವಲಯದಾದ್ಯಂತ ಇತರರೊಂದಿಗೆ ತೊಡಗಿಸಿಕೊಳ್ಳುತ್ತೇವೆ.
ನಾವು ಈಗಿನ Gen Z ಪೀಳಿಗೆಯ ಡಿಜಿಟಲ್ ಯೋಗಕ್ಷೇಮಕ್ಕಾಗಿ ಹೇಗೆ ಹದಿಹರೆಯದವರು ಮತ್ತು ಯುವವಯಸ್ಕರು ಆನ್‌ಲೈನ್ ಅನ್ನು ಹೇಗೆ ಬಳಸುತ್ತಿದ್ದಾರೆ ಎನ್ನುವುದರ ಒಳನೋಟ ನೀಡಲು ಸಂಶೋಧನೆಯನ್ನು ಮಾಡಿದ್ದೇವೆ. ಸಮೀಕ್ಷೆಯು ಆಸ್ಟ್ರೇಲಿಯಾ, ಫ್ರಾನ್ಸ್, ಜರ್ಮನಿ, ಭಾರತ, ಯುಕೆ ಮತ್ತು ಯುಎಸ್ ಈ ಆರು ದೇಶಗಳಲ್ಲಿಯ ಹದಿಹರೆಯದವರು (13-17 ರ ವಯಸ್ಸಿನವರು), ಯುವವಯಸ್ಕರು (18-24 ರ ವಯಸ್ಸಿನವರು) ಮತ್ತು 13 ರಿಂದ 19 ವಯಸ್ಸಿನ ಮಕ್ಕಳನ್ನು ಹೊಂದಿರುವ ಪೋಷಕರನ್ನು ಇದು ಹೊಂದಿದೆ. ಅಧ್ಯಯನವು ಡಿಜಿಟಲ್ ಯೋಗಕ್ಷೇಮ ಸೂಚ್ಯಂಕವನ್ನು (DWBI) ತಯಾರಿಸಿತು: Gen Z ಯ ಆನ್‌ಲೈನ್ ಮಾನಸಿಕ ಯೋಗಕ್ಷೇಮದ ಅಳತೆ.

2022 ರ DWBI ಓದುಗಳು
ಆರು ಭೌಗೋಳಿಕತೆಗಳಿಗೆ ಮೊದಲ ಡಿಜಿಟಲ್ ಯೋಗಕ್ಷೇಮ ಸೂಚ್ಯಂಕವು 62 ಆಗಿದ್ದು, 0 ದಿಂದ 100 ರ ಪ್ರಮಾಣದಲ್ಲಿ ಸರಾಸರಿ ಓದುವಿಕೆ ಇದೆ – ನಿರ್ದಿಷ್ಟವಾಗಿ ಅನುಕೂಲಕರವಾಗಿಲ್ಲ ಅಥವಾ ವಿಶೇಷವಾಗಿ ಆತಂಕಕಾರಿಯೂ ಅಲ್ಲ. ದೇಶದ ಪ್ರಕಾರ, ಭಾರತವು 68 ರಲ್ಲಿ ಅತಿ ಹೆಚ್ಚು DWBI ರೀಡಿಂಗ್ ಅನ್ನು ನೋಂದಾಯಿಸಿದೆ ಮತ್ತು ಫ್ರಾನ್ಸ್ ಮತ್ತು ಜರ್ಮನಿ ಆರು ದೇಶಗಳ ಸರಾಸರಿಗಿಂತ ಕೆಳಕ್ಕೆ ಬಂದಿವೆ, ಪ್ರತಿಯೊಂದೂ 60 ರಷ್ಟಿದೆ. ಆಸ್ಟ್ರೇಲಿಯಾದ DWBI 63 ಆಗಿದೆ; UK 62 ರಲ್ಲಿ ಆರು ದೇಶಗಳ ಓದುವಿಕೆಗೆ ಹೊಂದಿಕೆಯಾಯಿತು ಮತ್ತು U.S 64 ರಲ್ಲಿ ಬಂದಿತು.
ಸೂಚ್ಯಂಕವು PERNA ಮಾದರಿಯನ್ನು ಆಧಾರವಾಗಿರಿಸಿಕೊಂಡಿದೆ. ಇದು ಅಸ್ತಿತ್ವದಲ್ಲಿರುವ ಸಂಶೋಧನಾ ಮಾದರಿಯ ಬದಲಾವಣೆಯಾಗಿದೆ, ಇದು ಐದು ವಿಭಾಗಗಳಲ್ಲಿ 20 ಭಾವನಾತ್ಮಕ ಹೇಳಿಕೆಗಳನ್ನು ಒಳಗೊಂಡಿರುತ್ತದೆ: ನಾತ್ಮಕ ಭಾವನೆ, ತೊಡಗಿಸಿಕೊಳ್ಳುವಿಕೆ, ಂಬಂಧಗಳು, ಣಾತ್ಮಕ ಭಾವನೆ ಮತ್ತು ಾಧನೆ. ಹಿಂದಿನ ಮೂರು ತಿಂಗಳುಗಳಲ್ಲಿ ಯಾವುದೇ ಸಾಧನ ಅಥವಾ ಆನ್‌ಲೈನ್ ಅಪ್ಲಿಕೇಶನ್‌ನಲ್ಲಿ (Snapchat ಮೀರಿ) ಅವರ ಎಲ್ಲಾ ಆನ್‌ಲೈನ್ ಅನುಭವಗಳನ್ನು ಗಣನೆಗೆ ತೆಗೆದುಕೊಂಡು, ಪ್ರತಿ 20 ಹೇಳಿಕೆಗಳೊಂದಿಗೆ ತಮ್ಮ ಕರಾರಿನ ಮಟ್ಟವನ್ನು ತಿಳಿಸಲು ಪ್ರತಿವಾದಿಗಳನ್ನು ಕೇಳಲಾಯಿತು. (ಏಪ್ರಿಲ್ 22 ರಿಂದ ಮೇ 10, 2022 ರವರೆಗೆ ಈ ಸಂಶೋಧನೆಯನ್ನು ಕೈಗೊಳ್ಳಲಾಯಿತು.) ಪ್ರತಿ ಐದು ವರ್ಗಗಳ ಹೇಳಿಕೆಯ ಒಂದೊಂದು ಉದಾಹರಣೆಯು ಈ ಕೆಳಗಿನಂತಿದೆ. ಎಲ್ಲ 20 DWBI ಭಾವನೆ ಹೇಳಿಕೆಗಳ ಪೂರ್ಣ ಪಠ್ಯಕ್ಕಾಗಿ, ಈ ಲಿಂಕ್ ನೋಡಿ.

ಸಾಮಾಜಿಕ ಮಾಧ್ಯಮಗಳ ಪಾತ್ರ
DWBI ಸ್ಕೋರ್ ಅನ್ನು ಪ್ರತಿಯೊಬ್ಬ ಪ್ರತಿಕ್ರಿಯೆದಾರನಿಗೆ ಅವರ 20 ಭಾವನಾತ್ಮಕ ಹೇಳಿಕೆಗಳನ್ನು ಆಧರಿಸಿ ಲೆಕ್ಕ ಹಾಕಲಾಗುವುದು. ಅವರ ಸ್ಕೋರ್ ಅನ್ನು ನಾಲ್ಕು DWBI ಗುಂಪುಗಳಾಗಿ ಕ್ರೋಢೀಕರಿಸಲಾಗುವುದು: ಪ್ರವರ್ಧಮಾನ (10%); ಏಳಿಗೆ (43%), ಮಧ್ಯಮ (40%) ಮತ್ತು ಹೋರಾಟದ ಸ್ಥಿತಿ (7%). (ವಿವರಗಳಿಗಾಗಿ, ಕೆಳಗೆ ನೋಡಿ.) 



ಆಶ್ಚರ್ಯಕರವಲ್ಲದ ವಿಷಯವೆಂದರೆ, ನವ ಪೀಳಿಗೆಯ ಡಿಜಿಟಲ್ ಯೋಗಕ್ಷೇಮದಲ್ಲಿ ಸಾಮಾಜಿಕ ಮಾಧ್ಯಮಗಳು ಮುಖ್ಯವಾದ ಪಾತ್ರವಹಿಸುತ್ತವೆ ಎನ್ನುವುದು ಸಂಶೋಧನೆಗಳಿಂದ ತಿಳಿದುಬಂದಿದ್ದು, ಸುಮಾರು ಮುಕ್ಕಾಲು ಪಾಲಿಗಿಂತ (78%) ಹೆಚ್ಚಿನ ಪ್ರತಿಕ್ರಿಯೆದಾರರು ಸಾಮಾಜಿಕ ಮಾಧ್ಯಮಗಳು ತಮ್ಮ ಜೀವನದ ಗುಣಮಟ್ಟದ ಮೇಲೆ ಸಕಾರಾತ್ಮಕ ಪ್ರಭಾವ ಬೀರಿವೆ ಎಂದು ಹೇಳಿದ್ದಾರೆ. ಈ ನಂಬಿಕೆಯು Gen Z ಪೀಳಿಗೆಯ ಯುವ ವಯಸ್ಕರು (71%) ಮತ್ತು ಮಹಿಳೆಯರಿಗೆ (75%) ಹೋಲಿಸಿದರೆ ಹದಿಹರೆಯದವರಲ್ಲಿ (84%) ಮತ್ತು ಪುರುಷರಲ್ಲಿ (81%) ಇನ್ನೂ ನಿರ್ದಿಷ್ಟವಾಗಿದೆ. ಸಾಮಾಜಿಕ ಮಾಧ್ಯಮದ ಪ್ರಭಾವದ ಕುರಿತು ಪೋಷಕರ ಅಭಿಪ್ರಾಯವು (73%) Gen Z ಪೀಳಿಗೆಯ ವಯಸ್ಕರಿಗಿಂತ ಸ್ವಲ್ಪಹೆಚ್ಚಿನ ಪ್ರಮಾಣದಲ್ಲಿದೆ. ಪ್ರವರ್ಧಮಾನದ ಸ್ಥಿತಿಯಲ್ಲಿರುವವರು ಸಾಮಾಜಿಕ ಮಾಧ್ಯಮಗಳು ತಮ್ಮ ಜೀವನದಲ್ಲಿ ಸಕಾರಾತ್ಮಕ ಪ್ರಭಾವವನ್ನು (95%) ಉಂಟುಮಾಡಿದೆ ಎಂದು ಹೇಳಿದರೆ ಹೋರಾಟದ ಸ್ಥಿತಿಯಲ್ಲಿದ್ದೆವೆ ಎಂದು ಹೇಳಿದವರು ಕಡಿಮೆ (43%) ಇದ್ದಾರೆ. "ಸಾಮಾಜಿಕ ಮಾಧ್ಯಮಗಳು ಇಲ್ಲದೆಯೇ ಜೀವನ ಕಷ್ಟ," ಎನ್ನುವುದನ್ನು ಪ್ರವರ್ಧಮಾನದ ವರ್ಗದಲ್ಲಿರುವ ಮೂರು ಭಾಗಕ್ಕಿಂತ ಹೆಚ್ಚು (36%) ಜನರು ಒಪ್ಪಿಕೊಂಡಿದ್ದಾರೆ. ಅಲ್ಲದೆ ಹೋರಾಟದ ಸ್ಥಿತಿಯಲ್ಲಿರುವ ಜನರಲ್ಲಿ ಕೇವಲ 18% ಜನರು ಇದನ್ನು ಒಪ್ಪಿಕೊಂಡಿದ್ದಾರೆ. "ಸಾಮಾಜಿಕ ಮಾಧ್ಯಮವಿಲ್ಲದಿದ್ದರೆ ಜಗತ್ತು ಉತ್ತಮ ಸ್ಥಳವಾಗಿರುತ್ತದೆ" ಎನ್ನುವ ವ್ಯತಿರಿಕ್ತ ಹೇಳಿಕೆಯು ಈ ಹಿಂದಿನ ಹೇಳಿಕೆಗೆ ಹೋಲಿಸಿದರೆ ಪ್ರಮಾಣವು ವಿರುದ್ದವಾಗಿರುವುದು ಕಂಡುಬರುತ್ತದೆ. (ಪ್ರವರ್ಧಮಾನ: 22%, ಹೋರಾಟದಲ್ಲಿರುವವರು: 33%).

ಇತರೆ ಮುಖ್ಯ ಫಲಿತಾಂಶಗಳು
ನಮ್ಮ ಡಿಜಿಟಲ್ ಯೋಗಕ್ಷೇಮ ಸಂಶೋಧನೆಯು ಇತರ ಆಸಕ್ತಿದಾಯಕ ಅಂಶಗಳನ್ನು ಹೊರಹಾಕಿದೆ. ಈ ಕೆಳಗೆ ಕೆಲವು ಹೈಲೈಟ್‌ಗಳನ್ನು ನೀಡಲಾಗಿದೆ. ಪೂರ್ಣ ವರದಿಯನ್ನು ಇಲ್ಲಿ ನೋಡಬಹುದು.
  • ಡಿಜಿಟಲ್ ಯೋಗಕ್ಷೇಮವು ಆನ್‌ಲೈನ್ ಸಂವಹನಗಳ ಸ್ವರೂಪ ಮತ್ತು ಗುಣಮಟ್ಟದ ಮೇಲೆ ಹೆಚ್ಚು ಅವಲಂಬಿತವಾಗಿದೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಎಷ್ಟು ಸಮಯವನ್ನು ಕಳೆಯಲಾಗುತ್ತದೆ ಎಂಬುದರ ಮೇಲೆ ಕಡಿಮೆ ಅವಲಂಬಿತವಾಗಿದೆ.
  • ವೈಯಕ್ತಿಕವಾಗಿ ಗುರಿಪಡಿಸಿದ ಅಪಾಯಗಳು (ಉದಾ., ಬೆದರಿಸುವಿಕೆ, ಲೈಂಗಿಕ ಅಪಾಯಗಳು) ಯೋಗಕ್ಷೇಮಕ್ಕೆ ಬಲವಾದ ಸಂಬಂಧವನ್ನು ಪ್ರದರ್ಶಿಸುತ್ತವೆ, ಆದರೆ "ಸಾಮಾನ್ಯಗೊಳಿಸಿದ" ಅಪಾಯಗಳು (ಉದಾ., ಸೋಗು ಹಾಕುವಿಕೆ, ತಪ್ಪು ಮಾಹಿತಿ) ದುರ್ಬಲ ಸಂಬಂಧವನ್ನು ಹೊಂದಿವೆ.
  • ಪೋಷಕರು ಹೆಚ್ಚಾಗಿ ತಮ್ಮ ಹದಿಹರೆಯದವರ ಡಿಜಿಟಲ್ ಯೋಗಕ್ಷೇಮದೊಂದಿಗೆ ಹೊಂದಿಕೊಂಡಿದ್ದಾರೆ. ವಾಸ್ತವವಾಗಿ ತಮ್ಮ ಆನ್‌ಲೈನ್ ಮತ್ತು ಸಾಮಾಜಿಕ ಮಾಧ್ಯಮ ಚಟುವಟಿಕೆಗಳ ಮೇಲೆ ತಮ್ಮ ಪೋಷಕರು ನಿಯಮಿತವಾಗಿ ಪರಿಶೀಲಿಸಿದ ಹದಿಹರೆಯದವರು ಹೆಚ್ಚಿನ ಡಿಜಿಟಲ್ ಯೋಗಕ್ಷೇಮವನ್ನು ಹೊಂದಿದ್ದಾರೆ ಮತ್ತು ತಮ್ಮ ಪೋಷಕರಿಂದ ಹೆಚ್ಚಿನ ನಂಬಿಕೆಗಳ ಮಟ್ಟವನ್ನು ಉಳಿಸಿಕೊಂಡಿದ್ದಾರೆ. ವ್ಯತಿರಿಕ್ತವಾಗಿ, ಹದಿಹರೆಯದವರ ಡಿಜಿಟಲ್ ಅನುಭವಗಳನ್ನು ನಿಯಮಿತವಾಗಿ ಪರಿಶೀಲಿಸದ ಪೋಷಕರ ಉಪವಿಭಾಗವು ಹದಿಹರೆಯದವರ ಅಪಾಯದ ಸಾಧ್ಯತೆಯನ್ನು ಗಮನಾರ್ಹವಾಗಿ ಕಡಿಮೆ ಅಂದಾಜು ಮಾಡಿದೆ (ಸುಮಾರು 20 ಅಂಕಗಳಿಂದ).
  • ಆಶ್ಚರ್ಯವಲ್ಲದ ವಿಷಯವೆಂದರೆ, ವ್ಯಾಪಕವಾದ ಬೆಂಬಲ ನೆಟ್‌ವರ್ಕ್‌ಗಳನ್ನು ಹೊಂದಿರುವ Gen Z ಯರುಆನ್‌ಲೈನ್‌ನಲ್ಲಿ ಹೆಚ್ಚಾಗಿ ಪ್ರವರ್ಧಮಾನಕ್ಕೆ ಬರುವ ಅಥವಾ ಏಳಿಗೆ ಹೊಂದುವ ವರ್ಗದಲ್ಲಿರುವ ಸಾಧ್ಯತೆಯಿದೆ ಮತ್ತು ಕಡಿಮೆ ಬೆಂಬಲ ಸ್ವತ್ತುಗಳನ್ನು ಹೊಂದಿರುವವರು ಹೋರಾಟದ ಸ್ಥಿತಿಯಲ್ಲಿರುವ ಅಥವಾ ಮಧ್ಯಮ ಸ್ಥಿತಿಯಲ್ಲಿರುವವರಾಗಿರುವ ಸಾಧ್ಯತೆಯಿದೆ. ಬೆಂಬಲ ಸ್ವತ್ತುಗಳು ಎಂದರೆ ಸಾಮಾನ್ಯವಾಗಿ ಯುವ ವ್ಯಕ್ತಿಯ ಜೀವನದಲ್ಲಿರುವ ಜನರು ಅಂದರೆ ಪೋಷಕರು, ಆರೈಕೆ ಮಾಡುವವರು, ಶಿಕ್ಷಕರು, ಇತರ ವಿಶ್ವಾಸಾರ್ಹ ವಯಸ್ಕರು ಅಥವಾ ಸ್ನೇಹಿತರು, ಅವರ ಬಗ್ಗೆ ಕಾಳಜಿ ವಹಿಸುವವರು, ಅವರ ಮಾತನ್ನು ಸಾವಧಾನದಿಂದ ಕೇಳುವವರು ಅಥವಾ ಅವರು ಯಶಸ್ವಿಯಾಗುತ್ತಾರೆ ಎಂದು ನಂಬುವವರು ಆಗಿರುತ್ತಾರೆ.

ನಮ್ಮ ಡಿಜಿಟಲ್ ಯೋಗಕ್ಷೇಮ ಸೂಚ್ಯಂಕದಲ್ಲಿ ದಯವಿಟ್ಟು ಮತ್ತಷ್ಟು ಹೆಚ್ಚಿನ, ನಿರ್ದಿಷ್ಟ ದೇಶಗಳಿಗೆ ಸಂಬಂಧಿಸಿದ ಸಂಪನ್ಮೂಲಗಳನ್ನು ಈ ಕೆಳಗೆ ನೋಡಿ:

DWBI ಡೆಕ್ - ಇಂಗ್ಲೀಷ್ 
DWBI ಡೆಕ್ - ಫ್ರೆಂಚ್ 
DWBI ಡೆಕ್ - ಜರ್ಮನ್

DWBI ಸಾರಾಂಶ - ಡಚ್
DWBI ಸಾರಾಂಶ - ಇಂಗ್ಲೀಶ್
DWBI ಸಾರಾಂಶ - ಫ್ರೆಂಚ್
DWBI ಸಾರಾಂಶ - ಜರ್ಮನ್

DWBI ಇನ್ಫೋಗ್ರಾಫಿಕ್- ಜಾಗತಿಕ
DWBI ಇನ್ಫೋಗ್ರಾಫಿಕ್ - ಆಸ್ಟ್ರೇಲಿಯ  
DWBI ಇನ್ಫೋಗ್ರಾಫಿಕ್ - ಫ್ರಾನ್ಸ್(FR)
DWBI ಇನ್ಫೋಗ್ರಾಫಿಕ್- ಜರ್ಮನಿ(DE)
DWBI ಇನ್ಫೋಗ್ರಾಫಿಕ್ - ಭಾರತ  
DWBI ಇನ್ಫೋಗ್ರಾಫಿಕ್ - ಯುನೈಟೆಡ್ ಕಿಂಗ್ಡಮ್ 
DWBI ಇನ್ಫೋಗ್ರಾಫಿಕ್ - ಯುನೈಟೆಡ್ ಸ್ಟೇಟ್ಸ್