ಸಂಶೋಧಕದ ಡೇಟಾ ಪ್ರವೇಶಿಸುವಿಕೆ ಸೂಚನೆಗಳು

ನೀವು ವಾಣಿಜ್ಯೇತರ ಉದ್ದೇಶಗಳೊಂದಿಗಿನ ಸಂಶೋಧಕರಾಗಿದ್ದಲ್ಲಿ ಮತ್ತು ಡಿಜಿಟಲ್ ಸೇವೆಗಳ ಕಾಯ್ದೆಯ (DSA) ಅನುಸಾರವಾಗಿ Snap ನ ಸಾರ್ವಜನಿಕವಾಗಿ ಲಭ್ಯವಿರುವ ಡೇಟಾಗೆ ಪ್ರವೇಶಿಸುವುದಕ್ಕೆ ವಿನಂತಿ ಮಾಡಲು ಬಯಸಿದರೆ, ಈ ಕೆಳಗಿನ ಮಾಹಿತಿಯೊಂದಿಗೆ DSA-Researcher-Access[at]snapchat.com ಗೆ ನೀವು ನಿಮ್ಮ ಸಂಶೋಧನಾ ವಿನಂತಿಯನ್ನು ಸಲ್ಲಿಸಬಹುದು:

  • ನಿಮ್ಮ ಹೆಸರು ಮತ್ತು ಸಂಬಂಧಿಸಿದ ಸಂಶೋಧನಾ ಸಂಸ್ಥೆಯ ಹೆಸರು

  • ನೀವು ಪ್ರವೇಶಿಸಲು ಬಯಸುವ ಡೇಟಾದ ವಿವರವಾದ ವಿವರಣೆ 

  • ನೀವು ಡೇಟಾವನ್ನು ಪ್ರವೇಶಿಸಲು ವಿನಂತಿಸುತ್ತಿರುವ ಉದ್ದೇಶದ ವಿವರವಾದ ವಿವರಣೆ

  • ಯೋಜಿತ ಸಂಶೋಧನಾ ಚಟುವಟಿಕೆಗಳು ಮತ್ತು ವಿಧಾನದ ವಿವರವಾದ ವಿವರಣೆ

  • ನೀವು ನಡೆಸುತ್ತಿರುವ ಸಂಶೋಧನೆಗೆ ನಿಧಿಯ ಮೂಲಗಳ ವಿವರಗಳು

  • ನಿಮ್ಮ ಸಂಶೋಧನೆಯು ವಾಣಿಜ್ಯೇತರ ಉದ್ದೇಶಗಳಿಗಾಗಿ ಇದೆ ಎನ್ನುವ ದೃಢೀಕರಣ

  • ವಿನಂತಿಸಿದ ಡೇಟಾದ ಸಮಯಚೌಕಟ್ಟಿನ ಕುರಿತ ವಿವರಗಳು

ಒಮ್ಮೆ ಸ್ವೀಕರಿಸಿದ ಬಳಿಕ, ಅರ್ಹತೆ ಮತ್ತು ಕಾನೂನಿನೊಂದಿಗೆ ಅನುಸರಣೆಗಾಗಿ ನಾವು ನಿಮ್ಮ ವಿನಂತಿಯನ್ನು ವಿಮರ್ಶಿಸುತ್ತೇವೆ ಮತ್ತು ನಿಮಗೆ ತಿಳಿಸುತ್ತೇವೆ.