Snap Values

ಬಳಕೆದಾರರ ಹೆಸರುಗಳು ಮತ್ತು ಪ್ರದರ್ಶನ ಹೆಸರುಗಳು

ಕಮ್ಯುನಿಟಿ ಮಾರ್ಗಸೂಚಿಗಳ ವಿವರಣೆಯ ಸರಣಿ

ನವೀಕರಿಸಲಾಗಿದೆ: ಮೇ 2024

ಬಳಕೆದಾರರ ಹೆಸರುಗಳು ಮತ್ತು ಪ್ರದರ್ಶನ ಹೆಸರುಗಳು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳ ಅನುಸರಣೆ ಮಾಡಬೇಕು. ಇದರ ಜೊತೆಗೆ, ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳಿಂದ ನಿಷೇಧಿಸಲಾಗಿರುವ ವಿಷಯ ಅಥವಾ ನಡವಳಿಕೆಯ ಉಲ್ಲೇಖಗಳನ್ನು ಅವು ಒಳಗೊಂಡಿರಬಾರದು, ಉದಾಹರಣೆಗೆ:

  • ಮಕ್ಕಳ ಲೈಂಗಿಕ ಶೋಷಣೆ

  • ವಯಸ್ಕರ ಲೈಂಗಿಕ ಶೋಷಣೆ

  • ಅಶ್ಲೀಲತೆ

  • ವಾಣಿಜ್ಯ ಲೈಂಗಿಕ ವಹಿವಾಟುಗಳು

  • ಅಕ್ರಮ ಮಾದಕಪದಾರ್ಥ ಚಟುವಟಿಕೆ

  • ಲೈಂಗಿಕ ಕಿರುಕುಳ ಸೇರಿದಂತೆ, ಹೆದರಿಸುವುದು ಅಥವಾ ಕಿರುಕುಳ

  • ಸೋಗು ಹಾಕುವಿಕೆ (ಅಭಿಮಾನಿ, ಪರೋಡಿ ಅಥವಾ ಕಾಮೆಂಟರಿ ಖಾತೆಗಳು ಕಡ್ಡಾಯವಾಗಿ ಈ ವಾಸ್ತವಾಂಶವನ್ನು ಪ್ರದರ್ಶನದ ಹೆಸರಿನಲ್ಲಿ ಸ್ಪಷ್ಟವಾಗಿ ಬಹಿರಂಗಪಡಿಸಬೇಕು ಎನ್ನುವುದನ್ನು ಗಮನಿಸಿ)

  • ಹಿಂಸಾತ್ಮಕ ಅಥವಾ ಆತಂಕ ಉಂಟುಮಾಡುವ ವಿಷಯದ ವೈಭವೀಕರಣ

  • ಸ್ವಯಂ ಹಾನಿ ಅಥವಾ ಆತ್ಮಹತ್ಯೆಯ ವೈಭವೀಕರಣ

  • ದ್ವೇಷಪೂರಿತ ವಿಷಯ

  • ಭಯೋತ್ಪಾದನೆ ಅಥವಾ ಹಿಂಸಾತ್ಮಕ ಉಗ್ರವಾದ

  • ನಿಯಂತ್ರಿತ ಸರಕುಗಳು ಅಥವಾ ಚಟುವಟಿಕೆಗಳ ಪ್ರಚಾರ

  • ಅಕ್ರಮ ಸರಕುಗಳು ಅಥವಾ ಚಟುವಟಿಕೆಗಳ ಪ್ರಚಾರ

  • ವಂಚನೆ

  • ಸ್ಪ್ಯಾಮ್

ಈ ನೀತಿಯ ಉಲ್ಲಂಘನೆಗಳು ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸುವುದಕ್ಕೆ ಅಥವಾ Snapchat ಬಳಸುವುದನ್ನು ನೀವು ಮುಂದುವರಿಸಲು ಹೊಸ ಬಳಕೆದಾರರ ಹೆಸರು ಅಥವಾ ಪ್ರದರ್ಶನ ಹೆಸರನ್ನು ಆರಿಸುವಂತೆ ನಿಮ್ಮನ್ನು ಕೇಳುವುದಕ್ಕೆ ಕಾರಣವಾಗಬಹುದು.

ನಿಮ್ಮ ಬಳಕೆದಾರರ ಹೆಸರು ಅಥವಾ ಪ್ರದರ್ಶನದ ಹೆಸರನ್ನು ಹೇಗೆ ಬದಲಾಯಿಸುವುದು ಎನ್ನುವ ಕುರಿತ ಮಾಹಿತಿಗಾಗಿ, ದಯವಿಟ್ಟು ಕೆಳಗಿನ ಬೆಂಬಲ ಲೇಖನಗಳನ್ನು ನೋಡಿ: