ತೀವ್ರ ಹಾನಿ

ಕಮ್ಯುನಿಟಿ ಮಾರ್ಗಸೂಚಿಗಳ ವಿವರಣೆಯ ಸರಣಿ

ಅಪ್‌ಡೇಟ್ ಮಾಡಲಾಗಿದೆ: ಆಗಸ್ಟ್ 2023

Snapchatter ಗಳ ಸುರಕ್ಷತೆ ನಮ್ಮ ಪ್ರಮುಖ ಆದ್ಯತೆಯಾಗಿದೆ. ನಮ್ಮ ಸಮುದಾಯದ ಸುರಕ್ಷತೆಗೆ ಬೆದರಿಕೆಯೊಡ್ಡುವ ನಡವಳಿಕೆಯನ್ನು, ನಿರ್ದಿಷ್ಟವಾಗಿ ಹಾನಿಯ ಬೆದರಿಕೆ ತೀವ್ರವಾಗಿದ್ದಾಗ ನಾವು ತುಂಬ ಗಂಭೀರವಾಗಿ ಪರಿಗಣಿಸುತ್ತೇವೆ. ನಾವು ತೀವ್ರ ಹಾನಿಯು (1) Snapchatter ಗಳ ದೈಹಿಕ ಅಥವಾ ಭಾವನಾತ್ಮಕ ಯೋಗಕ್ಷೇಮಕ್ಕೆ ಗಮನಾರ್ಹ ಅಪಾಯ ಒಡ್ಡುವ ಹಾನಿಗಳು, ಮತ್ತು (2) ಮಾನವರ ಜೀವ, ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಬೆದರಿಕೆಗಳು ಸೇರಿದಂತೆ, ತೀವ್ರ ಹಾನಿಯ ಸನ್ನಿಹಿತ, ನಂಬಲರ್ಹ ಅಪಾಯ ಎರಡೂ ಒಳಗೊಂಡಿದೆ ಎಂದು ಪರಿಗಣಿಸುತ್ತೇವೆ. ನಮಗೆ ಹಾಗೂ ನಮ್ಮ ಸಮುದಾಯಕ್ಕೆ ಉತ್ತಮ ತಿಳುವಳಿಕೆ ನೀಡಲು ಹಾಗೂ ನಮ್ಮ ವೇದಿಕೆಯಲ್ಲಿ ಈ ಬೆದರಿಕೆಗಳು ಉದ್ಭವಿಸುವಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು, ಈ ವಿಷಯಗಳ ಕುರಿತಾಗಿ ನಾವು ತಜ್ಞರು, ಸುರಕ್ಷತಾ ಗುಂಪುಗಳು ಮತ್ತು ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಮಾಡುತ್ತೇವೆ. ಈ ವಿಧದ ಹಾನಿಗಳು ಉನ್ನತ ಮಟ್ಟದ ಪರಿಶೀಲನೆಗೆ ಹಾಗೂ ಉಲ್ಲಂಘಿಸುವವರಿಗೆ ತ್ವರಿತ, ಕಟ್ಟುನಿಟ್ಟಿನ ಮತ್ತು ಶಾಶ್ವತ ಪರಿಣಾಮಗಳಿಗೆ ಅರ್ಹವಾಗಿವೆ ಎಂದು ನಾವು ಪರಿಗಣಿಸುತ್ತೇವೆ. 


Snapchatter ಗಳು ಈ ಕೆಳಗಿನ ಯಾವುದೇ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ನಾವು ಗುರುತಿಸಿದಾಗ, ನಾವು ತಕ್ಷಣವೇ ಅವರ ಖಾತೆಗಳನ್ನು ನಿಷ್ಕ್ರಿಯಗೊಳಿಸುತ್ತೇವೆ ಮತ್ತು ಕೆಲವು ಸಂದರ್ಭಗಳಲ್ಲಿ, ನಡವಳಿಕೆಯ ಕುರಿತು ಕಾನೂನು ಜಾರಿ ಸಂಸ್ಥೆಗೆ ತಿಳಿಸುತ್ತೇವೆ:

  • ಮಕ್ಕಳ ಲೈಂಗಿಕ ಶೋಷಣೆ ಅಥವಾ ದೌರ್ಜನ್ಯದ ಚಿತ್ರಗಳು, ಲೈಂಗಿಕ ಅಲಂಕಾರ, ಮಕ್ಕಳ ಅಥವಾ ವಯಸ್ಕರ ಲೈಂಗಿಕ ಕಳ್ಳಸಾಗಣೆ ಅಥವಾ ಲೈಂಗಿಕ ಸುಲಿಗೆ (ಸೆಕ್ಸ್‌ಟಾರ್ಶನ್) ಸೇರಿದಂತೆ, ಲೈಂಗಿಕ ಶೋಷಣೆ ಅಥವಾ ದೌರ್ಜನ್ಯವನ್ನು ಒಳಗೊಂಡ ಚಟುವಟಿಕೆ 

  • ಅಪಾಯಕಾರಿ ಮತ್ತು ಅಕ್ರಮ ಮಾದಕಪದಾರ್ಥಗಳ ಖರೀದಿ, ಮಾರಾಟ, ವಿನಿಮಯ ಅಥವಾ ಮಾರಾಟಕ್ಕೆ ಸೌಲಭ್ಯ ಕಲ್ಪಿಸುವ ಪ್ರಯತ್ನ

  • ಹಿಂಸಾತ್ಮಕ ತೀವ್ರವಾದ ಅಥವಾ ಭಯೋತ್ಪಾದನೆ ಸಂಬಂಧಿತ ಚಟುವಟಿಕೆಗಳು, ಮಾನವ ಕಳ್ಳಸಾಗಣೆ, ಹಿಂಸೆಯ ನಿರ್ದಿಷ್ಟ ಬೆದರಿಕೆಗಳು (ಉದಾಹರಣೆಗೆ ಬಾಂಬ್ ಬೆದರಿಕೆ) ಅಥವಾ ಇತರ ಗಂಭೀರ ಅಪರಾಧ ಚಟುವಟಿಕೆಗಳನ್ನು ಒಳಗೊಳ್ಳಬಹುದಾದ, ಮಾನವರ ಜೀವ, ಸುರಕ್ಷತೆ ಅಥವಾ ಯೋಗಕ್ಷೇಮಕ್ಕೆ ನಂಬಲರ್ಹ, ಸನ್ನಿಹಿತ ಬೆದರಿಕೆಗಳು 

ಈ ಉಲ್ಲಂಘನೆಗಳಿಗೆ ಕಟ್ಟುನಿಟ್ಟಿನ ಪರಿಣಾಮಗಳನ್ನು ಜಾರಿಮಾಡುವುದರ ಜೊತೆಗೆ, ನಾವು ಬೆದರಿಕೆಗಳನ್ನು ಹೇಗೆ ಪತ್ತೆಮಾಡಬಹುದು ಮತ್ತು ಮಿತಿಗೊಳಿಸಬಹುದು, ಹಾನಿಯನ್ನು ತಡೆಗಟ್ಟಬಹುದು ಮತ್ತು ಸಂಭಾವ್ಯತಃ ಹಾನಿಕಾರಕ ಪ್ರವೃತ್ತಿಗಳ ಕುರಿತು ಮಾಹಿತಿಯುಕ್ತರಾಗಿ ಇರಬಹುದು ಎನ್ನುವುದನ್ನು ಇನ್ನಷ್ಟು ಉತ್ತಮವಾಗಿ ಅರ್ಥಮಾಡಿಕೊಳ್ಳಲು ನಮ್ಮ ಆಂತರಿಕ ತಂಡಗಳು ನಿರಂತರವಾಗಿ ತಜ್ಞರೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಈ ವಿಷಯಕ್ಕೆ ಸಂಬಂಧಿಸಿ ನಮ್ಮ ಕೆಲಸ ಎಂದಿಗೂ ಮುಗಿಯುವುದಿಲ್ಲ ಮತ್ತು ನಮ್ಮ ಸಮುದಾಯದ ಅಗತ್ಯಗಳೊಂದಿಗೆ ಅದು ವಿಕನಸವಾಗುತ್ತ ಹೋಗುತ್ತದೆ. ಒಂದು ಸುರಕ್ಷತಾ ಕಳವಳವನ್ನು ವರದಿ ಮಾಡಲು, ನಮ್ಮ ಸುರಕ್ಷತಾ ಕೇಂದ್ರಕ್ಕೆ ಭೇಟಿ ನೀಡಲು, ಅಥವಾ ಹಾನಿಕಾರಕ ಕಂಟೆಂಟ್ ಬಗೆಹರಿಸಲು ಮತ್ತು ಯೋಗಕ್ಷೇಮವನ್ನು ಪ್ರೋತ್ಸಾಹಿಸಲು ಮಾಡುತ್ತಿರುವ ನಮ್ಮ ಪ್ರಯತ್ನಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.