ಭದ್ರತೆಯ ಮೂಲಕ ಗೌಪ್ಯತೆ

ನೀವು ಸುರಕ್ಷಿತ ಮತ್ತು ಭದ್ರತೆಯ ಭಾವವನ್ನು ಹೊಂದಿಲ್ಲದಿದ್ದರೆ ಗೌಪ್ಯತೆಯ ಭಾವನೆಯನ್ನು ಹೊಂದುವುದು ಕಷ್ಟಕರವಾಗುತ್ತದೆ. ಅದಕ್ಕಾಗಿಯೇ ನಿಮ್ಮ ಖಾತೆಯನ್ನು ಸುರಕ್ಷಿತವಾಗಿಸಲು ಸಹಾಯ ಮಾಡಲು Snapchat ನಿಮಗೆ ಲಾಗಿನ್ ಪರಿಶೀಲನೆಯಂತಹ (ಎರಡು-ಅಂಶಗಳ ದೃಢೀಕರಣದ ವಿಧಾನ) ವೈಶಿಷ್ಟ್ಯಗಳನ್ನು ಒದಗಿಸುತ್ತದೆ ಮತ್ತು ಅದಕ್ಕಾಗಿಯೇ ನಮ್ಮ ಸ್ವಂತ ಮೂಲಸೌಕರ್ಯವನ್ನು ಭದ್ರಪಡಿಸಲು ನಾವು ಗಮನಾರ್ಹ ಪ್ರಯತ್ನಗಳನ್ನು ಕೈಗೊಳ್ಳುತ್ತೇವೆ. ಆದರೆ ನಿಮ್ಮ Snapchat ಖಾತೆಯನ್ನು ಸುರಕ್ಷಿತವಾಗಿರಿಸಲು ನೀವು ತೆಗೆದುಕೊಳ್ಳಬಹುದಾದ ಕೆಲವು ಹೆಚ್ಚುವರಿ ಕ್ರಮಗಳೂ ಕೂಡ ಇವೆ:

ಸುರಕ್ಷಿತ ಪಾಸ್‌ವರ್ಡ್ ಬಳಸಿ

ದೀರ್ಘ, ಸಂಕೀರ್ಣ ಮತ್ತು ವಿಶಿಷ್ಟ ಪಾಸ್‌ವರ್ಡ್ ಅನ್ನು ಆಯ್ದುಕೊಳ್ಳಿ, ಇದು ವಂಚಕರು ನಿಮ್ಮ ಪಾಸ್‌ವರ್ಡ್ ಊಹಿಸದಂತೆ ಅಥವಾ ನಿಮ್ಮ ಖಾತೆಯನ್ನು ಪ್ರವೇಶಿಸುವುದಕ್ಕಾಗಿ ರಾಜಿಯಾದ ಪಾಸ್‌ವರ್ಡ್‌ಗಳ ಪಟ್ಟಿಯನ್ನು ಬಳಸದಂತೆ ತಡೆಯಲು ನಿಮಗೆ ಸಹಾಯ ಮಾಡಬಲ್ಲದು. ನಿಮ್ಮ ಖಾತೆಯನ್ನು ಖಚಿತವಾಗಿ ಸುರಕ್ಷಿತಗೊಳಿಸಲು, “I l0ve gr@ndma’s gingerbread c00kies!” (ಅಕ್ಷರಗಳು, ಸಂಖ್ಯೆಗಳು ಮತ್ತು ವಿಶೇಷ ಸಂಕೇತಗಳನ್ನು ಬಳಸಿಕೊಂಡು) ರೀತಿಯ ದೀರ್ಘವಾದ ಪಾಸ್‌ವರ್ಡ್ ವಾಕ್ಯಗಳನ್ನು ರಚಿಸುವುದಕ್ಕಾಗಿ ನಿಮ್ಮ ಕ್ರಿಯಾಶೀಲತೆಯನ್ನು ಒರೆಗೆ ಹಚ್ಚಿ — ಮತ್ತು “Password123” ಅನ್ನು ಖಂಡಿತವಾಗಿ ಯಾರಾದರೂ ಸುಲಭವಾಗಿ ಪತ್ತೆಹಚ್ಚುತ್ತಾರೆ. ಒಂದು ವೇಳೆ ಪಾಸ್‌ವರ್ಡ್‌ಗಳನ್ನು ನೆನಪಿಟ್ಟುಕೊಳ್ಳುವಲ್ಲಿ ನಿಮಗೆ ತೊಂದರೆ ಇದ್ದರೆ, ಸುರಕ್ಷಿತ ಪಾಸ್‌ವರ್ಡ್‌ಗಳನ್ನು ರಚಿಸಲು ಪಾಸ್‌ವರ್ಡ್ ಮ್ಯಾನೇಜರ್ ಬಳಸುವುದನ್ನು ಪರಿಗಣಿಸಿ ಇದರಿಂದ ನೀವು ನೆನಪಿಟ್ಟುಕೊಳ್ಳಬೇಕಾದ ಅಗತ್ಯವಿರುವುದಿಲ್ಲ! ನಿಮ್ಮ ವಿಧಾನ ಯಾವುದೇ ಆಗಿರಲಿ, ನೆನಪಿಡಿ : ನಿಮ್ಮ ಪಾಸ್‌ವರ್ಡ್ ಅನ್ನು ಎಂದಿಗೂ ಯಾರೊಂದಿಗೂ ಹಂಚಿಕೊಳ್ಳಬೇಡಿ.

ಲಾಗಿನ್ ಪರಿಶೀಲನೆ ಬಳಸಿ

ಲಾಗಿನ್ ಪರಿಶೀಲನೆ ಆನ್ ಮಾಡಿ. ಇದು ಹೆಚ್ಚುವರಿ ಭದ್ರತೆಯ ಪದರವನ್ನು ಸೇರಿಸಲು ಎರಡು-ಅಂಶಗಳ ದೃಢೀಕರಣವನ್ನು ಬಳಸುವ ಪ್ರಮುಖ ವೈಶಿಷ್ಟ್ಯವಾಗಿದೆ. ಲಾಗಿನ್ ಪರಿಶೀಲನೆಯನ್ನು ಬಳಸುವುದರಿಂದ ನಿಮ್ಮ ಪಾಸ್‌ವರ್ಡ್ ತಿಳಿದುಕೊಂಡಿರುವ (ಅಥವಾ ಊಹಿಸಿರುವ) ಒಬ್ಬರು ನಿಮ್ಮ ಖಾತೆ ಪ್ರವೇಶಿಸದಂತೆ ತಡೆಯಲು ಸಹಾಯ ಮಾಡಬಹುದು.

ನಿಮ್ಮ ಫೋನ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ಪರಿಶೀಲಿಸಿ

ನಿಮ್ಮ ಖಾತೆಗೆ ನಿಮ್ಮ ಫೋನ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ಸೇರಿಸುವುದನ್ನು ಖಚಿತಪಡಿಸಿಕೊಳ್ಳಿ — ಈ ರೀತಿಯಲ್ಲಿ ನಿಮ್ಮನ್ನು ಸಂಪರ್ಕಿಸಲು ನಮ್ಮ ಬಳಿ ಒಂದಕ್ಕಿಂತ ಹೆಚ್ಚು ಮಾರ್ಗಗಳು ಇರುತ್ತವೆ. ಒಂದು ವೇಳೆ ನೀವು ನಿಮ್ಮ ಫೋನ್ ಸಂಖ್ಯೆಯನ್ನು ಬದಲಾಯಿಸಿದರೆ ಅಥವಾ ನಿಮ್ಮ ಇಮೇಲ್ ಖಾತೆಗೆ ಪ್ರವೇಶವನ್ನು ಕಳೆದುಕೊಂಡರೆ ಆಗ ಇದು ಅತ್ಯಂತ ಉಪಯುಕ್ತವಾಗುತ್ತದೆ. ನಿಮ್ಮ ಫೋನ್ ಸಂಖ್ಯೆ ಮತ್ತು ಇಮೇಲ್ ಅನ್ನು ಹೇಗೆ ಪರಿಶೀಲಿಸುವುದು ಎನ್ನುವ ಕುರಿತ ಸೂಚನೆಗಳಿಗಾಗಿ ಇಲ್ಲಿಗೆ ಹೋಗಿ.

ಅನಧಿಕೃತ ತೃತೀಯ-ಪಕ್ಷದ ಆ್ಯಪ್‌ಗಳನ್ನು ಬಳಸಬೇಡಿ

ಅನಧಿಕೃತ ತೃತೀಯ-ಪಕ್ಷದ ಆ್ಯಪ್‌ಗಳನ್ನು ಬಳಸಬೇಡಿ. ಅನಧಿಕೃತ ತೃತೀಯ-ಪಕ್ಷದ ಅಪ್ಲಿಕೇಶನ್‌ಗಳು ಮತ್ತು ಪ್ಲಗಿನ್‌ಗಳನ್ನು (ಅಥವಾ ಟ್ವೀಕ್‌ಗಳನ್ನು) Snapchat ನೊಂದಿಗೆ ಸಂಯೋಜಿತವಾಗಿಲ್ಲದ ಸಾಫ್ಟ್‌ವೇರ್ ಡೆವಲಪರ್‌ಗಳು ರಚಿಸುತ್ತಾರೆ ಮತ್ತು ಸಾಮಾನ್ಯವಾಗಿ Snapchat ಗೆ ಹೆಚ್ಚುವರಿ ವೈಶಿಷ್ಟ್ಯ ಅಥವಾ ಕಾರ್ಯಶೀಲತೆಯನ್ನು ಸೇರಿಸುವುದಾಗಿ ಹೇಳಿಕೊಳ್ಳುತ್ತಾರೆ. ಆದರೆ, ಈ ಅನಧಿಕೃತ ತೃತೀಯ-ಪಕ್ಷದ ಆ್ಯಪ್‌ಗಳು ಮತ್ತು ಪ್ಲಗಿನ್‌ಗಳು Snapchat ನಿಂದ ಬೆಂಬಲಿತವಾಗಿಲ್ಲ ಅಥವಾ ಅನುಮತಿಸಲ್ಪಟ್ಟಿಲ್ಲ ಏಕೆಂದರೆ ಅವು ಕೆಲವೊಮ್ಮೆ ನಿಮ್ಮ ಮತ್ತು ಇತರ Snapchatter ಗಳ ಖಾತೆಗಳ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳಬಹುದು. ಸುರಕ್ಷಿತವಾಗಿ ಇರಲು, ಕೇವಲ ಅಧಿಕೃತ Snapchat ಅಪ್ಲಿಕೇಶನ್ ಅಥವಾ ಅಧಿಕೃತ ತೃತೀಯ-ಪಕ್ಷದ ಆ್ಯಪ್‌ಗಳು ಮತ್ತು ಪ್ಲಗಿನ್‌ಗಳನ್ನು ಮಾತ್ರ ಬಳಸಿ.

ನಿಮ್ಮ ಖಾತೆಯನ್ನು ಸುರಕ್ಷಿತವಾಗಿ ಇರಿಸಲು ಇನ್ನಷ್ಟು ಸಲಹೆಗಳು

ವಂಚಕರ ವಿರುದ್ಧ ನೀವೇ ಅತ್ಯುತ್ತಮ ರಕ್ಷಣಾ ಬೇಲಿಗಳು! ನಿಮ್ಮ ಖಾತೆಯನ್ನು ಸುರಕ್ಷಿತವಾಗಿ ಇರಿಸಲು ಸಹಾಯ ಮಾಡುವುದಕ್ಕೆ ಇನ್ನಷ್ಟು ಸಲಹೆಗಳು ಇಲ್ಲಿವೆ:

  • ನಿಮ್ಮದಲ್ಲದ ಫೋನ್ ಸಂಖ್ಯೆ ಅಥವಾ ಇಮೇಲ್ ವಿಳಾಸವನ್ನು ನಿಮ್ಮ Snapchat ಖಾತೆಗೆ ಸೇರಿಸಬೇಡಿ. ಹಾಗೆ ಮಾಡುವುದರಿಂದ ಇತರರು ನಿಮ್ಮ ಖಾತೆಯನ್ನು ಪ್ರವೇಶಿಸಬಹುದು. ಒಂದು ವೇಳೆ ಯಾರಾದರೂ ಅವರ ಫೋನ್ ಸಂಖ್ಯೆ ಅಥವಾ ಇಮೇಲ್ ವಿಳಾಸವನ್ನು ನಿಮ್ಮ ಖಾತೆಗೆ ಸೇರಿಸುವಂತೆ ಕೇಳಿದರೆ, ನಮಗೆ ತಿಳಿಸಿ.

  • ಬೇರೊಬ್ಬರ ಸಾಧನದಲ್ಲಿ Snapchat ಗೆ ಲಾಗಿನ್ ಮಾಡಬೇಡಿ. ನೀವು ಹಾಗೆ ಮಾಡಿದರೆ, ಅವರು ನಿಮ್ಮ ಖಾತೆಯನ್ನು ಪ್ರವೇಶಿಸಬಹುದು. ನಿಮ್ಮದಲ್ಲದ ಸಾಧನದಲ್ಲಿ ನೀವು ಒಂದು ವೇಳೆ ಲಾಗಿನ್ ಮಾಡಿದರೆ, ನಂತರ ಲಾಗ್‌ಔಟ್ ಮಾಡುವುದನ್ನು ಯಾವಾಗಲೂ ಮರೆಯಬೇಡಿ!

  • ನಿಮ್ಮ ಮೊಬೈಲ್ ಸಾಧನಕ್ಕೆ ಬಲಿಷ್ಠ ಪಾಸ್‌ಕೋಡ್ ಅಥವಾ ಪಾಸ್‌ಫ್ರೇಸ್ ಸೇರಿಸಿ, ಅಥವಾ ಇನ್ನೂ ಉತ್ತಮವೆಂದರೆ, ನಿಮ್ಮ ಸಾಧನವನ್ನು ಅನ್‌ಲಾಕ್ ಮಾಡಲು ನಿಮ್ಮ ಬೆರಳಚ್ಚು ಅಥವಾ ಮುಖವನ್ನು ಬಳಸುವ ಬಯೋಮೆಟ್ರಿಕ್ ದೃಢೀಕರಣವನ್ನು ಬಳಸಿ. ಒಂದು ವೇಳೆ ನೀವು ಈ ಹೆಚ್ಚುವರಿ ನಿಯಂತ್ರಣಗಳನ್ನು ಹೊಂದಿಲ್ಲದಿದ್ದರೆ ಮತ್ತು ನಿಮ್ಮ ಸಾಧನ ಕಳೆದುಹೋದರೆ, ಕಳವಾದರೆ ಅಥವಾ ಗಮನವಿಲ್ಲದಂತೆ ಇರಿಸಿದ್ದರೆ, ನಿಮ್ಮ Snapchat ಅಕೌಂಟ್‌ನ ಕಂಟೆಂಟ್‌ಗಳನ್ನು ಪ್ರವೇಶಿಸಲು ಬೇರೆಯವರಿಗೆ ಸಾಧ್ಯವಾಗಬಹುದು.

  • ಸಂದೇಹಾಸ್ಪದ ಸಂದೇಶಗಳ ಮೇಲೆ ಗಮನ ಇರಿಸಿ, ವಿಶೇಷವಾಗಿ ಪ್ರಶ್ನಾರ್ಹ ಲಿಂಕ್‌ಗಳ ಮೇಲೆ ನೀವು ಕ್ಲಿಕ್ ಮಾಡುವಂತೆ ಪ್ರಚೋದಿಸುವ ಸಂದೇಶಗಳ ಬಗ್ಗೆ ಜಾಗರೂಕರಾಗಿರಿ — ಅವು ದುರುದ್ದೇಶಪೂರಿತ ವೆಬ್‌ಸೈಟ್‌ಗಳತ್ತ ನಿಮ್ಮನ್ನು ಕರೆದೊಯ್ಯಬಹುದು ಅಥವಾ ನಿಮ್ಮ ಪಾಸ್‌ವರ್ಡ್ ನಮೂದಿಸುವಂತೆ ನಿಮ್ಮನ್ನು ಬೇಸ್ತುಬೀಳಿಸಬಹುದು. ನೀವು ಕ್ಲಿಕ್ ಮಾಡುವುದಕ್ಕೆ ಮುನ್ನ ಯೋಚಿಸಿ!

Snapchat ನಲ್ಲಿ ಸುರಕ್ಷಿತವಾಗಿ ಉಳಿಯುವುದಕ್ಕೆ ಸಂಬಂಧಿಸಿ ಹೆಚ್ಚಿನ ಸಲಹೆಗಳಿಗಾಗಿ, ಇಲ್ಲಿ ಹೋಗಿ ಮತ್ತು Snapchat ಸುರಕ್ಷತೆಗೆ ಸಬ್‌ಸ್ಕ್ರೈಬ್ ಮಾಡಿ.