ನಮ್ಮ ಗೌಪ್ಯತೆಯ ತತ್ವಗಳು

Snap ನಲ್ಲಿ, ನಾವು ನಿಮ್ಮ ಗೌಪ್ಯತೆಯನ್ನು ಆದ್ಯತೆಯನ್ನಾಗಿ ಮಾಡುತ್ತೇವೆ. ನೀವು ಪ್ರತಿ ಬಾರಿ Snapchat ಅನ್ನು ಅಥವಾ ನಮ್ಮ ಯಾವುದೇ ಇತರ ಉತ್ಪನ್ನಗಳು ಅಥವಾ ಸೇವೆಗಳನ್ನು ಬಳಸಿದಾಗ ನಿಮ್ಮ ವಿಶ್ವಾಸವನ್ನು ಗಳಿಸುತ್ತೇವೆ ಎನ್ನುವುದು ನಮಗೆ ತಿಳಿದಿದೆ.

ನಿಮ್ಮ ಖಾಸಗಿ ಸಂದೇಶಗಳನ್ನು ನಾವು ಸಂಗ್ರಹಿಸುವುದಿಲ್ಲ ಮತ್ತು ನೀವು ಪೋಸ್ಟ್ ಮಾಡಿದ ಎಲ್ಲದರ ಟೈಮ್‌ಲೈನ್ ಅನ್ನು ನಾವು ಸಾರ್ವಜನಿಕವಾಗಿ ಪ್ರದರ್ಶಿಸುವುದಿಲ್ಲ. ನೀವು ಹಂಚಿಕೊಳ್ಳಲು ಬಯಸುವ ವಿಷಯಗಳನ್ನು, ನೀವು ಅವುಗಳನ್ನು ಹಂಚಿಕೊಳ್ಳಲು ಬಯಸುವವರೆಗೆ ಮಾತ್ರ ಜನರು ನೋಡಲು ಸಾಧ್ಯವಾಗುವಂತೆ Snapchat ಅನ್ನು ವಿನ್ಯಾಸಗೊಳಿಸಲಾಗಿದೆ. ಇದು Snapchat ಗೆ ಶಾಶ್ವತ ದಾಖಲೆಯಂತೆ ಕಡಿಮೆ ಮತ್ತು ಸ್ನೇಹಿತರೊಂದಿಗಿನ ಸಂಭಾಷಣೆಯಂತೆ ಹೆಚ್ಚು ಭಾಸವಾಗುತ್ತದೆ ಎಂದು ನಾವು ನಂಬುತ್ತೇವೆ.

ನಮ್ಮ ಉತ್ಪನ್ನಗಳು ನಿರಂತರವಾಗಿ ಅಭಿವೃದ್ಧಿಗೊಳ್ಳುತ್ತಿದ್ದರೂ, ನಮ್ಮ ಗೌಪ್ಯತೆಯ ತತ್ವಗಳು ಬದಲಾಗದೆ ಉಳಿಯುತ್ತವೆ:

ನಾವು ಪ್ರಾಮಾಣಿಕವಾಗಿ ಮತ್ತು ಮುಕ್ತವಾಗಿ ಸಂವಹನ ನಡೆಸುತ್ತೇವೆ

ನೀವು Snap ನ ಸೇವೆಗಳನ್ನು ಬಳಸಿದಾಗ, ನೀವು ನಮ್ಮೊಂದಿಗೆ ಮಾಹಿತಿ ಹಂಚಿಕೊಳ್ಳುತ್ತೀರಿ. ಹಾಗಾಗಿ, ಆ ಮಾಹಿತಿಯನ್ನು ಹೇಗೆ ಬಳಸಲಾಗುತ್ತದೆ ಎಂದು ನೀವು ಅರ್ಥಮಾಡಿಕೊಳ್ಳಲು ಸಹಾಯ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ನಮ್ಮ ಗೌಪ್ಯತಾ ನೀತಿಯು ನಾವು ಮಾಹಿತಿಯನ್ನು ಹೇಗೆ ಸಂಗ್ರಹಿಸುತ್ತೇವೆ, ಬಳಸುತ್ತೇವೆ, ಹಂಚಿಕೊಳ್ಳುತ್ತೇವೆ ಮತ್ತು ಇರಿಸಿಕೊಳ್ಳುತ್ತೇವೆ ಎನ್ನುವುದನ್ನು ವಿವರಿಸುತ್ತದೆ — ನೀವು ಮುಖ್ಯಾಂಶಗಳನ್ನು ಇಲ್ಲಿ ಓದಬಹುದು. ನಿರ್ದಿಷ್ಟ ವೈಶಿಷ್ಟ್ಯವು ನಿಮ್ಮ ಡೇಟಾವನ್ನು ಹೇಗೆ ಬಳಸುತ್ತದೆ ಎಂಬುದರ ಕುರಿತು ನಿಮಗೆ ಕುತೂಹಲವಿದ್ದರೆ, ಉತ್ಪನ್ನದ ಪ್ರಕಾರ ಗೌಪ್ಯತೆ ವಿಷಯಗಳನ್ನು ಇನ್ನೊಂದಿಷ್ಟು ವಿವರವಾಗಿ ತಿಳಿಸುತ್ತದೆ. ನಮ್ಮ ಆ್ಯಪ್‌ಗಳ ಒಳಗೆ ಮತ್ತು ನಮ್ಮ ಗ್ರಾಹಕ ಸೇವಾ ಸೈಟ್‌ ಆದ್ಯಂತ ವೈಶಿಷ್ಟ್ಯಗಳು ಹೇಗೆ ಡೇಟಾ ಬಳಸುತ್ತವೆ ಎನ್ನುವುದನ್ನು ಕೂಡ ನಾವು ವಿವರಿಸುತ್ತೇವೆ. ಖಂಡಿತವಾಗಿ, ನಿಮಗೆ ಬೇಕಾಗಿರುವುದನ್ನು ಹುಡುಕಲು ನಿಮಗೆ ಇನ್ನೂ ಆಗಿಲ್ಲದಿದ್ದರೆ, ನೀವು ಯಾವಾಗಲೂ ನಮ್ಮನ್ನು ಕೇಳಬಹುದು!

A cell phone with a navigation arrow overlapping

ನಿಮ್ಮನ್ನು ಹೇಗೆ ಅಭಿವ್ಯಕ್ತಪಡಿಸುತ್ತೀರಿ ಎನ್ನುವುದನ್ನು ನೀವು ಆಯ್ಕೆ ಮಾಡಿ

ಸ್ವಯಂ ಅಭಿವ್ಯಕ್ತಿಗೆ ಅಧಿಕಾರ ನೀಡಲು ಗೌಪ್ಯತೆ ಅತ್ಯಗತ್ಯ ಎಂದು ನಾವು ನಂಬುತ್ತೇವೆ. ಆದಕಾರಣ ನೀವು ಯಾರೊಂದಿಗೆ ವಿಷಯಗಳನ್ನು ಹಂಚಿಕೊಳ್ಳುತ್ತೀರಿ, ಅವುಗಳನ್ನು ಹೇಗೆ ಹಂಚಿಕೊಳ್ಳುತ್ತೀರಿ ಮತ್ತು Snapchatter ಗಳು ಮತ್ತು ನೀವು ಆಯ್ಕೆ ಮಾಡಿದ್ದಲ್ಲಿ, ಸಾರ್ವಜನಿಕರು ಅವುಗಳನ್ನು ಎಷ್ಟು ಸಮಯದವರೆಗೆ ನೋಡಬಹುದು ಎನ್ನುವುದರ ಮೇಲೆ ನೀವು ನಿಯಂತ್ರಣ ಹೊಂದಿರುತ್ತೀರಿ. ನಿಮ್ಮ ಕಥೆಯನ್ನು ಯಾರು ನೋಡಬಹುದು, Snap ಮ್ಯಾಪ್‌ನಲ್ಲಿ ನಿಮ್ಮ Bitmoji ಅನ್ನು ಯಾವ ಸ್ನೇಹಿತರು ನೋಡಬಹುದು ಮತ್ತು ಸ್ನೇಹಿತರೊಂದಿಗಿನ ನಿಮ್ಮ Snap ಗಳು ಎಷ್ಟು ಸಮಯದವರೆಗೆ ಇರುತ್ತವೆ ಎನ್ನುವುದನ್ನು ನೀವು ನಿರ್ಧರಿಸಬಹುದು. ನೀವು ವಿಷಯಗಳನ್ನು ನಿಮ್ಮ ಮತ್ತು ಸ್ನೇಹಿತರ ನಡುವೆ ಮಾತ್ರ ಇರಿಸಿಕೊಳ್ಳಬಹುದು, ಅಥವಾ ಒಂದು ಕ್ಷಣವನ್ನು ಇಡೀ ಜಗತ್ತಿನೊಂದಿಗೆ ಹಂಚಿಕೊಳ್ಳಬಹುದು! ಇನ್ನಷ್ಟು ತಿಳಿಯಿರಿ.

A ruler, pencil and paper with heart image on it

ನಾವು ಗೌಪ್ಯತೆಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸ ಮಾಡುತ್ತೇವೆ

ಹೊಸ ವೈಶಿಷ್ಟ್ಯಗಳು ತೀವ್ರವಾದ ಗೌಪ್ಯತೆ ವಿಮರ್ಶೆ ಪ್ರಕ್ರಿಯೆಯ ಮೂಲಕ ಹಾದುಹೋಗುತ್ತವೆ — ನಾವು ವಿಷಯಗಳ ಕುರಿತು ಮಾತನಾಡುತ್ತೇವೆ, ಅವುಗಳನ್ನು ಚರ್ಚಿಸುತ್ತೇವೆ ಮತ್ತು ನಾವು ಹೆಮ್ಮೆ ಹೊಂದಿರುವ ಮತ್ತು ನಾವು ಬಳಸಲು ಬಯಸುವ ಉತ್ಪನ್ನಗಳು ಮತ್ತು ಸೇವೆಗಳನ್ನು ರೂಪಿಸಲು ನಾವು ಕಠಿಣ ಪರಿಶ್ರಮಪಡುತ್ತೇವೆ. ಅಷ್ಟಕ್ಕೂ, ನಾವು ಈ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರತಿ ದಿನ, ನಮ್ಮ ಕೆಲಸ ಮತ್ತು ನಮ್ಮ ವೈಯಕ್ತಿಕ ಜೀವನ ಎರಡರಲ್ಲಿಯೂ ಬಳಸುತ್ತೇವೆ. ನಾವು ನಮಗಾಗಿ, ನಮ್ಮ ಕಂಪನಿಗಾಗಿ, ನಮ್ಮ ಕುಟುಂಬ ಮತ್ತು ನಮ್ಮ ಸ್ನೇಹಿತರಿಗಾಗಿ ನಿರೀಕ್ಷಿಸುವ ಅದೇ ಕಾಳಜಿಯೊಂದಿಗೆ ನಿಮ್ಮ ಮಾಹಿತಿಯನ್ನು ನಿರ್ವಹಿಸುತ್ತೇವೆ.

Notebook with heart shaped image

ನಿಮ್ಮ ಮಾಹಿತಿಯನ್ನು ನೀವು ನಿಯಂತ್ರಿಸುತ್ತೀರಿ

ನಿಮ್ಮ ಮಾಹಿತಿಯನ್ನು ನಿಯಂತ್ರಿಸುವ ಹಕ್ಕು ನಿಮಗಿದೆ. ಆದ ಕಾರಣ ನಿಮ್ಮ ಮಾಹಿತಿಯನ್ನು ಪ್ರವೇಶಿಸಲು ಮತ್ತು ಅಪ್‌ಡೇಟ್ ಮಾಡಲು, ನಮ್ಮೊಂದಿಗೆ ಮತ್ತು ಇತರರೊಂದಿಗೆ ಎಷ್ಟು ಮಾಹಿತಿಯನ್ನು ನೀವು ಹಂಚಿಕೊಳ್ಳುತ್ತೀರಿ ಎನ್ನುವುದನ್ನು ಹೊಂದಾಣಿಕೆ ಮಾಡಲು ಮತ್ತು ನಿಮ್ಮ ಮಾಹಿತಿಯನ್ನು — ಅಥವಾ ಸಂಪೂರ್ಣವಾಗಿ ನಿಮ್ಮ ಖಾತೆಯನ್ನು ಅಳಿಸುವಂತೆ ನಮಗೆ ವಿನಂತಿ ಸಲ್ಲಿಸಲು ನಾವು ನಿಮಗೆ ಸುಲಭವಾದ ವಿಧಾನಗಳನ್ನು ಒದಗಿಸುತ್ತೇವೆ. ನಮ್ಮ ಆ್ಯಪ್‌ಗಳಲ್ಲೇ ನಿಮ್ಮ ಬಹುತೇಕ ಗೌಪ್ಯತೆ ಸೆಟ್ಟಿಂಗ್‌ಗಳನ್ನು ನೀವು ನಿಯಂತ್ರಿಸಬಹುದು. ನೀವು ಇಲ್ಲಿ ಲಾಗ್ ಇನ್ ಮಾಡಿ ನಿಮ್ಮ Snapchat ಮಾಹಿತಿಯನ್ನು ಡೌನ್‌ಲೋಡ್ ಕೂಡ ಮಾಡಬಹುದು. ನಿಮಗೆ ಎಂದಾದರೂ ನಿಮ್ಮ ಡೇಟಾ ಕುರಿತು ನಿರ್ದಿಷ್ಟ ಪ್ರಶ್ನೆಗಳಿದ್ದರೆ ನಮ್ಮನ್ನು ಸಂಪರ್ಕಿಸಲು ಹಿಂಜರಿಯಬೇಡಿ!

Trash can with heart shaped image

ಅಳಿಸುವಿಕೆ ನಮ್ಮ ಡಿಫಾಲ್ಟ್ ಆಯ್ಕೆಯಾಗಿದೆ

ಸ್ನೇಹಿತರೊಂದಿಗೆ ಮುಖತಃ ಸಮಯ ಕಳೆಯುವ ಭಾವನೆಯನ್ನು ಸೆರೆಹಿಡಿಯುವ ಉದ್ದೇಶವನ್ನು Snapchat ಹೊಂದಿದೆ — ಆದಕಾರಣ ಸ್ನೇಹಿತರೊಂದಿಗಿನ Snap ಗಳು ಮತ್ತು ಚಾಟ್‌ಗಳನ್ನು ಒಮ್ಮೆ ನೋಡಿದ ಬಳಿಕ ಅಥವಾ ಅವುಗಳ ಅವಧಿ ಮೀರಿದ ಬಳಿಕ (ನಿಮ್ಮ ಸೆಟ್ಟಿಂಗ್‌ಗಳನ್ನು ಆಧರಿಸಿ) ನಮ್ಮ ಸರ್ವರ್‌ಗಳಿಂದ ಅವುಗಳನ್ನು ಅಳಿಸಲು ನಮ್ಮ ಸಿಸ್ಟಂಗಳನ್ನು ವಿನ್ಯಾಸಗೊಳಿಸಲಾಗಿದೆ. ಸ್ನೇಹಿತರೊಂದಿಗಿನ ಒಂದು Snap ಅಥವಾ ಚಾಟ್ ಅನ್ನು ಅಳಿಸಿದ ಬಳಿಕ, ನಮಗೆ ಮುಖ್ಯವಾಗಿ — ಅದನ್ನು ಯಾವಾಗ ಕಳುಹಿಸಲಾಗಿತ್ತು ಮತ್ತು ಅದನ್ನು ಯಾರಿಗೆ ಕಳುಹಿಸಲಾಗಿತ್ತು ಎನ್ನುವಂತಹ ಮೂಲಭೂತ ವಿವರಗಳನ್ನು (ಇದನ್ನು ನಾವು "ಮೆಟಾಡೇಟಾ" ಎಂದು ಕರೆಯುತ್ತೇವೆ) ನೋಡಲು ಸಾಧ್ಯವಾಗುತ್ತದೆ. ಖಂಡಿತವಾಗಿ, ನೀವು Snap ಗಳನ್ನು ನಿಮ್ಮ ನೆನಪುಗಳಿಗೆ ಉಳಿಸುವುದನ್ನು ಆಯ್ಕೆ ಮಾಡಬಹುದು. ಇನ್ನಷ್ಟು ತಿಳಿಯಿರಿ.

ನಿಮ್ಮ ಸಂಭಾಷಣೆಗಳು ಮತ್ತು My AI ಜೊತೆಗೆ ನೀವು ಹಂಚಿಕೊಳ್ಳುವ ವಿಷಯವನ್ನು ನಾವು ತುಸು ಭಿನ್ನವಾಗಿ ಪರಿಗಣಿಸುತ್ತೇವೆ — ಅದನ್ನು ಅಳಿಸುವಂತೆ ನೀವು ನಮ್ಮನ್ನು ಕೇಳುವವರೆಗೆ ಅಥವಾ ನಿಮ್ಮ ಖಾತೆಯನ್ನು ಅಳಿಸುವವರೆಗು ನಾವು ಅದನ್ನು ಉಳಿಸಿಕೊಳ್ಳುತ್ತೇವೆ.

ಇತರ Snapchatter ಗಳು ಯಾವಾಗಲೂ ಒಂದು ಸ್ಕ್ರೀನ್‌ಶಾಟ್ ತೆಗೆದುಕೊಳ್ಳಬಹುದು ಅಥವಾ ತೃತೀಯ-ಪಕ್ಷದ ಆ್ಯಪ್ ಬಳಸಿಕೊಂಡು ವಿಷಯಗಳನ್ನು ಉಳಿಸಿಕೊಳ್ಳಬಹುದು ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳುವುದು ತುಂಬಾ ಮುಖ್ಯವಾಗಿದೆ. ಕೊನೆಯದಾಗಿ ಹೇಳುವುದಾದರೆ, ತಿಳಿದುಕೊಳ್ಳಲು ಅಗತ್ಯವಿರುವ ವಿಷಯಗಳನ್ನು — ನೀವು ನೈಜ ಜಗತ್ತಿನಲ್ಲಿ ಮಾಡುವ ರೀತಿ, ಕೇವಲ ನೀವು ನಂಬುವ ಜನರೊಂದಿಗೆ ಮಾತ್ರ ಹಂಚಿಕೊಳ್ಳುವುದು ಅತ್ಯುತ್ತಮ!

ಹ್ಯಾಪಿ ಸ್ನ್ಯಾಪಿಂಗ್!