ಟರ್ಕಿ ಗೌಪ್ಯತೆ ಸೂಚನೆ

ಜಾರಿ ದಿನಾಂಕ: ಜನವರಿ 13, 2022

ಈ ಸೂಚನೆಯನ್ನು ನಾವು ವಿಶೇಷವಾಗಿ ಟರ್ಕಿಯಲ್ಲಿನ ಬಳಕೆದಾರರಿಗಾಗಿ ರಚಿಸಿದ್ದೇವೆ. ಟರ್ಕಿಯಲ್ಲಿನ ಬಳಕೆದಾರರು ಟರ್ಕಿಯ ಕಾನೂನಿನಡಿ ನಿರ್ದಿಷ್ಟಪಡಿಸಲಾಗಿರುವ ಕೆಲವು ಗೌಪ್ಯತೆ ಹಕ್ಕುಗಳನ್ನು ಹೊಂದಿದ್ದಾರೆ.  ನಮ್ಮ ಗೌಪ್ಯತೆಯ ತತ್ವಗಳು ಮತ್ತು ಎಲ್ಲ ಬಳಕೆದಾರರಿಗೆ ನಾವು ಒದಗಿಸುವ ಗೌಪ್ಯತೆಯ ನಿಯಂತ್ರಣಗಳು ಈ ಕಾನೂನುಗಳಿಗೆ ಅನುಸಾರವಾಗಿವೆ—ನಾವು ಟರ್ಕಿ ನಿರ್ದಿಷ್ಟವಾದ ಅಗತ್ಯಗಳನ್ನು ಪೂರೈಸುತ್ತೇವೆ ಎನ್ನುವುದನ್ನು ಈ ಸೂಚನೆ ಖಚಿತಪಡಿಸುತ್ತದೆ. ಉದಾಹರಣೆಗೆ, ಎಲ್ಲ ಬಳಕೆದಾರರು ತಮ್ಮ ಡೇಟಾದ ಪ್ರತಿಯನ್ನು ವಿನಂತಿಸಬಹುದು, ಅಳಿಸುವಿಕೆಯನ್ನು ವಿನಂತಿಸಬಹುದು ಮತ್ತು ಆ್ಯಪ್‌ನಲ್ಲಿ ತಮ್ಮ ಗೌಪ್ಯತೆ ಸೆಟ್ಟಿಂಗ್‌ಗಳನ್ನು ನಿಯಂತ್ರಿಸಬಹುದು. ಪೂರ್ಣ ಚಿತ್ರಣಕ್ಕಾಗಿ, ನಮ್ಮ ಗೌಪ್ಯತಾ ನೀತಿಯನ್ನು ಪರಿಶೀಲಿಸಿ.

ಡೇಟಾ ನಿಯಂತ್ರಕ

ಒಂದು ವೇಳೆ ನೀವು ಟರ್ಕಿಯಲ್ಲಿನ ಬಳಕೆದಾರರಾಗಿದ್ದರೆ, 3000 31st Street, Santa Monica, California 90405 ಈ ವಿಳಾಸದಲ್ಲಿ ಇರುವ Snap Inc. ನಿಮ್ಮ ವೈಯಕ್ತಿಕ ಮಾಹಿತಿಯ ನಿಯಂತ್ರಕವಾಗಿರುತ್ತದೆ ಎನ್ನುವುದನ್ನು ನೀವು ತಿಳಿದಿರಬೇಕು.

ನಿಮ್ಮ ಹಕ್ಕುಗಳು

ನಿಮ್ಮ ಮಾಹಿತಿಯ ಮೇಲೆ ನೀವು ನಿಯಂತ್ರಣ ಹೊಂದಿರಬೇಕು ಎಂದು ನಾವು ಬಯಸುತ್ತೇವೆ, ಆದ್ದರಿಂದ ನಿಮ್ಮ ವೈಯಕ್ತಿಕ ಮಾಹಿತಿಗೆ ಸಂಬಂಧಿಸಿ ನಾವು ನಿಮಗೆ ಹಲವು ಹಕ್ಕುಗಳನ್ನು ನೀಡುತ್ತೇವೆ. ದಯವಿಟ್ಟು ಗೌಪ್ಯತಾ ನೀತಿಯ ನಿಮ್ಮ ಮಾಹಿತಿಯ ಮೇಲೆ ನಿಯಂತ್ರಣ ವಿಭಾಗವನ್ನು ಪರಿಶೀಲಿಸಿ.

ಅಂತಾರಾಷ್ಟ್ರೀಯ ಡೇಟಾ ವರ್ಗಾವಣೆಗಳು

ನಿಮಗೆ ನಮ್ಮ ಸೇವೆಗಳನ್ನು ಒದಗಿಸಲು, ಯುನೈಟೆಡ್ ಸ್ಟೇಟ್ಸ್‌ ಅಥವಾ ನೀವು ವಾಸಿಸಿರುವ ಇತರ ದೇಶಗಳಿಂದ ನಾವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಬಹುದು, ಅಲ್ಲಿಗೆ ವರ್ಗಾಯಿಸಬಹುದು ಮತ್ತು ಅಲ್ಲಿ ಸಂಗ್ರಹಣೆ ಮತ್ತು ಪ್ರಕ್ರಿಯೆ ಮಾಡಬಹುದು. ನೀವು ವಾಸಿಸಿರುವ ಸ್ಥಳದಿಂದ ಹೊರಗೆ ನಾವು ಮಾಹಿತಿಯನ್ನು ಹಂಚಿಕೊಂಡಾಗಲೆಲ್ಲ, ನಿಮ್ಮ ಸ್ಥಳೀಯ ಕಾನೂನಿನೊಂದಿಗೆ ನಮ್ಮ ವರ್ಗಾವಣೆ ಅನುಸರಣೆ ಹೊಂದಿದೆ ಎನ್ನುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ, ಇದರಿಂದಾಗಿ ನಿಮ್ಮ ವೈಯಕ್ತಿಕ ಮಾಹಿತಿ ಸೂಕ್ತ ಮಟ್ಟದಲ್ಲಿ ಸುರಕ್ಷಿತವಾಗಿರುತ್ತದೆ.

ಪ್ರತಿನಿಧಿ

ಡೇಟಾ ರಿಜಿಸ್ಟ್ರಾರ್ Danışmanlık Hizmetleri Anonim Şirketi ಅವರನ್ನು Snap Inc. ತನ್ನ ಟರ್ಕಿಯ ಪ್ರತಿನಿಧಿಯನ್ನಾಗಿ ನೇಮಕ ಮಾಡಿದೆ. ನೀವು ಪ್ರತಿನಿಧಿಯನ್ನು ಇಲ್ಲಿ ಸಂಪರ್ಕಿಸಬಹುದು:

Data Registrar Danışmanlık Hizmetleri Anonim Şirketi Maslak Mahallesi Eski Büyükdere Caddesi İz Plaza Giz Apt.  No: 9/78 Sarıyer/İstanbul 34485 snapchat@data-registrar.com