ಮೆಕ್ಸಿಕೊ ಗೌಪ್ಯತೆ ಸೂಚನೆ

ಜಾರಿ ದಿನಾಂಕ: ಸೆಪ್ಟೆಂಬರ್ 30, 2021

ನಿರ್ದಿಷ್ಟವಾಗಿ ಮೆಕ್ಸಿಕೊದಲ್ಲಿನ ಬಳಕೆದಾರರಿಗಾಗಿ ನಾವು ಈ ಸೂಚನೆಯನ್ನು ರಚಿಸಿದ್ದೇವೆ. ಮೆಕ್ಸಕನ್ ಕಾಯ್ದೆಯಡಿ ನಿರ್ದಿಷ್ಟಪಡಿಸಿರುವಂತೆ, ಮೆಕ್ಸಿಕೊದಲ್ಲಿನ ಬಳಕೆದಾರರು Ley Federal de Protección de Datos Personales en Posesión de los Particulares ಸೇರಿದಂತೆ ಕೆಲವು ಗೌಪ್ಯತೆ ಹಕ್ಕುಗಳನ್ನು ಹೊಂದಿದ್ದಾರೆ. ನಮ್ಮ ಗೌಪ್ಯತೆಯ ತತ್ವಗಳು ಮತ್ತು ಎಲ್ಲ ಬಳಕೆದಾರರಿಗೆ ನಾವು ಒದಗಿಸುವ ಗೌಪ್ಯತೆ ನಿಯಂತ್ರಣಗಳು ಈ ಕಾನೂನುಗಳಿಗೆ ಅನುಸಾರವಾಗಿವೆ—ನಾವು ಮೆಕ್ಸಿಕೊ-ನಿರ್ದಿಷ್ಟವಾದ ಅಗತ್ಯಗಳನ್ನು ಒಳಗೊಳ್ಳುತ್ತೇವೆ ಎನ್ನುವುದನ್ನು ಈ ಸೂಚನೆ ಖಚಿತಪಡಿಸುತ್ತದೆ. ಉದಾಹರಣೆಗೆ, ಎಲ್ಲ ಬಳಕೆದಾರರು ತಮ್ಮ ಡೇಟಾದ ಪ್ರತಿಯನ್ನು ವಿನಂತಿಸಬಹುದು, ಅಳಿಸುವಿಕೆಯನ್ನು ವಿನಂತಿಸಬಹುದು ಮತ್ತು ಆ್ಯಪ್‌ನಲ್ಲಿ ತಮ್ಮ ಗೌಪ್ಯತೆ ಸೆಟ್ಟಿಂಗ್‌ಗಳನ್ನು ನಿಯಂತ್ರಿಸಬಹುದು. ಪೂರ್ಣ ಚಿತ್ರಣಕ್ಕಾಗಿ, ನಮ್ಮ ಗೌಪ್ಯತಾ ನೀತಿಯನ್ನು ಪರಿಶೀಲಿಸಿ.

ಡೇಟಾ ನಿಯಂತ್ರಕ

ನೀವು ಮೆಕ್ಸಿಕೋದಲ್ಲಿ ಬಳಕೆದಾರರಾಗಿದ್ದರೆ, 3000 31st Street, Santa Monica, California 90405 ಈ ವಿಳಾಸದಲ್ಲಿ ಇರುವ Snap Inc. ನಿಮ್ಮ ವೈಯಕ್ತಿಕ ಮಾಹಿತಿಯ ನಿಯಂತ್ರಕನಾಗಿರುತ್ತದೆ ಎನ್ನುವುದನ್ನು ನೀವು ತಿಳಿದಿರಬೇಕು.

ಪ್ರವೇಶ, ತಿದ್ದುಪಡಿ, ಮತ್ತು ರದ್ದು ಮಾಡುವಿಕೆಯ ಹಕ್ಕುಗಳು

ಗೌಪ್ಯತಾ ನೀತಿಯ ನಿಮ್ಮ ಮಾಹಿತಿಯ ಮೇಲಿನ ನಿಯಂತ್ರಣ ವಿಭಾಗದಲ್ಲಿ ವಿವರಿಸಿರುವಂತೆ ನಿಮ್ಮ ಪ್ರವೇಶ, ತಿದ್ದುಪಡಿ ಮತ್ತು ರದ್ದುಮಾಡುವಿಕೆಯ ಹಕ್ಕುಗಳನ್ನು ನೀವು ಚಲಾಯಿಸಬಹುದು.

ಆಕ್ಷೇಪಣೆ ಅಥವಾ ಸವಾಲು ನಿಮ್ಮ ಹಕ್ಕು

ನಿಮ್ಮ ಮಾಹಿತಿಯ ನಮ್ಮ ಬಳಕೆಗೆ ಆಕ್ಷೇಪಿಸಲು ಅಥವಾ ಸವಾಲು ಹಾಕಲು ನೀವು ಹಕ್ಕನ್ನು ಹೊಂದಿದ್ದೀರಿ. ಹಲವು ರೀತಿಯ ಡೇಟಾದೊಂದಿಗೆ, ನಾವು ಇನ್ನು ಮುಂದೆ ಪ್ರಕ್ರಿಯೆಗೊಳಿಸುವುದನ್ನು ನೀವು ಬಯಸದಿದ್ದರೆ ಅದನ್ನು ಸರಳವಾಗಿ ಅಳಿಸುವ ಸಾಮರ್ಥ್ಯವನ್ನು ನಾವು ನಿಮಗೆ ಒದಗಿಸಿದ್ದೇವೆ. ಇತರ ಪ್ರಕಾರದ ಡೇಟಾಕ್ಕಾಗಿ, ವೈಶಿಷ್ಟ್ಯವನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸುವ ಮೂಲಕ ನಿಮ್ಮ ಡೇಟಾದ ಬಳಕೆಯನ್ನು ನಿಲ್ಲಿಸುವ ಸಾಮರ್ಥ್ಯವನ್ನು ನಾವು ನಿಮಗೆ ನೀಡಿದ್ದೇವೆ. ಆ್ಯಪ್‌ನಲ್ಲಿ ನೀವು ಈ ಕೆಲಸಗಳನ್ನು ಮಾಡಬಹುದು. ನಾವು ಪ್ರಕ್ರಿಯೆಗೊಳಿಸುವುದಕ್ಕೆ ನೀವು ಒಪ್ಪದಿರುವ ಇತರ ವಿಧಗಳ ಮಾಹಿತಿ ಇದ್ದರೆ, ನೀವು ನಮ್ಮನ್ನು ಸಂಪರ್ಕಿಸಬಹುದು.

ಕುಕೀಗಳು

ಬಹುತೇಕ ಆನ್‌ಲೈನ್ ಸೇವೆಗಳು ಮತ್ತು ಮೊಬೈಲ್ ಅಪ್ಲಿಕೇಶನ್‌ಗಳ ರೀತಿಯಲ್ಲಿ, ನಿಮ್ಮ ಚಟುವಟಿಕೆ, ಬ್ರೌಸರ್ ಮತ್ತು ಸಾಧನದ ಕುರಿತ ಮಾಹಿತಿಯನ್ನು ಸಂಗ್ರಹಿಸಲು ನಾವು ವೆಬ್‌ ಬೀಕನ್‌ಗಳು, ವೆಬ್ ಶೇಖರಣೆ ಮತ್ತು ವಿಶಿಷ್ಟ ಜಾಹೀರಾತು ನೀಡುವಿಕೆ ಗುರುತಿಸುವಿಕೆಗಳಂತಹ, ಕುಕೀಗಳು ಮತ್ತು ಇತರ ತಂತ್ರಜ್ಞಾನಗಳನ್ನು ಬಳಸಬಹುದು.  ನಮ್ಮ ಸೇವೆಗಳಲ್ಲಿ ನಾವು ಮತ್ತು ನಮ್ಮ ಪಾಲುದಾರರು ಕುಕೀಗಳನ್ನು ಹೇಗೆ ಬಳಸುತ್ತೇವೆ ಎನ್ನುವ ಕುರಿತು ಮತ್ತು ನಿಮಗಿರುವ ಆಯ್ಕೆಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು ಗೌಪ್ಯತಾ ನೀತಿಯ ಕುಕೀಗಳು ಮತ್ತು ಇತರ ತಂತ್ರಜ್ಞಾನಗಳಿಂದ ಸಂಗ್ರಹಿಸಲಾಗುವ ಮಾಹಿತಿ ವಿಭಾಗವನ್ನು ನೋಡಿ.