ಕೆನಡಾ ಗೌಪ್ಯತೆ ಸೂಚನೆ

ಜಾರಿಗೊಳ್ಳುವ ದಿನಾಂಕ: ಸೆಪ್ಟೆಂಬರ್ 22, 2023

ನಾವು ಈ ಸೂಚನೆಯನ್ನು ನಿರ್ದಿಷ್ಟವಾಗಿ ಕೆನಡಾದಲ್ಲಿನ ಬಳಕೆದಾರರಿಗಾಗಿ ರೂಪಿಸಿದ್ದೇವೆ. ವೈಯಕ್ತಿಕ ಮಾಹಿತಿ ರಕ್ಷಣೆ ಮತ್ತು ಎಲೆಕ್ಟ್ರಾನಿಕ್ ದಾಖಲೆಗಳ ಕಾಯ್ದೆ (PIPEDA) ಸೇರಿದಂತೆ ಕೆನಡಾದ ಕಾನೂನಿನಡಿಯಲ್ಲಿ ನಿರ್ದಿಷ್ಟಪಡಿಸಿದಂತೆ ಕೆನಡಾದಲ್ಲಿನ ಬಳಕೆದಾರರು ಕೆಲವು ಗೌಪ್ಯತೆ ಹಕ್ಕುಗಳನ್ನು ಹೊಂದಿದ್ದಾರೆ.  ನಮ್ಮ ಗೌಪ್ಯತೆಯ ತತ್ವಗಳು ಮತ್ತು ಎಲ್ಲ ಬಳಕೆದಾರರಿಗೆ ನಾವು ಒದಗಿಸುವ ಗೌಪ್ಯತೆ ನಿಯಂತ್ರಣಗಳು ಈ ಕಾನೂನುಗಳಿಗೆ ಅನುಸಾರವಾಗಿವೆ—ಕೆನಡಾ ನಿರ್ದಿಷ್ಟ ಅಗತ್ಯಗಳನ್ನು ನಾವು ಪೂರೈಸುತ್ತೇವೆ ಎನ್ನುವುದನ್ನು ಈ ಸೂಚನೆ ಖಚಿತಪಡಿಸುತ್ತದೆ. ಉದಾಹರಣೆಗೆ, ಎಲ್ಲ ಬಳಕೆದಾರರು ತಮ್ಮ ಡೇಟಾದ ಒಂದು ಪ್ರತಿಯನ್ನು ವಿನಂತಿಸಬಹುದು, ಖಾತೆ ಅಳಿಸುವಿಕೆಗೆ ವಿನಂತಿಸಬಹುದು ಮತ್ತು ಆ್ಯಪ್‌ನಲ್ಲಿ ತಮ್ಮ ಗೌಪ್ಯತೆ ಸೆಟ್ಟಿಂಗ್‌ಗಳನ್ನು ನಿಯಂತ್ರಿಸಬಹುದು. ಪೂರ್ಣ ಚಿತ್ರಣಕ್ಕಾಗಿ, ನಮ್ಮ ಗೌಪ್ಯತಾ ನೀತಿಯನ್ನು ಪರಿಶೀಲಿಸಿ.

ಡೇಟಾ ನಿಯಂತ್ರಕ

ಒಂದು ವೇಳೆ ನೀವು ಕೆನಡಾದಲ್ಲಿನ ಬಳಕೆದಾರರಾಗಿದ್ದರೆ, ನಿಮ್ಮ ವೈಯಕ್ತಿಕ ಮಾಹಿತಿಗೆ Snap Inc. ಜವಾಬ್ದಾರರಾಗಿರುತ್ತದೆ ಎನ್ನುವುದನ್ನು ನೀವು ತಿಳಿದಿರಬೇಕು.

ನಿಮ್ಮ ಹಕ್ಕುಗಳು

ಗೌಪ್ಯತಾ ನೀತಿಯ ನಿಮ್ಮ ಮಾಹಿತಿಯ ಮೇಲೆ ನಿಯಂತ್ರಣ ವಿಭಾಗದಲ್ಲಿ ವಿವರಿಸಿರುವಂತೆ ಅಥವಾ ಕೆಳಗೆ ಒದಗಿಸಿರುವ ಸಂಪರ್ಕ ಮಾಹಿತಿಯನ್ನು ಬಳಸಿಕೊಂಡು ನಮ್ಮ ಗೌಪ್ಯತೆ ಅಧಿಕಾರಿಯನ್ನು ಸಂಪರ್ಕಿಸುವ ಮೂಲಕ ನಿಮ್ಮ ಪ್ರವೇಶ ಮತ್ತು ತಿದ್ದುಪಡಿಯ ಹಕ್ಕುಗಳನ್ನು ನೀವು ಚಲಾಯಿಸಬಹುದು.

ನಿಮ್ಮ ಪ್ರಾಂತ್ಯವನ್ನು ಆಧರಿಸಿ, ನಿಮ್ಮ ವೈಯಕ್ತಿಕ ಮಾಹಿತಿಯ ಪ್ರಸರಣವನ್ನು ನಿಯಂತ್ರಿಸುವ ಹಕ್ಕು, ಡೇಟಾ ಪೋರ್ಟೆಬಿಲಿಟಿಯ ಹಕ್ಕು, ಸ್ವಯಂಚಾಲಿತ ನಿರ್ಧಾರ ಕೈಗೊಳ್ಳುವಿಕೆಗೆ ಸಂಬಂಧಿಸಿದ ಅವಲೋಕನಗಳ ಕುರಿತು ತಿಳಿದುಕೊಳ್ಳುವ ಮತ್ತು ಸಲ್ಲಿಸುವ ಹಕ್ಕು ಮತ್ತು ಡೇಟಾ ಪ್ರಕ್ರಿಯೆಗೊಳಿಸುವಿಕೆಯ ಕುರಿತ ಮಾಹಿತಿಯನ್ನು ವಿನಂತಿಸುವ ಹಕ್ಕು ಸೇರಿದಂತೆ, ನೀವು ಹೆಚ್ಚುವರಿ ಹಕ್ಕುಗಳನ್ನು ಹೊಂದಿರಬಹುದು.

ಗೌಪ್ಯತೆಯನ್ನು ಮನಸ್ಸಿನಲ್ಲಿಟ್ಟುಕೊಂಡು ನಾವು ನಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ವಿನ್ಯಾಸಗೊಳಿಸುತ್ತೇವೆ. ಅನೇಕ ರೀತಿಯ ಡೇಟಾದೊಂದಿಗೆ, ನಾವು ಇನ್ನು ಮುಂದೆ ಆ ಡೇಟಾವನ್ನು ಪ್ರಕ್ರಿಯೆಗೊಳಿಸಲು ನೀವು ಬಯಸದಿದ್ದರೆ, ಅದನ್ನು ಅಳಿಸುವ ಸಾಮರ್ಥ್ಯವನ್ನು ನಾವು ನಿಮಗೆ ಒದಗಿಸಿದ್ದೇವೆ. ಇತರ ಪ್ರಕಾರದ ಡೇಟಾಕ್ಕಾಗಿ, ವೈಶಿಷ್ಟ್ಯವನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸುವ ಮೂಲಕ ನಿಮ್ಮ ಡೇಟಾದ ಬಳಕೆಯನ್ನು ನಿಲ್ಲಿಸುವ ಸಾಮರ್ಥ್ಯವನ್ನು ನಾವು ನಿಮಗೆ ನೀಡಿದ್ದೇವೆ. ನಾವು ಪ್ರಕ್ರಿಯೆಗೊಳಿಸುವುದಕ್ಕೆ ನೀವು ಸಮ್ಮತಿ ಹೊಂದಿಲ್ಲದಿರುವ ಇತರ ವಿಧಗಳ ಮಾಹಿತಿ ಇದ್ದರೆ ನೀವು ನಮ್ಮನ್ನು ಸಂಪರ್ಕಿಸಬಹುದು.

ನಮ್ಮ ಪ್ರೇಕ್ಷಕರು

13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾರಿಗೂ (ಅಥವಾ ಪೋಷಕರ ಅನುಮೋದನೆಯಿಲ್ಲದೆ ನಮ್ಮ ಸೇವೆಗಳಿಗೆ ನೋಂದಣಿ ಮಾಡಿಸಿಕೊಳ್ಳಲು ಮತ್ತು ಸೇವೆಗಳನ್ನು ಬಳಸಲು ನೀವು ಅಧಿಕಾರ ಪಡೆಯುವುದಕ್ಕಾಗಿ ಅಗತ್ಯವಿರುವ ಅಂತಹ ಹೆಚ್ಚಿನ ವಯಸ್ಸಿಗಿಂತ ಕಡಿಮೆ ವಯಸ್ಸಿನವರಿಗೆ) ನಮ್ಮ ಸೇವೆಗಳು ಉದ್ದೇಶಿತವಾಗಿಲ್ಲ — ಮತ್ತು ಅವುಗಳನ್ನು ನಾವು ನಿಮಗೆ ನಿರ್ದೇಶಿಸುವುದಿಲ್ಲ. ಮತ್ತು ಆಕಾರಣಕ್ಕಾಗಿ ಈ ವಯಸ್ಸಿಗಿಂತ ಕಡಿಮೆ ವಯಸ್ಸಿನವರಿಂದ ನಾವು ತಿಳಿದಿದ್ದೂ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ.

ಅಂತಾರಾಷ್ಟ್ರೀಯ ಡೇಟಾ ವರ್ಗಾವಣೆಗಳು

ನಮ್ಮ ಸೇವೆಗಳನ್ನು ನಿಮಗೆ ಒದಗಿಸಲು, ಯುನೈಟೆಡ್ ಸ್ಟೇಟ್ಸ್ ಮತ್ತು ನೀವು ವಾಸಿಸುವ ಸ್ಥಳದ ಹೊರಗಿನ ಅಧಿಕಾರ ವ್ಯಾಪ್ತಿಗಳಲ್ಲಿ ಇಲ್ಲಿ ವಿವರಿಸಿರುವಂತೆ Snap ಪರವಾಗಿ ಕಾರ್ಯಗಳನ್ನು ಮಾಡಲು Snap Inc. ಸಮೂಹ ಸಂಸ್ಥೆಗಳು ಮತ್ತು ಕೆಲವು ತೃತೀಯ-ಪಕ್ಷದ ಸೇವಾ ಪೂರೈಕೆದಾರರಿಂದ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಸಂಗ್ರಹಿಸಬಹುದು, ಅವರಿಗೆ ವರ್ಗಾಯಿಸಬಹುದು ಮತ್ತು ಶೇಖರಣೆ ಮಾಡಬಹುದು ಮತ್ತು ಪ್ರಕ್ರಿಯೆಗೊಳಿಸಬಹುದು. ನೀವು ವಾಸಿಸುವ ಸ್ಥಳದ ಹೊರಗೆ ನಾವು ಮಾಹಿತಿಯನ್ನು ಹಂಚಿಕೊಂಡಾಗಲೆಲ್ಲ, ವರ್ಗಾವಣೆಯು ನಿಮ್ಮ ಸ್ಥಳೀಯ ಕಾನೂನಿಗೆ ಅನುಸರಣೆ ಹೊಂದಿದೆ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ ಇದರಿಂದಾಗಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಮರ್ಪಕವಾಗಿ ರಕ್ಷಿಸಲಾಗುತ್ತದೆ. ಅಂತಹ ಮಾಹಿತಿ ನೀವು ವಾಸಿಸುವ ಸ್ಥಳದ ಅಧಿಕಾರ ವ್ಯಾಪ್ತಿಯಿಂದ ಹೊರಗಿರುತ್ತದೆ, ಅದನ್ನು ಇರಿಸಿಕೊಂಡ ಅಧಿಕಾರ ವ್ಯಾಪ್ತಿಯ ಕಾನೂನುಗಳಿಗೆ ಅದು ಒಳಪಡುತ್ತದೆ ಮತ್ತು ಸ್ಥಳೀಯ ಕಾನೂನುಗಳಿಗೆ ಅನುಸಾರವಾಗಿ ಅಂತಹ ಇತರ ಅಧಿಕಾರ ವ್ಯಾಪ್ತಿಯಲ್ಲಿ ಸರ್ಕಾರಗಳು, ನ್ಯಾಯಾಲಯಗಳು ಅಥವಾ ಕಾನೂನು ಜಾರಿ ಅಥವಾ ನಿಯಂತ್ರಕ ಏಜೆನ್ಸಿಗಳಿಗೆ ಬಹಿರಂಗಪಡಿಸುವಿಕೆಗೆ ಒಳಪಡಬಹುದು.

ಕುಕೀಗಳು

ಬಹುತೇಕ ಆನ್‌ಲೈನ್ ಸೇವೆಗಳು ಮತ್ತು ಮೊಬೈಲ್ ಅಪ್ಲಿಕೇಶನ್‌ಗಳ ರೀತಿಯಲ್ಲಿ, ನಿಮ್ಮ ಚಟುವಟಿಕೆ, ಬ್ರೌಸರ್ ಮತ್ತು ಸಾಧನದ ಕುರಿತ ಮಾಹಿತಿಯನ್ನು ಸಂಗ್ರಹಿಸಲು ನಾವು ವೆಬ್‌ ಬೀಕನ್‌ಗಳು, ವೆಬ್ ಶೇಖರಣೆ ಮತ್ತು ವಿಶಿಷ್ಟ ಜಾಹೀರಾತು ನೀಡುವಿಕೆ ಗುರುತಿಸುವಿಕೆಗಳಂತಹ, ಕುಕೀಗಳು ಮತ್ತು ಇತರ ತಂತ್ರಜ್ಞಾನಗಳನ್ನು ಬಳಸಬಹುದು.  ನಮ್ಮ ಸೇವೆಗಳು ಮತ್ತು ನಿಮ್ಮ ಆಯ್ಕೆಗಳಲ್ಲಿ ನಾವು ಮತ್ತು ನಮ್ಮ ಪಾಲುದಾರರು ಕುಕೀಗಳನ್ನು ಹೇಗೆ ಬಳಸುತ್ತೇವೆ ಎನ್ನುವ ಕುರಿತು ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು ಗೌಪ್ಯತಾ ನೀತಿಯ ಕುಕೀಗಳು ಮತ್ತು ಇತರ ತಂತ್ರಜ್ಞಾನಗಳಿಂದ ಸಂಗ್ರಹಿಸಿದ ಮಾಹಿತಿ ವಿಭಾಗವನ್ನು ನೋಡಿ.

ದೂರುಗಳು ಅಥವಾ ಪ್ರಶ್ನೆಗಳಿವೆಯೇ?

ನೀವು ನಮ್ಮ ಗೌಪ್ಯತೆ ಬೆಂಬಲ ತಂಡ ಅಥವಾ dpo@snap.com ನಲ್ಲಿ ನಮ್ಮ ಗೌಪ್ಯತೆ ಅಧಿಕಾರಿಗೆ ಯಾವುದೇ ವಿಚಾರಣೆಗಳು ಅಥವಾ ದೂರುಗಳನ್ನು ಸಲ್ಲಿಸಬಹುದು ಎಂದು ನಿಮಗೆ ತಿಳಿಸಲು ಬಯಸುತ್ತೇವೆ. ಕೆನಡಾದ ಗೌಪ್ಯತೆ ಆಯುಕ್ತರ ಕಚೇರಿ ಅಥವಾ ನಿಮ್ಮ ಸ್ಥಳೀಯ ಗೌಪ್ಯತೆ ಆಯುಕ್ತರಿಗೆ ದೂರು ಸಲ್ಲಿಸುವ ಹಕ್ಕನ್ನು ಕೂಡ ನೀವು ಹೊಂದಿದ್ದೀರಿ.