Snap ಗಳು ಮತ್ತು ಚಾಟ್‌ಗಳು

ವೈಯಕ್ತಿಕವಾಗಿ ಅಥವಾ ಫೋನ್‌ನಲ್ಲಿ ಯಾರೊಂದಿಗಾದರೂ ಮಾತನಾಡುವಂತೆಯೇ, Snap ಗಳು ಮತ್ತು ಚಾಟ್‌ಗಳ ಮೂಲಕ ಸಂಭಾಷಣೆ ನಡೆಸುವಿಕೆಯು ನೀವು ಹೇಳಿರುವ ಎಲ್ಲದರ ಶಾಶ್ವತ ದಾಖಲೆಯನ್ನು ಸ್ವಯಂಚಾಲಿತವಾಗಿ ಇರಿಸಿಕೊಳ್ಳದೆ ಆ ಸಮಯದಲ್ಲಿ ನಿಮ್ಮ ಮನಸ್ಸಿನಲ್ಲಿರುವುದನ್ನು ವ್ಯಕ್ತಪಡಿಸಲು ನಿಮಗೆ ಅವಕಾಶ ಕಲ್ಪಿಸುತ್ತದೆ.
ನೀವು Snap ಅನ್ನು ಕಳುಹಿಸುವ ಮೊದಲು ಅದನ್ನು ಉಳಿಸಲು ಸಹ ನೀವು ಆಯ್ಕೆ ಮಾಡಬಹುದು ಮತ್ತು ಸ್ವೀಕರಿಸುವವರು ಸಹ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಬಹುದು. ನೀವು ಚಾಟ್‌ನಲ್ಲಿ ಸಂದೇಶವನ್ನು ಉಳಿಸಲೂಬಹುದು. ಅದನ್ನು ಟ್ಯಾಪ್ ಮಾಡಿ ಅಷ್ಟೇ. ಉಳಿದವುಗಳ ಕುರಿತು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲದೆ, ಮುಖ್ಯವಾಗಿರುವುದನ್ನು ಮಾತ್ರ ಉಳಿಸಲು Snapchat ಸುಲಭವಾಗಿಸುತ್ತದೆ.
ಗೌಪ್ಯತೆಯನ್ನು ಗಮನದಲ್ಲಿಟ್ಟುಕೊಂಡು Snap ಗಳನ್ನು ಉಳಿಸುವ ಆಯ್ಕೆಯನ್ನು ವಿನ್ಯಾಸಗೊಳಿಸಲಾಗಿದೆ. ನಿಮ್ಮ Snap ಗಳನ್ನು Snapchat ಒಳಗೆ ಉಳಿಸಬಹುದೇ ಎನ್ನುವುದನ್ನು ನೀವು ನಿಯಂತ್ರಿಸುತ್ತೀರಿ. Snap ಉಳಿಸುವುದನ್ನು ಅನುಮತಿಸಲು Snap ಸಮಯವನ್ನು ಸಮಯಮಿತಿ ಇಲ್ಲದ್ದಕ್ಕೆ ಸೆಟ್ ಮಾಡಿ. ಚಾಟ್‌ನಲ್ಲಿ ಉಳಿಸಿರುವ Snap ಗಳು ಸೇರಿದಂತೆ ನೀವು ಕಳುಹಿಸಿದ ಯಾವುದೇ ಸಂದೇಶವನ್ನು ನೀವು ಯಾವಾಗಲಾದರೂ ಅಳಿಸಬಹುದು. ಅನ್‌ಸೇವ್ ಮಾಡಲು ಒತ್ತಿ ಹಿಡಿಯಿರಿ ಅಷ್ಟೇ. ಕಳುಹಿಸುವುದಕ್ಕೆ ಮುನ್ನ ಅಥವಾ ನಂತರ, ನೀವು ಒಂದು Snap ಉಳಿಸಿದಾಗ, ಅದು ನಿಮ್ಮ ನೆನಪುಗಳ ಭಾಗವಾಗಬಹುದು. ನೀವು ನಿಮ್ಮ ಸ್ನೇಹಿತರಿಗೆ ಕಳುಹಿಸುವ ಒಂದು Snap ಅನ್ನು ಅವರು ಉಳಿಸಿದಾಗ, ಅದು ಅವರ ನೆನಪುಗಳ ಭಾಗವಾಗಬಹುದು. ನೆನಪುಗಳ ಕುರಿತು ಇನ್ನಷ್ಟು ವಿವರವಾದ ಮಾಹಿತಿಗಾಗಿ ಕೆಳಗೆ ನೆನಪುಗಳ ವಿಭಾಗವನ್ನು ಪರಿಶೀಲಿಸಿ.
ಧ್ವನಿ ಮತ್ತು ವೀಡಿಯೊ ಚಾಟ್ ನಿಮ್ಮ ಸ್ನೇಹಿತರೊಂದಿಗೆ ಚೆಕ್ ಇನ್ ಮಾಡಲು ಅನುಮತಿಸುತ್ತದೆ. ಒಂದು ವೇಳೆ ನೀವು ಕೇವಲ ಧ್ವನಿ ಸಂದೇಶ ನೀಡಲು ಬಯಸಿದರೆ, ನಾವು ಅದಕ್ಕಾಗಿ ಅನುಕೂಲ ಕಲ್ಪಿಸಿದ್ದೇವೆ, ಧ್ವನಿ ಟಿಪ್ಪಣಿಯನ್ನು ರೆಕಾರ್ಡ್ ಮಾಡಲು ಮೈಕ್ರೋಫೋನ್ ಅನ್ನು ಒತ್ತಿ ಹಿಡಿದುಕೊಳ್ಳಿ ಅಷ್ಟೇ. Snapchatter ಗಳು ನಮ್ಮ ಧ್ವನಿ ಟಿಪ್ಪಣಿ ಪ್ರತಿಲಿಪಿ ವೈಶಿಷ್ಟ್ಯವನ್ನು ಕೂಡ ಬಳಸಬಹುದಾಗಿದ್ದು, ಇದು ಧ್ವನಿ ಸಂದೇಶಗಳ ಪ್ರತಿಲಿಪಿಯನ್ನು ರಚಿಸಲು ಮತ್ತು ಲಭ್ಯವಾಗಿಸಲು ನಮಗೆ ಅವಕಾಶ ಕಲ್ಪಿಸುತ್ತದೆ ಇದರಿಂದಾಗಿ ಅವುಗಳನ್ನು ಓದಬಹುದು.
ನೀವು ಮತ್ತು ನಿಮ್ಮ ಸ್ನೇಹಿತರ ನಡುವಿನ ವಾಯ್ಸ್ ಮತ್ತು ವೀಡಿಯೊ ಚಾಟ್‌ಗಳು ಸೇರಿದಂತೆ, Snap ಗಳು ಮತ್ತು ಚಾಟ್‌ಗಳು ಖಾಸಗಿಯಾಗಿವೆ ಮತ್ತು ಪೂರ್ವನಿಯೋಜಿತವಾಗಿ ಅಳಿಸಲ್ಪಡುತ್ತವೆ — ಇದರ ಅರ್ಥ ನಿಮ್ಮ ಅನುಭವವನ್ನು ವೈಯಕ್ತಿಕಗೊಳಿಸಲು, ಶಿಫಾರಸುಗಳನ್ನು ಮಾಡಲು ಅಥವಾ ನಿಮಗೆ ಜಾಹೀರಾತುಗಳನ್ನು ತೋರಿಸಲು ಅವುಗಳ ಕಂಟೆಂಟ್ ಅನ್ನು ನಾವು ಸ್ಕ್ಯಾನ್ ಮಾಡುವುದಿಲ್ಲ. ಅಂದರೆ ಸೀಮಿತ ಸುರಕ್ಷತಾ-ಸಂಬಂಧಿತ ಪರಿಸ್ಥಿತಿಗಳಲ್ಲಿ (ಉದಾಹರಣೆಗೆ, ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಫ್ಲ್ಯಾಗ್ ಮಾಡಿರುವ ಕಂಟೆಂಟ್‌ನ ವರದಿಯನ್ನು ನಾವು ಸ್ವೀಕರಿಸಿದರೆ ಅಥವಾ ಸ್ಪ್ಯಾಮರ್‌ಗಳು ನಿಮಗೆ ಮಾಲ್‌ವೇರ್ ಅಥವಾ ಇತರ ಹಾನಿಕಾರಕ ಕಂಟೆಂಟ್ ಕಳುಹಿಸದಂತೆ ತಡೆಯಲು ಸಹಾಯ ಮಾಡುವುದಕ್ಕಾಗಿ) ಅಥವಾ ನೀವು ನಮ್ಮನ್ನು ಕೇಳದ ಹೊರತು (ಉದಾಹರಣೆಗೆ ನೀವು ನಮ್ಮ ವಾಯ್ಸ್ ಚಾಟ್ ಪ್ರತಿಲಿಪಿ ವೈಶಿಷ್ಟ್ಯವನ್ನು ಬಳಸಿದರೆ) ನೀವು ಏನನ್ನು ಚಾಟ್ ಮಾಡುತ್ತಿದ್ದೀರಿ ಅಥವಾ Snap ಮಾಡುತ್ತಿದ್ದೀರಿ ಎನ್ನುವುದು ನಮಗೆ ತಿಳಿದಿರುವುದಿಲ್ಲ.

ವೆಬ್‌ಗಾಗಿ Snapchat

ವೆಬ್‌ಗಾಗಿ Snapchat ನಿಮ್ಮ ಕಂಪ್ಯೂಟರ್‌ನ ಅನುಕೂಲದಿಂದ Snapchat ಆ್ಯಪ್ ಅನ್ನು ಅನುಭವಿಸಲು ನಿಮಗೆ ಅವಕಾಶ ಕಲ್ಪಿಸುತ್ತದೆ. ಪ್ರಾರಂಭಿಸಲು, ನಿಮ್ಮ Snapchat ರುಜುವಾತುಗಳೊಂದಿಗೆ ಸೈನ್ ಇನ್ ಮಾಡಿ. ಸೈನ್ ಇನ್ ಮಾಡಿದ ಬಳಿಕ, ಅದು ನೀವೇ ಆಗಿದ್ದೀರಿ ಎಂದು ಖಚಿತಪಡಿಸಿಕೊಳ್ಳಲು, ನಾವು ನಿಮ್ಮ Snapchat ಆ್ಯಪ್‌ಗೆ ಪುಶ್ ಅಧಿಸೂಚನೆಯನ್ನು ಕಳುಹಿಸಬಹುದು.
ಒಮ್ಮೆ ನೀವು ಚಲಾಯಿಸಲು ಪ್ರಾರಂಭಿಸಿದಾಗ, Snapchat ಆ್ಯಪ್ ಅನುಭವವನ್ನೇ Snapchat ವೆಬ್‌ ಸಹಾ ಹೋಲುತ್ತದೆ ಎಂದು ನೀವು ಗಮನಿಸಬಹುದು, ಆದರೆ ಕೆಲವು ವ್ಯತ್ಯಾಸಗಳನ್ನು ನೀವು ತಿಳಿದುಕೊಳ್ಳಬೇಕೆಂದು ನಾವು ಬಯಸುತ್ತೇವೆ. ಉದಾಹರಣೆಗೆ, ವೆಬ್‌ಗಾಗಿ Snapchat ನಲ್ಲಿ ನೀವು ಯಾರಿಗಾದರೂ ಕರೆ ಮಾಡುತ್ತಿದ್ದರೆ, ಆಯ್ದ ಲೆನ್ಸ್‌ಗಳಿಗೆ ಮಾತ್ರ ನೀವು ಪ್ರವೇಶವನ್ನು ಹೊಂದಿರುತ್ತೀರಿ ಮತ್ತು ಎಲ್ಲಾ ಕ್ರಿಯೇಟಿವ್ ಟೂಲ್ಸ್ ನಿಮಗೆ ಲಭ್ಯವಿರುವುದಿಲ್ಲ. ಅನುಸರಿಸಲು ನೀವು ಹೆಚ್ಚಿನ ಬದಲಾವಣೆಗಳನ್ನು ನಿರೀಕ್ಷಿಸಬಹುದು ಮತ್ತು ಇನ್ನಷ್ಟು ತಿಳಿದುಕೊಳ್ಳಲು ಕೆಳಗಿನ ಸಂಪನ್ಮೂಲಗಳನ್ನು ಪರಿಶೀಲಿಸಿ!

My AI

My AI ಅನ್ನುವುದು ಜನರೇಟಿವ್ AI ತಂತ್ರಜ್ಞಾನವನ್ನು ಆಧರಿಸಿ ನಿರ್ಮಿಸಿರುವ ಚಾಟ್‌ಬಾಟ್ ಆಗಿದೆ. ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ವಿನ್ಯಾಸಗೊಳಿಸಲಾಗಿದೆ. ನೀವು My AI ಜೊತೆಗೆ ನೇರವಾಗಿ ಚಾಟ್ ಮಾಡಬಹುದು ಅಥವಾ ಸಂಭಾಷಣೆಯಲ್ಲಿ My AI ಅನ್ನು @ ಉಲ್ಲೇಖ ಮಾಡಬಹುದು. ಜನರೇಟಿವ್ AI ಒಂದು ಅಭಿವೃದ್ಧಿಯಾಗುತ್ತಿರುವ ತಂತ್ರಜ್ಞಾನವಾಗಿದ್ದು ಪಕ್ಷಪಾತದಿಂದ ಕೂಡಿದ, ತಪ್ಪಾದ, ಹಾನಿಕರವಾದ ಅಥವಾ ದಾರಿತಪ್ಪಿಸುವ ಪ್ರತಿಕ್ರಿಯೆಗಳನ್ನು ಒದಗಿಸಬಹುದು. ಹಾಗಾಗಿ, ಅದರ ಸಲಹೆಯ ಮೇಲೆ ನೀವು ಅವಲಂಬಿತವಾಗಬಾರದು, ನೀವು ಯಾವುದೇ ಗೌಪ್ಯ ಅಥವಾ ಸೂಕ್ಷ್ಮ ಮಾಹಿತಿಯನ್ನು ಕೂಡ ಹಂಚಿಕೊಳ್ಳಬಾರದು — ನೀವು ಹಾಗೆ ಮಾಡಿದರೆ, ಅದನ್ನು My AI ಬಳಸುತ್ತದೆ.
My AI ಜೊತೆಗಿನ ನಿಮ್ಮ ಸಂಭಾಷಣೆಗಳು ನಿಮ್ಮ ಸ್ನೇಹಿತರ ಜೊತೆಗಿನ ಚಾಟ್‌ಗಳು ಮತ್ತು Snap ಗಳಿಗಿಂತ ಭಿನ್ನವಾಗಿ ಕೆಲಸ ಮಾಡುತ್ತವೆ — ಆ್ಯಪ್‌ನಲ್ಲಿ ಕಂಟೆಂಟ್ ಅಳಿಸುವ ತನಕ ಅಥವಾ ನಿಮ್ಮ ಖಾತೆಯನ್ನು ಅಳಿಸುವ ತನಕ ನೀವು My AI ಗೆ ಕಳುಹಿಸುವ ಮತ್ತು ಅದರಿಂದ ಸ್ವೀಕರಿಸುವ ಕಂಟೆಂಟ್ ಅನ್ನು (ಉದಾಹರಣೆಗೆ Snap ಗಳು ಮತ್ತು ಚಾಟ್‌ಗಳಂತಹವು) ನಾವು ಉಳಿಸಿಕೊಳ್ಳುತ್ತೇವೆ. ನೀವು My AI ಜೊತೆಗೆ ಸಂವಹನ ನಡೆಸಿದಾಗ, My AI ನ ಸುರಕ್ಷತೆ ಮತ್ತು ಭದ್ರತೆಯನ್ನು ವರ್ಧಿಸಲು ಮತ್ತು ಜಾಹೀರಾತುಗಳು ಸೇರಿದಂತೆ ನಿಮ್ಮ ಅನುಭವವನ್ನು ವೈಯಕ್ತಿಕಗೊಳಿಸಲು ಸೇರಿದಂತೆ, Snap ನ ಉತ್ಪನ್ನಗಳನ್ನು ಸುಧಾರಿಸಲು ನೀವು ಹಂಚಿಕೊಳ್ಳುವ ಕಂಟೆಂಟ್ ಮತ್ತು ನಿಮ್ಮ ಸ್ಥಳವನ್ನು(ನಿಮ್ಮ ಸ್ಥಳ ಹಂಚಿಕೆಯನ್ನು ಸಕ್ರಿಯಗೊಳಿಸಿದ್ದಲ್ಲಿ) ನಾವು ಬಳಸುತ್ತೇವೆ.
My AI ಅದರ ಪ್ರತಿಕ್ರಿಯೆಗಳಲ್ಲಿ ನಿಮ್ಮ ಸ್ಥಳವನ್ನು ಅಥವಾ My AI ಗಾಗಿ ನೀವು ಹೊಂದಿಸುವ ಬಯೋ ಅನ್ನು ಕೂಡ ಉಲ್ಲೇಖಿಸಬಹುದು (ನೀವು My AI ಅನ್ನು @ ಉಲ್ಲೇಖ ಮಾಡುವ ಸಂಭಾಷಣೆಗಳಲ್ಲಿ ಸೇರಿದಂತೆ).
ನೀವು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ನೀವು My AI ಜೊತೆಗೆ ಚಾಟ್ ಮಾಡಿದ್ದೀರಾ ಎನ್ನುವುದನ್ನು ನೋಡಲು ಹಾಗೂ My AI ಗೆ ನಿಮ್ಮ ಪ್ರವೇಶವನ್ನು ಆನ್ ಅಥವಾ ಆಫ್ ಮಾಡಲು, ನಿಮ್ಮ ಪೋಷಕ ಅಥವಾ ಪಾಲಕರಂತಹ — ವಿಶ್ವಾಸಾರ್ಹ ವಯಸ್ಕರು — ಕೌಟುಂಬಿಕ ಕೇಂದ್ರವನ್ನು ಬಳಸಬಹುದು. ವಿಶ್ವಾಸಾರ್ಹ ವಯಸ್ಕರು My AI ಜೊತೆಗಿನ ನಿಮ್ಮ ಚಾಟ್‌ಗಳ ಕಂಟೆಂಟ್ ಅನ್ನು ನೋಡಲಾರರು.
My AI ಅನ್ನು ಒದಗಿಸಲು, ನಾವು ನಮ್ಮ ಸೇವಾ ಪೂರೈಕೆದಾರರು ಮತ್ತು ಜಾಹೀರಾತು ನೀಡುವಿಕೆ ಪಾಲುದಾರರೊಂದಿಗೆ ನಿಮ್ಮ ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ.
My AI ಸುಧಾರಣೆ ಮಾಡಲು ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. My AI ನಿಂದ ಯಾವುದೇ ಪ್ರತಿಕ್ರಿಯೆಗಳು ನಿಮಗೆ ಇಷ್ಟವಾಗದಿದ್ದರೆ, ದಯವಿಟ್ಟು ನಮಗೆ ತಿಳಿಸಿ.
ಇನ್ನಷ್ಟು ತಿಳಿಯಲು ಕೆಳಗಿನ ಸಂಪನ್ಮೂಲಗಳನ್ನು ಪರಿಶೀಲಿಸಿ!

ಕಥೆಗಳು

ನಿಮ್ಮ ಆದ್ಯತೆಯ ಪ್ರೇಕ್ಷಕರೊಂದಿಗೆ ನಿಮ್ಮ ಕ್ಷಣಗಳನ್ನು ಹಂಚಿಕೊಳ್ಳಲು ನಿಮಗೆ ಅವಕಾಶ ಕಲ್ಪಿಸುವುದಕ್ಕೆ Snapchat ನಲ್ಲಿ ಕೆಲವು ಭಿನ್ನ ರೀತಿಯ ಕಥೆಗಳಿವೆ. ಪ್ರಸ್ತುತ, ಈ ಕೆಳಗಿನ ಕಥೆ ವಿಧಗಳನ್ನು ನಾವು ಒದಗಿಸುತ್ತೇವೆ:
  • ಖಾಸಗಿ ಕಥೆ. ನೀವು ಕೆಲವೇ ಸ್ನೇಹಿತರೊಂದಿಗೆ ಮಾತ್ರ ಒಂದು ಕಥೆ ಹಂಚಿಕೊಳ್ಳಲು ಬಯಸಿದರೆ, ನೀವು ಖಾಸಗಿ ಕಥೆ ಆಯ್ಕೆಯನ್ನು ಆರಿಸಬಹುದು.
  • BFF ಕಥೆ. ನಿಮ್ಮ ಆತ್ಮೀಯ ಸ್ನೇಹಿತರೊಂದಿಗೆ ಮಾತ್ರ ನಿಮ್ಮ ಕಥೆ ಹಂಚಿಕೊಳ್ಳಲು ನೀವು ಬಯಸಿದರೆ, ನೀವು BFF ಕಥೆ ಸ್ವರೂಪವನ್ನು ಆಯ್ಕೆ ಮಾಡಬಹುದು.
  • ನನ್ನ ಕಥೆ - ಸ್ನೇಹಿತರು. ನನ್ನ ಕಥೆ - ಸ್ನೇಹಿತರು: ನಿಮ್ಮ ಎಲ್ಲ ಸ್ನೇಹಿತರೊಂದಿಗೆ ಒಂದು ಕಥೆ ಹಂಚಿಕೊಳ್ಳಲು ನಿಮಗೆ ಅವಕಾಶ ಕಲ್ಪಿಸುತ್ತದೆ. ನೀವು ಸೆಟ್ಟಿಂಗ್‌ಗಳಲ್ಲಿ 'ನನ್ನ ಕಥೆ'ಯ ವೀಕ್ಷಣೆಯನ್ನು 'ಸ್ನೇಹಿತರು'ಇಂದ 'ಎಲ್ಲರಿಗೂ'ಗೆ ಹೊಂದಿಸಿದರೆ, ನಿಮ್ಮ 'ನನ್ನ ಕಥೆ'ಯನ್ನು ಸಾರ್ವಜನಿಕ ಎಂದು ಪರಿಗಣಿಸಲಾಗುತ್ತದೆ ಮತ್ತು ಎಲ್ಲರಿಗೂ ಕಾಣಿಸಬಹುದು.
  • ಹಂಚಿಕೊಂಡ ಕಥೆಗಳು. ಹಂಚಿಕೊಂಡ ಕಥೆಗಳು ನೀವು ಮತ್ತು ಇತರ Snapchatter ಗಳ ಗುಂಪಿನ ನಡುವಿನ ಕಥೆಗಳಾಗಿವೆ.
  • ಕಮ್ಯುನಿಟಿ ಕಥೆಗಳು. ನೀವು Snapchat ನಲ್ಲಿ ಒಂದು ಸಮುದಾಯದ ಭಾಗವಾಗಿದ್ದರೆ, ನೀವು ಕಮ್ಯುನಿಟಿ ಕಥೆಗೆ ಸಲ್ಲಿಸಬಹುದು. ಈ ಕಂಟೆಂಟ್ ಅನ್ನು ಕೂಡ ಸಾರ್ವಜನಿಕ ಎಂದು ಪರಿಗಣಿಸಲಾಗುತ್ತದೆ ಮತ್ತು ಸಮುದಾಯದ ಸದಸ್ಯರು ನೋಡಬಹುದು.
  • ನನ್ನ ಕಥೆ - ಸಾರ್ವಜನಿಕ. ನಿಮ್ಮ ಕಥೆ ಸಾರ್ವಜನಿಕವಾಗಬೇಕು ಮತ್ತು ವ್ಯಾಪಕವಾದ ಪ್ರೇಕ್ಷಕರನ್ನು ತಲುಪಬೇಕು ಎಂದು ನೀವು ಬಯಸುವುದಾದರೆ, ನೀವು ನಿಮ್ಮ ಕಥೆಯನ್ನು 'ನನ್ನ ಕಥೆ ಸಾರ್ವಜನಿಕ'ಕ್ಕೆ ಸಲ್ಲಿಸಬಹುದು ಮತ್ತು ಅದು Discover ನಂತಹ ಆ್ಯಪ್‌ನ ಇತರ ಭಾಗಗಳಲ್ಲಿ ಪ್ರದರ್ಶಿತವಾಗಬಹುದು.
  • Snap ಮ್ಯಾಪ್. Snap ಮ್ಯಾಪ್‌ಗೆ ಸಲ್ಲಿಸಿದ ಕಥೆಗಳು ಸಾರ್ವಜನಿಕವಾಗಿರುತ್ತವೆ ಮತ್ತು Snap ಮ್ಯಾಪ್‌ನಲ್ಲಿ ಮತ್ತು Snapchat ಹೊರಗೆ ಪ್ರದರ್ಶಿಸಲು ಅರ್ಹವಾಗಿರುತ್ತವೆ.
ನೀವು ಸೆಟ್ಟಿಂಗ್‌ಗಳನ್ನು ಬದಲಾಯಿಸದ ಹೊರತು, ನಿಮ್ಮ ಸಾರ್ವಜನಿಕ ಪ್ರೊಫೈಲ್‌ಗೆ ಕಥೆಯನ್ನು ಉಳಿಸದ ಹೊರತು ಅಥವಾ ನೀವು ಅಥವಾ ಒಬ್ಬ ಸ್ನೇಹಿತ/ತೆ ಅದನ್ನು ಚಾಟ್‌ನಲ್ಲಿ ಉಳಿಸದ ಹೊರತು, ಬಹುತೇಕ ಕಥೆಗಳನ್ನು 24 ಗಂಟೆಗಳ ಬಳಿಕ ಅಳಿಸಲು ಹೊಂದಿಸಲಾಗಿರುತ್ತದೆ. ನೀವು ಕಥೆ ಪೋಸ್ಟ್ ಮಾಡಿದಾಗ, ನಿಮ್ಮ ಸ್ನೇಹಿತರು ಮತ್ತು ಇತರರು ಅದರೊಂದಿಗೆ ಸಂವಾದ ನಡೆಸಬಹುದು. ಉದಾಹರಣೆಗೆ, ನೀವು ಬಳಸಿದ ಅದೇ ಲೆನ್ಸ್ ಅನ್ನು ಅವರು ಬಳಸಬಹುದು, Snap ಅನ್ನು ರೀಮಿಕ್ಸ್ ಮಾಡಬಹುದು ಅಥವಾ ಸ್ನೇಹಿತರು ಮತ್ತು ಇತರರೊಂದಿಗೆ ಹಂಚಿಕೊಳ್ಳಬಹುದು.
ನೆನಪಿಡಿ: ಯಾರು ಬೇಕಿದ್ದರೂ ಕಥೆಯ ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳಬಹುದು ಅಥವಾ ರೆಕಾರ್ಡ್ ಮಾಡಬಹುದು!

ಪ್ರೊಫೈಲ್‌ಗಳು

ನೀವು ಅತ್ಯಂತ ಕಾಳಜಿ ವಹಿಸುವ ಮಾಹಿತಿ ಮತ್ತು Snapchat ವೈಶಿಷ್ಟ್ಯಗಳನ್ನು ಕಂಡುಕೊಳ್ಳಲು ಪ್ರೊಫೈಲ್‌ಗಳು ಸುಲಭವಾಗಿಸುತ್ತವೆ. Snapchat ನಲ್ಲಿ ನನ್ನ ಪ್ರೊಫೈಲ್, ಸ್ನೇಹದ ಪ್ರೊಫೈಲ್‌ಗಳು, ಗುಂಪು ಪ್ರೊಫೈಲ್‌ಗಳು ಮತ್ತು ಸಾರ್ವಜನಿಕ ಪ್ರೊಫೈಲ್‌ಗಳು ಸೇರಿದಂತೆ ವಿವಿಧ ಬಗೆಯ ಪ್ರೊಫೈಲ್‌ಗಳಿವೆ.
ನನ್ನ ಪ್ರೊಫೈಲ್ Snapchat ನ ನಿಮ್ಮ Bitmoji, ಮ್ಯಾಪ್‌ನಲ್ಲಿನ ಸ್ಥಳ, ಸ್ನೇಹಿತರ ಮಾಹಿತಿ ಮತ್ತು ಹೆಚ್ಚಿನ ಮಾಹಿತಿಯನ್ನು ಒಳಗೊಂಡಿದೆ. ಸ್ನೇಹದ ಪ್ರೊಫೈಲ್ ಪ್ರತಿ ಸ್ನೇಹಕ್ಕೆ ವಿಶಿಷ್ಟವಾಗಿದ್ದು, ಇಲ್ಲಿ ನೀವು ಉಳಿಸಿದ Snap ಗಳು ಮತ್ತು ಚಾಟ್‌ಗಳನ್ನು, ನಿಮ್ಮ ಸ್ನೇಹಿತರ Bitmoji ಮತ್ತು ಮ್ಯಾಪ್‌ನಲ್ಲಿ ಸ್ಥಳದಂತಹ (ಅವರು ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರೆ) ನಿಮ್ಮ ಸ್ನೇಹಿತರ Snapchat ಮಾಹಿತಿಯನ್ನು ಕಂಡುಕೊಳ್ಳಬಹುದು ಮತ್ತು ಇಲ್ಲಿ ನೀವು ನಿಮ್ಮ ಸ್ನೇಹವನ್ನು ನಿರ್ವಹಿಸಬಹುದು, ಸ್ನೇಹಿತರನ್ನು ವರದಿ ಮಾಡಬಹುದು, ನಿರ್ಬಂಧಿಸಬಹುದು ಅಥವಾ ತೆಗೆದುಹಾಕಲೂಬಹುದು. ಗುಂಪಿನ ಪ್ರೊಫೈಲ್‌ಗಳು ಗುಂಪು ಚಾಟ್‌ನಲ್ಲಿ ನಿಮ್ಮ ಉಳಿಸಿದ Snap ಗಳು ಮತ್ತು ಚಾಟ್‌ಗಳನ್ನು ಮತ್ತು ನಿಮ್ಮ ಸ್ನೇಹಿತರ Snapchat ಮಾಹಿತಿಯನ್ನು ಪ್ರದರ್ಶಿಸುತ್ತವೆ.
ಸಾರ್ವಜನಿಕ ಕಥೆಗಳು Snapchat ನಲ್ಲಿ Snapchatter ಗಳನ್ನು ಕಂಡುಹಿಡಿಯಲು ಅವಕಾಶ ಕಲ್ಪಿಸುತ್ತವೆ. ಬಹುತೇಕ ಪ್ರದೇಶಗಳಲ್ಲಿ, ನೀವು 18 ಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದರೆ, ನೀವು ಸಾರ್ವಜನಿಕ ಪ್ರೊಫೈಲ್‌ಗೆ ಅರ್ಹರಾಗಿರುತ್ತೀರಿ. ಸಾರ್ವಜನಿಕ ಪ್ರೊಫೈಲ್ ಬಳಸುವಾಗ, ನೀವು ನಿಮ್ಮ ನೆಚ್ಚಿನ ಸಾರ್ವಜನಿಕ ಕಥೆಗಳು, ಸ್ಪಾಟ್‌ಲೈಟ್‌ಗಳು, ಲೆನ್ಸ್‌ಗಳು ಮತ್ತು ಇತರ ಮಾಹಿತಿಯನ್ನು ಪ್ರದರ್ಶಿಸಬಹುದು. ಇತರ Snapchatter ಗಳಿಗೆ ನಿಮ್ಮ ಸಾರ್ವಜನಿಕ ಪ್ರೊಫೈಲ್ ಅನುಸರಿಸಲು ಸಾಧ್ಯವಾಗುತ್ತದೆ. ನಿಮ್ಮ ಫಾಲೋವರ್ ಎಣಿಕೆಯನ್ನು ಪೂರ್ವನಿಯೋಜಿತವಾಗಿ ಆಫ್ ಮಾಡಲಾಗುತ್ತದೆ, ಆದರೆ ನೀವು ಬಯಸಿದರೆ ಅದನ್ನು ಸೆಟ್ಟಿಂಗ್‌ಗಳಲ್ಲಿ ಆನ್ ಮಾಡಬಹುದು.

ಸ್ಪಾಟ್‌ಲೈಟ್‌

ಸ್ಪಾಟ್‌ಲೈಟ್ ನಿಮಗೆ Snapchat ಜಗತ್ತನ್ನು ಒಂದೇ ಸ್ಥಳದಲ್ಲಿ ಅನ್ವೇಷಿಸಲು ಅನುಮತಿಸುತ್ತದೆ ಮತ್ತು ಹೆಚ್ಚು ಮನರಂಜನೆಯ Snap ಗಳನ್ನು ಯಾರೇ ಸೃಷ್ಟಿಸಿದರೂ ಅದರ ಮೇಲೆ ಬೆಳಕು ಚೆಲ್ಲುತ್ತದೆ!
ಸ್ಪಾಟ್‌ಲೈಟ್‌ಗೆ ಸಲ್ಲಿಸಿದ Snap ಗಳು ಮತ್ತು ಕಾಮೆಂಟ್‌ಗಳು ಸಾರ್ವಜನಿಕವಾಗಿರುತ್ತವೆ ಮತ್ತು Snapchat ನಲ್ಲಿ ಮತ್ತು ಹೊರಗೆ ಎರಡೂ ಕಡೆ ಅವುಗಳನ್ನು ಹಂಚಿಕೊಳ್ಳಲು ಅಥವಾ ಸ್ಪಾಟ್‌ಲೈಟ್ Snap ಗಳನ್ನು 'ರೀಮಿಕ್ಸ್' ಮಾಡಲೂ ಸಹ ಇತರ Snapchatter ಗಳಿಗೆ ಸಾಧ್ಯವಾಗಬಹುದು. ಉದಾಹರಣೆಗೆ, ನಿಮ್ಮ ವಿನೋದದ ನೃತ್ಯದ Snap ಅನ್ನು ಅವರು ತೆಗೆದುಕೊಳ್ಳಬಹುದು ಮತ್ತು ಅದರ ಮೇಲೆ ಒಂದು ಪ್ರತಿಕ್ರಿಯೆಯನ್ನು ಲೇಯರ್ ಮಾಡಬಹುದು. ನೀವು ಸಲ್ಲಿಸಿದ ಸ್ಪಾಟ್‌ಲೈಟ್ Snap ಗಳ ಅವಲೋಕನವನ್ನು ನಿಯಂತ್ರಿಸಲು ಮತ್ತು ನೋಡಲು ನಿಮ್ಮ ಪ್ರೊಫೈಲ್‌ನಲ್ಲಿ ನಿಮಗೆ ಸಾಧ್ಯವಾಗುತ್ತದೆ. ನೀವು ಸ್ಪಾಟ್‌ಲೈಟ್ ಕಂಟೆಂಟ್ ಅನ್ನು ಮೆಚ್ಚಿನದಾಗಿ ಕೂಡ ಮಾಡಬಹುದು ಮತ್ತು ಹಾಗೆ ಮಾಡಿದಾಗ, ನಾವು ಅದನ್ನು ಮೆಚ್ಚಿನವುಗಳ ಪಟ್ಟಿಗೆ ಸೇರಿಸುತ್ತೇವೆ ಮತ್ತು ನಿಮ್ಮ ಸ್ಪಾಟ್‌ಲೈಟ್ ಅನುಭವವನ್ನು ವೈಯಕ್ತಿಕಗೊಳಿಸಲು ಅದನ್ನು ಬಳಸುತ್ತೇವೆ.
ನೀವು ಸ್ಪಾಟ್‌ಲೈಟ್‌ನಲ್ಲಿ ಕಂಟೆಂಟ್ ಅನ್ನು ಅನ್ವೇಷಿಸಿದಂತೆ ಮತ್ತು ಅದರೊಂದಿಗೆ ತೊಡಗಿಕೊಂಡಂತೆ, ನಾವು ನಿಮ್ಮ ಸ್ಪಾಟ್‌ಲೈಟ್ ಅನುಭವವನ್ನು ತಕ್ಕುದಾಗಿಸುತ್ತೇವೆ ಮತ್ತು ನೀವು ಇಷ್ಟಪಡಬಹುದು ಎಂದು ನಾವು ಭಾವಿಸುವ ಇನ್ನಷ್ಟು ಕಂಟೆಂಟ್ ಅನ್ನು ನಿಮಗೆ ತೋರಿಸುತ್ತೇವೆ. ಉದಾಹರಣೆಗೆ, ನೃತ್ಯ ಸವಾಲುಗಳನ್ನು ವೀಕ್ಷಿಸುವುದು ನಿಮ್ಮ ಅಚ್ಚುಮೆಚ್ಚಿನದಾಗಿದ್ದರೆ, ನಾವು ನಿಮಗೆ ಇನ್ನಷ್ಟು ನೃತ್ಯ-ಸಂಬಂಧಿತ ಕಂಟೆಂಟ್ ಅನ್ನು ತೋರಿಸುತ್ತೇವೆ. ನೀವು ಒಂದು ಸ್ಪಾಟ್‌ಲೈಟ್ Snap ಅನ್ನು ಹಂಚಿಕೊಂಡಿರಿ, ಶಿಫಾರಸು ಮಾಡಿದಿರಿ ಅಥವಾ ಕಾಮೆಂಟ್ ಮಾಡಿದಿರಿ ಎನ್ನುವುದನ್ನು ನಾವು ನಿಮ್ಮ ಸ್ನೇಹಿತರಿಗೂ ತಿಳಿಸಬಹುದು.
ನೀವು Spotlight ಗೆ Snap ಗಳನ್ನು ಸಲ್ಲಿಸಿದಾಗ, ನಮ್ಮ ಸಮುದಾಯ ಮಾರ್ಗಸೂಚಿಗಳು, ಸ್ಪಾಟ್‌ಲೈಟ್ ನಿಯಮಗಳು ಮತ್ತು ಸ್ಪಾಟ್‌ಲೈಟ್ ಮಾರ್ಗಸೂಚಿಗಳ ಜೊತೆಗೆ ಅನುಸರಣೆ ಮಾಡುವಂತೆ ನಾವು ನಿಮ್ಮನ್ನು ಕೇಳುತ್ತೇವೆ. ನೀವು ಅಳಿಸುವ ತನಕ ನಿಮ್ಮ ಸ್ಪಾಟ್‌ಲೈಟ್ ಸಲ್ಲಿಕೆಗಳನ್ನು ನಮ್ಮ ಸರ್ವರ್‌ಗಳಲ್ಲಿ ಉಳಿಸಲಾಗುತ್ತದೆ ಮತ್ತು ದೀರ್ಘಾವಧಿಯವರೆಗೆ Snapchat ನಲ್ಲಿ ಕಾಣಿಸಬಹುದು. ನೀವು ಸ್ಪಾಟ್‌ಲೈಟ್‌ಗೆ ಸಲ್ಲಿಸಿದ ಒಂದು Snap ಅನ್ನು ನೀವು ತೆಗೆದುಹಾಕಲು ಬಯಸಿದರೆ, ನಿಮ್ಮ ಪ್ರೊಫೈಲ್‌ಗೆ ಹೋಗುವ ಮೂಲಕ ನೀವು ಹಾಗೆ ಮಾಡಬಹುದು.

ನೆನಪುಗಳು

ನೀವು ಉಳಿಸಿದ Snap ಗಳತ್ತ ಹಿಂತಿರುಗಿ ನೋಡಲು ಮತ್ತು ಎಡಿಟ್ ಮಾಡಿ ಅವುಗಳನ್ನು ಮರುಕಳುಹಿಸಲು ಕೂಡ ನೆನಪುಗಳು ಸುಲಭವಾಗಿಸುತ್ತವೆ! ನಿಮ್ಮ ಅನುಭವವನ್ನು ವೈಯಕ್ತಿಕಗೊಳಿಸುವ ಸಲುವಾಗಿ ನೆನಪುಗಳಿಗೆ (ಹಾಗೂ ನೀವು ನಿಮ್ಮ ಸಾಧನದ ಕ್ಯಾಮೆರಾ ರೋಲ್ ಗೆ ನಮಗೆ ಪ್ರವೇಶ ಒದಗಿಸಿದ್ದರೆ, ಅದರಲ್ಲಿ ಕೂಡ) ಉಳಿಸಿದ ಕಂಟೆಂಟ್‌ಗೆ Snapchat ನ ಮಾಂತ್ರಿಕತೆಯನ್ನು ನಾವು ಸೇರಿಸುತ್ತೇವೆ. ಕಂಟೆಂಟ್ ಆಧರಿಸಿದ ಲೇಬಲ್‌ಗಳನ್ನು ಸೇರಿಸುವ ಮೂಲಕ ನಾವು ಇದನ್ನು ಮಾಡುತ್ತೇವೆ, ಇದರಿಂದಾಗಿ ಅದನ್ನು ನೀವು ಸುಲಭವಾಗಿ ಹುಡುಕಬಹುದು ಮತ್ತು ನೀವು ಯಾವ ವಿಧದ ಕಂಟೆಂಟ್‌ನಲ್ಲಿ ಆಸಕ್ತರಾಗಿದ್ದೀರಿ ಎಂದು ನಮಗೆ ಮಾಹಿತಿ ನೀಡಬಹುದು ಇದರಿಂದಾಗಿ ನೆನಪುಗಳಲ್ಲಿ ಅಥವಾ ಸ್ಪಾಟ್‌ಲೈಟ್‌ನಂತಹ, ನಮ್ಮ ಸೇವೆಗಳ ಇತರ ಭಾಗಗಳಲ್ಲಿ ನಾವು ಅದೇ ರೀತಿಯ ಕಂಟೆಂಟ್ ಅನ್ನು ಹುಡುಕಬಹುದು. ಉದಾಹರಣೆಗೆ, ನೆನಪುಗಳಲ್ಲಿ ನೀವು ನಿಮ್ಮ ನಾಯಿಯ ಬಹಳಷ್ಟು Snap ಗಳನ್ನು ಉಳಿಸಿದರೆ ಒಂದು ನಾಯಿಯಿದೆ ಎಂಬುದನ್ನು ನಾವು ಗುರುತಿಸಬಹುದು ಮತ್ತು ಮುದ್ದಾದ ನಾಯಿ ಆಟಿಕೆಗಳ ಕುರಿತು ಸ್ಪಾಟ್‌ಲೈಟ್ Snap ಗಳು ಅಥವಾ ಜಾಹೀರಾತುಗಳನ್ನು ನಿಮಗೆ ತೋರಿಸುವ ಮೂಲಕ ನಿಮ್ಮ ಅನುಭವವನ್ನು ವೈಯಕ್ತಿಕಗೊಳಿಸಬಹುದು!
ಹೊಸ ಟ್ವಿಸ್ಟ್‌ನೊಂದಿಗೆ — ಉದಾಹರಣೆಗೆ ಒಂದು ವಿನೋದದ ಲೆನ್ಸ್‌ನೊಂದಿಗೆ! — ನಿಮ್ಮ ಸ್ನೇಹಿತರ ಜೊತೆಗೆ ನಿಮ್ಮ ನೆನಪುಗಳು ಮತ್ತು ಕ್ಯಾಮೆರಾ ರೋಲ್ ಹಂಚಿಕೊಳ್ಳಲು ಕೂಡ ನಾವು ವಿಧಾನಗಳನ್ನು ಸೂಚಿಸಬಹುದು, ಆದರೆ ಯಾವಾಗ ಮತ್ತು ಎಲ್ಲಿ ಹಂಚಿಕೊಳ್ಳಬೇಕು ಎನ್ನುವುದನ್ನು ನೀವು ನಿರ್ಧರಿಸುತ್ತೀರಿ. ನಿಮ್ಮ ಎಲ್ಲ ನೆನಪುಗಳ ಮೂಲಕ ನ್ಯಾವಿಗೇಟ್ ಮಾಡಲು ಕೂಡ ನಾವು ನಿಮಗೆ ಸಹಾಯ ಮಾಡುತ್ತೇವೆ, ಉದಾಹರಣೆಗೆ ನಿರ್ದಿಷ್ಟ ಸಮಯ ಅಥವಾ ಸ್ಥಳದ ಸುತ್ತ ಅವುಗಳನ್ನು ಗುಂಪುಗೂಡಿಸುವ ಮೂಲಕ, ಇದರಿಂದಾಗಿ ನಿಮ್ಮ ನೆಚ್ಚಿನ ನೆನಪುಗಳನ್ನು ಒಳಗೊಂಡಿರುವ ಕಥೆಗಳು ಅಥವಾ ಸ್ಪಾಟ್‌ಲೈಟ್ Snap ಗಳನ್ನು ನೀವು ಸುಲಭವಾಗಿ ಸೃಷ್ಟಿಸಬಹುದು.
ನೆನಪುಗಳನ್ನು ಆನ್‌ಲೈನ್‌ನಲ್ಲಿ ಬ್ಯಾಕಪ್ ಮಾಡುವುದು ಅವುಗಳು ಕಳೆದುಹೋಗದಂತೆ ನೋಡಿಕೊಳ್ಳಲು ಸಹಾಯ ಮಾಡುತ್ತದೆ, ಆದರೆ ಅದರರ್ಥ ನೀವು ನಿಮ್ಮ ಗೌಪ್ಯತೆ ಅಥವಾ ಸುರಕ್ಷತೆಯನ್ನು ತ್ಯಾಗ ಮಾಡಬೇಕು ಎಂದಲ್ಲ. ಹಾಗಾಗಿಯೇ ನಾವು "ನನ್ನ ಕಣ್ಣುಗಳಿಗೆ ಮಾತ್ರ" ಅನ್ನು ಮಾಡಿದ್ದೇವೆ, ಇದು ನಿಮ್ಮ Snap ಗಳನ್ನು ಸುರಕ್ಷಿತವಾಗಿ ಮತ್ತು ಎನ್‌ಕ್ರಿಪ್ಟ್ ಮಾಡಿ ಇರಿಸುತ್ತದೆ ಮತ್ತು ನೀವು ಆಯ್ಕೆ ಮಾಡಿದ ಪಾಸ್‌ವರ್ಡ್‌ನಿಂದ ರಕ್ಷಿಸಲು ಅನುವು ಮಾಡಿಕೊಡುತ್ತದೆ. ಆ ರೀತಿಯಲ್ಲಿ, ಯಾರಾದರೂ ನಿಮ್ಮ ಸಾಧನವನ್ನು ಕದ್ದರೆ ಮತ್ತು ಯಾವುದೇ ರೀತಿಯಲ್ಲಿ ನಿಮ್ಮ Snapchat ಗೆ ಲಾಗಿನ್ ಆದರೆ, ಆ ಖಾಸಗಿ Snap ಗಳು ಆಗಲೂ ಸುರಕ್ಷಿತವಾಗಿರುತ್ತವೆ. ನನ್ನ ಕಣ್ಣುಗಳಿಗೆ ಮಾತ್ರ ಎಂಬುದರಲ್ಲಿ ಉಳಿಸಿದ ಬಳಿಕ ಪಾಸ್‌ವರ್ಡ್ ಇಲ್ಲದೆ, ಯಾರೂ ಕೂಡ ಈ ವಿಷಯಗಳನ್ನು ನೋಡಲಾಗದು — ನಾವೂ ಕೂಡ! ಆದರೂ ಜಾಗರೂಕರಾಗಿರಿ, ಏಕೆಂದರೆ, ಒಂದು ವೇಳೆ ನೀವು ನಿಮ್ಮ ಪಾಸ್‌ವರ್ಡ್ ಅನ್ನು ಮರೆತರೆ, ಎನ್‌ಕ್ರಿಪ್ಟ್ ಮಾಡಿದ Snap ಗಳನ್ನು ಮರುಪಡೆಯಲು ಯಾವುದೇ ಮಾರ್ಗವಿಲ್ಲ.
ಹೆಚ್ಚುವರಿಯಾಗಿ, ನೆನಪುಗಳಲ್ಲಿ ನೀವು ಮತ್ತು ನಿಮ್ಮ ಸ್ನೇಹಿತರೊಂದಿಗೆ AI ರಚಿಸಿದ ಭಾವಚಿತ್ರಗಳನ್ನು ಕೂಡ ನೀವು ನೋಡಬಹುದು. ಈ ಭಾವಚಿತ್ರಗಳನ್ನು ಸೃಷ್ಟಿಸಲು ನೀವು ಅಪ್‌ಲೋಡ್ ಮಾಡುವ ಸೆಲ್ಫೀಗಳನ್ನು ನಿಮ್ಮ ಮತ್ತು ನಿಮ್ಮ ಸ್ನೇಹಿತರ ಆಸಕ್ತಿಕರ ಚಿತ್ರಗಳನ್ನು ಸೃಷ್ಟಿಸಲು ಜನರೇಟಿವ್ AI ಸಹಾಯದೊಂದಿಗೆ ಬಳಸಲಾಗುತ್ತದೆ.

ಲೆನ್ಸ್‌ಗಳು

ಲೆನ್ಸ್‌ಗಳು ನಿಮಗೆ ನಾಯಿಮರಿಯ ಕಿವಿಗಳನ್ನು ಹೇಗೆ ನೀಡುತ್ತವೆ ಮತ್ತು ನಿಮ್ಮ ಕೂದಲಿನ ಬಣ್ಣವನ್ನು ಹೇಗೆ ಬದಲಾಯಿಸುತ್ತವೆ ಎಂದು ಎಂದಾದರೂ ಆಶ್ಚರ್ಯಪಟ್ಟಿದ್ದೀರಾ?
ಲೆನ್ಸ್‌ಗಳ ಹಿಂದಿನ ಕೆಲವು ಮ್ಯಾಜಿಕ್‌ಗೆ "ವಸ್ತು ಗುರುತಿಸುವಿಕೆ" ಕಾರಣವಾಗಿದೆ. ವಸ್ತು ಗುರುತಿಸುವಿಕೆ ಎನ್ನುವುದು ಒಂದು ಆಲ್ಗಾರಿದಂ ಆಗಿದ್ದು, ಒಂದು ಚಿತ್ರದಲ್ಲಿ ಯಾವ ವಸ್ತುಗಳಿವೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಕಂಪ್ಯೂಟರ್‌ಗೆ ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ. ಈ ಸಂದರ್ಭದಲ್ಲಿ, ಇದು ಮೂಗನ್ನು ಮೂಗು ಅಥವಾ ಕಣ್ಣನ್ನು ಕಣ್ಣು ಎಂದು ನಮಗೆ ತಿಳಿಸುತ್ತದೆ.
ಆದರೆ, ವಸ್ತು ಪತ್ತೆ ಅನ್ನುವುದು ನಿಮ್ಮ ಮುಖವನ್ನು ಗುರುತಿಸುವಂತೆ ಅಲ್ಲ. ಯಾವುದು ಮುಖ ಮತ್ತು ಯಾವುದು ಮುಖವಲ್ಲ ಎಂದು ಲೆನ್ಸ್‌ಗಳು ಹೇಳಬಲ್ಲವಾದರೂ, ನಿರ್ದಿಷ್ಟ ಮುಖಗಳನ್ನು ಅವು ಗುರುತಿಸಲಾರವು!
ವಿನೋದಮಯ ಅನುಭವಗಳನ್ನು ಸೃಷ್ಟಿಸಲು ಮತ್ತು ನಿಮ್ಮ ಚಿತ್ರ ಹಾಗೂ ಅನುಭವವನ್ನು ವಿಶೇಷವಾದುದಕ್ಕೆ ಪರಿವರ್ತಿಸಲು ನಮ್ಮ ಹಲವು ಲೆನ್ಸ್‌ಗಳು ಜನರೇಟಿವ್ AI ಮೇಲೆ ಅವಲಂಬಿತವಾಗಿವೆ.

Snap ಕಿಟ್

Snap ಕಿಟ್ ಎನ್ನುವುದು ನಿಮ್ಮ ನೆಚ್ಚಿನ ಆ್ಯಪ್‌ಗಳೊಂದಿಗೆ ಅಥವಾ ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಗಳಿಂದ ನಿಮ್ಮ Snapchat ಖಾತೆಗೆ Snap ‌ಗಳು, ಕಥೆಗಳು ಮತ್ತು Bitmoji ಗಳನ್ನು ಸುಲಭವಾಗಿ ಹಂಚಿಕೊಳ್ಳಲು ನಿಮಗೆ ಅನುಮತಿಸುವ ಡೆವಲಪರ್ ಪರಿಕರಗಳ ಒಂದು ಗುಂಪಾಗಿದೆ! ಒಂದು ಆ್ಯಪ್ ಅಥವಾ ವೆಬ್‌ಸೈಟ್‌ಗೆ ಸಂಪರ್ಕಗೊಳಿಸಲು ನೀವು ಆಯ್ಕೆ ಮಾಡಿದಾಗ, Snap ಕಿಟ್ ಮೂಲಕ ಹಂಚಿಕೊಂಡ ಮಾಹಿತಿಯನ್ನು ನೀವು ವಿಮರ್ಶಿಸಬಹುದು. Snapchat ಸೆಟ್ಟಿಂಗ್‌ಗಳಲ್ಲಿ ನೀವು ಯಾವುದೇ ಸಮಯದಲ್ಲಿ ಆ್ಯಪ್‌ ಅಥವಾ ವೆಬ್‌ಸೈಟ್ ಪ್ರವೇಶವನ್ನು ತೆಗೆದುಹಾಕಬಹುದು.
ಒಂದು ಸಂಪರ್ಕಗೊಳಿಸಿದ ಆ್ಯಪ್ ಅಥವಾ ವೆಬ್‌ಸೈಟ್ ಅನ್ನು ನೀವು 90 ದಿನಗಳಲ್ಲಿ ತೆರೆಯದಿದ್ದರೆ, ನಾವು ಅದರ ಪ್ರವೇಶ ತೆಗೆದುಹಾಕುತ್ತೇವೆ, ಆದರೆ ಈಗಾಗಲೇ ಹಂಚಿಕೊಳ್ಳಲಾಗಿರುವ ಯಾವುದೇ ಡೇಟಾ ಕುರಿತು ನಿಮಗೆ ಪ್ರಶ್ನೆಗಳಿದ್ದರೆ ನೀವು ಡೆವಲಪರ್ ಅನ್ನು ಸಂಪರ್ಕಿಸಬೇಕು.

Spectacles

Spectacles ಅನ್ನುವುದು ಸನ್‌ಗ್ಲಾಸ್ ಆಗಿದ್ದು ನೀವು ನೋಡುವ ರೀತಿಯಲ್ಲಿ ನಿಮ್ಮ ಜಗತ್ತನ್ನು ಸೆರೆಹಿಡಿಯುತ್ತದೆ. ಆ ಕ್ಷಣದಲ್ಲಿ, ಕ್ಷಣವನ್ನು ಉಳಿಸಲು ಬಟನ್ ಒತ್ತಿ ಸಾಕು — ಹಾದಿಗೆ ಫೋನ್ ಅಡ್ಡಬರುವ ಅಗತ್ಯವಿಲ್ಲ. ನಾವು Spectacles ತಂಪುಕನ್ನಡಕಗಳನ್ನು ನಿರ್ದಿಷ್ಟವಾಗಿ ತಯಾರಿಸಿದೆವು ಏಕೆಂದರೆ ನೀವು ಜಗತ್ತಿನಲ್ಲಿ ಅಡ್ಡಾಡುತ್ತಿರುವಾಗ — ನೀವು ಸಾಹಸ ಪ್ರಯಾಣ ಕೈಗೊಂಡಿರುವಾಗ ಅಥವಾ ಸುಮ್ಮನೆ ಸುತ್ತಾಡುತ್ತಿರುವಾಗ, ಬಳಸುವುದಕ್ಕಾಗಿ ಅವುಗಳನ್ನು ತಯಾರಿಸಲಾಗಿದೆ.
ನೀವು Spectacles ಗಳೊಂದಿಗೆ ಫೋಟೋ ಅಥವಾ ವೀಡಿಯೊ ತೆಗೆದುಕೊಂಡಾಗಲೆಲ್ಲಾ, ನೀವು Snap ತೆಗೆದುಕೊಳ್ಳುತ್ತಿರುವಿರಿ ಅಥವಾ ವೀಡಿಯೊ ರೆಕಾರ್ಡಿಂಗ್ ಮಾಡುತ್ತಿದ್ದೀರಿ ಎಂದು ನಿಮ್ಮ ಸ್ನೇಹಿತರಿಗೆ ತಿಳಿಸಲು LED ಗಳು ಬೆಳಗುತ್ತವೆ.
ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು ಯಾವಾಗಲೂ Snapchatter ಗಳನ್ನು ಚಿಂತನಶೀಲರಾಗಿರಲು ಮತ್ತು ಜನರ ಗೌಪ್ಯತೆಯನ್ನು ಗೌರವಿಸುವಂತೆ ಕೇಳಿಕೊಂಡಿವೆ ಮತ್ತು ಇದೇ ತತ್ವವು Spectacles ಗಳಿಗೂ ಅನ್ವಯಿಸುತ್ತದೆ, ಅವುಗಳ ವಿನ್ಯಾಸದವರೆಗೂ!
ನಾವು ನಿರಂತರವಾಗಿ Spectacles ಅನ್ನು ನವೀಕರಿಸುತ್ತಿದ್ದೇವೆ - ವಿಭಿನ್ನ ತಲೆಮಾರುಗಳು ತಮ್ಮದೇ ಆದ ವಿಶಿಷ್ಟ ಮತ್ತು ಉತ್ತೇಜಕ ವೈಶಿಷ್ಟ್ಯಗಳನ್ನು ಹೊಂದಿವೆ. ಹೊಸ Spectacles ನಿಮ್ಮ ಸುತ್ತಲಿನ ಪ್ರಪಂಚದ ಮೇಲೆ ತಲ್ಲೀನಗೊಳಿಸುವ ಲೆನ್ಸ್‌ಗಳನ್ನು ಆವರಿಸುತ್ತದೆ ಮತ್ತು ಕೆಳಗೆ ವಿವರಿಸಿದ ಕೆಲವು ಸ್ಕ್ಯಾನ್ ವೈಶಿಷ್ಟ್ಯಗಳನ್ನು ಸಂಯೋಜಿಸುತ್ತದೆ.

ನಿಮ್ಮ Snapchat ಖಾತೆ

ನೀವು Snapchat ಒಳಗಡೆಯೇ ನಿಮ್ಮ ಬಹುತೇಕ ಪ್ರಮುಖ ಖಾತೆ ಮಾಹಿತಿ ಮತ್ತು ಗೌಪ್ಯತೆ ಸೆಟ್ಟಿಂಗ್‌ಗಳನ್ನು ನೋಡಬಹುದು ಮತ್ತು ಎಡಿಟ್ ಮಾಡಬಹುದು. ಆದರೆ ನಮ್ಮ ಆ್ಯಪ್‌ಗಳಲ್ಲಿ ಇಲ್ಲದ ಒಂದು ವಿಷಯದ ಕುರಿತು ನೀವು ಕುತೂಹಲ ಹೊಂದಿದ್ದರೆ, ನೀವು accounts.snapchat.com ಎಂಬಲ್ಲಿಗೆ ಭೇಟಿ ನೀಡಬಹುದು, ‘ನನ್ನ ಡೇಟಾ’ ಕ್ಲಿಕ್ ಮಾಡಿ ಮತ್ತು ನಂತರ ‘ವಿನಂತಿ ಸಲ್ಲಿಸಿ’ ಅನ್ನು ಕ್ಲಿಕ್ ಮಾಡಬಹುದು. ನಿಮ್ಮ ಖಾತೆಯ ಮಾಹಿತಿಯ ನಕಲನ್ನು ನಾವು ಸಿದ್ಧಪಡಿಸುತ್ತೇವೆ ಮತ್ತು ಅದು ಯಾವಾಗ ಡೌನ್‌ಲೋಡ್ ಮಾಡಲು ಸಿದ್ಧವಾಗಿದೆ ಎಂಬುದನ್ನು ನಿಮಗೆ ತಿಳಿಸುತ್ತೇವೆ. ಎಂದಾದರೂ ನೀವು Snapchat ತೊರೆಯಲು ಬಯಸಿದರೆ, ನೀವು ನಿಮ್ಮ ಖಾತೆಯನ್ನು accounts.snapchat.com ನಲ್ಲಿ ಕೂಡ ಅಳಿಸಬಹುದು.

ಸ್ಕ್ಯಾನ್‌ ಮಾಡಿ

ನಮ್ಮ ಸ್ಕ್ಯಾನ್ ಕಾರ್ಯವೈಶಿಷ್ಟ್ಯದ ಮೂಲಕ Snapcode ಗಳು ಮತ್ತು QR ಕೋಡ್‌ಗಳನ್ನು ಸ್ಕ್ಯಾನ್ ಮಾಡಲು ನೀವು ನಿಮ್ಮ ಫೋನ್ ಬಳಸಬಹುದು. ನೀವು ಒಂದು ಸ್ಕ್ಯಾನ್ ಆರಂಭಿಸಿದಾಗ, ಕೋಡ್‌ನ ಉದ್ದೇಶಿತ ಗಮ್ಯಸ್ಥಾನಕ್ಕೆ ನಿಮ್ಮನ್ನು ನಿರ್ದೇಶಿಸುವ ಲಿಂಕ್ ಪಾಪ್ ಅಪ್ ಅನ್ನು ನೀವು ನೋಡಬಹುದು.

Snap ಮ್ಯಾಪ್

Snap ಮ್ಯಾಪ್ ಅತ್ಯಂತ ವೈಯಕ್ತಿಕಗೊಳಿಸಿದ ಮ್ಯಾಪ್ ಆಗಿದೆ ಮತ್ತು ನೀವು ಮತ್ತು ನಿಮ್ಮ ಸ್ನೇಹಿತರು ಎಲ್ಲಿದ್ದೀರಿ ಹಾಗೂ ಎಲ್ಲೆಲ್ಲಿ ಹೋಗಿದ್ದಿರಿ, ನಿಮ್ಮ ಸುತ್ತ ಏನು ನಡೆಯುತ್ತಿದೆ ಎನ್ನುವುದನ್ನು ನೋಡಲು, ನಿಮ್ಮ ನೆಚ್ಚಿನ ರೆಸ್ಟೊರೆಂಟ್‌ಗಳು ಮತ್ತು ಬಾರ್‌ಗಳನ್ನು ಉಳಿಸಲು ಮತ್ತು ಕಂಡುಹಿಡಿಯಲು ಹಾಗೂ ಜಗತ್ತಿನಾದ್ಯಂತ ಏನು ನಡೆಯುತ್ತಿದೆ ಎನ್ನುವುದನ್ನು ಕೂಡ ನೋಡಲು ನಿಮಗೆ ಅವಕಾಶ ಕಲ್ಪಿಸುತ್ತದೆ.
ನೀವು ಪರಸ್ಪರ ಸ್ನೇಹಿತರಾಗುವ ತನಕ, ಮೊದಲ ಬಾರಿಗೆ ಮ್ಯಾಪ್ ತೆರೆಯುವ ತನಕ, ಸಾಧನ ಸ್ಥಳ ಅನುಮತಿಯನ್ನು ನೀಡುವ ತನಕ ಮತ್ತು ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ಸ್ಥಳ ಹಂಚಿಕೊಳ್ಳುವುದನ್ನು ಆಯ್ಕೆ ಮಾಡುವ ತನಕ ನಿಮ್ಮ ಸ್ನೇಹಿತರ Snap ಮ್ಯಾಪ್‌ನಲ್ಲಿ ನೀವು ಕಾಣಿಸುವುದಿಲ್ಲ. ನೀವು 24 ಗಂಟೆಗಳ ಕಾಲ ಅಪ್ಲಿಕೇಶನ್ ಅನ್ನು ತೆರೆಯದಿದ್ದರೆ, ನಿಮ್ಮ ಲೈವ್ ಸ್ಥಳವನ್ನು ಅವರೊಂದಿಗೆ ಅನಿರ್ದಿಷ್ಟವಾಗಿ ಹಂಚಿಕೊಳ್ಳಲು ನೀವು ಆಯ್ಕೆ ಮಾಡದ ಹೊರತು, ನೀವು Snapchat ಅನ್ನು ಮತ್ತೆ ತೆರೆಯುವವರೆಗೆ ಮ್ಯಾಪ್‍ನಲ್ಲಿ ಸ್ನೇಹಿತರಿಗೆ ನೀವು ಗೋಚರಿಸುವುದಿಲ್ಲ. ನೀವು Snap ಮ್ಯಾಪ್ ಸೆಟ್ಟಿಂಗ್‌ಗಳಲ್ಲಿ ನಿಮ್ಮ ಸ್ಥಳವನ್ನು ಹಂಚಿಕೊಳ್ಳುತ್ತಿರುವ ಜನರನ್ನು ನೀವು ಯಾವಾಗಲೂ ನವೀಕರಿಸಬಹುದು ಅಥವಾ ನಿಮ್ಮ ಲೈವ್ ಸ್ಥಳವನ್ನು ನೀವು ಹಂಚಿಕೊಳ್ಳುತ್ತಿರುವವರನ್ನು ಹೊರತುಪಡಿಸಿ ಎಲ್ಲರಿಂದಲೂ ನಿಮ್ಮ ಸ್ಥಳವನ್ನು ಮರೆಮಾಡಲು 'ಗೋಸ್ಟ್ ಮೋಡ್' ಗೆ ಹೋಗಿ. ನೀವು ನಿಮ್ಮ ಲೈವ್ ಸ್ಥಳವನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಲು ಬಯಸಿದರೆ, ಅದಕ್ಕಾಗಿ ಪ್ರತ್ಯೇಕ ಸೆಟ್ಟಿಂಗ್ ಇದೆ. ಸ್ಥಳ ಹಂಚಿಕೆಯನ್ನು ಸ್ವಲ್ಪ ಸಮಯದವರೆಗೆ ಸಕ್ರಿಯಗೊಳಿಸಿದರೆ ನಾವು ನಿಮಗೆ ನೆನಪಿಸಬಹುದು.
Snap ಮ್ಯಾಪ್‌ಗೆ ಸಲ್ಲಿಸಲಾಗಿರುವ ಅಥವಾ ಸ್ಥಳ ಟ್ಯಾಗ್‌ನೊಂದಿಗೆ ಸ್ಪಾಟ್‌ಲೈಟ್‌ನಲ್ಲಿ ಕಾಣಿಸುವ Snap ಗಳು ಮ್ಯಾಪ್‌ನಲ್ಲಿ ಕಾಣಿಸಬಹುದು — ಆದರೆ ಪ್ರತಿ Snap ಕೂಡ ಅಲ್ಲಿ ಕಾಣಿಸುವುದಿಲ್ಲ. ಮ್ಯಾಪ್‌ನಲ್ಲಿರುವ ಬಹುತೇಕ Snap ‌ಗಳನ್ನು ಸ್ವಯಂಚಾಲಿತ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ನೆನಪಿನಲ್ಲಿಡಿ: Snap ಮ್ಯಾಪ್‌ಗೆ ಸಲ್ಲಿಸಿರುವ ಅಥವಾ ಸ್ಪಾಟ್‌ಲೈಟ್‌ನಲ್ಲಿ ಸ್ಥಳ-ಟ್ಯಾಗ್ ಮಾಡಿರುವ Snap ಗಳು ಸಾರ್ವಜನಿಕ ವಿಷಯವಾಗಿವೆ ಮತ್ತು ನಿಮ್ಮ Snap ಅನ್ನು Snapchat ಹೊರಗೆ ಹಂಚಿಕೊಂಡಿದ್ದರೆ ಅದು Snapchat ಹೊರಗೆ ಕಾಣಿಸಬಹುದು. ಜೊತೆಗೆ, Snap ಮ್ಯಾಪ್ ಸಲ್ಲಿಕೆಗಳನ್ನು ಒಂದಿಷ್ಟು ಸಮಯ ಶೇಖರಣೆ ಮಾಡಿರಬಹುದು ಮತ್ತು ದೀರ್ಘಾವಧಿಯವರೆಗೆ — ಕೆಲವೊಮ್ಮೆ ವರ್ಷಗಳ ಕಾಲ Snapchat ನಲ್ಲಿ ಗೋಚರಿಸಬಹುದು. ನೀವು Snap ಮ್ಯಾಪ್‌ಗೆ ಸಲ್ಲಿಸಿರುವ ಅಥವಾ ಸ್ಪಾಟ್‌ಲೈಟ್‌ನಲ್ಲಿ ಸ್ಥಳ-ಟ್ಯಾಗ್ ಮಾಡಿರುವ ಒಂದು Snap ಅನ್ನು ತೆಗೆದುಹಾಕಲು ಬಯಸಿದರೆ, ನಿಮ್ಮ ಪ್ರೊಫೈಲ್‌ಗೆ ಹೋಗುವ ಮೂಲಕ ನೀವು ಹಾಗೆ ಮಾಡಬಹುದು. ನಿಮ್ಮ ಹೆಸರು ಮತ್ತು ಇತರ ಪ್ರೊಫೈಲ್ ವಿವರಗಳಿಗೆ Snap ಅನ್ನು ಸಂಬಂಧಪಡಿಸದೆ Snap ಮ್ಯಾಪ್‌ಗೆ ಸಲ್ಲಿಸುವುದನ್ನು ಕೂಡ ನೀವು ಆಯ್ಕೆ ಮಾಡಬಹುದು.
ಆಸಕ್ತಿದಾಯಕವಾದ ಏನಾದರೂ ನಡೆಯುತ್ತಿರುವಂತೆ ಕಾಣಿಸಿದಾಗ, ಮ್ಯಾಪ್‌ನಲ್ಲಿ ಒಂದು ಕಥೆ ಥಂಬ್‌ನೇಲ್ ಕಾಣಿಸಿಕೊಳ್ಳಬಹುದು. ಮ್ಯಾಪ್‌ನಲ್ಲಿ ನೀವು ಜೂಮ್ ಮಾಡಿದಾಗ ಸ್ಥಳಗಳ ಕಥೆಗಳು ಕೂಡ ಕಾಣಿಸಬಹುದು. ಬಹುತೇಕ ಸಲ, ಇವು ಸ್ವಯಂಚಾಲಿತವಾಗಿ ಸೃಷ್ಟಿಯಾಗುತ್ತವೆ — ಇದೇ ವೇಳೆ ಅತಿದೊಡ್ಡ ಕಾರ್ಯಕ್ರಮಗಳ ಕಥೆಗಳು ಹೆಚ್ಚಾಗಿ ನೇರ ಅನುಭವ (ಹ್ಯಾಂಡ್ಸ್‌-ಆನ್) ವಿಧಾನವನ್ನು ಸ್ವೀಕರಿಸಬಹುದು.
ನೀವು Snap ಮ್ಯಾಪ್‌ಗೆ ಮತ್ತು Snapchat ನ ಇತರ ಸಾರ್ವಜನಿಕ ಪ್ರದೇಶಗಳಿಗೆ ಸಲ್ಲಿಸುವ Snap ಗಳ ಕುರಿತು ದಯವಿಟ್ಟು ಎಚ್ಚರಿಕೆಯಿಂದಿರಿ, ಏಕೆಂದರೆ ಅವು ನಿಮ್ಮ ಸ್ಥಳದ ಮಾಹಿತಿಯನ್ನು ಬಿಟ್ಟುಕೊಡಬಹುದು. ಉದಾಹರಣೆಗೆ, Snap ಮ್ಯಾಪ್‌ಗೆ ಐಫೆಲ್ ಟವರ್‌ನ ಒಂದು Snap ಅನ್ನು ನೀವು ಸಲ್ಲಿಸಿದರೆ, ನೀವು ಪ್ಯಾರಿಸ್‌ನಲ್ಲಿ ಐಫೆಲ್ ಟವರ್‌ನ ಸಮೀಪದಲ್ಲಿ ಇದ್ದಿರಿ ಎನ್ನುವುದನ್ನು ನಿಮ್ಮ Snap ನ ಕಂಟೆಂಟ್ ಬಹಿರಂಗಪಡಿಸುತ್ತದೆ.
Snap ಮ್ಯಾಪ್‌ನಲ್ಲಿನ ಸ್ಥಳಗಳು ಸ್ಥಳೀಯ ವ್ಯವಹಾರಗಳೊಂದಿಗೆ ಸಂವಹನ ನಡೆಸುವುದನ್ನು ಸುಲಭವಾಗಿಸುತ್ತವೆ. ಸ್ಥಳದ ಪಟ್ಟಿಯನ್ನು ನೋಡಲು ಮ್ಯಾಪ್‌ನಲ್ಲಿ ಒಂದು ಸ್ಥಳವನ್ನು ಟ್ಯಾಪ್ ಮಾಡಿ, ಅಥವಾ ಒಂದು ಸ್ಥಳವನ್ನು ಹುಡುಕಲು ಮ್ಯಾಪ್‌ನ ಮೇಲ್ಭಾಗದಲ್ಲಿರುವ ಹುಡುಕಾಟವನ್ನು ಟ್ಯಾಪ್ ಮಾಡಿ ಸಾಕು. ಸ್ಥಳಗಳು ವೈಯಕ್ತಿಕಗೊಳಿಸಿದ ಮ್ಯಾಪ್ ಅನುಭವವನ್ನು ಒದಗಿಸುತ್ತವೆ.
ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಏನಾದರೂ ನಿಮಗೆ ಕಾಣಿಸಿದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ ಮತ್ತು ಅದನ್ನು ವರದಿ ಮಾಡಿ!

ಸ್ಥಳ

GPS ಡೇಟಾದಂತಹ ನಿಮ್ಮ ನಿಖರ ಸ್ಥಳವನ್ನು Snapchat ಜೊತೆಗೆ ಹಂಚಿಕೊಳ್ಳುವುದನ್ನು ಪೂರ್ವನಿಯೋಜಿತವಾಗಿ ನಿಷ್ಕ್ರಿಯಗೊಳಿಸಲಾಗಿದೆ. ನೀವು ಸ್ಥಳ ಹಂಚಿಕೊಳ್ಳುವಿಕೆಯನ್ನು ಆಯ್ದುಕೊಂಡರೆ, ನಿಮ್ಮ ಅನುಭವವನ್ನು ವರ್ಧಿಸುವ ಬಹಳ ಉತ್ಪನ್ನಗಳು ಮತ್ತು ಸೇವೆಗಳನ್ನು ನೀಡಲು ನಮಗೆ ಸಾಧ್ಯವಾಗುತ್ತದೆ. ಉದಾಹರಣೆಗೆ, ಕೆಲವು ಜಿಯೋಫಿಲ್ಟರ್‌ಗಳು ಮತ್ತು ಲೆನ್ಸ್‌ಗಳು ನೀವು ಎಲ್ಲಿದ್ದೀರಿ ಅಥವಾ ನಿಮ್ಮ ಸುತ್ತಲೂ ಏನು ನಡೆಯುತ್ತಿದೆ ಎಂಬುದರ ಆಧಾರದ ಮೇಲೆ ಮಾತ್ರ ಕಾರ್ಯನಿರ್ವಹಿಸುತ್ತವೆ. ನೀವು ಸ್ಥಳ ಹಂಚಿಕೊಳ್ಳುವಿಕೆಯನ್ನು ಸಕ್ರಿಯಗೊಳಿಸಿದರೆ, ನೀವು ಆಯ್ಕೆ ಮಾಡುವ ಸ್ನೇಹಿತರಿಗೆ ಮ್ಯಾಪ್‌ನಲ್ಲಿ ನಿಮ್ಮ ಸ್ಥಳವನ್ನು ತೋರಿಸಲು ಮತ್ತು ನಿಮಗೆ ಆಸಕ್ತಿಕರವಾಗಿರಬಹುದಾದ ಸಮೀಪದ ಸ್ಥಳಗಳನ್ನು ನಿಮಗೆ ತೋರಿಸಲು ನಮಗೆ ಸಾಧ್ಯವಾಗುತ್ತದೆ. ಸ್ಥಳ ಹಂಚಿಕೆಯೊಂದಿಗೆ, My AI ಜೊತೆಗೆ ಚಾಟ್ ಮಾಡುವಾಗ ನೀವು ಹತ್ತಿರದ ಸ್ಥಳ ಶಿಫಾರಸುಗಳನ್ನು ಸಹ ಕೇಳಬಹುದು. ನೀವು ಏನನ್ನು ನೋಡಲು ಬಯಸುತ್ತೀರಿ ಎಂಬುದನ್ನು ಕಂಡುಹಿಡಿಯಲು ಸ್ಥಳದ ಮಾಹಿತಿಯು ನಮಗೆ ಸಹಾಯ ಮಾಡುತ್ತದೆ - ಆದ್ದರಿಂದ ಫ್ರಾನ್ಸ್‌ನಲ್ಲಿರುವ ಜನರು ಫ್ರೆಂಚ್ ಪ್ರಕಾಶಕರು, ಫ್ರೆಂಚ್ ಜಾಹೀರಾತುಗಳು ಮತ್ತು ಮುಂತಾದವುಗಳಿಂದ ವಿಷಯವನ್ನು ನೋಡುತ್ತಾರೆ.
ಮ್ಯಾಪ್ ಮತ್ತು ಇತರ ವೈಶಿಷ್ಟ್ಯಗಳನ್ನು ಸುಧಾರಿಸುವುದಕ್ಕೆ ಸಹಾಯ ಮಾಡಲು ಮತ್ತು ನಿಮಗೆ ಹೆಚ್ಚು ಪ್ರಸ್ತುತವಾಗಿರುವ ಸ್ಥಳಗಳನ್ನು ನಿಖರವಾಗಿ ಪ್ರದರ್ಶಿಸಲು ನಾವು GPS ಸ್ಥಳಗಳನ್ನು ಸ್ವಲ್ಪ ಸಮಯದವರೆಗೆ ಸಂಗ್ರಹಿಸುತ್ತೇವೆ. ಉದಾಹರಣೆಗೆ, ನೀವು ಹೆಚ್ಚು ಭೇಟಿ ನೀಡುವ ಕೆಲವು ಸ್ಥಳಗಳನ್ನು ನಾವು ಸಂಗ್ರಹಿಸಬಹುದು ಆದ್ದರಿಂದ ನಾವು ನಿಮಗೆ ಹೆಚ್ಚು ಸೂಕ್ತವಾದ ಹುಡುಕಾಟ ವಿಷಯವನ್ನು ತೋರಿಸಬಹುದು ಅಥವಾ ಮ್ಯಾಪ್‌ನಲ್ಲಿ ನಿಮ್ಮ Bitmoji ಯ ಚಟುವಟಿಕೆಯನ್ನು ನವೀಕರಿಸಬಹುದು. ನೀವು ನೆನಪುಗಳಲ್ಲಿ ಉಳಿಸುವ Snap ಗಳ ಸ್ಥಳ ಮಾಹಿತಿಯನ್ನು ನಾವು ಸಂಗ್ರಹಿಸಬಹುದು ಅಥವಾ ನಿಮ್ಮ ಅನುಭವವನ್ನು ವೈಯಕ್ತೀಕರಿಸಲು ಕಥೆಗಳು, ಸ್ಪಾಟ್‌ಲೈಟ್ ಅಥವಾ Snap ಮ್ಯಾಪ್‌ಗೆ ಸಲ್ಲಿಸಬಹುದು.
ಹೊಸ Spectacles ನಲ್ಲಿ, ಕೆಲವು ವೈಶಿಷ್ಟ್ಯಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸ್ಥಳ ಡೇಟಾ ಬೇಕಾಗಬಹುದು. ನಿಮ್ಮ ಸ್ಥಳದ ಹೆಚ್ಚು ನಿಖರವಾದ ಪ್ರಾತಿನಿಧ್ಯವನ್ನು ಪಡೆಯಲು ನಾವು ಕೆಲವು ಮೂಲಗಳಿಂದ ಡೇಟಾವನ್ನು ಬಳಸಬಹುದು. ಉದಾಹರಣೆಗೆ, ನಿಮ್ಮ ಸನ್‌ಗ್ಲಾಸ್‌ಗಳ ಕೊನೆಯ ಸ್ಥಳವು ಲಭ್ಯವಿಲ್ಲದಿದ್ದರೆ, ಸ್ಥಳ-ಆಧರಿತ ವೈಶಿಷ್ಟ್ಯಗಳನ್ನು ಒದಗಿಸಲು Snapchat ನ ನಿಮ್ಮ ಸಾಧನದ GPS ನ ಬಳಕೆಯನ್ನು ನಾವು ಅವಲಂಬಿಸಬಹುದು.
ನಿಮ್ಮ ಸಾಧನದ ಸೆಟ್ಟಿಂಗ್‌ಗಳಲ್ಲಿ ನೀವು ಸ್ಥಳ ಅನುಮತಿಗಳನ್ನು ನಿಷ್ಕ್ರಿಯಗೊಳಿಸಿದರೆ ನಂತರವೂ ನೀವು Snapchat ಮತ್ತು Spectacles ಬಳಸಬಹುದು, ಆದರೆ ಈ ಹಲವು ವೈಶಿಷ್ಟ್ಯಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ (ಅಥವಾ ಕಾರ್ಯನಿರ್ವಹಿಸುವುದೇ ಇಲ್ಲ!) ಅದು ಇಲ್ಲದೆ. ಕೆಲವೊಮ್ಮೆ ನಾವು IP ವಿಳಾಸವನ್ನು ಆಧರಿಸಿ ದೇಶ ಅಥವಾ ನಗರದಂತಹ ಅಂದಾಜು ಸ್ಥಳವನ್ನು ಇನ್ನೂ ಊಹಿಸಬಹುದು — ಆದರೆ ಇದು ಪರಿಪೂರ್ಣವಲ್ಲ.

ಕ್ಯಾಮಿಯೋಗಳು

ನೀವು ಚಾಟ್‌ನಲ್ಲಿ ಸ್ನೇಹಿತರಿಗೆ ಕಳುಹಿಸಬಹುದಾದ ನಿಮ್ಮ ಸ್ವಂತ ಶಾರ್ಟ್‌, ಲೂಪಿಂಗ್ ವೀಡಿಯೊಗಳಲ್ಲಿ ನೀವು ಸ್ಟಾರ್ ಆಗಲು ಕ್ಯಾಮಿಯೋಗಳು ಅನುಮತಿಸುತ್ತವೆ. ಕ್ಯಾಮಿಯೋಗಳನ್ನು ಸಕ್ರಿಯಗೊಳಿಸಲು, ನಿಮ್ಮನ್ನು ಮೋಜಿನ ದೃಶ್ಯಗಳಲ್ಲಿ ತೋರಿಸಲು ಒಂದು ಸೆಲ್ಫಿ ತೆಗೆದುಕೊಳ್ಳುವಂತೆ ನಾವು ನಿಮ್ಮನ್ನು ಕೇಳುತ್ತೇವೆ. ನಾವು ಮುಖ ಗುರುತಿಸುವಿಕೆ ಸಾಫ್ಟ್‌ವೇರ್‌ಗಳನ್ನು ಬಳಸುವುದಿಲ್ಲ. ಬದಲಾಗಿ, ದೃಶ್ಯಗಳಲ್ಲಿ ನಿಮ್ಮನ್ನು ಕೂರಿಸಲು ಕ್ಯಾಮಿಯೋಗಳು ನಿಮ್ಮ ಮುಖ ಮತ್ತು ಕೂದಲಿನ ಆಕಾರವನ್ನು ಪ್ರತ್ಯೇಕಿಸುತ್ತವೆ ಮತ್ತು ಕ್ಯಾಮಿಯೋಗಳನ್ನು ಅತ್ಯುತ್ತಮವಾಗಿಸಲಾಗಿದೆ ಎನ್ನುವುದನ್ನು ಖಚಿತಪಡಿಸುತ್ತದೆ.
ನೀವು ನಿಮ್ಮ ಸೆಲ್ಫೀ ನಿಯಂತ್ರಿಸಬಹುದು ಮತ್ತು ಅದನ್ನು ಬದಲಾಯಿಸಬಹುದು ಮತ್ತು ಅಳಿಸಬಹುದು ಹಾಗೂ ನಿಮ್ಮ Snapchat ಸೆಟ್ಟಿಂಗ್‌ಗಳಲ್ಲಿ ಇಬ್ಬರು-ವ್ಯಕ್ತಿಗಳ ಕ್ಯಾಮಿಯೋಗಳಲ್ಲಿ ನಿಮ್ಮ ಸೆಲ್ಫೀಯನ್ನು ಇತರರು ಬಳಸದಂತೆ ನಿರ್ಬಂಧಿಸಬಹುದು.