Snapchat ಜಾಹೀರಾತುಗಳ ಪಾರದರ್ಶಕತೆ

ಜಾಹೀರಾತುಗಳಿಗೆ ಸಂಬಂಧಿಸಿ ನಾವು ನಿಮ್ಮ ಡೇಟಾವನ್ನು ಹೇಗೆ ಸಂಗ್ರಹಿಸುತ್ತೇವೆ, ಬಳಸುತ್ತೇವೆ ಮತ್ತು ಹಂಚಿಕೊಳ್ಳುತ್ತೇವೆ ಎನ್ನುವ ಕುರಿತು ಪಾರದರ್ಶಕತೆಯನ್ನು ಒದಗಿಸುವುದು ಈ ಪುಟದ ಉದ್ದೇಶವಾಗಿದೆ. ಜಾಹೀರಾತು ನೀಡುವಿಕೆಗಾಗಿ ನಿಮ್ಮ ಡೇಟಾವನ್ನು ಹೇಗೆ ಬಳಸಲಾಗುತ್ತದೆ ಎನ್ನುವುದನ್ನು ನಿಯಂತ್ರಿಸಲು ನೀವು ಬಳಸಬಹುದಾದ Snapchat ಸೆಟ್ಟಿಂಗ್‌ಗಳ ಕುರಿತಾಗಿಯೂ ನಾವು ಹೇಳಿದ್ದೇವೆ. ನಮ್ಮ ಗೌಪ್ಯತೆ ಕೇಂದ್ರದಲ್ಲಿ ನಿಮ್ಮ ಡೇಟಾಗೆ ಸಂಬಂಧಿಸಿದ ನಮ್ಮ ಗೌಪ್ಯತೆ ಅಭ್ಯಾಸಗಳ ಕುರಿತು ನೀವು ಇನ್ನಷ್ಟು ಮಾಹಿತಿಯನ್ನು ಕಂಡುಕೊಳ್ಳಬಹುದು.

ನಾವು ವೈಯಕ್ತಿಕಗೊಳಿಸಿದ ಜಾಹೀರಾತುಗಳನ್ನು ಏಕೆ ತೋರಿಸುತ್ತೇವೆ

ಬಹುತೇಕ ಆನ್‌ಲೈನ್ ಮಾಹಿತಿ ಸೇವೆಗಳ ರೀತಿ, Snapchat ಮೂಲಭೂತವಾಗಿ ಜಾಹೀರಾತು ನೀಡುವಿಕೆಯಿಂದ ಬೆಂಬಲಿತವಾಗಿದೆ. ಜಾಹೀರಾತುದಾರರು ತಮ್ಮಲ್ಲಿ ಆಸಕ್ತರಾಗಿರಬಹುದಾದ ಜನರಿಗೆ ಜಾಹೀರಾತುಗಳನ್ನು ತೋರಿಸಲು ಹೆಚ್ಚು ಹಣವನ್ನು ಪಾವತಿಸುತ್ತಾರೆ. ನಾವು ವೈಯಕ್ತಿಕಗೊಳಿಸಿದ ಜಾಹೀರಾತುಗಳನ್ನು ತೋರಿಸದ ಹೊರತು, ಶುಲ್ಕ ವಿಧಿಸದೆ Snapchat ಅನ್ನು ವಿನೋದಮಯ, ಸುರಕ್ಷಿತ ಮತ್ತು ವಿನೂತನ ಆನ್‌ಲೈನ್ ಸ್ಥಳವಾಗಿ ಇರಿಸಿಕೊಳ್ಳಲು ನಮಗೆ ಸಾಧ್ಯವಾಗುವುದಿಲ್ಲ.

ಬಹುತೇಕ ಜನರು ಹೆಚ್ಚು ಪ್ರಸ್ತುತ, ವಿನೋದಮಯ ಮತ್ತು ಆಸಕ್ತಿಕರವಾದ ಜಾಹೀರಾತುಗಳನ್ನು ಇಷ್ಟಪಡುತ್ತಾರೆ ಮತ್ತು — ಅಪ್ರಸ್ತುತವಾದ ಜಾಹೀರಾತುಗಳು ಕಿರಿಕಿರಿ ಉಂಟುಮಾಡುತ್ತವೆ ಎಂದು ಪರಿಗಣಿಸುತ್ತಾರೆ. ನೀವು ಮುಂದಿನ ಟಾಪ್ ಶೆಫ್ ಆಗುವ ಹಾದಿಯಲ್ಲಿದ್ದರೆ, ಅಡುಗೆ ಪಾತ್ರೆಗಳು ಮತ್ತು ಪಾಕ ವಿಧಾನಗಳ ಕುರಿತ ಜಾಹೀರಾತುಗಳು Snapchat ನಲ್ಲಿನ ನಿಮ್ಮ ಸಮಯವನ್ನು ವರ್ಧಿಸಬಹುದು; ಟ್ರಾಂಪೋಲೈನ್‌ಗಳ ಕುರಿತ ಜಾಹೀರಾತುಗಳು ಅಷ್ಟು ಉಪಯುಕ್ತವಾಗಲಿಕ್ಕಿಲ್ಲ (ನೀವು ಕೂಡ ಜಿಗಿದಾಟವನ್ನು ಇಷ್ಟಪಡದ ಹೊರತು!).

Snap ನಲ್ಲಿ ನಿಮ್ಮ ನಂಬಿಕೆ ನಮಗೆ ಬಹಳ ಮುಖ್ಯವಾಗಿದೆ. ಇದು Snapchat ನಲ್ಲಿ ನಿಮ್ಮ ಅನುಭವದ ಯಾವುದೇ ಇತರ ಭಾಗಕ್ಕೆ ಸತ್ಯವಾಗಿರುವಷ್ಟೇ ಜಾಹೀರಾತು ನೀಡುವಿಕೆಗೂ ಸತ್ಯವಾಗಿದೆ. ವೈಯಕ್ತಿಕಗೊಳಿಸಿದ ಜಾಹೀರಾತುಗಳನ್ನು ಸರಿಯಾಗಿ ಸಮತೋಲಿತಗೊಳಿಸಿದಲ್ಲಿ, ಅದು ಎಲ್ಲರಿಗೂ ಉಪಯುಕ್ತವಾಗುತ್ತವೆ ಎಂದು ನಾವು ನಂಬಿದ್ದೇವೆ. ಇದನ್ನು ಸಾಧಿಸಲು:

  • Snapchat ನಲ್ಲಿ ಜಾಹೀರಾತುಗಳು ಹೇಗೆ ಕಾರ್ಯನಿರ್ವಹಿಸುತ್ತವೆ, ನಿಮಗೆ ಜಾಹೀರಾತುಗಳನ್ನು ತೋರಿಸಲು ನಾವು ಯಾವ ಮಾಹಿತಿಯನ್ನು ಸಂಗ್ರಹಿಸುತ್ತೇವೆ ಮತ್ತು ಬಳಸುತ್ತೇವೆ ಹಾಗೂ ನೀವು ನೋಡುವ ಜಾಹೀರಾತುಗಳನ್ನು ನಿಯಂತ್ರಿಸಲು ನಾವು ಒದಗಿಸುವ ಸೆಟ್ಟಿಂಗ್‌ಗಳ ಕುರಿತು ನಾವು ಕೆಳಗೆ ವಿವರಿಸಿದ್ದೇವೆ.

  • ನಾವು ವಿನ್ಯಾಸದ ಪ್ರಕ್ರಿಯೆಗಳ ಮೂಲಕ ಕಟ್ಟುನಿಟ್ಟಾದ ಗೌಪ್ಯತೆ ಮತ್ತು ಸುರಕ್ಷತೆಯನ್ನು ಹೊಂದಿದ್ದೇವೆ. ಇವು Snapchat ನಲ್ಲಿ ವೈಯಕ್ತಿಕಗೊಳಿಸಿದ ಜಾಹೀರಾತು ನೀಡುವಿಕೆಗೆ ನಮ್ಮ ವಿಧಾನವು ಸಮತೋಲಿತವಾಗಿರುತ್ತದೆ ಎನ್ನುವುದನ್ನು ಖಚಿತಪಡಿಸುತ್ತದೆ.

  • ನಿಮ್ಮ ಕುರಿತ ಎಲ್ಲವನ್ನೂ ನಾವು ಜಾಹೀರಾತುದಾರರೊಂದಿಗೆ ಹಂಚಿಕೊಳ್ಳುವುದಿಲ್ಲ. ಯಾವ ವಿಧದ ಬಳಕೆದಾರರು ಅವರ ಜಾಹೀರಾತುಗಳನ್ನು ನೋಡಬೇಕು ಎನ್ನುವುದನ್ನು ತಿಳಿಸಲು ಮತ್ತು ಅವರ ಜಾಹೀರಾತುಗಳು ಯಶಸ್ವಿಯಾಗಿವೆಯೇ ಎಂದು ಅಳೆಯಲು ಮಾತ್ರ ನಾವು ಜಾಹೀರಾತುದಾರರಿಗೆ ಅವಕಾಶ ಕಲ್ಪಿಸುತ್ತೇವೆ.

  • ನಮ್ಮ ಜಾಹೀರಾತುದಾರರಿಗೆ ನಾವು ಕೆಲವು ಮಾನದಂಡಗಳನ್ನು ಕೂಡ ನಿಗದಿಪಡಿಸಿದ್ದೇವೆ. ತಮ್ಮ ಉತ್ಪನ್ನಗಳು, ಸೇವೆಗಳು ಮತ್ತು ವಿಷಯದ ಕುರಿತು ಅವರು ಪ್ರಾಮಾಣಿಕರಾಗಿರಬೇಕು, ನಮ್ಮ ವೈವಿಧ್ಯಮಯ ಸಮುದಾಯಕ್ಕೆ ದಯಾಶೀಲರಾಗಿರಬೇಕು ಮತ್ತು ನಿಮ್ಮ ಗೌಪ್ಯತೆಯನ್ನು ರಾಜಿ ಮಾಡಿಕೊಳ್ಳಬಾರದು ಎಂದು ನಾವು ನಿರೀಕ್ಷಿಸುತ್ತೇವೆ.

ಒಂದು ಜಾಹೀರಾತು ದಾರಿತಪ್ಪಿಸುತ್ತಿದ್ದಾಗ ಅಥವಾ ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳನ್ನು ಪೂರೈಸಲು ವಿಫಲವಾದಾಗ ಸೇರಿದಂತೆ ನಮ್ಮ ಜಾಹೀರಾತು ನೀತಿಗಳನ್ನು ಪೂರೈಸದಿರುವ ಜಾಹೀರಾತುಗಳನ್ನು ಕೂಡ ನಾವು ತಿರಸ್ಕರಿಸುತ್ತೇವೆ. ಒಂದು ದಾರಿತಪ್ಪಿಸುವ ಜಾಹೀರಾತನ್ನು ನೀವು ಗಮನಿಸಿದರೆ, ಜಾಹೀರಾತಿನ ಮೇಲಿರುವ ಇನ್ನಷ್ಟು ತಿಳಿಯಿರಿ ಐಕಾನ್ ಬಳಸಿಕೊಂಡು ಆ್ಯಪ್‌ನಲ್ಲಿ ನೀವು ಅದನ್ನು ವರದಿ ಮಾಡಬಹುದು.

ನಿಮಗೆ ಜಾಹೀರಾತುಗಳನ್ನು ಒದಗಿಸಲು ನಿಮ್ಮ ಕುರಿತು Snap ಸಂಗ್ರಹಿಸುವ ಮತ್ತು ಸ್ವೀಕರಿಸುವ ಮಾಹಿತಿ

ನಮ್ಮ ಜಾಹೀರಾತುಗಳನ್ನು ಪ್ರಸ್ತುತವಾಗಿಸಲು, ಸರಿಯಾದ ಸಮಯಕ್ಕೆ ನಿಮಗೆ ಸರಿಯಾದ ಜಾಹೀರಾತುಗಳನ್ನು ಪ್ರಯತ್ನಿಸಲು ಮತ್ತು ತೋರಿಸಲು, ನಾವು ನಿಮ್ಮ ಕುರಿತು ತಿಳಿದುಕೊಳ್ಳುವ ಹಾಗೂ ನಮ್ಮ ಜಾಹೀರಾತುದಾರರು ಮತ್ತು ಪಾಲುದಾರರು ಒದಗಿಸುವ ಮಾಹಿತಿಯನ್ನು ನಾವು ಬಳಸುತ್ತೇವೆ. ಇದರ ಅರ್ಥ, ನೀವು ನೋಡುವ ಜಾಹೀರಾತುಗಳು ಸಾಮಾನ್ಯವಾಗಿ ನಿಮ್ಮ ಆಸಕ್ತಿಗಳು ಎಂದು ನಾವು ಭಾವಿಸುವ ಸಂಗತಿಗಳು, ನಮ್ಮ ವೇದಿಕೆಯಲ್ಲಿ ನಿಮ್ಮ ಚಟುವಟಿಕೆ ಮತ್ತು ನಿಮ್ಮ ಕುರಿತು ನಮ್ಮ ಪಾಲುದಾರರು ಮತ್ತು ಜಾಹೀರಾತುದಾರರು ಒದಗಿಸುವ ಮಾಹಿತಿಯಿಂದ ಸಂಚಾಲಿತವಾಗಿರುತ್ತವೆ.

ನಾವು ಸಂಗ್ರಹಿಸುವ ಅಥವಾ ಸ್ವೀಕರಿಸುವ ಪ್ರತಿ ವಿಧದ ಮಾಹಿತಿ ನಮ್ಮ ಜಾಹೀರಾತು ವ್ಯವಸ್ಥೆ ಮೇಲೆ ಪ್ರಭಾವ ಹೊಂದಿದೆ ಮತ್ತು ಕೆಲವು ವಿಧಗಳನ್ನು ಇತರವುಗಳಿಗಿಂತ ಹೆಚ್ಚು ಮಹತ್ವವುಳ್ಳವುಗಳನ್ನಾಗಿ ಪರಿಗಣಿಸಲಾಗುತ್ತದೆ. ಪ್ರತಿ ಜಾಹೀರಾತು, ಜಾಹೀರಾತುದಾರರಿಂದ ಸಿದ್ಧಪಡಿಸಿದ ತನ್ನದೇ ಆದ ಗುರಿಯಾಗಿಸುವಿಕೆ ಮತ್ತು ಆಪ್ಟಿಮೈಸೇಷನ್ ಸೆಟ್ಟಿಂಗ್‌ಗಳನ್ನು ಹೊಂದಿರುತ್ತದೆ, ಆ ಸೆಟ್ಟಿಂಗ್‌ಗಳ ಕಾರಣದಿಂದ ಮಹತ್ವಗಳು (ಕೆಳಗೆ ವಿವರಿಸಿರುವಂತೆ) ಬದಲಾಗಬಹುದು ಎನ್ನುವುದನ್ನು ಗಮನಿಸಿ.

ನಾವು ಸಂಗ್ರಹಿಸುವ ಮುಖ್ಯ ವಿಧಗಳ ಮಾಹಿತಿ, ಅವುಗಳನ್ನು ಹೇಗೆ ಬಳಸಲಾಗುತ್ತದೆ ಮತ್ತು ನಮ್ಮ ಜಾಹೀರಾತುಗಳ ವ್ಯವಸ್ಥೆಗಳಲ್ಲಿ ಅವುಗಳ ಸಾಮಾನ್ಯ ಸಂಬಂಧಿತ ಮಹತ್ವ (ಅದನ್ನು ಆವರಣದೊಳಗೆ ನೀಡಲಾಗಿದೆ) ಹೀಗಿವೆ:

ನಾವು ನಿಮ್ಮಿಂದ ನೇರವಾಗಿ ಸ್ವೀಕರಿಸುವ ಮಾಹಿತಿ

  • ಖಾತೆ ನೋಂದಣಿ ಮಾಹಿತಿ. ನೀವು Snapchat ಗೆ ಸೈನ್ ಅಪ್ ಮಾಡಿದಾಗ, ನಾವು ನಿಮ್ಮ ಕುರಿತ ಕೆಲವು ಮಾಹಿತಿಯನ್ನು ಸಂಗ್ರಹಿಸುತ್ತೇವೆ.

    • ವಯಸ್ಸು. (ಅಧಿಕ ಮಹತ್ವ) ನೀವು ನಿಮ್ಮ ಜನ್ಮದಿನವನ್ನು ನಮಗೆ ಒದಗಿಸುತ್ತೀರಿ, ನಿಮ್ಮ ವಯಸ್ಸನ್ನು ನಿರ್ಧರಿಸಲು ಅದನ್ನು ನಾವು ಬಳಸುತ್ತೇವೆ (ಮತ್ತು ನಿಮ್ಮ ಸೆಟ್ಟಿಂಗ್‌ಗಳನ್ನು ಆಧರಿಸಿ, ಇದು ನಿಮಗೆ ಜನ್ಮದಿನದ ಶುಭಾಶಯ ಕೋರಲು ನಿಮ್ಮ ಸ್ನೇಹಿತರಿಗೆ ಅವಕಾಶ ನೀಡುವಂತಹ ಇತರ ವಿನೋದಮಯ ಅನುಭವಗಳಿಗೂ ಇದು ಕಾರಣವಾಗುತ್ತದೆ!). ಮುಂದುವರಿದು ಕೆಳಗೆ ವಿವರಿಸಿರುವಂತೆ, ನಿಮ್ಮ ವಯಸ್ಸನ್ನು ಗ್ರಹಿಸಲು ಕೂಡ ನಾವು ಪ್ರಯತ್ನಿಸುತ್ತೇವೆ, ಇದು ಇತರ ಸಂಗತಿಗಳ ಜೊತೆಗೆ, ಜಾಹೀರಾತುಗಳು ಸರಿಯಾದ ಮತ್ತು ಸೂಕ್ತ ಪ್ರೇಕ್ಷಕರನ್ನು ತಲುಪುವ ಸಾಧ್ಯತೆಯನ್ನು ಹೆಚ್ಚಿಸುವ ಹೆಚ್ಚುವರಿ ವಿಧಾನವಾಗಿಯೂ ಕಾರ್ಯನಿರ್ವಹಿಸುತ್ತದೆ.

    • ದೇಶ/ಭಾಷೆ. (ಅಧಿಕ ಮಹತ್ವ) ನಿಮಗೆ ಸ್ಥಳೀಯಗೊಳಿಸಿದ ವಿಷಯ ಮತ್ತು ಸೇವೆಗಳನ್ನು ಒದಗಿಸುವುದಕ್ಕೆ Snapchat ಗೆ ಅವಕಾಶ ಕಲ್ಪಿಸಲು, ನಿಮ್ಮ ಪ್ರದೇಶ ಮತ್ತು ಭಾಷೆಗೆ ಪ್ರಸ್ತುತವಾಗಿರುವ ಜಾಹೀರಾತುಗಳನ್ನು ನಿಮಗೆ ಒದಗಿಸಲು ಮತ್ತು ನಾವು ನಿಮಗೆ ತೋರಿಸುವ ಜಾಹೀರಾತುಗಳು ಸ್ಥಳೀಯ ಕಾನೂನುಗಳು ಮತ್ತು ನಿಬಂಧನೆಗಳ ಅನುಸರಣೆ ಮಾಡುತ್ತವೆ ಎಂದು ಖಚಿತಪಡಿಸಿಕೊಳ್ಳಲು ಸೇರಿದಂತೆ, ಕೆಲವು ಕಾರಣಗಳಿಗಾಗಿ ನಾವು ನಿಮ್ಮ ವಾಸ್ತವ್ಯದ ದೇಶ ಮತ್ತು ನಿಮ್ಮ ಆದ್ಯತೆಯ ಭಾಷೆಯನ್ನು ಸಂಗ್ರಹಿಸುತ್ತೇವೆ. ಈ ಕೆಳಗಿನ ಉದ್ದೇಶಗಳಿಗಾಗಿ ಕೂಡ ನಾವು ನಿಮ್ಮ ಸ್ಥಳವನ್ನು (ಕೆಳಗೆ ವಿವರಿಸಿದಂತೆ) ಬಳಸಬಹುದು.

Snapchat ನಲ್ಲಿ ನಿಮ್ಮ ಚಟುವಟಿಕೆ

ನೀವು ಕ್ಯಾಮೆರಾ, ಕಥೆಗಳು, Snap ಮ್ಯಾಪ್, ಸ್ಪಾಟ್‌ಲೈಟ್, Snap ಗಳು, ಲೆನ್ಸ್‌ಗಳು, My AI (My AI ಮತ್ತು ಜಾಹೀರಾತುಗಳ ಕುರಿತು ಇನ್ನಷ್ಟು ವಿವರಗಳಿಗಾಗಿ ಕೆಳಗೆ ನೋಡಿ), ಮತ್ತು Snapchat ನಲ್ಲಿ ಇತರ ವಿಷಯ ಮತ್ತು ವೈಶಿಷ್ಟ್ಯಗಳನ್ನು ನೀವು ನೋಡಿದಾಗ ಅಥವಾ ಅವುಗಳೊಂದಿಗೆ ತೊಡಗಿಕೊಂಡಾಗ, ನೀವು ಯಾವುದರಲ್ಲಿ ಆಸಕ್ತರಾಗಿರಬಹುದು ಎನ್ನುವುದನ್ನು ನಾವು ತಿಳಿದುಕೊಳ್ಳುತ್ತೇವೆ (ಮತ್ತು ಕೆಲವೊಮ್ಮೆ ಊಹಿಸುತ್ತೇವೆ). ಉದಾಹರಣೆಗೆ, ಬಾಸ್ಕೆಟ್‌ಬಾಲ್ ಕುರಿತು ನೀವು ಬಹಳಷ್ಟು ಸ್ಪಾಟ್‌ಲೈಟ್ Snap ಗಳನ್ನು ವೀಕ್ಷಿಸಿದರೆ ಅಥವಾ ರಚಿಸಿದರೆ, ವೃತ್ತಿಪರ ಬಾಸ್ಕೆಟ್‌ಬಾಲ್‌ ಟಿಕೆಟ್‌ಗಳಿಗಾಗಿ ನಾವು ನಿಮಗೆ ಜಾಹೀರಾತನ್ನು ತೋರಿಸಬಹುದು.

Snapchat ನಲ್ಲಿ ನಿಮ್ಮ ಚಟುವಟಿಕೆಯನ್ನು ಆಧರಿಸಿ ನಿಮ್ಮ ಕುರಿತು ಇತರ ನಿರ್ಣಯಗಳನ್ನು ಕೂಡ ನಾವು ಮಾಡಬಹುದು, ಅದನ್ನು ಕೆಳಗೆ ವಿವರಿಸಿರುವಂತೆ, ಇತರ ಮೂಲಗಳಿಂದ ನಾವು ಸಂಗ್ರಹಿಸುವ ಮಾಹಿತಿಯಿಂದ ತಿಳಿದುಕೊಂಡಿರಬಹುದು. ನಿರ್ಣಯಗಳಲ್ಲಿ ಇವು ಸೇರಿವೆ:

  • ವಯಸ್ಸು. (ಅಧಿಕ ಮಹತ್ವ) ಉದಾಹರಣೆಗೆ, ನೀವು ಸೈನ್ ಅಪ್ ಮಾಡುವ ಸಂದರ್ಭ ನಿಮ್ಮ ಜನ್ಮದಿನವನ್ನು ನಮೂದಿಸಿದಾಗ, Snapchat ನಲ್ಲಿ ನಿಮ್ಮ ಚಟುವಟಿಕೆಯನ್ನು ಆಧರಿಸಿ ನಾವು ನಿಮ್ಮ ವಯಸ್ಸನ್ನು ಕೂಡ ನಿರ್ಧರಿಸುತ್ತೇವೆ — ಈ ನಿರ್ಧರಿಸುವಿಕೆ ಕಿರಿಯ Snapchatter ಗಳನ್ನು ಸುರಕ್ಷಿತವಾಗಿ ಇರಿಸಲು ನಮಗೆ ಸಹಾಯ ಮಾಡುತ್ತದೆ ಮತ್ತು ನಮ್ಮ ವಯೋ ಡೇಟಾದ ನಿಖರತೆಯನ್ನು ವರ್ಧಿಸುತ್ತದೆ. ನಿರ್ದಿಷ್ಟ ಜಾಹೀರಾತಿಗೆ ಹೆಚ್ಚು ಸ್ವೀಕೃತಿಯನ್ನು ಹೊಂದಿರುವ ಕೆಲವು ವಯೋಗುಂಪುಗಳಿಗೆ ಕೆಲವು ಉತ್ಪನ್ನಗಳನ್ನು ಮಾರ್ಕೆಟ್ ಮಾಡಲು ಅಥವಾ ಒಂದು ಜಾಹೀರಾತು ಪ್ರಸ್ತುತ ಅಥವಾ ಸೂಕ್ತವಾಗಿಲ್ಲದ ಗುಂಪುಗಳಿಗೆ ಅದನ್ನು ತಪ್ಪಿಸಲು ಜಾಹೀರಾತುದಾರರು ಬಯಸಬಹುದು. ಉದಾಹರಣೆಗೆ, U.S. ನಲ್ಲಿ ನೀವು 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ಮದ್ಯಪಾನಕ್ಕೆ ನಾವು ನಿಮಗೆ ಜಾಹೀರಾತುಗಳನ್ನು ತೋರಿಸುವುದಿಲ್ಲ.

  • ಲಿಂಗ ಸಮೂಹ. (ಅಧಿಕ ಮಹತ್ವ) ನಿಮ್ಮ Bitmoji, ಬಳಕೆದಾರರ ಹೆಸರು ಮತ್ತು ಪ್ರದರ್ಶನದ ಹೆಸರು, ಸ್ನೇಹಿತರ ಜನಸಂಖ್ಯಾತ್ಮಕ ವಿವರಗಳು ಮತ್ತು Snapchat ನಲ್ಲಿ ನಿಮ್ಮ ಚಟುವಟಿಕೆ ಸೇರಿದಂತೆ, ಕೆಲವು ಸಂಕೇತಗಳನ್ನು ಆಧರಿಸಿ ನಾವು ನಿಮ್ಮ ಲಿಂಗವನ್ನು ಕೂಡ ನಿರ್ಣಯಿಸುತ್ತೇವೆ. ನಿಮ್ಮ ಆಸಕ್ತಿಗಳನ್ನು ನಿರ್ಧರಿಸುವ ರೀತಿಯಲ್ಲಿ, ನಿಮ್ಮ ನಿರ್ಧರಿಸಿದ ಲಿಂಗ ಸಮೂಹವು ನಿಮಗೆ ಪ್ರಸ್ತುತವಾಗಿರಬಹುದಾದ ಜಾಹೀರಾತುಗಳನ್ನು ನಿಮಗೆ ತೋರಿಸಲು ನಮ್ಮ ಜಾಹೀರಾತುದಾರರಿಗೆ ಸಹಾಯ ಮಾಡುತ್ತದೆ. ಉದಾಹರಣೆಗೆ, ನಿರ್ದಿಷ್ಟ ಲಿಂಗ ಅಭಿವ್ಯಕ್ತಿಯ Snapchatter ಗಳಿಗೆ ಜಾಹೀರಾತುಗಳನ್ನು ತೋರಿಸಲು ಒಬ್ಬ ಜಾಹೀರಾತುದಾರ ಬಯಸಬಹುದು ಮತ್ತು ಒಂದು ಸಮೂಹಕ್ಕೆ ಅತ್ಯಂತ ನಿಕಟ ಸಂಬಂಧ ಹೊಂದಿರುವ ಬಳಕೆದಾರರಿಗೆ ಆ ಜಾಹೀರಾತು ತೋರಿಸಲು ಸಹಾಯ ಮಾಡುವುದಕ್ಕಾಗಿ ನಾವು ನಿರ್ಧರಿಸಿದ ಲಿಂಗವನ್ನು ಬಳಸುತ್ತೇವೆ.

  • ಆಸಕ್ತಿಗಳು. (ಅಧಿಕ ಮಹತ್ವ) ನಮ್ಮ ಜಾಹೀರಾತುಗಳನ್ನು ಸಾಧ್ಯವಿರುವಷ್ಟು ಮಟ್ಟಿಗೆ ನಿಮಗೆ ಪ್ರಸ್ತುತವಾಗಿಸಲು ನಾವು ಯಾವಾಗಲೂ ಪ್ರಯತ್ನಿಸುತ್ತೇವೆ, ಹಾಗಾಗಿ ನಿಮ್ಮ ಆಸಕ್ತಿಗಳ ಕುರಿತು ನಿರ್ಣಯಗಳನ್ನು ಮಾಡಲು ನಾವು ಪ್ರಯತ್ನಿಸುತ್ತೇವೆ. ಉದಾಹರಣೆಗೆ, ನೀವು ರೇಸ್‌ ಕಾರ್‌ ಡ್ರೈವರ್‌ಗಳನ್ನು ಅನುಸರಿಸುತ್ತಿದ್ದರೆ ಮತ್ತು ಹೊಸ ಕಾರುಗಳು ಅಥವಾ ರೇಸಿಂಗ್ ಅನ್ನು ವೀಕ್ಷಿಸಲು ಅಥವಾ ಅವುಗಳ ಕುರಿತು ಕಥೆಗಳನ್ನು ಸೃಷ್ಟಿಸಲು ಇಷ್ಟಪಟ್ಟರೆ ಅಥವಾ ಆಟೊ ರೇಸಿಂಗ್ ಪರಿಕರಗಳ ಕುರಿತ Snapchat ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿದರೆ, ಆಗ ನೀವು "ಆಟೊಮೋಟಿವ್ ಉತ್ಸಾಹಿ" ಎಂದು ನಾವು ಊಹಿಸಬಹುದು. ಈ ಊಹೆಗಳಲ್ಲಿ ಕೆಲವನ್ನು ನಾವು “ಜೀವನಶೈಲಿ ವರ್ಗಗಳು” ಎಂದು ಕರೆಯುತ್ತೇವೆ ಮತ್ತು Snapchat ನಲ್ಲಿ ನಿಮ್ಮ ಕುರಿತು ನಾವು ಊಹಿಸಿದ ಜೀವನಶೈಲಿ ವರ್ಗಗಳನ್ನು ನೀವು ಪರಿಶೀಲಿಸಬಹುದು ಮತ್ತು ಯಾವುದೇ ಸಮಯದಲ್ಲಿ ಆ ಜೀವನಶೈಲಿ ವರ್ಗಗಳನ್ನು ನೀವು ಬದಲಾಯಿಸಬಹುದು ಅಥವಾ ಅಳಿಸಬಹುದು. ನೀವು ಆಸಕ್ತರಾಗಿರಬಹುದಾದ ವಿಷಯವನ್ನು ನಿಮಗೆ ತೋರಿಸಲು ನಮಗೆ ಸಹಾಯ ಮಾಡಬಹುದಾದ ನಿಮ್ಮ ಆಸಕ್ತಿಗಳ ಕುರಿತ ಇತರ ಊಹೆಗಳನ್ನು ಕೂಡ ನಾವು ಮಾಡುತ್ತೇವೆ — ಉದಾಹರಣೆಗೆ ನಾವು "Snapchat ವಿಷಯ ವರ್ಗಗಳನ್ನು" ಹೊಂದಿದ್ದು ಇದು Snap ನಲ್ಲಿ ನೀವು ಸಂವಹನ ನಡೆಸುವ ವಿಷಯವನ್ನು ವರ್ಗೀಕರಿಸುತ್ತದೆ. ಇಲ್ಲಿ ವಿವರಿಸಿರುವಂತೆ ನೀವು ನಿಮ್ಮ ಡೇಟಾವನ್ನು ಡೌನ್‌ಲೋಡ್ ಮಾಡುವ ಮೂಲಕ ಈ ವಿಷಯ ವರ್ಗಗಳನ್ನು ಪರಿಶೀಲಿಸಬಹುದು.

  • ನಿಮ್ಮ ಸ್ನೇಹಿತರು. (ಕಡಿಮೆ ಮಹತ್ವ) ಹಲವು ಸ್ನೇಹಿತರು ಅದೇ ರೀತಿಯ ಆಸಕ್ತಿಗಳನ್ನು ಹೊಂದಿದ್ದಾರೆ. ಆದ್ದರಿಂದ, ನಿಮಗೆ ಆ ಜಾಹೀರಾತುಗಳನ್ನು ತೋರಿಸಬೇಕೇ ಎಂದು ನಿರ್ಧರಿಸಲು, ಜಾಹೀರಾತುಗಳು ಅಥವಾ ವಿಷಯದೊಂದಿಗೆ ನಿಮ್ಮ ಸ್ನೇಹಿತರ ಸಂವಹನಗಳ ಕುರಿತ ಮಾಹಿತಿಯನ್ನು ನಾವು ಬಳಸಬಹುದು. ಉದಾಹರಣೆಗೆ, ಹೊಸ ಶೂಗಳ ಕುರಿತ ಒಂದು ಜಾಹೀರಾತಿನ ಮೇಲೆ ನಿಮ್ಮ ಸ್ನೇಹಿತರು ಕ್ಲಿಕ್ ಮಾಡಿದರೆ, ನಿಮಗೆ ಅದೇ ಜಾಹೀರಾತು ತೋರಿಸುವುದನ್ನು ಆದ್ಯತೆಗೊಳಿಸಲು ನಾವು ಅದನ್ನು ಬಳಸಬಹುದು.

ನೀವು EU ಅಥವಾ UK ನಲ್ಲಿ ನೆಲೆಸಿದ್ದು 18 ಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ನೀವು ನೋಡುವ ಜಾಹೀರಾತುಗಳನ್ನು ವೈಯಕ್ತಿಕಗೊಳಿಸಲು ನಾವು ನಿಮ್ಮ ಲಿಂಗ ಸಮೂಹ, ಆಸಕ್ತಿಗಳು ಅಥವಾ ಸ್ನೇಹಿತರ ಆಸಕ್ತಿಗಳ ಕುರಿತು ನಿರ್ಧಾರಗಳನ್ನು ನಾವು ಬಳಸುವುದಿಲ್ಲ.

ಮುಂದೆ ನಿಮಗೆ ಯಾವ ಜಾಹೀರಾತುಗಳನ್ನು ತೋರಿಸಬೇಕು (ಅಥವಾ ತೋರಿಸಬಾರದು) ಎಂದು ನಿರ್ಧರಿಸಲು ಈ ಹಿಂದೆ ನೀವು ಯಾವ ಜಾಹೀರಾತುಗಳೊಂದಿಗೆ ಸಂವಹನ ನಡೆಸಿದಿರಿ ಎನ್ನುವ ಮಾಹಿತಿಯನ್ನು ಕೂಡ ನಾವು ಬಳಸುತ್ತೇವೆ. ಪುನಃ ಪುನಃ ಒಂದೇ ಜಾಹೀರಾತನ್ನು ಯಾರೂ ಕೂಡ ನೋಡಲು ಬಯಸುವುದಿಲ್ಲ ಎನ್ನುವುದು ರಹಸ್ಯವೇನೂ ಅಲ್ಲ!

ನಮ್ಮ ಜಾಹೀರಾತುದಾರರು ಮತ್ತು ಪಾಲುದಾರರಿಂದ ನಾವು ಸ್ವೀಕರಿಸುವ ಮಾಹಿತಿ

  • ನಮ್ಮ ಜಾಹೀರಾತುದಾರರು ಮತ್ತು ಪಾಲುದಾರರ ವೆಬ್‌ಸೈಟ್‌ಗಳು ಮತ್ತು ಪ್ಲ್ಯಾಟ್‌ಫಾರ್ಮ್ಸ್‌ನಲ್ಲಿ ನಿಮ್ಮ ಚಟುವಟಿಕೆ. (ಅಧಿಕ ಮಹತ್ವ) ನಮ್ಮ ಜಾಹೀರಾತುದಾರರು ಮತ್ತು ಪಾಲುದಾರರು ತಮ್ಮ ಸ್ವಂತ ಆ್ಯಪ್‌ಗಳು, ವೆಬ್‌ಸೈಟ್‌ಗಳು ಮತ್ತು ಪ್ಲ್ಯಾಟ್‌ಫಾರ್ಮ್ಸ್‌ನಿಂದ ನಮಗೆ ಡೇಟಾ ಒದಗಿಸುತ್ತಾರೆ, ಇದನ್ನು ನಾವು ತೋರಿಸುವ ಜಾಹೀರಾತುಗಳನ್ನು ನಿರ್ಣಯಿಸುವುದಕ್ಕೆ ಸಹಾಯ ಪಡೆದುಕೊಳ್ಳಲು ನಾವು ಬಳಸುತ್ತೇವೆ. ಉದಾಹರಣೆಗೆ, Snap ನೊಂದಿಗೆ ಡೇಟಾ ಹಂಚಿಕೊಳ್ಳುವ ಒಂದು ವೆಬ್‌ಸೈಟ್‌ನಲ್ಲಿ ನೀವು ಒಂದು ಸಿನಿಮಾಗಾಗಿ ಹುಡುಕಿದರೆ, ಅದೇ ರೀತಿಯ ಸಿನಿಮಾಗಳಿಗೆ ನೀವು ಜಾಹೀರಾತುಗಳನ್ನು ನೋಡಬಹುದು.

    • Snap ಪಿಕ್ಸೆಲ್ ಮತ್ತು Snap ನ ಕನ್ವರ್ಷನ್ API ಮೂಲಕ ಸೇರಿದಂತೆ, ಕೆಲವು ಭಿನ್ನ ವಿಧಾನಗಳಲ್ಲಿ ನಾವು ಈ ಮಾಹಿತಿಯನ್ನು ಪಡೆದುಕೊಳ್ಳುತ್ತೇವೆ. ಎರಡೂ ಸಂದರ್ಭಗಳಲ್ಲಿ, ತೃತೀಯ-ಪಕ್ಷದ ಪ್ಲ್ಯಾಟ್‌ಫಾರ್ಮ್ಸ್‌ನಲ್ಲಿ ಕೋಡ್‌ನ ಒಂದು ಸಣ್ಣ ತುಣುಕನ್ನ ಎಂಬೆಡ್‌ ಮಾಡಲಾಗುತ್ತದೆ (ವೆಬ್‌ಸೈಟ್‌ಗಳು ಮತ್ತು ಆ್ಯಪ್‌ಗಳ ಕುರಿತು ಯೋಚಿಸಿ) ಅದು ಆ ಪ್ಲ್ಯಾಟ್‌ಫಾರ್ಮ್ಸ್‌ನಲ್ಲಿ ಸೀಮಿತ ಚಟುವಟಿಕೆಗಳ ಕುರಿತು ಮಾಹಿತಿ ಸಂಗ್ರಹಿಸುತ್ತದೆ. ಜಾಹೀರಾತುದಾರರ ಜಾಹೀರಾತುಗಳ ಪರಿಣಾಮಕಾರಿತ್ವದ ಕುರಿತು ಅವರಿಗೆ ವರದಿಗಳನ್ನು ಒದಗಿಸಲು ಕೂಡ ನಾವು ಈ ಮಾಹಿತಿಯನ್ನು ಬಳಸುತ್ತೇವೆ.

    • ನೀವು EU ಅಥವಾ UK ನಲ್ಲಿ ನೆಲೆಸಿದ್ದರೆ ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ನಿಮಗೆ ಯಾವ ಜಾಹೀರಾತುಗಳನ್ನು ತೋರಿಸಬೇಕು ಎಂದು ನಿರ್ಧರಿಸಲು ನಮ್ಮ ಜಾಹೀರಾತುದಾರರು ಅಥವಾ ಪಾಲುದಾರರ ವೆಬ್‌ಸೈಟ್‌ಗಳು ಮತ್ತು ಪ್ಲಾಟ್‌ಫಾರ್ಮ್ಸ್‌ನಲ್ಲಿ ನಿಮ್ಮ ಚಟುವಟಿಕೆಯಿಂದ Snap ಸಂಗ್ರಹಿಸಿದ ಮಾಹಿತಿಯನ್ನು (ಅಂದರೆ "ಚಟುವಟಿಕೆ ಆಧಾರಿತ ಆಡ್ಸ್‌") ನಾವು ಬಳಸುವುದಿಲ್ಲ. ಅದೇ ರೀತಿ, ಸ್ಥಳೀಯ ಕಾನೂನುಗಳ ಪಾಲನೆ ಮಾಡಲು ಇತರ ಅಧಿಕಾರವ್ಯಾಪ್ತಿಗಳಲ್ಲಿ ಕೆಲವು ವಯೋ ಶ್ರೇಣಿಗಳಿಗೆ ಈ ಮಾಹಿತಿಯ ಬಳಕೆಯನ್ನು ಕೂಡ ನಾವು ಮಿತಿಗೊಳಿಸಬಹುದು.

  • ಪ್ರೇಕ್ಷಕರು. (ಅಧಿಕ ಮಹತ್ವ) ನಮ್ಮ ಜಾಹೀರಾತುದಾರರು ತಮ್ಮ ಗ್ರಾಹಕರ ಪಟ್ಟಿಯನ್ನು ಕೂಡ Snap ಗೆ ಅಪ್‌ಲೋಡ್ ಮಾಡಬಹುದು, ಇದರಿಂದ ಆ ಗ್ರಾಹಕರಿಗೆ (ಅಥವಾ Snapchat ನಲ್ಲಿ ಅವರ ಗ್ರಾಹಕರಂತಹ ವ್ಯಕ್ತಿಗಳಿಗೆ) ಅವರು ಜಾಹೀರಾತುಗಳನ್ನು ಗುರಿಯಾಗಿಸಬಹುದು. ಸಾಮಾನ್ಯವಾಗಿ, ಈ ಹೋಲಿಸುವಿಕೆಯು ನಿಮ್ಮ ಫೋನ್ ಸಂಖ್ಯೆ ಅಥವಾ ಇಮೇಲ್‌ನ ಹ್ಯಾಶ್ ಮಾಡಿದ ಆವೃತ್ತಿಯನ್ನು ಆಧರಿಸಿದೆ. ಉದಾಹರಣೆಗೆ, ನೀವು ಕಾಮಿಕ್ ಪುಸ್ತಕಗಳ ಅತ್ಯಾಸಕ್ತ ಗ್ರಾಹಕರು ಎಂದು ಭಾವಿಸೋಣ. ಒಂದು ಹೊಸ ಕಾಮಿಕ್ ಪುಸ್ತಕ ಹೊರಬರುತ್ತಿದ್ದರೆ, ಪ್ರಕಾಶಕರು ತಮ್ಮ ಇತ್ತೀಚಿನ ಬಿಡುಗಡೆಯ ಕುರಿತ ಜಾಹೀರಾತನ್ನು ನೀವು ನೋಡುತ್ತೀರಿ ಎಂದು ಖಚಿತಪಡಿಸಿಕೊಳ್ಳುವುದಕ್ಕೆ ನೆರವಾಗಲು ತಮ್ಮ ಅಭಿಮಾನಿಗಳ ಪಟ್ಟಿಯನ್ನು Snap ಜೊತೆಗೆ ಹಂಚಿಕೊಳ್ಳಬಹುದು.

    • ನೀವು EU ಅಥವಾ UK ನಲ್ಲಿ ನೆಲೆಸಿದ್ದರೆ ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ನಾವು ನಿಮ್ಮನ್ನು ಕಸ್ಟಮ್ ಪ್ರೇಕ್ಷಕರಲ್ಲಿ ಸೇರಿಸುವುದಿಲ್ಲ.

  • ನಮ್ಮ ಜಾಹೀರಾತುದಾರರು ಮತ್ತು ಪಾಲುದಾರರಿಂದ ನಾವು ಸ್ವೀಕರಿಸುವ ಇತರ ಡೇಟಾ. ನಮ್ಮ ಗೌಪ್ಯತಾ ನೀತಿಯಲ್ಲಿ ವಿವರಿಸಿರುವಂತೆ ನಾವು ಯಾವ ಜಾಹೀರಾತುಗಳನ್ನು ತೋರಿಸುತ್ತೇವೆ ಎನ್ನುವುದನ್ನು ತಿಳಿಸಲು ನಮ್ಮ ಜಾಹೀರಾತುದಾರರು ಮತ್ತು ಪಾಲುದಾರರಿಂದ ನಾವು ಸ್ವೀಕರಿಸುವ ನಿಮ್ಮ ಕುರಿತ ಇತರ ಡೇಟಾವನ್ನು ಕೂಡ ನಾವು ಬಳಸಬಹುದು.

ನಿಮ್ಮ ಸನ್ನಿವೇಶ, ಸಾಧನ ಮತ್ತು ಸ್ಥಳದ ಕುರಿತು ನಾವು ಸಂಗ್ರಹಿಸುವ ಮಾಹಿತಿ

  • ಸಾಧನದ ಮಾಹಿತಿ. (ಕಡಿಮೆ ಮಹತ್ವ) ನೀವು ನಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಬಳಸಿದಾಗ, ನಾವು ನಿಮ್ಮ ಸಾಧನದ ಕುರಿತು ಮಾಹಿತಿ ಸಂಗ್ರಹಿಸುತ್ತೇವೆ, ಇದು ಆಪರೇಟಿಂಗ್ ಸಿಸ್ಟಂ, ಸ್ಕ್ರೀನ್ ಗಾತ್ರ, ಭಾಷೆಯ ಆಯ್ಕೆ, ಇನ್‌ಸ್ಟಾಲ್ ಮಾಡಿದ ಆ್ಯಪ್‌ಗಳು ಮತ್ತು ಇತರ ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ. ಪ್ರತಿಯಾಗಿ ಇದು ನಿಮ್ಮ ಸಾಧನಕ್ಕೆ ಹೊಂದಾಣಿಕೆಯಾಗುವ, ನೀವು ಬಯಸುವ ಭಾಷೆಯಲ್ಲಿರುವ, ನಿರ್ದಿಷ್ಟ ಆಪರೇಟಿಂಗ್ ಸಿಸ್ಟಂಗಳಿಗೆ ಗುರಿಯಾಗಿಸಿದ ಮತ್ತು ನಿಮ್ಮ ಆಸಕ್ತಿಗಳಿಗೆ ಅನುಗುಣವಾಗಿಸಿದ ಜಾಹೀರಾತುಗಳನ್ನು ನಿಮಗೆ ತೋರಿಸಲು ನಮಗೆ ಅವಕಾಶ ಕಲ್ಪಿಸುತ್ತದೆ. ಉದಾಹರಣೆಗೆ, ನೀವು iPhone ಬಳಸುತ್ತಿದ್ದರೆ, ಕೇವಲ iOS ನಲ್ಲಿ ಮಾತ್ರ ಲಭ್ಯವಿರುವ ಒಂದು ಆ್ಯಪ್‌ಗಾಗಿ ನಾವು ನಿಮಗೆ ಒಂದು ಜಾಹೀರಾತನ್ನು ತೋರಿಸಬಹುದು. ಅದೇ ರೀತಿ, ನಿಮ್ಮ ಸಾಧನದ ಭಾಷೆಯನ್ನು ಫಾರ್ಸಿಗೆ ಸೆಟ್ ಮಾಡಿದ್ದರೆ ಮ್ಯಾಂಡರಿನ್‌ನಲ್ಲಿ ನೀವು ಜಾಹೀರಾತುಗಳನ್ನು ನೋಡುವುದಿಲ್ಲ.

  • ಸ್ಥಳ ಮಾಹಿತಿ. (ಕಡಿಮೆ ಮಹತ್ವ) ನಿಮ್ಮ ಸ್ಥಳಕ್ಕೆ ಪ್ರಸ್ತುತವಾಗಿರುವ ಜಾಹೀರಾತುಗಳನ್ನು ನಿಮಗೆ ತೋರಿಸುವುದು ಮುಖ್ಯ ಎಂದು ನಾವು ಭಾವಿಸುತ್ತೇವೆ. ಉದಾಹರಣೆಗೆ, ನೀವು ಜರ್ಮನಿಯಲ್ಲಿದ್ದರೆ, ಕೇವಲ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮಾತ್ರ ಪ್ರದರ್ಶನಗೊಳ್ಳುವ ಸಿನಿಮಾಗಳಿಗಾಗಿ ನಿಮಗೆ ಜಾಹೀರಾತುಗಳನ್ನು ತೋರಿಸುವುದು ವಿನೋದಮಯವಲ್ಲ ಅಥವಾ ಜಾಹೀರಾತುದಾರರಿಗೆ ಅರ್ಥಪೂರ್ಣ ಅನ್ನಿಸುವುದಿಲ್ಲ. ನೀವು ನಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರವೇಶಿಸಿದಾಗ, ನಿಮ್ಮ IP ವಿಳಾಸ ಸೇರಿದಂತೆ, ನೀವು ನಮಗೆ ಒದಗಿಸುವ ಡೇಟಾದ ಕೆಲವು ತುಣುಕುಗಳನ್ನು ಆಧರಿಸಿ ನಾವು ನಿಮ್ಮ ಅಂದಾಜು ಸ್ಥಳವನ್ನು ಮತ್ತು ನೀವು ನಮಗೆ ಅನುಮತಿ ನೀಡಿದರೆ, GPS ಆಧರಿಸಿ ನಿಮ್ಮ ನಿಖರ ಸ್ಥಳವನ್ನು ನಿರ್ಧರಿಸುತ್ತೇವೆ. ನಿಮಗೆ ಪ್ರಸ್ತುತವಾಗಿರುವ ಜಾಹೀರಾತುಗಳನ್ನು ತೋರಿಸಲು ನಿಮ್ಮ ಸಮೀಪ ಇರುವ ಅಥವಾ ನೀವು ಆಗಾಗ ಹೋಗುವ ಸ್ಥಳಗಳನ್ನು ಕೂಡ ನಾವು ಬಳಸಬಹುದು. ಉದಾಹರಣೆಗೆ, ನೀವು ಒಂದು ಕಾಫಿ ಶಾಪ್ ಸಮೀಪ ಇದ್ದರೆ, ಅವರ ಕಾಫಿಗಾಗಿ ಜಾಹೀರಾತುದಾರರು ನಿಮಗೆ ಜಾಹೀರಾತು ತೋರಿಸಲು ಬಯಸಬಹುದು.

    • ಒಂದು ವೇಳೆ ನೀವು ಕ್ಯಾಲಿಫೋರ್ನಿಯಾದಲ್ಲಿದ್ದರೆ, ನಿಮಗೆ ಜಾಹೀರಾತುಗಳನ್ನು ತೋರಿಸಲು ನಿಮ್ಮ ನಿಖರ ಸ್ಥಳ ಇತಿಹಾಸ ಸೇರಿದಂತೆ, ನಿಮ್ಮ ವೈಯಕ್ತಿಕ ಮಾಹಿತಿಯ ಬಳಕೆಯನ್ನು ಮಿತಿಗೊಳಿಸುವಂತೆ ನೀವು Snap ಗೆ ವಿನಂತಿಸಬಹುದು.

ನಿಮಗೆ ಜಾಹೀರಾತುಗಳನ್ನು ತೋರಿಸಲು ಮೇಲೆ ವಿವರಿಸಿರುವ ಬಹು ಮೂಲಗಳಿಂದ Snap ಡೇಟಾವನ್ನು ಬಳಸಬಹುದು ಎನ್ನುವುದನ್ನು ಗಮನದಲ್ಲಿಡಿ. ಉದಾಹರಣೆಗೆ, ಗಾರ್ಡನಿಂಗ್‌ನಲ್ಲಿ ಆಸಕ್ತರಾಗಿರುವ 35-44 ವರ್ಷದ Snapchat ಬಳಕೆದಾರರ ನಿರ್ದಿಷ್ಟ ಜನಸಮುದಾಯಕ್ಕೆ ಜಾಹೀರಾತುಗಳನ್ನು ತೋರಿಸಲು ಒಬ್ಬ ಜಾಹೀರಾತುದಾರರು ಬಯಸಬಹುದು. ಅಂತಹ ಸಂದರ್ಭದಲ್ಲಿ, ಆ ಪ್ರೇಕ್ಷಕರ ಗುಂಪಲ್ಲಿ ನೀವು ಹೊಂದಿಕೆಯಾಗುತ್ತಿದ್ದರೆ ನಿಮಗೆ ಜಾಹೀರಾತುಗಳನ್ನು ತೋರಿಸಲು ನಾವು ನಿಮ್ಮ ವಯಸ್ಸು ಮತ್ತು Snapchat ಅಥವಾ ಇತರ ಪ್ಲ್ಯಾಟ್‌ಫಾರ್ಮ್ಸ್‌ನಲ್ಲಿ ನಿಮ್ಮ ಚಟುವಟಿಕೆಯನ್ನು ಬಳಸಬಹುದು.

Notebook with heart shaped image

ನೀವು ನೋಡುವ ಜಾಹೀರಾತುಗಳನ್ನು ನಿಯಂತ್ರಿಸುವುದು

ನೀವು ನೋಡುವ ಜಾಹೀರಾತುಗಳ ಮೇಲೆ ನೀವು ಅರ್ಥಪೂರ್ಣ ನಿಯಂತ್ರಣ ಹೊಂದಿರಬೇಕು ಎಂದು ನಾವು ನಂಬಿದ್ದೇವೆ. ನೀವು ನೋಡುವ ಜಾಹೀರಾತುಗಳನ್ನು ಬದಲಾಯಿಸಲು, ದಯವಿಟ್ಟು ಇಲ್ಲಿ ವಿವರಿಸಿರುವ ಸೆಟ್ಟಿಂಗ್‌ಗಳನ್ನು ಬಳಸಿ:

  • ಚಟುವಟಿಕೆ ಆಧರಿತ ಜಾಹೀರಾತುಗಳಿಂದ ಹೊರಗುಳಿಯಿರಿ. ನಮ್ಮ ಜಾಹೀರಾತುದಾರರು ಮತ್ತು ಪಾಲುದಾರರ ವೆಬ್‌ಸೈಟ್‌ಗಳು ಮತ್ತು ಪ್ಲಾಟ್‌ಫಾರ್ಮ್ಸ್‌ನಲ್ಲಿ ನಿಮ್ಮ ಚಟುವಟಿಕೆಯನ್ನು ಆಧರಿಸಿ Snap ನಿಮಗೆ ಜಾಹೀರಾತುಗಳನ್ನು ತೋರಿಸಬಾರದು ಎಂದು ನೀವು ಬಯಸುವುದಾದರೆ, ನೀವು ಹೊರಗುಳಿಯಬಹುದು.

  • ಪ್ರೇಕ್ಷಕ-ಆಧಾರಿತ ಜಾಹೀರಾತುಗಳಿಂದ ಹೊರಗುಳಿಯಿರಿ. ಜಾಹೀರಾತುದಾರರು ಮತ್ತು ಇತರ ಪಾಲುದಾರರಿಂದ ನಾವು ಸ್ವೀಕರಿಸುವ ಪ್ರೇಕ್ಷಕರ ಪಟ್ಟಿ ಆಧರಿಸಿ ಜಾಹೀರಾತುಗಳನ್ನು Snap ನಿಮಗೆ ಗುರಿಯಾಗಿಸುವುದನ್ನು ನೀವು ಬಯಸದಿದ್ದರೆ ಈ ಹೊರಗುಳಿಯುವಿಕೆಯನ್ನು ಬಳಸಿ.

  • ತೃತೀಯ ಪಕ್ಷದ ಜಾಹೀರಾತು ನೆಟ್‌ವರ್ಕ್‌ಗಳಿಂದ ಹೊರಗುಳಿಯಿರಿ. ತೃತೀಯ ಪಕ್ಷದ ಜಾಹೀರಾತು ನೆಟ್‌ವರ್ಕ್‌ಗಳು ನಿಮಗೆ ಜಾಹೀರಾತು ಒದಗಿಸುವುದನ್ನು ನೀವು ಬಯಸದಿದ್ದರೆ ಈ ಹೊರಗುಳಿಯುವಿಕೆಯನ್ನು ಬಳಸಿ.

  • ಟ್ರ್ಯಾಕಿಂಗ್‌ನಿಂದ ಹೊರಗುಳಿಯಿರಿ (iOS ಬಳಕೆದಾರರು ಮಾತ್ರ). iOS 14.5 ಅಥವಾ ನಂತರದ ಆವೃತ್ತಿಯಲ್ಲಿ ರನ್ ಆಗುತ್ತಿರುವ ನಿಮ್ಮ ಸಾಧನದಲ್ಲಿ Snapchat ನಿಮ್ಮನ್ನು ಟ್ರ್ಯಾಕ್ ಮಾಡುವುದಕ್ಕೆ ಅವಕಾಶ ನೀಡದಿರಲು ನೀವು ಗೌಪ್ಯತೆ ನಿಯಂತ್ರಣಗಳನ್ನು ಸೆಟ್ ಮಾಡಿದರೆ, ನಿಮ್ಮ ಸಾಧನದಲ್ಲಿ ಹೊರತುಪಡಿಸಿ, ಗುರಿಯಾಗಿಸಿದ ಜಾಹೀರಾತು ಅಥವಾ ಜಾಹೀರಾತು ಮಾಪನ ಉದ್ದೇಶಗಳಿಗಾಗಿ Snapchat ನಿಂದ ಬಳಕೆದಾರ ಅಥವಾ ಸಾಧನದ ಡೇಟಾದೊಂದಿಗೆ ಆ ಸಾಧನವನ್ನು ಬಳಸುತ್ತಿರುವಾಗ ಸಂಗ್ರಹಿಸಿದ ತೃತೀಯ-ಪಕ್ಷದ ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಗಳಲ್ಲಿನ ನಿಮ್ಮ ಚಟುವಟಿಕೆಯನ್ನು ನಾವು ಲಿಂಕ್ ಮಾಡುವುದಿಲ್ಲ. ಅದಾಗ್ಯೂ, ನಾವು ನಿರ್ದಿಷ್ಟವಾಗಿ ನಿಮ್ಮನ್ನು ಗುರುತಿಸದೆ ಇರುವ ವಿಧಾನಗಳಲ್ಲಿ ಜಾಹೀರಾತು ನೀಡುವಿಕೆ ಉದ್ದೇಶಗಳಿಗಾಗಿ ನಾವು ಈ ಮಾಹಿತಿಯನ್ನು ಲಿಂಕ್ ಮಾಡಬಹುದು.

  • ನೀವು ನೋಡುವ ಜಾಹೀರಾತು ವಿಷಯಗಳನ್ನು ಬದಲಾಯಿಸಿ. ಈ ಸೆಟ್ಟಿಂಗ್, ರಾಜಕೀಯ, ಮದ್ಯ ಅಥವಾ ಜೂಜಿನ ಜಾಹೀರಾತುಗಳಂತಹ ಸೂಕ್ಷ್ಮ ವಿಷಯಗಳ ಕುರಿತ ಜಾಹೀರಾತುಗಳ ಕೆಲವು ವಿಧಗಳನ್ನು ನೀವು ನೋಡಲು ಬಯಸುತ್ತೀರಾ ಎನ್ನುವುದನ್ನು ನಿರ್ಧರಿಸಲು ನಿಮಗೆ ಅವಕಾಶ ಕಲ್ಪಿಸುತ್ತದೆ. ಸೆಟ್ಟಿಂಗ್ ಅನ್ನು ಹೇಗೆ ಹೊಂದಿಸಲಾಗಿದೆ ಎನ್ನುವುದನ್ನು ಪರಿಗಣಿಸದೆ ನಿರ್ದಿಷ್ಟ ವಯಸ್ಸಿಗಿಂತ ಕಡಿಮೆ ವಯಸ್ಸಿನ ಬಳಕೆದಾರರಿಗಾಗಿ ಇವುಗಳಲ್ಲಿ ಕೆಲವು ಜಾಹೀರಾತುಗಳನ್ನು ಡಿಫಾಲ್ಟ್ ಆಗಿ ಆಫ್ ಮಾಡಲಾಗಿರುತ್ತದೆ.

  • ಜೀವನಶೈಲಿ ವರ್ಗಗಳಿಗೆ ಬದಲಾವಣೆಗಳನ್ನು ಮಾಡಿ. Snapchat ನಲ್ಲಿ ನಿಮ್ಮ ಆಸಕ್ತಿಗಳು ಮತ್ತು ಚಟುವಟಿಕೆಗಳನ್ನು ಆಧರಿಸಿ ನಿಮ್ಮ ಕುರಿತು Snap ಮಾಡಿದ ಜೀವನಶೈಲಿ ವರ್ಗದ ನಿರ್ಣಯಗಳನ್ನು ಬದಲಾಯಿಸಲು ಈ ಸೆಟ್ಟಿಂಗ್ ನಿಮಗೆ ಅವಕಾಶ ಕಲ್ಪಿಸುತ್ತದೆ. ಈ ಸೆಟ್ಟಿಂಗ್ ಕೆಲವು ವಿಧದ ಜಾಹೀರಾತುಗಳು ಮತ್ತು ಸಂಬಂಧಿಸಿದ ವರ್ಗಗಳಗಳಲ್ಲಿ ವಯೋ ತಡೆಯ ನಿರ್ಬಂಧಗಳಿಂದ ಕೂಡ ಮೀರಲಾಗುತ್ತದೆ.

ನೀವು EU ನಲ್ಲಿ ಇದ್ದರೆ, ಮೇಲಿನ ನಿಯಂತ್ರಣಗಳ ಜೊತೆಗೆ, ಜಾಹೀರಾತು ನೀಡುವಿಕೆ ಸೇರಿದಂತೆ ವೈಯಕ್ತಿಕಗೊಳಿಸಿದ ಕಂಟೆಂಟ್‌ನಿಂದ ಕೂಡ ನೀವು ಹೊರಗುಳಿಯಬಹುದು. ಸೆಟ್ಟಿಂಗ್‌ಗಳ ಪುಟದ "ಯೂರೋಪಿಯನ್ ಒಕ್ಕೂಟ ನಿಯಂತ್ರಣಗಳು" ಅನ್ನು ಪ್ರವೇಶಿಸುವ ಮೂಲಕ ನೀವು ಇದನ್ನು ಮಾಡಬಹುದು.

ಜಾಹೀರಾತುದಾರರು ಮತ್ತು ಮಾಪನ ಪಾಲುದಾರರಿಗೆ ನಾವು ಒದಗಿಸುವ ಮಾಹಿತಿ

ಜಾಹೀರಾತುದಾರರ ಯಾವ ಜಾಹೀರಾತುಗಳನ್ನು ನೀವು ವೀಕ್ಷಿಸಿದ್ದೀರಿ ಮತ್ತು ಕ್ಲಿಕ್ ಮಾಡಿದ್ದೀರಿ ಎಂಬುದನ್ನು ನಾವು ಜಾಹೀರಾತುದಾರರಿಗೆ ಖಚಿತಪಡಿಸುತ್ತೇವೆ. ಕೆಲವೊಮ್ಮೆ ಇದು ತೃತೀಯ ಪಕ್ಷದ ಮಾಪನ ಪಾಲುದಾರರ ಮೂಲಕ ಸಂಭವಿಸುತ್ತದೆ. ನಿಮ್ಮ ವೀಕ್ಷಣೆ ಅಥವಾ Snap ಜಾಹೀರಾತಿನ ಕ್ಲಿಕ್ ನಿಮಗೆ ಜಾಹೀರಾತುದಾರರ ಉತ್ಪನ್ನಗಳು ಮತ್ತು ಸೇವೆಗಳನ್ನು ಖರೀದಿಸಲು ಅಥವಾ ಬಳಸಲು ಕಾರಣವಾಯಿತು ಎಂಬುದನ್ನು ಅವರು ನಂತರ ಪರಿಶೀಲಿಸಬಹುದು (ಉದಾಹರಣೆಗೆ, ಹೊಸ ವಾಚ್ ಖರೀದಿಸುವುದು, ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗೆ ಚಂದಾದಾರರಾಗುವುದು ಅಥವಾ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವುದು). ಜಾಹೀರಾತುದಾರರ ಜಾಹೀರಾತು ಅಭಿಯಾನಗಳ ಪರಿಣಾಮಕತ್ವವನ್ನು ಅಳೆಯಲು ಈ ಜಾಹೀರಾತು ಡೇಟಾವನ್ನು ಬಳಸದಂತೆ ನಿರ್ಬಂಧಿಸುವ ಲಿಖಿತ ಒಪ್ಪಂದಗಳನ್ನು ನಾವು ಜಾಹೀರಾತುದಾರರ (ಮತ್ತು ಮಾಪನ ಪಾಲುದಾರರ) ಜೊತೆಗೆ ನಾವು ಹೊಂದಿದ್ದೇವೆ. ಹೆಸರು, ಫೋನ್ ಸಂಖ್ಯೆ ಅಥವಾ ಇಮೇಲ್ ವಿಳಾಸದಂತಹ ನೇರವಾಗಿ ನಿಮ್ಮನ್ನು ಗುರುತಿಸುವ ಮಾಹಿತಿಯನ್ನು ನಾವು ಜಾಹೀರಾತುದಾರರೊಂದಿಗೆ ಹಂಚಿಕೊಳ್ಳುವುದಿಲ್ಲ.

My AI ನಲ್ಲಿ ಜಾಹೀರಾತುಗಳು

My AI ನಲ್ಲಿ ಪ್ರದರ್ಶಿಸುವ ಜಾಹೀರಾತುಗಳು Snapchat ನಲ್ಲಿನ ಇತರ ಜಾಹೀರಾತುಗಳಿಗಿಂತ ಸ್ವಲ್ಪ ಭಿನ್ನವಾಗಿ ಕಾರ್ಯನಿರ್ವಹಿಸುತ್ತವೆ: ಅವು ನಿಮ್ಮ My AI ಸಂಭಾಷಣೆಗಳ ಸನ್ನಿವೇಶದಿಂದ ಮತ್ತು ಉದಾಹರಣೆಗೆ ನೀವು ಉತ್ಪನ್ನಗಳು ಅಥವಾ ಸೇವೆಗಳಿಗಾಗಿ ಶಿಫಾರಸುಗಳಿಗೆ ಹುಡುಕುತ್ತಿದ್ದೀರಾ ಎನ್ನುವುದರಿಂದ ನಿರ್ಧರಿಸಲ್ಪಡುತ್ತವೆ. ಅವುಗಳನ್ನು ನಾವು “ಸಂದರ್ಭೋಚಿತ ಜಾಹೀರಾತುಗಳು” ಎಂದು ಕರೆಯುತ್ತೇವೆ. Snapchat ನಲ್ಲಿ ಇತರ ಜಾಹೀರಾತುಗಳಿಗಿಂತ ಇನ್ನೊಂದು ಭಿನ್ನತೆ: My AI ಜಾಹೀರಾತುಗಳನ್ನು Snap ಬದಲಾಗಿ Snap ನ ಜಾಹೀರಾತು ಪಾಲುದಾರರು ಒದಗಿಸುತ್ತಾರೆ. ನಿಮಗೆ ಸೂಕ್ತ ಮತ್ತು ಪ್ರಸ್ತುತವಾದ ಜಾಹೀರಾತುಗಳನ್ನು ಒದಗಿಸಲು ನೆರವಾಗುವುದಕ್ಕೆ ನಮ್ಮ ಜಾಹೀರಾತು ಪಾಲುದಾರರು ನಿಮ್ಮ ಪ್ರಶ್ನೆಗಳು (ಅದರಲ್ಲಿ ವಾಣಿಜ್ಯ ಉದ್ದೇಶ ಇದೆ ಎಂದು ನಾವು ನಿರ್ಧರಿಸಿದರೆ) ಮತ್ತು ನಿಮ್ಮ ವಯೋಶ್ರೇಣಿ (ಅಂದರೆ ನೀವು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರೇ ಅಲ್ಲವೇ), ದೇಶ/ಭಾಷೆ, ಆಪರೇಟಿಂಗ್ ಸಿಸ್ಟಂ (ಅಂದರೆ iOS/Android) ಮತ್ತು IP ವಿಳಾಸ ಸೇರಿದಂತೆ, ಹೆಚ್ಚುವರಿ ಸನ್ನಿವೇಶಗಳನ್ನು ಸ್ವೀಕರಿಸುತ್ತಾರೆ. ಉದಾಹರಣೆಗೆ, My AI ಅನ್ನು ನೀವು "ಅತ್ಯುತ್ತಮ ಎಲೆಕ್ಟ್ರಿಕ್ ಗಿಟಾರ್ ಅನ್ನು ಯಾರು ತಯಾರಿಸುತ್ತಾರೆ?" ಎಂದು ಕೇಳಿದರೆ. ಒಬ್ಬ ಗಿಟಾರ್ ತಯಾರಕರಿಗಾಗಿ ನೀವು "ಪ್ರಾಯೋಜಿತ" ಜಾಹೀರಾತು ವಿಭಾಗವನ್ನು ನೋಡಬಹುದು. ಇವೆಲ್ಲವೂ ಪರಿಚಿತ ಎಂಬಂತೆ ಅನಿಸಬಹುದು, ಏಕೆಂದರೆ My AI ಜಾಹೀರಾತುಗಳು ಬಹುತೇಕ ಇತರ ಪ್ಲ್ಯಾಟ್‌ಫಾರ್ಮ್ಸ್‌ನಲ್ಲಿ ಹುಡುಕಾಟ ಜಾಹೀರಾತುಗಳಂತೆಯೇ ಕಾರ್ಯನಿರ್ವಹಿಸುತ್ತವೆ.