UK ಸಾರ್ವತ್ರಿಕ ಚುನಾವಣೆಯಲ್ಲಿ Snap ನಾಗರಿಕ ತೊಡಗಿಕೊಳ್ಳುವಿಕೆ ಚಟುವಟಿಕೆಯು ಪ್ರತಿ 5 ನಿಮಿಷಗಳಿಗೆ 3000 ಯುವ ಜನರು ಮತದಾನಕ್ಕಾಗಿ ನೋಂದಣಿ ಮಾಡಿಕೊಳ್ಳಲು ನೆರವಾಯಿತು

ಜುಲೈ 28, 2024

Snap ನಲ್ಲಿ, ನಾಗರಿಕ ತೊಡಗಿಕೊಳ್ಳುವಿಕೆಯು ಸ್ವಯಂ ಅಭಿವ್ಯಕ್ತಿಯ ಅತ್ಯಂತ ಶಕ್ತಿಶಾಲಿ ಸ್ವರೂಪಗಳಲ್ಲಿ ಒಂದು ಎಂದು ನಾವು ನಂಬಿದ್ದೇವೆ - ಇದು Snapchat ನಲ್ಲಿನ ಮೂಲಭೂತ ಮೌಲ್ಯಗಳಲ್ಲಿ ಒಂದಾಗಿದೆ. ಜುಲೈ 4 ರಂದು UK ಸಾರ್ವತ್ರಿಕ ಚುನಾವಣೆಗೆ ಮುಂಚೆ, ಮತದಾನ ದಿನಕ್ಕೆ ಮುಂಚಿತವಾಗಿ ನಮ್ಮ ಯುವ ಮತದಾರರನ್ನು ಪ್ರೇರೇಪಿಸುವ ಮತ್ತು ತಿಳುವಳಿಕೆ ನೀಡುವ ನಮ್ಮ ಜವಾಬ್ದಾರಿಯನ್ನು ನಾವು ಸಂಪೂರ್ಣವಾಗಿ ಅರಿತಿದ್ದೇವೆ – ಏಕೆಂದರೆ ನಾವು 13-24-ವರ್ಷದ ಯುವಜನರಲ್ಲಿ 90% ಜನರನ್ನು ತಲುಪುತ್ತೇವೆ ಮತ್ತು UK ಯಲ್ಲಿ Snapchat ನಲ್ಲಿ 21 ಮಿಲಿಯನ್‌ಗೂ ಅಧಿಕ ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿದ್ದೇವೆ.

ಯುವಜನ ಕೇಂದ್ರಿತ, ಮತದಾರರ ನೋಂದಣಿಯ ಲಾಭರಹಿತ ಸಂಸ್ಥೆಯಾದ My Life My Say (MLMS) ಜೊತೆಗೆ ಯುವಜನರ ಮೇಲೆ ಅತ್ಯಂತ ಪರಿಣಾಮ ಬೀರುವ ಬಾಡಿಗೆ ದರಗಳು ಮತ್ತು ಹವಾಮಾನ ಬದಲಾವಣೆಯಂತಹ ವಿಷಯಗಳ ಕುರಿತು ‘Give an X’ ಯುವಜನರನ್ನು ಪ್ರೋತ್ಸಾಹಿಸುವ ಅವರ ಅಭಿಯಾನವನ್ನು ಬೆಂಬಲಿಸಲು ಅವರೊಂದಿಗೆ ಕೈಜೋಡಿಸಿರುವುದಕ್ಕೆ ನಮಗೆ ಹೆಮ್ಮೆಯಿದೆ.

ಈ ಪಾಲುದಾರಿಕೆಯ ಭಾಗವಾಗಿ, Snap ವಿಶೇಷ ವರ್ಧಿತ ವಾಸ್ತವ (AR) ಚುನಾವಣಾ ಫಿಲ್ಟರ್ ಅನ್ನು ಅಭಿವೃದ್ಧಿಪಡಿಸಿದ್ದು ಅದನ್ನು ಜೂನ್ 18 ರ ರಾಷ್ಟ್ರೀಯ ಮತದಾರರ ನೋಂದಣಿ ದಿನಕ್ಕಿಂತ ಮುಂಚಿತವಾಗಿ ಬಿಡುಗಡೆ ಮಾಡಲಾಗಿದೆ. ಇದು UK ಯಲ್ಲಿ 18-34 ವರ್ಷ ವಯಸ್ಸಿನವರ 1.64 ಮಿಲಿಯನ್ ಮತದಾರರ ನೋಂದಣಿಗೆ ದಾಖಲೆ-ಮುರಿಯಲು ಕೊಡುಗೆ ನೀಡಿದೆ. ಅಭಿಯಾನ ಮತ್ತು ಫಿಲ್ಟರ್‌ನಿಂದ Snapchat ಮೂಲಕ ಪ್ರತಿ ಐದು ನಿಮಿಷಗಳಿಗೆ ಅಸಾಧಾರಣವಾದ 3,000 ಜನರು ಮತದಾನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ!

ಚುನಾವಣಾ ದಿನಾಂಕವನ್ನು ನಾವು ಎದುರು ನೋಡುತ್ತಿರುವಂತೆ, ಜನರನ್ನು ಮನೆಯಿಂದ ಹೊರಬಂದು ಮತದಾನ ಮಾಡಲು ಪ್ರೇರೇಪಿಸುವ ಮತ್ತು ಅವರ ಸ್ಥಳೀಯ ಮತದಾನ ಕೇಂದ್ರದಂತಹ, ಮತದಾನ ಮಾಡಲು ಜನರಿಗೆ ಅಗತ್ಯವಿರುವ ಮಾಹಿತಿಯನ್ನು ಒದಗಿಸುವ MLMS ಜೊತೆಗಿನ ಪ್ರತಿಕ್ರಿಯಾಶೀಲ ಲೆನ್ಸ್ ಅನ್ನು ನಾವು ಬಿಡುಗಡೆ ಮಾಡಿದ್ದೇವೆ. ಜುಲೈ 4 ರಂದೇ, ಮತದಾನ ಮಾಡಲು ಜ್ಞಾಪಿಸುವ ಸಲುವಾಗಿ ಎಲ್ಲ UK Snapchatter ಗಳ ಜೊತೆಗೆ ಈ ಲೆನ್ಸ್ ಅನ್ನು ನಾವು ಹಂಚಿಕೊಳ್ಳಲಿದ್ದೇವೆ. 

ಕೌಂಟ್‌ಡೌನ್ AR ಫಿಲ್ಟರ್ ಬಿಡುಗಡೆ ಮಾಡಲು ಮತ್ತು ಮತದಾನದ ದಿನದ ಕುರಿತು ರೋಮಾಂಚಕತೆ ಸೃಷ್ಟಿಸಲು, Snap ಗೆ ಪ್ರಮುಖ ಸುದ್ದಿ ಸಹಭಾಗಿಯಾಗಿರುವ BBC ಜೊತೆಗೆ ಕೈಜೋಡಿಸಿರುವುದಕ್ಕೂ ನಾವು ಹರ್ಷಿತರಾಗಿದ್ದೇವೆ. UK ಆದ್ಯಂತದ ಮತದಾರರಿಗಾಗಿ BBC ಸಾರ್ವತ್ರಿಕ ಚುನಾವಣಾ ಕೇಂದ್ರ ಮತ್ತು ಅದರ ಪ್ರಮುಖ ಮಾಹಿತಿ ಕೇಂದ್ರವನ್ನು ಮೀಸಲಾಗಿರಿಸಿದೆ — ಈ ಫಿಲ್ಟರ್ ಅನ್ನು BBC ಯ ಮತದಾನ ಮಾರ್ಗದರ್ಶಿಗೆ ಲಿಂಕ್ ಮಾಡಲಾಗಿದೆ ಮತ್ತು ಇದು ಯುವ ಮತದಾರರಿಗೆ ಚುನಾವಣೆಯ ಕುರಿತು ತಿಳಿದುಕೊಳ್ಳಲು ಹಾಗೂ ಮತದಾನದಂದು ಮಾಡಬೇಕಾದ ಮತ್ತು ಮಾಡಬಾರದವುಗಳ ಕುರಿತು ಅರಿತುಕೊಳ್ಳಲು ಸಹಾಯ ಮಾಡಲಿದೆ! ನಮ್ಮ AR ಪಾಲುದಾರಿಕೆ ಫಿಲ್ಟರ್ ಅನ್ನು BBC ಯ ಚಾನೆಲ್‌ಗಳಾದ್ಯಂತ 4 ಜುಲೈವರೆಗೆ ಹಂಚಿಕೊಳ್ಳಲಾಗುತ್ತದೆ.

ಈ ಪಾಲುದಾರಿಕೆಯು ದಿ ರೆಸ್ಟ್ ಈಸ್ ಪಾಲಿಟಿಕ್ಸ್, ದಿ ಟೆಲಿಗ್ರಾಫ್, ಸ್ಕೈ ನ್ಯೂಸ್ UK ಮತ್ತು ಸ್ಕೈ ಬ್ರೇಕಿಂಗ್ ನ್ಯೂಸ್, ದಿ ಗಾರ್ಡಿಯನ್ ಮತ್ತು ದಿ ಮಿರರ್ ಸೇರಿದಂತೆ ವಿವಿಧ ಮಾಧ್ಯಮ ಪ್ರಕಾಶಕರ ಜೊತೆಗಿನ ಪಾಲುದಾರಿಕೆಗೆ ಹೆಚ್ಚುವರಿಯಾಗಿದ್ದು, ಚುನಾವಣೆಗೆ ಸಂಬಂಧಿಸಿದ ವಿವಿಧ ಬೆಳವಣಿಗೆಗಳು ಅನಾವರಣಗೊಳ್ಳುತ್ತಿರುವಂತೆ ಅವುಗಳನ್ನು ಅನುಸರಿಸಲು ಮತ್ತು ತೊಡಗಿಕೊಳ್ಳಲು ನಮ್ಮ ಸಮುದಾಯಕ್ಕೆ ಮಾಹಿತಿಯ ವಿಶ್ವಾಸಾರ್ಹ ಮೂಲಗಳಾಗಿವೆ. 

ಸಾರ್ವತ್ರಿಕ ಚುನಾವಣೆಯ ಸುತ್ತಲಿನ ಸುಳ್ಳುಮಾಹಿತಿಯನ್ನು ನಿಭಾಯಿಸುವುದು


2024 ಜಗತ್ತಿನಾದ್ಯಂತ ಚುನಾವಣೆಗಳ ವರ್ಷವಾಗಿದ್ದು, UK ನಲ್ಲಿ ಜುಲೈ 4 ರಂದು ಸೇರಿದಂತೆ, ಈ ವರ್ಷ ವಿವಿಧ ಸಮಯದಲ್ಲಿ 50 ಕ್ಕೂ ಹೆಚ್ಚು ದೇಶಗಳಲ್ಲಿ ಚುನಾವಣೆಗಳು ನಡೆಯಲಿವೆ.  Snap ನಲ್ಲಿ, ಚುನಾವಣೆಯ ಸಮಗ್ರತೆಯನ್ನು ಸಂರಕ್ಷಿಸಲು ಮತ್ತು ಸುಳ್ಳುಮಾಹಿತಿಯಿಂದ Snapchatter ಗಳನ್ನು ರಕ್ಷಿಸಲು ನೆರವಾಗುವುದಕ್ಕೆ ಈ ವರ್ಷದ ಆರಂಭದಲ್ಲಿ ಈ ಚುನಾವಣೆಗಳಿಗೆ ನಮ್ಮ ಸಿದ್ಧತೆಯನ್ನು ನಾವು ರೂಪಿಸಿಕೊಂಡಿದ್ದೆವು. ನಮ್ಮ ವಿಧಾನದ ಪರಿಣಾಮಕಾರಿತ್ವವನ್ನು ಪ್ರದರ್ಶಿಸಿದ ನಮ್ಮ ಇತ್ತೀಚಿನ EU ಚುನಾವಣಾ ಬ್ಲಾಗ್ ಪೋಸ್ಟ್ ಅನ್ನು ಈ ನವೀಕರಣವು ಅನುಸರಿಸುತ್ತದೆ.

ಸುಳ್ಳುಮಾಹಿತಿಯ ಹರಡುವಿಕೆಯನ್ನು ತಡೆಗಟ್ಟಲು ನಾವು ಬದ್ಧರಾಗಿದ್ದೇವೆ. ನಮ್ಮ ಸಮುದಾಯ ಮಾರ್ಗಸೂಚಿಗಳು ಯಾವಾಗಲೂ ತಪ್ಪು ಮಾಹಿತಿ ಮತ್ತು ಉದ್ದೇಶಪೂರ್ವಕವಾಗಿ ತಪ್ಪುದಾರಿಗೆಳೆಯುವ ವಿಷಯದ ಹರಡುವಿಕೆಯನ್ನು ನಿಷೇಧಿಸುತ್ತವೆ - ಡೀಪ್‌ಫೇಕ್‌ಗಳು ಮತ್ತು ವಂಚನೆಯ ಮೂಲಕ ತಿರುಚಲಾಗಿರುವ ವಿಷಯಗಳು AI ನಿಂದ ರಚಿಸಲಾಗಿರುವುದಾಗಲಿ ಅಥವಾ ಮಾನವನಿಂದ ರಚಿಸಲ್ಪಟ್ಟಿರಲಿ.

ಚುನಾವಣಾ ಅವಧಿಯಲ್ಲಿ ರಾಜಕೀಯ ಪಕ್ಷಗಳ ಸುತ್ತಲಿನ ಸುಳ್ಳುಮಾಹಿತಿ ಹರಡಬಹುದು ಎನ್ನುವುದನ್ನು ನಾವು ಗುರುತಿಸಿದ್ದೇವೆ ಮತ್ತು  ಸುಳ್ಳುಮಾಹಿತಿಯ ಹರಡುವಿಕೆಯನ್ನು ತಡೆಗಟ್ಟಲು Snap ನ ಪ್ಲ್ಯಾಟ್‌ಫಾರ್ಟ್ ಸಂರಚನೆಯನ್ನು ವಿನ್ಯಾಸಗೊಳಿಸಲಾಗಿದ್ದರೂ ಸಹ, UK ಯಲ್ಲಿನ ನಮ್ಮ ಸಮುದಾಯವನ್ನು ಸುರಕ್ಷಿತವಾಗಿ ಮತ್ತು ಮಾಹಿತಿಯುಕ್ತರಾಗಿ ಇರಿಸಲು ನಾವು ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಇದರಲ್ಲಿ ಇವು ಸೇರಿವೆ:

  • UK ಆದ್ಯಂತ ರಾಜಕೀಯ ಜಾಹೀರಾತು ಹೇಳಿಕೆಗಳನ್ನು ಪರಿಶೀಲಿಸಲು ನೆರವಾಗುವುದಕ್ಕೆ ಪ್ರಮುಖ ಸತ್ಯ-ಪರಿಶೀಲನಾ ಸಂಸ್ಥೆ ಹಾಗೂ ದಿ ಇಂಟರ್‌ನ್ಯಾಷನಲ್ ಫ್ಯಾಕ್ಟ್-ಚೆಕಿಂಗ್ ನೆಟ್‌ವರ್ಕ್‌ (IFCN) ನ ದೃಢೀಕೃತ ಸಹಿದಾರರಾದ Logically Facts ಜೊತೆಗೆ ಪಾಲುದಾರಿಕೆ.

  • ರಾಜಕೀಯ ವಿಷಯಗಳು ಮತ್ತು ವ್ಯಕ್ತಿಗಳ ಕುರಿತು ತೊಡಗಿಕೊಳ್ಳುವುದನ್ನು ತಪ್ಪಿಸುವಂತೆ ನಮ್ಮ ಚಾಟ್‌ಬಾಟ್‌ My AI ಗೆ ಸೂಚನೆ ನೀಡುವುದು.

  • UK Snap ಸ್ಟಾರ್‌ಗಳಿಗಾಗಿ Snapchat ನಲ್ಲಿ ನಮ್ಮ ರಾಜಕೀಯ ವಿಷಯದ ಕುರಿತು ಸ್ಪಷ್ಟವಾದ ನೀತಿಯನ್ನು ನಿಗದಿಪಡಿಸುವುದು ಮತ್ತು ಚುನಾವಣೆ ಮತ್ತು ಅವರ ಪೋಸ್ಟ್‌ಗಳಿಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿಗೆ ಸಂಬಂಧಿಸಿ ವಿಚಾರಿಸಲು ಸಂಪರ್ಕ ಬಿಂದುಗಳನ್ನು ಒದಗಿಸುವುದು. 

ಮತದಾನದ ತಮ್ಮ ಹಕ್ಕನ್ನು ಚಲಾಯಿಸಲು ನಮ್ಮ ಸಮುದಾಯವನ್ನು ಪ್ರೋತ್ಸಾಹಿಸುವುದಕ್ಕೆ ಹಾಗೂ Snapchat ಅನ್ನು ಸುರಕ್ಷಿತ, ಜವಾಬ್ದಾರಿಯುತ, ನಿಖರ ಮತ್ತು ಉಪಯುಕ್ತ ಸುದ್ದಿ ಮತ್ತು ಮಾಹಿತಿಯ ತಾಣವಾಗಿಸುವುದಕ್ಕೆ ಈ ಕ್ರಮಗಳು ಸಹಾಯ ಮಾಡುತ್ತವೆ ಎನ್ನುವ ಕುರಿತು ನಮಗೆ ಆತ್ಮವಿಶ್ವಾಸವಿದೆ. 

ಸುದ್ದಿಗೆ ಹಿಂತಿರುಗಿ