Snapchat ನಲ್ಲಿ ಮಾನಸಿಕ ಆರೋಗ್ಯವನ್ನು ಬೆಂಬಲಿಸುವುದು ಮತ್ತು ನಿಂದನೆಯ ವಿರುದ್ಧ ಹೋರಾಡುವುದು

ಅಕ್ಟೋಬರ್ 6, 2022

Snap ನಲ್ಲಿ, ನಮ್ಮ ಸಮುದಾಯದ ಆರೋಗ್ಯ ಮತ್ತು ಯೋಗಕ್ಷೇಮ ನಮ್ಮ ಅಗ್ರ ಆದ್ಯತೆಯಾಗಿದೆ. ಜಗತ್ತಿನಾದ್ಯಂತದ ಯುವಜನರು ತಮ್ಮ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿ ಯಾತನೆ ಅನುಭವಿಸುತ್ತಿರುವಂತೆ, Snapchatter ಗಳು ಅವರ ಸ್ನೇಹಿತರೊಂದಿಗೆ ಸಂವಹನ ನಡೆಸಲು ಸುರಕ್ಷಿತ ಸ್ಥಳಾವಕಾಶ ನಿರ್ವಹಿಸುವ ಮತ್ತು ಪ್ರಮುಖ ಸಂಪನ್ಮೂಲಗಳಿಗೆ ಅವರಿಗೆ ಪ್ರವೇಶ ಒದಗಿಸುವ ಮೂಲಕ ಅವರನ್ನು ಬೆಂಬಲಿಸುವ ಜವಾಬ್ದಾರಿ ಮತ್ತು ಅರ್ಥಪೂರ್ಣ ಅವಕಾಶ ಎರಡನ್ನೂ ನಾವು ಹೊಂದಿದ್ದೇವೆ.
ಆರಂಭದಿಂದಲೂ, ಸಾಮಾಜಿಕ ತುಲನೆಯನ್ನು ಪ್ರೋತ್ಸಾಹಿಸುವ ಮತ್ತು ಮಾನಸಿಕ ಆರೋಗ್ಯಕ್ಕೆ ಕೆಡುಕುಂಟುಮಾಡಬಲ್ಲ ಸಾಂಪ್ರದಾಯಿಕ ಸಾಮಾಜಿಕ ಮಾಧ್ಯಮದ ಅತ್ಯಂತ ವಿಷಕಾರಿ ವೈಶಿಷ್ಟ್ಯಗಳನ್ನು ಕೈಬಿಟ್ಟು – ಲೈಕ್‌ಗಳು ಮತ್ತು ಕಾಮೆಂಟ್‌ಗಳ ಒತ್ತಡವಿಲ್ಲದೆ ನೈಜ ಸ್ನೇಹಿತರೊಂದಿಗೆ ಸಂವಹನ ನಡೆಸಲು ಮತ್ತು ಜೊತೆಯಾಗಿ ವಿನೋದಿಸಲು Snapchat ಅನ್ನು ವಿನ್ಯಾಸಗೊಳಿಸಲಾಗಿದೆ. ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಯುವಜನರಿಗೆ ಸ್ನೇಹಿತರ ನಡುವಿನ ಸಂಪರ್ಕ ಕೂಡ ನಿರ್ಣಾಯಕ ಸ್ವರೂಪದ ಬೆಂಬಲವಾಗಿದೆ ಎನ್ನುವುದು ನಮಗೆ ತಿಳಿದಿದೆ — ಅವರು ಯಾತನೆ ಅನುಭವಿಸುತ್ತಿರುವಾಗ ಸ್ನೇಹಿತರು ಕರೆಗೆ ಸಿಗುವ ಮೊದಲಿಗರಾಗಿರುತ್ತಾರೆ. ನೈಜ ಸ್ನೇಹಿತರ ನಡುವಿನ ಸಂವಹನಗಳಿಗೆ ನಿರ್ಮಿಸಿದ ವೇದಿಕೆಯಾಗಿ ನಾವಿಲ್ಲಿ ವಿಶೇಷವಾಗಿ — ಮತ್ತು ವಿಶಿಷ್ಟವಾಗಿ —ಸಹಾಯ ಮಾಡುವ ಅನುಕೂಲ ಹೊಂದಿದ್ದೇವೆ ಮತ್ತು ಬೆದರಿಕೆಯನ್ನು ತಡೆಗಟ್ಟಲು, ಬೆದರಿಕೆಗೆ ಅವರು ಹೇಗೆ ಪ್ರತಿಕ್ರಿಯಿಸಬಹುದು ಎನ್ನುವ ಕುರಿತು ನಮ್ಮ ಸಮುದಾಯಕ್ಕೆ ಅರಿವು ಮೂಡಿಸಲು ಮತ್ತು ಅವರು ಅಥವಾ ಅವರ ಸ್ನೇಹಿತರಿಗೆ ಅಗತ್ಯವಿರುವಾಗ ಬಳಸಬಹುದಾದ ಸಂಪನ್ಮೂಲಗಳನ್ನು ಒದಗಿಸಲು ನಾವು ಶಕ್ತಿಶಾಲಿ ಪಾತ್ರವನ್ನು ನಿಭಾಯಿಸಬಹುದು.
ಈ ವಿಶ್ವ ಮಾನಸಿಕ ಆರೋಗ್ಯ ದಿನದಂದು, ಜಗತ್ತಿನಾದ್ಯಂತ ಹೊಸ ಬೆದರಿಕೆ ತಡೆಗಟ್ಟುವಿಕೆ ಮತ್ತು ಮಾನಸಿಕ ಆರೋಗ್ಯ ಅಭಿಯಾನಗಳ ಸಲಕರಣೆಗಳನ್ನು ಬಿಡುಗಡೆ ಮಾಡುತ್ತಿದ್ದೇವೆ. ಸ್ಥಳೀಯ ತಜ್ಞ ಸಂಘಟನೆಗಳೊಂದಿಗೆ ಪಾಲುದಾರಿಕೆಯಲ್ಲಿ, ಪರಸ್ಪರ ದಯಾಳುವಾಗಿರಲು Snapchatter ಗಳಿಗೆ ಈ ಅಭಿಯಾನಗಳು ಪ್ರೋತ್ಸಾಹಿಸುತ್ತವೆ ಮತ್ತು ಬೆದರಿಕೆ ಅಥವಾ ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ನಿಭಾಯಿಸುತ್ತಿದ್ದರೆ ಅವಲಂಬಿಸಬಹುದಾದ ಸ್ಥಳೀಯ ಟೂಲ್‌ಗಳನ್ನು ಅವರಿಗೆ ಒದಗಿಸುತ್ತವೆ.
Snapchatter ಗಳಿಗೆ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿ ನಾವು ಬೆಂಬಲ ನೀಡುವ ಒಂದು ಮುಖ್ಯ ವಿಧಾನವೆಂದರೆ ನಮ್ಮ ಆ್ಯಪ್‌ನಲ್ಲಿನ ಪೋರ್ಟಲ್ "Here For You.” 2020 ರಲ್ಲಿ ಆರಂಭಿಸಲಾದ Here For You, Snapchatter ಗಳು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳ ಶ್ರೇಣಿಯನ್ನು ಹುಡುಕಿದಾಗ, ತಜ್ಞ ಸಂಘಟನೆಗಳಿಂದ ಸಂಪನ್ಮೂಲಗಳನ್ನು ಕಲೆಹಾಕುವ ಮೂಲಕ ಮಾನಸಿಕ ಆರೋಗ್ಯ ಅಥವಾ ಭಾವನಾತ್ಮಕ ಬಿಕ್ಕಟ್ಟನ್ನು ಅನುಭವಿಸುತ್ತಿರಬಹುದಾದ Snapchatter ಗಳಿಗೆ ಪೂರ್ವಭಾವಿ ಆ್ಯಪ್‌ನಲ್ಲಿನ ಬೆಂಬಲವನ್ನು ಒದಗಿಸುತ್ತದೆ. ಇಂದು, ನಾವು ಜಗತ್ತಿನಾದ್ಯಂತ Here For You ವಿಸ್ತರಣೆಯನ್ನು ಪ್ರಕಟಿಸುತ್ತಿದ್ದೇವೆ:
  • U.S. ನ ಹೊಸ 9-8-8 ಆತ್ಮಹತ್ಯೆ ಮತ್ತು ಬಿಕ್ಕಟ್ಟಿನ ಸಹಾಯವಾಣಿ ಕುರಿತು ಜಾಗೃತಿ ಮೂಡಿಸುವ ಕಂಟೆಂಟ್. 
  • ರಾಷ್ಟ್ರೀಯ ಆತ್ಮಹತ್ಯೆ ತಡೆಗಟ್ಟುವಿಕೆ ಹಾಟ್‌ಲೈನ್ ಕುರಿತು ಜಾಗೃತಿ ಮೂಡಿಸಲು ಗಮನಕೇಂದ್ರಿತ ಹೊಸ ಸಂಚಿಕೆಗೆ ಸಂಬಂಧಿಸಿ ಫ್ರಾನ್ಸ್‌ನಲ್ಲಿ 3114 ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದ್ದೇವೆ. 
  • ಜರ್ಮನಿಯಲ್ಲಿ Here for You ಬಿಡುಗಡೆ ಮಾಡುತ್ತಿದ್ದೇವೆ ಮತ್ತು ಖಿನ್ನತೆ, ಮಾನಸಿಕ ಒತ್ತಡ ಮತ್ತು ಇನ್ನಷ್ಟರ ಕುರಿತು ಕಸ್ಟಮ್ ವೀಡಿಯೊ ಕಂಟೆಂಟ್ ಸಿದ್ಧಪಡಿಸಲು ich bin alles ಜೊತೆ ಪಾಲುದಾರಿಕೆ ಮಾಡಿಕೊಳ್ಳುತ್ತಿದ್ದೇವೆ.
  • Stichting 113 Zelfmoordpreventie (ಆತ್ಮಹತ್ಯೆ ತಡೆಗಟ್ಟುವಿಕೆ) ಜೊತೆಗೆ ಅಭಿವೃದ್ಧಿಪಡಿಸಿದ ನೆದರ್‌ಲ್ಯಾಂಡ್‌ನ ಹೊಸ ಕಂಟೆಂಟ್, ಅವರ ಆತ್ಮಹತ್ಯೆ ಹಾಟ್‌ಲೈನ್ ಕುರಿತು ಜಾಗೃತಿ ಮೂಡಿಸುತ್ತದೆ ಮತ್ತು ಬೆದರಿಕೆಯನ್ನು ನಿಭಾಯಿಸುವುದು ಹೇಗೆ ಎನ್ನುವ ಕುರಿತು MIND ಗಮನ ಕೇಂದ್ರೀಕರಿಸುತ್ತದೆ.
  • ಉತ್ತಮ ಸ್ನೇಹಿತನಾಗಿರುವುದು, ಮಾನಸಿಕ ಒತ್ತಡವನ್ನು ನಿಭಾಯಿಸುವುದು ಮತ್ತು ಆರೋಗ್ಯಕರ ಹೆಡ್‌ಸ್ಪೇಸ್ ಕಾಯ್ದುಕೊಳ್ಳುವುದು ಮುಂತಾದ ವಿಷಯಗಳನ್ನು ಒಳಗೊಂಡ ಹೆಡ್‌ಸ್ಪೇಸ್‌ ನ್ಯಾಶನಲ್ ಯೂಥ್ ಮೆಂಟಲ್ ಹೆಲ್ತ್ ಫೌಂಡೇಶನ್ ಮತ್ತು ReachOut ಪಾಲುದಾರಿಕೆಯಲ್ಲಿ ಆಸ್ಟ್ರೇಲಿಯಾದಲ್ಲಿ ಹೊಸ ಕಂಟೆಂಟ್. 
  • ಉದ್ವೇಗವನ್ನು ನಿಭಾಯಿಸುವುದು, ಖಿನ್ನತೆಯ ನಿರ್ವಹಣೆ ಮತ್ತು ಆತ್ಮಹತ್ಯೆಯ ಆಲೋಚನೆಗಳನ್ನು ಎದುರಿಸುತ್ತಿರುವ ಒಬ್ಬ ಸ್ನೇಹಿತನಿಗೆ ಬೆಂಬಲ ಒದಗಿಸುವುದು ಒಳಗೊಂಡಂತೆ, ವಿವಿಧ ಮಾನಸಿಕ ಆರೋಗ್ಯ ವಿಷಯಗಳನ್ನು ಕವರ್ ಮಾಡುವ ಹೊಸ ಕಂಟೆಂಟ್‌ಗಳನ್ನು ಸಿದ್ಧಪಡಿಸಲು ಭಾರತದಲ್ಲಿ ಸಂಗತ್‌ನೊಂದಿಗೆ ಕೈಜೋಡಿಸಿದ್ದೇವೆ. 
  • ಬೆದರಿಕೆಗೆ ಪ್ರತಿಕ್ರಿಯಿಸುವುದು ಹೇಗೆ ಎನ್ನುವ ಕುರಿತು ಸಲಹೆಗಳನ್ನು ನೀಡಲು ಸೌದಿ ಅರೇಬಿಯಾದಲ್ಲಿ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದೊಂದಿಗೆ Here for You ಬಿಡುಗಡೆ. 
  • U.S. ನಲ್ಲಿ Club Unity ಯ ನಮ್ಮ ಎರಡನೇ ದರ್ಜೆಯನ್ನು ಪರಿಚಯಿಸುತ್ತಿದ್ದೇವೆ ಮತ್ತು ಮಾನಸಿಕ ಆರೋಗ್ಯದ ಕುರಿತು ತಮ್ಮ ಸ್ನೇಹಿತರೊಂದಿಗೆ ಮಾತನಾಡಲು Snapchatter ಗಳನ್ನು ಪ್ರೋತ್ಸಾಹಿಸುವ ರಾಷ್ಟ್ರೀಯ ಲೆನ್ಸ್‌ಗಳು ಮತ್ತು ಫಿಲ್ಟರ್‌ಗಳಿಗೆ ಸಂಬಂಧಿಸಿ ಜಾಹೀರಾತು ಪರಿಷತ್‌ನ "ಸೀಜ್‌ ದ ಆಕ್ವರ್ಡ್" ಅಭಿಯಾನದೊಂದಿಗೆ ಪಾಲುದಾರಿಕೆ ಮಾಡಿಕೊಂಡಿದ್ದೇವೆ.
Here For You ವಿಸ್ತರಣೆ ಮತ್ತು Club Unity ಅಪ್‌ಡೇಟ್ ಮಾಡುವುದರ ಜೊತೆಗೆ, ರಾಷ್ಟ್ರೀಯ ಫಿಲ್ಟರ್‌ಗಳು, ಲೆನ್ಸ್‌ಗಳು ಮತ್ತು ಸ್ಟಿಕ್ಕರ್‌ಗಳ ಮೂಲಕ ಸ್ಥಳದಲ್ಲಿನ ಬೆಂಬಲ ಮತ್ತು ಸಂಪನ್ಮೂಲಗಳ ಕುರಿತು ನಮ್ಮ ಸಮುದಾಯಕ್ಕೆ ಜಾಗೃತಿ ಮೂಡಿಸಲು ನಾವು ವಿಶ್ವಾಸಾರ್ಹ ಸ್ಥಳೀಯ ಪಾಲುದಾರರೊಂದಿಗೆ ಕೆಲಸ ಮಾಡುತ್ತಿದ್ದೇವೆ:
  • ಕೆನಡಾದಲ್ಲಿ, ಲೆನ್ಸ್ ಮತ್ತು ಫಿಲ್ಟರ್ ಮೂಲಕ ಮಕ್ಕಳ ಮಾನಸಿಕ ಆರೋಗ್ಯ ಸಂಪನ್ಮೂಲಗಳನ್ನು ಪ್ರಚಾರ ಮಾಡಲು ನಾವು Kids Help Phone ಜೊತೆಗೆ ಪಾಲುದಾರಿಕೆ ಮಾಡಿಕೊಳ್ಳುತ್ತಿದ್ದೇವೆ ಮತ್ತು ಅಗತ್ಯವಿರುವಾಗ ಸಹಾಯ ಕೋರುವಂತೆ Snapchatter ಗಳನ್ನು ಪ್ರೋತ್ಸಾಹಿಸುತ್ತಿದ್ದೇವೆ. 
  • ಒಂದು ಫಿಲ್ಟರ್ ಮೂಲಕ ರಾಷ್ಟ್ರೀಯ ಆತ್ಮಹತ್ಯೆ ತಡೆಗಟ್ಟುವಿಕೆ ಹಾಟ್‌ಲೈನ್‌ನ ಜಾಗೃತಿ ಮೂಡಿಸಲು ಒಂದು ರಾಷ್ಟ್ರೀಯ ಫಿಲ್ಟರ್‌ಗಾಗಿ ಫ್ರಾನ್ಸ್‌ನಲ್ಲಿ 3114 ಜೊತೆಗೆ ಕೈಜೋಡಿಸಿದ್ದೇವೆ. E-Enfance ಅವರ ಡಿಜಿಟಲ್ ಯೋಗಕ್ಷೇಮ ಹಾಟ್‌ಲೈನ್ ಅನ್ನು ಹೈಲೈಟ್ ಮಾಡುವ ಬೆದರಿಕೆ ತಡೆಗಟ್ಟುವಿಕೆ ಅಭಿಯಾನದ ಕುರಿತು ನಾವು ಅವರೊಂದಿಗೆ ಕೂಡ ಪಾಲುದಾರಿಕೆ ಮಾಡಿಕೊಳ್ಳಲಿದ್ದೇವೆ.
  • ಜರ್ಮನಿಯಲ್ಲಿ, ich bin alles ಜೊತೆಗೆ, ತಮ್ಮ ಮಾನಸಿಕ ಆರೋಗ್ಯದೊಂದಿಗೆ ಸಮಸ್ಯೆ ಅನುಭವಿಸುತ್ತಿರುವ ಒಬ್ಬ ಸ್ನೇಹಿತನಿಗೆ ಸಹಾಯ ಮಾಡುವುದು ಹೇಗೆ ಎನ್ನುವ ಸಲಹೆಗಳನ್ನು ನೀಡುವ ಒಂದು ಲೆನ್ಸ್ ಕುರಿತು ಕೂಡ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. 
  • ನೆದರ್‌ಲ್ಯಾಂಡ್‌ನಲ್ಲಿ, ಆತ್ಮಹತ್ಯಾತ್ಮಕ ಆಲೋಚನೆಗಳನ್ನು ಅನುಭವಿಸುತ್ತಿರುವ ಜನರಿಗೆ ನಿರ್ಣಾಯಕ ಸಂಪನ್ಮೂಲಗಳನ್ನು ಹಂಚುವುದಕ್ಕಾಗಿ ಒಂದು ಲೆನ್ಸ್ ರಚಿಸಲು ನಾವು 113 ಜೊತೆಗೆ ಕೆಲಸ ಮಾಡುತ್ತಿದ್ದೇವೆ. 
  • ನಾರ್ವೆಯಲ್ಲಿ, Psykisk Helse ಗಾಗಿ, ಒಂದು ಲೆನ್ಸ್ ಮತ್ತು ಫಿಲ್ಟರ್ ಜೊತೆಗೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಜಾಗೃತಿ ಅಭಿಯಾನ Verdensdagen ಅನ್ನು ಬೆಂಬಲಿಸುತ್ತಿದ್ದೇವೆ, ಮತ್ತು ಒಂದು ಫಿಲ್ಟರ್‌ನೊಂದಿಗೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಟ್‌ಲೈನ್ ಅನ್ನು ಪ್ರಚಾರ ಮಾಡಲು Mental Helse ಜೊತೆಗೆ ಕೈಜೋಡಿಸುತ್ತಿದ್ದೇವೆ. 
  • ಆಸ್ಟ್ರೇಲಿಯಾದಲ್ಲಿ ಒಂದು ಲೆನ್ಸ್‌, ಫಿಲ್ಟರ್ ಮತ್ತು ಸ್ಟಿಕ್ಕರ್‌ನೊಂದಿಗೆ ಬೆದರಿಕೆಗೆ ಪ್ರತಿಕ್ರಿಯಿಸಲು ತಂತ್ರಗಳನ್ನು Snapchatter ಗಳಿಗೆ ಒದಗಿಸಲು ಸಹಾಯ ಮಾಡುವುದಕ್ಕಾಗಿ PROJECT ROCKIT ಜೊತೆ ಪಾಲುದಾರಿಕೆ ಮಾಡಿಕೊಳ್ಳುತ್ತಿದ್ದೇವೆ. 
Snapchat ಬಳಸುವ ಪ್ರತಿಯೊಬ್ಬರೂ ಸುರಕ್ಷಿತ ಮತ್ತು ಸಕಾರಾತ್ಮಕ ಅನುಭಗ ಹೊಂದಬೇಕು ಎಂದು ನಾವು ಬಯಸುತ್ತೇವೆ. ವಿಶ್ವಸನೀಯ ವಿಧಾನದಲ್ಲಿ ನೈಜ ಸ್ನೇಹಿತರು ಸಂವಹನ ನಡೆಸಲು ರೂಪಿಸಿರುವ ವೇದಿಕೆಯಾಗಿ, ಪರಸ್ಪರ ಸಂಪರ್ಕ ಹೊಂದಲು Snapchatter ಗಳು ಬಳಸಬಹುದಾದ ಮತ್ತು ಅವರ ಮಾನಸಿಕ ಆರೋಗ್ಯ ಬೆಂಬಲಿಸುವ ಜೀವರಕ್ಷಕ ಸಂಪನ್ಮೂಲಗಳನ್ನು ಪ್ರವೇಶಿಸಬಹುದಾದ ಟೂಲ್ ಆಗಿರುವುದಕ್ಕಾಗಿ ನಾವು ಹೆಮ್ಮೆಪಡುತ್ತೇವೆ. ಮಾಡಬೇಕಾದ ಕೆಲಸ ಯಾವಾಗಲೂ ಇನ್ನಷ್ಟು ಇರುತ್ತದೆ ಎನ್ನುವುದನ್ನು ನಾವು ಅರಿತಿದ್ದೇವೆ ಮತ್ತು ಅಗತ್ಯದಲ್ಲಿರುವ Snapchatter ಗಳನ್ನು ಮತ್ತು ನಮ್ಮ ಸಮುದಾಯದ ಒಟ್ಟಾರೆ ಯೋಗಕ್ಷೇಮವನ್ನು ಬೆಂಬಲಿಸಲು ಈ ಹೊಸ ಟೂಲ್‌ಗಳು, ಸಂಪನ್ಮೂಲಗಳು ಮತ್ತು ಪಾಲುದಾರಿಕೆಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದನ್ನು ನಾವು ಮುಂದುವರಿಸುತ್ತೇವೆ.
ಸುದ್ದಿಗೆ ಹಿಂತಿರುಗಿ