ಪ್ರಸ್ತುತಪಡಿಸುತ್ತಿದ್ದೇವೆ ಡಿಜಿಟಲ್ ಯೋಗಕ್ಷೇಮ ಸೂಚ್ಯಂಕ

ಫೆಬ್ರವರಿ 6, 2023

ಇಂದು ಸುರಕ್ಷಿತ ಇಂಟರ್‌ನೆಟ್ ದಿನ (SID) ಆಗಿದ್ದು, ಪ್ರತಿ ಫೆಬ್ರವರಿಯಲ್ಲಿ ಈ ದಿನದಂದು ಸುರಕ್ಷಿತ ಮತ್ತು ಜವಾಬ್ದಾರಿಯುತ ಡಿಜಿಟಲ್ ತಂತ್ರಜ್ಞಾನದ ಬಳಕೆಯನ್ನು ಪ್ರಚಾರ ಮಾಡಲು ವಿಶ್ವವು ಜೊತೆಗೂಡುತ್ತದೆ, ಹಾಗೂ 2023 ರ ಥೀಮ್: "ಒಟ್ಟಾಗಿ ಉತ್ತಮ ಇಂಟರ್‌ನೆಟ್‌ಗಾಗಿ." SID ಯ 20 ನೇ ವರ್ಷಾಚರಣೆಯ ಈ ದಿನದಂದು, ನಾವು ನವಪೀಳಿಗೆಯ ಆನ್‌ಲೈನ್ ಮಾನಸಿಕ ಯೋಗಕ್ಷೇಮದ ಮಾಪನವಾಗಿರುವ ನಮ್ಮ ಪ್ರಾರಂಭಿಕ ಡಿಜಿಟಲ್ ಯೋಗಕ್ಷೇಮ ಸೂಚ್ಯಂಕವನ್ನು (DWBI) ನಾವು ಬಿಡುಗಡೆ ಮಾಡುತ್ತಿದ್ದೇವೆ.

ಹದಿಹರೆಯದವರು ಮತ್ತು ಯುವಜನರು ಆನ್‌ಲೈನ್‌ನಲ್ಲಿ – ಎಲ್ಲ ವೇದಿಕೆಗಳಲ್ಲಿ ಮತ್ತು ಸಾಧನಗಳಲ್ಲಿ – ಸಾಗುತ್ತಿದ್ದಾರೆ ಎನ್ನುವ ಕುರಿತು ಒಳನೋಟವನ್ನು ಪಡೆದುಕೊಳ್ಳಲು ಮತ್ತು ನಾವು ಇತ್ತೀಚೆಗೆ ಬಿಡುಗಡೆ ಮಾಡಿದ ಕೌಟುಂಬಿಕ ಕೇಂದ್ರ ಕುರಿತು ಮಾಹಿತಿ ಪಡೆಯಲು, ಆರು ದೇಶಗಳಲ್ಲಿ ಮೂರು ವಯೋಗುಂಪಿನ 9000 ಕ್ಕೂ ಅಧಿಕ ಜನರ ಅಭಿಪ್ರಾಯವನ್ನು ನಾವು ಸಂಗ್ರಹಿಸಿದೆವು. ನಾಲ್ಕು ದಶಕಗಳಿಗಿಂತ ಹಿಂದಿನ ವ್ಯಕ್ತಿನಿಷ್ಠ ಯೋಗಕ್ಷೇಮ ಸಂಶೋಧನೆಯನ್ನು ಆನ್‌ಲೈನ್ ವಾತಾವರಣಕ್ಕೆ ಅಳವಡಿಸಿ ಅದರ ವಿಷಯವನ್ನು ಅಧ್ಯಯನ ಮಾಡಿ, ನಾವು ಆಸ್ಟ್ರೇಲಿಯಾ, ಫ್ರಾನ್ಸ್, ಜರ್ಮನಿ, ಭಾರತ, UK ಮತ್ತು U.S. ನಲ್ಲಿ ಹದಿಹರೆಯದವರು (13-17 ವಯಸ್ಸಿನವರು), ಯುವಜನರು (18-24 ವಯಸ್ಸಿನವರು) ಹಾಗೂ 13 ರಿಂದ 19 ವಯೋಮಾನದ ಹದಿಹರೆಯದವರ ಪೋಷಕರ ಪ್ರತಿಕ್ರಿಯೆಗಳನ್ನು ಆಧರಿಸಿ ಒಂದು DWB ಸೂಚ್ಯಂಕವನ್ನು ಸಿದ್ಧಪಡಿಸಿದೆವು. ಹಲವು ಆನ್‌ಲೈನ್ ಅಪಾಯಗಳಿಗೆ ಒಡ್ಡಿಕೊಳ್ಳುವಿಕೆಯ ಕುರಿತು ನಾವು ಯುವಜನರನ್ನು ಕೇಳಿದೆವು ಮತ್ತು ಅವುಗಳಿಂದ ಹಾಗೂ ಇತರ ಪ್ರತಿಕ್ರಿಯೆಗಳಿಂದ ಪ್ರತಿ ದೇಶಕ್ಕೆ DWB ಸೂಚ್ಯಂಕವನ್ನು ಹಾಗೂ ಎಲ್ಲ ಆರು ದೇಶಗಳಿಗೆ ಒಟ್ಟುಗೂಡಿಸಿದ ಅಂಕವನ್ನು ಲೆಕ್ಕಾಚಾರ ಮಾಡಿದೆವು.

ಪ್ರಾರಂಭಿಕ DWBI ವಿವರ

ಆರು ಭೌಗೋಳಿಕತೆಗಳಿಗೆ ಮೊದಲ ಡಿಜಿಟಲ್ ಯೋಗಕ್ಷೇಮ ಸೂಚ್ಯಂಕವು 62 ಆಗಿದ್ದು, ಇದು 0 ಯಿಂದ 100 ರ ಸ್ಕೇಲ್‌ನಲ್ಲಿ ಸರಾಸರಿ ಆಗಿದೆ. ದೇಶದ ಪ್ರಕಾರ, ಭಾರತವು ಅತ್ಯಧಿಕ 68 DWBI ದಾಖಲಿಸಿದೆ ಹಾಗೂ ಫ್ರಾನ್ಸ್ ಮತ್ತು ಜರ್ಮನಿ ಎರಡೂ ಕೂಡ 60 ಅಂಕ ದಾಖಲಿಸಿ ಆರು ದೇಶಗಳ ಸರಾಸರಿಯ ಅಂಕಕ್ಕಿಂತ ಕೆಳಗಿನ ಮಟ್ಟದಲ್ಲಿವೆ. ಆಸ್ಟ್ರೇಲಿಯಾದ DWBI 63. UK ಆರು ದೇಶಗಳ ಸರಾಸರಿ 62 ಅಂಕವನ್ನು ಹೊಂದಿದೆ ಮತ್ತು U.S. ನ ಅಂಕ 64 ಆಗಿದೆ. 

ಸೂಚ್ಯಂಕವು PERNA ಮಾದರಿಯನ್ನು ಬಳಸಿಕೊಳ್ಳುತ್ತದೆ, ಇದು ಪ್ರಸ್ತುತ ಇರುವ ಯೋಗಕ್ಷೇಮ ಸಿದ್ಧಾಂತದ ಮಾರ್ಪಾಡಾಗಿದೆ1, ಐದು ವಿಭಾಗಗಳಾದ್ಯಂತ 20 ಭಾವನಾತ್ಮಕ ಹೇಳಿಕೆಗಳನ್ನು ಒಳಗೊಂಡಿದೆ: ಕಾರಾತ್ಮಕ ಭಾವನೆ (P), ತೊಡಗಿಕೊಳ್ಳುವಿಕೆ (E), ಸಂಬಂಧಗಳು (R), ಕಾರಾತ್ಮಕ ಭಾವನೆ (N) ಮತ್ತು ಸಾಧನೆ (A). ಕಳೆದ ಮೂರು ತಿಂಗಳುಗಳಲ್ಲಿ ಕೇವಲ Snapchat ಅಷ್ಟೇ ಅಲ್ಲದೆ – ಯಾವುದೇ ಸಾಧನ ಅಥವಾ ಆ್ಯಪ್‌ನಲ್ಲಿ ಅವರ ಎಲ್ಲ ಆನ್‌ಲೈನ್ ಅನುಭವಗಳನ್ನು ಪರಿಗಣನೆಗೆ ತೆಗೆದುಕೊಂಡು2, 20 ಹೇಳಿಕೆಗಳಲ್ಲಿ ಪ್ರತಿಯೊಂದಕ್ಕೆ ತಮ್ಮ ಒಪ್ಪಿಗೆಯ ಮಟ್ಟವನ್ನು ಹೇಳುವಂತೆ ಪ್ರತಿಕ್ರಿಯಾದಾರರನ್ನು ಕೇಳಲಾಯಿತು. ಉದಾಹರಣೆಗೆ, ತೊಡಗಿಕೊಳ್ಳುವಿಕೆ ಗುಂಪಿನ ಅಡಿಯಲ್ಲಿ, ಒಂದು ಹೇಳಿಕೆ ಹೀಗಿದೆ: "ಆನ್‌ಲೈನ್‌ನಲ್ಲಿ ನಾನು ಮಾಡುತ್ತಿದ್ದುದರಲ್ಲಿ ಸಂಪೂರ್ಣ ಮಗ್ನನಾಗಿದ್ದೆ" ಮತ್ತು ಸಂಬಂಧಗಳ ಅಡಿಯಲ್ಲಿ "ಆನ್‌ಲೈನ್‌ನಲ್ಲಿನ ನನ್ನ ಸಂಬಂಧಗಳ ಕುರಿತು ತುಂಬಾ ಸಂತೃಪ್ತನಾಗಿದ್ದೆ." (DWBI ಹೇಳಿಕೆಗಳ ಪೂರ್ಣ ಪಟ್ಟಿಗಾಗಿ, ಈ ಲಿಂಕ್ ನೋಡಿ.) 

ಸಾಮಾಜಿಕ ಮಾಧ್ಯಮಗಳ ಪಾತ್ರ

20 ಭಾವನಾತ್ಮಕ ಹೇಳಿಕೆಗಳಿಗೆ ಪ್ರತಿಕ್ರಿಯಾದಾರರ ಸಮ್ಮತಿಯ ಮಟ್ಟವನ್ನು ಆಧರಿಸಿ ಪ್ರತಿಯೊಬ್ಬರಿಗೆ ಒಂದು DWBI ಅಂಕವನ್ನು ಲೆಕ್ಕ ಮಾಡಲಾಯಿತು. ಅವರ ಅಂಕಗಳನ್ನು ನಾಲ್ಕು DWBI ಗುಂಪುಗಳಲ್ಲಿ ಒಟ್ಟುಗೂಡಿಸಲಾಯಿತು: ಸಮೃದ್ಧ (10%), ಸಂಪನ್ನ (43%), ಮಧ್ಯಮ (40%) ಮತ್ತು ಪ್ರಯಾಸ (7%). (ವಿವರಗಳಿಗಾಗಿ ಕೆಳಗಿನ ಚಾರ್ಟ್ ಮತ್ತು ಗ್ರಾಫ್ ಅನ್ನು ನೋಡಿ.)

ಆಶ್ಚರ್ಯಕರವಲ್ಲದ ವಿಷಯವೆಂದರೆ, ನವ ಪೀಳಿಗೆಯ ಡಿಜಿಟಲ್ ಯೋಗಕ್ಷೇಮದಲ್ಲಿ ಸಾಮಾಜಿಕ ಮಾಧ್ಯಮಗಳು ಮುಖ್ಯವಾದ ಪಾತ್ರವಹಿಸುತ್ತವೆ ಎನ್ನುವುದು ಸಂಶೋಧನೆಯಿಂದ ತಿಳಿದುಬಂದಿದ್ದು, ಸುಮಾರು ಮುಕ್ಕಾಲು ಪಾಲಿಗಿಂತ (78%) ಹೆಚ್ಚಿನ ಪ್ರತಿಕ್ರಿಯೆದಾರರು ಸಾಮಾಜಿಕ ಮಾಧ್ಯಮಗಳು ತಮ್ಮ ಜೀವನದ ಗುಣಮಟ್ಟದ ಮೇಲೆ ಸಕಾರಾತ್ಮಕ ಪ್ರಭಾವ ಬೀರಿವೆ ಎಂದು ಹೇಳಿದ್ದಾರೆ. ಆ ನಂಬಿಕೆಯು ನವಪೀಳಿಗೆಯ ವಯಸ್ಕರು (71%) ಮತ್ತು ಮಹಿಳೆಯರಿಗೆ (75%) ಹೋಲಿಸಿದರೆ ಹದಿಯರೆಯದವರು (84%) ಮತ್ತು ಪುರುಷರಲ್ಲಿ (81%) ಇನ್ನೂ ಪ್ರಬಲವಾಗಿತ್ತು. ಸಾಮಾಜಿಕ ಮಾಧ್ಯಮದ ಪ್ರಭಾವದ ಕುರಿತು ಪೋಷಕರ ಅಭಿಪ್ರಾಯ (73%) ಸರಿಸುಮಾರು ನವಪೀಳಿಗೆಯ ಯುವಜನರಷ್ಟೇ ಇದೆ. DWBIನ ಸಮೃದ್ಧ ವಿಭಾಗದಲ್ಲಿರುವವರು ತಮ್ಮ ಬದುಕಿನಲ್ಲಿ ಸಾಮಾಜಿಕ ಮಾಧ್ಯಮವು ಸಕಾರಾತ್ಮಕ ಪ್ರಭಾವ ಬೀರುತ್ತಿದೆ (95%) ಎಂದರೆ, ಪ್ರಯಾಸ ವಿಭಾಗದವರಲ್ಲಿ ಆ ಅಭಿಪ್ರಾಯ ಬಹಳ ಕಡಿಮೆಯಿತ್ತು (43%). ಸಮೃದ್ಧ ಗುಂಪನಲ್ಲಿನ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಜನರು (36%) ಈ ಮುಂದಿನ ಹೇಳಿಕೆಗೆ ಸಮ್ಮತಿಸಿದರು, "ಸಾಮಾಜಿಕ ಮಾಧ್ಯಮವಿಲ್ಲದೆ ನಾನು ಜೀವನ ನಡೆಸಲು ಸಾಧ್ಯವಿಲ್ಲ," ಇದೇ ವೇಳೆ ಪ್ರಯಾಸ ವರ್ಗದಲ್ಲಿದ್ದ ಕೇವಲ 18% ಜನರು ಮಾತ್ರ ಈ ಹೇಳಿಕೆಯನ್ನು ಒಪ್ಪಿದರು. "ಸಾಮಾಜಿಕ ಮಾಧ್ಯಮವಿಲ್ಲದಿದ್ದರೆ ಜಗತ್ತು ಇನ್ನಷ್ಟು ಉತ್ತಮ ಸ್ಥಳವಾಗಿರುತ್ತದೆ" ಎನ್ನುವ ವ್ಯತಿರಿಕ್ತ ಹೇಳಿಕೆಗೆ ಸಂಬಂಧಿಸಿ ಆ ಶೇಕಡಾವಾರುಗಳನ್ನು ಮೂಲಭೂತವಾಗಿ ತಿರುಗಿಸಲಾಗಿತ್ತು. (ಸಮೃದ್ಧ: 22% ಸಮ್ಮತಿಸಿದರು, ಪ್ರಯಾಸ: 33%). 

ಕೌಟುಂಬಿಕ ಕೇಂದ್ರಕ್ಕೆ ಮಾಹಿತಿ ನೀಡುವಿಕೆ

ಪೋಷಕರಿಗೆ ಕೇಳಿದ ಪ್ರಶ್ನೆಗಳಲ್ಲಿ ಆನ್‌ಲೈನ್ ಅಪಾಯಗಳಿಗೆ ತಮ್ಮ ಹದಿಹರೆಯದ ಮಕ್ಕಳ ಒಡ್ಡಿಕೊಳ್ಳುವಿಕೆಯನ್ನು ಮಾಪನ ಮಾಡುವಂತೆ ಕೇಳುವುದು ಸೇರಿತ್ತು ಮತ್ತು ಪೋಷಕರು ಬಹುಮಟ್ಟಿಗೆ ತಮ್ಮ ಹದಿಹರೆಯದವರ ಆನ್‌ಲೈನ್ ಯೋಗಕ್ಷೇಮದ ಕುರಿತು ಸರಿಯಾದ ಗ್ರಹಿಕೆ ಹೊಂದಿದ್ದಾರೆ ಎಂದು ಫಲಿತಾಂಶಗಳು ತೋರಿಸಿವೆ. ವಾಸ್ತವದಲ್ಲಿ, ತಮ್ಮ ಆನ್‌ಲೈನ್ ಮತ್ತು ಸಾಮಾಜಿಕ ಮಾಧ್ಯಮ ಚಟುವಟಿಕೆಗಳ ಮೇಲೆ ತಮ್ಮ ಪೋಷಕರಿಂದ ನಿಯಮಿತವಾಗಿ ಪರಿಶೀಲನೆಗೊಳಗಾದ ಹದಿಹರೆಯದವರು ಪ್ರಬಲ ಡಿಜಿಟಲ್ ಯೋಗಕ್ಷೇಮವನ್ನು ಹೊಂದಿದ್ದಾರೆ ಮತ್ತು ತಮ್ಮ ಪೋಷಕರಿಂದ ಹೆಚ್ಚಿನ ನಂಬಿಕೆಯ ಮಟ್ಟವನ್ನು ಉಳಿಸಿಕೊಂಡಿದ್ದಾರೆ. ವ್ಯತಿರಿಕ್ತವಾಗಿ, ಹದಿಹರೆಯದ ಮಕ್ಕಳ ಡಿಜಿಟಲ್ ಚಟುವಟಿಕೆಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡದ ಪೋಷಕರ ಉಪವಿಭಾಗದವರು ಹದಿಹರೆಯದವರು ಅಪಾಯಕ್ಕೆ ಒಡ್ಡಿಕೊಳ್ಳುವುದನ್ನು ಗಮನಾರ್ಹವಾಗಿ ಕಡೆಗಣಿಸಿದ್ದಾರೆ (ಸುಮಾರು 20 ಅಂಕಗಳಿಂದ). ಸರಾಸರಿ, ಆನ್‌ಲೈನ್‌ನಲ್ಲಿ ಒಂದು ಅಪಾಯವನ್ನು ಅನುಭವಿಸಿದ ಬಳಿಕ ಏನಾಯಿತು ಎಂದು 62% ಹದಿಹರೆಯದವರು (13-19 ವರ್ಷ ವಯಸ್ಸಿನವರು) ತಮ್ಮ ಪೋಷಕರಿಗೆ ತಿಳಿಸಿದರು. ಅದಾಗ್ಯೂ, ಆ ಅಪಾಯಗಳು ಹೆಚ್ಚು ಗಂಭೀರವಾದಂತೆ, ಪೋಷಕರಿಗೆ ತಿಳಿಸಲು ಹದಿಹರೆಯದವರು ಹಿಂಜರಿದರು ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.

ಈ ಸಂಶೋಧನೆ ಮತ್ತು ಇತರ ಸಂಶೋಧನೆಯನ್ನು Snapchat ನಲ್ಲಿ ತಮ್ಮ ಹದಿಹರೆಯದ ಮಕ್ಕಳು ಯಾರೊಂದಿಗೆ ಸಂವಹನ ನಡೆಸುತ್ತಿದ್ದಾರೆ ಎನ್ನುವ ಕುರಿತು ಒಳನೋಟಗಳನ್ನು ಪೋಷಕರು, ಆರೈಕೆದಾರರು ಮತ್ತು ಇತರ ವಿಶ್ವಾಸಾರ್ಹ ವಯಸ್ಕರಿಗೆ ಒದಗಿಸುವ Snap ನ ಹೊಸ ಕೌಟುಂಬಿಕ ಕೇಂದ್ರದ ಅಭಿವೃದ್ಧಿಗೆ ಮಾಹಿತಿ ಪಡೆಯಲು ಬಳಸಲಾಯಿತು. ಅಕ್ಟೋಬರ್ 2022 ರಲ್ಲಿ ವಿಶ್ವಾದ್ಯಂತ ಆರಂಭಿಸಲಾದ, ಕೌಟುಂಬಿಕ ಕೇಂದ್ರವು ಹದಿಹರೆಯದವರ ಯಾವುದೇ ಸಂದೇಶಗಳ ಕಂಟೆಂಟ್ ಅನ್ನು ಬಹಿರಂಗಪಡೆಸದೆ ಅವರ ಗೌಪ್ಯತೆ ಮತ್ತು ಸ್ವಾಯತ್ತತೆಯನ್ನು ಗೌರವಿಸುತ್ತಲೇ, ತಮ್ಮ ಹದಿಹರೆಯದ ಮಕ್ಕಳ ಸ್ನೇಹಿತರ ಪಟ್ಟಿಯನ್ನು ಮತ್ತು ಅವರು ಕಳೆದ ಏಳು ದಿನಗಳಲ್ಲಿ ಯಾರೊಂದಿಗೆ ಸಂವಹನ ನಡೆಸಿದ್ದಾರೆ ಎಂದು ನೋಡಲು ಪೋಷಕರಿಗೆ ಅವಕಾಶ ಕಲ್ಪಿಸುತ್ತದೆ. ಕೌಟುಂಬಿಕ ಕೇಂದ್ರವು ತಮಗೆ ಕಳವಳ ಉಂಟುಮಾಡುವ ಖಾತೆಗಳನ್ನು ವರದಿ ಮಾಡುವಂತೆಯೂ ಮೇಲ್ವಿಚಾರಣೆ ನಡೆಸುವ ಪೋಷಕರನ್ನು ಪ್ರೋತ್ಸಾಹಿಸುತ್ತದೆ. ಹೊಸ ಕೌಟುಂಬಿಕ ಕೇಂದ್ರದ ವೈಶಿಷ್ಟ್ಯಗಳು ಸದ್ಯದಲ್ಲೇ ಬರಲಿವೆ. 

ಕೌಟುಂಬಿಕ ಕೇಂದ್ರವು ಮೂಲತಃ, ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರುವ ಮತ್ತು ಡಿಜಿಟಲ್ ಯೋಗಕ್ಷೇಮವನ್ನು ಸಮೃದ್ಧಿಪಡಿಸುವ ಕುರಿತು ಹದಿಹರೆಯದವರು ಹಾಗೂ ಪೋಷಕರು, ಆರೈಕೆದಾರರು ಮತ್ತು ಇತರ ವಿಶ್ವಾಸಾರ್ಹ ವಯಸ್ಕರ ನಡುವೆ ಅರ್ಥಪೂರ್ಣ ಸಂಭಾಷಣೆಗೆ ಪ್ರೇರಣೆ ನೀಡಲು ವಿನ್ಯಾಸಗೊಳಿಸಲಾಗಿದೆ. ಆ ಸಂಭಾಷಣೆಗಳನ್ನು ನಡೆಸಲು ಸುರಕ್ಷಿತ ಇಂಟರ್‌ನೆಟ್‌ ದಿನಕ್ಕಿಂತ ಒಳ್ಳೆಯ ದಿನ ಯಾವುದಿದೆ! 

ಜಾಕ್ವೆಲಿನ್ ಬೌಚೆರೆ, ಸುರಕ್ಷತಾ ವೇದಿಕೆಯ ಜಾಗತಿಕ ಮುಖ್ಯಸ್ಥೆ

ನಮ್ಮ ಡಿಜಿಟಲ್ ಯೋಗಕ್ಷೇಮದ ಸಂಶೋಧನೆಯು ಆನ್‌ಲೈನ್‌ ಅಪಾಯಗಳಿಗೆ ನವಪೀಳಿಗೆಯ ಒಡ್ಡಿಕೊಳ್ಳುವಿಕೆ, ಅವರ ಸಂಬಂಧಗಳು, ನಿರ್ದಿಷ್ಟವಾಗಿ ಅವರ ಪೋಷಕರೊಂದಿಗೆ, ಹಾಗೂ ಹಿಂದಿನ ತಿಂಗಳುಗಳಲ್ಲಿನ ತಮ್ಮ ಕಾರ್ಯಗಳ ಕುರಿತು ಅವರ ಅನಿಸಿಕೆಯಂತಹ ಫಲಿತಾಂಶಗಳನ್ನು ತಿಳಿಸಿತು. ಒಂದು ಬ್ಲಾಗ್ ಪೋಸ್ಟ್‌ನಲ್ಲಿ ನಮಗೆ ಹಂಚಿಕೊಳ್ಳಲು ಸಾಧ್ಯವಾಗುತ್ತಿರುವುದಕ್ಕಿಂತ ಸಂಶೋಧನೆಯಲ್ಲಿ ಸಾಕಷ್ಟು ಹೆಚ್ಚಿನ ವಿಷಯಗಳು ಬೆಳಕಿಗೆ ಬಂದಿವೆ. ಡಿಜಿಟಲ್ ಯೋಗಕ್ಷೇಮ ಸೂಚ್ಯಂಕ ಮತ್ತು ಸಂಶೋಧನೆ ಕುರಿತು ಹೆಚ್ಚಿನ ಮಾಹಿತಿಗಾಗಿ, ನಮ್ಮ ವೆಬ್‌ಸೈಟ್, ಹಾಗೂ ಈ ವಿವರಣೆ, ಪ್ರಮುಖ ಸಂಶೋಧನಾ ಅಂಶಗಳ ಸಂಗ್ರಹ, ಪೂರ್ಣ ಸಂಶೋಧನಾ ಫಲಿತಾಂಶಗಳು, ಹಾಗೂ ಈ ಮುಂದಿನ ಪ್ರತಿ ಆರು ದೇಶಗಳ ಮಾಹಿತಿಚಿತ್ರಣನೋಡಿ: ಆಸ್ಟ್ರೇಲಿಯಾ, ಫ್ರಾನ್ಸ್, ಜರ್ಮನಿ, ಭಾರತ, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ಸ್ಟೇಟ್ಸ್.

ಸುದ್ದಿಗೆ ಹಿಂತಿರುಗಿ

1 ಪ್ರಸ್ತುತ ಇರುವ ಸಂಶೋಧನಾ ಸಿದ್ಧಾಂತವು PERMA ಮಾದರಿ ಆಗಿದ್ದು, ಇದು ಈ ಮುಂದಿನಂತಿದೆ: ಸಕಾರಾತ್ಮಕ ಭಾವನೆ (ಸ), ತೊಡಗಿಕೊಳ್ಳುವಿಕೆ (ತೊ), ಸಂಬಂಧಗಳು (ಸಂ), ಅರ್ಥ (ಅ) ಮತ್ತು ಸಾಧನೆ (ಸಾ).

2 ಅಧ್ಯಯನವನ್ನು ಎಪ್ರಿಲ್ 22, 2022, ರಿಂದ ಮೇ 10, 2022 ರವರೆಗೆ ನಡೆಸಲಾಯಿತು.