ಸುರಕ್ಷಿತ ಇಂಟರ್‌ನೆಟ್ ದಿನ 2022: ನಿಮ್ಮ ವರದಿ ಮುಖ್ಯವಾದುದು!

ಫೆಬ್ರವರಿ 8, 2022

ಇಂದು ಅಂತಾರಾಷ್ಟ್ರೀಯ ಸುರಕ್ಷಿತ ಇಂಟರ್‌ನೆಟ್ ದಿನವಾಗಿದ್ದು (SID), ಎಲ್ಲರಿಗೂ, ವಿಶೇಷವಾಗಿ ಯುವಜನರಿಗೆ ಇಂಟರ್‌ನೆಟ್ ಅನ್ನು ಸುರಕ್ಷಿತ ಮತ್ತು ಆರೋಗ್ಯಕರವಾಗಿ ಮಾಡಲು ಜೊತೆಗೂಡಿ ಬರುವ ಜಗತ್ತಿನ ಜನರಿಗೆ ಮೀಸಲಾಗಿರುವ ವಾರ್ಷಿಕ ಸಂದರ್ಭವಾಗಿದೆ. SID 2022, ಸುರಕ್ಷಿತ ಇಂಟರ್‌ನೆಟ್ ದಿನದ 19 ನೇ ನೇರ ವರ್ಷವನ್ನು ಪ್ರತಿನಿಧಿಸುತ್ತದೆ ಮತ್ತು ವಿಶ್ವವು ಮತ್ತೊಮ್ಮೆ, “ಇನ್ನಷ್ಟು ಉತ್ತಮ ಇಂಟರ್‌ನೆಟ್‌ಗಾಗಿ ಜೊತೆಯಾಗಿದ್ದೇವೆ” ಎನ್ನುವ ಧ್ಯೇಯವಾಕ್ಯದೊಂದಿಗೆ ಅಭಿಯಾನಕ್ಕೆ ಕೈಜೋಡಿಸಲಿದೆ.
ನಿಮಗೆ ಕಳವಳ ಉಂಟುಮಾಡುವ ಒಂದು ವಿಷಯವನ್ನು ನೀವು Snapchat ನಲ್ಲಿ ನೋಡಿದಾಗ ಅದನ್ನು ನಮಗೆ ತಿಳಿಸುವುದರ ಪ್ರಯೋಜನಗಳು ಮತ್ತು ಪ್ರಾಮುಖ್ಯತೆಯನ್ನು ಹೈಲೈಟ್ ಮಾಡಲು Snap ನಲ್ಲಿ, ನಾವು ಈ ಅವಕಾಶವನ್ನು ಬಳಸಿಕೊಳ್ಳುತ್ತಿದ್ದೇವೆ. Snapchat ಎನ್ನುವುದು ಆತ್ಮೀಯ ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಮತ್ತು ಸಂವಹನ ನಡೆಸುವ ವಿಧಾನವಾಗಿದೆ ಮತ್ತು Snap ಗಳನ್ನು ಮತ್ತು ಚಾಟ್‌ಗಳನ್ನು ಕಳುಹಿಸಲು ಪ್ರತಿಯೊಬ್ಬರೂ ಸುರಕ್ಷಿತ, ಆತ್ಮವಿಶ್ವಾಸದ ಮತ್ತು ಆರಾಮದಾಯಕ ಭಾವನೆ ಹೊಂದಬೇಕು ಎಂದು ನಾವು ಬಯಸುತ್ತೇವೆ. ಅದಾಗ್ಯೂ, ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳ ಜೊತೆಗೆ ಸಂಘರ್ಷ ಹೊಂದಿರುವ ರೀತಿಯಲ್ಲಿ ಕೆಲವೊಮ್ಮೆ ಜನರು ಕಂಟೆಂಟ್ ಹಂಚಿಕೊಳ್ಳಬಹುದು ಅಥವಾ ವರ್ತಿಸಬಹುದು
ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರುವುದಕ್ಕೆ ಸಂಬಂಧಿಸಿ ಪ್ರತಿಯೊಬ್ಬರೂ ಪಾತ್ರ ವಹಿಸಬೇಕಾಗುತ್ತದೆ ಮತ್ತು ಹಾನಿಕಾರಕ ಕಂಟೆಂಟ್ ಮತ್ತು ನಡವಳಿಕೆಯನ್ನು ವರದಿ ಮಾಡುವುದು – ಇದರಿಂದ ನಾವು ಅದನ್ನು ಪರಿಹರಿಸಬಹುದು – ಎಲ್ಲರಿಗೂ ಸಮುದಾಯ ಅನುಭವವನ್ನು ಸುಧಾರಿಸುತ್ತದೆ ಎಂದು ಎಲ್ಲ Snapchatter ಗಳಿಗೆ ನಾವು ತಿಳಿಸಬಯಸುತ್ತೇವೆ. ವಾಸ್ತವದಲ್ಲಿ, ಕೆಟ್ಟ ಜನರು ಮತ್ತು ಹಾನಿಕಾರಕ ಕಂಟೆಂಟ್‌ನಿಂದ ವೇದಿಕೆಯನ್ನು ಮುಕ್ತವಾಗಿ ಇರಿಸಲು Snapchatter ಗಳು ಮಾಡಬಹುದಾದ ಅತ್ಯಂತ ಮುಖ್ಯ ಸಂಗತಿ ಇದಾಗಿದೆ.
ವರದಿ ಮಾಡಲು ಹಿಂಜರಿಕೆ
ವಿವಿಧ ಕಾರಣಗಳಿಂದಾಗಿ ಯುವ ಜನರು ಕಂಟೆಂಟ್ ಅಥವಾ ನಡವಳಿಕೆಯನ್ನು ವರದಿ ಮಾಡಲು ಹಿಂಜರಿಯಬಹುದು ಎಂದು ಸಂಶೋಧನೆಗಳು ಹೇಳುತ್ತವೆ. ಇವುಗಳಲ್ಲಿ ಕೆಲವಕ್ಕೆ ಸಾಮಾಜಿಕ ಆಯಾಮಗಳು ಕಾರಣವಾಗಿರಬಹುದು, ಆದರೆ ನಮ್ಮನ್ನು ಸಂಪರ್ಕಿಸುವುದಕ್ಕೆ ಸಂಬಂಧಿಸಿ ಆರಾಮದಾಯಕತೆಯನ್ನು ಹೆಚ್ಚಿಸಲು ವರದಿ ಮಾಡುವಿಕೆ ಕುರಿತ ಕೆಲವು ಮಿಥ್ಯಗಳ ನಿಜರೂಪವನ್ನು ಬಯಲಿಗೆಳೆಯಲು ವೇದಿಕೆಗಳೂ ಕೂಡ ಇನ್ನಷ್ಟು ಉತ್ತಮ ಕೆಲಸ ಮಾಡಬಹುದು. ಉದಾಹರಣೆಗೆ, ನವೆಂಬರ್ 2021 ರಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಕೆಟ್ಟ ನಡವಳಿಕೆ ವಿರುದ್ಧ ತಾವು ಕ್ರಮ ಕೈಗೊಂಡರೆ ತಮ್ಮ ಸ್ನೇಹಿತರು ಏನಂದುಕೊಳ್ಳಬಹುದು ಎನ್ನುವ ಚಿಂತೆ ತಮಗೆ ಕಾಡುತ್ತದೆ ಎಂದು ಸಮೀಕ್ಷೆ ನಡೆಸಿದವರಲ್ಲಿ ಮೂರನೇ ಒಂದು ಭಾಗದಷ್ಟು (34%) ಯುವಜನರು ಹೇಳಿದರು ಎನ್ನುವುದು ನಮಗೆ ತಿಳಿಯಿತು. ಇದರ ಜೊತೆಗೆ, ಬಹುತೇಕ ನಾಲ್ವರಲ್ಲಿ ಒಬ್ಬರು (39%) ತಮಗೆ ಪರಿಚಿತರಾಗಿರುವ ಒಬ್ಬರು ಕೆಟ್ಟದಾಗಿ ನಡೆದುಕೊಂಡಾಗ ಕ್ರಮ ತೆಗೆದುಕೊಳ್ಳದಿರುವ ಒತ್ತಡ ಅನುಭವಿಸುವುದಾಗಿ ಹೇಳಿದರು. ಈ ವಿಷಯಗಳು ಹ್ಯಾರಿಸ್ ಇನ್‌ಸೈಟ್ಸ್ ಆ್ಯಂಡ್ ಅನಾಲಿಟಿಕ್ಸ್ ಫಾರ್‌ ದ ಫ್ಯಾಮಿಲಿ ಆನ್‌ಲೈನ್ ಸೇಫ್ಟಿ ಇನ್‌ಸ್ಟಿಟ್ಯೂಟ್ (FOSI) ನಡೆಸಿದ ಮತ್ತು Snap ಪ್ರಾಯೋಜಿಸಿದ ನಿರೂಪಣೆಯ ನಿರ್ವಹಣೆ: ಯುವಜನರಿಂದ ಆನ್‌ಲೈನ್ ಸುರಕ್ಷತಾ ಸಲಕರಣೆಗಳ ಬಳಕೆ ಎನ್ನುವ ಸಮೀಕ್ಷೆಯಿಂದ ತಿಳಿದುಬಂತು. 
FOSI ಸಂಶೋಧನೆಯು, U.S ನಲ್ಲಿ 13 ರಿಂದ 17 ವರ್ಷ ವಯಸ್ಸಿನ ಅನೇಕ ಗುಂಪುಗಳ ಹದಿಹರೆಯದವರು ಮತ್ತು 18 ರಿಂದ 24 ವರ್ಷದ ಯುವಜನರ ಅಭಿಪ್ರಾಯವನ್ನು ಸಂಗ್ರಹಿಸಿತು. ಪ್ರಮಾಣಾತ್ಮಕ ಅಂಶಗಳ ಜೊತೆಗೆ, ಸಮೀಕ್ಷೆಯು ವರದಿ ಮಾಡುವಿಕೆ ಮತ್ತು ಇತರ ವಿಷಯಗಳ ಕುರಿತು ಭಾಗಿಗಳ ಅಭಿಪ್ರಾಯವನ್ನು ಕೋರಿತು. 18 ವತರ್ಷ ವಯಸ್ಸಿನವರಿಂದ ಒಂದು ಅಂಶವು ಯುವ ಜನರ ದೃಷ್ಟಿಕೋನವನ್ನು ಸಾರಾಂಶಗೊಳಿಸಿತು, "ಅಪರಾಧವು ವರದಿ ಮಾಡುವಷ್ಟರ ಮಟ್ಟಿಗೆ ತೀವ್ರತೆ ಹೊಂದಿದೆ ಎಂದು ನಾನು ಭಾವಿಸುವುದಿಲ್ಲ." 
Snapchat ನಲ್ಲಿ ವರದಿ ಮಾಡುವ ಕುರಿತ ತ್ವರಿತ ವಾಸ್ತವಾಂಶಗಳು
ವರದಿ ಮಾಡುವಿಕೆ ವೇದಿಕೆಗಳು ಮತ್ತು ಸಾಮಾನ್ಯವಾಗಿ ಸೇವೆಗಳ ಪ್ರಾಮುಖ್ಯತೆಯ ಕುರಿತ ಸಂಭಾವ್ಯ ತಪ್ಪುಕಲ್ಪನೆಗಳನ್ನು FOSI ನಲ್ಲಿನ ಅಂಶಗಳು ಸೂಚಿಸುತ್ತವೆ. Snapchatter ಗಳಿಗೆ, ನಮ್ಮ ಪ್ರಸ್ತುತ ವರದಿ ಮಾಡುವಿಕೆ ಪ್ರಕ್ರಿಯೆಗಳು ಮತ್ತು ಕಾರ್ಯವಿಧಾನಗಳ ಕುರಿತ ಈ ಒಂದಿಷ್ಟು ತ್ವರಿತ ವಾಸ್ತವಾಂಶಗಳೊಂದಿಗೆ ಆ ಅನುಮಾನಗಳನ್ನು ಪರಿಹರಿಸಲು ಸಹಾಯ ಮಾಡುವ ಆಶಯವನ್ನು ನಾವು ಹೊಂದಿದ್ದೇವೆ.
  • ಏನನ್ನು ವರದಿ ಮಾಡಬೇಕು: Snapchat ನ ಸಂಭಾಷಣೆಗಳು ಮತ್ತು ಕಥೆಗಳು ವಿಭಾಗದಲ್ಲಿ, ನೀವು ಫೋಟೋಗಳು, ವೀಡಿಯೊಗಳು ಮತ್ತು ಖಾತೆಗಳನ್ನು ವರದಿ ಮಾಡಬಹುದು; ಹೆಚ್ಚು ಸಾರ್ವಜನಿಕವಾದ Discover ನಲ್ಲಿ ಮತ್ತು ಸ್ಪಾಟ್‌ಲೈಟ್ ವಿಭಾಗಗಳಲ್ಲಿ, ನೀವು ಕಂಟೆಂಟ್ ಅನ್ನು ವರದಿ ಮಾಡಬಹುದು. 
  • ವರದಿ ಮಾಡುವುದು ಹೇಗೆ: ಫೋಟೋಗಳು ಮತ್ತು ವೀಡಿಯೊಗಳ ವರದಿ ಮಾಡುವಿಕೆಯನ್ನು Snapchat ಆ್ಯಪ್‌ನಲ್ಲಿ ನೇರವಾಗಿ ಮಾಡಬಹುದು (ಕಂಟೆಂಟ್ ಅನ್ನು ಒತ್ತಿ ಹಿಡಿಯಿರಿ); ನೀವು ಕಂಟೆಂಟ್ ಮತ್ತು ಖಾತೆಗಳನ್ನು ನಮ್ಮ ಬೆಂಬಲ ಕೇಂದ್ರದ ಮೂಲಕವೂ ವರದಿ ಮಾಡಬಹುದು (ಒಂದು ಸಣ್ಣ ವೆಬ್‌ಫಾರ್ಮ್ ಅನ್ನು ಭರ್ತಿಮಾಡಿ).  
  • ವರದಿ ಮಾಡುವಿಕೆ ಗೌಪ್ಯವಾಗಿರುತ್ತದೆ: ಅವುಗಳನ್ನು ಯಾರು ವರದಿ ಮಾಡಿದರು ಎಂದು ನಾವು Snapchatter ಗಳಿಗೆ ತಿಳಿಸುವುದಿಲ್ಲ.
  • ವರದಿಗಳು ಮುಖ್ಯವಾಗಿವೆ:  Snapchatter ಗಳ ಅನುಭವವನ್ನು ಸುಧಾರಿಸಲು, ದಿನದ ಇಪ್ಪತ್ತನಾಲ್ಕು ತಾಸು ಜಗತ್ತಿನಾದ್ಯಂತ ಕಾರ್ಯನಿರ್ವಹಿಸುವ, ನಮ್ಮ ಸುರಕ್ಷತಾ ತಂಡಗಳು ವರದಿಗಳನ್ನು ಪರಿಶೀಲಿಸುತ್ತವೆ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತವೆ. ಬಹುತೇಕ ಸಂದರ್ಭಗಳಲ್ಲಿ, ಎರಡು ಗಂಟೆಗಳ ಒಳಗೆ ನಮ್ಮ ತಂಡಗಳು ಕ್ರಮ ತೆಗೆದುಕೊಳ್ಳುತ್ತವೆ. 
  • ಕ್ರಮ ಜಾರಿಯಲ್ಲಿ ವ್ಯತ್ಯಾಸವಾಗಬಹುದು:  ಕಮ್ಯುನಿಟಿ ಮಾರ್ಗಸೂಚಿಗಳು ಅಥವಾ ಸೇವೆಯ ನಿಯಮಗಳ ಉಲ್ಲಂಘನೆಯ ವಿಧವನ್ನು ಆಧರಿಸಿ, ಕ್ರಮ ಜಾರಿ ಮಾಡುವ ವಿಧಾನವು ಎಚ್ಚರಿಕೆ ನೀಡುವುದರಿಂದ ಹಿಡಿದು ಖಾತೆ ಅಳಿಸುವಿಕೆಯವರೆಗೆ ಮತ್ತು ಅದನ್ನು ಒಳಗೊಂಡಂತೆ ವ್ಯಾಪ್ತಿ ಹೊಂದಿರಬಹುದು. (ಖಾತೆಯು Snapchat ನ ಕಮ್ಯುನಿಟಿ ಮಾರ್ಗಸೂಚಿಗಳು ಅಥವಾ ಸೇವೆಯ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಕಂಡುಬಂದಾಗ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ.) 
ನಾವು ಯಾವಾಗಲೂ ಸುಧಾರಣೆ ಮಾಡುವ ಮಾರ್ಗಗಳಿಗಾಗಿ ಎದುರು ನೋಡುತ್ತೇವೆ ಮತ್ತು ನಿಮ್ಮ ಪ್ರತಿಕ್ರಿಯೆ ಮತ್ತು ಅನಿಸಿಕೆಗಳನ್ನು ಸ್ವಾಗತಿಸುತ್ತೇವೆ. ನಮ್ಮ ಬೆಂಬಲ ಸೈಟ್ ವೆಬ್‌ಫಾರ್ಮ್ ಬಳಸಿಕೊಂಡು ನಮ್ಮೊಂದಿಗೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಿ. 
ಸುರಕ್ಷಿತ ಇಂಟರ್‌ನೆಟ್ ದಿನ 2022 ಆಚರಿಸಲು, ಸ್ವೀಕಾರಾರ್ಹ ಕಂಟೆಂಟ್ ಮತ್ತು ನಡವಳಿಕೆಯ ಕುರಿತು ತಿಳಿದುಕೊಳ್ಳಲು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು ಮತ್ತು ಸೇವೆಯ ನಿಯಮಗಳನ್ನು ಪರಿಶೀಲಿಸುವಂತೆ ಎಲ್ಲ Snapchatter ಗಳಿಗೆ ನಾವು ಸಲಹೆ ನೀಡುತ್ತೇವೆ. ಸಹಾಯಕ FAQ ಒಳಗೊಂಡ ಹೊಸ ವರದಿ ಮಾಡುವಿಕೆ ವಾಸ್ತವಾಂಶ ಹಾಳೆಯನ್ನು ಕೂಡ ನಾವು ರಚಿಸಿದ್ದೇವೆ, ಮತ್ತು ವರದಿ ಮಾಡುವಿಕೆಯ ಕುರಿತು ನಾವು ಇತ್ತೀಚಿನ “ಸುರಕ್ಷತಾ ಸ್ನ್ಯಾಪ್‌ಶಾಟ್” ಸಂಚಿಕೆಯನ್ನು ಅಪ್‌ಡೇಟ್ ಮಾಡಿದ್ದೇವೆ. ಸುರಕ್ಷತಾ ಸ್ನ್ಯಾಪ್‌ಶಾಟ್ ಅನ್ನುವುದು Discover ಚಾನೆಲ್ ಆಗಿದ್ದು ವಿನೋದಮಯ ಮತ್ತು ಮಾಹಿತಿಯುಕ್ತ ಸುರಕ್ಷತೆ - ಮತ್ತು ಗೌಪ್ಯತೆ ಸಂಬಂಧಿತ ಕಂಟೆಂಟ್‌ಗಾಗಿ Snapchatter ಗಳು ಸಬ್‌ಸ್ಕ್ರೈಬ್ ಮಾಡಬಹುದಾಗಿದೆ. SID 2022 ಆಚರಿಸಲು ಒಂದಿಷ್ಟು ಹೆಚ್ಚಿನ ಆನಂದಕ್ಕಾಗಿ, ನಮ್ಮ ಹೊಸ ಜಾಗತಿಕ ಫಿಲ್ಟರ್ ಪರೀಕ್ಷಿಸಿ, ಮತ್ತು ನಮ್ಮ ಆ್ಯಪ್‌ನಲ್ಲಿನ ವರದಿ ಮಾಡುವಿಕೆ ವೈಶಿಷ್ಟ್ಯಗಳ ಹೆಚ್ಚುವರಿ ಸುಧಾರಣೆಗಳಿಗಾಗಿ ಮುಂಬರುವ ತಿಂಗಳುಗಳಲ್ಲಿ ನಿರೀಕ್ಷಿಸಿ.    
ಪೋಷಕರಿಗೆ ಹೊಸ ಸಂಪನ್ಮೂಲ 
ಅಂತಿಮವಾಗಿ, ಪೋಷಕರು ಮತ್ತು ಆರೈಕೆ ಮಾಡುವವರಿಗಾಗಿ ನಾವು ಒದಗಿಸುತ್ತಿರುವ ಹೊಸ ಸಂಪನ್ಮೂಲವನ್ನು ನಾವು ಹೈಲೈಟ್ ಮಾಡಲು ಬಯಸುತ್ತೇವೆ. MindUp ನಲ್ಲಿ ನಮ್ಮ ಪಾಲುದಾರರೊಂದಿಗೆ ಸಹಭಾಗಿತ್ವದಲ್ಲಿ: ಗೋಲ್ಡೀ ಹಾನ್ ಫೌಂಡೇಶನ್, ಹದಿಹರೆಯದವರಲ್ಲಿ ಆರೋಗ್ಯಕರ ಡಿಜಿಟಲ್ ಅಭ್ಯಾಸಗಳನ್ನು ಬೆಂಬಲಿಸುವ ಮತ್ತು ಸಬಲೀಕರಣಗೊಳಿಸುವ ಮಾಡ್ಯೂಲ್‌ಗಳ ಸರಣಿಯನ್ನು ಪೋಷಕರು ಮತ್ತು ಆರೈಕೆ ಮಾಡುವವರಿಗೆ ಪರಿಚಯಿಸುವ "ಡಿಜಿಟಲ್ ಯೋಗಕ್ಷೇಮ ಪ್ರಾಥಮಿಕ ಅಂಶಗಳು" ಎಂಬ ಹೊಸ ಡಿಜಿಟಲ್ ಪೋಷಕರ ಕೋರ್ಸ್‌ ಹಂಚಿಕೊಳ್ಳಲು ನಾವು ಸಂತಸಪಡುತ್ತೇವೆ.
ಮುಂಬರುವ ತಿಂಗಳುಗಳಲ್ಲಿ ನಮ್ಮ ಹೊಸ ಸುರಕ್ಷತೆ ಮತ್ತು ಡಿಜಿಟಲ್ ಯೋಗಕ್ಷೇಮದ ಕೆಲಸದ ಕುರಿತು ಇನ್ನಷ್ಟು ಹಂಚಿಕೊಳ್ಳಲು ನಾವು ಎದುರು ನೋಡುತ್ತೇವೆ. ಇದೇ ವೇಳೆ, ನಿಮ್ಮನ್ನು ಮತ್ತು ಇತರರನ್ನು ಸುರಕ್ಷಿತವಾಗಿ ಇರಿಸಲು ಈ ಸುರಕ್ಷಿತ ಇಂಟರ್‌ನೆಟ್ ದಿನದಂದು ಕನಿಷ್ಟ ಒಂದು ಕೆಲಸ ಮಾಡುವುದನ್ನು ಪರಿಗಣಿಸಿ. ವರದಿ ಮಾಡುವುದಾಗಿ ವೈಯಕ್ತಿಕ ಪ್ರತಿಜ್ಞೆ ಮಾಡುವುದು ಅದ್ಭುತ ಆರಂಭವಾಗಬಲ್ಲದು! 
- ಜಾಕ್ವೆಲಿನ್ ಬೌಚೆರೆ, Snap ಸುರಕ್ಷತಾ ಪ್ಲಾಟ್‌ಫಾರ್ಮ್‌ನ ಜಾಗತಿಕ ಮುಖ್ಯಸ್ಥೆ
ಸುದ್ದಿಗೆ ಹಿಂತಿರುಗಿ